Sunday, August 2, 2026
Sunday, August 2, 2026

Shivamogga Rangayana ಏಪ್ರಿಲ್ 12 ರಿಂದ ರಂಗಾಯಣದ ಆಶ್ರಯದಲ್ಲಿ “ಚಿಣ್ಣರ ಸಿಹಿಮೊಗೆ” ಶಿಬಿರ

Date:

Shivamogga Rangayana ಶಿವಮೊಗ್ಗ ರಂಗಾಯಣದ ವತಿಯಿಂದ ಏ.12 ರಿಂದ ಮೇ.4 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ “ಚಿಣ್ಣರ ಸಿಹಿಮೊಗೆ” ಎಂಬ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಕಥೆ ಹೇಳುವುದು, ಬಣ್ಣಗಳ ಆಟ, ರಂಗಾಟ, ನಾಟಕ, ಮೈಮ್, ಜನಪದಗೀತೆ, ಜನಪದನೃತ್ಯ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವಿಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಸಂಬಂಧಿಸಿದ ಪೂರಕ ಕಲೆಯನ್ನು ಕಲಿಸಲಾಗುವುದು. ಶಿಬಿರದ ಕೊನೆಯ ಮೂರು ದಿನಗಳು ಶಿಬಿರಾರ್ಥಿಗಳ ನಾಟಕ, ಕಲೆಯನ್ನು ರಂಗಾಯಣ “ ಚಿಣ್ಣರ ಸಿಹಿಮೊಗೆ” ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. Shivamogga Rangayana 8 ರಿಂದ 13 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದ 150 ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಮಾನ್ಯತೆ ನೀಡಲಾಗುತ್ತದೆ. ಪ್ರವೇಶ ಶುಲ್ಕ ರೂ.3000 ಇದ್ದು, ಆಸಕ್ತರು ಏ.1 ರಂದು ರಂಗಾಯಣದ ಕಚೇರಿಯಲ್ಲಿ ಅರ್ಜಿ ಪಡೆಯಬೇಕು. ಪ್ರವೇಶ ಪಡೆಯಲು ಎರಡು ಪಾಸ್‌ಪೋರ್ಟ್ ಫೋಟೋ, ಜನನ ಪ್ರಮಾಣ ಪತ್ರ ಅಥವಾ ಅಧಾರ್ ಕಾರ್ಡ್ ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ದೂ.ಸಂ:08182256353 ನ್ನು ಸಂಪರ್ಕಿಸಬಹುದು ಎಂದು ರಂಗಾಯಣ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...