Tiger and Lion Safari ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ವಾರದ ರಜೆಯಾಗಿರುತ್ತದೆ. ಆದರೆ ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ದಿನಾಂಕ: 01-04-2025 ರ ಮಂಗಳವಾರದಂದು ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
Tiger and Lion Safari ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-ಸಿಂಹಧಾಮದಲ್ಲಿ ಏ.01 ರ ಮಂಗಳವಾರವೂ ಸಹ ತೆರೆದಿರುತ್ತದೆ. ಪ್ರವಾಸಿಗರು ಇದರ ಸದುಪಯೋಗ ಪಡೆಯಬೇಕೆಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
Tiger and Lion Safari ಪ್ರವಾಸಿಗರೇ..ಏಪ್ರಿಲ್ 1 ರಂದೂ ಕೂಡ (ಮಂಗಳವಾರ) ಹುಲಿ ಸಿಂಹಧಾಮ ನೋಡಲು ಓಪನ್
S.N.Chennabasappa ಹೋಟೆಲ್ ಉದ್ದಿಮೆದಾರರೆ, ಶುಚಿಯಾದ ಪರಿಸರದಲ್ಲಿ ರುಚಿಯಾದ ಆಹಾರ ನೀಡಿ- ಶಾಸಕ ಚನ್ನಬಸಪ್ಪ
S.N.Chennabasappa ಆಹಾರ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸುವ ಉದ್ದೇಶದಿಂದ ಶಿವಮೊಗ್ಗದ ಮಥುರ ಪ್ಯಾರಡೈಸ್ ನಲ್ಲಿ ಕರ್ನಾಟಕ ಸರ್ಕಾರ ಮತ್ತು ಆಹಾರ ಸುರಕ್ಷಿತ ಮತ್ತು ಔಷಧಿ ಆಡಳಿತ ಇಲಾಖೆಯ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಉದ್ಯಮಿದಾರರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ಹಮ್ಮಿಕೊಳ್ಳಲಾಗಿದ್ದ ‘ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ತರಬೇತಿ’ ಕಾರ್ಯಕ್ರಮವನ್ನು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಉದ್ಘಾಟಿಸಿ, ಮಾತನಾಡಿದರು.
S.N.Chennabasappa ಕಾರ್ಯಕ್ರಮದಲ್ಲಿ ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಆಹಾರ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಉದ್ಯಮಿದಾರರು ಉಪಸ್ಥಿತರಿದ್ದರು.
ಬಿರುಸು ಗಾಳಿ ಮಳೆಗೆ ಹೊಸನಗರ ತಾಲ್ಲೂಕಿನಲ್ಲಿ ಕರಿಮೆಣಸು, ಅಡಿಕೆ ಫಸಲಿಗೆ ಅಪಾರ ಹಾನಿ
ಹೊಸನಗರ ; ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 3;30 ರಿಂದ ವರ್ಷದ ಮೊದಲ ಮಳೆ ಸತತ ಒಂದೂವರೆ ಗಂಟೆಗಳ ಕಾಲ ಬಿರುಗಾಳಿ ಸಹಿತ ಸುರಿದಿದ್ದು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ.
ತಾಲ್ಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಹುಂಚ ಹೋಬಳಿ ಕರಿಗೆರಸು ಗ್ರಾಮದ ಹಿಂಡ್ಲೆಮನೆ ನಿವಾಸಿ ರೈತ ಶ್ರೀನಿವಾಸ ಹೆಚ್.ಕೆ ಬಿನ್ ಕೃಷ್ಣಪ್ಪ ಎಂಬುವರಿಗೆ ಸೇರಿದ ಸ.ನಂ.26/1 ಮತ್ತು 24 ರ ಜಮೀನಿನಲ್ಲಿನ ನೂರಾರು ಅಡಿಕೆ ಮರಗಳು ಮತ್ತು ತೆಂಗಿನಮರ ಧರೆಗುರುಳಿದ್ದು ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಬಿರುಗಾಳಿ ಹೊಡೆತಕ್ಕೆ ನೂರಾರು ಅಡಿಕೆ ಗಿಡಗಳು ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ಬಿರುಗಾಳಿಗೆ ಸಿಲುಕಿದ್ದು ಸಂಪೂರ್ಣ ತೋಟವೇ ನಾಶವಾಗಿದೆ ಎಂದು ರೈತ ಶ್ರೀನಿವಾಸ ಅಳಲನ್ನು ತೋಡಿಕೊಂಡಿದ್ದಾರೆ.
ಪರಿಹಾರಕ್ಕೆ ಒತ್ತಾಯ :
ಈ ಭಾಗದಲ್ಲಿ ಬೀಸಿದ ಬಿರುಗಾಳಿಗೆ ಅಡಿಕೆ, ತೆಂಗು ಬೆಳೆ ಹಾಳಾಗಿದ್ದು, ಸಂಬಂಧಿಸಿದ ಇಲಾಖೆ ಬೆಳೆ ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ಧನ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೂ ಈ ಭಾಗದಲ್ಲಿ ಏಕಾಏಕಿ ಬಂದ ಭಾರಿ ಗಾಳಿ, ಮಳೆಗೆ ನೂರಾರು ಕಾಡು ಜಾತಿಯ ಮರಗಳು ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿಹೋದ ಬಗ್ಗೆ ವರದಿಯಾಗಿದೆ.
Akhila Bharatiya Sharana Sahitya Parishad ವಚನ ಸಾಹಿತ್ಯವು ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದೆ- ಪೂಜಾ ನಾಗರಾಜ್
Akhila Bharatiya Sharana Sahitya Parishad ಶಿವಮೊಗ್ಗ ನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಿವಮೊಗ್ಗ ತಾಲೂಕು ಘಟಕ 108 ನೇ ವಚನ ಮಂಟಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಕ್ತಿ ಕಲಾವೃಂದಾವತಿಯಿಂದ ( ರಿ ) ವಚನಗಳ ಬರಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಿಂದ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಕ್ತಿ ಕಲಾ ವೃಂದಾವತಿಯಿಂದ ( ರಿ ) ವಚನಗಳ ಬರಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯಿಂದ 18 ವಿದ್ಯಾರ್ಥಿಗಳು
ಭಾಗವಹಿಸಿದ್ದು, ಇದರಲ್ಲಿ ಪ್ರಥಮ ಸ್ಥಾನ ಹತ್ತನೇ ತರಗತಿ ವಿದ್ಯಾರ್ಥಿ ಟಿಂಗಲ್ ಬೋರ
ದ್ವಿತೀಯಾ ಸ್ಥಾನ ಏಳನೇ ತರಗತಿ ವಿದ್ಯಾರ್ಥಿ ತೇಜಲ್ ಉದಾವತ್ ತೃತೀಯ ಸ್ಥಾನ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀದೇವಿ ಪಡೆದುಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 11 ಮತ್ತು 12 ನೇ 12ನೇ ಶತಮಾನ ಅತ್ಯಮೂಲ್ಯವಾದದ್ದು. ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ಜೇಡರ ದಾಸಿಮಯ್ಯ , ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಮುಂತಾದವರ ವಚನಗಳು ನಮ್ಮ ಜೀವನಗಳಿಗೆ ಆದರ್ಶವಾಗಿವೆ, ಎಂದು ವಚನಕಾರರ ಮಹತ್ವ ಅರಿವು, ಜ್ಞಾನ, ಆಚಾರ – ವಿಚಾರಗಳು, ನಡೆ-ನುಡಿ ಹಾಗೂ ಭಕ್ತರ ಪ್ರಾಮಾಣಿಕ ನಡೆನುಡಿಗಳನ್ನು ತಿಳಿಯಬಹುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳಾದ ಶ್ರೀದೇವಿಭಕ್ತಿ ಕಲಾ ವೃಂದದ ಕಾರ್ಯದರ್ಶಿಯಾದ ಶ್ರೀಯುತ ಕೇಶವಮೂರ್ತಿಯವರು ಶಾಲೆಯ ಮುಖ್ಯೋಪಾಧ್ಯಾಯರು ವಿನಯ್ ಹಾಗೂ ಕನ್ನಡ ಭಾಷ ಶಿಕ್ಷಕರಾದ ಅರುಣ್ ಕುಮಾರ್ ಹೆಚ್. ಎಮ್. ಭಾಗವಹಿಸಿದ್ದರು.
Delhi World School Chanakya Chess School ಏಪ್ರಿಲ್ 1 ರಂದು ಶಿವಮೊಗ್ಗದಲ್ಲಿ ಓಪನ್ ಚೆಸ್ ಪಂದ್ಯಾವಳಿ
Delhi World School Chanakya Chess School ಡೆಲ್ಲಿ ವರ್ಲ್ಡ್ ಸ್ಕೂಲ್ ಚಾಣಕ್ಯ ಚೆಸ್ ಸ್ಕೂಲ್ ಅಶ್ರಯದಲ್ಲಿ ಅಂಡರ್ 16 ಓಪನ್ ಚೆಸ್ ಟೂರ್ನಿ ಆಯೋಜಿಸಲಾಗಿದೆ.
ಏಪ್ರಿಲ್ 01 ರಂದು ಬೆಳಗ್ಗೆ 09:30 ರಿಂದ ಸಾಗರ ರಸ್ತೆಯ ಮಲ್ಲಿಗೆನಹಳ್ಳಿಗೆ ಇರುವ ವರ್ಡ್ಸ್ ಸ್ಕೂಲ್ ನಲ್ಲಿ ಪಂದ್ಯಾವಳಿ ನಡೆಯಲಿದೆ.
ಮೊದಲನೇ ಬಹುಮಾನ ಎರಡೂ ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ, ಎರಡನೇ ಬಹುಮಾನ 1500 ರೂ. ಹಾಗೂ ಆಕರ್ಷಕ ಟ್ರೋಫಿ, 3ನೇ ಬಹುಮಾನ 1000 ರೂ. 4ನೇ ಬಹುಮಾನ 800 ರೂ. ಹಾಗೂ ಆಕರ್ಷಕ ಟ್ರೋಫಿ 5ನೇ ಬಹುಮಾನ 700 ರೂ. ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಅಂಡರ್ ಸೆವೆನ್ ಅಂಡರ್ ನೈನ್ ಅಂಡರ್ 11 ಅಂಡರ್ 13 ಅಂಡರ್ 15 ನಡೆಯಲಿದೆ.
ಹೆಸರು ನೋಂದಣಿಗೆ ಮಾರ್ಚ್ 30 ಕೊನೆಯ ದಿನವಾಗಿದೆ 600 ನೋಂದಣಿ ಶುಲ್ಕವಿದ್ದು, ವಿಳಂಬ ವಾಗಿ ಹೆಸರು ನೋಂದಾಯಿಸುವವರು ಹೆಚ್ಚುವರಿ 200 ರೂ. ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ೯೮೪೫೮೩೦೧೩೩ ಇವರಿಗೆ ಸಂಪರ್ಕಿಸಬಹುದಾಗಿದೆ..
Bharat Scouts and Guides ಮಹಿಳೆಯರಿಗೆ ಸಾಧನೆ ಮಾಡಲು ಸೂಕ್ತ ಪ್ರೋತ್ಸಾಹ ಮುಖ್ಯ- ಶಕುಂತಲಾ ಚಂದ್ರಶೇಖರ್
Bharat Scouts and Guides ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಉಡುತಡಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಅಕ್ಕಮಹಾದೇವಿ ಸಮಿತಿ ಕಾರ್ಯದರ್ಶಿ ವಿ.ಸಿ.ಗೌರಮ್ಮ ಅವರು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ನಂತರ ಸಂಸ್ಥೆ ವತಿಯಿಂದ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು.
ಅಲ್ಲಮಪ್ರಭು ಪ್ರಾಧಿಕಾರ ಹೋರಾಟ ಸಮಿತಿಯ ರಾಜೇಶ್ವರಿ ಮಹೇಶ್ ಅವರು ಅಕ್ಕಮಹಾದೇವಿ ಜನ್ಮ ವಿಷಯ ಮತ್ತು ಮಹಿಳೆಯರ ಸ್ಥಾನಮಾನ ಕುರಿತು ಮಾತನಾಡಿದರು.
ಕಾತ್ಯಾಯಿನಿ ಸಿ.ಎಸ್.ಅವರು ಕಾರ್ಯಕ್ರಮ ನಿರೂಪಿಸಿದರು. ಗೀತಾ ಚಿಕ್‌ಮಠ್ ಅವರು ಸ್ವಾಗತ ನಡೆಸಿಕೊಟ್ಟರು. ಮೀನಾಕ್ಷಮ್ಮ ಅವರು ವಂದನಾರ್ಪಣೆ ಮಾಡಿದರು.
ಮಲ್ಲಿಕಾರ್ಜುನ ಕಾನೂರು ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
ಲಕ್ಷ್ಮೀ ರವಿ, ಹೇಮಲತಾ, ಜ್ಯೋತಿ, ಭಾರತಿ ಚಂದ್ರಶೇಖರ್, ಸುಮಂಗಲಾ ಹಾಗೂ ಜಿಲ್ಲಾ ಸಂಸ್ಥೆಯ ವೀರೇಶಪ್ಪ, ಶಿವಶಂಕರಪ್ಪ, ರವಿ.ಕೆ, ಪರಮೇಶ್ವರಯ್ಯ ಭಾಗವಹಿಸಿದ್ದರು.
District Consumer Disputes Redressal Commission ವಿಮಾ ಮೊತ್ತದ ನೀಡುವಂತೆ ದೂರುದಾರರ ಪರ ಗ್ರಾಹಕರ ಆಯೋಗ ತೀರ್ಥ
District Consumer Disputes Redressal Commission ಶ್ರೀಮತಿ ಭಾಗ್ಯ ಮತ್ತ ನಾಗರಾಜ ಇವರುಗಳು ಎಲ್‌ಐಸಿ ಇಂಡಿಯಾ ಇವರ ವಿರುದ್ದ ತಮ್ಮ ಸಹೋದರನಿಗೆ ದೊರಕಬೇಕಾದ ವಿಮಾ ಮೊತ್ತ ನೀಡದೇ ಸೇವಾ ನ್ಯೂನತೆ ಎಸಗಿರುವ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಶ್ರೀಮತಿ ಭಾಗ್ಯ ಮತ್ತ ನಾಗರಾಜ ಇವರುಗಳು 1 ನೇ ಎದುರುದಾರ ಝೋನಲ್ ಮ್ಯಾನೇಜರ್ ಎಲ್‌ಐಸಿ ಆಫ್ ಇಂಡಿಯಾ ಹೈದರಾಬಾದ್, 2ನೇ ಎದುರುದಾರ ಸೀನಿಯರ್ ಡಿವಿಷನಲ್ ಮ್ಯಾನೇಜರ್, ಎಲ್‌ಐಸಿ ಇಂಡಿಯಾ, ಡಿವಿಷನಲ್ ಆಫೀಸ್ ಶಿವಮೊಗ್ಗ ಮತ್ತು ಇತರರ ವಿರುದ್ದ ದೂರು ದಾಖಲಿಸಿ ತಮ್ಮ ಸಹೋದರ ಶಿವು 1 ಮತ್ತು 2 ನೇ ಎದುರುದಾರರಿಂದ ರೂ.1,00,000 ರಂತೆ 10 ಪಾಲಿಸಿಗಳನ್ನು ಮತ್ತು ರೂ.2,50,000 ರಂತೆ 01 ಪಾಲಿಸಿ(ಸಮ್ ಅಶ್ಯರ‍್ಡ್) ಪಡೆದಿರುತ್ತಾರೆ.
ದುರುದೃಷ್ಟವಶಾತ್ ಸಹೋದರ ಶಿವು ಹೃದಯಾಘಾತದಿಂದ ಮರಣ ಹೊಂದಿದ್ದು, ತದನಂತರ ಪಾಲಿಸಿಯ ಹಣ ಪಡೆಯುವ ಸಲುವಾಗಿ 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಹಣ ನೀಡಲು ವಿನಿಂತಿಸಿದಾಗ, ಎದುರುದಾರರು ಪಾಲಿಸಿಗಳ ಹಣ ನೀಡುವ ಬದಲು ಮೃತ ಸಹೋದರ ತಮಗಿದ್ದ ಹಿಂದಿನ ಖಾಯಿಲೆಗಳನ್ನು ಮರೆಮಾಚಿ ಪಾಲಿಸಿಗಳನ್ನು ಪಡೆದಿರುವುದರಿಂದ ಕ್ಲೇಮನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿರುವ ಕಾರಣ ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
ಎದುರುದಾರರಿಗೆ ಆಯೋಗವು ನೋಟಿಸ್ ಕಳುಹಿಸಿದ್ದು, 1 ಮತ್ತು ಇತರೆ ಎದುರುದಾರರು ನೋಟಿಸ್ ಪಡೆದು ಆಯೋಗದ ಮುಂದೆ ಹಾಜರಾಗದ ಕಾರಣ ಏಕ ಪಕ್ಷೀಯವಾಗಿಟ್ಟು, 2ನೇ ಎದುರುದಾರರು ತಮ್ಮ ವಕೀಲರ ಮುಖಾಂತರ ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಿ ದೂರುದಾರರು ಹಣ ಮಾಡುವ ಸಲುವಾಗಿ ಸುಳ್ಳು ಮಾಹಿತಿ ನೀಡಿ ಮತ್ತು ತನಗಿದ್ದ ಪಾಲಿಸಿ ಪಡೆಯುವ ಮುಂಚಿನ ಖಾಯಿಲೆಗಳನ್ನು ಮರೆ ಮಾಚಿ 11 ಪಾಲಿಸಿ ಪಡೆದಿರುವುದರಿಂದ, ಪಾಲಿಸಿ ಷರತ್ತು ಮತ್ತು ನಿಬಂಧನೆಗನುಗುಣವಾಗಿ ದೂರುದಾರರ ಕ್ಲೇಮನ್ನು ತಿರಸ್ಕರಿಸಿದ್ದು ಇದರಲ್ಲಿ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.
District Consumer Disputes Redressal Commission ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು, ಎದುರುದಾರರು ಸಲ್ಲಿಸಿರುವ ದಾಖಲೆಗಳು ದೂರುದಾರರ ಕ್ಲೇಮನ್ನು ತಿರಸ್ಕರಿಸಲು ಪೂರಕವಾಗಿರವುದಿಲ್ಲ.
ಆದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ಈ ಆದೇಶವಾದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು 11 ಪಾಲಿಸಿಗಳ ಸಮ್ ಅಶ್ಯರ‍್ಡ್ ಮೊತ್ತ ರೂ.12,50,000 ಗಳನ್ನು ಮತ್ತು ಅದರೊಂದಿಗೆ ಬರುವ ಅಕ್ರೂಡ್ ಬೆನಿಫಿಟ್‌ಗೆ ಶೇ.9 ರಂತೆ ಬಡ್ಡಿ ಸೇರಿಸಿ ಪಾವತಿಸಲು, ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನು ಪೂರಾ ಹಣ ಕೊಡುವವರೆಗು ನೀಡಬೇಕೆಂದು ಹಾಗೂ ರೂ.30,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ.19 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.
CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ
CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ನಂದಿನಿ ಹಾಲಿನ ಬೆಲೆ ಏರಿಕೆಗೆ ಅನುಮತಿ ನೀಡದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆಎಸ್‌ಎಚ್‌ಎ) ಧನ್ಯವಾದ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರಾದ ಶ್ರೀ ಜಿ ಕೆ ಶೆಟ್ಟಿ, ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಸಂಬಂಧ ಸಂಘದ ಮನವಿಯನ್ನು ಪುರಸ್ಕರಿಸಿ, ಹೋಟೆಲುಗಳ ಹಾಗೂ ಗ್ರಾಹಕರ ಹಿತ ರಕ್ಷಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಣದುಬ್ಬರದಿಂದಾಗಿ ಜನ ಸಾಮಾನ್ಯರು ಬಳಲುತ್ತಿದ್ದು ಈ ಸಂದರ್ಭದಲ್ಲಿ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಅವರಿಗೆ ಇನ್ನಷ್ಟು ತೊಂದರೆ ಉಂಟು ಮಾಡುತ್ತಿತ್ತು. ಇದರ ಜೊತೆಗೆ, ಹೋಟೆಲ್ ಉದ್ಯಮಕ್ಕೆ ಕೂಡಾ ಈ ಬೆಲೆ ಏರಿಕೆ ಆಘಾತ ಉಂಟುಮಾಡುವ ಸಾಧ್ಯತೆ ಇತ್ತು.
ಈ ಹಿನ್ನಲೆಯಲ್ಲಿ ಸಂಘ, ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿತ್ತು. ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಹೋಟೆಲ್ ಪದಾರ್ಥಗಳ ಬೆಲೆ ಏರಿಕೆಯನ್ನು ಅನಿವಾರ್ಯವಾಗಿಸುತ್ತಿತ್ತು. ಇದು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇತ್ತು. ಈ ಹಿನ್ನಲೆಯಲ್ಲಿ ಸಂಘ ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಹೆಚ್ಚಿನ ಮಾಹಿತಿಗೆ 98440 06736 ಸಂಪರ್ಕಿಸಬಹುದು
Madhu Bangarappa ಸೊರಬ ತಾಲ್ಲೂಕು ಆಸ್ಪತ್ರೆಗೆ ಎಕ್ಸ್ ರೇ, ಡಯಾಲಿಸಿಸ್ ಯಂತ್ರ ಮತ್ತು ಇತರೆ ಅಗತ್ಯ ಸೌಲಭ್ಯ ಒದಗಿಸುವೆ- ಮಧುಬಂಗಾರಪ್ಪ
Madhu Bangarappa ಸೊರಬ ತಾಲ್ಲೂಕು ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಭರವಸೆ ನೀಡಿದರು.
ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಕೂಕು ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಸೇರಿದಂತೆ ಇತರೆ ತಜ್ಞರನ್ನು ನೇಮಿಸಲು ಸೂಕ್ತ ಕ್ರಮ ವಹಿಸಬೇಕು. ತಜ್ಞರೋರ್ವರು ದೀರ್ಘ ರಜೆಯಲ್ಲಿದ್ದಾರೆ. ಖಾಲಿ ಎಂದು ತೋರಿಸಿದರೆ ಮಾತ್ರ ಕೌನ್ಸೆಲಿಂಗ್ ನಲ್ಲಿ ಬೇರೆ ತಜ್ಞ ವೈದ್ಯರನ್ನು ನೇಮಿಸಬಹುದು.
ಆದ್ದರಿಂದ ಈ ಕುರಿತು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಡಿಹೆಚ್ಓ ರವರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿರುವ ಪ್ರಸ್ತುತ ಎಕ್ಸ್ ರೇ ಮಷೀನ್ ಹಾಳಾಗಿದ್ದು ಸುಮಾರು ರೂ. 16 ರಿಂದ 17 ಲಕ್ಷ ವೆಚ್ಚದ ಎಕ್ಸ್ ರೇ ಮಷೀನ್ ಅಗತ್ಯವಿದೆ.
Madhu Bangarappa ಅದನ್ನು ಸಿಎಸ್ ಆರ್ ಫಂಡ್ ಲ್ಲಿ ಖರೀದಿಸಲು ಕ್ರಮ ವಹಿಸಲಾಗುವುದು ಎಂದರು.
ಹಾಗೆಯೇ ದಂತ ಚಿಕಿತ್ಸೆಗೆ ಅಗತ್ಯವಿರುವ ಪೋರ್ಟಬಲ್ ಕ್ಷಕಿರಣ ಯುನಿಟ್ ನ್ನು ತರಿಸಲು ಸಹ ಸಭೆಯಲ್ಲಿ ಚರ್ಚಿಸಲಾಯಿತು.
ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ 3 ಶಿಫ್ಟ್ ಲ್ಲಿ ಫುಲ್ ಲೋಡ್ ಇದೆ. ಹೆಚ್ಚುವರಿಯಾಗಿ 2 ಮಷಿನ್ ಅವಶ್ಯಕತೆ ಇದ್ದು ಇದನ್ನು ಖರೀದಿಸಲು ಹಾಗೂ ಆಸ್ಪತ್ರೆ ಯಲ್ಲಿ
2 ಆಂಬುಲೆನ್ಸ್ ಇದ್ದು ಸಾಕಾಗುತ್ತಿಲ್ಲ. ಹೆಚ್ಚುವರಿಯಾಗಿ 1 ಆಂಬುಲೆನ್ಸ್ ಬೇಕೆಂದು ಕೇಳಿದ್ದು, ಇವುಗಳನ್ನು ಖರೀದಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.
ಆಸ್ಪತ್ರೆಯಲ್ಲಿ ಹೆಚ್ ಟಿ ಕ್ಯುಬಿಕಲ್ ಅಳವಡಿಕೆ ಹಾಗೂ ಆಸ್ಪತ್ರೆ ವಸತಿಗೃಹ ವಿದ್ಯುತ್ ಸಂಪರ್ಕದ ಸಮಸ್ಯೆ ಸರಿಪಡಿಸಲು ಅಗತ್ಯವಿರುವ ಅಂದಾಜು ವೆಚ್ಚ ಸಿದ್ದಪಡಿಸಿ ನೀಡುವಂತೆ ತಿಳಿಸಿದರು.
08 ವಸತಿಗೃಹಗಳು ಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದು ಇದಕ್ಕೆ ಅಗತ್ಯವಿರುವ ಅಂದಾಜು ನೀಡಿರಿ, ಇಲಾಖೆಯ ಅಧಿಕಾರಿಗಳೊಂದಿಗೆ ನಾನೇ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದರು.
ಪಾರ್ಕಿಂಗ್, ವಿಶ್ರಾಂತಿಕೊಠಡಿ. ಉಗ್ರಾಣ ಸೇರಿದಂತೆ 12 ಕೋಟಿ ವೆಚ್ಚದ ಅಂದಾಜು ಸಿದ್ದವಿದೆ.
ಕೊಳೆ ಬಟ್ಟೆ ಸ್ವಚ್ಚಗೊಳಿಸಿ ಡ್ರೈಯಿಂಗ್ ಮಾಡುವ ಲಾಂಡ್ರಿ ಸರ್ವಿಸ್ ಯೂನಿಟ್ ಅವಶ್ಯಕತೆ ಇದೆ ಎಂದು ತಿಳಿಸಿದ್ದು, ಅಂದಾಜು ಪಟ್ಟಿ ಸಿದ್ದಪಡಿಸಿ ನೀಡುವಂತೆ ತಿಳಿಸಿದ ಅವರು ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಸೇವೆ ಸೌಲಭ್ಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು, ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಒದಗಿಸುವುದಾಗಿ ತಿಳಿಸಿದರು.
ಡಿಹೆಚ್ಒ ಡಾ.ನಟರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ನವೀನ್, ಎಎಂ ಓ ಡಾ.ಪ್ರಭು ಸಾಹುಕಾರ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಜರಿದ್ದರು.
Life Insurance Corporation of India ಎಲ್ ಐ ಸಿ ಅಧಿಕಾರ ಕಾರಿಗಳ ಸಂಘಟನೆಯ ಸಂಸ್ಥಾಪನಾ ದಿನದ ವಿಶೇಷವಾಗಿ ಪುಣ್ಯಾಶ್ರಮಕ್ಕೆ ಆಹಾರ ಸಾಮಗ್ರಿ ಕೊಡುಗೆ
Life Insurance Corporation of India ಭಾರತೀಯ ಜೀವ ವಿಮಾ ನಿಗಮದ, ಅಧಿಕಾರಿಗಳ ಸಂಘಟನೆಯ ಸಂಸ್ಥಾಪನ ದಿನದ ಅಂಗವಾಗಿ ನಿನ್ನೆ ಸಂಜೆ ಸಾಗರ ರಸ್ತೆಯಲ್ಲಿರುವ ಪಂಡಿತ ಪುಟ್ಟರಾಜ ಗವಾಯಿಗಳ ಅಂಧರ ಆಶ್ರಮಕ್ಕೆ ಆಹಾರ ಸಾಮಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಿಭಾಗೀಯ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ಸುಬ್ರಹ್ಮಣ್ಯ, ರುಕ್ಮಿಣಿ, ಜಾನಕಿ, ಮಂಜುನಾಥ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
