Friday, March 6, 2026
Friday, March 6, 2026
Home Blog Page 360

Department of Youth Empowerment and Sports ಏಪ್ರಿಲ್ 2 ರಿಂದ ಈಜು, ಸ್ಕೇಟಿಂಗ್ & ಲಾನ್ ಟೆನ್ನಿಸ್ ಕ್ರೀಡಾ ತರಬೇತಿ ಶಿಬಿರ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಕ್ರೀಡಾ ಸಂಕೀರ್ಣದಲ್ಲಿ ಎರಡು ಹಂತದಲ್ಲಿ ಮಕ್ಕಳಿಗಾಗಿ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌ಅವರು ಹೇಳಿದರು.
ಅವರು ಇಂದು ಕ್ರೀಡಾಸಂಕೀರ್ಣದ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಬೇಸಿಗೆ ಶಿಬಿರದ ಕುರಿತು ಮಾಹಿತಿ ನೀಡಿದರು. ಮೊದಲ ಹಂತದ ಶಿಬಿರವು ಏಪ್ರಿಲ್‌02ರಿಂದ 25.04.2025ರವರೆಗೆ ಹಾಗೂ ಎರಡನೇ ಹಂತದಲ್ಲಿ ಮೇ 02ರಿಂದ 25.04.2025ರವರೆಗೆ 21ದಿನಗಳ ಬೇಸಿಗೆ ಶಿಬಿರವು ನಡೆಯಲಿದೆ.
ಈ ಬೇಸಿಗೆ ಶಿಬಿರದಲ್ಲಿ ವಿಶೇಷವಾಗಿ ಈಜು, ಸ್ಕೇಟಿಂಗ್‌ಮತ್ತು ಲಾನ್‌ಟೆನ್ನಿಸ್‌ಕ್ರೀಡೆಗಳಲ್ಲಿ ನುರಿತ ಕ್ರೀಡಾ ತರಬೇತುದಾರರಿಂದ ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಪ್ರವೇಶ ಶುಲ್ಕ ರೂ.2250/- ನಿಗಧಿಪಡಿಸಲಾಗಿದೆ. ವಿಶೇಷವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು 60ವರ್ಷ ಮೇಲ್ಪಟ್ಟವರಿಗೆ ಪಾವತಿಸುವ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಪ್ರಸಕ್ತ ಸಾಲಿನ ಏಪ್ರಿಲ್‌ಮಾಹೆಯಲ್ಲಿ ಖಾಸಗಿ ತರಬೇತುದಾರರ ಸಹಯೋಗದೊಂದಿಗೆ ಕ್ರಿಕೇಟ್‌ತರಬೇತಿ ಶಿಬಿರವನ್ನು ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಅಲ್ಲದೇ ಅನೇಕ ಕ್ರೀಡೆಗಳಲ್ಲಿ ಆಸಕ್ತ ಕ್ರೀಡಾಪಟುಗಳಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲು ಯತ್ನಿಸಲಾಗಿದೆ ಎಂದರು.
ನೆಹರೂ ಕ್ರೀಡಾಂಗಣ ಮತ್ತು ಕ್ರೀಡಾಂಗಣ ಸಮುಚ್ಚಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ವಿಸ್ತೃತವಾದ ಕ್ರಿಯಾಯೋಜನೆಯನ್ನು ರೂಪಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದವರು ನುಡಿದರು.
Department of Youth Empowerment and Sports ಖೇಲೋ ಇಂಡಿಯಾ ಯೋಜನೆಯಡಿ ನಗರದ ಹೊರವಲಯದಲ್ಲಿ ಸುಸಜ್ಜಿತವಾದ ಹಾಕಿ ಕ್ರೀಡಾಂಗಣ ಹಾಗೂ ಇತರೆ ಹಲವು ಕ್ರೀಡಾಂಗಣಗಳನ್ನು ಸ್ಥಳೀಯ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಅನುದಾನ ಬಿಡುಗಡೆಯಾಗುವ ಆಶಾಭಾವನೆ ಇದೆ ಎಂದರು.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಕ್ರೀಡಾಸಕ್ತರು ಮಾಹಿತಿಗಾಗಿ ಮೊ.9743820293, 6362200751(ಈಜು), 7760921936(ಸ್ಕೇಟಿಂಗ್), 8374335635(ಟೆನ್ನಿಸ್)ಇವರನ್ನು ಸಂಪರ್ಕಿಸುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರರಾದ ಸಚಿನ್‌, ಸಂಗಮೇಶ್‌, ವಿಶ್ವಾಸ್‌ಮತ್ತು ಮಂಜುನಾಥ್‌ಉಪಸ್ಥಿತರಿದ್ದರು.

Renukacharya Jayanti ಸೊರಬದ ದುಗ್ಲಿಯಲ್ಲಿ ರೇಣುಕಾಚಾರ್ಯ ಯುಗಮಾನೋತ್ಸವದ ಪ್ರಯುಕ್ತ‌ ವಿವಿಧ ಕಾರ್ಯಕ್ರಮಗಳು

0

Renukacharya Jayanti ಸೊರಬ ತಾಲೂಕಿನ ದುಗ್ಲಿ ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ಧೇಶ್ವರ ಸುಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮನೋತ್ಸವದ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಮುರುಘೇಂದ್ರ ಸ್ವಾಮಿಗಳವರ ೬ನೇ ವರ್ಷದ ಪುಣ್ಯಾರಾಧನೆ. ಶ್ರೀಮಠದ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಪೂಜ್ಯರ ಗದ್ದುಗೆ-ಸಭಾಭವನ-ರಥದ ಮನೆ ಉದ್ಘಾಟನೆ ಜರುಗುವುದು ಎಂದು ಶ್ರೀ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಮಠದಲ್ಲಿ ಮಾ.೩೦ರಿಂದ ಏ.೬ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.೩೦ರಂದು ಬೆಳಗ್ಗೆ ಶ್ರೀ ಮಠದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ ಗದ್ದುಗೆ ಮೇಲೆ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ. ಮಾ. ೩೧ರಂದು ಬೆಳಗ್ಗೆ ಶ್ರೀ ರೇವಣ ಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ, ಬೆಳಗ್ಗೆ ೯ಕ್ಕೆ ಕಾಳಸರ್ಪದೋಷ ನಿವಾರಣೆಗಾಗಿ ಸರ್ಪಶಾಂತಿ ಹೋಮ, ಸಂಜೆ ರಥೋತ್ಸವ ಹಾಗೂ ಮಹಾ ಮೃತ್ಯುಂಜಯ ಯಾಗ ಶಾಲೆ ಪ್ರವೇಶ ಮತ್ತು ಶಾಂತಿ ಪೂಜೆ ನಡೆಯಲಿದೆ ನಂತರ ರಾತ್ರಿ ೯ಕ್ಕೆ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.
ಏ.೧ರಂದು ಒಂದು ಲಕ್ಷ ಮಹಾಮೃತ್ಯುಂಜಯ ಜಪಯಜ್ಞ ಸಂಜೆ ಜಾನಪದ ಜೋಗತಿ ನೃತ್ಯ ಹಾಸ್ಯ ಕಾರ್ಯಕ್ರಮ, ಏ. ೨ರಂದು ಮಹಾಮೃತ್ಯುಂಜಯ ಜಪಯಜ್ಞ ಮತ್ತು ಧರ್ಮ ಸಮಾರಂಭ, ರಾತ್ರಿ ಗ್ರೂಪ್ ಡ್ಯಾನ್ಸ್, ಏ.೩ರಂದು ಧರ್ಮ ಸಂಸ್ಕೃತಿ ಕುರಿತು ಜಿಂಚನ ಮಂಥನ ಸಮಾರಂಭ, ರಾತ್ರಿ ಹಾಸ್ಯ ಸಂಭ್ರಮ, ಏ.೪ರಂದು ಶಿವಾದ್ವೇತ ಸಿದ್ಧಾಂತ ವಿಚಾರ ಚಿಂತನ ಸಮಾರಂಭ, ರಾತ್ರಿ ಜಾನಪದ ಸಂಭ್ರಮ, ೫ರಂದು ಸಮಾಜೋಸಾಂಸ್ಕೃತಿಕ ಭಾವೈಕ್ಯತಾ ಸಮಾರಂಭ, ರಾತ್ರಿ ೯ಕ್ಕೆ ಶಿವಮೊಗ್ಗ ಮತ್ತು ಕಾರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದರು.
Renukacharya Jayanti ಏ.೬ರಂದು ಬೆಳಗ್ಗೆ ೧೧ಕ್ಕೆ ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿಯವರ ದ್ವಾದಶ ಪಟ್ಟಾಧೀಕಾರ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ಪ್ರಸನ್ನ ರೇಣಿಕಾ ಡಾ. ವೀರಸೋಮೆಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ನಡುವೆ ಏ.೫ರಂದು ಉಚಿತ ಆರೋಗ್ಯ ತಪಾಸಣೆ, ೬ರಂದು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಅದ್ದೂರಿ ಸಂಗೀತ ಸೌರಭ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ವಿವಿಧ ಪಕ್ಷಗಳ ಮುಖಂಡರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ೮೭೬೨೦೮೭೪೪೬ ಅಥವಾ ೭೦೧೯೧೦೯೪೮೭ ಮತ್ತು ೮೩೧೦೮೫೯೨೦೦ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಎಚ್.ಇ. ಜ್ಞಾನೇಶ್, ವಿಜೇಂದ್ರಗೌಡ ತಲಗುಂದ, ಗುರುಪ್ರಸನ್ನಗೌಡ ಬಾಸೂರು, ಪ್ರಕಾಶ್ ಅಗಸನಹಳ್ಳಿ, ಚಂದ್ರಪ್ಪ ಗಂಗೊಳ್ಳಿ, ಜಗದೀಶಗೌಡ ತ್ಯಾವಗೋಡು, ಗಂಗಾಧರಗೌಡ ಗುಡುವಿ, ವಿಶ್ವನಾಥ ಗೌಡ, ಸಂತೀಶ್ ಗುಂಜನೂರು, ಚಂದ್ರಶೇಖರ ನಿಜಗುಣ, ಗಂಗಾಧರ, ನಾಗರಾಜ ಗುತ್ತಿ, ಸುರೇಂದ್ರಗೌಡ, ಡಿ. ಶಿವಯೋಗಿ, ಸಂದೀಪ ಯಲವಳ್ಳಿ, ವಿನಯ ಮಾವಲಿ, ರೇಣುಕಮ್ಮ ಗೌಳಿ, ಗುರುನಾಥ ಗೌಡ ಕಾಸರಗುಪ್ಪೆ ಸೇರಿದಂತೆ ಇತರರಿದ್ದರು.

MESCOM ಜೋಗ ಮೆಸ್ಕಾಂ ಉಪಕಛೇರಿಯಲ್ಲಿ ಮಾರ್ಚ್ 27 ರಂದು‌ ಜನ ಸಂಪರ್ಕ‌ ಸಭೆ

0

MESCOM ಮೆಸ್ಕಾಂ ಜೋಗ ಉಪವಿಭಾಗ ಕಛೇರಿಯಲ್ಲಿ ಮಾ. 27 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ, ಈ ಸಭೆಯಲ್ಲಿಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289520.

Shivamogga Police ಅಪರಿಚಿತ ವ್ಯಕ್ತಿ‌ಯ ಶವ‌ ಪತ್ತೆ. ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Shivamogga Police ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಫ್ಲಾಟ್ ಫಾರಂ ಮೇಲೆ 35-40 ವಯಸ್ಸಿನ ಗಂಡಸ್ಸು ಪ್ರಜ್ಞೆಯಿಲ್ಲದೆ ಮಲಗಿದ್ದು, ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿಯ ಹೆಸರು, ವಿಳಾಸ ಇರುವುದಿಲ್ಲ.
ಮೃತ ವ್ಯಕ್ತಿಯು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕೈಯ ಮುಂಗೈನ ಮಣಿಕಟ್ಟಿನ ಮುಂಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಹಾವಿನ ಚಿತ್ರವಿರುವ ಹಚ್ಚೆ ಗುರುತು ಮತ್ತು ಒಳಭಾಗದಲ್ಲಿ ನೇತ್ರಾವತಿ ಮತ್ತು ಸುನಂದಬಾಯಿ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ತಿಳಿನೀಲಿ, ಪಾಚಿ ಹಾಗೂ ಬಿಳಿ ಬಣ್ಣದ ಚೌಕಳಿಯ ತುಂಬು ತೋಳಿನ ಶರ್ಟ್ ನೀಲಿ ಬಣ್ಣದ ಬಿಳಿ ನಕ್ಷತ್ರ ಚುಕ್ಕಿಯಿರುವ ಬರ್ಮಡಾ ಧರಿಸಿರುತ್ತಾನೆ.
Shivamogga Police ಈ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414/ 9916882544 ನ್ನು ಸಂಪರ್ಕಿಸುವುದು.

Department of School Education ಮಾರ್ಚ್ 27 & 28 ರಂದು ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ‌ ಕ್ರೀಡಾಕೂಟ

0

Department of School Education ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ದೈಹಿಕ ಶಿಕ್ಷಣಾಧಿಕಾರಿಗಳ ಕ್ರೀಡಾಕೂಟವನ್ನು ಮಾ. 27 ಮತ್ತು 28 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದೆ.
ಈ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ/ಅನುದಾನಿತ/ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ದೈಹಿಕ ಶಿಕ್ಷಣಾಧಿಕಾರಿಗಳು ಭಾಗವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of School Education ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್ ಎಂ. -9448964356 ಇವರನ್ನು ಸಂಪರ್ಕಿಸುವುದು.

MVS Shetty Cricket Academy ಕ್ರಿಕೆಟ್ ಆಡಲು ಆಸಕ್ತಿಯುಳ್ಳವರೆ.! ನಿಮಗಿದೋ ಏಪ್ರಿಲ್ 4 ರಿಂದ ಬೇಸಿಗೆ ಕ್ರಿಕೆಟ್ ಶಿಬಿರ

0

MVS Shetty Cricket Academy ಶಿವಮೊಗ್ಗ ನಗರದ ಎಂವಿಎಸ್ ಶೆಟ್ಟಿ ಕ್ರಿಕೆಟ್ ಅಕಾಡೆಮಿಯಿಂದ ಏ. 4 ರಿಂದ ಮೇ 03ರವರೆಗೆ ಪ್ರತಿದಿನ ಬೆಳಿಗ್ಗೆ 6:30 ರಿಂದ 8;30 ರವರೆಗೆ ಒಂದು ತಿಂಗಳ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಕುವೆಂಪು ರಂಗಮಂದಿರ ಹಿಂಬಾಗದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ನುರಿತ ತರಬೇತುದಾರರಿಂದ ನಡೆಯುವ ಈ ಶಿಬಿರದಲ್ಲಿ 8 ರಿಂದ 17 ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಬಹುದಾಗಿದೆ. ತರಬೇತಿ ಸಮಯದಲ್ಲಿ ಬೇಕಾಗುವ ಎಲ್ಲಾ ಕ್ರಿಕೆಟ್ ಸಾಮಗ್ರಿಗಳನ್ನು ಕಲ್ಪಿಸಲಾಗುವುದು. ವಿಶೇಷವೆಂದರೆ ಸ್ಪೀಡ್ ಮತ್ತು ಮೀಡಿಯಂ ಬೌಲಿಂಗ್ ಮಿಷನ್ ಮೂಲಕ ಕೂಡ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
MVS Shetty Cricket Academy ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಕ್ರಿಕೆಟ್ ಆಟಗಾರರಾಗಿ ಹೊರ ಹೊಮ್ಮಲು ಇದೊಂದು ಸದಾವಕಾಶ ವಾಗಿದೆ. ಅರ್ಜಿಗಳನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ವಿ. ಸ್ವಾಮಿ ಕುಮಾರ್ ಮೊ. 8884561987, ಲತೇಶ್ ಮೊ. 7025621914ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Eshwar Khandre  ಖಾಲಿ ನೀರಿನ ಬಾಟಲಿ‌ ಎಸೆಯ ಬೇಡಿ. ಮಳಿಗೆಗಳಲ್ಲಿ ಮರು ಖರೀದಿಗೆ ಸರ್ಕಾರದ ಸೂಚನೆ- ಸಚಿವ ಈಶ್ವರ ಖಂಡ್ರೆ

0


Eshwar Khandre  ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಅಧಿಕಾರಿಗಳಿಗೆ ಸಚಿವ ಈಶ್ವತ ಖಂಡ್ರೆ ಸೂಚಿಸಿದ್ದಾರೆ..

ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

CM Siddharamaiah ಹಾಲಿನ ದರ ಏರಿಕೆ‌ ಚರ್ಚೆ, ಹೆಚ್ಚಳದ ಹಣ ಸಂಪೂರ್ಣ ರೈತರಿಗೇ ಸೇರಬೇಕು- ಸಿದ್ಧರಾಮಯ್ಯ

0

CM Siddharamaiah ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಒಕ್ಕೂಟದ ಬೇಡಿಕೆಗಳನ್ನು ಆಲಿಸಿ, ಹಾಲಿನ ಬೆಲೆಯೇರಿಕೆಯ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ ಆದರೆ ದರ ಹೆಚ್ಚಳ ಮಾಡಿದರೆ ಮೊತ್ತವು ಸಂಪೂರ್ಣವಾಗಿ ರೈತರಿಗೆ ಮಾತ್ರವೇ ವರ್ಗಾವಣೆಯಾಗಬೇಕು ಎಂಬುದು ಸರ್ಕಾರದ ದೃಢ ನಿಲುವು ಎಂದು ಸ್ಪಷ್ಟಪಡಿಸಿದರು.

ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ.

ಮುಂದಿನ ಮೂರು ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚವನ್ನು 2.5% ಕಡ್ಡಾಯವಾಗಿ ಇಳಿಸಬೇಕು. ಅಲ್ಲಿಂದ ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಶೇ.2ಕ್ಕಿಂತ ಕೆಳಗೆ ಇಳಿಸಲೇಬೇಕು.

CM Siddharamaiah ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ ಎನ್ನುವುದು ನಿಜ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ನಮ್ಮ ಸರ್ಕಾರದ ನಿಲುವಾಗಿದೆ ಎಂದು ಸಭೆಯಲ್ಲಿ ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಮ್ಮ x ಖಾತೆಯಲ್ಲಿ
ಮಾಹಿಯಿ ಹಂಚಿಕೊಂಡಿದ್ದಾರೆ

S. N. Channabasappa ಶಿವಮೊಗ್ಗ ವಾರ್ಡ್ ನಂ 2 ಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ ಚೆನ್ನಿ

0

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ವಾರ್ಡ್ ನಂ. 2ರ ಅಶ್ವಥ್ ನಗರ ಮತ್ತು ಎಲ್.ಬಿ.ಎಸ್. ನಗರ ಪ್ರದೇಶಗಳಿಗೆ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಮಳೆಗಾಲದಲ್ಲಿ ಎದುರಿಸುತ್ತಿರುವ ಯುಜಿಡಿ ಸಮಸ್ಯೆ ಮತ್ತು ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುವ ತೊಂದರೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದರು.

S. N. Channabasappa ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

District Consumer Disputes Redressal Commission ವಿಮಾ ಕಂಪನಿ ವಿರುದ್ಧ ಸೇವಾ ನ್ಯೂನತೆ ಕೇಸ್, ದೂರುದಾರರ ಪರ ತೀರ್ಪು

0

District Consumer Disputes Redressal Commission ದೂರುದಾರರಾದ ಯಶೋಧಮ್ಮ ಇವರು ಎದುರುದಾರ ಆಥರೈಸ್ಡ್ ಸಿಗ್ನೇಟರಿ, ಯೂನಿವರ್ಸಲ್ ಸೋಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿ, ಮುಂಬಯಿ ಮಹಾರಾಷ್ಟ್ರ ಇವರ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಯಶೋಧಮ್ಮನ ಪತಿಯು ಹುಂಚ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರುಗಂಟಿ ಮತ್ತು ಬೀದಿ ದೀಪಗಳನ್ನು ಬದಲಿಸುವ ಕೆಲಸ ಮಾಡುತ್ತಿದ್ದು ಕರ್ನಾಟಕ ಬ್ಯಾಂಕ್ ಲಿ., ಹುಂಚ ಇಲ್ಲಿ ಪತಿಯ ಉಳಿತಾಯ ಖಾತೆಯೊಂದಿಗೆ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಇರುತ್ತದೆ. ಪತಿ ಬೀದಿ ದೀಪಗಳನ್ನು ಬದಲಿಸುವಾಗ ಕೆರೆಂಟ್ ತಗುಲಿ ಮರಣ ಹೊಂದಿದ್ದು ನಂತರ ಪಾಲಿಸಿ ಇರುವ ವಿಷಯ ತಿಳಿದು ಕರ್ನಾಟಕ ಬ್ಯಾಂಕ್‌ನ್ನು ಸಂಪರ್ಕಿಸಿದಾಗ ಅವರು ಎದುರುದಾರರಿಗೆ ವಿಷಯ ತಿಳಿಸಿರುತ್ತಾರೆ.

ನಂತರ ಎದುರುದಾರರು ಘಟನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತರಿಸಿಕೊಂಡು, ದೂರುದಾರರ ಪತಿಯು ಕೆಲಸದ ಸಮಯದಲ್ಲಿ ಸರಿಯಾದ ಸುರಕ್ಷಿತ ಕ್ರಮವನ್ನು ಅನುಸರಿಸಿರುವುದಿಲ್ಲ ಮತ್ತು ಬೀದಿ ದೀಪಗಳನ್ನು ಬದಲಿಸುವಾಗ ಕಬ್ಬಿಣದ ಏಣಿಯನ್ನು ಉಪಯೋಗಿಸಿದ ಕಾರಣ ಕರೆಂಟ್ ತಗುಲಿ ಮೃತಪಟ್ಟಿರುವುದರಿಂದ ಕ್ಲೇಮನ್ನು ತಿರಸ್ಕರಿಸುವುದಾಗಿ ತಿಳಿಸಿರುವ ಕಾರಣ ಯಶೋಧಮ್ಮ ಆಯೋಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

ದೂರು ದಾಖಲಾದ ನಂತರ ಆಯೋಗವು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು ಎದುರುದಾರರ ವಕೀಲರು ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಿ ದೂರುದಾರರ ಪತಿಯು ಕೆಲಸ ಮಾಡುವ ಹತ್ತಿರ 11 ಕೆ ವಿ ವಿದ್ಯುತ್ ವೈರ್ ಇರುವುದು ತಿಳಿದೂ ಸಹ ಕಬ್ಬಿಣದ ಏಣಿಯನ್ನು ಬಳಸಿ ಬಲ್ಬ್ಗಳನ್ನು ಬದಲಿಸುತ್ತಿದ್ದುದೇ ಘಟನೆಗೆ ಕಾರಣವೆಂದು ಮತ್ತು ಸರಿಯಾದ ಸುರಕ್ಷತಾ ಕ್ರಮವನ್ನು ಅನುಸರಿಸಿಲ್ಲವಾದ್ದರಿಂದ ಮತ್ತು ಸದರಿ ಘಟನೆಯು ಪಾಲಿಸಿ 5(ಎ) ರನ್ವಯ ‘ಇಂಟೆನ್ಶನಲ್ ಸೆಲ್ಫ್ ಇನ್‌ಪ್ಲಿಕ್ಟೆಡ್ ಇಂಜ್ಯುರಿ’ ಆಗಿರುವ ಕಾರಣ ಕ್ಲೇಮನ್ನು ತಿರಸ್ಕರಿಸುವುದಾಗಿ ಮತ್ತು ಇದರಲ್ಲಿ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ಅರ್ಜಿಯನ್ನು ವಜಾ ಮಾಡಲು ಕೋರಿರುತ್ತಾರೆ.

District Consumer Disputes Redressal Commission ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಕ್ಲೇಮನ್ನು ತಿರಸ್ಕರಿಸಲು ನೀಡಿರುವ ಷರತ್ತು ಮತ್ತು ನಿಬಂಧನೆಯ 5(ಎ) ಒಳಗೊಂಡ ಪಾಲಿಸಿಯನ್ನು ಆಯೋಗದ ಮುಂದೆ ಹಾಜರು ಮಾಡಿರುವುದಿಲ್ಲವಾದ್ದರಿಂದ ಮತ್ತು ಪ್ರಪೊಸಲ್ ಫಾರಂ ನಲ್ಲಿ ಈ ತರಹದ ಯಾವುದೇ ಷರತ್ತು ಸಹ ಕಂಡು ಬಂದಿಲ್ಲವಾದ್ದರಿಂದ ಎದುರುದಾರರು ಕ್ಲೇಮನ್ನು ತಿರಸ್ಕರಿಸಿರುವುದು ಸೇವಾ ನ್ಯೂನತೆಯಾಗಿರುವುದಾಗಿ ಪರಿಗಣಿಸಿ ದೂರುದಾರರ ದುರನ್ನು ಭಾಗಶಃ ಪುರಸ್ಕರಿಸಿ ದೂರುದಾರರಿಗೆ ಎದುರುದಾರರು ಕೆಬಿಎಲ್ ಸುರಕ್ಷಾ ಪಾಲಿಸಿಯಡಿಯಲ್ಲಿ ರೂ.10,00,000/- ಗಳನ್ನು ಶೇ.9 ರಂತೆ ಬಡ್ಡಿಯನ್ನು ಸೇರಿಸಿ ಕ್ಲೇಮನ್ನು ತಿರಸ್ಕರಿಸಿ ದಿನಾಂಕ : 09-02-2024 ರಿಂದ ಪೂರ್ತಿ ಹಣ ನೀಡುವವರೆಗೂ ಈ ಆದೇಶವಾದ 45 ದಿನಗಳ ಒಳಗೆ ನೀಡಲು, ತಪ್ಪಿದಲ್ಲಿ ಈ ಆದೇಶವಾದ ದಿನಾಂಕದಿಂದ ಶೇ.12 ರಂತೆ ಸದರಿ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವಂತೆ ಹಾಗೂ ರೂ.30,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ.19 ರಂದು ಆದೇಶಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.