Friday, March 6, 2026
Friday, March 6, 2026
Home Blog Page 361

Akka Cafes  ಮಹಿಳೆಯರ ಸ್ವಾವಲಂಬನೆಗೆ ಈ ಆರ್ಥಿಕ ವರ್ಷದಲ್ಲಿ “50 ಅಕ್ಕ ಕೆಫೆ” ಸ್ಥಾಪನೆ- ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

0

Akka Cafes  ಮಹಿಳೆಯರ ಸ್ವಾವಲಂಬನೆಗೆ ಈ ಆರ್ಥಿಕ ವರ್ಷದಲ್ಲಿ “50 ಅಕ್ಕ ಕೆಫೆ” ಸ್ಥಾಪನೆ- ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ಮ ಹಿಳೆಯರನ್ನು ಸ್ವಾವಲಂಬಿ ಹಾಗೂ ಉದ್ಯಮಶೀಲರನ್ನಾಗಿ ಮಾಡುವಲ್ಲಿ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಅಕ್ಕ ಕೆಫೆ ಮೂಲಕ ಮಹಿಳೆಯರೇ ನಡೆಸುವ ಕ್ಯಾಂಟೀನ್‌ಗಳನ್ನು ಸ್ಥಾಪಿಸಿ, ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ – ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ 50 ಅಕ್ಕ ಕೆಫೆ ಸ್ಥಾಪಿಸುತ್ತಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ ಶರಣ್‌ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ

Dinesh Gundu Rao ಏಪ್ರಿಲ್ 2 ರಿಂದ ಜನರ ಮನೆ ಬಾಗಿಲಿಗೆ “ಗೃಹ‌ ಆರೋಗ್ಯ” ಯೋಜನೆ, ಕೋಲಾರ ಜಿಲ್ಲೆಯಲ್ಲಿ‌‌ ಪ್ರಾಯೋಗಿಕ‌ ಜಾರಿ- ದಿನೇಶ್ ಗುಂಡೂರಾವ್

0


Dinesh Gundu Rao ಗೃಹ ಆರೋಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಜಾರಿ ಮಾಡಲಾಗುವುದು.

ಜನರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಮಾನಸಿಕ ಕಾಯಿಲೆಗಳ ಬಗ್ಗೆಯೂ ತಪಾಸಣೆ ನಡೆಸಲಿದ್ದಾರೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ

Bangalore Metropolitan Transport Corporation ರಸ್ತೆ ಅವಘಡ ತುರ್ತು ನಿವಾರಣೆಗೆ 5 ಸಂಚಾರಿ ವಾಹನ‌ಗಳಲೋಕಾರ್ಪಣೆ

0

Bangalore Metropolitan Transport Corporation ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನಾಂಕ 24.03.2025 ರಂದು ರಸ್ತೆ ಅವಘಡಗಳ ತ್ವರಿತ ನಿವಾರಣೆಗಾಗಿ ಹೊಸದಾಗಿ ಖರೀದಿಸಿರುವ 5 ಸಂಚಾರಿ ದುರಸ್ಥಿ ವ್ಯಾನುಗಳನ್ನು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು ಮತ್ತು ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿರುತ್ತಾರೆ.

Bangalore Metropolitan Transport Corporation ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ರಾಮಚಂದ್ರನ್.ಆರ್‌, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂಮಸಾಸಂಸ್ಥೆ, ಶ್ರೀ ಅಬ್ದುಲ್‌ ಅಹದ್‌, ಭಾ.ಪೋ.ಸೇ, ನಿರ್ದೇಶಕರು (ಭ&ಜಾ) ಮತ್ತು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

BJP Protest 18 ಶಾಸಕರ ಅಮಾನತು. ಸರ್ಕಾರದಿಂದ ಅಧಿಕಾರ ದುರುಪಯೋಗ. ಜಿಲ್ಲಾ ಬಿಜೆಪಿ‌‌ ಪ್ರತಿಭಟನೆ

0

BJP Protest ಮುಸ್ಲಿಮರಿಗೆ ಅಸಂವಿಧಾನಿಕ 4% ಮೀಸಲಾತಿ, SCP-TSP ನಿಧಿಗಳ ದುರ್ಬಳಕೆ, ಹನಿಟ್ರ್ಯಾಪ್ ಹಗರಣ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಸ್ಮಾರ್ಟ್ ಮೀಟರ್ ಹಗರಣ ಈ ರೀತಿಯ ಜನವಿರೋಧಿ ನೀತಿಯನ್ನೇ ತನ್ನ ಸಾಧನೆ ಎನ್ನುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವದ ಧ್ವನಿಯಾಗಿ, ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡುವ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಸರ್ಕಾರದ ಈ ಅಸಂವಿಧಾನಿಕ ನಿರ್ಧಾರ ಹಾಗೂ ರಾಜ್ಯದ ಜನತೆಯ ಮೇಲೆ ತೋರುತ್ತಿರುವ ನಿರ್ಲಕ್ಷ್ಯತೆಯನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಇಂದು ನಡೆದ ಬೃಹತ್ ಜನಾಂದೋಲನ ಹೋರಾಟದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

BJP Protest ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ತೀರ್ಥಳ್ಳಿಯ ಶಾಸಕರಾದ ಅರಗ ಜ್ಞಾನೇಂದ್ರ, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್ ದತ್ತಾತ್ರಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ ಸೇರಿದಂತೆ ಬಿಜೆಪಿಯ ಪ್ರಮುಖರು, ಜಿಲ್ಲಾ ಹಾಗೂ ನಗರಗಳ ಮೋರ್ಚಾಗಳ ಪದಾಧಿಕಾರಿಗಳು, ನಮ್ಮ ಕಾರ್ಯಕರ್ತರು ಉಪಸ್ಥಿತರಿದ್ದರು.

ಶೀಘ್ರ ಬಾಡಿಗೆ ಕರಾರನ್ನ ನವೀಕರಣಗೊಳಿಸಿ- ಪಿ.ಮಂಜುನಾಥ್

0

ಶಿವಮೊಗ್ಗ ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು ನವೀಕರಣಗೊಳಿಸುವಂತೆ ಖಾಸಗಿ ಬಸ್ ನಿಲ್ದಾಣ ಅಂಗಡಿ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಮಂಜುನಾಥ್ ಒತ್ತಾಯಿಸಿದರು.
ಕರ್ನಾಟಕ ಸರ್ಕಾರದ ಸುತ್ತೋಲೆ ಕ್ರ.ಸಂ/ನಆಈ/೨೨೧/ಜಿ.ಇ.ಎಲ್‌ಎಲ್/2009 ದಿನಾಂಕ:26-10-2009 ರಿತ್ಯ ದಿನಾಂಕ : 06-01-2011 ರ ಗುರುವಾರದಂದು ನಡೆದ ಸಭಾ ನಡವಳಿಯ ಅನುಸಾರ ಪ್ರತಿ 12 ವರ್ಷಗಳ ಅಧಿಗೆ ಪ್ರತಿ ೩ ವರ್ಷಗಳಿಗೊಮ್ಮೆ ಕರಾರು ಪತ್ರ ನವೀಕರಣಗೊಳ್ಳಬೇಕಾಗಿರುತ್ತದೆ. ಆದರೆ ಸುಮಾರು ಎರಡು ವರ್ಷದಿಂದ ಬಾಡಿಗೆ ಕರಾರು ನವೀಕರಣಗೊಳಿಸಿದೆ ಇರುವುದು ನಮಗೆ ತೊಂದ್ರೆಯಾಗುತ್ತಿದೆ ಎಂದು ಆರೋಪಿಸಿದರು.
ಕರಾರು ನವೀಕರಣಗೊಂಡರೇ ಸರ್ಕಾರಿ ಕಛೇರಿಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ/ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಇಲ್ಲವೆಂದರೇ ಯಾರು ಕೂಡ ನಮ್ಮಲ್ಲಿ ಹಣದ ವ್ಯವಹಾರನ್ನು ಮಾಡುವುದಿಲ್ಲ. ಇದ್ದರಿಂದ ನಮಗೆ ದಿನನಿತ್ಯ ಹಲವಾರು ಸಾಮಾಗ್ರಿಗಳನ್ನು ತಂದು ಹೂಡಿಕೆ ಮಾಡಲು ಅನಾನೂಕೂಲವಾಗುತ್ತದೆ ಎಂದರು.
ಶೀಘ್ರದಲ್ಲಿ ಕರಾರನ್ನು ನವೀಕರಣಗೊಳಿಸಿ ನಮ್ಮ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಯುಕ್ತರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಆದರೇ ಆಯುಕ್ತರು ಏಕೋ ಈ ಮಳಿಗೆ ಕರಾರು ನವೀಕರಣಗೊಳಿಸಲು ಅಸಡ್ಡೆ ತೋರುತ್ತಿದ್ದಾರೆಂದು ಆರೋಪಿಸಿದರು.
ಮಳಿಗೆ ಕರಾರು ನವೀಕರಣಗೊಂಡರೇ ಸುಮಾರು 15% ಹೆಚ್ಚಳ ಬಾಡಿಗೆ ದೊರೆಯುತ್ತದೆ. ಇದ್ದರಿಂದ ಪಾಲಿಕೆಗೆ ಹೆಚ್ಚಿನ ಅದಾಯ ಕೂಡ ಕ್ರೂಡೀಕರಣವಾಗಲಿದೆ, ಇಷ್ಟೆಲ್ಲ ಅನುಕೂಲವಿದ್ದರೂ ಕೂಡ ಕರಾರು ನವೀಕರಣಗೊಳಿಸಲು ಮೀನಾಮೇಷ ಏಣಿಸುತ್ತಿರುವುದು ಶೋಚನಿಯ ಸಂಗತಿಯಾಗಿದೆ ಎಂದರು.
ಶೀಘ್ರದಲ್ಲಿ ಕರಾರು ನವೀಕರಣಗೊಳಿಸದಿದ್ದರೇ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಖಾಸಗಿ ಬಸ್ ನಿಲ್ದಾಣ ಅಂಗಡಿ ವರ್ತಕರ ಸಂಘ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಒಮ್ಮತ ತೀರ್ಮಾನ ಕೈಗೊಳ್ಳಲಾಗಿದ್ದು. ಆಯುಕ್ತರು ವರ್ತಕರ ಸಂಕಷ್ಟ ಅರಿತು. ಕರಾರನ್ನು ನವೀಕರಣಗೊಳಿಸಿ ಕೊಟ್ಟು. ನಮ್ಮ ವ್ಯವಹಾರಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದರು.

Youth Hostels Association of India ಧೈರ್ಯ & ಆತ್ಮ ವಿಶ್ವಾಸವಿದ್ದರೆ ಎಲ್ಲಿಯೂ‌ ತೊಡಕಾಗದು- ಎಸ್.ಕೆ.ಶೇಷಾಚಲ

0

Youth Hostels Association of India ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ಹೆದರಿಕೆ ಎಂಬುದು ಸ್ವಾಭಾವಿಕ ಅದೇ ಕಾರಣಕ್ಕಾಗಿ ನಾವು ಅನೇಕ ಬಾರಿ ನಮ್ಮ ಗುರಿಯನ್ನು ತಲುಪುವುದಿಲ್ಲ ಧೈರ್ಯವಿದ್ದರೆ ಆತ್ಮವಿಶ್ವಾಸವಿದ್ದರೆ ಎಲ್ಲಿಯೂ ತೊಡಕಾಗುವುದಿಲ್ಲ ಎಂದು ವಾಸವಿ ಅಡ್ವೆಂಚರ್ ಕ್ಲಬ್ ನ ಕಾರ್ಯದರ್ಶಿ ಎಸ್ ಕೆ ಶೇಷಾಚಲ ರವರು ತಿಳಿಸಿದರು

ಅವರು ಶಿವಮೊಗ್ಗ ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕ ಹಾಗೂ ವಾಸವಿ ಅಡ್ವೆಂಚರ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ನಗರದ ಗುಡ್ಡೆ ಮರಡಿ ಗುಡ್ಡದಲ್ಲಿ ರಾಕ್ ಕ್ಲೈಂಬಿಗ್ ಮಾಡುವ ಸಾಹಸ ಕಾರ್ಯಕ್ರಮವನ್ನು ತಾವೇ ಬಂಡೆ ಇಳಿಯುವ ಮೂಲಕ ಉದ್ಘಾಟಿಸ ಮಾತನಾಡುತ್ತ ಇವತ್ತು ನನ್ನ ಅನುಭವ ಮತ್ತು ನಮ್ಮ ಮಕ್ಕಳ ಅನುಭವ ಇಂತಹ ಸಾಹಸ ಚಟುವಟಿಕೆಗಳು ಮನುಷ್ಯನ ದೈನಂದಿಕ ಜೀವನಕ್ಕೆ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮೂಡಿಸುತ್ತದೆ ಎಂದರು.

ಪ್ರವಚನಗಳು ಅದೊಂದು ನಿತ್ಯ ಒಂದು ಪರಿಪಾಠ ಆದರೆ ನದಿಯಲ್ಲಿ ಹೋಗುವುದು, ಟ್ರಕಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮ ಆರೋಗ್ಯ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ ಎಂದರು.

Youth Hostels Association of India ಈ ನಿಟ್ಟಿನಲ್ಲಿ ವಾಸವಿ ಪಬ್ಲಿಕ್ ಶಾಲೆ ಈ ಪ್ರಯತ್ನದಲ್ಲಿ ಸದಾ ಮುಂದಿದೆ ಅನೇಕ ಟ್ರಕ್ಕಿಂಗ್ ಗಳು ತುಂಗಾ ನದಿಯಲ್ಲು ಬೋಟ್ ಮುಲಕ ಸ್ವಾತಂತ್ರ್ಯ ದಿನಾಚರಣೆಯ ಅಚರಣೆ, ವಿಶೇಷವಾಗಿ ಹಿಮಾಲಯ ಚಾರಣ ನಡೆಸಿ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವನೆ ಮೂಡಿಸುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಕಾರ್ಯಾಧ್ಯಕ್ಷರಾದ ಎಸ್.ಎಸ್.ವಾಗೇಶ್,
ಸಾಹಸ ಮತ್ತು ಸಂಸ್ಕೃತ ಅಕಾಡೆಮಿ ತರಬೇತುದಾರರ ಪಾಟೀಲ್ , ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಮತ್ತೂರಿನ ಶ್ರೀನಿಧಿ, ವಾಸವಿ ಅಡ್ವೆಂಚರ್ ಕ್ಲಬ್ಬಿನ ಪದಾಧಿಕಾರಿಗಳಾದ ಹಾಲಪ್ಪ, ಶ್ಯಾಮ್ ಸುಂದರ್, ಸ್ವರೂಪ್ ಮತ್ತು ಅಕಾಡೆಮಿ ಸದಸ್ಯರು ಹಾಗೂ ವಾಸವಿ ಶಾಲೆಯ ಪ್ರಾಂಶುಪಾಲ ಮನುಬಿಸೆ, ಗುಡ್ಡೆ ಮರಡಿ ದೇವಾಲಯದ ಕಾರ್ಯದರ್ಶಿ ಸತೀಶ್ ಪಟೇಲ್ ಹಾಗೂ ವಾಸವಿ ಶಾಲೆಯ ಶಿಕ್ಷಕರು ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದ್ದರು.

Rotary Shimoga Central ಕೆಟ್ಟದರ ಮೇಲೆ ಒಳ್ಳೆಯದರ ವಿಜಯೋತ್ಸವವೇ ಹೋಳಿಹಬ್ಬ- ಕಿರಣ್ ಕುಮಾರ್

0

Rotary Shimoga Central ರೋಟರಿ ಶಿವಮೊಗ್ಗ ಸೆಂಟ್ರಲ್ ಮತ್ತು ಆನ್ಸ್ ಕ್ಲಬ್ ವತಿಯಿಂದ ಭಾನುವಾರ ಹೋಳಿ ಹಬ್ಬ ಆಚರಿಸಲಾಯಿತು. ಕ್ಲಬ್ ಸದಸ್ಯರು ಕುಟುಂಬಸಮೇತ ಆಗಮಿಸಿ ಹೋಳಿ ಆಚರಿಸಿ ಸಂಭ್ರಮಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಹೋಳಿ ಹಬ್ಬವು ಬಣ್ಣಗಳ ಹಬ್ಬ, ಹೋಳಿ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದರ ವಿಜಯೋತ್ಸವ ಆಚರಣೆ ಎಂದು ನಂಬಲಾಗಿದೆ. ಇತ್ತೀಚೆಗೆ ಹೋಳಿ ಹಬ್ಬವು ಜಾಗತಿಕ ಹಬ್ಬವಾಗುತ್ತಿದೆ. ವಿದೇಶಗಳಲ್ಲೂ ಹಬ್ಬದ ಆಚರಣೆ ನಡೆಯುತ್ತಿದೆ. ಬಣ್ಣದ ಹಬ್ಬ ಎಂದರೆ ಕುಟುಂಬ ಮತ್ತು ಸ್ನೇಹಿತರೊಡನೆ ಸೇರಿ ಉತ್ತಮ ಸಮಯ ಕಳೆಯುವುದು. ಹೋಳಿ ಹಬ್ಬವು ಜನರನ್ನು ಒಗ್ಗೂಡಿಸುತ್ತದೆ ಮತ್ತು ಸಾಮರಸ್ಯ, ಪ್ರೀತಿ, ಸಂತೋಷ ಹರಡುತ್ತದೆ. ಕಾರ್ಯಕ್ರಮ ಆಯೋಜನೆ ಮಾಡಿದಂತ ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್ ತಂಡಕ್ಕೆ ಅಭಿನಂದನೆ ಎಂದರು.
ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್ ಮಾತನಾಡಿ, ಹೋಳಿ ಹಬ್ಬ ಆಚರಿಸುತ್ತಿರುವುದು ತುಂಬಾ ಸಂತಸ ತಂದಿದೆ. ಹಬ್ಬವು ಪರಸ್ಪರ ಪ್ರೀತಿ ಮತ್ತು ಹೊಂದಾಣಿಕೆ ತರುತ್ತದೆ. ಮಕ್ಕಳು ಸಹ ತುಂಬಾ ಖುಷಿಯಿಂದ ಬಣ್ಣದ ಆಟ ಆಡುತ್ತಾರೆ ಎಂದು ತಿಳಿಸಿದರು.

Rotary Shimoga Central ಹೋಳಿ ಹಬ್ಬದಲ್ಲಿ ಮಾಜಿ ಸಹಾಯಕ ಗವರ್ನರ್ ರವಿ ಕೂಟೋಜಿ, ರಮೇಶ್.ಎನ್, ಬಸವರಾಜ್.ಬಿ, ಜಯಶೀಲ ಶೆಟ್ಟಿ, ವಿರುಪಾಕ್ಷ, ಮೋಹನ್, ಧರ್ಮೇಂದ್ರ ಸಿಂಗ್, ಚಂದ್ರು ಜೆಪಿ, ಚಿದಾನಂದಯ್ಯ, ಸ್ಪಂದನ ಹೊಳ್ಳ, ಜ್ಯೋತಿ ಶ್ರೀ ರಾಮ್, ರಾಜಶ್ರೀ, ದೀಪ ಶೆಟ್ಟಿ, ಲಕ್ಷ್ಮೀ ಕಿರಣ್, ಶುಭಾ ಚಿದಾನಂದಯ್ಯ, ಸವಿತಾ, ಹಾಗೂ ಕ್ಲಬ್ಬಿನ ಎಲ್ಲ ಸದಸ್ಯರು ಭಾಗವಹಿಸಿದ್ದರು.

Department of School Education & Literacy  ಬಾರೆಹಳ್ಳ ₹3 ಕೋಟಿಯ ತುಂಗಾ ಮೇಲ್ದಂಡೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ- ಮಧು ಬಂಗಾರಪ್ಪ

0

Department of School Education & Literacy  ಹಲವು ದಶಕಗಳಿಂದ ಅಭಿವೃದ್ಧಿ ಕಾಣದೇ ಉಳಿದಿದ್ದ ಹಾಗೂ ಶರಾವತಿ ಮುಳುಗಡೆ ಸಂತ್ರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಪುರದಾಳು ಗ್ರಾಮದ ಬಾರೇಹಳ್ಳ ಜಲಾಶಯದ ಕೋಡಿ ದುರಸ್ತಿ ಮೂರು ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು. ಬಾರೇಹಳ್ಳ ಜಲಾಶಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಯ ವಿವರ ನೀಡಿದರು.

ಇದರೊಂದಿಗೆ ಹಾಯ್‌ಹೊಳೆಯ ಜಲಾಶಯ ಕಾಮಗಾರಿಯನ್ನು ಮೂರು ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ದೇವರಾಜ ಅರಸುರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಈ ಜಲಾಶಯಕ್ಕೆ ಕಾಮಗಾರಿ ನಡೆದಿತ್ತು. ಆ ಅವಧಿಯಿಂದ ಹಲವು ದಶಕಗಳು ಕಳೆದಿದ್ದರೂ ಜಲಾಶಯದ ನಿರ್ವಹಣೆ ಅಥವಾ ಮುಂದುವರೆದ ಕಾಮಗಾರಿ ನಡೆಯದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದ ಅವರು, ತುಂಗಾ ಮೇಲ್ದಂಡೆ ಯೋಜನಾ ಶಾಖೆಯಿಂದ 3 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಆರು ತಿಂಗಳ ಅವಧಿಯೊಳಗಾಗಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ.

ಮಾಡುವ ಕಾಮಗಾರಿಯೂ ಶಾಶ್ವತವಾಗಿರುವಂತೆ, ಗುಣಮಟ್ಟದ್ದಾಗಿರುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಕಳೆದ ಸಾಲಿನಲ್ಲಿಯೇ ಕೈಗೊಳ್ಳಬೇಕಾಗಿದ್ದ ಕಾಮಗಾರಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿ ಆರಂಭಗೊಳ್ಳುತ್ತಿದೆ. ಈ ಪ್ರದೇಶದ ಜನರ ಕೃಷಿ ಚಟುವಟಿಕೆಗಳಿಗೆ ಅತ್ಯವಶ್ಯಕ ಎಂಬುದನ್ನು ಅರಿತು ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಭಾಗದ ಜನರಿಗೆ ತುರ್ತು ಅಗತ್ಯವೆನಿಸಬಹುದಾದ ಕೆಲಸ-ಕಾರ್ಯಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಅವುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.

ಈ ಬಾಗದ ಬಹುದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಶರಾವತಿ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಶೀಘ್ರದಲ್ಲಿ ನಿರೀಕ್ಷಿತ ಫಲಿತಾಂಶ ಬರುವ ನಿರೀಕ್ಷೆಯಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಅದರ ನಿರ್ವಹಣೆಗಾಗಿ ಸಮರ್ಥ ವಕೀಲರೊಬ್ಬರನ್ನು ಸರ್ಕಾರದ ಪರವಾಗಿ ವಾದ ಮಂಡಿಸಲು ನೇಮಿಸಲಾಗಿದೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ ಸಹ ಮಾನವೀಯ ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆಯನ್ನು ಶಾಶ್ವತ ಪರಿಹಾರಗೊಳಿಸಲು ಯತ್ನಿಸಲಾಗಿದೆ.

ಸದ್ಯದಲ್ಲಿ ಈ ಭಾಗದ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಬಂದಲ್ಲಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಅವರು ಸೂಚಿಸಿದರು.

ಈ ವಿಷಯದಲ್ಲಿ ದೊರೆಯುವ ನ್ಯಾಯಾಲಯದ ತೀರ್ಪಿನಂತೆ ಚಕ್ರಾ, ವರಾಹಿ ಸೇರಿದಂತೆ ವಿವಿಧ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿದ್ದು, ಸಂತ್ರಸ್ತರೂ ಕೂಡ ಸರ್ಕಾರದೊಂದಿಗೆ ತಾಳ್ಮೆಯಿಂದ ವ್ಯವಹರಿಸುವಂತೆ ಮನವಿ ಮಾಡಿದ ಅವರು, ಶೀಘ್ರದಲ್ಲಿ ಸಂತ್ರಸ್ಥರೆಲ್ಲರಿಗೂ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು.

ಸ್ಥಳೀಯ ಜನರ ಅಪೇಕ್ಷೆಯಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇಲ್ಲಿನ ನಿವಾಸಿಗಳು ದೇವಸ್ಥಾನ, ಸಮುದಾಯಭವನಗಳ ಎಂದು ನಿರ್ಮಾಣಕ್ಕೆ ಸರ್ಕಾರದಿಂದ ಹಣ ಪಡೆಯುವ ಬದಲು ಇಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡುವಂತೆ, ಆ ಮೂಲಕ ಒಂದು ಸಮುದಾಯ ಸರ್ವಾಂಗೀಣ ವಿಕಾಸಕ್ಕೆ ಮುನ್ನುಡಿ ಬರೆಯುವಂತೆ ಅವರು ಸೂಚಿಸಿದರು.

ಕಳೆದ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ಅನುಷ್ಟಾನಕ್ಕೆ ತರಲಾಗಿದೆ. ಸರ್ಕಾರದ ಮುಂದಿನ ಅವಧಿಯಲ್ಲಿ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು

ವಿಶೇಷವಾಗಿ ಶಿಕ್ಷಣ ಇಲಾಖೆಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಪೋಷಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳುಹಿಸಿಕೊಡಬೇಕಲ್ಲದೇ ಅವರನ್ನು ಶಿಕ್ಷಣದ ಮುಖ್ಯವಾಹಿನಿಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು ಮುಂದಿನ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ ಅವರು ಮಾತನಾಡಿ, ರಾಜ್ಯದ ಅನೇಕ ಭಾಗಗಳಿಗೆ ಬೆಳಕು ನೀಡುವ ಯೋಜನೆಗಾಗಿ ತಮ್ಮೆಲ್ಲವನ್ನು ಕಳೆದುಕೊಂಡು ಕತ್ತಲಲ್ಲಿರುವ ಸಂತ್ರಸ್ಥರ ನೆರವಿಗೆ ಅಂದಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್.ಬಂಗಾರಪ್ಪನವರು ಹಾಗೂ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ನಿರಂತರವಾಗಿ ಶ್ರಮಿಸಿರುವುದನ್ನು ನೆನಪಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬೋವಿ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ರವಿಕುಮಾರ್‌, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್‌, ಗ್ರಾ.ಪಂ.ಅ‍ಧ್ಯಕ್ಷೆ ಶ್ರೀಮತಿ ನಾಗವೇಣಿ, ಗ್ರಾ.ಫಂ. ಸದಸ್ಯರು ಸೇರಿದಂತೆ ಹಲವು ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

Ministry of Youth Affairs and Sports ಯಶಸ್ವಿಯಾಗಿ‌ ಮುಕ್ತಾಯಗೊಂಡ 2024-25 ಸಾಲಿನ ಜಿಲ್ಲಾ‌ಮಟ್ಟದ ಕ್ರೀಡಾಕೂಟ

0

Ministry of Youth Affairs and Sports ಭಾರತ ಸರ್ಕಾರ ,ಯುವ ವ್ಯವವಾರ ಮತ್ತು ಕ್ರೀಡಾ ಸಚಿವಾಲಯ ಶಿವಮೊಗ್ಗ ,ಮೈ ಭಾರತ್ ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಹಾಗೂ ಇನ್ನೋವೇಟರ್ ಯೂಥ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2024-25 ದಿನಾಂಕ 23.3.2025 ರಂದು ನೆಹರು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗುಂಪು ಸ್ಪರ್ಧೆಯಲ್ಲಿ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಖೋ ಖೋ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಗುಂಡು ಎಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆ ಹಾಗೂ ಬ್ಯಾಟ್ಮಿಟನ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು.

ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದಲ್ಲಿ ಭಾಗವಸಿದ್ದರು. ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಜನಪ್ರಿಯ ಶಾಸಕರಾದ ಚನ್ನಬಸಪ್ಪ ರವರು ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

Ministry of Youth Affairs and Sports ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎ ಎಸ್ ಪಿ ಅನಿಲ್ ಕುಮಾರ್ ,ಎಸ್ ಭೂಮರೆಡ್ಡಿ ಹಾಗೂ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್ ಕೆ ಟಿ ಕೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯಕ್ ,ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಇಮ್ರಾನ್, ಇನ್ನೋವೇಟರ್ ಯೂತ್ ಕ್ಲಬ್ ಶೇಕ್ ಅಸೇನ್ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ಸದಸ್ಯರಾದ ಕಿರಣ ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.

ವಿಜೇತರಿಗೆ ಪ್ರಮಾಣ ಪತ್ರ ,ಪಾರಿತೋಷಿಕ ಕೊಡಲಾಯಿತು.

Bhadravati Police ವ್ಯಕ್ತಿ ನಾಪತ್ತೆ. ಭದ್ರಾವತಿ ಪೊಲೀಸ್‌ 70 ಠಾಣೆಯಿಂದ ಮಾಹಿತಿ ಪ್ರಕಟಣೆ

0

Bhadravati Police ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 30 ವರ್ಷ ವಯಸ್ಸಿನ ಶಶಿಕುಮಾರ್ ಎಂಬವವರು ಮಾ.11 ರ ಸಂಜೆ 6.30 ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ಸು ಬರದೇ, ಕಾಣೆಯಾಗಿರುತ್ತಾರೆ.
ಕಾಣೆಯಾದ ಶಶಿಕುಮಾರ್ ಸುಮಾರು 6 ಅಡಿ ಎತ್ತರ, ಗೋದಿ ಮೈಬಣ್ಣ ,ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಎದೆ ಮಧ್ಯದಲ್ಲಿ ಜಿಂಕೆ ಪ್ರಾಣಿ ಅಚ್ಚೆ ಗುರುತು ಇರುತ್ತದೆ. ಕಾಣೆಯಾದ ವೇಳೆ ಸಿಮೆಂಟ್ ಬಣ್ಣದ ನೈಟ್ ಪ್ಯಾಂಟ್ ,ಪಾಚಿ ಹಸಿರು ಬಣ್ಣದಟೀ ಶರ್ಟು ಧರಿಸಿರುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.