Union Public Service Commission ಶಿವಮೊಗ್ಗದ ಬಸವೇಶ್ವರ ನಗರ ನಿವಾಸಿ ವೃತ್ತಿಯಲ್ಲಿ ವಕೀಲರಾದ ಶ್ರೀ ಮೋಹನ್ ಕುಮಾರ್ ಅವರು ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ವತ್ಸಲ ಅವರ ಸುಪುತ್ರಿ ಕು|| ಮೇಘನಾ ಅವರು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(UPSಅ) ಪರೀಕ್ಷೆಯಲ್ಲಿ 425ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದು, ಅವರ ಸ್ವಗೃಹಕ್ಕೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಹಾಗೂ ಭದ್ರಾವತಿಯ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
Union Public Service Commission ಈ ಸಂದರ್ಭದಲ್ಲಿ ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷ ಮಧುಕುಮಾರ್, ಜೆಡಿಎಸ್ ಕಾರ್ಯದರ್ಶಿ ರಾಕೇಶ್ ಡಿಸೋಜಾ, ಜಿಲ್ಲಾ ಯುವ ಜನತಾ ದಳದ ಕಾರ್ಯ ಅಧ್ಯಕ್ಷ ಎಸ್. ಎಲ್. ನಿಖಿಲ್ ಮತ್ತು ಕಾರ್ಯದರ್ಶಿ ಪ್ರೇಮ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Union Public Service Commission ಐಎಎಸ್ ಟಾಪರ್ ಮೇಘನಾ ಗೆ ಅಭಿನಂದಿಸಿದ ಶಾಸಕಿ ಶಾರದಾ ಪೂರ್ಯಾನಾಯಕ್
National Ahind Sainik Organization ಅಹಿಂದ ಸೈನಿಕ ಸಂಘಟನೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಕವಿತಾ ಥೋರತ್
National Ahind Sainik Organization ರಾಷ್ಟ್ರೀಯ ಅಹಿಂದ ಸೈನಿಕ ಸಂಘಟನೆ ರಾಜ್ಯ ಮಹಿಳಾ ಘಟಕದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕವಿತಾ ಎಂ.ಬಿ. ಥೋರತ್ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಅಹಿಂದ ಸೈನಿಕ ಸಂಘಟನೆಯ ರಾಜ್ಯ ಕಾರ್ಯಕಾರಣಿ ಸಮಿತಿಯ ಒಪ್ಪಿಗೆಯ ಮೇರೆಗೆ ಕವಿತಾ ಎಂ.ಬಿ. ಥೋರತ್ ಅವರನ್ನು ರಾಜ್ಯ ಮಹಿಳಾ ಘಟಕದ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಅಹಿಂದ ವರ್ಗದ ಜನರ ಹಕ್ಕಿಗಾಗಿ ಸದಾ ಸೈನಿಕರಂತೆ ಹೋರಾಡಲು ಸದಾ ಸಿದ್ದರಾಗಿರಲು ತಿಳಿಸಿದ್ದಾರೆ.
Dr.Babasaheb Ambedkar ಬಾಬಾ ಸಾಹೇಬರ ತತ್ವ ಸಿದ್ದಾಂತಗಳು ಇಂದು ಅತ್ಯಂತ ಪ್ರಸ್ತುತ- ಎಂ.ಗುರುಮೂರ್ತಿ
Dr. Babasaheb Ambedkar ಶೋಷಣೆಯ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ ವಿಶ್ವರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ಹೇಳಿದರು.
ದಿನಾಂಕ 27-04-2025 ರಂದು ಶಿವಮೊಗ್ಗ ತಾಲೂಕ್ ರಾಮನಗರದ ಡಾ ಬಿ ಆರ್ ಅಂಬೇಡ್ಕರ್ ಹವ್ಯಾಸಿ ಯುವಕರ ಸಂಘದ ವತಿಯಿಂದ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಾಬಾ ಸಾಹೇಬರ ತತ್ವ ಸಿದ್ಧಾಂತ ಮತ್ತು ವಿಚಾರ ಧಾರೆಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು ದೇಶಕ್ಕೆ ಈಗ ಅನಿವಾರ್ಯವೂ ಆಗಿದೆ.ಕಡ್ಡಾಯ ಮತ್ತು ಉಚಿತ ಶಿಕ್ಷಣ ಎಲ್ಲರಿಗೂ ಮೊದಲು ದೊರೆಯುವಂತಾಗಬೇಕು. ಪ್ರತಿಯೊಬ್ಬರಿಗೂ ಓದುವ ಅವಕಾಶ ಸಿಗಬೇಕು. ಶಿಕ್ಷಣದಿಂದಲೇ ಸ್ವಾಭಿಮಾನದ ಬದುಕು ಸಾಧ್ಯ. ಹಾಗಾದಾಗಲೇ ಜಾತಿ ವಿನಾಶ ಸಾಧ್ಯಎಂದು ಅಂಬೇಡ್ಕರ್ ಹೇಳಿದ್ದರು ಎಂದು ಗುರುಮೂರ್ತಿ ಯವರು ಹೇಳಿದರಲ್ಲದೆ ಸಂವಿಧಾನದ ಆಶೂತ್ತರಗಳನ್ನು ಎತ್ತಿ ಹಿಡಿದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಗುರುಮೂರ್ತಿಯವರು ಹೇಳಿದರು.
ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಬಸವರಾಜಪ್ಪ, ನಿವೃತ್ತ ಶಿಕ್ಷಕರಾದ ಕೃಷ್ಣಪ್ಪ, ವೀರಶೈವ ಸಮಾಜದ ಮುಖಂಡರಾದ ಮಲ್ಲೇಶಪ್ಪ, ಡಿ ಏಸ್ ಏಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ಶಿಕ್ಷಕರಾದ ನೀಲಪ್ಪ, ಕುಪ್ಪಸ್ವಾಮಿ, ರಿಜ್ವಾನ್, ಗ್ರಾಮಪಂಚಾಯಿತಿ ಸದಸ್ಯರಾದ ಸೌಮ್ಯ, ಸಾಕಮ್ಮ ನೀಲಪ್ಪ, ಹರಿಗೆ ರವಿ, ಹನುಮಂತಪ್ಪ, ಮಣಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷೆಗಾಕರಾದ ಶಿವಲಿಂಗಪ್ಪ ನವರು ವಹಿಸಿದ್ದರು.
Shivamogga Police ತುಂಗಾ ನಗರ ಪೊಲೀಸ್ ಠಾಣೆ ಯಿಂದ 47 ದ್ವಿಚಕ್ರ ವಾಹನಗಳ ವಿಲೇವಾರಿ ಮಾಹಿತಿ
Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವಾರಸ್ಸುದಾರರು ಪತ್ತೆಯಾಗದ 47 ದ್ವಿಚಕ್ರ ವಾಹನಗಳನ್ನು ಯಥಾ ಸ್ಥಿತಿಯಲ್ಲಿ ನ್ಯಾಯಾಲಯದ ಆದೇಶದನ್ವಯ ಮೇ 09 ರಂದು ಬೆಳಿಗ್ಗೆ 09 ಗಂಟೆಗೆ ತುಂಗಾನಗರ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karnataka Janapada Academy ಜಾನಪದ ಅಕಾಡೆಮಿಯಿಂದ 2024 ನೇ ಸಾಲಿನ ಪ್ರಥಮ ಆವೃತ್ತಿಯುಳ್ಳ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
Karnataka Janapada Academy ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನಲ್ಲಿ ದಿನಾಂಕ:01.01.2024 ರಿಂದ 31.12.2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟಿರುವಂತೆ, ಜನಪದ ಗದ್ಯ, ಜನಪದ ವಿಚಾರ-ವಿಮರ್ಶೆ- ಸಂಶೋಧನೆ, ಜನಪದ ಪದ್ಯ ಹಾಗೂ ಜನಪದ ಸಂಕೀರ್ಣ ಎಂಬ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಲೇಖಕರು/ ಪ್ರಕಾಶಕರು/ ಸಂಪಾದಕರುಗಳು ತಮ್ಮ 1 ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಮೇ 20 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಲು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್‌ರವರು ತಿಳಿಸಿದ್ದಾರೆ.
Karnataka Janapada Academy ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು.
ವಿ.ಸೂ – ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು / ಲೇಖಕರು ಮತ್ತೆ ಪುಸ್ತಕ ಬಹುಮಾನ ಯೋಜನೆಗೆ ಕೃತಿಗಳನ್ನು ಕಳುಹಿಸಬಾರದಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-22215509 ನ್ನು ಸಂಪರ್ಕಿಸುವುದು.
Department of Forest ಅರಣ್ಯ ಮೊಕದ್ದಮೆಯಲ್ಲಿ ಆರೋಪಿ ಜಾವಿದ್ ಗೆ ಕೋರ್ಟ್ ನಿಂದ ಉದ್ಘೋಷಣೆ
ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಕಚೇರಿಯಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 53/2005-06 ದಿ: 11-09-2005 (ಸಿ.ಸಿ.ನಂ 3477/2016) ರಲ್ಲಿ ಆರೋಪಿಯಾದ ಜಾವಿದ್, ಗೋಪಾಳ, ಶಿವಮೊಗ್ಗ ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ, ಶಿವಮೊಗ್ಗ ಇವರು ಏ.04 ರಂದು ಆರೋಪಿಯ ಉದ್ಘೋಷಣೆ ಹೊರಡಿಸಲು ಆದೇಶಿಸಿದ್ದು, ಸದರಿ ಆರೋಪಿಯು ಪತ್ತೆಯಾದಲ್ಲಿ ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಇವರಿಗೆ ತಿಳಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Sigandureshwari Education Trust ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಸೊರಬ ವಕೀಲರ ತಂಡಕ್ಕೆ ಎಸ್ಎಸ್ ಈ ಟಿ ಟ್ರೋಫಿ
Sigandureshwari Education Trust ಸಾಗರದ ಉಳ್ಳೂರಿನ ಶ್ರೀ ಸಿಗಂದೂರೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಲೈಟ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಾಗರ ಮತ್ತು ಸೊರಬ ವಕೀಲರ ತಂಡದ ನಡುವೆ ನಡೆದ ಹಣಾಹಣಿ ಪಂದ್ಯಾವಲಿಯಲ್ಲಿ ಸೊರಬ ವಕೀಲರ ತಂಡವು ಜಯ ಸಾಧಿಸುವ ಮೂಲಕ ರ ಎಸ್.ಎಸ್.ಈ.ಟಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಟಾಸ್‌ನಲ್ಲಿ ಸಾಗರ ವಕೀಲರ ತಂಡ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಂಟಿಂಗ್‌ಗೆ ಇಳಿದ ಸೊರಬ ವಕೀಲರ ತಂಡ 6 ಓವರ್‌ಗಳಲ್ಲಿ ಒಂದು ವಿಕೇಟ್ ನಷ್ಟಕ್ಕೆ 107 ರ ಬೃಹತ್ ಮೊತ್ತ ಕಲೆಹಾಕಿತು.
ಈ ಪೈಕಿ ಉಮೇಶ್ ಭಂಡಾರಿ ಮತ್ತು ಪ್ರದೀಪ್ ಪಚ್ಚಿ ಜೊತೆಯಾಟದಲ್ಲಿ 35 ಬಾಲ್‌ಗಳಲ್ಲಿ 102 ರನ್ ಕೊಡುಗೆಯಾಗಿ ನೀಡಿದರು.
Sigandureshwari Education Trust ಉಮೇಶ್ ಭಂಡಾರಿ (೫೦ರನ್), ಪ್ರದೀಪ್ (೪೯ರನ್)ಗಳ ಜೊತೆಯಾಟವಾಡಿದರು.
108 ರನ್‌ಗಳ ಗುರಿಯೊಂದಿಗೆ ಬೆನ್ನಟ್ಟಿದ ಸಾಗರ ವಕೀಲರ ತಂಡ 6 ಓವರ್‌ಗಳಲ್ಲಿ ತನ್ನೆಲ್ಲಾ ವಿಕೇಟ್‌ಗಳನ್ನು ಕಳೆದುಕೊಂಡು ಕೇವಲ 47 ರನ್‌ಗಳನ್ನು ಗಳಿಸಿತು. ಸೊರಬ ವಕೀಲರ ತಂಡದ ಪ್ರದೀಪ್ ಎರಡು ಓವರ್‌ಗಳಲ್ಲಿ 14 ರನ್ ನೀಡುವ ಮೂಲಕ ನಾಲ್ಕು ವಿಕೇಟ್ ಕಬಳಿಸಿದರು. ಉಮೇಶ್ ಭಂಡಾರಿ ಎರಡು ಓವರ್‌ಗಳಲ್ಲಿ 18 ರನ್ ನೀಡುವ ಮೂಲಕ ಎರಡು ವಿಕೇಟ್ ಗಳಿಸಿದರೆ, ಮಂಜುನಾಥ್ ಒಂದು ಓವರ್‌ಗೆ ೩ರನ್ ನೀಡಿ ೨ವಿಕೇಟ್ ಹಾಗೂ ಶರತ್ ಒಂದು ಓವರ್‌ನಲ್ಲಿ ೫ರನ್ ನೀಡಿ ಒಂದು ವಿಕೇಟ್ ಪಡೆದರು.
ಸೊರಬ ವಕೀಲರ ತಂಡದ ಪ್ರದೀಪ್ ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸ್ಮ್ಯಾನ್ ಆಗಿ ಮುಜಾಮಿಲ್, ಬೆಸ್ಟ್ ಫೀಲ್ಡರ್ ಸಿ.ವೈ. ಅಶೋಕ್, ಬೆಸ್ಟ್ ಬೌಲರ್ ಪ್ರದೀಪ್, ಮ್ಯಾನ್ ಆಫ್ ದಿ ಸೀರಿಯಸ್ ಉಮೇಶ್ ಭಂಡಾರಿ ಪ್ರಶಸ್ತಿಗಳಿಗೆ ಭಾಜನರಾದರು. ಪಂದ್ಯದಲ್ಲಿ ಉತ್ತಮ ಫೀಲ್ದ್ ಮಾಡುವ ಮೂಲಕ ಆದರ್ಶ ಗಮನ ಸೆಳೆದರು.
ಸೊರಬ ವಕೀಲರ ತಂಡದ ನಾಯಕ ಸಿ.ವೈ. ಅಶೋಕ್, ಎಸ್. ಅರುಣ್, ಪರಶುರಾಮ್, ಉಮೇಶ್ ಭಂಡಾರಿ, ರಾಘವೇಂದ್ರ, ಆದರ್ಶ, ಶರತ್, ಪ್ರದೀಪ್, ಆಶೀಕ್ ನಾಗಪ್ಪ, ವಿನಯ್, ಆರ್.ಟಿ. ಮಂಜುನಾಥ್, ಗುರುಮೂರ್ತಿ, ಆನಂದ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
Klive Special Article ‘ತಳಿ’ ನಾಟಕ ನೋಡುಗನ ಕಣ್ಣಲ್ಲಿ….
Klive Special Article ತಳಿ’ ನಾಟಕ ಆರಂಭವಾಗುತ್ತಿದೆ ಒಂದು ಮೌನ ಎಲ್ಲರನ್ನು ಆವರಿಸಿ ನಿಶ್ಯಬ್ಧ ವಾತಾವರಣ ಉಂಟಾಯಿತು. ಆ ಸ್ಥಿತಿ ನಾಟಕ ಮುಗಿದ ಮೇಲೆ ಹಾಗೆ ಇತ್ತು. ಪ್ರತಿ ಪೀಳಿಗೆಗೂ ಹೊಸತನ್ನು ಹುಟ್ಟುಹಾಕುವ ತವಕ, ಆ ಸಂಭ್ರಮ ಹಳೆಯದನ್ನು ನಾಶಮಾಡುತ್ತದೆ. ಈ ಹೊತ್ತಿನಲ್ಲಿ ಆರಾಜಾಕತೆಗೆ ಅವಕಾಶ ನೀಡದೇ ಎಲ್ಲವನ್ನೂ ಕಟ್ಟಿಕೊಡುವಂತಹ ವಿರಳತೆಯ ತಳಿ ಇರಬೇಕು. ನಾಶದ ಮನಸ್ಥಿತಿಯ ಸ್ಥಳ ಯಥೇಚ್ಛವಾಗಿದ್ದರೂ ಅದಕ್ಕೊಂದು ಅಂತ್ಯ ನೀಡಲೇಬೇಕೆನ್ನುವುದನ್ನು ನಿರ್ದೇಶಕರಾದ ಸೇತುರಾಮ್ ಅವರು ಬಹು ಸಮರ್ಥವಾಗಿ ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿ ಬರುವ ಡೈಲಾಗ್ಗಳಂತೂ ನಮ್ಮ ಸುತ್ತಮುತ್ತಲಿನ ಯಾವದೋ ಒಂದು ವ್ಯಕ್ತಿತ್ವವನ್ನು ಪರಿಚಯಿಸುತ್ತಲೇ ಇರುವಂತಿತ್ತು. ಪುಂಖಾನು ಪುಂಖವಾಗಿ ನಟರಾಡುವ ಮಾತಿಗೆ ಪ್ರೇಕ್ಷಕ ಅಕ್ಷರಶಃ ಮೂಕವಿಸ್ಮಿತನಾಗಿದ್ದ. ಇಂತಹ ಒಂದು ಅತ್ಯದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು ಅಜಯ ಸಂಸ್ಕೃತಿ ಬಳಗದವರು ಕುವೆಂಪುರಂಗ ಮಂದಿರದಲ್ಲಿ ಆಯೋಜಿಸಿದ ಸೇತುರಾಮ್ ನಿರ್ದೇಶನದ “ತಳಿ” ಎನ್ನುವ ನಾಟಕ.
ಈ ನಾಟಕ ಯಾವುದೇ ಪೂರ್ವಗ್ರಹವಿಲ್ಲದೆ ನೋಡಬೇಕು ಅದು ನಮ್ಮೆಲ್ಲರನ್ನು ತನ್ನೊಳಗೆ ಆಪೋಷಣೆ ತೆಗೆದುಕೊಂಡು ಬಿಡುವಂತೆ ಮಾಡುವ, ವೈಚಾರಿಕತೆಯ ನಿಲುವಿನಲ್ಲೇ ಭಾವನೆಗಳನ್ನು ಬಿಚ್ಚಿಡುವ ಒಂದು ಸುಂದರವಾದ ಸೃಷ್ಟಿಯಾಗಿತ್ತು. ಅಲ್ಲಿನ ಪ್ರತಿಯೊಂದು ಸಂಭಾಷಣೆ ನಮ್ಮನ್ನು ಯೋಚನಾಲಹರಿಗೆ ತಳ್ಳುತ್ತಿತ್ತು. ಯೋಚಿಸಿ ಅರ್ಥವಾಗುವಷ್ಟರಲ್ಲಿ ಅಬ್ಬ! ಎನ್ನುವ ಉದ್ಗಾರವಾಕ್ಯ ತಂತಾನೆ ಬರುವಂತಿತ್ತು. ಸೇತುರಾಮ್ ಅವರ ನಾಟಕಗಳೇ ಹಾಗೆ ನಮ್ಮಲ್ಲಿ ಒಂದು ಸಂಚಲನ ಸೃಷ್ಟಿ ಮಾಡುವ ಶಕ್ತಿ ಹೊಂದಿರುವಂಥದ್ದು.
ಈ ನಾಟಕದಲ್ಲಿನ ಪ್ರತಿಯೊಬ್ಬನ ನಟನೆಯೂ ಶ್ಲಾಘಿಸುವುದಕ್ಕೆ ಯೋಗ್ಯವೇ. ಇರುವ ನಾಲ್ಕೇ ಪಾತ್ರ ನಮ್ಮೆಲ್ಲರನ್ನು ಭಾವ ಲೋಕದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಯಿತು. ನಿರರ್ಗಳವಾಗಿ ಪ್ರತಿ ನಟನು ಆಡುತ್ತಿದ್ದ ಮಾತುಗಳಂತೂ ನಮ್ಮಗಳ ನಡುವೆಯೇ ನಡೆಯುವ ಸಂಭಾಷಣೆ ಎನಿಸುವಷ್ಟು ಆಪ್ತವಾಗಿತ್ತು. ಒಂದು ಹೆಣ್ಣು ಪ್ರಕೃತಿಯ ಸಂಕೇತವಾಗಿ ಆಕೆ ಸೃಷ್ಟಿ. ಸಹನೆಯ ಪ್ರತಿರೂಪವಾದ ಆಕೆ ಸಿಡಿದೆಳಲೂಬಹುದು. ಆಕೆಯ ಸ್ವಭಾವವೇ ಅವಳಿಗೆ ಬಲಹೀನತೆ ಆದರೆ, ಅದರಿಂದಲೇ ಆಕೆ ಗಟ್ಟಿಗಿತ್ತಿಯೂ ಆಗುವಳು ಎನ್ನುವುದನ್ನು ಬಹಳ ಚೆನ್ನಾಗಿ ಈ ನಾಟಕದಲ್ಲಿ ತೋರಿಸಿದ್ದಾರೆ.
ಸೇತುರಾಮ್ ಅವರ ಅಭಿನಯದ ಕುರಿತಾಗಿ ಮಾತೇ ಇಲ್ಲ. ಅಷ್ಟು ಅದ್ಭುತವಾದ ನಟನೆ. ಅವರ ಸಂಭಾಷಣೆ, ಹಾವ, ಭಾವ, ನಟನಾ ಚಾತುರ್ಯ ಎಲ್ಲದರಲ್ಲೂ ಮೇಲ್ಪಂಕ್ತಿಯವರೇ. ಹಾಗಾಗಿ ಕಥೆಯ ಸೊಗಸು ಹೆಚ್ಚಲು ಅವರ ಪಾತ್ರವಂತು ಮೊದಲಿನ ಸಾಲಿನಲ್ಲಿ ನಿಂತಿದೆ. ಪತ್ನಿಯ ಪಾತ್ರ ಮಾಡಿದ ಪರಿಣಾಮ ಕೂಡ ಬಹಳ ಚೆನ್ನಾಗಿ ಅಭಿನಯಿಸಿದರು. ರಂಗದ ಆಚೆಗೆ ಅವರು ನೋಡಿದರೆ ತಮ್ಮ ವಯಸ್ಸಿಗೂ ಮೀರಿದ ಪಾತ್ರವನ್ನು ಬಹಳ ಸಮರ್ಥವಾಗಿ ನಿರ್ವಹಿಸಿದರು. ಇನ್ನು ಕಾವಲು ಕಾಯುವ ಬೇಲಿಯ ಹಾಗೆ ತಾನೇ ಅಂದುಕೊಂಡು ತಮಗೆ ನೀಡಿದ ಪಾತ್ರವನ್ನು ಶ್ರೀಪತಿಯವರು ಸಹ ಬಹಳ ಚೆನ್ನಾಗಿ ಅಭಿನಯಿಸಿದರು ಅನ್ನುವುದಕ್ಕಿಂತ ಆ ಪಾತ್ರವು ಏನು ಕೇಳುತ್ತದೆ ಅದನ್ನು ಸರಿಯಾಗಿ ನೀಡಿದರು. ಇಲ್ಲಿ ಬರುವ ಅದ್ಭುತ ಎನಿಸಿದ ಇನ್ನೊಂದು ಪಾತ್ರವೆಂದರೆ ಮಗಳದ್ದು, ಆ ಪಾತ್ರದಲ್ಲಿ ಸೌಮ್ಯ ಭಾಗವತ್ ಅಂತೂ ಸೇತುರಾಮ ಅವರ ಸರಿ ಸಮಕ್ಕೆ ನಿಂತು ಅಭಿನಯಿಸಿದರೆಂದರೆ ತಪ್ಪಾಗಲಾರದು. ತನಗೆ ಇದ್ದ ಪರಿಧಿಯಲ್ಲಿ ಅದ್ಭುತವಾದ ನಟನೆ ಮಾಡಿ ನೋಡುಗರ ಮನಸ್ಸನ್ನು ಮುದಗೊಳಿಸಿದರು. ಆಕೆಯ ಪಾತ್ರವೇ ಹಾಗೆ ಅಲ್ಲಿ ಗಟ್ಟಿತನದ್ದು, ನಿರರ್ಗಳವಾದ ಸಂಭಾಷಣೆಯಲ್ಲಿ ಆಕೆ ತೋರಿದ ಭಾವಾಭಿನಯ ಸಹೃದಯರ ಹೃದಯ ಗೆದ್ದಿತು. ತಮ್ಮ ರಚನೆ, ತಮ್ಮದೇ ನಿರ್ದೇಶನದಲ್ಲಿ ಸೇತುರಾಮ್ ಗೆದ್ದರೆ, ಸೌಮ್ಯ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ ಗೆದ್ದಿದ್ದಾರೆ.
Klive Special Article ಒಟ್ಟಿನಲ್ಲಿ ಹೇಳಬೇಕೆಂದರೆ ರಂಗಮಂದಿರದ ಹೊರಗೆ ಮಿಂಚು ಗುಡುಗುಗಳ ಆರ್ಭಟವಾದರೆ, ಒಳಗೆ ಸಂಭಾಷಣೆಗಳ ಆರ್ಭಟ. ಇದಕ್ಕೆ ಸೋತು ಪ್ರೇಕ್ಷಕ ಸುಮ್ಮನೆ ಕಣ್ಣು ಬೆಳಕಿಸುತ್ತಾ ನಡೆ ನಡುವೆ ತಿಳಿ ಹಾಸ್ಯವನ್ನು ಆಸ್ವಾದಿಸುತ್ತ, ನಾಟಕದಲ್ಲಿನ ರಸಗಳಿಗೆ ತಾನು ಮೈಮರೆತು ಆಹ್ಲಾದಿಸುತ್ತಾ ಕುಳಿತುಬಿಟ್ಟಿದ್ದ. ಮಿಂಚು ಗುಡುಗು ಸಹಿತವಾಗಿ ಧೋ ಎಂದು ಮಳೆ ಸುರಿದು ಎಳೆ ತಂಪಾದ ಹಾಗೆ ರಂಗಮಂದಿರದ ಒಳಗಿದ್ದ ಪ್ರೇಕ್ಷಕನೂ ಸುಮ್ಮನಿದ್ದು ಎಲ್ಲವನ್ನೂ ತನ್ನ ಸುತ್ತುಮುತ್ತಲೆ ಅನುಭವಿಸುತ್ತಿರುವಂತದ್ದೇನು ಎನ್ನುವ ರೀತಿಯಲ್ಲಿ ಆಸ್ವಾದಿಸುತ್ತಿದ್ದ. ನಟರು ಗೆಲ್ಲುವುದು ಸಹೃದಯ ಪ್ರೇಕ್ಷಕರು ಅಸ್ವಾದಿಸಿದಾಗ ಅದರಂತೆ ಇಲ್ಲಿನ ಎಲ್ಲಾ ನಟರ ಅಭಿನಯಕ್ಕೆ ಪ್ರೇಕ್ಷಕ ಮೂಕ ವಿಸ್ಮಿತನಾಗಿ ಮಾರುಹೋಗಿಬಿಟ್ಟಿದ್ದ ಎಂದರೆ ಅತಿಶಯೋಕ್ತಿಯಲ್ಲ.
ಸೌಂದರ್ಯ ಒಳಗಿನಿಂದ ಹೊಮ್ಮಬೇಕೆ ಹೊರತು ಹೊರಗಿನಿಂದ ಮೆತ್ತುವುದಲ್ಲ, ಹೆಗಲೇರಿದಾಗಲೇ ಹೊರೆಯ ಅರಿವಾಗೋದು, ಸಂಸಾರಕ್ಕೆ ವಯಸ್ಸಾಗತ್ತೆ ಹಾದರ ಚಿರಯೌವ್ವನ,
ಹೆಣ್ಣು ಸೃಷ್ಟಿಯು ಹೌದು ಸಂಹಾರಕಳು ಆಗಬಹುದು, ಮನೆಯಲ್ಲಿ ಹಿಂದೆ ನಾಲ್ಕು ನಾಲ್ಕು ತೊಟ್ಟಿಲುಗಳು ತೂಗುತ್ತಿದ್ದವು, ಇಂದು ಬೀದಿಗೆ ನಾಲ್ಕು ನಾಲ್ಕು ಫರ್ಟಿಲಿಟಿ ಸೆಂಟರ್ ಗಳು ತಲೆಯೆತ್ತಿವೆ, ಅದಕ್ಕಾಗಿ ಹೆಣ್ಣು ಹೇಗೋ ಬದುಕಿ ಕೊಳ್ಳುತ್ತಾಳೆ, ಅಸ್ತಿತ್ವ ಸತ್ತಿದ್ದು ಗಂಡಿಗೆ, ಹೆಣ್ಣು ಪ್ರಕೃತಿ ಆಕ್ರಮಿಸುವವರ ಸ್ವತ್ತು, ಸಾವು ಸುದ್ದಿಯಾಗದಿದ್ರೆ ಬದುಕಿದ್ದೇ ಸುಳ್ಳಾಗತ್ತೆ, ಹೆಣ್ಣು ಪ್ರಕೃತಿ ಅದು ಆಕ್ರಮಿಸುವವರ ಸ್ವತ್ತು, ಗಂಡು ಜವಾಬ್ದಾರಿಗೆ ಹೆಣ್ಣು ಕರ್ತವ್ಯಕ್ಕೆ ಸುಖ ಸ್ಕ್ಯಾಭಾವಿಕ ಹುಟ್ಟು ನೈಸರ್ಗಿಕ ಇತ್ಯಾದಿಗಳು ಮರು ಆಲೋಚನೆಗೆ ನಮ್ಮನ್ನ ಹಚ್ಚುವ ಡೈಲಾಗ್ ಆಗಿದ್ದವು. ಅವುಗಳು ನಮ್ಮೊಳಗೇ ನಾವು ಮತ್ತೆ ಮತ್ತೆ ಇಣುಕಿ ನೋಡುವ ಸಮಾಜದ ಕಿರುಗನ್ನಡಿಯಂತಿದ್ದವು.
ಸಂದರ್ಭದಲ್ಲಿ ತಕ್ಕದಾಗಿ ಬರುತ್ತಿದ್ದ ಹಿನ್ನೆಲೆ ಸಂಗೀತ ಮತ್ತಷ್ಟು ಆ ನಾಟಕವನ್ನು ಆಪ್ತವಾಗಿ ಸುತ್ತಿತ್ತು. ಹಾಗಾಗಿ ಅರುಂಧತಿ ವಸಿಷ್ಠದ ಸಂಗೀತ ಮತ್ತು ಅದನ್ನು ನಿರ್ವಹಿಸುವ ಸರ್ವಜ್ಞ ಆಚಾರ್ಯ ಸಹ ಅಭಿನಂದನಾರ್ಹರೇ. ಬೆಳಕಿನಲ್ಲಿ ನಂದ ಕಿಶೋರ್ ಕೆಲಸವು ಸ್ಮರಿಸಬೇಕಾದದ್ದೇ ಆಗಿದೆ. ಸನ್ನಿವೇಶಕ್ಕೆ ಬೇಕಾದಷ್ಟೇ ಇದ್ದ ಸಂಗೀತ ಬೆಳಕು ಕೂಡ ಇಲ್ಲಿ ಗಮನ ಸೆಳೆಯಿತು.
ಹಾಗಾಗಿ ಇಂತಹ ಒಂದು ಒಳ್ಳೆಯ ರಸಾನುಭವಿಕೆ ಅವಕಾಶ ನೀಡುವಂತಹ ಆಯೋಜಕರಾದ ಅಜಯ ಸಂಸ್ಕೃತಿ ಬಳಗದ ಸರ್ವರಿಗೂ ಅನಂತಾನಂತ ಧನ್ಯವಾದಗಳು.
ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ
Kuvempu University ಶ್ರೀಮತಿ ಶ್ವೇತಾ ರಿಗೆಕುವೆಂಪು ವಿವಿ ಯಿಂದ ಪಿಎಚ್ ಡಿ ಪದವಿ ಘೋಷಣೆ
Kuvempu University ಶಿವಮೊಗ್ಗ ನಿವಾಸಿ ಶ್ರೀಮತಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ. ಅವರ ಮಾರ್ಗದರ್ಶನದಲ್ಲಿ “ಎಸ್.ವಿ. ಪರಮೇಶ್ವರ ಭಟ್ಟರ ಸೃಜನಶೀಲ ಸಾಹಿತ್ಯ: ವಿಭಿನ್ನ ನೆಲೆಗಳು” ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ.
ಇವರು ಶಿವಮೊಗ್ಗ ನಿವಾಸಿ, ಭದ್ರ ಮೇಲ್ದಂಡೆ ಯೋಜನೆ, ಬಿ.ಆರ್. ಪ್ರಾಜೆಕ್ಟ್ನಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾದ ರವಿ ಹೆಚ್.ಎನ್. ಅವರ ಪತ್ನಿಯಾಗಿದ್ದಾರೆ.
Department of Youth Empowerment and Sports ಸಾಗರದ ಕ್ರೀಡಾ ಇಲಾಖೆ ಈಜುಕೊಳ ದುರಸ್ಥಿ ಪೂರ್ಣ, ಈಜು ತರಬೇತಿಗೆ ಸಿದ್ಧ
Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸಾಗರ ತಾಲೂಕಿನ ವಿಜಯನಗರದಲ್ಲಿರುವ ಈಜುಕೊಳದ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ಮೇ. 01 ರಂದು ಪುನಃ ಚಾಲನೆಗೊಳ್ಳಲಿದೆ.
ಮೇ. 03 ರಿಂದ 25 ರವರೆಗೆ 21 ದಿನಗಳ ಬೇಸಿಗೆಯ ವಿಶೇಷ ಈಜು ತರಬೇತಿ ಶಿಬಿರವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಡೆಸಲಾಗುತ್ತಿದ್ದು, ಆಸಕ್ತ 5 ವರ್ಷ ಮೇಲ್ಪಟ್ಟವರಿಂದ ಅರ್ಜಿ ಆಹ್ವಾನಿಸಿದೆ.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಕ್ರೀಡಾಸಕ್ತರು ಮಾಹಿತಿಗಾಗಿ ಮೊ.ಸಂ.: 8073085412/ 9731233184/ 9008982197 ಗಳನ್ನು ಸಂಪರ್ಕಿಸುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ತರಬೇತಿ ಶಿಬಿರದ ಶುಲ್ಕ ಒಬ್ಬರಿಗೆ ರೂ. 1,500/- ಗಳನ್ನು ನಿಗದಿಪಡಿಸಲಾಗಿದೆ.
