Santhosh Lad ಬಾಲ ಕಾರ್ಮಿಕ ನಿರ್ಮೂಲನೆ ವಿರುದ್ಧ ಇಲಾಖೆ ಕೆಲಸ ಮಾಡುತ್ತಿದೆ.ಅದಕ್ಕಾಗಿ ಜಿಯೋ ಟ್ಯಾಗಿಂಗ್ ಮಾಡುತ್ತಿದ್ದೇವೆ. ಇದರಿಂದ ಬೇರೆ ರಾಜ್ಯದಿಂದ ಬಂದವರು ಪತ್ತೆಯಾಗುತ್ತಿದ್ದಾರೆ. ಸಂಬಂಧಪಟ್ಟ ಬಾಲ ಕಾರ್ಮಿಕರ ಮಾಹಿತಿಯನ್ನು ಆಯಾ ರಾಜ್ಯಗಳಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಬಿಸಿಯೂಟ ಕಾರ್ಯಕ್ರಮ ಆರಂಭವಾದ ನಂತರ ಶಾಲಾ ಮಕ್ಕಳ ದಾಖಲಾತಿ ಹೆಚ್ಚಿದೆ. ಇದರಿಂದಾಗಿ ಡ್ರಾಪ್ ಔಟ್ ಸಹ ಹೆಚ್ಚಾಗಿದ್ದು ಅದನ್ನು ನಿಭಾಯಿಸಲಾಗುತ್ತಿದೆ. ನಕಲಿ ಕಟ್ಟಡ ಕಾರ್ಮಿಕರ ಪತ್ತೆ ಕಾರ್ಯ ಫೀಲ್ಡ್ ಮಟ್ಟದಲ್ಲಿ ನಡೆಯುತ್ತಿದೆ.ಇನ್ನು 6 ತಿಂಗಳಲ್ಲಿ ಇದರ ನಿಖರವಾದ ಮಾಹಿತಿ ಸಿಗಲಿದೆ.ಹಾಗೆಯೇ ಕಾರ್ಮಿಕ ಇಲಾಖೆಯ ಸೌಲಭ್ಯ ಸಿಗದವರಿಗೆ ಸ್ಥಳದಲ್ಲೇ ನೋಂದಾಯಿಸಲಾಗುತ್ತದೆ ಎಂದರು.
ಇಎಸ್ಐ ಸೌಲಭ್ಯ ವಿಸ್ತರಣೆಗೆ ಬೇಸಿಕ್ ಸಂಬಳದ ಮಿತಿಯನ್ನು 21 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆಯಲ್ಲಿ ಲೇಬರ್ ಇನ್ಸ್ಪೆಕ್ಟರ್ ಕೊರತೆ ಇದೆ. ಅದಕ್ಕಾಗಿ ಅಂಬೇಡ್ಕರ್ ಸೇವಾ ಕೇಂದ್ರ ಆರಂಭಿಸಲಾಗುತ್ತಿದ್ದು ಆ ಮೂಲಕ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ.
Santhosh Lad ಶಿವಮೊಗ್ಗದ ಇಎಸ್ಐ ಆಸ್ಪತ್ರೆ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.
ನಿರ್ಮಾಣ ಸ್ಥಳದಲ್ಲಿ ಕೆಲ ಸಮಸ್ಯೆ ಇದೆ ಎಂದು ಗೊತ್ತಾಗಿದೆ.ಸಂಪುಟ ಪುನಾರಚನೆ ಬಗ್ಗೆ ಕೇಂದ್ರದ ಹೈ ಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು,ಇಲಾಖೆಯ ವತಿಯಿಂದ ಟ್ರಾನ್ಸ್ ಪೋರ್ಟ ಬೋರ್ಡ್ ಸ್ಥಾಪನೆ ಆಗಲಿದೆ ಎಂದು ಮಾಹಿತಿ ನೀಡಿದರು.
ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 15 ಲಕ್ಷ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಶೇ.15 ರಷ್ಟು ಸಾರಿಗೆ ದರ ಹೆಚ್ಚಳ ಸರಿಯಾಗಿದೆ.ಕಳೆದ 5 ವರ್ಷದಿಂದ ದರ ಹೆಚ್ಚಳ ಮಾಡಿರಲಿಲ್ಲ.
ರಾಜ್ಯದಲ್ಲಿ 25 ಸಾವಿರ ಸರ್ಕಾರಿ ಬಸ್ ಗಳಿವೆ. ಆದರೆ ನೆರೆಯ ರಾಜ್ಯದಲ್ಲಿ ಕಡಿಮೆ ಬಸ್ ಗಳಿವೆ.ಕರ್ನಾಟಕ ಜಿಡಿಪಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ.ಇದಕ್ಕೆ ನಮ್ಮ ಕಾರ್ಯಕ್ರಮ ಕಾರಣವೆಂದರು.
ಕೇಂದ್ರದ 2014 ರ ಬಜೆಟ್ 2024 ರ ಬಜೆಟ್ ಒಂದೇ ರೀತಿಯಲ್ಲಿ ಇದೆಯಾ.
ಆ ಬಗ್ಗೆ ಚರ್ಚೆ ಮಾಡಲು ಬಿಜೆಪಿಗರು ಸಿದ್ಧರಿದ್ದಾರಾ?2014ರಲ್ಲಿದ್ದ ಡಾಲರ್ ದರ ಈಗಿನ ದರ ಹಾಗೆಯೇ ಇದೆಯಾ?ಇಶ್ಯೂ ಬಗ್ಗೆ ಮಾತನಾಡಲು ಬಿಜೆಪಿಗರು ಸಿದ್ಧರಿಲ್ಲ.ಸುಮ್ಮನೆ ರಾಜಕೀಯ ಮಾಡಲು ಬಿಜೆಪಿಗರು ಮಾತನಾಡುತ್ತಾರೆ.ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ ಖರ್ಗೆ ಹೆಸರಿಲ್ಲ.ಡೆತ್ ನೋಟ್ ನಲ್ಲಿ ಆ ರೀತಿಯಲ್ಲಿ ಹೆಸರಿಲ್ಲ.ತನಿಖೆ ನಡೆಯುತ್ತಿದ್ದು ಅದರಲ್ಲಿ ಸರಿಯಾದ ಮಾಹಿತಿ ಹೊರಬರಲಿದೆ ಎಂದು ಹೇಳಿದರು.