Friday, March 6, 2026
Friday, March 6, 2026
Home Blog Page 363

HD Kumaraswamy ಮುಸ್ಲೀಂ ಮೀಸಲಾತಿ ವಿರುದ್ಧ ರಾಜ್ಯ ಬಿಜೆಪಿಯೊಂದಿಗೆ ಭಿನಾಭಿಪ್ರಾಯವಿಲ್ಲ- ಸಚಿವ ಎಚ್.ಡಿ.ಕುಮಾರಸ್ವಾಮಿ

0

HD Kumaraswamy ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ 4% ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ರಾಜ್ಯ ಜೆಡಿಎಸ್ ಮತ್ತು ರಾಜ್ಯ‌ ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ.

ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ #NDA ‘ಸಮನ್ವಯ ಸಮಿತಿ’ ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ.

ಕಾಂಗ್ರೆಸ್ ಸರಕಾರವು ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್‌ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ.

ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ.

HD Kumaraswamy ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ನಮ್ಮ ಜೆಡಿಎಸ್ ಅಚಲ ನಿಲುವು‌ ಎಂದು ಕೇಂದ್ರ ಸಚಿವ ಮತ್ತು ರಾಜ್ಯ ಜೆಡಿಎಸ್ ಪ್ರಮುಖ‌‌ ಎಚ್.ಡಿ.ಕುಮಾರ ಸ್ವಾಮಿ‌ ತಮ್ಮ‌ಸಾಮಾಜಿಕ‌‌ ಜಾಲತಾಣದಲ್ಲಿ‌ ಹೇಳಿಕೆ ನೀಡಿದ್ದಾರೆ.

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

0

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ ಯುಗಾದಿ ಹಬ್ಬವನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುವುದು. ಚೈತ್ರ ಮಾಸದಲ್ಲಿ ಎಲ್ಲಾ‌ ಮರಗಳು ತಮ್ಮ ಹಳೆಯ ತನವನ್ನು ಕಳೆದುಕೊಂಡು ಹೊಸ‌ ಚಿಗುರಿನೊಂದಿಗೆ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವುದು. ಯುಗಾದಿಯ ಆಗಮನದ ದಿನ ಎಲ್ಲೆಲ್ಲೂ ಸಿಹಿ-ಕಹಿ ಸವಿದು ಒಂದಾಗಿ ಮುನ್ನಡೆಯೋಣ ಎಂಬ ಸಂದೇಶದೊಂದಿಗೆ ದೂರದರ್ಶನ ಕೇಂದ್ರ, ಬೆಂಗಳೂರು ಚಂದನ ವಾಹಿನಿ ವತಿಯಿಂದ ರಾಜಭವನದ ಗಾಜಿನಮನಯಲ್ಲಿ ಆಯೋಜಿಸಿದ್ದ ಯುಗಾದಿಯ ವಿಶೇಷ “ಚೈತ್ರಾಂಜಲಿ” ಕಾರ್ಯಕ್ರಮವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.

“ಎಲ್ಲರಿಗೂ ನಮಸ್ಕಾರ, ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಕನ್ನಡ ಭಾಷೆಯಲ್ಲಿ ಶುಭ ಕೋರಿದ ಗೌರವಾನ್ವಿತ ರಾಜ್ಯಪಾಲರು, ಇಡೀ ದೇಶದಲ್ಲಿ ಮಾರ್ಚ್ 30ರಂದು ಹೊಸ ವರ್ಷ ಆರಂಭವಾಗಲಿದೆ. ಯುಗಾದಿಯ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೂರದರ್ಶನದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಸಂಸ್ಕೃತಿ, ದೇಶದ ಧರ್ಮಾ, ದೇಶದ ಸಭ್ಯತೆ, ದೇಶದ ಹಬ್ಬಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಮನದಟ್ಟು ಮಾಡಿಕೊಡಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ದೂರದರ್ಶನ ಕೇಂದ್ರ ಚಂದನ ವಾಹಿನಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಸಂಭ್ರಮದಲ್ಲಿ ಭಾಗಿಯಾಗಿರುವ ಸಿನೆಮಾ ತಾರೆಯರು, ಗಣ್ಯರು, ಅಧಿಕಾರಿಗಳು, ಮಕ್ಕಳು, ಯುವಕರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಹೊಸ ವರ್ಷವು ಎಲ್ಲರಿಗೂ ಸಂತೋಷ, ಸಮೃದ್ಧಿ, ಹೊಸತನ್ನು ತರಲಿ ಎಂದು ಪ್ರಾರ್ಥಿಸುತ್ತೇನೆಂದರು.

ಮನಸೂರೆಗೊಳಿಸಿದ ನೃತ್ಯ, ಗಾನ ಸುಧೆ
ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು. ಅದೇ ಸಮಯಲ್ಲಿ ಕಲಾವಿದೆ ವಿಜಯಶ್ರೀ ಅವರಿಂದ ಪ್ರಕೃತಿ ಮಾತೆಯ ಚಿತ್ತಾರ ಮೂಡಿಬಂತು. ನಂತರ ಶ್ರೀ ಸುಂದರೇಶ್.ಸಿ ಮತ್ತು ತಂಡದವರು ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಕೋಲು ಕುಣಿತವನ್ನೊಳಗೊಂಡ ಜಾನಪದ ನೃತ್ಯ ನೆರದಿದ್ದವರ ಮನಸೂರೆಗೊಳಿಸಿತು.
ನಂತರ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, ಸಿನೆಮಾ ನಟ ಹಾಗೂ ನಿರ್ದೇಶಕರಾದ ಎಸ್, ನಾರಾಯಣ್ ಅವರು ಯುಗಾದಿ ಹಬ್ಬದ ಆಚರಣೆ ಬಗ್ಗೆ ಹಳೆಯದನ್ನು ಮೆಲುಕು ಹಾಕಿ, ಸಂಬಂಧ ಮಹತ್ವದ ಮತ್ತು ಅನುಭವದ ಬಗ್ಗೆ ಹಂಚಿಕೊಂಡರು. ನಟಿ ಅನುಪ್ರಭಾಕರ್, ನಟಿ ಸುಧಾ ಬೆಳವಾಡಿ, ಸಂಯುಕ್ತ ಬೆಳವಾಡಿ ಸೇರಿದಂತೆ ಮುಂತಾದ ಗಣ್ಯರು ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿ, ವಿಶೇಷ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Thawar Chand Gehlot ನಂತರ ಶ್ರೀ ಪಂಚಮ್ ಹಳಿಬಂಡಿ ಮತ್ತು ತಂಡದವರು ಯುಗಾದಿ ಕುರಿತು ರೆಟ್ರೋ ಟು ಮೆಟ್ರೋ ಎಂಬ ಶೈಲಿಯಲ್ಲಿ ಕನ್ನಡ ಹಾಡುಗಳ ಮಿಶ್ರಣದಲ್ಲಿ ಗೀತಗುಚ್ಛ ಪ್ರಸ್ತುತಿ ಪಡಿಸಿದರು. “ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ”, “ಯುಗಾ ಯುಗಾದಿ ಕಳೆದರೂ” ಈ ಹಸಿರ ಸಿರಿಯಲಿ, ಹೊಸಬೆಳಕು ಮೂಡುತಿದೆ, ನೇಸರ ನೋಡು, ದೀಪದಿಂದ ದೀಪವ, ಇಂದು ಬಾನೆಗೆಲ್ಲ ಹಬ್ಬ, ಸೇರಿದಂತೆ ಅನೇಕ ಗೀತೆಗೆಳು ಸುಮಧುರವಾಗಿ ಮೂಡಿಬಂದು, ನೆರೆದಿದ್ದವರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

Shahi Export Limited ಶಿವಮೊಗ್ಗ ತಾಲ್ಲೂಕಿನಲ್ಲಿ ಪ್ರಸರಣ ಮಾರ್ಗದ ಕಾರಿಡಾರ್ ಪರಿಹಾರ ನಿಗದಿ ಇತ್ಯರ್ಥ ಸಭೆ

0

Shahi Export Limited ಶಿವಮೊಗ್ಗ ತಾಲ್ಲೂಕಿನಲ್ಲಿ 220 ಕೆ.ವಿ ಮುಖ್ಯ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಮೆ|| ಶಾಹಿ ಎಕ್ಸ್ಪೋರ್ಟ್ ಲಿಮಿಟೆಡ್‌ಗೆ ಜೋಡಣೆಯಾಗುವ 110 ಕೆ.ವಿ ಎಸ್.ಎಂ.ಟಿ ಹಾಲಿ ಇರುವ ಸಿಂಗಲ್ ಸರ್ಕ್ಯೂಟ್ ಮಾರ್ಗವನ್ನು ಹೊಸ 110 ಕೆ.ವಿ ಡಬಲ್ ಸಕ್ಯೂರ್ಟ್ ರಚನೆಯ ಕಾಮಗಾರಿಯಲ್ಲಿ ಬರುವ ಲೈನ್ ಕಾರಿಡಾರ್ ಪರಿಹಾರ ನಿಗದಿಪಡಿಸುವ ಕುರಿತು ಮಾ.25 ರ ಬೆಳಿಗ್ಗೆ 11.00 ಗಂಟಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
Shahi Export Limited ಶಿವಮೊಗ್ಗ ತಾಲ್ಲೂಕಿನ ಇಸ್ಲಾಪುರ, ತೊಪ್ಪಿನಘಟ್ಟ, ದುಮ್ಮಳ್ಳಿ, ನಿದಿಗೆ ಗ್ರಾಮಗಳ ವಿವಿಧ ಜಮೀನುಗಳಲ್ಲಿ 110 ಕೆವಿ ವಿದ್ಯುತ್ ಮಾರ್ಗವು ಈ ಕೆಳಗೆ ತಿಳಿಸಿರುವ ಸರ್ವೆ ನಂ. ಜಮೀನುಗಳಲ್ಲಿ ಹಾದು ಹೋಗುವುದರಿಂದ ಸಂಬAಧಪಟ್ಟ ಭೂಮಾಲೀಕರು/ರೈತರಿಗೆ 110 ಕೆವಿ ಪ್ರಸರಣ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಇಸ್ಲಾಪುರ ಸರ್ವೆ ನಂ;79, ತೋಪ್ಪಿನಘಟ್ಟ ಸರ್ವೆ ನಂ: 19, 20, 23, 24, 27, 28, 26, 40, 29, 39, 120, 119, 36, 34, 31, 32, 119, ದಮ್ಮಳ್ಳಿ ಸರ್ವೆ ನಂ: 43, 44, 45, 67, 68, 69, 66, 89, 88, ನಿದಿಗೆ ಸರ್ವೆ ನಂ: 35, 33, 34, 32, 12, 10, 11, 09, 183, 1, 2, 170, 169, 165, 168, 167, 166, 164, 72, 142, 141, 130, 132, 133, 134 ರ ಭೂಮಾಲೀಕರು ಹಾಗೂ ರೈತರು ತಪ್ಪದೆ ಸಭೆಗೆ ಹಾಜರಾಗುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PM Yoga Awards ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

0

PM Yoga Awards ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ 2025 ನೇ ಸಾಲಿನ ಪ್ರಧಾನ ಮಂತ್ರಿಗಳ ಯೋಗ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಮಾ.31 ರ ಒಳಗೆ https:// nnovateindia.mygov./in/pm-yoga-awards-2025 ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

PM Yoga Awards ಅದರಂತೆ ಶಿವಮೊಗ್ಗ ಜಿಲ್ಲೆಯ ಯೋಗ ಕ್ರೀಡಾಪಟುಗಳು ಹಾಗೂ ಯೋಗ ಸಂಸ್ಥೆಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Shivamogga Rangayana ಮಾರ್ಚ್ 24 ಸುವರ್ಣ ಸಂಸ್ಕೃತಿ ಭವನದಲ್ಲಿ’ಸತ್ತವರ ನೆರಳು’ ನಾಟಕ ಪ್ರದರ್ಶನ

0

Shivamogga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಮಾ.24 ರ ಸಂಜೆ 6.30ಕ್ಕೆ ಹೆಲಿಪ್ಯಾಡ್ ಹತ್ತಿರದ ಅಶೋಕನಗರ ಸುವರ್ಣ ಸಂಸ್ಕೃತಿ ಭವನದಲ್ಲಿ ಧಾರವಾಡ ರಂಗಾಯಣ ಪ್ರಸ್ತುತಿಯ, ಜಡಭರತ ರಚನೆಯ, ಶ್ರೀ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಸತ್ತವರ ನೆರಳು” ನಾಟಕವು ಪ್ರದರ್ಶನಗೊಳ್ಳಲಿದೆ.

Shivamogga Rangayana ಟಿಕೆಟ್ ದರವು ಒಬ್ಬರಿಗೆ ರೂ.30 ನಿಗದಿ ಮಾಡಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ಕೋರಿದ್ದಾರೆ.

District Legal Services Authority ಮಾನಸಿಕ ಆರೋಗ್ಯ ಸಂಬಂಧಿತ ಸರ್ಕಾರದ ಕಾನೂನನ್ನು ನಾವುಗಳೆಲ್ಲ ತಿಳಿದುಕೊಳ್ಳಬೇಕು- ನ್ಯಾ.ಮರುಳಸಿದ್ಧಾರಾಧ್ಯ

0

District Legal Services Authority ಮಾನಸಿಕ ಒತ್ತಡ ಪ್ರತಿ ಹಂತದಲ್ಲೂ ಇದೆ. ಯಾವುದೇ ಇಲಾಖೆಗಳು ಹಾಗೂ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕಾರ್ಯಾಗಾರ ಅತ್ಯವಶ್ಯಕವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಹೆಚ್.ಜೆ ಹೇಳಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯದ ಕುರಿತು ಶನಿವಾರ ನಗರದ ಪೊಲೀಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
District Legal Services Authority ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ಹಾಗೂ ಯೋಜನೆಗಳನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಸರ್ಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು‌ ಜಾರಿಗೆ ತಂದಿದೆ. ಈ ಪ್ರಾಧಿಕಾರ ಸರ್ವೋಚ್ಚ ನಾಯ್ಯಾಧೀಶರ ಅಧೀನದಲ್ಲಿ ಕೆಲಸ ಮಾಡುತ್ತದೆ. ಸುಮಾರು 10 ವಿವಿಧ ಕಾನೂನು ಹಾಗೂ ಯೋಜನೆಗಳನ್ನು ಇದು ಒಳಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು, ಮಾನಸಿಕ ಅಸ್ವಸ್ಥರಿಗಾಗಿಯೇ ಕಾನೂನು ಸೇವೆಗಳು, ವಕೀಲರ ಸಮಿತಿ, ಹಕ್ಕುಬಾಧ್ಯತೆ ಹಾಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತದೆ ಎಂದರು.
ಮಾನಸಿಕ ಅಸ್ವಸ್ಥರನ್ನು ತಾರತಮ್ಯಕ್ಕೆ ಒಳಪಡಿಸದಂತೆ ನಮ್ಮೊಳಗೆ ಅವರೂ ಒಬ್ಬರಂತೆ ಕಾಣಬೇಕು. ಭಾರತ ಸಂವಿಧಾನ ಎಲ್ಲರಂತೆ ಅವರಿಗೂ ಜೀವಿಸುವ ಹಕ್ಕು, ಸಮಾನರಾಗಿ ಬಾಳುವ ಹಕ್ಕು, ಮತದಾನದ ಹಕ್ಕು, ಕಾನೂನು ಸೇವೆ ಪಡೆಯುವ ಹಕ್ಕನ್ನು ನೀಡಿದೆ. ಅದರಂತೆ 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯನ್ನು ಕೂಡ ಜಾರಿಗೆ ತರಲಾಗಿದೆ. ನಾವೆಲ್ಲರೂ ಮಾನಸಿಕ ಅಸ್ವಸ್ಥರಿಗೆ ಈ ಹಕ್ಕುಗಳ ಹಾಗೂ ಕಾನೂನಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮನುಷ್ಯ ಅನೇಕ ಮಾನಸಿಕ ಒತ್ತಡಗಳಿಗೆ ಸಿಲುಕಿ ಅತ್ಮಹತ್ಯೆ ಹಾದಿ ತುಳಿಯುತ್ತಿದ್ದು, ಪ್ರತಿದನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಹೆಚ್ಚು ಗಂಡು ಮಕ್ಕಳೆ ಆಗಿದ್ದಾರೆ. ಇವರು ಸದಾ ಗಂಡು ಎಂಬ ಅಹಂಗೆ ಬಿದ್ದು ಭಾವನೆಗಳನ್ನು, ನೋವುಗಳನ್ನು ವ್ಯಕ್ತಪಡಿಸಲಾಗದೆ ಹಾಗೂ ಅದನ್ನು ಎದುರಿಸಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಗಂಡು ಮಕ್ಕಳನ್ನು ಈ ಅಹಂ ನಿಂದ ಹೊರಬರುವಂತೆ ಮಾಡಬೇಕು. ಅವರ ನೋವುಗಳನ್ನು ತೊಡಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಆ ಮೂಲಕ ೨೦೩೦ ರಷ್ಟರಲ್ಲಿ ಆತ್ಮಹತ್ಯೆಯ ಪ್ರಮಾಣ ಶೇ.10 ರಷ್ಟು ಕಡಿಮೆ ಮಾಡುವಲ್ಲಿ ಮುಂದಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಆರಕ್ಷಕರಿಗಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರ ಏರ್ಪಡಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ನಮ್ಮ ಮಾನಸಿಕ ಆರೋಗ್ಯ, ಮಾನಸಿಕ ಕಾನೂನು ಹಾಗೂ ಆ ಕಾನೂನು ಹೇಗೆ ಅನುಷ್ಠಾನಕ್ಕೆ ತರಬೇಕೆಂದು ಈ ವೇದಿಕೆ ತಿಳಿಸಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇತ್ತೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಬದಲಾಗಿದೆ. ಈ ಬದಲಾವಣೆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗಬೇಕು ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಬಗ್ಗೆ ಕಾಳಜಿ ವಹಿಸಬೇಕು. ಯಾಕೆಂದರೆ ಕೋವಿಡ್‌ ಅಂತಹ ಸಮಯದಲ್ಲಿ ಸಾರ್ವಜನಿಕರು ಒಳಗೊಂಡಂತೆ ಪೊಲೀಸರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದ್ದು ನಾವೆಲ್ಲಾ ನೋಡಿದ್ದೇವೆ. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರದಿಂದರಬೇಕು. ಪೊಲೀಸ್‌ ಇಲಾಖೆಯು ತಮ್ಮ ಮಿತಿಯನ್ನು ಮೀರಿ ಒತ್ತಡಕ್ಕೆ ಒಳಗಾಗುತ್ತದೆ. ಕೆಲವೊಮ್ಮೆ ಆ ಒತ್ತಡಕ್ಕೆ ಮಣಿದು ಕಾರ್ಯನಿವಹಿಸಬೇಕಾಗುತ್ತದೆ. ಇದರಿಂದ ಅನೇಕ ಲೋಪಗಳು, ಅನಾಹುತಗಳು ನಡೆಯುತ್ತವೆ. ಅದರಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಸಹ ಸಂಭವಿಸಿವೆ ಎಂದರು.
ಇಂತಹ ವಿಷಯಗಳನ್ನೆಲ್ಲಾ ಗಮನಿಸಿದ ನಂತರ ಪೊಲೀಸ್‌ ಇಲಾಖೆ ನಿಮ್ಹಾನ್ಸ್‌ನೊಂದಿಗೆ ಸಮಾಲೋಚನೆ ನಡೆಸಿ 31 ಜಿಲ್ಲೆಯ ಪೊಲೀಸ್‌ ಕೇಂದ್ರ ಕಚೇರಿಗಳಲ್ಲಿ ಮಾನಸಿಕ ಆರೋಗ್ಯಕ್ಕೆಂದು ಉತ್ತಮ ಮನೋ ತಜ್ಞರನ್ನು ನೇಮಿಸಲಾಗಿದೆ. ಅವರುಗಳು ಪೊಲೀಸ್‌ ಅಧಿಕಾರಿಗಳೊಂದಿಗೆ ವೈಯಕ್ತಿವಾಗಿ, ಸಾಮೂಹಿಕವಾಗಿ ಸಮಾಲೋಚನೆ ನಡೆಸುವ ಮೂಲಕ ಅಧಿಕಾರಗಳ ಮಾನಸಿಕ ಒತ್ತಡಕ್ಕೆ ಪರಿಹಾರವನ್ನು ನೀಡುವರು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ವಕೀಲರು ಹಾಗೂ ಪೊಲೀಸರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆತ್ಮಕ್ಕೆ ತೃಪ್ತಿಯಾಗುವಂತಹ ಕೆಲಸ ಮಾಡಬೇಕು. ಆಗ ಮಾತ್ರ ಮಾನಸಿಕ ಆರೋಗ್ಯ ನಮ್ಮ ಹಿಡಿತದಲ್ಲಿ ಇರುತ್ತದೆ. ಬೇರೆ ಯಾವುದೇ ಆಲೋಚನೆಗಳಲ್ಲಿ ತೊಡಗದೆ ನಮ್ಮ ಮಿತಿಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಡಿಹೆಚ್‌ಓ ಡಾ.ನಟರಾಜ್ ಕೆ ಎಸ್, ಸಿಮ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ರಾಮ್‌ ಪ್ರಸಾದ್‌, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ್ ಎಸ್ ಕೆ, ಮನೋತಜ್ಞ ಡಾ.ಪ್ರಮೋದ್ ಹೆಚ್ ಎಲ್ ಪಾಲ್ಗೊಂಡಿದ್ದರು.

KSOU Mysuru 2024-25 ನೇ ಶೈಕ್ಷಣಿಕ ಸಾಲಿನ ವಿವಿಧ ಕೋರ್ಸ್ ಗಳಿಗೆ ಭಾನುವಾರವೂ‌ ಸೇರಿದಂತೆ ಸರ್ಕಾರಿ ರಜಾದಿನಗಳಲ್ಲಿ‌ “ಕರಾಮುವಿ” ಪ್ರವೇಶಾತಿ ಸ್ವೀಕಾರ

0

KSOU Mysuru ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಪ್ರಾದೇಶಿಕಾ ಕೇಂದ್ರ ಶಿವಮೊಗ್ಗ ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದೆ.

ಆಲ್ಕೊಳ ವೃತ್ತ ಸಾಗರ ರಸ್ತೆಯಲ್ಲಿರುವ ಕರಾಮುವಿ ಪ್ರಾದೇಶಿಕ ಕೇಂದ್ರ ಶಿವಮೊಗದಲ್ಲಿ ಪ್ರತಿ ಭಾನುವಾರ ಹಾಗೂ ಎಲ್ಲಾ ಹಬ್ಬಗಳು ಸೇರಿದಂತೆ ಹಾಗೂ ಸರ್ಕಾರಿ ರಜೆ ದಿನಗಳಂದು ಕಛೇರಿ ತೆರೆದಿದ್ದು ಪ್ರವೇಶಾತಿಯನ್ನು ಪಡೆದುಕೊಳ್ಳಲಾಗುವುದು ಎಂದು ಕರಾಮುವಿ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.

Style Dance Crew ಶಿವಮೊಗ್ಗದಲ್ಲಿ”ರಜಾ ವಿತ್ ಮಜಾ” ಬೇಸಿಗೆ ಶಿಬಿರ

0

Style Dance Crew ಶಿವಮೊಗ್ಗದ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವತಿಯಿಂದ ಏಪ್ರಿಲ್ 04 ರಿ೦ದ ಮೇ.09ರವರೆಗೆ “ರಜಾ ವಿತ್ ಮಜಾ – ಟಿವಿ ಮೊಬೈಲ್ ಬಿಡಿ ಬೇಸಿಗೆ ಶಿಬಿರಕ್ ನಡಿ “ಎ೦ಬ ಶೀಷಿ೯ಕೆಯಡಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ವಿವಿಧ ರೀತಿಯ ನೃತ್ಯಗಳು , ಫಿಲ್ಮ್ ಆಕ್ಟಿಂಗ್ , ಆಡಿಷನ್ಸ್ ,ಕೊಚಿಂಗ್ಸ್ ,ಡ್ರಾಯಿಂಗ್, ಟೆಂಟ್ ಸಿನಿಮಾ, ನಿರೂಪಣೆ, ಯೋಗ, ಓಲ್ಡ್ ಗೆಮ್ಸ್, ಸಿಂಗಿಗ್, ಅಜ್ಜಿಕಥೆಗಳು, ಜಿಮ್ನಾಸ್ಟಿಕ್, ಫ್ಯಾಷನ್ ಷೋ, ಡ್ರಾಮಾ ಇನ್ನೂ ಹಲವಾರು ಬಗೆಬಗೆಯ ವಿಷಯವನ್ನು ಒ೦ದೇ ಸೂರಿನಡಿ ಹೇಳಿಕೊಡಲಾಗುವುದು.

ಈ ಶಿಬಿರದಲ್ಲಿ 2 ವರ್ಷದ ಮಗುವಿನಿಂದ 35 ವರ್ಷದ ವಯಸ್ಕರವರೆಗೂ ಭಾಗವಹಿಸಬಹುದು.ಈ ಎಲ್ಲಾ ವಯಸ್ಸಿಗೂ ಅನುಗುಣವಾಗಿ ಬೆಳಗಿನ ಬ್ಯಾಚ್, ಮದ್ಯಾಹ್ನದ ಬ್ಯಾಚ್ , ಸ೦ಜೆ ಬ್ಯಾಚ್ , ವಿಕೆಂಡ್ ಬ್ಯಾಚ್, ವಿಕ್ ಡೇಸ್ ಬ್ಯಾಚ್ ಎಂದು ನಿಮ್ಮ ಅನುಕೂಲಕರ ಸಮಯಕ್ಕೆ ಇರಲಿದೆ. ಈ ಬ್ಯಾಚ್ ಗಳಲ್ಲಿ 50 ದಿನಗಳ ಬ್ಯಾಚ್, 30 ದಿನಗಳ ಬ್ಯಾಚ್ , 35 ದಿನಗಳ ಬ್ಯಾಚ್ ಆಯ್ಕೆ ಮಾಡಿಕೊಂಡರೆ 50% ವಿಶೇಷ ರಿಯಾಯಿತಿ ಇರಲಿದೆ.

Style Dance Crew ಒಳಾಂಗಣದಲ್ಲಿ ಸುಸ್ಸಜ್ಜಿತವಾದ ತರಗತಿ ಕೋಣೆಗಳು , ಸಿಸಿ ಕ್ಯಾಮಾರ ವ್ಯವಸ್ಥೆ , ಸ್ವಚ್ಚವಾದ ಶೌಚಾಲಯ , ಅತ್ಯುತ್ತಮ ಶಿಕ್ಷಕರನ್ನು ಒಳಗೊಂಡ ಶಿವಮೊಗ್ಗದ ಸಂಸ್ಥೆ ಇದಾಗಿದೆ .

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಗೋಪಿವೃತ್ತದ ಲಕ್ಷ್ಮಿಗೆಲಾಕ್ಸಿ ಕಾಂಪ್ಲೇಕ್ಸ್ , 2ನೇ ಮಹಡಿ , ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋಗೆ ಭೇಟಿ ನೀಡಬಹುದು. ಮಾಹಿತಿಗಾಗಿ 98453 – 88028 / 81230 – 05603 ಸಂಪರ್ಕಿಸಬಹುದು.

Kuvempu University ಶಿವಮೊಗ್ಗದ ನಿವೃತ್ತ ಪ್ರೊ.ಚಂದ್ರಕಾಂತ್ ನಿಧನ

0

Kuvempu University ಡಾಕ್ಟರ್ ಚಂದ್ರಕಾಂತ್ ನಿವೃತ್ತ ಪ್ರೋಫೆಸರ್ ಮತ್ತು ಭೂಅನ್ವಯಿಕ ವಿಜ್ಞಾನ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇವರು ಶಿವಮೊಗ್ಗ 22 ಮಾರ್ಚ್ ರಂದು ಮಧ್ಯಾಹ್ನ 3.0 ಕ್ಕೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಇವರ ಅಂತ್ಯಕ್ರಿಯೆಯನ್ನು ದಿನಾಂಕ 24-03-2025 ರಂದು10ಘಂಟೆಗೆ ಶಿವಮೊಗ್ಗದ ಗುಡ್ಡೆ ಕಲ್ಲು ಭೂಮಿಯಲ್ಲಿ ನೆರವೇರಿಸಲಾಗುವುದು. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

Department of Social Welfare ಸರ್ಕಾರಿ ಮೆಟ್ರಿಕ್ ಪೂರ್ವ & ನಂತರದ ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆ. ಉಪಲೋಕಾಯುಕ್ತರ ಖಡಕ್ ಸೂಚನೆ

0

Department of Social Welfare ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡುತ್ತೇನೆ. ಆದಾಗ್ಯೂ ಸರಿಪಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.

ಶಿವಮೊಗ್ಗ ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ/ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿ ಮಾತನಾಡಿ, ಯಾವುದೇ ದುರುದ್ದೇಶದಿಂದ ಅಸಪರ್ಮಕತೆ, ಅವ್ಯವಸ್ಥೆ ಉಂಟಾಗಿಲ್ಲ. ಬದಲಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ. ಸರಿಪಡಿಸಿಕೊಳ್ಳಲು ಅವಕಾಶ ನೀಡಿ, ಸರಿಯಾಗದಿದ್ದರೆ ಕ್ರಮ ವಹಿಸುವುದಾಗಿ ತಿಳಿಸಿದರು.

ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಅವರು ಅಡುಗೆ ಮನೆಗೆ ತೆರಳಿ, ಮೇಲ್ಚಾವಣೆ ಹಾಗೂ ಆಹಾರದ ಸುರಕ್ಷತೆ ಬಗ್ಗೆ ತಪಾಸಣೆ ಮಾಡಿದರು. ಕೈ ತೊಳೆಯುವ ಸ್ಥಳ, ವಾಟರ್ ಫಿಲ್ಟರ್ , ಮಕ್ಕಳು ಮಲಗುವ ಕೊಠಡಿಯನ್ನು ಪರಿವೀಕ್ಷಿಸಿ ಹಾಳಾಗಿರುವ ಹಾಸಿಗೆಗಳನ್ನು ಹಾಗೂ ಮಂಚಗಳನ್ನು ಬದಲಾಯಿಸಬೇಕೆಂದು ನಿರ್ದೇಶನ ನೀಡಿದರು.

ಹಾಸಿಗೆ, ಮಂಚಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಹಾಳಾದ ಮಂಚಗಳನ್ನು ದುರಸ್ತಿಪಡಿಸಿ, ಹಾಗೂ ಹರಿದು ಹೋದ ಹಾಸಿಗೆಗಳನ್ನು ತೆಗೆದುಹಾಕಿ ಹೊಸದನ್ನು ಹಾಕಿಸುವಂತೆ ಸೂಚಿಸಿದ ಅವರು ಕಿಟಕಿ ಗಾಜು, ಮೆಶ್ ಸರಿಪಡಿಸಬೇಕು. ಸ್ವಚ್ಚತೆ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಒಡೆದ ಗಾಜು ಮತ್ತು ಅಸಮರ್ಪಕ ಮೆಶ್‌ನಿಂದ ಸೊಳ್ಳೆಗಳು ಒಳಬಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಇನ್ನು ಒಂದು ವಾರದೊಳಗೆ ಈ ಎಲ್ಲ ಕೆಲಸ ಆಗಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸ್ಟೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಲ ಮಂದಿರದ ಆವರಣದೊಳಗೆ ಹಂದಿಗಳ ಹಾವಳಿ ಇದ್ದು ಇದನ್ನು ತಪ್ಪಿಸಬೇಕು. ಹಾಗೂ ಸ್ವಚ್ಚತೆ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

Department of Social Welfare ಶೌಚಾಲಯ ವೀಕ್ಷಿಸಿದ ಅವರು, ಒಡೆದು ಹೋಗಿರುವ ಟೈಲ್ಸ್ಗಳನ್ನು ತೆಗೆದು ಹೊಸದಾಗಿ ಹಾಕಿಸಿ, ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕೆಂದ ಅವರು ಅನುದಾನದ ಅವಶ್ಯಕತೆ ಇದ್ದರೆ ಕೇಳಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ತಮ್ಮ ಮನೆಯಂತೆ ಬಾಲಮಂದಿರವನ್ನು ನೋಡಿಕೊಳ್ಳಬೇಕೆಂದು ತಿಳಿಸಿದರು.

ನಂತರ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಭೇಟಿ ನೀಡಿ, ಶಿವರಾತ್ರಿ ಹಬ್ಬದಂದು ಕೇಂದ್ರಕ್ಕೆ ದಾಖಲಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದರು. ಇದೇ ವೇಳೆ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ, ನಿವಾಸಿಗಳೊಂದಿಗೆ ಮಾತನಾಡಿ, ಕುಂದು ಕೊರತೆಗಳನ್ನು ಆಲಿಸಿದರು.
ನಂತರ, ಎಂಆರ್‌ಎಸ್ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಡುಗೆ ಮನೆ, ದಾಸ್ತಾನು ಕೊಠಡಿ, ಮಕ್ಕಳು ಮಲಗುವ ಕೊಠಡಿಗಳನ್ನು ವೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.

ಹಾಸ್ಟೆಲ್ ಉತ್ತಮವಾಗಿದೆ ಆದರೆ ಹಾಸ್ಟೆಲ್ ಹಿಂಭಾಗ ಕಸ, ಕೊಳಚೆ ನೀರು ನಿಂತಿದೆ. ಮಳೆಯಲ್ಲಿ ರಾಡಿಯಾಗಿ ಸೊಳ್ಳೆ ಹೆಚ್ಚುತ್ತವೆ. ಯುಜಿಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರೊಂದಿಗೆ ಹಣ ಮಂಜೂರಾತಿ ಬಗ್ಗೆ ಮಾತನಾಡುತ್ತೇನೆ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ : ಸರ್ಕಾರಿ ಬಾಲಕಿಯರ ಬಾಲ ಮಂದಿರ, ಎಸ್‌ಸಿ/ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಥಿಗಳೊಂದಿಗೆ ಸಂವಾದ ನಡೆಸಿದ ಅವರು, ಊಟ, ತಿಂಡಿ ಇತರೆ ಸೌಲಭ್ಯಗಳು ಸರಿಯಾಗಿ ನೀಡುತ್ತಿದ್ದಾರಾ, ಕುಡಿಯುವ ನೀರಿನ ಸೌಲಭ್ಯ, ಬಿಸಿನೀರು, ಹೊಟ್ಟೆ ತುಂಬ ಗುಣಮಟ್ಟದ ಊಟ ಕೊಡುತ್ತಿದ್ದಾರಾ? ಎಂದು ಕೇಳಿದರು.

ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ನಲ್ಲಿ ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್‌ಗಳು ಲಭ್ಯವಿದೆಯೇ, ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಾರಾ, ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗುತ್ತಿದೆಯೇ ಎಂದು ವಿಚಾರಿಸಿದರು.

ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಪುಸ್ತಕಗಳು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಂಪ್ಯೂಟರ್ ಒದಗಿಸುವಂತೆ ಸೂಚನೆ ನೀಡಿದ ಅವರು ವಿದ್ಯಾರ್ಥಿನಿಲಯಗಳಲ್ಲಿ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಗುಣಮಟ್ಟದೊಂದಿಗೆ ನೀಡಬೇಕು. ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕೆಂದರು.
ಸರ್ಕಾರ ನೀಡುವ ಸೌಲಭ್ಯಗಳ ಸದ್ಬಳಕೆ ಆಗಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಸತ್ಪ್ರಜೆಗಳಾಗಬೇಕು. ಸೇವಾ ಮನೋಭಾವ ಬೆಳೆಸಿಕೊಂಡು, ಉತ್ತಮ ಉದ್ಯೋಗ ಪಡೆದು, ದೇಶ ಸೇವೆ ಮಾಡಬೇಕು. ಸಮಾಜಕ್ಕೆ ಏನಾದರೊಂದು ಉತ್ತಮ ಕೊಡುಗೆ ನೀಡಬೇಕು. ನಿಮ್ಮ ಪೀಳಿಗೆ ಚೆನ್ನಾಗಿದ್ದರೆ ದೇಶ ಅಭಿವೃದ್ಧಿ ಸಾಧ್ಯ. ಚೆನ್ನಾಗಿ ಓದಿರಿ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ಅದನ್ನು ಉತ್ತೇಜಿಸುವುದಿಲ್ಲ. ಮತ್ತು ಇದನ್ನು ನಿಯಂತ್ರಿಸುತ್ತೇನೆ ಎಂಬ ಮನೊಭಾವ ಇಟ್ಟುಕೊಂಡು ಮುಂದೆ ಬರಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಾದ ನ್ಯಾ.ಲೋಕಪ್ಪ ಎನ್ ಆರ್. ನ್ಯಾ.ವಿಜಯಾನಂದ ಜೆ ವಿ, ನ್ಯಾ.ಕಿರಣ್ ಪಿ.ಎಂ ಪಾಟೀಲ್, ಜಿ.ಪಂ ಸಿಇಓ ಎನ್.ಹೇಮಂತ್, ಎಸ್‌ಪಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.