Friday, July 10, 2026
Friday, July 10, 2026

Sigandureshwari Education Trust ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಸೊರಬ ವಕೀಲರ ತಂಡಕ್ಕೆ ಎಸ್ಎಸ್ ಈ ಟಿ ಟ್ರೋಫಿ

Date:

Sigandureshwari Education Trust ಸಾಗರದ ಉಳ್ಳೂರಿನ ಶ್ರೀ ಸಿಗಂದೂರೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಲೈಟ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಾಗರ ಮತ್ತು ಸೊರಬ ವಕೀಲರ ತಂಡದ ನಡುವೆ ನಡೆದ ಹಣಾಹಣಿ ಪಂದ್ಯಾವಲಿಯಲ್ಲಿ ಸೊರಬ ವಕೀಲರ ತಂಡವು ಜಯ ಸಾಧಿಸುವ ಮೂಲಕ ರ ಎಸ್.ಎಸ್.ಈ.ಟಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಟಾಸ್‌ನಲ್ಲಿ ಸಾಗರ ವಕೀಲರ ತಂಡ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಂಟಿಂಗ್‌ಗೆ ಇಳಿದ ಸೊರಬ ವಕೀಲರ ತಂಡ 6 ಓವರ್‌ಗಳಲ್ಲಿ ಒಂದು ವಿಕೇಟ್ ನಷ್ಟಕ್ಕೆ 107 ರ ಬೃಹತ್ ಮೊತ್ತ ಕಲೆಹಾಕಿತು.

ಈ ಪೈಕಿ ಉಮೇಶ್ ಭಂಡಾರಿ ಮತ್ತು ಪ್ರದೀಪ್ ಪಚ್ಚಿ ಜೊತೆಯಾಟದಲ್ಲಿ 35 ಬಾಲ್‌ಗಳಲ್ಲಿ 102 ರನ್ ಕೊಡುಗೆಯಾಗಿ ನೀಡಿದರು.

Sigandureshwari Education Trust ಉಮೇಶ್ ಭಂಡಾರಿ (೫೦ರನ್), ಪ್ರದೀಪ್ (೪೯ರನ್)ಗಳ ಜೊತೆಯಾಟವಾಡಿದರು.
108 ರನ್‌ಗಳ ಗುರಿಯೊಂದಿಗೆ ಬೆನ್ನಟ್ಟಿದ ಸಾಗರ ವಕೀಲರ ತಂಡ 6 ಓವರ್‌ಗಳಲ್ಲಿ ತನ್ನೆಲ್ಲಾ ವಿಕೇಟ್‌ಗಳನ್ನು ಕಳೆದುಕೊಂಡು ಕೇವಲ 47 ರನ್‌ಗಳನ್ನು ಗಳಿಸಿತು. ಸೊರಬ ವಕೀಲರ ತಂಡದ ಪ್ರದೀಪ್ ಎರಡು ಓವರ್‌ಗಳಲ್ಲಿ 14 ರನ್ ನೀಡುವ ಮೂಲಕ ನಾಲ್ಕು ವಿಕೇಟ್ ಕಬಳಿಸಿದರು. ಉಮೇಶ್ ಭಂಡಾರಿ ಎರಡು ಓವರ್‌ಗಳಲ್ಲಿ 18 ರನ್ ನೀಡುವ ಮೂಲಕ ಎರಡು ವಿಕೇಟ್ ಗಳಿಸಿದರೆ, ಮಂಜುನಾಥ್ ಒಂದು ಓವರ್‌ಗೆ ೩ರನ್ ನೀಡಿ ೨ವಿಕೇಟ್ ಹಾಗೂ ಶರತ್ ಒಂದು ಓವರ್‌ನಲ್ಲಿ ೫ರನ್ ನೀಡಿ ಒಂದು ವಿಕೇಟ್ ಪಡೆದರು.
ಸೊರಬ ವಕೀಲರ ತಂಡದ ಪ್ರದೀಪ್ ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸ್ಮ್ಯಾನ್ ಆಗಿ ಮುಜಾಮಿಲ್, ಬೆಸ್ಟ್ ಫೀಲ್ಡರ್ ಸಿ.ವೈ. ಅಶೋಕ್, ಬೆಸ್ಟ್ ಬೌಲರ್ ಪ್ರದೀಪ್, ಮ್ಯಾನ್ ಆಫ್ ದಿ ಸೀರಿಯಸ್ ಉಮೇಶ್ ಭಂಡಾರಿ ಪ್ರಶಸ್ತಿಗಳಿಗೆ ಭಾಜನರಾದರು. ಪಂದ್ಯದಲ್ಲಿ ಉತ್ತಮ ಫೀಲ್ದ್ ಮಾಡುವ ಮೂಲಕ ಆದರ್ಶ ಗಮನ ಸೆಳೆದರು.
ಸೊರಬ ವಕೀಲರ ತಂಡದ ನಾಯಕ ಸಿ.ವೈ. ಅಶೋಕ್, ಎಸ್. ಅರುಣ್, ಪರಶುರಾಮ್, ಉಮೇಶ್ ಭಂಡಾರಿ, ರಾಘವೇಂದ್ರ, ಆದರ್ಶ, ಶರತ್, ಪ್ರದೀಪ್, ಆಶೀಕ್ ನಾಗಪ್ಪ, ವಿನಯ್, ಆರ್.ಟಿ. ಮಂಜುನಾಥ್, ಗುರುಮೂರ್ತಿ, ಆನಂದ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...