National Road Safety Month ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯ ಜಂಟಿ ಸಾರಿಗೆ ಆಯುಕ್ತಾರಾದ ಭೀಮನಗೌಡ ಪಾಟೀಲ್ ಅವರು ಆರ್‌ಟಿಓ ಕಚೇರಿ ಜ್ಯೋತಿ ಬೆಳಗುವ ಮೂಲಕ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಇತ್ತೀಚೆಗೆ ಉದ್ಘಾಟಿಸಿದರು.
ಅವರು ಈ ವೇಳೆ ಮಾತನಾಡಿ, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು. ವಾಹನ ಚಾಲನೆ ವೇಳೆ ರಸ್ತೆ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರ್ನೆಸ್‌ನ್ನು ಬಳಸಬೇಕು. ನಾಲ್ಕು ಚಕ್ರ ವಾಹನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು ಎಂದು ತಿಳಿಸಿದರು.
National Road Safety Month ಇದೇ ವೇಳೆ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮುರಗೇಂದ್ರ ಬಿ ಶಿರೋಳಕರ, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಮಲ್ಲೇಶಪ್ಪ, ಮೋಟಾರ್ ವಾಹನ ನಿರೀಕ್ಷಕರಾದ ಮಂಜುನಾಥ್, ಕಚೇರಿ ಅಧೀಕ್ಷಕರಾದ ರಮ್ಯಾ, ಸಿಬ್ಬಂದಿ ಡಿ.ಮೋಹನ್ ಕುಮಾರ್ ಹಾಗೂ ಚಾಲನಾ ತರಬೇತಿ ಶಾಲೆಯ ಪ್ರಾಂಶುಪಾಲರು, ವಕೀಲರು, ಸಾರ್ವಜನಿಕರು ಹಾಜರಿದ್ದರು.
National Road Safety Month ವಾಹನ ಸವಾರರು ರಸ್ತೆ ಸುರಕ್ಷತೆ ನಿಯಮಾವಳಿ ತಿಳಿದಿರಬೇಕು- ಭೀಮನಗೌಡ ಪಾಟೀಲ್
Shikaripura Primary Health Centre ಜ.31 ರಂದು ಶಿಕಾರಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ
Shikaripura Primary Health Centre ಜ.31 ರಂದು ಶಿಕಾರಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾರಗೊಪ್ಪ, ದೂ.ಸಂ: 9741161346 ಇಲ್ಲಿ ಶಿಬಿರ ನಡೆಸಲಾಗುತ್ತದೆ.
60 ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಶಿಬಿರಕ್ಕೆ ಹಾಜರಾಗಲು ವಯಸ್ಸಿನ ಸಂಬಂಧ ಜನ್ಮ ದಿನಾಂಕ ನಮೂದಾಗಿರುವ ದಾಖಲಾತಿ ಅಂದರೆ ಇಲಾಖೆಯಿಂದ ವಿತರಿಸಲಾದ ಹಿರಿಯ ನಾಗರಿಕ ಗುರುತಿನ ಚೀಟಿ, ಪಾನ್‌ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಶಾಲಾ/ ಕಾಲೇಜು ದಾಖಲಾತಿ ಹಾಗೂ ಆಧಾರ ಕಾರ್ಡ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರತಕ್ಕದ್ದು.
Shikaripura Primary Health Centre ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಸಲಹೆ ಮತ್ತು ಮಾಹಿತಿ ಕೇಂದ್ರ ದೂ.ಸಂ; 08182251676, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ದೂ.ಸಂ:08182222382, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ದೂ.ಸಂ:08182221188, ಅಂಗವಿಕಲರ ಪುನರ್ವಸತಿ ಕೇಂದ್ರ ದೂ.ಸಂ:08182488438, ಮೊ;8088620178 ಸಂಪರ್ಕಿಸಬಹುದೆAದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Idagunji Mahaganapati Yakshagana Mandali ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ವಿಶ್ವಸಂಸ್ಥೆ ಗೌರವ
Idagunji Mahaganapati Yakshagana Mandali ಸ್ವಾತಂತ್ಯ ಪೂರ್ವದಲ್ಲಿ ಅಂದರೆ 1934ರಲ್ಲಿ ಸ್ಥಾಪನೆಯಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ಈಗ 90ನೇ ವರುಷದ ಸಂಭ್ರಮ.
ಈ ಸಮಯದಲ್ಲೇ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ಪ್ರಾಪ್ತವಾಗಿದೆ.
ಯಕ್ಷಗಾನ ಸಂಸ್ಥೆಯೊಂದಕ್ಕೆ ಈ ಮಾನ್ಯತೆ ಸಿಕ್ಕಿದ್ದು ಇದೇ ಪ್ರಥಮ. ವಿಶ್ವದ 58 ರಾಷ್ಟ್ರೀಯ ಸಂಸ್ಥೆಗಳಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ಒಂದಾಗಿದೆ.
ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೋ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ.
Idagunji Mahaganapati Yakshagana Mandali ಯಕ್ಷರಂಗದ ಮೇರು ಕಲಾವಿದರಾದ ದಿವಂಗತ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಸ್ಥಾಪಿತವಾದ ಸಂಸ್ಥೆ. ಯಕ್ಷ ದಿಗ್ಗಜರಾದ (ಪುತ್ರರು) ಶಂಭು ಹೆಗಡೆ, ಮಹಾಬಲ ಹೆಗಡೆ ಮತ್ತು ಗಜಾನನ ಹೆಗಡೆ ಅವರು,ಸಮರ್ಥವಾಗಿ ಮುನ್ನಡೆಸಿದರು. ಪ್ರಸ್ತುತ ಶಿವಾನಂದ ಹೆಗಡೆ ಅವರ ಮುಂದಾಳತ್ವದಲ್ಲಿ ಸಂಸ್ಥೆ ಕಲಾಸೇವೆಯಲ್ಲಿ ಮುನ್ನಡೆದಿದೆ.
Karnataka Sanga ಅಮ್ಮ ಎಂಬ ಅಕ್ಕರೆಯ ಬಗ್ಗೆ ಇಡೀ ಭಾನುವಾರ ಮೂಡಿದ ಮಮತಾಮಯಿ ಚಿತ್ತಾರ
Karnataka Sanga ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಕರ್ನಾಟಕ ಸಂಘದಲ್ಲಿ ಜ. 19ರ ನಿನ್ನೆ ಇಡೀ ದಿನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಅಮ್ಮ ಎಂಬ ಅನುರಣಿಸುವ ಹೃದಯದ ಅಂಬರ ಚಿತ್ತಾರವನ್ನು ಇಡೀ ದಿವಸ ಉಪನ್ಯಾಸ, ಹಾಡು, ನೃತ್ಯ, ಕಿರುಚಿತ್ರಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಯಿತು.
ಪ್ರಥಮವಾಗಿ ವೀಣಾ ಬನ್ನಂಜೆಯವರು ಸತ್ಯಕಾಮರು ರಚಿಸಿದ ಮಾತೃ ಲಹರಿಯ ಕಾವ್ಯದೊಡನೆ ಮಾತೃ ಶಕ್ತಿಯ ವಿಶಿಷ್ಟತೆಯನ್ನು ವಿವರಿಸಿದರು. ಕುಂಡಲಿನಿ ಶಕ್ತಿ ಜಾಗೃತಿ ಮಾತೆಯಿಂದ ಹೇಗಾಗುತ್ತದೆ ಎಂದು ವಿವರಿಸಿದರು.
ಜಗದೀಶ್ ಶರ್ಮ ಸಂಪ ಅವರು ರಾಮಾಯಣ ಮಹಾಭಾರತ ಮಹಾಕಾವ್ಯದಲ್ಲಿ ಚಿತ್ರತವಾಗಿರುವ ಕೌಸಲ್ಯ, ಕೈಕಸಿ, ಕೈಕೇಯಿ, ಸೀತೆ, ಗಂಗೆ, ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ, ಸುಭದ್ರೆ ಕುರಿತು ಅಮೋಘವಾಗಿ ವಿವರ ನೀಡಿದರು.
ವಿದ್ವಾನ್ ಜಿ.ಎಸ್. ನಟೇಶ್ ಅವರು ವೇದ, ಶಂಕರಾಚಾರ್ಯರ ಮಾತೃ ಪಂಚಕ , ಉಪನಿಷತ್ತು, ಜಾನಪದ ಸಂಸ್ಕೃತಿಯಲ್ಲಿ ತಾಯಿಯ ಚಿತ್ರಣ ಕುರಿತು ಮಾತನಾಡಿ, ಸಂಸ್ಕೃತಿ ಚಿಂತನಗಳನ್ನು ತಾಯಿ ಹೇಗೆ ಮುಂದಿನ ತಲೆಮಾರಿಗೆ ಧಾರೆ ಎರೆಯುತ್ತಾಳೆ ಎಂದು ವಿವರಿಸಿದರು.
ಜೋಗಿ ಅವರು ಹೊಸಗನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಇವುಗಳಲ್ಲಿ ತಾಯಿಯ ಪರಿಕಲ್ಪನೆಯನ್ನು ಹಾಗೂ ಕಥೆ, ಕವಿತೆ, ಕಾದಂಬರಿಗಳಲ್ಲಿನ ತಾಯ್ತನದ ಪ್ರಸಂಗಗಳನ್ನು ವಿವರಿಸಿದರು.
ಮಧ್ಯಾಹ್ನದ ಊಟದ ಸಮಯದಲ್ಲಿ ತಾಯಂದಿರು ಕೈತುತ್ತು ನೀಡುವುದರ ಮೂಲಕ ವಿಭಿನ್ನವಾದ ಭೋಜನದ ಆಯೋಜನೆಯನ್ನು ಮಾಡಲಾಗಿತ್ತು.
ಖ್ಯಾತ ಕಥೆಗಾರ ವಸುಧೇಂದ್ರ ಅವರು ‘ನಮ್ಮಮ್ಮ ಅಂದ್ರೆ ನನಗಿಷ್ಟ’ ಎಂಬ ಅವರ ಕೃತಿಯ ಕಥಾ ವಾಚನದ ಮೂಲಕ ಎಲ್ಲರ ಕಣ್ಣನ್ನು ತೇವ ಮಾಡಿ ಆರ್ದ್ರಗೊಳಿಸಿದರು.
ಪ್ರಸಾದ್ ಭಾರದ್ವಾಜ್ ಹಾಗೂ ಧೀಮಂತ ಭಾರದ್ವಾಜ್ ಗಮಕದಲ್ಲಿ ಮಾತೃ ಸಂವೇದನೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಸ ಋಷಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ಕೈಕೇಯಿ ಹಾಗೂ ಭರತನ ಸಂವಾದದ ಪ್ರಸಂಗವನ್ನು ಮಾತೃ ಸಂವೇದನೆಯ ಹಿನ್ನೆಲೆಯಲ್ಲಿ ವಿವರಿಸಿದರು.
ಹೊಸನಗರದ ವಿನಾಯಕ ಅವರು ಏರ್ಪಡಿಸಿದ್ದ ಮಾತೃ ಸಂವೇದನೆಯ ಚಿತ್ರಗಳ ಪ್ರದರ್ಶನ ಸುಂದರವಾಗಿತ್ತು. ಪ್ರದರ್ಶಿಸಿದ ಕಿರು ಚಿತ್ರಗಳು ಹೃದಯಂಗಮವಾಗಿದ್ದವು.
ಲಾಲಿ ಎಂಬ ದೇವಭಾಷೆ ಎಂಬ ಶಿರೋನಾಮೆಯಡಿ ಕನ್ನಡ ಗೀತೆಗಳಿಗೆ ಸಹನಾ ಚೇತನ್ ಅವರು ಭಾವಾಭಿನಯ ಮಾಡುವುದರ ಮೂಲಕ ಮಾತೃತ್ವವನ್ನು ಪ್ರತಿಬಿಂಬಿಸಿದರು. ಸಹಚೇತನ ನಾಟ್ಯಾಲಯದ ಸಂಜನಾ, ಸಿಂಧುಶ್ರೀ ಅಡಿಗ, ರವೀನಾ ಹಾಗೂ ಸೇಜಲ್ ಅಮ್ಮನ ಕುರಿತಾದ ಕೆಲವು ಜನಪ್ರಿಯ ಸಿನಿಮಾ ಹಾಡುಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು.
ವಿಘ್ನೇಶ್ ಭಟ್ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಾತೃ ಆರಾಧನೆ ವಿಷಯ ಕುರಿತು ಮಾತನಾಡಿದರು.
ಪಾರ್ಥ ಚಿರಂತನ್ ಹಾಗೂ ಅನುಶ್ರೀ ಅವರು ಅಮ್ಮನ ಕುರಿತ ಭಾವಗೀತೆಗಳನ್ನು ಹಾಡಿದರು.
ಒಟ್ಟಾರೆ ಇಡೀ ದಿನ ಅಮ್ಮನ ಸಂಸ್ಕರಣೆಯಲ್ಲಿ ಎಲ್ಲರ ಹೃದಯ ಭಾವತುಂಬಿ, ರಸಾಸ್ವಾಧನೆಯಾದದ್ದು ಈ ಕಾರ್ಯಕ್ರಮದ ಯಶಸ್ಸು. ನೆರೆದಿದ್ದ ಎಲ್ಲರೂ ತಮ್ಮ ತಾಯಂದಿರನ್ನು ನೆನೆದರು ಹಾಗೂ ಸೃಷ್ಟಿ ಕ್ರಿಯೆಯ ಮೂಲವಾದ ತಾಯಿಗೆ ಮನಸಾರೆ ವಂದಿಸಿದರು.
ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿತವಾಗಿತ್ತು. ವಿನಯ್ ಶಿವಮೊಗ್ಗ ಹಾಗೂ ಸಹನಾ ಚೇತನ್ ಅವರ ನಿರೂಪಣೆಗಳು ಹೃದ್ಯವಾಗಿದ್ದು ಕಾರ್ಯಕ್ರಮದ ಅಚ್ಚುಕಟ್ಟಿಗೆ ಮುಖ್ಯ ಕಾರಣವೆನಿಸಿತು.
ವಿದ್ವಾಂಸರ ವಿಷಯಗಳು ಸಹ ವಿಭಿನ್ನತೆಯಿಂದ ಕೂಡಿದ್ದು ತಾಯಿಯ ಸಂಪೂರ್ಣ ಚಿತ್ರಣವನ್ನು, ಅವಳ ತ್ಯಾಗ- ಅರ್ಪಣಾ ಗುಣವನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸುವಂತಾಯಿತು.
ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಅಜೇಯ ಸಂಸ್ಕೃತಿ ಬಳಗಕ್ಕೆ, ಯಶಸ್ಸಿಗೆ ಶ್ರಮಿಸಿದ ಸರ್ವರಿಗೆ ಆಗಮಿಸಿದ್ದ ಪ್ರೇಕ್ಷಕರು ಧನ್ಯವಾದಗಳನ್ನು ತಿಳಿಸಿದರು.
Doddapete Police ಅಪರಿಚಿತ ಮಹಿಳೆ ಸಾವು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ
Doddapete Police ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸುಸ್ತಾಗಿ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಿಳೆ ಸಾವಪ್ಪನ್ನಪ್ಪಿರುದಾಗಿ ತಿಳಿಸಿದ್ದಾರೆ.
Doddapete Police ಅಪರಿಚಿತ ಮಹಿಳೆಯು ಸುಮಾರು 50 ರಿಂದ 55 ವರ್ಷದವರಾಗಿದ್ದಾರೆ. ಸುಮಾರು 5 ಅಡಿ 5 ಇಂಚು ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ. ಸುಮಾರು 8 ಇಂಚಿನ ಉದ್ದದ ಕಪ್ಪು ಬಿಳಿಯ ಬಣ್ಣದ ತಲೆ ಕೂದಲು, ಹಣೆಯ ಮೇಲ್ಬಾಗದ ಮಧ್ಯದಲ್ಲಿ ಜೋಳದ ಕಾಳು ಗಾತ್ರದ ಕಪ್ಪು ನರಗುಳ್ಳೆ, ಮೈಮೇಲೆ ಕೆಂಪು ಬಣ್ಣದ ರವಿಕೆ, ಹಸಿರು ಬಣ್ಣದ ಸೀರೆ ಹಾಗು ಗುಲಾಬಿ ಬಣ್ಣದ ಲಂಗ ಇದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182261414/9916882544 ಗೆ ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
Karnataka Lokayukta ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಸಾರ್ವಜನಿಕ ಅಹವಾಲು ಸ್ವೀಕಾರ
Karnataka Lokayukta ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಕರ್ನಾಟಕ ಲೋಕಾಯುಕ್ತ ವತಿಯಿಂದ ಜ.23, 24, 28 ಹಾಗೂ 29 ರಂದು ಬೆಳಿಗ್ಗೆ 11 ಗಂಟೆಯಿಂದ 12.30 ವರವರೆಗೆ ಸಾರ್ವಜನಿಕರ ಕುಂದು ಕೊರತೆಯ ಅರ್ಜಿ ಸ್ವೀಕಾರ ಸಭೆ ನಡೆಸಲಾಗುವುದು.
ಈ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ನೀಡಲು ಅವಕಾಶವಿದ್ದು, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ಲಿಖಿತ ಅಹವಾಲುವನ್ನು ನೀಡಬಹುದಾಗಿದೆ.
Karnataka Lokayukta ಜ.23 ರ ಬೆಳಿಗ್ಗೆ 11ಗಂಟೆಯಿಂದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಸೊರಬ, ತಾಲ್ಲೂಕು ಕಛೇರಿ ಸಭಾಂಗಣ ತೀರ್ಥಹಳ್ಳಿ, ಜ.24 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಶಿಕಾರಿಪುರ, ತಾಲ್ಲೂಕು ಪಂಚಾಯಿತಿ ಸಭಾಂಗಣ ಸಾಗರ, ಜ.28 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಹೊಸನಗರ, ಭದ್ರಾವತಿ ನಗರಸಭೆ ಸಭಾಂಗಣ ಭದ್ರಾವತಿ, ಜ.29 ರ ಬೆಳಿಗ್ಗೆ 11 ಗಂಟೆಯಿಂದ 12.30 ರವರೆಗೆ ತಾಲ್ಲೂಕು ಪಂಚಾಯತ್ ಸಭಾಂಗಣ ಶಿವಮೊಗ್ಗ ಈ ಸ್ಥಳಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
S.N. Channabasappa ಗಾಂಧಿ ಬಜಾರ್ ನಲ್ಲಿ ಹಲ್ಲೆಗೊಳಗಾಗಿದ್ದ ವರ್ತಕ ಹೀರಾಲಾಲ್ ಅವರ ಯೋಗಕ್ಷೇಮ ವಿಚಾರಿಸಿದ ಶಾಸಕ ಚೆನ್ನಿ
S.N. Channabasappa ಶಿವಮೊಗ್ಗ ನಗರದ ಗಾಂಧಿಬಜಾರಿನಲ್ಲಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹೆಲ್ಲೆಗೆ ಒಳಗಾಗಿದ್ದ ಹಿರಲಾಲ್ ಸೆನ್ ಅವರನ್ನು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
S.N. Channabasappa ಘಟನೆಗೆ ಸಂಬಂಧಿಸಿದಂತೆ ಕುರಿತಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿಯ ಮುಖಾಂತರ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಶಾಶ್ವತ ಪರಿಹಾರ ನೀಡುವಂತೆ ಸೂಚಿಸಲಾಯಿತು.
Friends Centre ಸಾಹಿತ್ಯ ಕೃತಿಗಳ ಬಗ್ಗೆ ವಿಶ್ಲೇಷಣೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಣೆ- ಎಚ್.ಎಸ್.ಸುಂದರೇಶ್
Friends Centre ಸಮಾಜದಲ್ಲಿನ ವಾಸ್ತವತೆಯನ್ನು ಕವಿತೆ, ಹನಿಗವನ, ಕಥೆಗಳ ಮೂಲಕ ವಿಶ್ಲೇಷಿಸಿ ಪರಸ್ಪರ ಚರ್ಚಿಸುವಂತಹ ಕಾರ್ಯಕ್ಕೆ ಸಾಹಿತ್ಯ ಹುಣ್ಣಿಮೆ ಪ್ರೇರಣೆಯಾಗಿದೆ ಎಂದು ಸೂಡಾ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್ ಹೇಳಿದರು.
ನಗರದ ಗೋಪಾಳ ಫ್ರೇಂಡ್ಸ್ ಸೆಂಟರ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಫ್ರೇಂಡ್ಸ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ 233 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಾಹಿತ್ಯ ಹುಣ್ಣಿಮೆ ಮೂಲಕ ಸಾಹಿತ್ಯವನ್ನು ಪಸರಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುತ್ತಿರುವ ವಿಚಾರಗಳು ಸರ್ಕಾರದ ಆಡಳಿತವನ್ನು ಸದಾ ಎಚ್ಚರಿಸುತ್ತಿದ್ದು, ಸಮಾಜಕ್ಕೆ ಪೂರಕ ಶಕ್ತಿಯಾಗಿ ನಿಲ್ಲಲಿದೆ. ಮಲೆನಾಡಿನ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಮ್ಮ ದೇಶಗಳಲ್ಲಿ ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಆಧುನಿಕತೆಯ ಧಾವಂತದಲ್ಲಿರುವ ಸಮಾಜವನ್ನು ಸಾಹಿತ್ಯ ಹೊರತರಲಿ. ಸಾಹಿತ್ಯದ ಮೂಲಕ ಜೀವಪರವಾದ ಚರ್ಚೆಗಳನ್ನು ತಂತ್ರಜ್ಞಾನದಷ್ಟೆ ಪ್ರಭಾವಯುತವಾಗಿ ಮಾಡಬೇಕಾದ ಸಂದರ್ಭ ಇದಾಗಿದೆ. ಮೊಬೈಲ್‌ಗಳ ಅತಿಯಾದ ಬಳಕೆ, ಹೊಸತಲೆಮಾರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಇದರಿಂದ ಹೊರತರಲು, ಮಕ್ಕಳ ಸಾಹಿತ್ಯ ಸಮ್ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇಂದಿನ ಮಕ್ಕಳಲ್ಲಿ ಇಂಗ್ಲೀಷ್ ಮತ್ತು ಕನ್ನಡ ಭಾಷೆ ಎರಡರಲ್ಲಿಯೂ ಪರಿಪೂರ್ಣವಾಗಿ ಕಲಿಯಲು ಸಾಧ್ಯವಾಗಿಲ್ಲ. ಧಾವಂತದ ಜೀವನದಲ್ಲಿ ಪೋಷಕರು ಪ್ರತಿಷ್ಟಿತ ಶಾಲೆಗಳ ಮೇಲೆ ತೋರುವಷ್ಟು ಆಸಕ್ತಿಯನ್ನು ತಮ್ಮ ಮಕ್ಕಳಿಗೆ ಸ್ವತಃ ಭಾಷೆಯನ್ನು ಕಲಿಸಲು ತೋರುತ್ತಿಲ್ಲ.
Friends Centre ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಪರಿಪೂರ್ಣವಾಗಿ ಕಲಿಯದೆ ಇದ್ದಲ್ಲಿ, ಇತರೆ ಭಾಷೆಗಳ ಕಲಿಕೆಯಾದರು ಹೇಗೆ ಸಾಧ್ಯ. ಕಲಿಕೆಯ ಗುಣಮಟ್ಟ ಸುಧಾರಣೆ ಮಾಡುವುದು ಹೇಗೆ ಎಂಬುದರ ಚರ್ಚೆಯ ಜೊತೆಗೆ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸುವತ್ತ ಯೋಚಿಸಬೇಕಿದೆ. ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಉದ್ಯಮಗಳಾಗಿವೆ. ಉದ್ಯಮವಾದ ಚುನಾವಣೆಗಳಿಂದ ರೂಪಗೊಂಡ ಸರ್ಕಾರದಿಂದ ಜನ ಸಾಮಾನ್ಯರು ಏನು ತಾನೆ ನಿರೀಕ್ಷಿಸಲು ಸಾಧ್ಯ. ಜನಪದ ಕಲಾವಿದರು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಅವರಿಗೆ ಬೆಂಬಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕಲಾವಿದರನ್ನು ಎಂದಿಗೂ ಅವಮಾನಿಸದಿರಿ ಎಂದು ಹೇಳಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಬಿ. ಜಿ. ಧನರಾಜ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಸೆಂಟರ್ ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನ ಬದರಿನಾಥ, ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ವೇದಿಕೆ ಪದಾಧಿಕಾರಿಗಳಾದ ಮಧುಸೂದನ್ ಐತಾಳ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದರಾದ ಭದ್ರಾವತಿ ಲಕ್ಷ್ಮಣ್ ರಾವ್ ಮತ್ತು ತಂಡದವರು ಚೌಡಿಕೆ ಪದ ಹಾಡಿದರು. ಎನ್.ಇ.ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಕಥೆ ಹೇಳಿದರು. ಕವಿಗಳಾದ ಊರ್ಮಿಳಾ ರಾವ್, ಲತಾ ನಾಗರಾಜ್ ಕವನ ವಾಚಿಸಿ, ಡಿ. ಗಣೇಶ್, ಕೆ. ಎಸ್. ಮಂಜಪ್ಪ ಹನಿಗವನ ವಾಚಿಸಿದರು. ಫ್ರೆಂಡ್ಸ್ ಸೆಂಟರ್ ಪದಾಧಿಕಾರಿ ರವೀಂದ್ರ ಐತಾಳ್ ಸ್ವಾಗತಿಸಿದರು.
Mangalore Institute of Oncology ಪತ್ರಿಕ ವಿತರಕರ ಸೇವೆ ಅತ್ಯಂತ ಸ್ಮರಣೀಯ : ವಿಜಯೇಂದ್ರ ರಾವ್
Mangalore Institute of Oncology ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಕುಟುಂಬದ ಸದಸ್ಯರಿಗೆ ಕವಲೇದುರ್ಗ ಚಾರಣ, ಕುಪ್ಪಳ್ಳಿಯ ಕವಿಶೈಲ ಮತ್ತು ಶೃಂಗೇರಿಗೆ ಪ್ರವಾಸ ಮತ್ತು ಸಾಮಾನ್ಯ ಆರೋಗ್ಯ ಮತ್ತು ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥವಾಗಿ ಪತ್ರಿಕಾ ವಿತರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್, ಮಾಲತೇಶ್ ಇವರಿಗೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕಾರಂಗ ಇಂದು ನಮ್ಮ ದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಂದು ಉದ್ಯಮವಾಗಿದೆ ಇದರಲ್ಲಿ ಪತ್ರಿಕಾ ವಿತರಕರ ಸೇವೇಯೂ ಕೂಡ ಅತ್ಯಂತ ಸ್ಮರಣೀಯ ಎಂದು ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಪ್ರಾಸ್ಥಾವಿಕವಾಗಿ ಮಾತನಾಡುತ್ತ ತಿಳಿಸಿದರು. ಅವರು ಕ್ಯಾನ್ಸರ್ ಬಗ್ಗೆ ಭಯ ಬೇಡ, ಅದೊಂದು ಗುಣ ಪಡಿಸಬಹುದಾದ ಕಾಯಿಲೆ, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಜೀವನ ನಡೆಸಬಹುದು ಎಂದು ತಿಳಿಸಿದರು. ತೀರ್ಥಹಳ್ಳಿಯಲ್ಲಿ ಇರುವ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಅಧಿಕಾರಿ ಜಗದೀಶ್‌ರವರಿಗೆ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಗೌರವಿಸಲಾಯಿತು.
Mangalore Institute of Oncology ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಗೌರವಾಧ್ಯಕ್ಷರಾದ ಷಿಕಾರಿಪುರ ಹುಲಿಗಿ ಕೃಷ್ಣ ರವರು ಮಾತನಾಡುತ್ತ ಎಮ್.ಐ.ಓ ಆಸ್ಪತ್ರೆಯವರು ಕ್ಯಾನ್ಸರ್ ಮುಕ್ತ ಸಮಾಜಕ್ಕೆ ತನ್ನದೇ ಆದ ತಂಡದೊಂದಿಗೆ ಶಿವಮೊಗ್ಗ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಕ್ಯಾನ್ಸರ್ ಜಾಗೃತಿ ಅರಿವು ಮೂಡಿಸುಸತ್ತಿರುವುದು ಉತ್ತಮ ಕಾರ್ಯವೆಂದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರರಾದ ದೇವರಾಜ್ ಶೆಟ್ರು, ದುರ್ಘೋಜಿ, ಪ್ರಾಣೇಶ್, ಶಿಕಾರಿಪುರ ಶಿವಯ್ಯ, ನಾವಿಕ ಡಿಟಿಪಿ ಆಪರೇಟರ್ ಆದ ರಾಜೇಶ್ವರಿ ಮಲೆನಾಡು ಎಕ್ಸ್ ಪ್ರೆಸ್ ಡಿಟಿಪಿ ಆಪರೇಟರ್ ಆದ ಗೀತಾ ಶಿವಮೊಗ್ಗ ಟೈಮ್ಸ್ ಡಿಟಿಪಿ ಆಪರೇಟರ್ ಆದ ಶೋಭಾ, ಬಾವಿಕ ಇನ್ನು ಮುಂತಾದವರು ಭಾಗವಹಿಸಿದ್ದರು.
Prerna Education Trust ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸನ್ಮಾನ
Prerna Education Trust ಶಿವಮೊಗ್ಗ ನಗರದ ಪ್ರೇರಣಾ ಎಜುಕೇಶನ್ ಟ್ರಸ್ಟ್ನಲ್ಲಿ ಆಯೋಜಿಸಿದ್ದ ಅನ್ವೇಷಣಾ ಮಲ್ನಾಡ್ ಸ್ಟಾರ್ಟ್ ಅಪ್ 2025 ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸನ್ಮಾನಿಸಿದರು.
Prerna Education Trust ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ಎ.ಎಂ.ಸುರೇಶ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಅಂಗಡಿ, ಲಕ್ಷ್ಮೀದೇವಿ ಗೋಪಿನಾಥ್, ವಿ.ಕೆ.ಜೈನ್, ಕೆಮಿಸ್ಟ್ ಮತ್ತು ಡ್ರಗ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಂ.ಶಂಕರ್ ಉಪಸ್ಥಿತರಿದ್ದರು.
