Tuesday, March 17, 2026
Tuesday, March 17, 2026
Home Blog Page 430

Gopalakrishna Belur ಆನೆ ದಾಳಿಯಿಂದ ಬೆಳೆ ನಷ್ಟ ರೈತರಿಗೆ ಪರಿಹಾರ ನೀಡಿ: ಗೋಪಾಲಕೃಷ್ಣ ಬೇಳೂರು

0

Gopalakrishna Belur ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರು ಮಾದಾಪುರದಲ್ಲಿ ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.

ಪರಿಶೀಲನೆ ನಡೆಸಿ, ಆನೆಗಳ ದಾಳಿಯಿಂದ ರೈತರ ಜಮೀನು, ತೋಟಗಳಿಗೆ ಹಾನಿಯಾಗದಂತೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Gopalakrishna Belur ಅಲ್ಲದೆ ಆನೆ ದಾಳಿಯಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು ಹಾಗೂ ಸರ್ಕಾರದದಿಂದ ಪರಿಹಾರ ದೊರಕಿಸಿಕೊಡುವಂತೆ ಮಾಡಲಾಗುವುದು ಎಂದು ತಿಳಿಸಿದರು.

Kho – Kho World Cup ಖೋ ಖೋ ವಿಶ್ವಕಪ್ ನಲ್ಲಿ ಭಾರತೀಯ ತಂಡಕ್ಕೆ ಜಯ

0

Kho – Kho World Cup ಮೊಟ್ಟಮೊದಲ ಖೊ – ಖೊ ವಿಶ್ವಕಪ್ ಪಂದ್ಯಾಕೂಟದಲ್ಲಿ ನೇಪಾಳವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ಖೊ-ಖೊ ತಂಡಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ. ಚೊಚ್ಚಲ ಖೊ-ಖೊ ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರಿನ ಯುವತಿ ಚೈತ್ರ. ಬಿ ಅವರು ವಿಶ್ವವಿಜೇತ ಮಹಿಳಾ ಖೊ-ಖೊ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ.
ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದರು.

CM Siddharamaiah ಒಲಂಪಿಕ್ ನಲ್ಲಿ ರಾಜ್ಯದ ಕ್ರೀಡಾಪಟು ಪದಕ ಗೆದ್ದರೆ ₹6 ಕೋಟಿ ಬಹುಮಾನ- ಸಿದ್ಧರಾಮಯ್ಯ

0

CM Siddharamaiah ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರೆ ₹6 ಕೋಟಿ ಬಹುಮಾನ ನೀಡಲಾಗುವುದು. ಮುಂಬರುವ ಬಜೆಟ್‌ನಲ್ಲಿ ಮಂಗಳೂರು ಹಾಗೂ ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ₹3 ಕೋಟಿ ಅನುದಾನ ನೀಡಲಾಗುವುದು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ.2 ರಷ್ಟು ಉದ್ಯೋಗಗಳು ಕ್ರೀಡಾಪಟುಗಳಿಗೆ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

CM Siddharamaiah ತುಮಕೂರಿನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಜ್ಯೋತಿ ಬೆಳಗಿದ “ಸೀಎಂ”

0

CM Siddharamaiah ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದವರು ಸಿದ್ಧಾರ್ಥ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನವನ್ನು ಉದ್ಘಾಟಿಸಿ, ಶುಭ ಕೋರಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾದ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಹಲವು ಪ್ರಮುಖರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು

PES Trust ಶಿವಮೊಗ್ಗದಲ್ಲಿ ಸ್ಟಾರ್ಟ್ ಅಪ್ ಸಮಿಟ್ ಗೆ ಸಚಿವ ಶಿವರಾಜ್ ಚೌಹಾನ್ ಚಾಲನೆ

0

PES Trust ಪಿ.ಇ.ಎಸ್ ಟ್ರಸ್ಟ್ ಹಾಗೂ ಅನ್ವೇಷಣ ಸಂಸ್ಥೆಯ ವತಿಯಿಂದ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ PESITM ಕಾಲೇಜು ಆವರಣದ ಪ್ರೇರಣಾ ಕನ್ವೆನ್ಷನ್ ಹಾಲ್ ನಲ್ಲಿ “Malnad Startup Summit – 2025” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ “Start Up Exhibition” ಹಾಗೂ ಸಭಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಈ ದೇಶ ಬಹುಪಾಲು ಭಾಗ ಗ್ರಾಮಗಳಿಂದ ಕೂಡಿದೆ. ಹೆಚ್ಚಿನ ಜನರು ಕೃಷಿಯನ್ನು ಹಾಗೂ ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಹಗಲು ರಾತ್ರಿ, ಬಿಸಿಲು ಮಳೆ ಲೆಕ್ಕಿಸದೇ ಉಳುಮೆ ಮಾಡುವ ರೈತ ಒಬ್ಬ ಸೈನಿಕನಂತೆ ಎಂದರಿತ ನಾವು “ಜೈ ಜವಾನ್ – ಜೈ ಕಿಸಾನ್” ಎಂಬ ಘೋಷಣೆ ನೀಡಿ ವಿಶೇಷ ಗೌರವ ಕೂಡ ನೀಡಿದೆ.

ಕೇಂದ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನದಾತನಿಗೆ ಭರಪೂರ ಕೊಡುಗೆಗಳನ್ನು ಜಾರಿಗೆ ತಂದು ರೈತರ ಶ್ರೇಯೋಭಿವೃದ್ಧಿಗೆ ಕೈಜೋಡಿಸಿದೆ. ಕೃಷಿ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ ನೀಡುವುದರ ಮೂಲಕ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.

ಜೊತೆಗೆ ಭಾರತ ತನ್ನ ಎಲ್ಲ ರಂಗದಲ್ಲಿಯೂ ಹೊಸ ರೀತಿಯ ಅನ್ವೇಷಣೆ ನಡೆಸಿ ಅಭಿವೃದ್ಧಿ ಹೊಂದುತ್ತಾ ಮುಂದುವರಿದ ರಾಷ್ಟ್ರಕ್ಕೆ ಸರಿ ಸಮಾನವಾಗಿ ನಿಲ್ಲುತ್ತಿದೆ. ಅವಕಾಶಕ್ಕಾಗಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಇದರಲ್ಲಿ ಕೃಷಿ ಕ್ಷೇತ್ರವು ಹೊರತಾಗಿಲ್ಲ. ಕೃಷಿ ಕ್ಷೇತ್ರವನ್ನು ಆಧುನಿಕತೆಗೆ ತೆರೆದಿಡಲು ದೇಶ ಮುಕ್ತವಾಗಿ ಸ್ವಾಗತಿಸುತ್ತಿದೆ.

PES Trust ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡ ಕೃಷಿ ಕ್ಷೇತ್ರದ Startup ಗಳಿಗೆ ಅನೇಕ ಯೋಜನೆಗಳನ್ನು ಹಾಗೂ ಕೊಡುಗೆಗಳನ್ನು ನೀಡುತ್ತಿದ್ದು, ಇದರ ಭವಿಷ್ಯದ ಆಲೋಚನೆಗಳನ್ನು ಮತ್ತು ರೈತರಿಗೆ ಇದರಿಂದಾಗುವ ಅನೇಕ ಪ್ರಯೋಜನಗಳನ್ನು ಪ್ರಸ್ತುತ ಪಡಿಸಲು ಈ ವಿಶೇಷ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ.

ಈ ಸಂದರ್ಭದಲ್ಲಿ ಅನ್ವೇಷಣ ಸಂಸ್ಥೆಯ ಸಿಇಒ ಶ್ರೀ ಪಾಟೀಲ್ ಅವರು, ಶಾಸಕರುಗಳಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಧನಂಜಯ ಸರ್ಜಿ ಅವರು, ಶ್ರೀ ಅರುಣ್ ಅವರು, ಗಣ್ಯರಾದ ಶ್ರೀ ಸುಭಾಷ್ ರಾಘವೇಂದ್ರ ಅವರು, ಶ್ರೀ ಮೇಘರಾಜ್ ಅವರು, ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು.

Bharat Scouts and Guides ಸಂಚಾರ ಕಾನೂನು ಅರಿತ ನಂತರ ವಾಹನ ಖರೀದಿ‌ಸಿ, ಚಾಲನೆ ಮಾಡಿ- ಅನಿಲ್ ಕುಮಾರ್ ಭೂಮರೆಡ್ಡಿ

0

Bharat Scouts and Guides ಪ್ರತಿಯೊಬ್ಬರೂ ವಾಹನ ಕೊಂಡುಕೊಳ್ಳುವಾಗ ಅದರ ಕಾಯ್ದೆ ಕಾನೂನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅದರ ಕಾಯ್ದೆ, ಕಾನೂನು ತಿಳಿದುಕೊಂಡ ಬಳಿಕವಷ್ಟೇ ವಾಹನ ಕೊಂಡು ಚಲಾಯಿಸಿ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದ್ದಾರೆ. ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಪ್ರತಿಯೊಬ್ಬರೂ ಅದರಲ್ಲೂ ಯುವಕ-ಯುವತಿಯರು ನಿಯಾಮವಳಿಗಳನ್ನು ಪಾಲನೆ ಮಾಡುವುದರ ಮೂಲಕ ವಾಹನ ಚಲಾವಣೆಗೆ ಮುಂದಾಗಬೇಕು. ಪರವಾನಿಗಿ ಇದ್ದರಷ್ಟೇ ವಾಹನ ಚಲಾಯಿಸಬೇಕು. ರಸ್ತೆ ನಿಯಾಮಾವಳಿ ಮತ್ತು ಪರವಾನಿಗೆ ಹೊಂದ ಬಳಿಕವಷ್ಟೇ ವಾಹನ ಚಲಾಯಿಸಬೇಕೆಂದು ಕಿವಿ ಮಾತು ಹೇಳಿದರು.

ಇನ್ನು 18 ವರ್ಷ ವಯಸ್ಸಿನೊಳಗೆ ಇರುವವರು ಯಾರೂ ಕೂಡ ವಾಹನ ಚಲಾಯಿಸಬಾರದು. ಪರವಾನಿಗೆ ಇದ್ದವರು ವಾಹನ ಚಲಾಯಿಸಬೇಕಾದಲ್ಲಿ ಎಲ್ಲಾ ದಾಖಲೆಗಳು ಹೊಂದಿರಬೇಕು. ನಮ್ಮ ದಾರಿಯಲ್ಲಿ ನಾವು ಸರಾಗವಾಗಿ ಸಾಗಿದರೆ, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ. ಎಲ್ಲರೂ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಮಕ್ಕಳು ಕೂಡ ಹೆಲ್ಮೆಟ್ ಧರಿಸಿಯೇ ವಾಹನದಲ್ಲಿ ಸಾಗಬೇಕು. ಇತರರಿಗೂ ವಾಹನ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್, ಇದರಲ್ಲಿ ಹೊಸತನವಿದೆ. ಜೀವನದಲ್ಲಿ ಹೊಸತನ ಕಲಿಯಬೇಕು. ಹಾಗೆ ನಾನು ಸ್ಕೌಟ್ಸ್ ಸೆಲ್ಯೂಟ್ ಬಗ್ಗೆ ಇಂದು ತಿಳಿದುಕೊಂಡಿದ್ದೆನೆ. ಬಹಳಷ್ಟು ಧೈರ್ಯ ಶಾಲಿಗಳಾಗಲು ಈ ರೀತಿಯ ಕೈಕುಲುಕುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇವೆ ಸಲ್ಲಿಸುತ್ತಾರೆ. ಪ್ರತಿದಿನ ಕಲಿಕೆ ಎಂಬುದು ಇರುತ್ತದೆ. ಇಲ್ಲಿ ಸೆಲ್ಯೂಟ್ ಬಗ್ಗೆ ಕಲಿಕೆ ಉತ್ತಮ ಪ್ರಯೋಜನಕಾರಿಯಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Bharat Scouts and Guides ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಮತ್ತು ಬುಲ್ ಬುಲ್ಸ್ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕೌಟ್ ಆಯುಕ್ತ ಎಸ್.ಜಿ. ಆನಂದ್, ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ರೋವರ್ ಜಿಲ್ಲಾ ಆಯುಕ್ತ ಕೆ. ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯ ಕುಮಾರ್, ಚಂದ್ರಶೇಖರ್, ಚೂಡಾಮಣಿ ಪವಾರ್, ಡಿ.ವೈಎಸ್.ಪಿ. ಸಂಜೀವ್ ಕುಮಾರ್, ಟ್ರಾಫಿಕ್ ಇನ್ಸ್ ಪೆಕ್ಟರ್ ಸಂತೋಷ್.. ರಾಜೇಶ್ ಅವಲಕ್ಕಿ. ಶಿವಶಂಕರ್. ಮಲ್ಲಿಕಾರ್ಜುನ್ ಖಾನೂರ್. ಗೀತಾ ಚಿಕ್ಕಮಠ. ವೈ ಆರ್ ಕಾರ್ಯದರ್ಶಿ ಚಂದ್ರಶೇಖರ್ . ಕಾತ್ಯಾಯಿನಿ.. ರಾಮಚಂದ್ರ ಸೇರಿದಂತೆ ಇತರರಿದ್ದರು

Kannada Development Authority ಕನ್ನಡದ ಸೊರಗುವಿಕೆಗೆ ಜನರ ಅನಾಸಕ್ತಿ, ಸರ್ಕಾರಗಳ ಧೋರಣೆಯೂ ಕಾರಣ- ಕೋಣಂದೂರು ಲಿಂಗಪ್ಪ

0

Kannada Development Authority ಇಂದಿನ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಸಮಾಜವಾದದ ತತ್ವಸಿದ್ಧಾಂತಗಳ ಕುರಿತು ಜನರು ಸಿನಿಕರಾಗಿರುವುದು ಪ್ರಮುಖ‌ ಕಾರಣವಾಗಿದೆ‌ ಎಂದು ಖ್ಯಾತ ಸಮಾಜವಾದಿ ಚಿಂತಕ ಕೋಣಂದೂರು ಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ‌ ಗೋಕಾಕ್ ಚಳವಳಿಯ ನೆನಪಿನಲ್ಲಿ ಕನ್ನಡ ಚಳವಳಿಯ ಪ್ರವರ್ತಕ ಸನ್ಮಾನವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ‌ ತಮ್ಮ ಸ್ವಗೃಹದಲ್ಲಿ ಸ್ವೀಕರಿಸಿ ಮಾತನಾಡಿದ ಅವರು ಜನಪರವಾದ ಹೋರಾಟಗಳಿಲ್ಲದೇ ಇಂದು ಸಮಾಜವು ಸೊರಗುತ್ತಿದ್ದು, ಬಡವ ಬಲ್ಲಿದರ‌ ನಡುವಿನ ಕಂದಕ ಹಿರಿದಾಗುತ್ತಲೇ‌ ಇದೆ.

ತಮ್ಮ ಕಾಲದ‌ ಚಳವಳಿಗಳಲ್ಲಿನ ಸಾಮಾಜಿಕ ಕಳಕಳಿ, ತತ್ವನಿಷ್ಠೆಗಳು ಇಂದು ಕಾಣುತ್ತಿಲ್ಲ, ಹೋರಾಟಗಳಿಗೆ ಪ್ರೇರಣೆಯೂ ಸಿಗುತ್ತಿಲ್ಲ. ಕನ್ನಡ‌ ಭಾಷೆ ಸೊರಗುತ್ತಿರುವುದಕ್ಕೆ ಜನರ ಅನಾಸಕ್ತಿಯ ಜೊತೆಯಲ್ಲಿ ಸರ್ಕಾರಗಳ ಧೋರಣೆಯೂ ಕಾರಣವಾಗಿದೆ.‌ ಇದು ವಿಷಾದನೀಯವಾದ ಸಂಗತಿ ಎಂದರು.

Kannada Development Authority ಸಮಾಜವಾದಿ ಆದರ್ಶ ತತ್ತ್ವಸಿದ್ಧಾಂತಗಳನ್ನು ನಂಬಿದ ಶಾಂತವೇರಿ ಗೋಪಾಲಗೌಡ ಅವರಿಂದಾಗಿ ತಮ್ಮ ಬದುಕಿಗೆ ಅರ್ಥ ದೊರಕಿದ್ದು ಅವರ ನಿರಂತರ ಮಾರ್ಗದರ್ಶನ ತಮ್ಮ ಹೋರಾಟದ ಮನಸ್ಥಿತಿಗೆ ಪ್ರೇರೇಪಣೆಯಾಯಿತೆಂದು ನೆನೆದ ಅವರು ಅಂದಿನ ದಿನಮಾನಕ್ಕೆ ಸತ್ವಯುತವಾದ ಹೋರಾಟ ಅವಶ್ಯಕವಿತ್ತು. ತಮ್ಮ ಜವಾಬ್ದಾರಿಯನ್ನು ತಾನು ನಿರ್ವಹಿಸಿದೆ ಎನ್ನುವ ತೃಪ್ತಿ ತನಗೆ ಇದೆ ಎಂದರು.

ಈ ಸಂದರ್ಭದಲ್ಲಿ 91 ವರ್ಷದ ಅವರು ಲೋಹಿಯಾ, ಶಾಂತವೇರಿ ಮತ್ತು ಜಾರ್ಜ್ ಫೆರ್ನಾಂಡೀಸ್ ಅವರೊಡನೆಯ ಒಡನಾಟದ ಸ್ವಾರಸ್ಯಕರ ನೆನಪುಗಳನ್ನು ಲವಲವಿಕೆಯಿಂದ ಹಂಚಿಕೊಂಡರು.‌

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೋಣಂದೂರು ಲಿಂಗಪ್ಪನವರನ್ನು ಸನ್ಮಾನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

Kuvempu University ಉಪನ್ಯಾಸಕ ಸತೀಶ್ ಅವರಿಗೆ ಕುವೆಂಪು ವಿವಿಯಿಂದ ಪಿ ಎಚ್ ಡಿ ಪದವಿ

0

Kuvempu University ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಷಯದಲ್ಲಿ ಸತೀಶ್ ಹೆಚ್ ಸಿ ಇವರು ಪಿಹೆಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರು ಸಿಂಥೆಸಿಸ್ ಕ್ಯಾರೆಕ್ಟರೈಜೇಷನ್ ಆಫ್ ಮೆಟಲ್ ನ್ಯಾನೋ ಪಾರ್ಟಿಕಲ್ಸ್: ಎಲೆಕ್ಟ್ರೋಕೆಮಿಕಲ್ಸ್ ಆಂಡ್ ಡೈ ಡಿಗ್ರಡೆಶನ್ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಅನಿತಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

Kuvempu University ಇವರು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಚಂದ್ರಪ್ಪ ಮತ್ತು ಕೆಂಚಮ್ಮ ದಂಪತಿಗಳ ಪುತ್ರರಾಗಿದ್ದು ಪ್ರಸ್ತುತ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ.22 ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರಮಾಣ ಪತ್ರ ನೀಡಲಿದ್ದಾರೆ.

SN Channabasappa ವೇಮನರ ವಚನಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಲಿ- ಶಾಸಕ ಚನ್ನಬಸಪ್ಪ

0

SN Channabasappa ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಜನಮಾನಸಕ್ಕೆ ತಲುಪಿಸುವ ವೇಮನರ ಜೀವನದ ಆದರ್ಶಗಳನ್ನು ನಾವು ಪಾಲನೆ ಮಾಡಬೇಕಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘದ ಸಹಯೋಗದೊಂದಿಗೆ ಭಾನುವಾರ ನಗರದ ಕುವೆಂಪು ರಂಗಮಂದಿರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇಮನರ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಬೇಕಿದೆ. ಆ ಮೂಲಕ ವಚನ ಸಾಹಿತ್ಯ, ಕವಿ ಪರಂಪರೆಯನ್ನು ಒಪ್ಪಿಕೊಂಡು ಮುಂದೆ ತೆಗೆದುಕೊಂಡು ಹೊಗಬೇಕಿದೆ ಎಂದರು.

ಮೂಲತಃ ಆಂಧ್ರಪ್ರದೇಶದವರಾದ ವೇಮನ ಅವರು ವಚನ ಸಾಹಿತ್ಯವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಿರುವಳ್ಳುವರ್‌ ಮಾದರಿಯಲ್ಲಿ ವೇಮನರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವೇಮನ ಮಾಡಿದ ಅನೇಕ ಒಳ್ಳೆಯ ಸಂಗತಿಗಳನ್ನು ವಚನಗಳ ಮೂಲಕ ತೋರಿಸಿದ್ದಾರೆ.

ಕರ್ನಾಟಕ ಸರ್ಕಾರ ವೇಮನವರನ್ನು ಬೇರೆ ರಾಜ್ಯದವರು ಎಂಬ ಆಲೋಚನೆ ಮಾಡದೇ ಪ್ರಾಶಸ್ತ್ಯ ನೀಡಬೇಕು. ಭಾಷೆ ಬೇರೆ ಇರಬಹುದು ಆದರೆ ಭಾವನೆ ಒಂದೇ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೂಡ ಮುತುವರ್ಜಿ ವಹಿಸಿ ವೇಮನರ ಕುರಿತು ಕೈಪಿಡಿಯನ್ನು ಸಿದ್ಧಪಡಿಸಬೇಕು.
ವರ್ತಮಾನದಲ್ಲಿ ಮೊಬೈಲಿನ ಗೀಳು ಹೆಚ್ಚಾಗಿ ಅದರಿಂದ ಇಂದಿನ ಯುವ ಸಮೂಹಕ್ಕೆ ವಚನ, ಸಾಹಿತ್ಯಗಳ ಜ್ಞಾನವೇ ಇಲ್ಲದಂತಾಗಿದೆ. ಅವರ ನೆನಪಿನ ಶಕ್ತಿಯೆನೆಲ್ಲಾ ಹಾಳು ಮಾಡುತ್ತಿದೆ, ಬಸವಣ್ಣ, ಸರ್ವಜ್ಞ, ವೇಮನ ಸಮಕಾಲೀನರಾದರೂ ವೇಮನ ಯುವ ಸಮೂಹಗಳನ್ನು ಹೆಚ್ಚಾಗಿ ತಲುಪಲಿಲ್ಲ ಹಾಗಾಗಿ ಪುಸ್ತಕದ ಮೂಲಕ ಅವರನ್ನು ಜನಮಾನಸಕ್ಕೆ ತಲುಪಿಸಬೇಕಿದೆ ಎಂದರು.

SN Channabasappa ನಿವೃತ್ತ ಶಿಕ್ಷಣಾಧಿಕಾರಿ ಆರ್‌. ರತ್ನಯ್ಯ ಮಾತನಾಡಿ, ವೇಮನ 15 ರಿಂದ 17 ಶತಮಾನದೊಳಗೆ ಇದ್ದರೆಂದು ಇಂಗ್ಲಿಷಿನ ಕವಿಯೊಬ್ಬರು ಉಲ್ಲೇಖಿಸಿದ್ದಾರೆ.
ಆತನ ಕುರಿತು 5 ಸಾವಿರ ಪದ್ಯ ಇರುವ ಪುಸ್ತಕ ಇದೆ ಎಂದರು.

ವೇಮನ ರೆಡ್ಡಿ ಕುಲದಲ್ಲಿ ಜನಿಸಿದರೂ‌ ಆತನೊಬ್ಬ ಮಹಾಯೋಗಿ. ಆಧ್ಯಾತ್ಮಿಕ, ಸಾಹಿತ್ಯ ಪಾರಂಗತ ವಾದವನ್ನು ಸಮಾಜಕ್ಕೆ ತಿಳಿಸಿದವನು. ಈಗಲೂ ಕೂಡ ಆಂಧ್ರ ಮತ್ತು ತೆಲಂಗಾಣದಲ್ಲಿ ರೈತರು ನಾಟಿ ಅಥವಾ ಬೇಸಾಯ ಮಾಡುವಾಗ ಸಹಜನಾಗಿ ವೇಮನ ಪದ್ಯವನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ. ಆ ಮೂಲಕ ಅವರು ಪ್ರಜಾಕವಿ ಆಗಿದ್ದಾರೆ. ತನ್ನ ವೇದಾಂತ ಸಾರಾಂಶವನ್ನು ಆಂಧ್ರದವರೆಗೂ ಕಾಪಿಟ್ಟುಕೊಂಡಿದ್ದಾರೆ.

ವಚನಗಳ ಮೂಲಕ ಜ್ಞಾನ, ಆತ್ಮಜ್ಞಾನವನ್ನು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿನ ವಿಂಡಂಬನೆ ವಿಶ್ಲೇಷಿಸಿ ಗಂಡ, ಹೆಂಡತಿ, ಮಕ್ಕಳು ಇವರುಗಳ ಜವಬ್ದಾರಿ ಏನೆಂದು ತಿಳಿಸಿದ್ದಾರೆ ಎಂದರು.
ಯುವ ಪಿಳೀಗೆಗೆ ವೇಮನ ಯಾರೆಂದು ತಿಳಿದಿಲ್ಲ. ಅದನ್ನು ತಿಳಿಸುವ ಜವಬ್ದಾರಿ ರೆಡ್ಡಿ ಸಮುದಾಯದ್ದಾಗಿದೆ. ಆತನ ಬಗ್ಗೆ ಕನ್ನಡದಲ್ಲಿ ಪುಸ್ತಕ ಇದೆ. ಅದನ್ನು ಓದುವಂತೆ ಪ್ರೇರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಭೀಮಾ ರೆಡ್ಡಿ ಮಾತನಾಡಿ, ವೇಮನರು ದೊಡ್ಡ ಭಂಡಾರವಿದ್ದಂತೆ. ತಿರುವಳ್ಳುವರ್, ಸರ್ವಜ್ಞ ರಂತೆ ವೇಮನ ರನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಹಾದಿಯಲ್ಲೆ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್‌.ಉಮೇಶ್‌, ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷ ಮೋಹನ್‌ ರೆಡ್ಡಿ ಹಾಗೂ ರೆಡ್ಡಿ ಸಂಘದ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.

Co-operative Societies Audit Department ಸೆಪ್ಟೆಂಬರ್ 1 ರೊಳಗೆ ಸಹಕಾರ ಸಂಘಗಳು ತಮ್ಮ ಲೆಕ್ಕಪರಿಶೋಧನೆ ಪೂರೈಸಲು ಇಲಾಖೆ ಸೂಚನೆ

0

Co-operative Societies Audit Department ಶಿವಮೊಗ್ಗ ಜಿಲ್ಲೆಯ ಕಾರ್ಯವ್ಯಾಪಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು 2024-25 ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 63(1)ರ ಮೇರೆಗೆ ಸೆಪ್ಟೆಂಬರ್ – 01 ರೊಳಗೆ ಪೂರೈಸಿಕೊಳ್ಳಬೇಕಾಗಿರುತ್ತದೆ.
ಆದ್ದರಿಂದ ಇಲಾಖೆಯವರುhttp://www.sahakaradarpana.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಹ ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಸಂಘದ 2023-24 ಸಾಲಿನ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸದೇ ಇರುವವರು ತಕ್ಷಣವೇ ಉಪ ನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಜಗನ್ನಾಥ ನರ್ಸಿಂಗ್ ಹೋಂ ಪಕ್ಕ, ಪಿಜಿಎಸ್ ಟವ್, 2ನೇ ಮಹಡಿ, ಶಿವಮೊಗ್ಗ ಇವರ ಕಚೇರಿಗೆ ಸಲ್ಲಿಸುವತೆ ಹಾಗೂ ಸಕಾಲದಲ್ಲಿ ಲೆಕ್ಕ ಪರಿಶೋಧನೆ ನಿರ್ವಹಿಸಿಕೊಂಡು, ವರದಿಯ ಪ್ರತಿಯನ್ನು ಕಡ್ಡಾಯವಾಗಿ ದಿ: 01-09-2025 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.