Sunday, April 27, 2025
Sunday, April 27, 2025

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

Date:

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ ಯುಗಾದಿ ಹಬ್ಬವನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುವುದು. ಚೈತ್ರ ಮಾಸದಲ್ಲಿ ಎಲ್ಲಾ‌ ಮರಗಳು ತಮ್ಮ ಹಳೆಯ ತನವನ್ನು ಕಳೆದುಕೊಂಡು ಹೊಸ‌ ಚಿಗುರಿನೊಂದಿಗೆ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವುದು. ಯುಗಾದಿಯ ಆಗಮನದ ದಿನ ಎಲ್ಲೆಲ್ಲೂ ಸಿಹಿ-ಕಹಿ ಸವಿದು ಒಂದಾಗಿ ಮುನ್ನಡೆಯೋಣ ಎಂಬ ಸಂದೇಶದೊಂದಿಗೆ ದೂರದರ್ಶನ ಕೇಂದ್ರ, ಬೆಂಗಳೂರು ಚಂದನ ವಾಹಿನಿ ವತಿಯಿಂದ ರಾಜಭವನದ ಗಾಜಿನಮನಯಲ್ಲಿ ಆಯೋಜಿಸಿದ್ದ ಯುಗಾದಿಯ ವಿಶೇಷ “ಚೈತ್ರಾಂಜಲಿ” ಕಾರ್ಯಕ್ರಮವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.

“ಎಲ್ಲರಿಗೂ ನಮಸ್ಕಾರ, ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಕನ್ನಡ ಭಾಷೆಯಲ್ಲಿ ಶುಭ ಕೋರಿದ ಗೌರವಾನ್ವಿತ ರಾಜ್ಯಪಾಲರು, ಇಡೀ ದೇಶದಲ್ಲಿ ಮಾರ್ಚ್ 30ರಂದು ಹೊಸ ವರ್ಷ ಆರಂಭವಾಗಲಿದೆ. ಯುಗಾದಿಯ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೂರದರ್ಶನದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಸಂಸ್ಕೃತಿ, ದೇಶದ ಧರ್ಮಾ, ದೇಶದ ಸಭ್ಯತೆ, ದೇಶದ ಹಬ್ಬಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಮನದಟ್ಟು ಮಾಡಿಕೊಡಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ದೂರದರ್ಶನ ಕೇಂದ್ರ ಚಂದನ ವಾಹಿನಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಸಂಭ್ರಮದಲ್ಲಿ ಭಾಗಿಯಾಗಿರುವ ಸಿನೆಮಾ ತಾರೆಯರು, ಗಣ್ಯರು, ಅಧಿಕಾರಿಗಳು, ಮಕ್ಕಳು, ಯುವಕರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಹೊಸ ವರ್ಷವು ಎಲ್ಲರಿಗೂ ಸಂತೋಷ, ಸಮೃದ್ಧಿ, ಹೊಸತನ್ನು ತರಲಿ ಎಂದು ಪ್ರಾರ್ಥಿಸುತ್ತೇನೆಂದರು.

ಮನಸೂರೆಗೊಳಿಸಿದ ನೃತ್ಯ, ಗಾನ ಸುಧೆ
ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು. ಅದೇ ಸಮಯಲ್ಲಿ ಕಲಾವಿದೆ ವಿಜಯಶ್ರೀ ಅವರಿಂದ ಪ್ರಕೃತಿ ಮಾತೆಯ ಚಿತ್ತಾರ ಮೂಡಿಬಂತು. ನಂತರ ಶ್ರೀ ಸುಂದರೇಶ್.ಸಿ ಮತ್ತು ತಂಡದವರು ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಕೋಲು ಕುಣಿತವನ್ನೊಳಗೊಂಡ ಜಾನಪದ ನೃತ್ಯ ನೆರದಿದ್ದವರ ಮನಸೂರೆಗೊಳಿಸಿತು.
ನಂತರ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, ಸಿನೆಮಾ ನಟ ಹಾಗೂ ನಿರ್ದೇಶಕರಾದ ಎಸ್, ನಾರಾಯಣ್ ಅವರು ಯುಗಾದಿ ಹಬ್ಬದ ಆಚರಣೆ ಬಗ್ಗೆ ಹಳೆಯದನ್ನು ಮೆಲುಕು ಹಾಕಿ, ಸಂಬಂಧ ಮಹತ್ವದ ಮತ್ತು ಅನುಭವದ ಬಗ್ಗೆ ಹಂಚಿಕೊಂಡರು. ನಟಿ ಅನುಪ್ರಭಾಕರ್, ನಟಿ ಸುಧಾ ಬೆಳವಾಡಿ, ಸಂಯುಕ್ತ ಬೆಳವಾಡಿ ಸೇರಿದಂತೆ ಮುಂತಾದ ಗಣ್ಯರು ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿ, ವಿಶೇಷ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Thawar Chand Gehlot ನಂತರ ಶ್ರೀ ಪಂಚಮ್ ಹಳಿಬಂಡಿ ಮತ್ತು ತಂಡದವರು ಯುಗಾದಿ ಕುರಿತು ರೆಟ್ರೋ ಟು ಮೆಟ್ರೋ ಎಂಬ ಶೈಲಿಯಲ್ಲಿ ಕನ್ನಡ ಹಾಡುಗಳ ಮಿಶ್ರಣದಲ್ಲಿ ಗೀತಗುಚ್ಛ ಪ್ರಸ್ತುತಿ ಪಡಿಸಿದರು. “ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ”, “ಯುಗಾ ಯುಗಾದಿ ಕಳೆದರೂ” ಈ ಹಸಿರ ಸಿರಿಯಲಿ, ಹೊಸಬೆಳಕು ಮೂಡುತಿದೆ, ನೇಸರ ನೋಡು, ದೀಪದಿಂದ ದೀಪವ, ಇಂದು ಬಾನೆಗೆಲ್ಲ ಹಬ್ಬ, ಸೇರಿದಂತೆ ಅನೇಕ ಗೀತೆಗೆಳು ಸುಮಧುರವಾಗಿ ಮೂಡಿಬಂದು, ನೆರೆದಿದ್ದವರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...