VISL ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳವಳಕಾರಿಯಾಗಿರುವ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಲು, ‘ಸೈಬರ್ ಕ್ರೈಂ ಜಾಗೃತಿ – ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು’ ಎಂಬ ವಿಚಾರದ ಬಗ್ಗೆ ಸೈಲ್-ವಿಐಎಸ್‌ಎಲ್ ಎರಡು ಕಾರ್ಯಾಗಾರಗಳನ್ನು 11ನೇ ನವೆಂಬರ್, 2024 ಮತ್ತು 10ನೇ ಜನವರಿ 2025 ರಂದು ಹಮ್ಮಿಕೊಂಡಿತ್ತು ಇದರಲ್ಲಿ 103 ಕಾರ್ಮಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕೆ. ಕೃಷ್ಣಮೂರ್ತಿ, ಉಪ ಪೊಲೀಸ್ ಅಧೀಕ್ಷಕರು, ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ವಿಭಾಗ, ಶಿವಮೊಗ್ಗ ಇವರು ಕಾರ್ಯಾಗಾರವನ್ನು ನಡೆಸಿಕೊಟ್ಟರು, ಶ್ರೀ ವಿರೂಪಾಕ್ಷಪ್ಪ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಶಿವಮೊಗ್ಗ ಇವರಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತ ದಾಖಲಾಗಿರುವ ದೂರುಗಳು, ಅರಿವು ಮೂಡಿಸುವ ವೀಡಿಯೋಗಳು ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದವರೊಂದಿಗೆ ಮುಖಾಮುಖಿ ಸಂವಾದಗಳು ಮೂಡಿಬಂದವು.
VISL ಶ್ರೀ ಕೆ. ಕೃಷ್ಣಮೂರ್ತಿ ಅವರು, ಪ್ರತಿಯೊಬ್ಬರೂ ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು ಮತ್ತು ಸೈಬರ್ ಅಪರಾಧದ ನಿದರ್ಶನಗಳು ವರದಿಯಾದಾಗ ಪೊಲೀಸರಿಗೆ ತಿಳಿಸಲು ಅಥವಾ ಟೋಲ್ ಫ್ರೀ ಸಂಖ್ಯೆ 1930ನ್ನು ಸಂಪರ್ಕಿಸಲು ಸೂಚಿಸಿದರು. ಸೈಬರ್ ಕ್ರಿಮಿನಲ್‌ಗಳಿಂದ ವಂಚನೆಗೊಳಗಾದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯಬಾರದು ಮತ್ತು ‘ಗೋಲ್ಡನ್ ಅವರ್’ ಒಳಗಡೆ ಅಂದರೆ ಅಪರಾಧ ನಡೆದ ಸಮಯದಿಂದ 1 ಘಂಟೆ ಒಳಗಡೆ ಈ ಸಮಯ ಬಹಳ ಮುಖ್ಯವಾಗಿದ್ದು ಈ ಸಮಯದಲ್ಲಿ ದೂರನ್ನು ದಾಖಲಿಸಿದ್ದಲ್ಲಿ ಕಳೆದುಕೊಂಡ ಹಣವನ್ನು ಹಿಂದಿರುಗಿ ಪಡೆಯುವ ಸಾಧ್ಯತೆ ಹೆಚ್ಚೆಂದರು.
ವಿಐಎಸ್‌ಎಲ್ ನ ಮಾನವ ಸಂಪನ್ಮೂಲ – ಕಲಿಕೆ ಮತ್ತು ಅಭಿವೃದ್ಧಿ ವಿಭಾಗದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
VISL ಸೈಬರ್ ವಂಚನೆಗೊಳಾದಾಗ 1930 ಕ್ಕೆ ತಕ್ಷಣ ಪೊಲೀಸ್ ಸಹಾಯವಾಣಿಗೆ ಫೋನ್ ಮಾಡಿ – ಕೃಷ್ಣಮೂರ್ತಿ
Date: