Tuesday, August 4, 2026
Tuesday, August 4, 2026
Home Blog Page 35

D.K. Sivakumar ಹೆಣ್ಣು ಕುಟುಂಬದ ಕಣ್ಣು. ನಿಮ್ಮ ಮಾರ್ಗದರ್ಶನದಂತೆ ಪ್ರತಿಯೊಂದೂ ಕುಟುಂಬ ಬೆಳಗುತ್ತಿದೆ- ಡಿ.ಕೆ.ಶಿವಕುಮಾರ್

0

D.K. Sivakumar “ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಮಹಿಳೆಯರು ನಮಗೆ ಬೆಂಬಲ ನೀಡಿದ್ದು, ಅವರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಸೋಮವಾರ ನಡೆದ ಅಕ್ಕಪಡೆ-ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು. ನಿಮ್ಮ ಮಾರ್ಗದರ್ಶನದಂತೆ ಪ್ರತಿಯೊಂದು ಕುಟುಂಬ ಬೆಳಗುತ್ತಿದೆ. ನಾರಿ ಶಕ್ತಿ ದೇಶದ ಶಕ್ತಿ. ನಾನು ಇಂದು ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅನುಭವ ಮಂಟಪದಿಂದ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಆರಂಭಿಸಲು ಬಂದಿದ್ದೇನೆ. ಇಲ್ಲಿಂದ ಕಲಬುರ್ಗಿಗೆ ಹೋಗಿ, ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮದೇವತೆ ಬಗ್ಗೆ ಕೇಳುತ್ತೇವೆ. ನಮ್ಮ ಭೂಮಿಯನ್ನು ಮಾತೃಭೂಮಿ, ಭೂಮಿತಾಯಿ ಎಂದು ಪರಿಗಣಿಸುತ್ತೇವೆ” ಎಂದು ಬಣ್ಣಿಸಿದರು.

ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ

“ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ಆರಂಭಿಸಲಾಗಿದೆ. ನಮ್ಮ ಸರ್ಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖಂಡತ್ವದಲ್ಲಿ ಈ ಪಡೆಯನ್ನು ರಚಿಸಿದೆ. ಈ ಪಡೆಗೆ ಸೇರಿರುವವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಶಕ್ತಿ, ಧೈರ್ಯ, ಸಾಧನೆಗೆ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಲಿದೆ. ಮಹಿಳೆಯರಿಗಾಗಿ ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿ ಕಾರ್ಯಕ್ರಮವನ್ನು ಈಗಾಗಲೇ ನೀಡಿದ್ದೇವೆ. ಮಹಿಳೆಯರು ಹಾಗೂ ಯುವಕರಿಗೆ ಪ್ರತಿ ಪಂಚಾಯ್ತಿಯಲ್ಲಿ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ಹಾಗೂ ಜಾತ್ಯಾತೀತ ತತ್ವ ಉಳಿಸಿಕೊಂಡು ಒಗ್ಗಟ್ಟಿನಿಂದ ಇರಲು ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯವ ಸಂಘ ರಚಿಸಲು ಸರ್ಕಾರ ಆದೇಶ ಮಾಡಿದೆ” ಎಂದು ತಿಳಿಸಿದರು.

D.K. Sivakumar “ನಾವು ಮಾತೃ ದೇವೋಭವ ಎಂದು ಪರಿಗಣಿಸಿದ್ದೇವೆ. ನೀವೆಲ್ಲರೂ ನಮ್ಮ ಜೊತೆ ಕೈಜೋಡಿಸಿ, ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ಶಕ್ತಿ ನೀಡುವ ಜವಾಬ್ದಾರಿ ನಮ್ಮದು. ನಿಮ್ಮಲ್ಲಿ ನಾಯಕತ್ವ ಬೆಳೆಯಬೇಕು. ಪಂಚಾಯ್ತಿಯಿಂದ ಸಂಸತ್ತಿನವರೆಗೂ ನಾಯಕತ್ವ ಬೆಳೆಯಬೇಕು. ರಾಜಕೀಯವಾಗಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನಾಯಕರಾಗಿ ಬೆಳೆಯಬೇಕು. ನಿಮ್ಮ ಜೊತೆಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಈ ಸರ್ಕಾರ ಇರಲಿದೆ” ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಕುಸಿದು ಬಿದ್ದು, ಬಿಎಲ್ಓ ಸಾವು

0

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಾಪುರ ಸಮೀಪದ ಕೋಡಿ ಹೊಸೂರು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಿಎಲ್ಓ ಆಗಿದ್ದ ಮಂಜುಳಾ (50) ಅವರು ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಮಂಜುಳಾ ಅವರು ಕಲ್ಲಾಪುರದ ಅಂಗನವಾಡಿ ಶಿಕ್ಷಕಿಯಾಗಿದ್ದು, ಚುನಾವಣೆಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ವಿಎ, ಬಿಎಲ್ಓ ಹಾಗೂ ಇತರ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಭದ್ರಾವತಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮಂಜುಳಾ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿಗೆ ನಿಖರ ಕಾರಣ ವೈದ್ಯಕೀಯ ವರದಿಯ ಬಳಿಕವೇ ತಿಳಿದುಬರಲಿದೆ. ಪೊಲೀಸರು ಪ್ರಕರಣದ ಕುರಿತು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಧಾರ್ಮಿಕ ಕೇಂದ್ರಗಳನ್ನ ರಕ್ಷಿಸಿ ಮುಂದಿನ ಪೀಳಿಗೆಗೆ ನೀಡಲು ಕೇಂದ್ರ ಸರ್ಕಾರ ಬದ್ಧ- ಬಿ.ವೈ.ರಾಘವೇಂದ್ರ

0

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾದ ಉಡುತಡಿ (ಉಡುಗಣಿ) ಗ್ರಾಮಕ್ಕೆ ಸಂಸದ ರಾಘವೇಂದ್ರ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು..

೧೨ನೇ ಶತಮಾನದ ವಚನ ಚಳವಳಿಯ ಧೀಮಂತ ಶಕ್ತಿ, ಶಿವಭಕ್ತಿಯ ಶ್ರೇಷ್ಠ ಸಂಕೇತವಾದ ಪೂಜ್ಯ ಅಕ್ಕಮಹಾದೇವಿ ಅವರ ಜನ್ಮಸ್ಥಳವಾಗಿ ಉಡುತಡಿಯು ವಿಶ್ವದಾದ್ಯಂತ ಕೀರ್ತಿ ಪಡೆದಿದೆ. ಅಂದಿನ ರಾಜ ಕೌಶಿಕನ ಕೋಟೆ-ರಾಜಧಾನಿಯಾಗಿದ್ದ ಈ ಐತಿಹಾಸಿಕ ಪುಣ್ಯಭೂಮಿಯನ್ನು ಇಂದು ಅತ್ಯುತ್ತಮ ಸಾಂಸ್ಕೃತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುತ್ತಿದೆ.
(KNNL) ವತಿಯಿಂದ ಅಕ್ಕಮಹಾದೇವಿ ಸ್ಮಾರಕ ದೇವಸ್ಥಾನದ ಸುತ್ತಮುತ್ತ ಹಾಗೂ ಈ ಐತಿಹಾಸಿಕ ಪರಿಸರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಯನ್ನು ಶಿವಮೊಗ್ಗ ಲೋಕಸಭಾಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸದರಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ, ಉನ್ನತ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ದೇಶ-ವಿದೇಶಗಳಿಂದ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಅಭಿಯಂತರರಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಬಿ.ವೈ.ರಾಘವೇಂದ್ರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು

ನಮ್ಮ ಜಿಲ್ಲೆಯ ಇಂತಹ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸಲು ನಮ್ಮ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ

ವ್ಯಾಪಾರದಲ್ಲಿ ಪ್ರಾಮಾಣಿಕತೆ , ವರ್ತಕರ ವಿಶ್ವಾಸಗಳಿಕೆ ದೊಡ್ಡ ಬಂಡವಾಳ ಆಗಿದೆ- ಎಂ.ಸಿ.ದೇವರಾಜ್

0

ವರ್ತಕರ ವಿಶ್ವಾಸವನ್ನು ಗಳಿಸುವುದು ಅತ್ಯಂತ ಮುಖ್ಯ. ಅದೇ ವಿತರಕರ ದೊಡ್ಡ ಬಂಡವಾಳ ಆಗಿರುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎಂ.ಸಿ.ದೇವರಾಜ್ ಹೇಳಿದರು.

ಜಿಲ್ಲಾ ವಿತರಕರ ಸಂಘದ ಮೂರನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಇಂದಿನ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದು, ಡಿಜಿಟಲ್ ವ್ಯಾಪಾರ, ಆನ್‌ಲೈನ್ ಸ್ಪರ್ಧೆ, ಬೆಲೆ ಏರಿಳಿತ, ಹೊಸ ಸರ್ಕಾರಿ ನಿಯಮಗಳು ಹಾಗೂ ಮಾರುಕಟ್ಟೆಯ ಅನಿಶ್ಚಿತತೆಗಳ ನಡುವೆ ವಿತರಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಂಘ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡಬೇಕು ಎಂದರು.

ವ್ಯಾಪಾರದಲ್ಲಿ ಪ್ರಾಮಾಣಿಕತೆ, ವರ್ತಕರ ವಿಶ್ವಾಸ ಗಳಿಸುವುದು ದೊಡ್ಡ ಬಂಡವಾಳ ಆಗಿದೆ. ನಿಷ್ಠೆ, ಗುಣಮಟ್ಟ ಮತ್ತು ಸಮಯ ಪಾಲನೆಯಿಂದ ವ್ಯವಹಾರ ನಡೆಸಿದರೆ ವ್ಯಾಪಾರದಲ್ಲಿ ಯಶಸ್ಸು ಗಳಿಸಬಹುದು. ಸಂಘದ ಗೌರವವು ಹೆಚ್ಚುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ, ವಿತರಕರ ಸಂಘದ ಗೌರವಾಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿತರಕರ ದಿನಾಚರಣೆಯನ್ನು ಶಿವಮೊಗ್ಗದಲ್ಲೇ ಮೊದಲ ಆಚರಿಸಲು ಆರಂಭಿಸಿದ್ದು. ಎರಡು ವರ್ಷದಿಂದ ವಿತರಕರ ಸಂಘದಿಂದ ವಿತರಕರ ದಿನಾಚರಣೆ, ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ, ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ, ದೇಣಿಗೆ ನೀಡಿದಂತಹ ಸದಸ್ಯರಿಗೆ ಗೌರವ ಸಮರ್ಪಣೆ ಹೀಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಜಿತ ಸಂಘಗಳಲ್ಲಿ ಮಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಶಿಸಿದರು.

ಮಾಜಿ ಅಧ್ಯಕ್ಷರಾದ ನಟರಾಜ್, ಹಾಜಿ ಇಕ್ಬಾಲ್ ಶೆಟ್, ಎ.ಎನ್.ಪ್ರಕಾಶ್ ಹಾಗೂ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಉಡುಗಣಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿತರಕರ ಸಂಘದ ಉಪಾಧ್ಯಕ್ಷ ಬದರಿನಾಥ್ ಬಿ ಆರ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಗೌರವ ಕಾರ್ಯದರ್ಶಿ ಶ್ರೀನಿವಾಸ್ ಕೆ ಎಸ್, ಖಜಾಂಚಿ ಚಂದ್ರಶೇಖರ್ ಕೆ ಕೆ, ನಿಕಟಪೂರ್ವ ಅಧ್ಯಕ ಶಿವರಾಜ್ ಉಡುಗಣಿ, ವಿಶೇಷ ಅಹ್ವಾನಿತರಾದ ಹಾಜಿ ಸುಲೇಮಾನ್, ನಿರ್ದೇಶಕರಾದ ಮೋಹನ್ ಕೆ ಎಸ್, ನವೀನ್ ಜವಳಿ, ಮಹಾರುದ್ರಪ್ಪ ಕೆವಿ ಕುಮಾರ್ ಎ ಎಂ ಮೊಹಮ್ಮದ್ ಇಕ್ಬಾಲ್, ಸುರೇಂದ್ರನಾಥ್, ರಾಘವೇಂದ್ರ ಎಂ ವೈ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

S.N. Channabasappa ಬಡ ಜನತೆಗೆ ಮತ್ತು ಆಶ್ರಯರಹಿತ ಕುಟುಂಬಗಳಿಗೆ ಹಕ್ಕುಪತ್ರದ ಬೇಡಿಕೆಗೆ ನ್ಯಾಯ ಒದಗಿಸುವುದು‌ ಯೋಜನೆಗಳ ಪ್ರಮುಖ ಅಜೆಂಡಾ : ಎಸ್.ಎನ್.ಚನ್ನಬಸಪ್ಪ

0

S.N. Channabasappa “ಕ್ಷೇತ್ರದ ಬಡ ಹಾಗೂ ಆಶ್ರಯ ರಹಿತ ಕುಟುಂಬಗಳ ಹಕ್ಕುಪತ್ರದ ಬೇಡಿಕೆಗೆ ನ್ಯಾಯ ಒದಗಿಸುವುದು ಹಾಗೂ ಬಡಾವಣೆಗಳ ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸುವುದು ನಮ್ಮ ನಗರಾಭಿವೃದ್ಧಿ ಯೋಜನೆಯ ಮಹತ್ವಾಕಾಂಕ್ಷಿ ಅಜೆಂಡಾವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಶಾಸಕರು ಕ್ಷೇತ್ರ ಪ್ರವಾಸ ಕೈಗೊಂಡು, ಶಿವಮೊಗ್ಗ ನಗರದ ವಾರ್ಡ್ ನಂಬರ್ 8ರ ವ್ಯಾಪ್ತಿಗೆ ಬರುವ ಹುಚ್ಚರಾಯ ಕಾಲೋನಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಬಡಾವಣೆಯ ಗಲ್ಲಿಗಳಿಗೂ ಸಂಚರಿಸಿ, ಅಲ್ಲಿನ ಸಾರ್ವಜನಿಕ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಹಕ್ಕುಪತ್ರ ವಿತರಣೆಗೆ ಚುರುಕು: ಹುಚ್ಚರಾಯ ಕಾಲೋನಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಇಂದಿನವರೆಗೂ ಹಕ್ಕುಪತ್ರ ದೊರೆಯದ ನಿವಾಸಿಗಳ ಆತಂಕವನ್ನು ಶಾಸಕರು ಆಲಿಸಿದರು. ಈ ಸೂಕ್ಷ್ಮ ಸಮಸ್ಯೆಯನ್ನು ಕಂದಾಯ ಇಲಾಖೆಯ ನಿಯಮಾವಳಿಗಳ ಅನ್ವಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅರ್ಹ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

S.N. Channabasappa ಭೇಟಿಯ ವೇಳೆ ಪ್ರಮುಖರಾದ ಶ್ರೀ ಲಕ್ಷ್ಮಿಕಾಂತ್, ಶ್ರೀ ದಿನೇಶ್, ಶ್ರೀ ಪರಮೇಶ್ ನಾಯ್ಕ್, ಶ್ರೀ ವೆಂಕಟೇಶ ಗೌಡ, ಶ್ರೀ ಜಗದೀಶ್, ಶ್ರೀ ವಾಸು, ಶ್ರೀ ವೆಂಕಟೇಶ್ ನಾಯ್ಕ್ ಸೇರಿದಂತೆ ಹುಚ್ಚರಾಯ ಕಾಲೋನಿಯ ಭಾಜಪದ ಕಾರ್ಯಕರ್ತರು ಉಪಸ್ಥಿತರಿದ್ದರು

ಹಾಲಿನ ಬಾಟಲಿ ಸಮೇತ ಹಸು ಕಂದನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ತೆರಳಿದ ತಾಯಿ!

0

ಶಿವಮೊಗ್ಗ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಕೇವಲ 10 ರಿಂದ 15 ದಿನಗಳ ಪ್ರಾಯದ ನವಜಾತ ಹೆಣ್ಣು ಶಿಶುವನ್ನು ಹಾಲಿನ ಬಾಟಲಿ ಸಮೇತ ಕೈಚೀಲದಲ್ಲಿ ಇಟ್ಟು ನಿರ್ಜನ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ಶಿಶು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿ ಇರುವ ನಿರ್ಜನ ಬಸ್ ನಿಲ್ದಾಣದಲ್ಲಿ ನವಜಾತ ಹೆಣ್ಣು ಶಿಶುವನ್ನು ಅಪರಿಚಿತರು ಅನಾಥವಾಗಿ ಬಿಟ್ಟು ಹೋಗಿದ್ದಾರೆ.

ಸುಮಾರು 10ರಿಂದ 15 ದಿನಗಳ ಪ್ರಾಯದ ಈ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಚೀಲದಲ್ಲಿ ಇರಿಸಲಾಗಿದ್ದು, ಜೊತೆಗೆ ಒಂದು ಹಾಲಿನ ಬಾಟಲಿಯನ್ನೂ ಇಡಲಾಗಿತ್ತು.

ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೈಚೀಲದಲ್ಲಿದ್ದ ನವಜಾತ ಶಿಶು ಪತ್ತೆಯಾಗಿದ್ದು, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಸುಮಾರು 1.6 ಕೆ.ಜಿ. ತೂಕವಿರುವ ಶಿಶು ಆರೋಗ್ಯವಾಗಿದ್ದು, ಮೊದಲಿಗೆ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗುವನ್ನು ಯಾರು, ಯಾವ ಕಾರಣಕ್ಕಾಗಿ ಈ ರೀತಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

0

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯಕ್ರಮದ ಅಂಗವಾಗಿ, ಇಂದು ನನ್ನ ನಿವಾಸಕ್ಕೆ ಭೇಟಿ ನೀಡಿದ್ದ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಗತ್ಯ ದಾಖಲಾತಿಗಳು ಹಾಗೂ ನಿಖರ ವಿವರಗಳನ್ನು ಹಸ್ತಾಂತರಿಸುವ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು.

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸಧೃಡಗೊಳಿಸುವಲ್ಲಿ ಪ್ರತಿಯೊಂದು ಮತವೂ ಅತ್ಯಂತ ಅಮೂಲ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅರ್ಹ ನಾಗರಿಕರೆಲ್ಲರೂ ಈ ಮಹತ್ವದ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಕೈಜೋಡಿಸಬೇಕಾಗಿ ವಿನಂತಿ. ನಿಮ್ಮ ಮನೆ ಬಾಗಿಲಿಗೆ ಆಗಮಿಸುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿಕೊಡಿ. ಆ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ವೈಯಕ್ತಿಕ ವಿವರಗಳು ಯಾವುದೇ ದೋಷಗಳಿಲ್ಲದೆ, ಸಮರ್ಪಕವಾಗಿ ನಮೂದಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಇದು ನಮ್ಮ ಹೆಮ್ಮೆಯ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯವೂ ಹೌದು.

B.Y. Raghavendra ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (CEO) ಶ್ರೀ ಹೇಮಂತ್ ಕುಮಾರ್, ಶ್ರೀ ಹನುಮಂತನಾಯ್ಕ್ ಮುಖ್ಯ ಯೋಜನಾಧಿಕಾರಿಗಳು, ಶ್ರೀ ರಂಗಸ್ವಾಮಿ ಯೋಜನಾ ನಿರ್ದೇಶಕರು ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Inner Wheel Club Shivamogga ಕೊಳಗೇರಿ ಮಕ್ಕಳ ಶಿಕ್ಷಣ, ಪರಿಸರ ರಕ್ಷಣೆ, ಸಸಿ ನೆಡುವಿಕೆ ಇತ್ಯಾದಿ ಜನಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ- ಸುರೇಖಾ ಮುರಳೀಧರ್

0

Inner Wheel Club Shivamogga ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಈಸ್ಟ್‌ನ 2026–27ನೇ ಸಾಲಿನ ಪದಗ್ರಹಣ ಸಮಾರಂಭವು ರೋಟರಿ ಶಾಲೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಸುರೇಖಾ ಮುರಳೀಧರ್ ಹಾಗೂ ಗೌರವ ಅತಿಥಿಯಾಗಿ ಶ್ರೀಮತಿ ಶಬರಿ ಕಡಿದಾಳ್ ಭಾಗವಹಿಸಿ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಭಾಂಗಣವು ಇನ್ನರ್ ವೀಲ್ ಸದಸ್ಯೆಯರು, ಮಾಜಿ ಜಿಲ್ಲಾ ಅಧ್ಯಕ್ಷೆಯರು, ರೋಟೇರಿಯನ್ನರು, ಹಿತೈಷಿಗಳು ಹಾಗೂ ಗಣ್ಯ ಅತಿಥಿಗಳಿಂದ ಕಿಕ್ಕಿರಿದು ತುಂಬಿತ್ತು.
ಇನ್ನರ್ ವೀಲ್ ವರ್ಷದ ಮೊದಲ ದಿನವೇ ಪದಗ್ರಹಣ ಸಮಾರಂಭದೊಂದಿಗೆ ಎರಡು ಮಹತ್ವದ ಮೆಗಾ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಕಾರ್ಯಕಾರಿ ಸಮಿತಿಯ ವತಿಯಿಂದ ರೋಟರಿ ಶಾಲೆಗೆ ಪ್ರೊಜೆಕ್ಟರ್‌ನ್ನು ಕೊಡುಗೆಯಾಗಿ ನೀಡಲಾಯಿತು. ಸದಸ್ಯೆಯರ ಸಹಕಾರದಿಂದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್‌ಗೆ ಏಳು ನೂತನ ಸದಸ್ಯೆಯರನ್ನು ಆತ್ಮೀಯವಾಗಿ ಸೇರ್ಪಡೆಗೊಳಿಸಲಾಯಿತು.
ವೈದ್ಯರ ದಿನದ ಅಂಗವಾಗಿ ಕ್ಲಬ್‌ನ ವೈದ್ಯ ಸದಸ್ಯೆಯರನ್ನು ಗೌರವಿಸಲಾಯಿತು. ನೂತನ ಸದಸ್ಯೆ ಡಾ. ಸೋನಿಯಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಇತರ ವೈದ್ಯರಿಗೂ ಗೌರವ ಸಲ್ಲಿಸಲಾಯಿತು.
ಅದೇ ದಿನ ಬೆಳಿಗ್ಗೆ ಸನ್ ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಮೆಡಿಕಲ್ ಇಕ್ವಿಪ್‌ಮೆಂಟ್ ಬ್ಯಾಂಕ್‌ಗೆ ವೈದ್ಯಕೀಯ ಉಪಕರಣಗಳನ್ನು ದಾನ ಮಾಡುವ ಮೂಲಕ ಸೇವಾ ಚಟುವಟಿಕೆಗಳಿಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು.
ಗೌರವ ಅತಿಥಿ ಶ್ರೀಮತಿ ಶಬರಿ ಕಡಿದಾಳ್ ಅವರು ಸದಸ್ಯೆಯರನ್ನು ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
Inner Wheel Club Shivamogga ಮುಖ್ಯ ಅತಿಥಿ ಶ್ರೀಮತಿ ಸುರೇಖಾ ಮುರಳೀಧರ್ ಅವರು ಕಳೆದ ಸಾಲಿನ ಅಧ್ಯಕ್ಷೆ ಶ್ರೀಮತಿ ವೀಣಾ ಸುರೇಶ್ ಹಾಗೂ ಅವರ ತಂಡದ ಸೇವಾ ಕಾರ್ಯಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಕೊಳಗೇರಿ ಪ್ರದೇಶದ ಮಕ್ಕಳ ಶಿಕ್ಷಣ, ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಸಸಿ ನೆಡುವಿಕೆ, ಕಾರ್ಮಿಕರ ಸಬಲೀಕರಣ ಹಾಗೂ ಸರ್ಕಾರಿ ಜನೋಪಯೋಗಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಭ್ರಷ್ಟಾಚಾರ ರಹಿತ ಸೇವೆಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಅವರು Special Intensive Revision (SIR) ಕುರಿತು ಮಾಹಿತಿ ನೀಡಿ, ಪ್ರತಿಯೊಬ್ಬರೂ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯುವಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಸೇವೆ, ಸ್ನೇಹ, ಗೌರವ ಹಾಗೂ ಹೊಸ ಸಂಕಲ್ಪಗಳೊಂದಿಗೆ ನಡೆದ ಈ ಪದಗ್ರಹಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಜುಲೈ 9, ಭದ್ರಾವತಿಯಲ್ಲಿ ‌ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

0

ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಜು 09 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ;.9448289454. ಸಂಪರ್ಕಿಸಬಹುದಾಗಿದೆ.

Bhadravati Horticulture Department ವಿವಿಧ ಯೋಜನೆಯಡಿ ಸಹಾಯಧನ: ಭದ್ರಾವತಿ ತೋಟಗಾರಿಕಾ ಇಲಾಖೆ ಪ್ರಕಟಣೆ

0

Bhadravati Horticulture Department ಭದ್ರಾವತಿ ತೋಟಗಾರಿಕೆ ಇಲಾಖೆಯಿಂದ 2026-27 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಹನಿ ನೀರಾವರಿ/ತುಂತುರು ನೀರಾವರಿ, ತೋಟಗಾರಿಕೆಯಲ್ಲಿ ಯಾಂತ್ರೀಕರಣ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತಾಳೆಬೆಳೆ ಯೋಜನೆ, ಜೇನು ಸಾಕಾಣಿಕೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಮುಂತಾದ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳಿಗೆ ಸಹಾಯಧನ ನೀಡಲಾಗುತ್ತಿದ್ದು,ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ನಿಗದಿತ ನಮೂನೆಯ ಅರ್ಜಿಗಾಗಿ ಭದ್ರಾವತಿ ತೋಟಗಾರಿಕೆ ಇಲಾಖೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜು. 31 ರೊಳಗಾಗಿ ಸಲ್ಲಿಸುವಂತೆ ಹಾಗೂ ಈ ಕಾರ್ಯಕ್ರಮಗಳಿಗೆ ಜೇಷ್ಠತೆ ಮತ್ತು ಮೀಸಲಾತಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
Bhadravati Horticulture Department ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವುದು. ಕಸಬಾ-1 -9591134415, ಕಸಬಾ -2 – 8317333375, ಕೂಡ್ಲಿಗೆರೆ-7975537143, ಹೊಳೆಹೊನ್ನೂರು-1 – 8317404476, ಹೊಳೆಹೊನ್ನೂರು-2 – 9591134415, ಹೊಳೆಹೊನ್ನೂರು-3 -8317404476 ನ್ನು ಸಂಪರ್ಕಿಸಬಹುದೆಂದು ಭದ್ರಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.