Tuesday, August 4, 2026
Tuesday, August 4, 2026
Home Blog Page 34

ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡಲು ಹಾಗೂ ಈ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್ ಎಸ್ ಪಿ)ದ ಮೂಲಕ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 08182-200266 ಮತ್ತು ಶಿವಮೊಗ್ಗ ಜಿಲ್ಲೆಯ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ/ ಸಾಗರ/ ಸೊರಬ/ ಶಿಕಾರಿಪುರ/ ಭದ್ರಾವತಿ/ ಹೊಸನಗರ ತೀರ್ಥಹಳ್ಳಿ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ ಶ್ರೀನಿವಾಸ್ ತಿಳಿಸಿದ್ದಾರೆ

ಸಾಗರದ ಕಾಗೋಡಿನಿಂದ ವ್ಯಕ್ತಿ ನಾಪತ್ತೆ. ಸಾಗರ ಗ್ರಾಮಾಂತರ ಪೊಲೀಸ್ ಟಾಣೆ ಪ್ರಕಟಣೆ

0

ಸಾಗರ ತಾಲ್ಲೂಕಿನ ಕಾಗೋಡು ಗ್ರಾಮ ವಾಸಿ ರೇಣುಕಮ್ಮ ಎಂಬುವವರ ಮಗ 40 ವರ್ಷ ವಯಸ್ಸಿನ ಗಿರೀಶ್ 2 ತಿಂಗಳಿಂದ ಕಾಣೆಯಾಗಿರುತ್ತಾರೆ. ಈತನು ಮಾನಸಿಕ ಅಸ್ವಸ್ಥನಾಗಿದ್ದು, 5.8 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ದಿವ್ಯ ಎಂಬ ಹಚ್ಚೆ ಇರುತ್ತದೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ 9480803361/ 9480803385, ಸಾಗರ ವಿಭಾಗ -08182-226082, ಶಿವಮೊಗ್ಗ ಎಸ್.ಪಿ ಕಚೇರಿ 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಪದ್ಮಪ್ರಶಸ್ತಿ- 2027 ನಾಮನಿರ್ದೇಶಕ್ಕೆ ಅರ್ಜಿ ಆಹ್ವಾನ

0

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಪದ್ಮ ಪ್ರಶಸ್ತಿ-2027’ ಕ್ಕಾಗಿ ಅರ್ಹ ಸಾಧಕರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಸಮಾಜದಲ್ಲಿ ಗಮನಾರ್ಹ ಪರಿಣಾಮ ಬೀರಿದರೂ, ಗುರುತಿಸಲ್ಪಡದೆ ಉಳಿದಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ಮಹಿಳಾ ಸಾಧಕಿಯರು ಮತ್ತು ಸಮಾಜ ಸೇವಕರು
ತಳಮಟ್ಟದ ಕಾರ್ಯಕರ್ತರು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು
ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ, ಪೋಷಣೆ ಹಾಗೂ ಮಹಿಳೆಯರ ವಿರುದ್ಧದ ಅಪರಾಧಗಳ ತಡೆಗಟ್ಟುವಿಕೆಗೆ ಶ್ರಮಿಸಿದವರು
ಮಕ್ಕಳ ರಕ್ಷಣೆ, ದುರ್ಬಲ ವರ್ಗಗಳ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದವರು
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ಪೌಷ್ಟಿಕ ಆಹಾರ ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಸಾಧಕರು ಅರ್ಜಿ ಸಲ್ಲಿಸಬಹುದಾಗಿದೆ:
ಅರ್ಹ ಅಭ್ಯರ್ಥಿಗಳು ಹಾಗೂ ಸಂಸ್ಥೆಗಳು ತಮ್ಮ ಸಾಧನೆಗಳ ವಿವರಗಳನ್ನು “Rashtriya Puraskar Portal” ನಲ್ಲಿ ಆನ್‌ಲೈನ್ ಮೂಲಕ ಅಳವಡಿಸಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ದಿನಾಂಕ: 31-07-2026 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಆಲ್ಕೊಳ 100 ಅಡಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

0

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಮನೆ ಕುಸಿದಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಶಾಸಕ ಎಸ್.ಎನ್‌ಚನ್ನಬಸಪ್ಪ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಹಾಗೂ ಸಾರ್ವಜನಿಕರಿಗೆ ಆಗಿರುವ ತೊಂದರೆಗಳ ಕುರಿತು ಸ್ಥಳೀಯ ನಿವಾಸಿಗಳಿಂದ ಮುಕ್ತವಾಗಿ ಮಾಹಿತಿ ಪಡೆದರು.

ಮಳೆಯಿಂದ ನೊಂದ ಕುಟುಂಬಕ್ಕೆ ತಕ್ಷಣದ ತುರ್ತು ಪರಿಹಾರ ವಿತರಿಸಲು ಮತ್ತು ಸರ್ಕಾರದ ನಿಯಮಾವಳಿಗಳ ಅನ್ವಯ ಗರಿಷ್ಠ ಪ್ರಮಾಣದ ಪರಿಹಾರ ಧನವನ್ನು ತ್ವರಿತವಾಗಿ ಮಂಜೂರು ಮಾಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

S.N. Channabasappa ಭೇಟಿಯ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಜಗನ್ನಾಥ್, SC ಮೋರ್ಚಾ ನಗರ ಅಧ್ಯಕ್ಷರಾದ ಶ್ರೀ ವಿಜಯೇಂದ್ರ, ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಶಿವಮೊಗ್ಗದಂತಹ ಮಲೆನಾಡಿನ ಸೌಂದರ್ಯವನ್ನ ಆಸ್ವಾದಿಸುವುದೇ ಆನಂದ- ಮೊಹ್ಮದ್ ಹ್ಯಾರಿಸ್ ನಲಪಾಡ್

0

ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಸಂದೇಶ ಸಾರುವ ಉದ್ದೇಶದೊಂದಿಗೆ ಯುವ ನಾಯಕ ಡಾ. ಶರತ್‌ ಮರಿಯಪ್ಪ ನೇತೃತ್ವದ “ಡಾ. ಶರತ್ ಮರಿಯಪ್ಪ ಫೌಂಡೇಷನ್’ ವತಿಯಿಂದ ಇಂದು( ಜು.5) ನಗರದಲ್ಲಿ ಆಯೋಜಿಸಿದ್ದ ‘ರನ್ ಮಲೆನಾಡು’ ಮ್ಯಾರಥಾನ್ ಅಭೂತ ಪೂರ್ವ ಯಶಸ್ಸು ಕಂಡಿತು.

ಜಿಟಿ ಜಿಟಿ ಮಳೆಯಲ್ಲೂ ರನ್ ಮಲೆನಾಡು ಓಟಕ್ಕೆ ಭಾರೀ ಸಂಖ್ಯೆಯ ಜನರು ಭಾಗವಹಿಸಿದ್ದರು. ವಿಶೇಷವಾಗಿ ಮಕ್ಕಳು, ವಿಶೇಷ ಚೇತನರು, ಹಿರಿಯರು, ದಂಪತಿಗಳು ಕೂಡ ಸುರಿಯುವ ಮಳೆಯನ್ನು ಲೆಕ್ಕಿಸದೆ “ರನ್ ಮಲೆನಾಡು” ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಸರಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ರನ್ ಮಲೆನಾಡು ಮ್ಯಾರಥಾನ್ ಮೂಲಕ ಮಲೆನಾಡಿನ ಜನರ ಆರೋಗ್ಯ, ಪರಿಸರ ಸಂರಕ್ಷಣೆಗಾಗಿ ನಗರದ ರಸ್ತೆಗಳಲ್ಲಿ ಓಡಿದರು. ನಗರದಲ್ಲಿ ನಡೆದ ಮ್ಯಾರಥಾನ್ ಓಟಕ್ಕೆ ಇದೇ ಮೊದಲ ಬಾರಿಗೆ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಕಂಡು ಬಂತು. ಈ ಮೂಲಕ ಜಿಲ್ಲೆಯ ಮ್ಯಾರಥಾನ್ ಇತಿಹಾಸದಲ್ಲಿ ‘ರನ್‌ ಮಲೆನಾಡು’ ಓಟವು ದಾಖಲೆ ಸೃಷ್ಟಿಸಿತು.

ನಗರದ ನೆಹರು ಕ್ರೀಡಾಂಗಣದ ಮುಂಭಾಗದಿಂದ ಬೆಳಗ್ಗೆ ಆರಂಭಗೊಂಡ ‘ರನ್ ಮಲೆನಾಡು’ ಮ್ಯಾರಥಾನ್ ಓಟಕ್ಕೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರು ಸಾಂಕೇತಿಕ ಗಿಡಕ್ಕೆ ನೀರೆರೆದು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಅವರು, “ಬೆಂಗಳೂರು ಜನರಿಗೆ ಬೆಂಗಳೂರಿನಷ್ಟು ಒಳ್ಳೆಯ ವಾತಾವರಣ ಇನ್ನೆಲ್ಲೂ ಇಲ್ಲ ಎನ್ನುವ ಜಂಭವಿದೆ, ಆದರೆ ನಾನು ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಸುಂದರವಾದ ವಾತಾವರಣದ ಅನುಭವದೊಂದಿಗೆ ಬೆಂಗಳೂರನ್ನೇ ಮರೆತು ಬಿಟ್ಟಿದ್ದೇನೆ. ಇಂತಹ ಮಲೆನಾಡಿನ ಈ ಸೌಂದರ್ಯವನ್ನು ಆಸ್ವಾದಿಸುವುದೇ ಆನಂದ’ ಎನ್ನುತ್ತಾ ಜಿಟಿ ಜಿಟಿ ಮಳೆಯ ತಣ್ಣನೆಯ ವಾತಾವರಣವನ್ನು ಮುಕ್ತ ಕಂಠದಿಂದ ಬಣ್ಣಿಸಿದರು.

ಫೌಂಡೇಷನ್ ಸಂಸ್ಥಾಪಕ ಡಾ.ಶರತ್‌ ಮರಿಯಪ್ಪ, ಮಾತನಾಡಿ, ಒಂದೊಳ್ಳೆಯ ಉದ್ದೇಶಕ್ಕಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಬೇಕೆಂದು ಯೋಚಿಸಿದ್ದೇವು. ಅದನ್ನು ಫೌಂಡೇಶನ್ ಮೂಲಕ ನಡೆಸೋಣ ಅಂತ ನಿರ್ಧಾರ ಮಾಡಿದೆವು. ಆಗ ಹೊಳೆದಿದ್ದು” ರನ್ ಮಲೆನಾಡು’ ಮ್ಯಾರಥಾನ್. ಈ ಓಟಕ್ಕೆ ಇವತ್ತು ಇಷ್ಟು ಜನರು ಬಂದು ಬೆಂಬಲಿಸಿದ್ದು ಈ ಮರೆಯಲಾಗದ ಐತಿಹಾಸಿಕ ದಿನ”. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ ಕುಮಾರ್,ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರವರು, ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು,ರಾಜ್ಯ ಕಾಂಗ್ರೆಸ್ ನಾಯಕರು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ. ಶ್ರೀಕಾಂತ್ ರವರು, ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ ರಂಗನಾಥ್ ರವರು, ಹಾಪ್ ಕಾಮ್ಸ್ ಅಧ್ಯಕ್ಷರಾದ ವಿಜಯ್ ಕುಮಾರ್ ದನಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಚ್. ಪಾಲಾಕ್ಷಿ, ರೇಖಾ ರಂಗನಾಥ್, ಸೂಡಾ ಸದಸ್ಯರಾದ ಎಂ ಪ್ರವೀಣ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ವೃಕ್ಷ ಫೌಂಡೇಶನ್ ನ ಅಧ್ಯಕ್ಷರಾದ ಎಂ ಸೋನಿಯಾ ,ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್ ಪಿ ಗಿರೀಶ್, ಸಿಟಿ ಬ್ಯಾಂಕ್ ನಿರ್ದೇಶಕ ಬಿ .ಲೋಕೇಶ್, ಯುವ ಮುಖಂಡ ವಿನಯ್ ತಾಂಡ್ಲೆ ಸ್ಟೆಪ್ ಹೋಲ್ಡರ್ಸ್ ಡ್ಯಾನ್ಸ್ ಟೀಮ್ ನ ಅರುಣ್ ರಾಜ್ ಹಾಗೂ ಶಿವಮೊಗ್ಗ ನಗರದ ವಿವಿಧ ಸಂಘ ಸಂಸ್ಥೆಯ ಪ್ರಮುಖರು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು

ಪ್ರತಿಯೊಬ್ಬ ಅರ್ಹ ನಾಗರಿಕರ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಅವರ ವಿವರಗಳ ಖಚಿತತೆ ದಾಖಲಿಸುವುದು ಮುಖ್ಯ ಉದ್ದೇಶ- ನವೀನ್ ಅಹ್ಮದ್ ಪರ್ವೇ

0

ಶಿವಮೊಗ್ಗ ಜಿಲ್ಲೆಯ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸ್ವೀಪ್ ಕಾರ್ಯಕ್ರಮದ ರಾಜ್ಯ ಮಟ್ಟದ ತರಬೇತುದಾರರಾದ ನವೀದ್ ಅಹಮದ್ ಪರ್ವೇಜ್ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು.

ಅರ್ಹರೆಲ್ಲರಿಗೂ ಮತದಾನದ ಹಕ್ಕು ನೀಡುವುದು ಅಭಿಯಾನದ ಉದ್ದೇಶ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 2026ರ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ನವೀದ್ ಅಹಮದ್ ಪರ್ವೇಜ್ ತಿಳಿಸಿದರು.

ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಮುಖ ದಿನಾಂಕಗಳು ಹಾಗೂ ವಿವರಗಳು:
ಮನೆ ಮನೆ ಸಮೀಕ್ಷೆ: ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಕರಡು ಪಟ್ಟಿ ಪ್ರಕಟಣೆ: ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಆಕ್ಷೇಪಣೆ ಸಲ್ಲಿಕೆ: ಕರಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಅವಕಾಶವಿರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆ: ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.
ವಯೋಮಿತಿ: ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕರಿಗೆ ಸೂಚನೆ: “ಬಿಎಲ್‌ಓ ರವರು ಮನೆ ಮನೆಗೆ ಭೇಟಿ ನೀಡಿ ಎನುಮರೆಷನ್ ಫಾರಂಗಳನ್ನು ದ್ವಿಪ್ರತಿಯಲ್ಲಿ ನೀಡಲಿದ್ದು, ಅದನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ನೆರವಾಗಲಿದ್ದಾರೆ. ನಾಗರಿಕರು ಭರ್ತಿ ಮಾಡಿದ ಫಾರಂ ನೀಡಿ ಕಡ್ಡಾಯವಾಗಿ ಸ್ವೀಕೃತಿ ಪಡೆಯಬೇಕು. ಈ ಪ್ರಕ್ರಿಯೆ ಕುರಿತು ಯಾವುದೇ ಗೊಂದಲ ಅಥವಾ ಆತಂಕವಿದ್ದರೆ ಸಾರ್ವಜನಿಕರು ನೇರವಾಗಿ ಬಿಎಲ್‌ಓ ಅವರನ್ನು ಸಂಪರ್ಕಿಸಬಹುದು ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು” ಎಂದು ಪರ್ವೇಜ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಎಸ್.ಆರ್. ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ‘ಎಸ್ಐ ಆರ್ 26’ ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಹಂತಗಳಲ್ಲಿ ‘ಮತದಾರ ಸಾಕ್ಷರತಾ ಸಂಘ’ಗಳ ಅಡಿಯಲ್ಲಿ ವಿಶೇಷ ಅರಿವು ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಲ್ಲದೆ, ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ವೋಟರ್ ಅವೇರ್ನೆಸ್ ಫೋರಂಗಳನ್ನು ರಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕರಾದ ಲಿಂಗರಾಜ್, ವಿಷಯ ಪರಿವೀಕ್ಷಕರುಗಳಾದ ಮಸೂದ್, ಜ್ಯೋತಿ, ಅಸುಂತ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

D.K. Shivakumar ಮುಖ್ಯಮಂತ್ರಿ ಡಿ.ಕೆ.ಶಿವಮಾರ್ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅದ್ಧೂರಿ ಸನ್ಮಾನ

0

D.K. Shivakumar ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರನ್ನು ರಾಜ್ಯ ಸರ್ಕಾತಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಭೇಟಿ ಮಾಡಿದ್ದರು.
ಜುಲೈ 11 ನೇ ತಾರೀಕು ನಡೆಯುವ ಮಾನ್ಯ ಮುಖ್ಯಮಂತ್ರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು
ಮಾನ್ಯ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಅತ್ಯಂತ ಸಂತೋಷದಿಂದ ಭಾಗವಹಿಸುವುದಾಗಿ ತಿಳಿಸಿದರು
ಇದರ ಜೊತೆ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸವಿಸ್ತಾರವಾಗಿ ಚರ್ಚಿಸಿದರು.
ನೌಕರರ ಸಮಸ್ಯೆ ಹಾಗೂ ಸಂಘಟನೆ ಜೊತೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು‌ ಮುಖ್ಯಮಂತ್ರಿಗಳು ಭರವಸೆ ನೀಡಿದರು .

ಶ್ರೀಶಿವನಾಗ ಪಾರ್ಥ ಅವಧೂತ ಮಹಾರಾಜರಿಗೆ ” ಕನಕಶ್ರೀ ಚೇತನ ಪತಂಜಲಿ ರತ್ನ” ಪ್ರಶಸ್ತಿ ಪ್ರದಾನ

0

ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ ಹಾಗೂ ಪತಂಜಲಿ ಕರ್ನಾಟಕ ಜನಪದ ಕಲಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕನಕ ಕಥಾಕೀರ್ತನ ಮಹೋತ್ಸವ, ಸಮ್ಮೇಳನ, ತರಬೇತಿ ಕಾರ್ಯಗಾರ, ಹಾಲುಮತ ಸಂಸ್ಕೃತಿ, ಕನಕ ಕಲಾವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿಯಾನ ಹಾಗೂ ಶ್ರೀ ಕನಕದಾಸರ ಜಯಂತೋತ್ಸವದ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವನಾಗ ಪಾರ್ಥ ಅವಧೂತ ಮಹಾರಾಜರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜದ ಮುಖಂಡರು, ಕಲಾವಿದರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಮಪೂಜ್ಯ ಶ್ರೀ ಶಿವನಾಗ ಪಾರ್ಥ ಅವಧೂತ ಮಹಾರಾಜರಿಗೆ ಗೌರವಪೂರ್ವಕವಾಗಿ ರಾಜ್ಯ ಮಟ್ಟದ “ಕನಕ ಶ್ರೀ ಚೇತನ ಪತಂಜಲಿ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಳಿಕ ಗುರುಗಳ ಹಿತವಚನ ಹಾಗೂ ಆಶೀರ್ವಾದದೊಂದಿಗೆ ಕಾರ್ಯಕ್ರಮವು ಭಕ್ತಿಭಾವ, ಸಾಂಸ್ಕೃತಿಕ ವೈಭವ ಮತ್ತು ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

Inner Wheel Club Shivamogga ಶಿವಮೊಗ್ಗ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

Inner Wheel Club Shivamogga ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2026-2 7ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜು.10 ರಂದು ನಗರದ ಮಥುರಾ ಪ್ಯಾರಡೈಸ್ ನಲ್ಲಿ ಬೆಳಗ್ಗೆ 10.30 ಕ್ಕೆ ಆಯೋಜಿಸಲಾಗಿದೆ.

ಈ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಒನ್ ಸ್ಟಾಪ್ ಸೆಂಟರ್ (ಸಖಿ) ನ ಕೇಂದ್ರ ಆಡಳಿತಾಧಿಕಾರಿ ಅಕ್ಷತಾ ಹೆಚ್.ಪಿ. ರವರು ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ. ಉಷಾ ಪ್ರಭು, ಸುನಿತಾ ಶ್ರೀಧರ್, ಎನ್.ಜಿ.ಉಷಾ, ವಸಂತ ಶಾಸ್ತ್ರಿ ಕ್ಲಬ್ ನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಶಿವಮೊಗ್ಗದ ಇನ್ನರ್ ವೀಲ್ ಕ್ಲಬ್ ನ 2026-27 ನೇ ಸಾಲಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಡಿ.ಎಂ.ಸುನೀತಾ, ಐಪಿ ಅಧ್ಯಕ್ಷರಾಗಿ ಲತಾ ಎಂ. ರಮೇಶ್, ಉಪಾಧ್ಯಕ್ಷರಾಗಿ ಸೀಮಾ ಸದಾನಂದ್, ಕಾರ್ಯದರ್ಶಿ ಸುಮಲತಾ ಹೆಚ್.ವಿ., ಖಜಾಂಚಿ ಶೃತಿ ರಾಕೇಶ್, ಐಎಸ್ಓ ಶ್ವೇತಾ ಗಿರೀಶ್, ಬುಲೆಟಿನ್ ಸಂಪಾದಕರಾಗಿ ಸೋಮಿಯಾ ಆಯ್ಕೆಯಾಗಿರುತ್ತಾರೆ.

Inner Wheel Club Shivamogga 2026-27 ನೇ ಸಾಲಿನ ನಿರ್ದೇಶಕರ ಮಂಡಳಿಯಲ್ಲಿ ಶ್ರೀರಂಜಿನಿ ದತ್ತಾತ್ರಿ, ದೀಪಾ ಚಂದ್ರನ್, ರಾಮ ಗೋಪಾಲ್, ಭಾರತಿ ಜೆ. ಕಾಮತ್, ಗೌರಿ ವಿಜಯಕುಮಾರ್, ಪೂರ್ಣಿಮಾ ಮೋಹನ್, ಮಲ್ಲಿಕಾ ವಿ. ಜೋಯಿಸ್, ಹೇಮಾ ಮಂಜುನಾಥ್, ಶೋಭಾ ರುದ್ರೇಶ್, ಶ್ರೀದೇವಿ ಎಂ. ಭಟ್, ಅನುಪಮಾ ಬಿ.ಎಸ್., ಜ್ಯೋತಿ ಪವಾರ್, ಸುಪ್ರಿಯಾ ಶಾಸ್ತ್ರಿ, ಅನಿತಾ ಸೆಂಥಿಲ್, ಗೀತಾ ಗಣೇಶ್ ನಿರ್ದೇಶಕರಾಗಿ ಆಯ್ಕೆ ಆಗಿರುತ್ತಾರೆ.

ಜಡೆಯಲ್ಲಿ ಮೃತ ಮಹಾಲಿಂಗಪ್ಪನವರಿಗೆ ಶ್ರದ್ಧಾಂಜಲಿ

0

ಮೆಸ್ಕಾಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದ ಜಡೆ ವಿಭಾಗದ ಶಾಖಾಧಿಕಾರಿಯಾಗಿದ್ದ ಮಹಾಲಿಂಗಪ್ಪ ಅವರ ಪಾರ್ಥೀವ ಶರೀರ ವನ್ನು ಅವರು ಕಾರ್ಯ ನಿರ್ವಹಿಸುತ್ತಿದ್ದ ಜಡೆ ಕಛೇರಿಗೆ ತರಲಾಯಿತು. ಕಿಕ್ಕಿರಿದು ನೆರೆದಿದ್ದ ಜನ ಸಾಗರದ ಮಧ್ಯೆ ಸ್ವಾಮೀಜಿಗಳು, ಸಿಬ್ಬಂದಿ ವರ್ಗದವರು, ಊರ ಹಿರಿಯರು, ಗ್ರಾಮಸ್ಥರು, ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು.

ಅಂತಿಮ ಗೌರವ ಸಲ್ಲಿಸಿ ಮಾತನಾಡಿದ ಜಡೆ ಮಹಾಂತ ಮಹಾಸ್ವಾಮಿಗಳು ಮಹಾಲಿಂಗಪ್ಪ ಅವರು ಜನಾನುರಾಗಿಯಾದ ಅಧಿಕಾರಿಯಾಗಿದ್ದರು. ಅವರನ್ನು ಕಳೆದುಕೊಂಡು ನಮ್ಮ ತಾಲ್ಲೂಕು ಅಷ್ಟೆ ಅಲ್ಲ ನಮ್ಮ ಜಿಲ್ಲೆಗೆ ನಷ್ಟವಾಗಿದೆ. ಎಲ್ಲಿಯೇ ತೊಂದರೆ ಇರಲಿ ಅದನ್ನು ತಕ್ಷಣ ಸರಿಪಡಿಸುವ ಮನೋಭಾವ ಹೊಂದಿದ್ದಕ್ಕೆ ಇಲ್ಲಿ ಸೇರಿರುವ ಜನ ಸಾಗರವೇ ಸಾಕ್ಷಿಯಾಗಿದೆ ಎಂದರು.

ಮಹಾಲಿಂಗಪ್ಪ ಅವರ ಶ್ರದ್ಧಾಂಜಲಿ ಯಲ್ಲಿ ಭಾಗವಹಿಸಿ ಮಾತನಾಡಿದ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇಲಾಖೆ ಹಾಗೂ ಸಾರ್ವಜನಿಕರ ಸಂಪರ್ಕ ಸೇತುವೆ ಆಗಿದ್ದವರು ಮಹಾಲಿಂಗಪ್ಪ ಅವರು. ಪರಸ್ಪರ ಪ್ರೇಮ, ಸಹಕಾರ, ಸೌಹಾರ್ದತೆ ಗೆ ಹೆಸರಾಗಿದ್ದರು. ಇವರ ಕಾರ್ಯಕ್ಷಮತೆ ಯಿಂದ ಇಂದು ಈ ಭಾಗದಲ್ಲಿ ಬೆಳೆಗಳು ಚನ್ನಾಗಿವೆ. ಮನೆಗಳಲ್ಲಿ ಬೆಳಕು ಚನ್ನಾಗಿದೆ. ತಮ್ಮ ವ್ಯಕ್ತಿತ್ವದಿಂದ ಈ ಭಾಗದ ಜನಗಳ ಮನ ಗೆದ್ದಿದ್ದು ಅವರ ಮರಣದಿಂದ ಈ ಭಾಗದಲ್ಲಿ ಸೂತಕದ ವಾತಾವರಣ ಅವರಿಸಿಕೊಂಡಿದೆ ಎಂದರು.

ಜಡೆ ಸಂಸ್ಥಾನ ಮಠದ ಕಿರಿಯ ಶ್ರೀಗಳಾದ ಕುಮಾರ ಕೆಂಪಿನ ಸಿದ್ಧ ವೃಷಭೇಂದ್ರ ಸ್ವಾಮಿಗಳು ಮಾತನಾಡಿ ಮಹಾಲಿಂಗಪ್ಪ ಅವರ ಸೇವೆ ಅನನ್ಯವಾದದು. ಯಾವುದೇ ಜಾತಿ ಮತ ಧರ್ಮ ಬೇಧವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ಈ ಭಾಗದ ಜನತೆಗೆ ಬೇಸರದ ಸಂಗತಿಯಾಗಿದೆ ಎಂದರು.

ಸಾವಿರಾರು ಸಾರ್ವಜನಿಕ ರು ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಅಂತಿಮ ನಮನ ಸಲ್ಲಿಸಿದರು. ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ ಅಂತಿಮ ಸಂಸ್ಕಾರಕ್ಕಾಗಿ ಅವರ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ಬೀಳ್ಕೊಡಲಾಯಿತು.