Malnad Development Foundation ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ 59ನೇ ವಾರ್ಷಿಕ ಮಹಾಸಭೆಯು ಇಂದು ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ಆವರಣದ ಕಂಚಿಕೈ ದೇವಪ್ಪ ಸಭಾಂಗಣದಲ್ಲಿ ನಡೆಯಿತು.
ಮುಂದಿನ ಸಾಲಿಗೆ ಅಧ್ಯಕ್ಷರಾಗಿ ಶ್ರೀ ಬಿ.ಆರ್. ಜಯಂತ್‌ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶಿಮುಲ್ ಅಧ್ಯಕ್ಷರಾದ ಶ್ರೀ ಹೆಚ್.ಎನ್. ವಿದ್ಯಾಧರ್ ಇವರು ಶಾಲು ಹೊದೆಸಿ, ಪೆಟಾ ತೊಡಿಸಿ , ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಾ. ಹೆಚ್.ಎಂ. ಶಿವಕುಮಾರ್, ಶ್ರೀ ಗುರುಪಾದ, ಶ್ರೀ ಪ್ರಕಾಶ್ ತಲಕಾಲುಕೊಪ್ಪ, ಶ್ರೀ ಸತ್ಯನಾರಾಯಣ ಎಂ.ಆರ್, ಶ್ರೀ ಅಡೇಮನೆ ಸುಬ್ಬರಾವ್, ಶ್ರೀ ವೆಂಕಟೇಶ ಕವಲಕೋಡು , ಶ್ರೀ ವೀರೇಶ್ ಇನ್ನಿತರರು ಹಾಜರಿದ್ದರು. ಮತ್ತು ಎಂ.ಡಿ.ಎಫ್.ನ ಎಲ್ಲಾ ಆಡಳಿತಮಂಡಳಿ ಸದಸ್ಯರೂ, ದಾನಿಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
Malnad Development Foundation ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಬಿ.ಆರ್.ಜಯಂತ್ ಆಯ್ಕೆ
World Tuberculosis Day ಕ್ಷಯರೋಗವು ಹರಡುವ ರೋಗ ಕುಟುಂಬಸ್ಥರು ಬಹಳ ಎಚ್ಚರದಿಂದಿರಬೇಕು- ಡಾ.ಕೆ. ಎಸ್.ನಟರಾಜ್
World Tuberculosis Day ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಭಾರತ ಅವಿಭಕ್ತ ಕುಟುಂಬ ಹೊಂದಿರುವ ದೇಶವಾಗಿರುವುದರಿಂದ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಈ ಬಗ್ಗೆ ಎಚ್ಚರದಿಂದರಬೇಕು ಎಂದು ಡಿಎಚ್‌ಒ ಡಾ.ನಟರಾಜ್ ಕೆ ಎಸ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಹಾಗೂ ಕಾಲ್ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಬಾರಿ ‘ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು(ಬದ್ದತೆ, ಹೂಡಿಕೆ, ವಿತರಣೆ) ಎಂಬ ಘೋಷವಾಕ್ಯದೊಂದಿಗೆ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಭಾರತದಲ್ಲಿ ಪ್ರತಿ ದಿನ ಸುಮಾರು 6000 ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು, ಇದರಲ್ಲಿ ಸುಮಾರು 600 ಜನ (3 ನಿಮಿಷಕ್ಕೆ 2 ರೋಗಿಗಳು) ಸಾವನ್ನಪ್ಪುತ್ತಿದ್ದಾರೆ. ಕ್ಷಯರೋಗವು ಕೆಮ್ಮುವಾಗ ಮತ್ತು ಸೀನುವಾಗ ತುಂತುರ ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ. ಸತತ 2 ವಾರಗಳ ಕೆಮ್ಮು ಮತ್ತು ಕಫ, ಸಂಜೆ ಜ್ವರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.
ಟಿ.ಬಿ ನೋಟಿಫಿಕೇಷನ್ ಅಡಿಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿAದ ಪ್ರತಿ ಮಾಹೆ ವರದಿಗಳನ್ನು ತರೆÀಸಿಕೊಳ್ಳುತ್ತಿದ್ದು, 2024 ರಲ್ಲಿ ಒಟ್ಟು 446 ರೋಗಿಗಳ ವಿವರವು ಖಾಸಗಿ ಸಂಸ್ಥೆಯಿAದ ಬಂದಿದೆ. ಕ್ಷಯರೋಗ ನಿರ್ಮೂಲನೆಗೆ ಶಿವಮೊಗ್ಗ ಜಿಲ್ಲೆ ಆಯ್ಕೆ ಆಗಿದ್ದು, ಟಿ.ಬಿ.ಪ್ರಕರಣಗಳಿರುವ ಮನೆಗಳಲ್ಲಿ ಸಂಪರ್ಕದಲ್ಲಿರುವವರಿಗೆ ಸಿ.ವೈ ಟಿ.ಬಿ ಪರೀಕ್ಷೆ ಮಾಡಿ ಆ ಮೂಲಕ ಸೋಂಕನ್ನು ಕಂಡುಹಿಡಿದು ಟಿ.ಪಿ.ಟಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ 86 ಗ್ರಾಮ ಪಂಚಾಯತಿಗಳನ್ನು ಕ್ಷಯರೋಗ ಮುಕ್ತವೆಂದು ಘೋಷಿಸಲಾಗಿದ್ದು, ಇದರಲ್ಲಿ 42 ಗ್ರಾ.ಪಂ ಗಳಿಗೆ ಬೆಳ್ಳಿ ಹಾಗೂ 44 ಗ್ರಾ.ಪಂ ಗಳಿಗೆ ಕಂಚಿನ ಪದಕಗಳನ್ನು ನೀಡಿ ಇಂದು ಜಿಲ್ಲಾಧಿಕಾರಿಗಳು ಪ್ರಶಸ್ತಿಗಳನ್ನು ನೀಡಿದ್ದಾರೆ.
World Tuberculosis Day ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಗಣಿಗಾರಿಕೆ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ಹೆಚ್‌ಐವಿ ಬಾಧಿತರಲ್ಲಿ, ಮಧುಮೇಹಿಗಳು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಬಿ.ಪಿ ನಾಗೇಶ್ ಮಾತನಾಡಿ, 2025 ರ ವೇಳೆಗೆ ಕ್ಷಯರೋಗ ಮುಕ್ತ ಸಮಾಜ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, 2024 ರ ಡಿ.7 ರಿಂದ 2025 ರ ಮಾ. 17 ರವರೆಗೆ ಜಿಲ್ಲೆಯಲ್ಲಿ 100 ದಿನಗಳ ತೀವ್ರತರ ಕ್ಷಯರೋಗ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಆಂದೋಲನದಲ್ಲಿ ದುರ್ಬಲ ಆರೋಗ್ಯ ಹೊಂದಿರುವ ಸುಮಾರು 438621 ಶಂಕಿತರನ್ನು ತಪಾಸಣೆ ನಡೆಸಿ, ಇದರಲ್ಲಿ 6672 ಶಂಕಿತರಿಗೆ ಎಕ್ಸ್ ರೇ ಪರೀಕ್ಷೆ ಮಾಡಿ 355 ರೋಗಿಗಳಲ್ಲಿ ಕ್ಷಯರೋಗ ಪತ್ತೆಹಚ್ಚಿ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಗಿದೆ. 2024 ರಲ್ಲಿ 70339 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ ಅದರಲ್ಲಿ 1398 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದ್ದು, ಜೊತೆಗೆ 54 ಎಂಡಿಆರ್ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲಾಗಿದೆ ಎಂದರು.
ಕ್ಷಯರೋಗವನ್ನು ಶೀಘ್ರವಾಗಿ ಪತ್ತೆಹಚ್ಚುವ ಅತ್ಯಾಧುನಿಕ ಯಂತ್ರವಾದ ಸಿಬಿಎನ್‌ಎಎಟಿ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ 10 ಟ್ರ‍್ಯೂನ್ಯಾಟ್ ಯಂತ್ರಗಳನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಟಿ.ಬಿ. ಮತ್ತು ಎಂಡಿಆರ್ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಿದೆ ಎಂದರು.
ಡಬ್ಲ್ಯೂಎಚ್‌ಓ ಪ್ರತಿನಿಧಿಯಾದ ಡಾ.ರಾಜೀವ್, ಐಎಂಎ ಅಧ್ಯಕ್ಷ ಡಾ.ಶ್ರೀಧರ್, ಟಿಹೆಚ್‌ಓ ಡಾ.ಚಂದ್ರಶೇಖರ್, ಕ್ಷಯರೋಗ ನಿಯಂತ್ರಣ ಮೇಲ್ವಿಚಾರಕ ಎಸ್.ಕುಮಾರ್, ಐಎಂಎ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು, ರೋಟರಿ ಪದಾಧಿಕಾರಿಗಳು ಹಾಗೂ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Adichunchanagiri Education Trust ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅಭಿವ್ಯಕ್ತಿಗೆ ಬೇಸಿಗೆ ಶಿಬಿರಗಳು ಸಹಕಾರಿ- ಶ್ರೀಸಾಯಿನಾಥಶ್ರೀ
Adichunchanagiri Education Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಬೇಸಿಗೆ ಶಿಬಿರವನ್ನು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ,ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರೆತಲ್ಲಿ, ಬೇಸಿಗೆ ಶಿಬಿರದಂತಹ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಲು ಇಂತಹ ಕಾರ್ಯಕ್ರಮಗಳು ಸಹ ಕಾರಿಯಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳದೇ ಕಲರವ:
ಈ ಕಾರ್ಯಕ್ರಮದಲ್ಲಿ ಮಕ್ಕಳ ಉಡುಗೆ-ತೊಡುಗೆ ಹಾವಾ-ಭಾವ, ಹೊಸದೊಂದು ಲೋಕವನ್ನು, ಮಕ್ಕಳ ಪ್ರಪಂಚವನ್ನು ತೆರೆದಿಟ್ಟಿತ್ತು.
Adichunchanagiri Education Trust ಗುರುಪುರದ ಬಿಜಿಎಸ್ ಶಾಲೆಯ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಅಲ್ಲಿ ಚಿತ್ರಕಲೆ, ಸಂಗೀತ-ನೃತ್ಯ ವೇದಿಕ್ ಮ್ಯಾಥೆಮೇಟಿಕ್ಸ್, ಯೋಗ,ಧ್ಯಾನ, ಕ್ಯಾಲಿ ಗ್ರಫಿ ಬರವಣಿಗೆಗಳು,ಒಂಟೆ, ಎತ್ತಿನಗಾಡಿ, ಈಜು, ದೇಶೀಯ ಕ್ರೀಡೆಗಳನ್ನು ಒಳಗೊಂಡ ಮಕ್ಕಳ ಕಲಿಕೆಯನ್ನು ವೀಕ್ಷಿಸಿದ ಶ್ರೀಗಳು, ಕಾರ್ಯಕ್ರಮ ರೂಪಿಸಿದ ಬಿಜಿಎಸ್ ಶಿಕ್ಷಕ ವೃಂದವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿನಾಸಂ ನ ಇಂದು ಡಿ., ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ ಎಸ್. ಹೆಚ್. ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Shivamogga Rangayana ಏಪ್ರಿಲ್ 12 ರಿಂದ ರಂಗಾಯಣದ ಆಶ್ರಯದಲ್ಲಿ “ಚಿಣ್ಣರ ಸಿಹಿಮೊಗೆ” ಶಿಬಿರ
Shivamogga Rangayana ಶಿವಮೊಗ್ಗ ರಂಗಾಯಣದ ವತಿಯಿಂದ ಏ.12 ರಿಂದ ಮೇ.4 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ “ಚಿಣ್ಣರ ಸಿಹಿಮೊಗೆ” ಎಂಬ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಕಥೆ ಹೇಳುವುದು, ಬಣ್ಣಗಳ ಆಟ, ರಂಗಾಟ, ನಾಟಕ, ಮೈಮ್, ಜನಪದಗೀತೆ, ಜನಪದನೃತ್ಯ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವಿಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಸಂಬಂಧಿಸಿದ ಪೂರಕ ಕಲೆಯನ್ನು ಕಲಿಸಲಾಗುವುದು. ಶಿಬಿರದ ಕೊನೆಯ ಮೂರು ದಿನಗಳು ಶಿಬಿರಾರ್ಥಿಗಳ ನಾಟಕ, ಕಲೆಯನ್ನು ರಂಗಾಯಣ “ ಚಿಣ್ಣರ ಸಿಹಿಮೊಗೆ” ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. Shivamogga Rangayana 8 ರಿಂದ 13 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದ 150 ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಮಾನ್ಯತೆ ನೀಡಲಾಗುತ್ತದೆ. ಪ್ರವೇಶ ಶುಲ್ಕ ರೂ.3000 ಇದ್ದು, ಆಸಕ್ತರು ಏ.1 ರಂದು ರಂಗಾಯಣದ ಕಚೇರಿಯಲ್ಲಿ ಅರ್ಜಿ ಪಡೆಯಬೇಕು. ಪ್ರವೇಶ ಪಡೆಯಲು ಎರಡು ಪಾಸ್‌ಪೋರ್ಟ್ ಫೋಟೋ, ಜನನ ಪ್ರಮಾಣ ಪತ್ರ ಅಥವಾ ಅಧಾರ್ ಕಾರ್ಡ್ ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ದೂ.ಸಂ:08182256353 ನ್ನು ಸಂಪರ್ಕಿಸಬಹುದು ಎಂದು ರಂಗಾಯಣ ನಿರ್ದೇಶಕರು ತಿಳಿಸಿದ್ದಾರೆ.
HD Kumaraswamy ಮುಸ್ಲೀಂ ಮೀಸಲಾತಿ ವಿರುದ್ಧ ರಾಜ್ಯ ಬಿಜೆಪಿಯೊಂದಿಗೆ ಭಿನಾಭಿಪ್ರಾಯವಿಲ್ಲ- ಸಚಿವ ಎಚ್.ಡಿ.ಕುಮಾರಸ್ವಾಮಿ
HD Kumaraswamy ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ 4% ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ರಾಜ್ಯ ಜೆಡಿಎಸ್ ಮತ್ತು ರಾಜ್ಯ ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ.
ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ #NDA ‘ಸಮನ್ವಯ ಸಮಿತಿ’ ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ.
ಕಾಂಗ್ರೆಸ್ ಸರಕಾರವು ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ.
ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ.
HD Kumaraswamy ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ನಮ್ಮ ಜೆಡಿಎಸ್ ಅಚಲ ನಿಲುವು ಎಂದು ಕೇಂದ್ರ ಸಚಿವ ಮತ್ತು ರಾಜ್ಯ ಜೆಡಿಎಸ್ ಪ್ರಮುಖ ಎಚ್.ಡಿ.ಕುಮಾರ ಸ್ವಾಮಿ ತಮ್ಮಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ.
Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ ಗೆಹ್ಲೋಟ್
Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ ಯುಗಾದಿ ಹಬ್ಬವನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುವುದು. ಚೈತ್ರ ಮಾಸದಲ್ಲಿ ಎಲ್ಲಾ ಮರಗಳು ತಮ್ಮ ಹಳೆಯ ತನವನ್ನು ಕಳೆದುಕೊಂಡು ಹೊಸ ಚಿಗುರಿನೊಂದಿಗೆ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವುದು. ಯುಗಾದಿಯ ಆಗಮನದ ದಿನ ಎಲ್ಲೆಲ್ಲೂ ಸಿಹಿ-ಕಹಿ ಸವಿದು ಒಂದಾಗಿ ಮುನ್ನಡೆಯೋಣ ಎಂಬ ಸಂದೇಶದೊಂದಿಗೆ ದೂರದರ್ಶನ ಕೇಂದ್ರ, ಬೆಂಗಳೂರು ಚಂದನ ವಾಹಿನಿ ವತಿಯಿಂದ ರಾಜಭವನದ ಗಾಜಿನಮನಯಲ್ಲಿ ಆಯೋಜಿಸಿದ್ದ ಯುಗಾದಿಯ ವಿಶೇಷ “ಚೈತ್ರಾಂಜಲಿ” ಕಾರ್ಯಕ್ರಮವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.
“ಎಲ್ಲರಿಗೂ ನಮಸ್ಕಾರ, ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಕನ್ನಡ ಭಾಷೆಯಲ್ಲಿ ಶುಭ ಕೋರಿದ ಗೌರವಾನ್ವಿತ ರಾಜ್ಯಪಾಲರು, ಇಡೀ ದೇಶದಲ್ಲಿ ಮಾರ್ಚ್ 30ರಂದು ಹೊಸ ವರ್ಷ ಆರಂಭವಾಗಲಿದೆ. ಯುಗಾದಿಯ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೂರದರ್ಶನದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಸಂಸ್ಕೃತಿ, ದೇಶದ ಧರ್ಮಾ, ದೇಶದ ಸಭ್ಯತೆ, ದೇಶದ ಹಬ್ಬಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಮನದಟ್ಟು ಮಾಡಿಕೊಡಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ದೂರದರ್ಶನ ಕೇಂದ್ರ ಚಂದನ ವಾಹಿನಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಸಂಭ್ರಮದಲ್ಲಿ ಭಾಗಿಯಾಗಿರುವ ಸಿನೆಮಾ ತಾರೆಯರು, ಗಣ್ಯರು, ಅಧಿಕಾರಿಗಳು, ಮಕ್ಕಳು, ಯುವಕರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಹೊಸ ವರ್ಷವು ಎಲ್ಲರಿಗೂ ಸಂತೋಷ, ಸಮೃದ್ಧಿ, ಹೊಸತನ್ನು ತರಲಿ ಎಂದು ಪ್ರಾರ್ಥಿಸುತ್ತೇನೆಂದರು.
ಮನಸೂರೆಗೊಳಿಸಿದ ನೃತ್ಯ, ಗಾನ ಸುಧೆ
ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು. ಅದೇ ಸಮಯಲ್ಲಿ ಕಲಾವಿದೆ ವಿಜಯಶ್ರೀ ಅವರಿಂದ ಪ್ರಕೃತಿ ಮಾತೆಯ ಚಿತ್ತಾರ ಮೂಡಿಬಂತು. ನಂತರ ಶ್ರೀ ಸುಂದರೇಶ್.ಸಿ ಮತ್ತು ತಂಡದವರು ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಕೋಲು ಕುಣಿತವನ್ನೊಳಗೊಂಡ ಜಾನಪದ ನೃತ್ಯ ನೆರದಿದ್ದವರ ಮನಸೂರೆಗೊಳಿಸಿತು.
ನಂತರ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, ಸಿನೆಮಾ ನಟ ಹಾಗೂ ನಿರ್ದೇಶಕರಾದ ಎಸ್, ನಾರಾಯಣ್ ಅವರು ಯುಗಾದಿ ಹಬ್ಬದ ಆಚರಣೆ ಬಗ್ಗೆ ಹಳೆಯದನ್ನು ಮೆಲುಕು ಹಾಕಿ, ಸಂಬಂಧ ಮಹತ್ವದ ಮತ್ತು ಅನುಭವದ ಬಗ್ಗೆ ಹಂಚಿಕೊಂಡರು. ನಟಿ ಅನುಪ್ರಭಾಕರ್, ನಟಿ ಸುಧಾ ಬೆಳವಾಡಿ, ಸಂಯುಕ್ತ ಬೆಳವಾಡಿ ಸೇರಿದಂತೆ ಮುಂತಾದ ಗಣ್ಯರು ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿ, ವಿಶೇಷ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
Thawar Chand Gehlot ನಂತರ ಶ್ರೀ ಪಂಚಮ್ ಹಳಿಬಂಡಿ ಮತ್ತು ತಂಡದವರು ಯುಗಾದಿ ಕುರಿತು ರೆಟ್ರೋ ಟು ಮೆಟ್ರೋ ಎಂಬ ಶೈಲಿಯಲ್ಲಿ ಕನ್ನಡ ಹಾಡುಗಳ ಮಿಶ್ರಣದಲ್ಲಿ ಗೀತಗುಚ್ಛ ಪ್ರಸ್ತುತಿ ಪಡಿಸಿದರು. “ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ”, “ಯುಗಾ ಯುಗಾದಿ ಕಳೆದರೂ” ಈ ಹಸಿರ ಸಿರಿಯಲಿ, ಹೊಸಬೆಳಕು ಮೂಡುತಿದೆ, ನೇಸರ ನೋಡು, ದೀಪದಿಂದ ದೀಪವ, ಇಂದು ಬಾನೆಗೆಲ್ಲ ಹಬ್ಬ, ಸೇರಿದಂತೆ ಅನೇಕ ಗೀತೆಗೆಳು ಸುಮಧುರವಾಗಿ ಮೂಡಿಬಂದು, ನೆರೆದಿದ್ದವರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

Shahi Export Limited ಶಿವಮೊಗ್ಗ ತಾಲ್ಲೂಕಿನಲ್ಲಿ ಪ್ರಸರಣ ಮಾರ್ಗದ ಕಾರಿಡಾರ್ ಪರಿಹಾರ ನಿಗದಿ ಇತ್ಯರ್ಥ ಸಭೆ
Shahi Export Limited ಶಿವಮೊಗ್ಗ ತಾಲ್ಲೂಕಿನಲ್ಲಿ 220 ಕೆ.ವಿ ಮುಖ್ಯ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಮೆ|| ಶಾಹಿ ಎಕ್ಸ್ಪೋರ್ಟ್ ಲಿಮಿಟೆಡ್‌ಗೆ ಜೋಡಣೆಯಾಗುವ 110 ಕೆ.ವಿ ಎಸ್.ಎಂ.ಟಿ ಹಾಲಿ ಇರುವ ಸಿಂಗಲ್ ಸರ್ಕ್ಯೂಟ್ ಮಾರ್ಗವನ್ನು ಹೊಸ 110 ಕೆ.ವಿ ಡಬಲ್ ಸಕ್ಯೂರ್ಟ್ ರಚನೆಯ ಕಾಮಗಾರಿಯಲ್ಲಿ ಬರುವ ಲೈನ್ ಕಾರಿಡಾರ್ ಪರಿಹಾರ ನಿಗದಿಪಡಿಸುವ ಕುರಿತು ಮಾ.25 ರ ಬೆಳಿಗ್ಗೆ 11.00 ಗಂಟಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
Shahi Export Limited ಶಿವಮೊಗ್ಗ ತಾಲ್ಲೂಕಿನ ಇಸ್ಲಾಪುರ, ತೊಪ್ಪಿನಘಟ್ಟ, ದುಮ್ಮಳ್ಳಿ, ನಿದಿಗೆ ಗ್ರಾಮಗಳ ವಿವಿಧ ಜಮೀನುಗಳಲ್ಲಿ 110 ಕೆವಿ ವಿದ್ಯುತ್ ಮಾರ್ಗವು ಈ ಕೆಳಗೆ ತಿಳಿಸಿರುವ ಸರ್ವೆ ನಂ. ಜಮೀನುಗಳಲ್ಲಿ ಹಾದು ಹೋಗುವುದರಿಂದ ಸಂಬAಧಪಟ್ಟ ಭೂಮಾಲೀಕರು/ರೈತರಿಗೆ 110 ಕೆವಿ ಪ್ರಸರಣ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಇಸ್ಲಾಪುರ ಸರ್ವೆ ನಂ;79, ತೋಪ್ಪಿನಘಟ್ಟ ಸರ್ವೆ ನಂ: 19, 20, 23, 24, 27, 28, 26, 40, 29, 39, 120, 119, 36, 34, 31, 32, 119, ದಮ್ಮಳ್ಳಿ ಸರ್ವೆ ನಂ: 43, 44, 45, 67, 68, 69, 66, 89, 88, ನಿದಿಗೆ ಸರ್ವೆ ನಂ: 35, 33, 34, 32, 12, 10, 11, 09, 183, 1, 2, 170, 169, 165, 168, 167, 166, 164, 72, 142, 141, 130, 132, 133, 134 ರ ಭೂಮಾಲೀಕರು ಹಾಗೂ ರೈತರು ತಪ್ಪದೆ ಸಭೆಗೆ ಹಾಜರಾಗುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PM Yoga Awards ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ
PM Yoga Awards ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ 2025 ನೇ ಸಾಲಿನ ಪ್ರಧಾನ ಮಂತ್ರಿಗಳ ಯೋಗ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಮಾ.31 ರ ಒಳಗೆ https:// nnovateindia.mygov./in/pm-yoga-awards-2025 ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
PM Yoga Awards ಅದರಂತೆ ಶಿವಮೊಗ್ಗ ಜಿಲ್ಲೆಯ ಯೋಗ ಕ್ರೀಡಾಪಟುಗಳು ಹಾಗೂ ಯೋಗ ಸಂಸ್ಥೆಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Shivamogga Rangayana ಮಾರ್ಚ್ 24 ಸುವರ್ಣ ಸಂಸ್ಕೃತಿ ಭವನದಲ್ಲಿ’ಸತ್ತವರ ನೆರಳು’ ನಾಟಕ ಪ್ರದರ್ಶನ
Shivamogga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಮಾ.24 ರ ಸಂಜೆ 6.30ಕ್ಕೆ ಹೆಲಿಪ್ಯಾಡ್ ಹತ್ತಿರದ ಅಶೋಕನಗರ ಸುವರ್ಣ ಸಂಸ್ಕೃತಿ ಭವನದಲ್ಲಿ ಧಾರವಾಡ ರಂಗಾಯಣ ಪ್ರಸ್ತುತಿಯ, ಜಡಭರತ ರಚನೆಯ, ಶ್ರೀ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಸತ್ತವರ ನೆರಳು” ನಾಟಕವು ಪ್ರದರ್ಶನಗೊಳ್ಳಲಿದೆ.
Shivamogga Rangayana ಟಿಕೆಟ್ ದರವು ಒಬ್ಬರಿಗೆ ರೂ.30 ನಿಗದಿ ಮಾಡಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ಕೋರಿದ್ದಾರೆ.
District Legal Services Authority ಮಾನಸಿಕ ಆರೋಗ್ಯ ಸಂಬಂಧಿತ ಸರ್ಕಾರದ ಕಾನೂನನ್ನು ನಾವುಗಳೆಲ್ಲ ತಿಳಿದುಕೊಳ್ಳಬೇಕು- ನ್ಯಾ.ಮರುಳಸಿದ್ಧಾರಾಧ್ಯ
District Legal Services Authority ಮಾನಸಿಕ ಒತ್ತಡ ಪ್ರತಿ ಹಂತದಲ್ಲೂ ಇದೆ. ಯಾವುದೇ ಇಲಾಖೆಗಳು ಹಾಗೂ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕಾರ್ಯಾಗಾರ ಅತ್ಯವಶ್ಯಕವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಹೆಚ್.ಜೆ ಹೇಳಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯದ ಕುರಿತು ಶನಿವಾರ ನಗರದ ಪೊಲೀಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
District Legal Services Authority ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ಹಾಗೂ ಯೋಜನೆಗಳನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಸರ್ಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಜಾರಿಗೆ ತಂದಿದೆ. ಈ ಪ್ರಾಧಿಕಾರ ಸರ್ವೋಚ್ಚ ನಾಯ್ಯಾಧೀಶರ ಅಧೀನದಲ್ಲಿ ಕೆಲಸ ಮಾಡುತ್ತದೆ. ಸುಮಾರು 10 ವಿವಿಧ ಕಾನೂನು ಹಾಗೂ ಯೋಜನೆಗಳನ್ನು ಇದು ಒಳಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು, ಮಾನಸಿಕ ಅಸ್ವಸ್ಥರಿಗಾಗಿಯೇ ಕಾನೂನು ಸೇವೆಗಳು, ವಕೀಲರ ಸಮಿತಿ, ಹಕ್ಕುಬಾಧ್ಯತೆ ಹಾಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತದೆ ಎಂದರು.
ಮಾನಸಿಕ ಅಸ್ವಸ್ಥರನ್ನು ತಾರತಮ್ಯಕ್ಕೆ ಒಳಪಡಿಸದಂತೆ ನಮ್ಮೊಳಗೆ ಅವರೂ ಒಬ್ಬರಂತೆ ಕಾಣಬೇಕು. ಭಾರತ ಸಂವಿಧಾನ ಎಲ್ಲರಂತೆ ಅವರಿಗೂ ಜೀವಿಸುವ ಹಕ್ಕು, ಸಮಾನರಾಗಿ ಬಾಳುವ ಹಕ್ಕು, ಮತದಾನದ ಹಕ್ಕು, ಕಾನೂನು ಸೇವೆ ಪಡೆಯುವ ಹಕ್ಕನ್ನು ನೀಡಿದೆ. ಅದರಂತೆ 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯನ್ನು ಕೂಡ ಜಾರಿಗೆ ತರಲಾಗಿದೆ. ನಾವೆಲ್ಲರೂ ಮಾನಸಿಕ ಅಸ್ವಸ್ಥರಿಗೆ ಈ ಹಕ್ಕುಗಳ ಹಾಗೂ ಕಾನೂನಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮನುಷ್ಯ ಅನೇಕ ಮಾನಸಿಕ ಒತ್ತಡಗಳಿಗೆ ಸಿಲುಕಿ ಅತ್ಮಹತ್ಯೆ ಹಾದಿ ತುಳಿಯುತ್ತಿದ್ದು, ಪ್ರತಿದನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಹೆಚ್ಚು ಗಂಡು ಮಕ್ಕಳೆ ಆಗಿದ್ದಾರೆ. ಇವರು ಸದಾ ಗಂಡು ಎಂಬ ಅಹಂಗೆ ಬಿದ್ದು ಭಾವನೆಗಳನ್ನು, ನೋವುಗಳನ್ನು ವ್ಯಕ್ತಪಡಿಸಲಾಗದೆ ಹಾಗೂ ಅದನ್ನು ಎದುರಿಸಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಗಂಡು ಮಕ್ಕಳನ್ನು ಈ ಅಹಂ ನಿಂದ ಹೊರಬರುವಂತೆ ಮಾಡಬೇಕು. ಅವರ ನೋವುಗಳನ್ನು ತೊಡಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಆ ಮೂಲಕ ೨೦೩೦ ರಷ್ಟರಲ್ಲಿ ಆತ್ಮಹತ್ಯೆಯ ಪ್ರಮಾಣ ಶೇ.10 ರಷ್ಟು ಕಡಿಮೆ ಮಾಡುವಲ್ಲಿ ಮುಂದಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಆರಕ್ಷಕರಿಗಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರ ಏರ್ಪಡಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ನಮ್ಮ ಮಾನಸಿಕ ಆರೋಗ್ಯ, ಮಾನಸಿಕ ಕಾನೂನು ಹಾಗೂ ಆ ಕಾನೂನು ಹೇಗೆ ಅನುಷ್ಠಾನಕ್ಕೆ ತರಬೇಕೆಂದು ಈ ವೇದಿಕೆ ತಿಳಿಸಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇತ್ತೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಬದಲಾಗಿದೆ. ಈ ಬದಲಾವಣೆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗಬೇಕು ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಬಗ್ಗೆ ಕಾಳಜಿ ವಹಿಸಬೇಕು. ಯಾಕೆಂದರೆ ಕೋವಿಡ್ ಅಂತಹ ಸಮಯದಲ್ಲಿ ಸಾರ್ವಜನಿಕರು ಒಳಗೊಂಡಂತೆ ಪೊಲೀಸರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದ್ದು ನಾವೆಲ್ಲಾ ನೋಡಿದ್ದೇವೆ. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರದಿಂದರಬೇಕು. ಪೊಲೀಸ್ ಇಲಾಖೆಯು ತಮ್ಮ ಮಿತಿಯನ್ನು ಮೀರಿ ಒತ್ತಡಕ್ಕೆ ಒಳಗಾಗುತ್ತದೆ. ಕೆಲವೊಮ್ಮೆ ಆ ಒತ್ತಡಕ್ಕೆ ಮಣಿದು ಕಾರ್ಯನಿವಹಿಸಬೇಕಾಗುತ್ತದೆ. ಇದರಿಂದ ಅನೇಕ ಲೋಪಗಳು, ಅನಾಹುತಗಳು ನಡೆಯುತ್ತವೆ. ಅದರಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಸಹ ಸಂಭವಿಸಿವೆ ಎಂದರು.
ಇಂತಹ ವಿಷಯಗಳನ್ನೆಲ್ಲಾ ಗಮನಿಸಿದ ನಂತರ ಪೊಲೀಸ್ ಇಲಾಖೆ ನಿಮ್ಹಾನ್ಸ್‌ನೊಂದಿಗೆ ಸಮಾಲೋಚನೆ ನಡೆಸಿ 31 ಜಿಲ್ಲೆಯ ಪೊಲೀಸ್ ಕೇಂದ್ರ ಕಚೇರಿಗಳಲ್ಲಿ ಮಾನಸಿಕ ಆರೋಗ್ಯಕ್ಕೆಂದು ಉತ್ತಮ ಮನೋ ತಜ್ಞರನ್ನು ನೇಮಿಸಲಾಗಿದೆ. ಅವರುಗಳು ಪೊಲೀಸ್ ಅಧಿಕಾರಿಗಳೊಂದಿಗೆ ವೈಯಕ್ತಿವಾಗಿ, ಸಾಮೂಹಿಕವಾಗಿ ಸಮಾಲೋಚನೆ ನಡೆಸುವ ಮೂಲಕ ಅಧಿಕಾರಗಳ ಮಾನಸಿಕ ಒತ್ತಡಕ್ಕೆ ಪರಿಹಾರವನ್ನು ನೀಡುವರು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ವಕೀಲರು ಹಾಗೂ ಪೊಲೀಸರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆತ್ಮಕ್ಕೆ ತೃಪ್ತಿಯಾಗುವಂತಹ ಕೆಲಸ ಮಾಡಬೇಕು. ಆಗ ಮಾತ್ರ ಮಾನಸಿಕ ಆರೋಗ್ಯ ನಮ್ಮ ಹಿಡಿತದಲ್ಲಿ ಇರುತ್ತದೆ. ಬೇರೆ ಯಾವುದೇ ಆಲೋಚನೆಗಳಲ್ಲಿ ತೊಡಗದೆ ನಮ್ಮ ಮಿತಿಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಡಿಹೆಚ್‌ಓ ಡಾ.ನಟರಾಜ್ ಕೆ ಎಸ್, ಸಿಮ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ರಾಮ್ ಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ್ ಎಸ್ ಕೆ, ಮನೋತಜ್ಞ ಡಾ.ಪ್ರಮೋದ್ ಹೆಚ್ ಎಲ್ ಪಾಲ್ಗೊಂಡಿದ್ದರು.
