Youth Empowerment and Sports ಜನವರಿ. 21 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪ. ಜಾ. ಯುವಜನರ ಸ್ವಾವಲಂಬನೆಗೆ ಉತ್ತೇಜಿಸುವ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಜ.27 ರಿಂದ ಫೆ. 10ರವರೆಗೆ 15 ದಿನಗಳ ಜಿಮ್ ತರಬೇತಿ ಶಿಬಿರಕ್ಕಾಗಿ ದ್ವಿತೀಯ ಪಿಯುಸಿ (ಪಾಸ್/ಫೇಲ್) ವಿದ್ಯಾರ್ಹತೆಯುಳ್ಳ 18 ರಿಂದ 40 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Youth Empowerment and Sports ಯುವನಿಕ ಸಭಾಂಗಣದಲ್ಲಿ ನಡೆಯುವ ಫೆ.11 ರಿಂದ 18ರವರೆಗೆ 8 ದಿನಗಳ ನಿರುಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಹತೆಯುಳ್ಳ 18 ರಿಂದ 40 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ. 24ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ತರಬೇತಿಯಲ್ಲಿ ಹಾಜರಾಗುವ ಅಭ್ಯರ್ಥಿಗಳಿಗೆ ಲಘು ಉಪಹಾರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಶಿಭಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
Youth Empowerment and Sports ಪರಿಶಿಷ್ಟ ಜಾತಿಯ ಯುವಜನರಿಗೆ 15 ದಿನಗಳ ಜಿಮ್ ತರಬೇತಿ ಶಿಬಿರ
Sri Adichunchanagiri Shikshana Trust ಜನವರಿ 23. ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ
Sri Adichunchanagiri Shikshana Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 23 ರಂದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್.ವಿ. ಗುರುರಾಜ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನದ ವಜ್ರ ಮಹೋತ್ಸವ ಮತ್ತು ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ, ರಾಷ್ಟ್ರೀಯ ಯುವ ದಿನದ ಅಂಗವಾಗಿ ಶಿವಮೊಗ್ಗ ಶರಾವತಿ ನಗರದ ಶ್ರೀಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ರಾಜ್ಯಾಡಳಿತ ಮತ್ತು ಸಂವಿಧಾನ, ಇತಿಹಾಸ ಮತ್ತು ಭೂಗೋಳ ಶಾಸ್ತ್ರ, ವಿಜ್ಞಾನ- ತಂತ್ರಜ್ಞಾನ, ಕ್ರೀಡೆ ಮನರಂಜನೆ ಹಾಗೂ ಪ್ರಚಲಿತ ವಿದ್ಯಮಾನಗಳ ವಿಷಯ ಕುರಿತಂತೆ ಇರಲಿದೆ ಎಂದು ಅವರು ಹೇಳಿದರು.
Sri Adichunchanagiri Shikshana Trust ಪ್ರವೇಶ ಪ್ರಕ್ರಿಯೆ ಹೇಗೆ ?
200 ವಿದ್ಯಾರ್ಥಿಗಳಿರುವ ಶಾಲೆಯಿಂದ ಎಂಟನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿ ಎರಡು ವಿದ್ಯಾರ್ಥಿಗಳ ಎರಡು ತಂಡ, 10ನೇ ತರಗತಿ ಎರಡು ವಿದ್ಯಾರ್ಥಿಗಳ ಮೂರು ತಂಡದಂತೆ ಭಾಗವಹಿಸಲು ಅವಕಾಶವಿರುತ್ತದೆ. 300 ವಿದ್ಯಾರ್ಥಿಗಳಿರುವ ಶಾಲೆಯಿಂದ 8ನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿ ಎರಡು ವಿದ್ಯಾರ್ಥಿಗಳ ಎರಡು ತಂಡ, 10ನೇ ತರಗತಿ ಎರಡು ವಿದ್ಯಾರ್ಥಿಗಳ ನಾಲ್ಕು ತಂಡದಂತೆ ಭಾಗವಹಿಸಬಹುದು. 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಶಾಲೆಯಿಂದ ,8ನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿಯ ವಿದ್ಯಾರ್ಥಿಗಳ ಎರಡು ತಂಡ, ಹತ್ತನೇ ತರಗತಿಯ ಎರಡು ವಿದ್ಯಾರ್ಥಿಗಳ ಐದು ತಂಡಗಳಂತೆ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆ ಹೇಗಿರುತ್ತವೆ ?
- ಪೂರ್ವಭಾವಿ ಸುತ್ತು : ಲಿಖಿತ (ಧ್ವನಿ ಮತ್ತು ದೃಶ್ಯಾಧಾರಿತ ಪ್ರಶ್ನೆಗಳು) ಉಪಾಂತ್ಯ ಸುತ್ತು: ಲಿಖಿತ (ಧ್ವನಿ ಮತ್ತು ದೃಶ್ಯಾಧಾರಿತ ಪ್ರಶ್ನೆಗಳು) ಅಂತಿಮ ಸುತ್ತು:ಮೌಖಿಕ ಮತ್ತು ದೃಶ್ಯ (ದೃಶ್ಯಾಧಾರಿತ ಪ್ರಶ್ನೆಗಳು)
ಬಾಗವಹಿಸುವ ಸ್ಪರ್ಧಿಗಳಿಗೆ ಯಾವುದೇ ನೊಂದಣಿ ಶುಲ್ಕ ಇರುವುದಿಲ್ಲ, ಕ್ಯುಆರ್ ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳಲು ಅವಕಾಶ ವಿರುತ್ತದೆ. ಸ್ಪರ್ಧೆ ನಡೆಯುವ ದಿನಾಂಕದಂದು ಬೆಳಿಗ್ಗೆ 9ರಿಂದ 10ರ ವರಗೆ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು.
ನಗದು ಬಹುಮಾನಗಳ ವಿವರ:
ಪ್ರಥಮ ಬಹುಮಾನ 30,000 ಸಾವಿರ ಹಾಗು ಟ್ರೋಫಿ., ದ್ವಿತೀಯ ಬಹುಮಾನ 20,000 ಸಾವಿರ ಹಾಗು ಟ್ರೋಫಿ., ತೃತೀಯ ಬಹುಮಾನ 10,000 ಸಾವಿರ ಹಾಗೂ ಟ್ರೋಫಿ, * ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದ ತಂಡಗಳಿಗೆ 5,000 ನಗದು ಬಹುಮಾನ. ಉಪಾಂತ್ಯ ಸುತ್ತಿಗೆ ಆಯ್ಕೆಯಾದ ಮೊದಲ 125 ತಂಡಗಳ ಸ್ಪರ್ಧಿಗಳಿಗೆ ಬೆಳ್ಳಿ ಪದಕಗಳನ್ನು ಪ್ರಶಸ್ತಿ ಪತ್ರಗಳೊಂದಿಗೆ ನೀಡಲಾಗುವುದು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. * ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಯ ಗುರುತಿನ ಚೀಟಿಯನ್ನು ತರಬೇಕು ಎಂದು ಎಸ್. ವಿ.ಗುರುರಾಜ್ ಮಾಹಿತಿ ನೀಡಿದರು. - ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ಸಂಚಾಲಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಉಪನ್ಯಾಸಕರನ್ನು ಸಂಪರ್ಕಿಸಬಹುದು. ನಟರಾಜ್. ಯು. – 7483710963, ವಾಣಿ. ಆರ್. – 9986679015, ಡಾ. ಕುಪ್ಪೇರಾವ್ ಕುಲಕರ್ಣಿ – 6362819745ಗೆ ಸಂಪರ್ಕಿಸಬಹುದು.
ಸ್ವಾಮೀಜಿಗಳಿಂದ ಚಾಲನೆ:
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತರಿರುವರು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಯವರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಉಪ ನಿರ್ದೇಶಕರಾದ ಮಂಜುನಾಥ್ ಎಸ್. ಆರ್., ಪದವಿಪೂರ್ವ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಪ್ಪ ಎಸ್. ಗುಂಡಪಲ್ಲಿ ಮತ್ತಿತರರು ಭಾಗವಹಿಸುವರು.
ಅದೇ ದಿನ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸುವರು., ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಸಾಯಿನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ, ಸಿರ್ಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಭೀಮಣ್ಣ ಟಿ ನಾಯ್ಕ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ಎಸ್.ಆರ್., ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿಗಳಾದ ಎ. ಟಿ. ಶಿವರಾಂ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಗುರುರಾಜ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತಿ:…. ನಿರ್ದೇಶಕರಾದ ಕೊಳಿಗೆ ವಾಸಪ್ಪ ಗೌಡ, ಭದ್ರಾವತಿ ಎಸ್.ಎ.ವಿ.ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಗದೀಶ್, ಎಸ್.ಎ.ವಿ.ಕಾಲೇಜಿನ ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ, ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್., ಬಿಜಿಎಸ್ ಗುರುಕುಲ ಕಾಲೇಜಿನ ಪ್ರಾಂಶುಪಾಲರಾದ ಕೇಶವಮೂರ್ತಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
JCI SHIMOGA MALNAD ಜೆಸಿಐನಂತಹ ಸಂಸ್ಥೆಗಳು ಯುವಜನರಲ್ಲಿ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ತರಬೇತಿ ನೀಡುತ್ತಿವೆ- ಶ್ರೀಮರುಳಸಿದ್ಧಶ್ರೀ
JCI SHIMOGA MALNAD ದೇಶ ಸುತ್ತುವುದರಿಂದ ಹಾಗೂ ಕೋಶ ಓದುವುದರಿಂದ ನಮ್ಮಲ್ಲಿ ಜ್ಞಾನ, ಸಂವಹನ ಕಲೆ ವೃದ್ಧಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಬಸವಕೇಂದ್ರದ ಶ್ರೀ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೆಸಿಐನಂತಹ ಸಂಸ್ಥೆಗಳು ಯುವಜನರಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ತರಬೇತಿ ನೀಡುತ್ತಿವೆ. ಜೀವನದ ಮೌಲ್ಯಗಳು ಹಾಗೂ ಸಮಾಜಮುಖಿ ಕಾರ್ಯಗಳ ಜತೆ ನಾಯಕತ್ವ ಗುಣಗಳನ್ನು ಬೆಳೆಸುತ್ತಿವೆ.
ಜೆಸಿಐ ಸಂಸ್ಥೆಯಿಂದ ಯುವಜನರಿಗೆ ಉತ್ತಮ ಸಹಕಾರ ಸಿಗುತ್ತಿದೆ. ಜಿ.ಗಣೇಶ್ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದು, ಪ್ರಸ್ತಕ ಸಾಲಿನಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಅವರ ತಂಡ ಮಾಡುವಂತಾಗಲಿ ಎಂದು ಆಶಿಸಿದರು.
ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಜೆಸಿಐ ಸಂಸ್ಥೆಯು ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದು, ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ತರಬೇತಿಗಳು, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಮುಖ್ಯವಾಗಿ ಯುವಜನರಲ್ಲಿ ವ್ಯಕ್ತಿತ್ವ ಗುಣಗಳನ್ನು ಬೆಳೆಸಲು ತರಬೇತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತಿದೆ ಎಂದರು.
ವಲಯ ಉಪಾಧ್ಯಕ್ಷ ಮಧುಸೂಧನ್ ನವಾಡ ಮಾತನಾಡಿ, ಜೆಸಿಐ ಸಂಸ್ಥೆಯು ಯುವಜನರಿಗೆ ಅನೇಕ ತರಬೇತಿಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಿ ವಿದ್ಯಾರ್ಥಿ ಜೀವನದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಲು ಬಹಳ ಸಹಕಾರಿಯಾಗಿರುತ್ತದೆ ಎಂದು ಹೇಳಿದರು.
JCI SHIMOGA MALNAD ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿ.ಗಣೇಶ್ ಮಾತನಾಡಿ, ಈ ವರ್ಷ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಲಾ ಕಾಲೇಜುಗಳಲ್ಲಿ ಯುವಜನರಿಗೆ ವ್ಯಕ್ತಿತ್ವ ಗುಣಗಳನ್ನು ವೃದ್ಧಿಸಿ ನಾಯಕತ್ವ ಗುಣಗಳನ್ನು ಬೆಳೆಸಲು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಸ್ವಚ್ಛತಾ ಕಾರ್ಯಕ್ರಮಗಳು, ಶಾಲೆಗಳ ಅಭಿವೃದ್ಧಿಪಡಿಸುವುದು ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ತಂಡದವರ ಸಹಕಾರ ಮುಖ್ಯ ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಮಂಜುನಾಥ್ ರಾವ್ ಕದಂ, ಸುಷ್ಮಾ ಹಿರೇಮಠ, ಬಿಂದು ವಿಜಯಕುಮಾರ್, ಶೇಷಗಿರಿ ಡಿಕೆ , ರಾಜಪ್ಪ, ಸುರೇಂದ್ರ ಕೋಟ್ಯಾನ್, ಸತೀಶ್ ಚಂದ್ರ, ಕಿಶೋರ್ ಕುಮಾರ್, ಹರೀಶ್, ಈಶ್ವರ್, ಸಿಂಚನ, ಸ್ಪೂರ್ತಿ, ಸ್ವಪ್ನ ಬದ್ರಿನಾಥ್, ಇನ್ನಿತರರು ಉಪಸ್ಥಿತರಿದ್ದರು.
Shimoga News ಪರಿಶಿಷ್ಟ ಜಾತಿ ಉಪಯೋಜನೆ ಯಲ್ಲಿ ಯುವಜನರಿಗೆಕೌಶಲ್ಯ ತರಬೇತಿ
Shimoga News ಜನವರಿ. 21 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪ. ಜಾ. ಯುವಜನರ ಸ್ವಾವಲಂಬನೆಗೆ ಉತ್ತೇಜಿಸುವ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಜ.27 ರಿಂದ ಫೆ. 10ರವರೆಗೆ 15 ದಿನಗಳ ಜಿಮ್ ತರಬೇತಿ ಶಿಬಿರಕ್ಕಾಗಿ ದ್ವಿತೀಯ ಪಿಯುಸಿ (ಪಾಸ್/ಫೇಲ್) ವಿದ್ಯಾರ್ಹತೆಯುಳ್ಳ 18 ರಿಂದ 40 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Shimoga News ಯುವನಿಕ ಸಭಾಂಗಣದಲ್ಲಿ ನಡೆಯುವ ಫೆ.11 ರಿಂದ 18ರವರೆಗೆ 8 ದಿನಗಳ ನಿರುಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಹತೆಯುಳ್ಳ 18 ರಿಂದ 40 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ. 24ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ತರಬೇತಿಯಲ್ಲಿ ಹಾಜರಾಗುವ ಅಭ್ಯರ್ಥಿಗಳಿಗೆ ಲಘು ಉಪಹಾರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಶಿಭಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
Flower Show In Shivamogga ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಲೆನಾಡ ಕರಕುಶಲ & ಫಲಪುಷ್ಪ ಪ್ರದರ್ಶನ
Flower Show In Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದೊಡ್ಡ ಮಟ್ಟದ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನವನ್ನು ಜ.24 ರಿಂದ ಮೂರು ದಿನಗಳ ಕಾಲ ನಗರದ ಅಲ್ಲಮಫ್ರಭು ಉದ್ಯಾನದಲ್ಲಿ ಏರ್ಪಡಿಸಲಾಗಿದೆ ಎಂದು ಜಿ.ಪಂ ಸಿಇಓ ಹೇಮಂತ್ ಎನ್ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಫಲಪುಷ್ಪ ಪ್ರದರ್ಶನ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
75 ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ಜ.24 ರಿಂದ 26 ರ ಬೆಳಿಗ್ಗೆ 9 ಗಂಟೆಯಿAದ ರಿಂದ ರಾತ್ರಿ 9 ಗಂಟೆವರಗೆ ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಪುಷ್ಪಸಿರಿ ಹೆಸರಿನಲ್ಲಿ 62ನೇ ಫಲ-ಪುಷ್ಪ ಪ್ರದರ್ಶನ, ಮಲೆನಾಡು ಕರಕುಶಲದ ಸರಸ್ ಮೇಳ ಉತ್ಸವ ಹಾಗೂ ಮನರೇಗಾ ಯೋಜನೆಯ ಮಾಹಿತಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಜಿಲ್ಲಾ ಪಂಚಾಯತಿಯು “ಕ್ರಾಫ್ಟ್ ಆಫ್ ಮಲೆನಾಡು” ಎಂಬ ಬ್ರಾಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ಬೃಹತ್ ಅವಕಾಶವನ್ನು ನೀಡಲಾಗಿದೆ. ತಮ್ಮ ಆಸೆ, ಕನಸುಗಳನ್ನು ದೊಡ್ಡ ಮಟ್ಟದಲ್ಲಿ ಕಾಣಲು ಇಲ್ಲಿ ವೇದಿಕೆ ಸಜ್ಜಾಗಿದ್ದು, ಈಗ ನಗರದಲ್ಲಿ ಸ್ವಸಹಾಯ ಸದಸ್ಯರಿಗೆ ತಮ್ಮ ತಮ್ಮ ಪ್ರತಿಭೆಗಳನ್ನು ಮತ್ತು ಕುಶಲಕರ್ಮಿ ಶ್ರೇಷ್ಠತೆಯನ್ನು ಮಾರುಕಟ್ಟೆ ಒದಗಿಸಲು ಸದಾವಕಾಶ ಒದಗಿ ಬಂದಿದೆ.
Flower Show In Shivamogga “ಕ್ರಾಫ್ಟ್ ಆಫ್ ಮಲೆನಾಡು” ಮಹಿಳೆಯರ ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಸಜ್ಜಾಗಿದ್ದು, ಈ ಸುವರ್ಣಾವಕಾಶವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ವರ್ತಮಾನದಲ್ಲಿ ಇಡೀ ಜಗತ್ತನ್ನು ಬೆರಳ ತುದಿಯಲ್ಲಿ ಕಾಣುವಂತಾಗಿದೆ. ಉಡುಗೆ, ತೊಡುಗೆ, ಆಹಾರವೆಲ್ಲವೂ ಅಂತರ್ಜಾಲದ ಅಧೀನದಲ್ಲಿದೆ. ಆದರೆ ಹಳ್ಳಿಗಳು ಹಾಗೂ ಹಳ್ಳಿಗಳಲ್ಲಿ ತಯಾರಾದ ವಸ್ತುಗಳು ಮಾತ್ರ ಇನ್ನೂ ತನ್ನದೇ ಆದ ಬಲೆ ಎಣೆದುಕೊಂಡು ಬದುಕುತ್ತಿವೆ. ಅದನ್ನು ತೊಡೆದು ಹಾಕಲು ಈ “ಕ್ರಾಫ್ಟ್ ಆಫ್ ಮಲೆನಾಡು” ಮುಂದಾಗಿದ್ದು, ಆನ್ಮೆöÊನ್ ಮಾರುಕಟ್ಟೆಯ ಮೂಲಕ ಹಳ್ಳಿಗಳಲ್ಲಿ ತಯಾರಿಸಿರುವ ವಸ್ತುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬೆನ್ನೆಲುಬಾಗಿ ನಿಲ್ಲಲಿದೆ.
ಇನ್ನೂ ಜಿಲ್ಲಾ ಮಟ್ಟದಲ್ಲಿ ಮಲೆನಾಡ ಕರಕುಶಲ ಉತ್ಸವವನ್ನು ಆಯೋಜಿಸಿ ಮಹಿಳೆಯರು ತಯಾರಿಸಿದ ಮಲೆನಾಡಿನ ಹಸೆ ಚಿತ್ತಾರ. ಟೆರಾಕೋಟಾ ಶಿಲ್ಪಗಳ ಉತ್ಪನ್ನಗಳು, ಗುಡಿ ಕೈಗಾರಿಕೆ ಮತ್ತು ವೈರ್ಬ್ಯಾಗ್, ವಿವಿಧ ವಿನ್ಯಾಸ ಕಲೆ ಚಿತ್ತಾರ, ಗೃಹ ಅಲಂಕಾರ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಸುವರ್ಣಾವಕಾಶ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಈ ಮೇಳ, ಎರಡನೇ ಹಂತದಲ್ಲಿ ವೆಬ್‌ಸೈಟ್ ಸಿದ್ದಪಡಿಸಿ ರಾಷ್ಟಿçÃಯ, ಅಂತರಾಷ್ಟಿçÃಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಹಾಗೂ ಮೂರನೇ ಹಂತದಲ್ಲಿ ಇವರ ಉತ್ಪನ್ನಗಳ ಮಾರಾಟಕ್ಕೆ ಸ್ಟೋರ್ ತೆರೆಯುವ ಯೋಜನೆ ಇದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವ-ಸಹಾಯ ಸಂಘದ ಸದಸ್ಯರಿಗೆ ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಮತ್ತು ಸ್ವ-ಸಹಾಯ ಸಂಘದ ಕಾರ್ಯಚಟುವಟಿಕೆಗಳಿಗೆ ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಮಾಡಲಾಗುತ್ತದೆ ಹಾಗೂ ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆಯಡಿ ಗ್ರಾಮೀಣ ಭಾಗದ ರೈತರಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ ತೋಟ, ಕಾಳು ಮೆಣಸು, ಎಲೆ ಬಳ್ಳಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ, ಎನ್.ಆರ್.ಎಲ್.ಎಂ ಯೋಜನೆ ಮತ್ತು ತೋಟಗಾರಿಕೆ ಇಲಾಖೆಯಡಿ ನೀಡಲಾಗುವ ಸೌಲಭ್ಯಗಳು ಕುರಿತು ಅರಿವು ಮೂಡಿಸಲು ಮೇಳ ಸಿದ್ದವಾಗಿದೆ.
ಉಚಿತ ಪ್ರವೇಶ: ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಪ್ರದರ್ಶನದಲ್ಲಿ ಒಟ್ಟು 34 ವಿವಿಧ ಉತ್ಪನ್ನಗಳ ಹಾಗೂ ವಿವಿಧ ಇಲಾಖೆಗಳ ಮಳಿಗೆಗಳು ಇರಲಿವೆ. ಹೊರಗೆ 25 ಮಳಿಗೆಗಳನ್ನು ಸ್ಥಾಪಿಸಲಾಗುವುದು. ರೈತರ ವಿಶೇಷ ಬೆಳೆಗಳಿಗೆ ಪ್ರಶಸ್ತಿ ನೀಡಲಾಗುವುದು.
ಕವಿಶೈಲ-ರೇಣುಕಾ ದೇವಾಲಯ : ಶಿವಮೊಗ್ಗದ ಹೆಸರಾಂತ ವಿಶ್ವಮಾನವ, ರಾಷ್ಟçಕವಿ ಕುವೆಂಪು ಅವರ ಕುಪ್ಪಳಿಯ ಮನೆಯನ್ನು ಪುಷ್ಪಗಳ ಮೂಲಕ ತಯಾರಿ ಮಾಡಿದ್ದು, ಸುಮಾರು 28 ಅಡಿ ಎತ್ತರದ ಹೂವಿನ ಕಲಾಕೃತಿಯ ಕವಿಶೈಲವನ್ನು ನಿರ್ಮಾಣ ಮಾಡಲಾಗುವುದು ಹಾಗೂ ಚಂದ್ರಗುತ್ತಿಯ ರೇಣುಕಾ ದೇವಾಲಯವನ್ನು ಮರುಸೃಷ್ಟಿಸಲಾಗುತ್ತಿದ್ದು ಪ್ರದರ್ಶನದ ಆಕರ್ಷಣೆಯಾಗಲಿದೆ.
ಈ ಫಲಪುಷ್ಪ ಉತ್ಸವದಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರು ತಯಾರಿಸಿದ 100ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಆತ್ಮೀಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉತ್ಸವದಲ್ಲಿ ಭಾಗವಹಿಸಿ ಈ ಅದ್ಭುತ ಪ್ರದರ್ಶನವನ್ನು ಆನಂದಿಸಬೇಕೆAದು ಕೋರಿದರು.
ಇದೇ ವೇಳೆ “ಕ್ರಾಫ್ಟ್ ಆಫ್ ಮಲೆನಾಡು” ಬ್ರಾಂಡಿAಗ್ ಕುರಿತಾದ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಜಿ, ಜಿಲ್ಲಾ ಉದ್ಯಾನ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹಾಜರಿದ್ದರು.
Akhila Bharatiya Sahitya Parishad ಅಭಾಸಾಪ ರಾಜ್ಯ ಅಧಿವೇಶನ: ಕವಿಗೋಷ್ಠಿಗೆ ಕವಿತೆಗಳ ಆಹ್ವಾನ
Akhila Bharatiya Sahitya Parishad ‘ಅಭಾಸಾಪ’ವು ಇದೇ ಬರುವ ಮೇ ತಿಂಗಳಲ್ಲಿ ರಾಜ್ಯ ಅಧಿವೇಶನವನ್ನು ಆಯೋಜಿಸುತ್ತಿದೆ. ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಮೇಲೆ ನಡೆಯುವ ಈ ಅಧಿವೇಶನದಲ್ಲಿ ಕವಿಗೋಷ್ಠಿಗಾಗಿ ಕವಿತೆಗಳನ್ನು ಆಹ್ವಾನಿಸಿದೆ.
ಸಾಹಿತ್ಯವೂ ಸೇರಿದಂತೆ ಕಲೆ, ಶಿಕ್ಷಣ, ನಡೆ-ನುಡಿ, ಉಡುಗೆ-ತೊಡುಗೆ, ಪರಿಸರ, ಆಚರಣೆ, ವಾಣಿಜ್ಯ ಇತ್ಯಾದಿ ನಮ್ಮ ರಾಷ್ಟ್ರಜೀವನದ ವಿವಿಧ ರಂಗಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡಾಗ ನಷ್ಟಗೊಂಡ ಸ್ವತ್ವವನ್ನು ಮತ್ತೆ ಗಳಿಕೊಳ್ಳಬೇಕಿತ್ತಷ್ಟೆ. ಸ್ವತ್ವವನ್ನು ಕಳಕೊಂಡರೆ ಸ್ವಾತಂತ್ರ್ಯವನ್ನು ಕಳಕೊಂಡಂತೆ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದೆಂದರೆ ಸ್ವತ್ವವನ್ನು ಪಡಕೊಳ್ಳುವುದೆಂದೇ ಅರ್ಥ. ಎಲ್ಲಾ ರಂಗಗಳಲ್ಲೂ ಸ್ವತ್ವದ ಅಭಿವ್ಯಕ್ತಿ ಸಾಧ್ಯವಾದಾಗ ಗಳಿಸಿಕೊಂಡ ಸ್ವಾತಂತ್ರ್ಯ ಪೂರ್ಣವಾಯಿತೆಂದುಕೊಳ್ಳಬಹುದು.
ಎಲ್ಲಾ ರಂಗಗಳಲ್ಲಿ ನಾವು ಕಳೆದುಕೊಂಡ ನಮ್ಮತನವನ್ನು ಮತ್ತೆ ಪಡೆಯುವ ಸಾಧ್ಯತೆಗಳನ್ನು, ಅವು ಪಡೆಯಬೇಕಾದ ಅಭಿವ್ಯಕ್ತಿಯ ಬಗೆಯನ್ನು ಇತ್ಯಾದಿ ಹತ್ತುಹಲವು ಆಯಾಮಗಳಲ್ಲಿ ಕೆಲವನ್ನಾದರೂ ಸ್ಪರ್ಶಿಸಿ ಉತ್ಕೃಷ್ಟ ಕಾವ್ಯಗುಣವುಳ್ಳ ಸ್ವರಚಿತ ಕವಿತೆಗೆ ಈ ಕವಿಗೋಷ್ಠಿಯಲ್ಲಿ ವಾಚನಕ್ಕೆ ಅವಕಾಶವಿದೆ.
- ಕವಿತೆಗಳು ಹದಿನಾರರಿಂದ ಇಪ್ಪತ್ತೆರಡು ಸಾಲುಗಳ ಮಿತಿಯಲ್ಲಿರಲಿ.
- ಭಾರತೀಯ ಭಾಷೆಯಲ್ಲಿರಲಿ.
- ಕನ್ನಡದ ಹೊರತಾದ ಕವಿತೆಗಳ ಕನ್ನಡ ಭಾವಾನುವಾದವನ್ನು ಕಳುಹಿಸಬೇಕು.
- ಆಯ್ಕೆಯಾದ ಕವಿತೆಗಳನ್ನು ರಾಜ್ಯ ಅಧಿವೇಶನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.
- ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ.
- ಕವಿತೆಗಳನ್ನು ದಿನಾಂಕ ೨೦೨೫ ಜನವರಿ ೩೧ರ ಒಳಗೆ ಕಳುಹಿಸಬೇಕು.
- ಕವಿತೆಗಳನ್ನು ವಾಟ್ಸಾಪಿನಲ್ಲಿ ವರ್ಡ್ ಫೈಲಿನಲ್ಲಿಯೇ ಕಳಿಸಬೇಕು.
- ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ
9480007488 (ಸುಜಾತಾ ಹೆಗಡೆ) - ಕವಿತೆ ಜತೆಗೆ ಹೆಸರು, ವಯಸ್ಸು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಿ.
Karnataka Olympics ಕರ್ನಾಟಕ ಒಲಿಂಪಿಕ್ಸ್: ಶಿವಮೊಗ್ಗ ಜಿಲ್ಲೆಗೆ ಚಿನ್ನ ಮತ್ತು ಕಂಚಿನ ಪದಕ
Karnataka Olympics ಕರ್ನಾಟಕ ಸರ್ಕಾರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಹಾಗೂ ಕರ್ನಾಟಕ ಒಲಂಪಿಕ್ಸ್ ಸಹಯೋಗದಲ್ಲಿ ಜನವರಿ 18ರಿಂದ 20 ವರೆಗೆ ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ನಡೆದ
ಕರ್ನಾಟಕ ರಾಜ್ಯ ಸ್ಟೇಟ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಕ್ರೀಡಾಪಟುಗಳಾದ ಮೀನಾಕ್ಷಿ ಭವನದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿವೇದಿತಾ ಆರ್ 65-70 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದು, ಕರ್ನಾಟಕ ಒಲಂಪಿಕ್ಸ್ ನಲ್ಲಿ ಇದು ಶಿವಮೊಗ್ಗ Karnataka Olympics ಜಿಲ್ಲೆಗೆ ಮೊದಲ ಚಿನ್ನದ ಪದಕವಾಗಿದೆ ಮತ್ತು ಶಿವಮೊಗ್ಗದ ವಿದ್ಯಾಭಾರತಿ ಕಾಲೇಜಿನ ವಿದ್ಯಾರ್ಥಿ ಸಮೃದ್ಧ 60-65 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು ಈ ಇಬ್ಬರು ಕ್ರೀಡಾಪಟುಗಳು ಶಿವಮೊಗ್ಗದ ಬಾಕ್ಸಿಂಗ್ ಕೋಚ್ ಮೀನಾಕ್ಷಿ ರವರ ಬಳಿ ತರಬೇತಿ ಪಡೆಯುತ್ತಿದ್ದು, ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತೆ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿ ಅಭಿನಂದನೆ ತಿಳಿಸಿದ್ದಾರೆ
Mathura Paradise ಎಫ್ ಒಎಸ್ ಟಿ ಸಿ ಪ್ರಮಾಣಪತ್ರವಿದ್ದರೆ ಟ್ರೇಡ್ ಲೈಸನ್ಸ್ ಅಗತ್ಯವಿಲ್ಲ- ಶಾಸಕ ಡಿ.ಎಸ್.ಅರುಣ್
Mathura Paradise ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಮಾಣ ಪತ್ರ ಹಾಗೂ ಎಫ್‌ಒಎಸ್‌ಟಿಒಸಿ ಪ್ರಮಾಣ ಪತ್ರ ಪಡೆದ ನಂತರ ಟ್ರೇಡ್ ಲೈಸೆನ್ಸ್ ಪಡೆಯುವ ಅವಶ್ಯಕತೆ ಇಲ್ಲ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದ್ದಾರೆ.
ಅವರು ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಹೋಟೆಲ್ ನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಶಿವಮೊಗ್ಗ ಜಿಲ್ಲೆ ಇವರ ಸಹಯೋಗದಲ್ಲಿ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಆಹಾರ ಉದ್ಯಮಿದಾರರು ಮಾರಾಟ ಮಾಡುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1954 ರಲ್ಲಿ ಇದ್ದ ಅನೇಕ ಕಾನೂನುಗಳು ಈಗಲೂ ಇವೆ. ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಕಾನೂನುಗಳು ಹೆಚ್ಚಳ ಆಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಾನೂನುಗಳು ಯಾವತ್ತು ಹೇಗೆ ಬಳಕೆಯಾಗಬೇಕೆಂಬ ಅರಿವು ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ವ್ಯಾಪಾರಸ್ಥರೊಂದಿಗೆ ನಿರಂತರ ಆತ್ಮೀಯತೆಯಿಂದ ಇದ್ದು, ಮಾಡಬೇಕು ಎಂದರು.
ಅಧಿಕಾರಿಗಳು ವಿಲನ್ ಆಗಬಾರದು. ಕೆಳ ಹಂತದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರಬೇಕು. ಇವತ್ತಿನ ದಿನಮಾನದಲ್ಲಿ ಉದ್ಯಮಿಗಳು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಾ ಕಾನೂನುಗಳನ್ನು ಅನುಷ್ಠಾನ ಮಾಡಲು ಹೊರಟೆ ಒಂದು ಇಡ್ಲಿಗೆ ೨೫ ರೂ. ಕೊಡಬೇಕಾಗುತ್ತದೆ. ದೇಶ ಉಳಿಯಬೇಕಾದರೆ ಎಲ್ಲವನ್ನೂ ಸರ್ಕಾರ ಮಾಡಲಾಗುವುದಿಲ್ಲ. ನಮ್ಮ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾಯ್ದುಕೊಂಡು ಬದಲಾವಣೆ ಮಾಡಬೇಕು ಎಂದರು.
ಮಧ್ಯಮವರ್ಗಕ್ಕೆ ಮತ್ತು ಬಡವರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ನಿಯಮ ಸರಳೀಕರಣ ಮಾಡಬೇಕು. ಸರ್ಕಾರಗಳಿಗೆ ಕಿವಿ ಕಣ್ಣು ಇರಲ್ಲ. ಮಾರ್ಚ್ 14ರ ಬಜೆಟ್ ಮಂಡನೆ ಮುನ್ನ ನಮ್ಮ ಹಕ್ಕನ್ನು ನಾವು ಕೇಳಬೇಕು. ಸರ್ಕಾರದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರ ಅವು ಉಳಿಯುವುದಿಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ನಿಯಮಾವಳಿಗಳನ್ನು ರೂಪಿಸಬೇಕು ಎಂದರು.
Mathura Paradise ಆಹಾರ ಸಂಸ್ಕರಣಾ ಮತ್ತು ಪ್ರಮಾಣಪತ್ರ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಮಾತನಾಡಿ, ೨೦೧೧ರಲ್ಲೇ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರದ ಕಾನೂನು ಬಂದಿದೆ. ಉದ್ಯಮಿಗಳಿಗೆ ಇದರ ಅರಿವು ಇರಲಿಲ್ಲ. ೨೦೨೦ರಲ್ಲಿ ಇದನ್ನು ಕಡ್ಡಾಯಗೊಳಿಸಲಾಯಿತು. ಕೊರೋನಾದಿಂದಾಗಿ ಸ್ವಲ್ಪಮಟ್ಟಿಗೆ ಅನುಷ್ಠಾನ ತಡವಾಗಿದೆ. ಈ ಕಾಯ್ದೆ ಪ್ರಕಾರ ವಾರ್ಷಿಕ ೧೨ಲಕ್ಷ ರೂ.ಗಿಂತ ಒಳಗೆ ವ್ಯವಹಾರವಿದ್ದರೆ ನೋಂದಣಿ ಕಡ್ಡಾಯ. ಅದಕ್ಕಿಂತ ಹೆಚ್ಚಿನ ವ್ಯವಹಾರವಿದ್ದರೆ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು,2017ರ ಕಾಯ್ದೆಯಂತೆ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ ಎಂದರು.
ಆಹಾರ ಉದ್ಯಮ ನಡೆಸುವವರು ಕೂಡ ಒಂದು ರೀತಿಯಲ್ಲಿ ವೈದ್ಯರೇ ಆಗಿರುತ್ತಾರ. ನೀವು ಅಡುಗೆ ಮನೆಯಲ್ಲಿ ತಯಾರಿಸುವ ಖಾದ್ಯಗಳು ಗುಣಮಟ್ಟದಲ್ಲಿರಬೇಕು. ಮತ್ತು ಅದಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಿದ್ದು, ಎಲ್ಲರೂ ಇದರ ಸದುಪಯೋಗಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಉಪಾಧ್ಯಕ್ಷ ಜಿ. ವಿಜಯಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರ್ ನಾರಾಯಣಹೊಳ್ಳ, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ್, ಗುರುರಾಜ್, ಸದಾಶಿವಪ್ಪ. ಶಶಿಕುಮಾರ್, ತರಬೇತಿದಾರರಾದ ಸವಿತಾ, ಸಮುದಾಯ ಅಧಿಕಾರಿಗಳಾದ ಅನುಪಮಾ, ವಾಣಿಜ್ಯ ಕೈಗಾರಿಕಾ ಸಂಘದ ಕಾಯದರ್ಶಿ ಸುರೇಶ್, ಜಿಲ್ಲಾ ಸಂಯೋಜಕರಾದ ಬಿ.ಟಿ. ಹನುಮಂತಯ್ಯ, ಶುಭಂ ಹೋಟೆಲ್ ಮಾಲೀಕರಾದ ಉದಯ್ ಕಡಂಬ ಮೊದಲಾದವರಿದ್ದರು.
Madhu Bangarappa ಜಿಲ್ಲೆಯ ಶಾಲಾ ಕಟ್ಟಡ, ಮೂಲಭೂತ ಸೌಕರ್ಯಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ
Madhu Bangarappa ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ಅವರ ನೇತೃತ್ವದಲ್ಲಿ ನಿನ್ನೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರನ್ನು ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಆರ್. ಮೋಹನ್‌ಕುಮಾರ್ ಅವರು, ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ಅಭಿವೃದ್ಧಿಗೆ ತುರ್ತು ಅಗತ್ಯವಾಗಿರುವ ಶಾಲಾ ಕಟ್ಟಡಗಳ ದುರಸ್ತಿ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು ಹಾಗೂ ಪಠ್ಯ ವಸ್ತುಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನೌಕರರ ಸಂಘದ ಜಿಲ್ಲಾ ಘಟಕ ವಿಶೇಷ ಗಮನಹರಿಸಲಿದೆ ಎಂದು ಸಚಿವರ ಗಮನಕ್ಕೆ ತಂದರು.
ಅಲ್ಲದೇ ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸುವುದು ಮತ್ತು ಶಿಕ್ಷಣದ ಗುಣಾತ್ಮಕ ಬದಲಾವಣೆಯಲ್ಲಿ ಸಂಘವು ಪ್ರಮುಖ ಪಾತ್ರ ವಹಿಸಲಿದೆ. ಈ ಮಹತ್ವದ ಸಂದರ್ಭದಲ್ಲಿ ಮಾನ್ಯ ಸಚಿವರು ಅಗತ್ಯ ಸಹಕಾರ ನೀಡುವಂತೆ ಅವರಲ್ಲಿ ಮನವಿ ಮಾಡಿದರು.
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಇಂತಹ ಮಹತ್ವದ ಕಾರ್ಯಕ್ಕೆ ನೌಕರರ ಸಂಘ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿರಲಿ ಅಥವಾ ಕರ್ತವ್ಯ ನಿರ್ವಹಿಸುತ್ತಿರಲಿ ಅಂತಹ ನೌಕರರು, ಧನಿಕರು, ಉದ್ಯಮಿಗಳು ತಾವು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಸ್ತು ಅಥವಾ ಹಣಕಾಸಿನ ನೆರವನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
Madhu Bangarappa ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ಪಠ್ಯಪುಸ್ತಕ ಪೂರೈಕೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದಾಗ್ಯೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೂರೈಸಿದ ನಂತರವೂ ಇನ್ನಷ್ಟು ಬೇಕುಗಳ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ಸ್ಥಳೀಯ ದಾನಿಗಳು ಶಾಲೆಗಳ ವಿಕಾಸಕ್ಕೆ ಮುಂದಾಗುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಕಾರ್ಯದರ್ಶಿ ಆರ್.ಪಾಪಣ್ಣ, ರಂಗನಾಥ್, ಕೊಟ್ರೇಶ್, ctivate ಡಾ.ಹಿರೇಮರ್, ದಿನೇಶ್, ಸುಮತಿ ರವಿ ಮತ್ತಿತರರು ಉಪಸ್ಥಿತರಿದ್ದರು
JNNCE College ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಯೋಜನೆ ಅರಿವು ಉದ್ದೇಶದ “ನಿಧಿ ಆಪ್ ಕೆ ನಿಕಟ್ ” ಕಾರ್ಯಕ್ರಮ
JNNCE College ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶನಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಜ.27 ರಂದು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ.
ಜ.27 ರಂದು ನಗರದ ಪರ್ಫೆಕ್ಟ್ ಅಲಾಯ್ಸ್ ಕಾಂಪೋನೆಂಟ್ಸ್, ಪ್ರೈವೇಟ್.ಲಿ. ಜೆಎನ್‌ಎನ್‌ಸಿಇ ಕಾಲೇಜು ಹತ್ತಿರ ಇಲ್ಲಿ ಆಯೋಜಿಸಲಾಗಿದೆ. ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ 4 ಗಂಟೆವರೆಗೆ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮಿಷನರ್ II ತಿಳಿಸಿದ್ದಾರೆ
