Tuesday, March 3, 2026
Tuesday, March 3, 2026
Home Blog Page 322

S.N. Channabasappa ಕೆಡಿಪಿ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಶಾಸಕ‌ ಚೆನ್ನಿ ಅವರಿಂದ ಚರ್ಚೆ

0

S.N. Channabasappa ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು.

  1. ಮಳೆಹಾನಿ ಪರಿಹಾರ: ಕಳೆದ ವರ್ಷ ಶಿವಮೊಗ್ಗ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೀವ್ರ ಸಂಕಷ್ಟವನ್ನು ಅನುಭವಿಸಿದರು. ಈವರೆಗೂ ಯಾವುದೇ ರೀತಿಯ ಪರಿಹಾರ ಕೈಗೊಳ್ಳದಿರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ, ತಕ್ಷಣ ಪರಿಹಾರದ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದರು.
  2. ಮುಜರಾಯಿ ಆಸ್ತಿ: ಶಿವಮೊಗ್ಗ ಜಿಲ್ಲೆಯಲ್ಲಿ ಮುಜರಾಯಿ ಆಸ್ತಿಗಳ ಒತ್ತುವರಿ ಆಗಿರುವ ಬಗ್ಗೆ ಅಳತೆ ಮಾಡಿ ಒತ್ತುವರಿ ತೆರವು ಕಾರ್ಯ ಮಾಡಲು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಒತ್ತುವರಿ ತೆರವು ಮಾಡಿಲ್ಲ ಇದಕ್ಕೆ ಸಂಬಂಧಿಸಿದಂತೆ ಹಿಂದೂ ದೇವಾಲಯಗಳ ಆಸ್ತಿ ಉಳಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚಿಸಿದರು.
  3. ಮಹಿಳಾ ಪದವಿ ಕಾಲೇಜು ಜಾಗದ ಸಮಸ್ಯೆ: ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಜಾಗದ ಸಮಸ್ಯೆ ಇರುವುದರಿಂದ ಈ ಬಗ್ಗೆ ಬೇಕಾಗಿರುವಂತಹ ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಸಮಸ್ಯೆ ಬಗೆಹರಿಸಲು ಸೂಚಿಸಿದರು.
  4. ಬೀದಿ ಜಾನುವಾರುಗಳ ಸಮಸ್ಯೆ: ಬೀದಿ ಹಸುಗಳು ಮತ್ತು ಜಾನುವಾರುಗಳ ಹಿತಕ್ಕಾಗಿ, ರೇಷ್ಮೆ ಇಲಾಖೆ ಹಾಗೂ ತಂಬಾಕು ಮಂಡಳಿ ವ್ಯಾಪ್ತಿಯಲ್ಲಿರುವ ಖಾಲಿ ಗೋದಾಮುಗಳನ್ನು ಗೋಶಾಲೆ ಬಳಕೆ ಮಾಡಲು ಅವಕಾಶ ನೀಡಬೇಕೆಂದು ಕೋರಿದರು.
  5. ವೈದ್ಯಕೀಯ ಸಂಸ್ಥೆಯ ಅವ್ಯವಸ್ಥೆ: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅವ್ಯವಸ್ಥೆ ಹಾಗೂ ಕರ್ಮಕಾಂಡಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
  6. ಹೊಸ ಜಿಲ್ಲಾ ಆಸ್ಪತ್ರೆ ಅವಶ್ಯಕತೆ: ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಜಿಲ್ಲಾ ಆಸ್ಪತ್ರೆಯ ಅವಶ್ಯಕತೆ ಇದ್ದು, ಸರ್ಕಾರದಿಂದ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

KSRTC ಮೃತವ್ಯಕ್ತಿ ಕುಟುಂಬಕ್ಕೆ ಪರಿಹಾರ ಧನ ತಲುಪಿಸಿದ ಕಾರವಾರ ಸಾರಿಗೆ ವಿಭಾಗ

0

KSRTC 2024 ರ ಜು.22 ರಂದು ಶಿರಸಿ ಮತ್ತು ಸಾಗರ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ 17 ಎಫ್ 1445 ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿದ್ದು ಗಾಯಗೊಂಡು ಮೃತಪಟ್ಟ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಂಗಾರ ಖಂಡದಸುಮಾರು 64 ವರ್ಷದ ಮೋಹನ್ ದ್ಯಾವ ನಾಯಕ ಇವರ ಪತ್ನಿ ಶಾರದಾ ಮೋಹನ ದ್ಯಾವ ನಾಯಕ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.10 ಲಕ್ಷಗಳ ಚೆಕ್‌ನ್ನು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ.ಆರ್. ಇವರು ಹಸ್ತಾಂತರಿಸಿದರು.
KSRTC 2024 ರ ಜು.22 ರಂದು ಶಿರಸಿಯಿಂದ ಸಾಗರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಸುಮಾರು 03.15 ಗಂಟೆಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೋಹನ್ ದ್ಯಾವ ನಾಯಕ ಕಾನಸೂರು ಗ್ರಾಮದ ಹಳದೋಟ ಕ್ರಾಸ್ ಹತ್ತಿರ ಬಲ ತಿರುವಿನ ರಸ್ತೆಯಲ್ಲಿ ವಾಹನದಿಂದ ಬಿದ್ದು, ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಏಪ್ರಿಲ್ 24 ರಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರು ದಿವಂಗತ ಮೋಹನ್ ದ್ಯಾವ ನಾಯಕರವರ ಪತ್ನಿ ಶಾರದಾ ಮೋಹನ ದ್ಯಾವ ನಾಯಕ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.10 ಲಕ್ಷಗಳ ಚೆಕ್ಕನ್ನು ನೀಡಲಾಯಿತು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ “ಕನ್ನಡ ಸಂಪಿಗೆ” ಪತ್ರಕರ್ತ ಟಿ.ತಿಪ್ಪೆಸ್ವಾಮಿ “ಬಸವಸೇವಾರತ್ನ” ಪ್ರಶಸ್ತಿ

0

ಯಶಸ್ವಿ ಪತ್ರಿಕೋದ್ಯಮ ಹಾಗೂ ಅಲಕ್ಷಿತ ಸಣ್ಣ ಸಮುದಾಯಗಳ ಪರವಾಗಿ ದುಡಿದ ಅನುಪಮ ಸೇವೆಗಾಗಿ ಪ್ರಸ್ತುತ ಸಾಲಿನ ಬಸವ ಸೇವಾರತ್ನ ಪ್ರಶಸ್ತಿಯನ್ನು ಇಲ್ಲಿನ ಬಸವ ಮಂಟಪದಿಂದ ಪ್ರಕಟಿಸಲಾಗಿದೆ.
ರಂಗಯ್ಯನಬಾಗಿಲು ಬಳಿ ಇರುವ ಬಸವ ಮಂಟಪದಲ್ಲಿ ಜರುಗುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗಡಿನಾಡು ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ 29 ವರ್ಷಗಳಿಂದಲೂ ನಿರಂತರವಾಗಿ ‘ಕನ್ನಡ ಸಂಪಿಗೆ’ ಪತ್ರಿಕೆಯನ್ನು ಯಶಸ್ವಿಯಾಗಿ ಪ್ರಕಟಣೆ ಮಾಡುತ್ತಾ ಬರುತ್ತಿದ್ದು, ಪತ್ರಿಕೋದ್ಯಮ ಸೇವೆ ಹಾಗೂ ಅಲಕ್ಷಿತ ಸಣ್ಣ ಸಮುದಾಯಗಳ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ತಿಪ್ಪೇಸ್ವಾಮಿ ಸಂಪಿಗೆ ಅವರ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಬಸವಮಂಟಪ ಮೂಲಗಳು ತಿಳಿಸಿವೆ.

Sri Shivananda Bharati Chintamani Swami ಹೊಸಪೇಟೆಯಲ್ಲಿ ಶಂಕರ ವರ್ಧಂತಿ ವಿಶೇಷ ಶಂಕರ ಸ್ತೋತ್ರ ಪಠಣ ಸಮರ್ಪಣೆ

0

Sri Shivananda Bharati Chintamani Swami ಶ್ರೀಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿ, ಶಂಕರ ವರ್ಧಂತಿಯ ಎರಡನೇ ದಿನದ ಬೆಳಿಗ್ಗೆ ಶಂಕರ ಸ್ತೋತ್ರ ಪಠಣ ಸಮರ್ಪಣೆಯು ಯಶಸ್ವಿಯಾಗಿ ಸಂಪನ್ನವಾಯಿತು.

ಹೊಸಪೇಟೆಯ ಮಹಿಳೆಯರು ಕೇವಲ 20 ದಿನಗಳಲ್ಲಿ ಶ್ರೀ ಶಂಕರಾಚಾರ್ಯರು ರಚಿಸಿದ 32 ಸ್ತೋತ್ರಗಳನ್ನು ಕಲಿತರು. ಅವರು 29-04-2025 ರಂದು ಇಲ್ಲಿಯ ಚಿಂತಾಮಣಿ ಮಠದ ಶ್ರೀ ಕಾಶಿ ಸುಬ್ರಹ್ಮಣ್ಯ ಚಿಂತಾಮಣಿ ಸ್ವಾಮೀಜಿಯವರ ಅನುಷ್ಟಾನ ಮಂದಿರದಲ್ಲಿ, ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಬೆಳಿಗ್ಗೆ 11 ಘಂಟೆಯಿಂದ ಮೂರು ಗಂಟೆಗಳ ಕಾಲ ಕಲಿತ ಎಲ್ಲ ಸ್ತೋತ್ರಗಳನ್ನು ಪಠಿಸಿ ಶ್ರೀ ಶಂಕರಾಚಾರ್ಯರಿಗೆ ಸಮರ್ಪಿಸಿದರು.

ಈ ಭಾಗದಲ್ಲಿಯೇ ಇದೇ ಮೊಟ್ಟಮೊದಲ ಬಾರಿಗೆ ಕೇವಲ 20 ದಿನಗಳ ಅಭ್ಯಾಸದಿಂದ, ಮಹಿಳೆಯರು ಒಟ್ಟಾಗಿ ಸೇರಿ 32 ಕಠಿಣ ಸ್ತೋತ್ರಗಳನ್ನು ಕಲಿತು ಅನುಷ್ಠಾನ ಮಂದಿರದಲ್ಲಿ ಸಮರ್ಪಿಸುವುದರ ಮೂಲಕ ಶ್ರೀ ಶಂಕರರ ಆಶೀರ್ವಾದಕ್ಕೆ ಪಾತ್ರರಾದರು.

ಈ ವಿಶೇಷ ಕಾರ್ಯಕ್ರಮವು ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿಗಳ ನೇತೃತ್ವದಲ್ಲಿ, ಬೆಳಿಗ್ಗೆ ಶ್ರೀ ಕಾಶಿ ವಿಶ್ವೇಶ್ವರನ ದರ್ಶನ ಮತ್ತು ಪೂಜೆ ಮೂಲಕ ಪ್ರಾರಂಭವಾಯಿತು. ಸುಮಾರು 3 ಗಂಟೆಗಳ ಅವಧಿಯಲ್ಲಿ ಆಯ್ದ 32 ಶಂಕರ ಸ್ತೋತ್ರಗಳನ್ನು ಪಠಿಸಿ, ಸಮರ್ಪಣೆ ಮಾಡಿ, ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಲಾಯಿತು.

Sri Shivananda Bharati Chintamani Swami ಈ ಕಾರ್ಯಕ್ರಮದಲ್ಲಿ ಸುಮಾರು 25 ಮಹಿಳೆಯರು ಭಾಗವಹಿಸಿದ್ದರು.ಯಶಸ್ವಿಯಾಗಿ ನೆರವೇರಲು ಕಾರಣರಾದ ಎಲ್ಲಾ ಮಹಿಳೆಯರಿಗೆ ಧನ್ಯವಾದಗಳನ್ನು ತಿಳಿಸಿದರು.

ವರದಿ: ಮುರಳೀಧರ್ ನಾಡಿಗೇರ್

DC Shivamogga ಪರಿಶಿಷ್ಠ ಜಾತಿ ಒಳಮೀಸಲಾತಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ- ಗುರುದತ್ತ ಹೆಗಡೆ

0

DC Shivamogga ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತಂತೆ ಮೇ 5 ರಿಂದ 21 ವರೆಗೆ ಜಿಲ್ಲೆಯಲ್ಲಿ ಗಣತಿದಾರರು ಮನೆ-ಮನೆಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಲಿದ್ದು ಈ ಸಮೀಕ್ಷೆಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿಯ ಸಮುದಾಯದವರು ತಮ್ಮ ಮೂಲಜಾತಿಯನ್ನು ತಿಳಿಸಬಹುದಾಗಿದ್ದು, ಸಮೀಕ್ಷಾ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೋರಿದ್ದಾರೆ.
DC Shivamogga ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ರವರ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಶೇಖರಿಸಲು ಸಮೀಕ್ಷೆ ನಡೆಸಲಾಗುವುದು. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮೀಕ್ಷೆ ನಡೆಯಲಿದ್ದು ಸಮೀಕ್ಷೆ ವೇಳೆ ಗಣತಿದಾರರಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.

SRNM College ಯುವಜನರು ರಕ್ತದಾನದ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು-ಡಾ.ಕೆ.ಎಲ್.ಅರವಿಂದ್

0

SRNM College ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ, ಕೇವಲ ಒಂದು ಯುನಿಟ್ ರಕ್ತ ನಾಲ್ಕು ಜನರ ಜೀವವನ್ನು ಉಳಿಸಬಲ್ಲದು, ರಕ್ತವನ್ನು ಕೃತಕವಾಗಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲದ ಕಾರಣ ರಕ್ತಕ್ಕೆ ಬಹಳ ಬೇಡಿಕೆ ಇದೆ. ಯುವಜನರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಲ್.ಅರವಿಂದ ಕರೆ ನೀಡಿದರು.

ಇಂದು ಬೆಳಿಗ್ಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್.ಎನ್.ಎಂ. ಕಾಲೇಜಿನ ಗ್ರಂಥಾಲಯದ ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ ಹಾಗೂ ರಕ್ತದ ಗುಂಪು ತಪಾಸಣೆ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವಜನರು ಈ ಮಹತ್ಕಾರ್ಯಕ್ಕೆ ಹೆಚ್ಚು ಆಸಕ್ತಿಯಿಂದ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ರಾಷ್ಟೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಅಶ್ವಥ ನಾರಾಯಣ ಶೆಟ್ಟಿ ಇವರ ರಕ್ತ ದಾನದ ಮಹತ್ವ ತಿಳಿಸಿ ವಿದ್ಯಾರ್ಥಿಗಳ ಉತ್ಸಾಹ ವನ್ನು ಪ್ರಶಂಸಿಸಿದರು.

SRNM College ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನದಿಂದ ಹೃದಯಾಘಾತ ಕಡಿಮೆ ಆಗುವುದರ ಜೊತೆಗೆ ದೇಹದಲ್ಲಿ ರಕ್ತದಾನದಿಂದ ಕೊಬ್ಬಿನಾಂಶ ಹೊರಹೋಗುವುದರಿಂದ ಸದಾ ಲವಲವಿಕೆಯಿಂದ ಇರಲು ಅನುಕೂಲವಾಗುತ್ತದೆ. ಜೊತೆಗೆ ದೀರ್ಘಾಯುಷ್ಯವುಳ್ಳವರಾಗಿರುತ್ತಾರೆ. ಜಿಲ್ಲೆಯಲ್ಲಿ ರಕ್ತದ ಕೊರತೆ ತುಂಬಾ ಹೆಚ್ಚಾಗಿದ್ದು, ಇದನ್ನು ನೀಗಿಸಲು ಯುವಕರು ರಕ್ತದಾನ ಮಾಡುವುದರಲ್ಲಿ ಮುಂದಾಗಬೇಕು. ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ರಕ್ತದಾನ ಶಿಬಿರದಲ್ಲಿ 118ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಎನ್.ಎಸ್.ಎಸ್. ಘಟಕದ ಡಾ. ಲಕ್ಷ್ಮಣ.ಕೆ, ಮಂಜುನಾಥ.ಕೆ, ಯುವ ರೆಡ್‍ಕ್ರಾಸ್ ಘಟಕದ ಡಾ. ನಾಗರಾಜ.ಕೆ.ಎಸ್, ಉಪನ್ಯಾಸಕರಾದ ಡಾ. ಮುಕುಂದ.ಎಸ್, ಡಾ. ಪ್ರಶಿತ್ ಕೇಕುಡ.ಟಿ.ಆರ್, ಸಂಗೀದಾ ಬಾನು, ನಂದನ್, ಅಂಕಿತ್, ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ದಿನೇಶ್ ಹಾಗೂ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

0

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಲ್ಲಿ ಮೇ. 2ರಿಂದ 11ರವರೆಗೆ ಒಟ್ಟು 10 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 10ಕ್ಕೆ 11:30, ಸಂಜೆ 5:30 ಹೀಗೆ 04 ಬ್ಯಾಚ್‌ಗಳಲ್ಲಿ ಮತ್ತು ಸಂಜೆ ಚೆಸ್ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ.
ಪ್ರತಿ ಬ್ಯಾಚ್‌ನಲ್ಲಿ 10 ಮಕ್ಕಳಿಗೆ ಮಾತ್ರ ಅವಕಾಶವಿದ್ದುö, ಹೆಸರು ನೊಂದಾಯಿಸಲು ಅಂತರ ರಾಷ್ಟ್ರೀಯ ಚೆಸ್ ತೀರ್ಪುಗಾರ ಮತ್ತು ಚೆಸ್ ತರಬೇತುದಾರ ಪ್ರಾಣೇಶ್ ಯಾದವ್ ಮೊ.92424 01702, 9743819678ರಲ್ಲಿ ಸಂಪರ್ಕಿಸಿ.

Shivaganga Yoga Center ನಗರದ ಅತಿದೊಡ್ಡ ಬಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

0

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಸ್.ರುದ್ರೇಗೌಡ ರವರು ಸನ್ಮಾನ ಸ್ವೀಕರಿಸಿದರು.

ಈ ವೇಳೆ ಮಾಜಿ ಕಾರ್ಪೋರೇಟರ್ ಈ.ವಿಶ್ವಾಸ್ ಮಾತನಾಡಿ, ನಗರದಲ್ಲಿ ಅತಿದೊಡ್ಡ ಬಡಾವಣೆ ಸುಮಾರು 140 ಕೋಟಿಗಳ ಅನುದಾನದಿಂದ ಅಭಿವೃಧ್ಧಿ ಕಾರ್ಯಗಳನ್ನು ಮಾಡಿ ಶಿವಮೊಗ್ಗದಲ್ಲಿ ಮಾದರಿ ಬಡಾವಣೆಗಳನ್ನಾಗಿಸಿದ್ದೇವೆ. ಇದಕ್ಕೆ ರುದ್ರೇಗೌಡರು, ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಶಾಸಕರು ಹಾಗೂ ವಿಧಾನ ಸಭಾ ಸದಸ್ಯರು ಸಹಕಾರ ನೀಡಿದ್ದಾರೆ. ಹಾಗೂ ನಮ್ಮ ಈ ಎಲ್ಲಾ ಅಭಿವೃಧ್ಧಿ ಕಾರ್ಯಗಳಿಗೆ ಸಾರ್ವಜನಿಕರು ಬಹಳ ಉತ್ತಮವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಅಭಿವೃಧ್ಧಿ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರುದ್ರೇಗೌಡ ರವರನ್ನು ಅಭಿನಂದಿಸಲಾಯಿತು.

Shivaganga Yoga Center ಜೆಸಿಐ ವಿವೇಕ ಸದಸ್ಯ, ಯೋಗ ಶಿಕ್ಷಕ ಕಾಟನ್ ಜಗದೀಶ್ ಮಾತನಾಡಿ, ನಮ್ಮ ಸ್ವಾಮಿ ವಿವೇಕಾನಂದ ಪಾರ್ಕ್ ಒಂದು ಆರೋಗ್ಯಧಾಮವಾಗಿದೆ. ಶಿವಶಕ್ತಿ ಯೋಗ ಮಂದಿರದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಯಾಮ, ಧ್ಯಾನದ ಶಿಬಿರಗಳು ನಡೆಯುತ್ತಲಿವೆ. ಬಡಾವಣೆಯ ಜನರು ಆರೋಗ್ಯವಂತರಾಗಿದ್ದಾರೆ ಹಾಗೂ ನೂರಾರು ಜಾತಿಯ ಸಸ್ಯಗಳು ಇಲ್ಲಿ ಇರುವುದರಿಂದ ಉತ್ತಮವಾದ ಗಾಳಿ ದೊರಕುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಸಿ. ವಿ.ರುದ್ರಾರಾಧ್ಯರು, ಜೂಸೆಫ್ ಬಾಲರಾಜ್, ರೋಟರಿ ಜಿ.ವಿಜಯ್ ಕುಮಾರ್, ಚಂದ್ರಶೇಖರಯ್ಯ, ಮೇಘನಾ, ಜೆಸಿಐ ವಿವೇಕ ಅಧ್ಯಕ್ಷರಾದ ಮಂಜುಳಾ ಕೇಶವ್, ನಾಗರಾಜ್, ಪರಿಸರ ನಾಗರಾಜ್, ಪಾರ್ಕ್ ಜೆಸಿ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

0

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದ ಆವರಣದಲ್ಲಿ ಮೇ 10ರ ಶನಿವಾರ ಮಧ್ಯಾಹ್ನ 4 ಗಂಟೆಗೆ ಮೇ 16ರ ಭಾನುವಾರ ಮಧ್ಯಾಹ್ನ 2ಗಂಟೆವರೆಗೆ ಮಕ್ಕಳಿಗಿಗಾಗಿ ವಿಶೇಷ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ.
09 ರಿಂದ 13 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸ ಬಹುದಾಗಿದ್ದು, ಇದರಲ್ಲಿ ಧ್ಯಾನ, ಪ್ರಾಣಾಯಾಮ, ಯೋಗಾಸನ, ಯೋಗನಿದ್ರೆ, ಸೂರ್ಯ ನಮಸ್ಕಾರದ ಜೊತೆಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಬೇಕಾದ ಆತ್ಮ ವಿಶ್ವಾಸ ವೃದ್ಧಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಮತ್ತು ವ್ಯಕ್ತಿತ್ವವನ್ನು ಅರಿತು ಅದನ್ನು ಹೇಗೆ ಹೊರತರಬೇಕು ಎಂಬುದರ ಬಗ್ಗೆ ಶಿಬಿರದಲ್ಲಿ ತರಬೇತಿ ನಡೆಯಲಿದೆ.
Sarva Samriddhi Sadhana Center ಮಕ್ಕಳು ಶಿಬಿರದಲ್ಲಿ ತಂದೆ, ತಾಯಿ, ಗುರು-ಹಿರಿಯರ ಮಹತ್ವ ಶಾಲೆ, ಸ್ನೇಹಿತರು ಮತ್ತು ಸಮಾಜ ದಲ್ಲಿ ಉತ್ತಮ ವ್ಯಕ್ತಿತ್ವ ರೂಡಿಸಿ ಕೊಳ್ಳುವ ಜವಾಬ್ದಾರಿಯುತ ವಿಷಯ ಗಳು ಮತ್ತು ಉತ್ತಮ ಆರೋಗ್ಯ, ದೈಹಿಕವಾಗಿ ಸಧೃಡವಾಗಿರಲು ಈ ಶಿಬಿರ ಸಹಕಾರಿಯಾಗಿದೆ. ಶಿಬಿರದ ಮಧ್ಯ ಪೋಷಕರ ಆಶ್ರಮಕ್ಕೆ ಬರುವಾಗಿಲ್ಲ, ಕೊನೆಯ ದಿನ ಬೆಳಿಗ್ಗೆ 10ಗಂಟೆಗೆ ಪೋಷಕರು ಆಶ್ರಮಕ್ಕೆ ಬರಬೇಕು. ಶಿಬಿರದಲ್ಲಿ ಭಾಗವಹಿಸು ವವರು, ಬಟ್ಟೆ, ಸ್ನಾನದ ವಸ್ತುಗಳು, ಹಾಸುವ, ಹೊದಿಕೆ, 100ಪುಟದ ಲಾಂಗ್ ಅನ್‌ರೋಲ್ಡ್ ನೋಟ್ ಬುಕ್, 1ಡ್ರಾಯಿಂಗ್ ಪುಸ್ತಕ, ಸ್ಕೆಚ್‌ಪೆನ್ನುಗಳನ್ನು ತರಬೇಕು.
ಮಕ್ಕಳು ಮೊಬೈಲ್ ತರುವ ಆಗಿಲ್ಲ ಮೊದಲು ಬಂದ 40 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಹಣ ಸಂದಾಯಿ ಸಲು ವ್ಯಾಟ್ಸಾಪ್ ಮೊ. 9986052851ರಲ್ಲಿ ಮಾಹಿತಿ ಹಾಗೂ ಹೆಸರು ನೊಂದಾಯಿಸಲು 9449803397ರಲ್ಲಿ ಸಂಪರ್ಕಿಸಿ.

State Newspaper Distributors Association ಆಗಸ್ಟ್ 28 ರಂದು ಮೈಸೂರಿನಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನ- ಕೆ.ಶಂಭುಲಿಂಗ

0

State Newspaper Distributors Association ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪೂರ್ವಭಾವಿ ಸಭೆಯಲ್ಲಿ ಕಾಶ್ಮೀರದ ಪಾಲ್ಗಾಂನಲ್ಲಿ ಶಿವಮೊಗ್ಗದ ಮಂಜುನಾಥ್ ಅವರ ಸೇರಿದಂತೆ ಮೃತಪಟ್ಟ ಎಲ್ಲರಿಗೂ ಸಂತಾಪ ಸೂಚಿಸಲಾಯಿತು.
ರಾಜ್ಯ ಸರ್ಕಾರ ನೀಡಿರುವ ಪ್ರಯೋಜನಗಳನ್ನು ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು.
ಈ ಬಾರಿಯ ಐದನೆಯ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಮ್ಮೇಳನ ಆಗಸ್ಟ್ 28 ಮೈಸೂರಿನಲ್ಲಿ ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷರದ ಕೆ, ಶಂಭುಲಿಂಗ ಅವರು ಕರೆ ನೀಡಿದರು.
State Newspaper Distributors Association ಇನ್ನು ಹೆಚ್ಚಿನ ಪ್ರಯೋಜನವನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್ , ಮಾಲತೇಶ್ ಪ್ರಧಾನಕಾರ್ಯದರ್ಶಿಗಳದ ಮುಕ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರುಗಳಾದ ರಾಮು , ಜಿ ನಾಗಭೂಷಣ್ ತೀರ್ಥಹಳ್ಳಿ ಸಂಘಟನಾ ಕಾರ್ಯದರ್ಶಿಯಾದ ಶಿಕಾರಿಪುರ ಗಜೇಂದ್ರ ಭದ್ರಾವತಿಯ ಪರಶುರಾಮ್ ರಾವ್ ನಿರ್ದೇಶಕರುಗಳಾದ ಮಹಮ್ಮದ್ ಅಜೀಜೆ ಉಲ್ಲಾ ಪಾರ್ಥಿಬನ್ ಸದಸ್ಯರುಗಳಾದ ದುರ್ಘೋಜಿ ರಾಜವರ್ಮ ಜೈನ್ ಪ್ರಶಾಂತ್ ಪ್ರಾಣೇಶ್ ಭದ್ರಾವತಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಉಪಾಧ್ಯಕ್ಷರಾದ ಸೋಮಶೇಖರ್ ಜಗದೀಶ್ ಶಿರಾಳಕೊಪ್ಪದ ರಾಘವೇಂದ್ರ ಮತ್ತು ಇನ್ನೂ ಇತರರು ಭಾಗವಹಿಸಿದ್ದರು.