Tuesday, May 5, 2026
Tuesday, May 5, 2026

CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ‌ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ

Date:

CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ‌ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ನಂದಿನಿ ಹಾಲಿನ ಬೆಲೆ ಏರಿಕೆಗೆ ಅನುಮತಿ ನೀಡದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆಎಸ್‌ಎಚ್‌ಎ) ಧನ್ಯವಾದ ಸಲ್ಲಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರಾದ ಶ್ರೀ ಜಿ ಕೆ ಶೆಟ್ಟಿ, ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಸಂಬಂಧ ಸಂಘದ ಮನವಿಯನ್ನು ಪುರಸ್ಕರಿಸಿ, ಹೋಟೆಲುಗಳ ಹಾಗೂ ಗ್ರಾಹಕರ ಹಿತ ರಕ್ಷಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹಣದುಬ್ಬರದಿಂದಾಗಿ ಜನ ಸಾಮಾನ್ಯರು ಬಳಲುತ್ತಿದ್ದು ಈ ಸಂದರ್ಭದಲ್ಲಿ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಅವರಿಗೆ ಇನ್ನಷ್ಟು ತೊಂದರೆ ಉಂಟು ಮಾಡುತ್ತಿತ್ತು. ಇದರ ಜೊತೆಗೆ, ಹೋಟೆಲ್ ಉದ್ಯಮಕ್ಕೆ ಕೂಡಾ ಈ ಬೆಲೆ ಏರಿಕೆ ಆಘಾತ ಉಂಟುಮಾಡುವ ಸಾಧ್ಯತೆ ಇತ್ತು.

ಈ ಹಿನ್ನಲೆಯಲ್ಲಿ ಸಂಘ, ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿತ್ತು. ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ‌ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಹೋಟೆಲ್ ಪದಾರ್ಥಗಳ ಬೆಲೆ ಏರಿಕೆಯನ್ನು ಅನಿವಾರ್ಯವಾಗಿಸುತ್ತಿತ್ತು. ಇದು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇತ್ತು. ಈ ಹಿನ್ನಲೆಯಲ್ಲಿ ಸಂಘ ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಹೆಚ್ಚಿನ ಮಾಹಿತಿಗೆ 98440 06736 ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...