Tuesday, March 3, 2026
Tuesday, March 3, 2026
Home Blog Page 321

Basava Jayanti ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಲಿಸಿಕೊಟ್ಟ ಬಸವಣ್ಣನವರು ಯಾವುದೇ ಜಾತಿಗೆ ಸೀಮಿತರಲ್ಲ: ಗುರುಕುಮಾರ ಪಾಟೀಲ್

0

Basava Jayanti ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲಘಟ್ಟದಲ್ಲಿ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ವಚನಕಾರ ಬಸವಣ್ಣನವರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಗುರುಕುಮಾರ ಪಾಟೀಲ್ ಹೇಳಿದರು.
ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಟೌನ್ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಲಿಸಿಕೊಟ್ಟ ಬಸವಣ್ಣನವರು ಯಾವುದೇ ಜಾತಿಗೆ ಸೀಮಿತರಲ್ಲ. ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ಸಾರಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ಮೂಲಕ ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ. ಜಯಶೀಲಗೌಡ ಮಾತನಾಡಿ, ಬಸವಣ್ಣನವರನ್ನು ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಜಗತ್ತಿನಲ್ಲಿಯೇ ಮೊದಲು ಸ್ತ್ರೀಯರಿಗೆ ಸ್ಥಾನಮಾನ ದೊರೆಕಿಸಿಕೊಟ್ಟು ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಪ್ರಸ್ತುತ ಇಂದಿಗೂ ಸಮಾಜದಲ್ಲಿ ಜಾತಿಯತೆ, ಕಂದಾಚಾರ, ಮೌಢ್ಯಗಳು ಜೀವಂತವಾಗಿರುವುದು ದುರ್ಧೈವದ ಸಂಗತಿ ಎಂದರು.
Basava Jayanti ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಡೊಳ್ಳು ಕುಣಿತ ಮೆರಗು ತಂದಿತು.
ಬಸವಣ್ಣನವರ ಕುರಿತು ಮಹಾಂತೇಶ್ ಕಳ್ಳಿಕೋನೆ ಉಪನ್ಯಾಸ ನೀಡಿದರು. ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿದರು. ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಕೆಎಂಎಫ್ ನಿರ್ದೇಶಕ ದಯಾನಂದಗೌಡ ತ್ಯಾವಗೋಡು, ಪಿಎಸ್‌ಐ ನಾಗರಾಜ್, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್, ತಾಲೂಕು ಅಧ್ಯಕ್ಷ ಈಶ್ವರಪ್ಪ, ಜಿಲ್ಲಾ ಸಂಚಾಲಕ ಮಂಜುನಾಥ ಆರೇಕೊಪ್ಪ, ಪಶು ಇಲಾಖೆಯ ಆಡಳಿತಾಧಿಕಾರಿ ಡಾ.ಎನ್‌ಆರ್. ಪ್ರದೀಪ್ ಕುಮಾರ್, ವೀರಶೈವ ಯುವ ವೇದಿಕೆ ಮಾಜಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ, ವಿಜೇಂದ್ರಸ್ವಾಮಿ ಎಣ್ಣೆಕೊಪ್ಪ, ಚಂದ್ರಪ್ಪ ಗಂಗೊಳ್ಳಿ, ಶರತ್‌ಸ್ವಾಮಿ ಸೇರಿದಂತೆ ಇತರರಿದ್ದರು.

Basava Jayanti ಬಸವ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ರಾಜಭೀದಿ ಉತ್ಸವ

0

Basava Jayanti ಬಸವ ಜಯಂತಿ ಅಂಗವಾಗಿ ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ಹಾಗೂ ಜಿಲ್ಲಾಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಶಿವಮೊಗ್ಗ ನಗರದ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನ ದೇವಸ್ಥಾನ ದಿಂದ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ಬಸವೇಶ್ವರ ಭಾವಚಿತ್ರದೊಂದಿಗೆ ಗಾಂಧಿ ಬಜಾರ್ ನೆಹರು ರಸ್ತೆ ಮುಖಾಂತರ ಕುವೆಂಪುರ ರಂಗಮಂದಿರಕ್ಕೆ ಮೆರವಣಿಗೆ ತಲುಪಿತು. Basava Jayanti ವೀರಗಾಸೆ ಡೊಳ್ಳು ಕುಣಿತ. ಕರಡಿಮಜಲು ಹಾಗೂ ಭಜನಾ ತಂಡಗಳೊಂದಿಗೆ ರಾಜಭೀದಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು
ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿ ಪ್ರಕಾಶ್. ಕಾರ್ಯದರ್ಶಿ ಎಸ್ಪಿ ದಿನೇಶ್. ಹೆಚ್.ಸಿ ಯೋಗೀಶ್.. ಡಿಎಂ ಶಂಕರಪ್ಪ. ಟಿಬಿ ಜಗದೀಶ್. ಬಾಳೆಕಾಯಿ ಮೋಹನ್. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್ ಎಮ್ ಮಹಾರುದ್ರ. ಶ್ರೀ ವಿಜಯ ಕುಮಾರ್. ಶಾಂತ ಆನಂದ. ಮಹೇಶ್ ಮೂರ್ತಿ ಅನಿತಾ ರವಿಶಂಕರ್ ಪೀ ರುದ್ರೇಶ್. ವೈ ಹೆಚ್ ನಾಗರಾಜ್. ಕಿರಣ್ ದೇಸಾಯಿ. ಕಾಯಕಯೋಗಿ ಚೆನ್ನಬಸಪ್ಪ ಉಪಸ್ಥಿತರಿದ್ದರು.

Red Cross Organization ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ರೆಡ್ ಕ್ರಾಸ್ ವತಿಯಿಂದ ಶ್ರವಣ ಸಾಧನ ವಿತರಣೆ

0

Red Cross Organization ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ರೆಡ್ ಕ್ರಾಸ್ ವತಿಯಿಂದ 25 ಶ್ರಾವಣ ಸಾಧನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರ ಹಸ್ತದಿಂದ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ರೆಡ್ ಕ್ರಾಸ್ ಸಂಸ್ಥೆಯ ಸೇವೆಗಳನ್ನ ಗುರುತಿಸಿ ಅಭಿನಂದಿಸಿದರು. ಸಮಾಜದಲ್ಲಿ ನೂರಾರು ವರ್ಷಗಳಿಂದ ಮಾನವೀಯ ಸೇವೆಯನ್ನು ಮಾಡುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಇಂದಿಗೂ ಸಹ ತನ್ನ ವಿಶೇಷ ಸೇವೆಗಳಿಂದ ಗುರುತಿಸಿಕೊಂಡಿದೆ ಎಂದು ನುಡಿದರು.

ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ಈಗ 25 ಶ್ರವಣ ಸಾಧನ ನೀಡಿದ್ದು, ಬರುವ ದಿನಗಳಲ್ಲಿ ಇನ್ನೂ 25 ಶ್ರವಣ ಸಾಧನಗಳಿಗೆ ಬೇಡಿಕೆ ಇದೆ. ಅದನ್ನು ಕೂಡಲೇ ವಿತರಿಸಲಾಗುವುದು ಎಂದು ನುಡಿದರು.

Red Cross Organization ಹಾಗೆ ಈಗಾಗಲೇ ವೀಲ್ ಚೇರ್ ಗಳನ್ನು ಮತ್ತು ಅಂಗವಿಕಲರ ಸಾಧನ ಸಾಮಗ್ರಿಗಳನ್ನು, ಕರೋನಾ ಸಂದರ್ಭದಲ್ಲಿ ಫುಡ್ ಕಿಟ್ ಗಳನ್ನು ವಿತರಣೆ ಮಾಡಿರುವುದನ್ನು ನೆನಪಿಸಿದರು.

ಸಮಾರಂಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ರೆಡ್ ರೆಡ್ ಕ್ರಾಸ್ ಮಾಜಿ ಸಭಾಪತಿಗಳಾದ ಅಶ್ವತ್ ನಾರಾಯಣ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಲ್ಕಿಶ್ ಬಾನು, ಭಾರತಿ ಚಂದ್ರಶೇಖರ್, ಭಾರತೀ ಶೆಟ್ಟಿ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ರೆಡ್ ಕ್ರಾಸ್ ನಿರ್ದೇಶಕರಾದ ನವೀನ್ ಹಾಗೂ ಎಸ್ ಪಿ ಮಿಥುನ್ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Klive Special Article ಅಕ್ಷಯ ಫಲ ನೀಡುವ ಅಕ್ಷಯ ತೃತೀಯ

0

ಲೇ: ಎನ್.ಜಯ ಭೀಮಜೊಯಿಸ್ ಶಿವಮೊಗ್ಗ

Klive Special Article ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು “ಅಕ್ಷಯತೃತೀಯ”ಎಂದು ಕರೆಯುತ್ತಾರೆ.ಅಕ್ಷಯ ಎಂದರೆ ಹೆಚ್ಚುತ್ತಾ ಹೋಗುವುದು,ಸದಾ ವೃದ್ಧಿಯಾಗುವುದು ಎಂದರ್ಥ.ಇಂದಿನ ದಿನ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳಬಹುದಾದಂತಹ ದಿನ. ಎಲ್ಲರ ಬಾಳಿನಲ್ಲಿ ಸಂತೋಷ,ನೆಮ್ಮದಿ,ಶಾಂತಿ ಮತ್ತು ಆರೋಗ್ಯಭಾಗ್ಯ ಅಕ್ಷಯವಾಗಲಿ ಎಂಬ ಸದುದ್ದೇಶ ಹೊಂದಿರುವ ದಿನ ಅಕ್ಷಯತೃತೀಯ.
ಅಕ್ಷಯತೃತೀಯದದಿನದವಸ-ಧಾನ್ಯ,ಹಣ,ಹಸಿದವರಿಗೆ ಊಟ ಹೀಗೆಯಾವುದನ್ನು ದಾನವಾಗಿ ನೀಡಿದರೂ ಅದರಿಂದಬರುವ ಪುಣ್ಯದ ಫಲ ಬಹಳವಾಗಿರುತ್ತದೆ. ಇಂದು ಬೆಳ್ಳಿ ಬಂಗಾರದ ಆಭರಣಗಳನ್ನು ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ
ನಂಬಿಕೆಯಿದೆ. ಸಂಪತ್ತು ಅಕ್ಷಯವಾಗುತ್ತದೆ ಎಂದು ಬೆಳ್ಳಿ ಬಂಗಾರ
ವನ್ನು ಸಾಲಮಾಡಿ ತೆಗೆದುಕೊಳ್ಳುವುದು ಅಷ್ಟು ಸೂಕ್ತವಾದ ಯೋಚನೆಯಲ್ಲ.,ಏಕೆಂದರೆ ಸಾಲ
ಮಾಡಿ ಸಂಕಷ್ಟವನ್ನೂಅನುಭವಿಸಬಹುದು.ಹಣದ ಅನುಕೂಲವಿದ್ದವರು ಬೆಳ್ಳಿಬಂಗಾರವನ್ನು ಖರೀದಿಸಬಹುದು.
ವಿದ್ಯಾದಾನವೂ ಬಹಳ ಶ್ರೇಷ್ಠವಾದ ದಾನವಾಗಿ ರುತ್ತದೆ.ಎಲ್ಲಕ್ಕಿಂತ ಅನ್ನದಾನ ಬಹಳ ಮಹತ್ವ
ಪಡೆದಿರುವ ದಾನವಾಗಿರುತ್ತದೆ.ಹಸಿದ ಹೊಟ್ಟೆಗೆ ಅನ್ನ ಉಣಬಡಿಸಿದರೆ ಅಗಾಧವಾದ ಪುಣ್ಯವನ್ನು
ಪಡೆಯಬಹುದು.ಮನುಷ್ಯನಿಗೆಯಾವುದರಿಂದಲೂ ತೃಪ್ತಿಪಡಿಸಲಾಗುವುದಿಲ್ಲ.ಊಟವೊಂದೇ ತೃಪ್ತಿಯಾಗಿಸಾಕೆನಿಸುವುದು.ಅಕ್ಷಯ ತೃತೀಯ ಬರುವ ವೈಶಾಖಮಾಸದಲ್ಲಿ ಬಿಸಿಲಿನ ತಾಪ ಬಹಳ ವಾಗಿರುತ್ತದೆ.ನಿಂಬೆಹಣ್ಣಿನಪಾನಕ,ಮಜ್ಜಿಗೆ,ಒಳ್ಳೆಯ ಕುಡಿಯುವನೀರುಇವುಗಳನ್ನುಬಿಸಿಲಿನಬೇಗೆಯಲ್ಲಿ ಬಳಲಿದವರಿಗೆ ಕೊಟ್ಟರೂ ಅದರಿಂದಲೂ ಪುಣ್ಯದ ಫಲ ಸಂಚಯವಾಗುತ್ತದೆ.
ಈ ದಿನ ಯಾವುದೇ ಶುಭದ ಕೆಲಸವನ್ನು ಪ್ರಾರಂಭ ಮಾಡಿದರೆ ಅದು ಯಾವುದೇ ಅಡೆತಡೆಗಳಿಲ್ಲದೇ
ನಡೆಯುವುದು ಎಂಬ ದೃಢ ನಂಬಿಕೆಯೂ ಇದೆ. ದಶಾವತಾರದ ವಿಷ್ಣುವಿನ ಆರನೇ ಅವತಾರವಾದ
ಪರಶುರಾಮಾವತಾರವಾದ ದಿನ ಮತ್ತು ಮಹಾ ಪುರುಷರಾದ ಶ್ರೀ ಬಸವಣ್ಣನವರು ಜನಿಸಿದ್ದು ಅಕ್ಷಯ ತೃತೀಯದಂದೇ.ಶ್ರೀ ಶಂಕರಾಚಾರ್ಯರು ಕನಕಧಾರಾ ಸ್ತೋತ್ರವನ್ನು ರಚಿಸಿದ್ದೂ ಅಕ್ಷಯ ತದಿಗೆಯಂದೇ.ಬಾಲ್ಯದ ಗೆಳೆಯರಾಗಿದ್ದ ಶ್ರೀಕೃಷ್ಣ ಸುಧಾಮರು ಭೇಟಿಯಾಗಿತಮ್ಮ ಬಾಲ್ಯದ ದಿನಗಳನ್ನುಮೆಲುಕುಹಾಕಿದದಿನವೂಇಂದೇ.
ಶ್ರೀವೇದವ್ಯಾಸರುಗಣೇಶನಿಂದಮಹಾಭಾರತವನ್ನು ಬರೆಸಿದ ದಿನವೂ ಅಕ್ಷಯತೃತೀಯ ದಿನವಾಗಿದೆ.
ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಈ ದಿನದಂದೇ ಆಗಿದೆ.ಅಕ್ಷಯಪಾತ್ರೆಯು ಸುಭಿಕ್ಷವಾಗಿ ಆಹಾರವನ್ನುನೀಡುವಪಾತ್ರೆಯಾಗಿದೆ.ಅಕ್ಷಯಪಾತ್ರೆಯಲ್ಲಿ ಆಹಾರ ಎಂದಿಗೂ ಬರಿದಾಗುವುದೇ ಇಲ್ಲ.
ಈ ದಿನ ಜೈನಬಂಧುಗಳಿಗೂ ಅತ್ಯಂತ ಪವಿತ್ರವಾದ ದಿನವಾಗಿರುತ್ತದೆ. ಏಕೆಂದರೆ ಜೈನ ತೀರ್ಥಂಕರರಾದ ಋಷಭದೇವ ಉಪವಾಸವ್ರತವನ್ನುಸಂಪೂರ್ಣಗೊಳಿಸಿದ ದಿನವಾಗಿರುತ್ತದೆ. ಚಾರ್ ಧಾಮಗಳಲ್ಲಿ ಒಂದಾದಬದರೀಕ್ಷೇತ್ರದಲ್ಲಿಶ್ರೀಬದರಿನಾರಾಯಣನ ದರ್ಶನಕ್ಕೆ ದೇವಸ್ಥಾನದ ಬಾಗಿಲು ತೆಗೆಯುವುದು ಅಕ್ಷಯತೃತೀಯ ದಿವಸದಂದೇ.
ಇಂದು ವಿವಾಹಮುಂತಾದಮಂಗಳಕಾರ್ಯಗಳನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಜೀವನದಲ್ಲಿಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲವೆಂಬದೃಢವಾದ ನಂಬಿಕೆ ಇದೆ.
ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ಖರೀದಿಸಿ ಜ್ಞಾನ ಸಂಪಾದನೆಯನ್ನು
ವೃದ್ಧಿಸಿಕೊಳ್ಳ ಬಹುದು. ಸಹಾಯದ ಅಗತ್ಯವಿರುವವರಿಗೆ ಕೈಲಾದ ಸಹಾಯ ಮಾಡಿ ಪುಣ್ಯಸಂಪಾದಿಸಿಕೊಳ್ಳಬಹುದು.
ಈ ಅಕ್ಷಯ ತೃತೀಯ ಶುಭದಿನದಂದು ಒಳ್ಳೆಯ ಕೆಲಸಗಳನ್ನು ಮಾಡುವ ಸಂಕಲ್ಪ ಮಾಡಿ ಅದರಂತೆ
ನಡೆದರೆ ಅಕ್ಷಯ ತೃತೀಯ ಹಬ್ಬದ ಆಚರಣೆ ಅರ್ಥ ಪೂರ್ಣವಾಗುವುದರಲ್ಲಿ ಸಂದೇಹವಿಲ್ಲ.

Sri Adichunchanagiri Education Trust ಬಿಜಿಎಸ್ ಪಿಯು ವಾಣಿಜ್ಯ ಕಾಲೇಜಿಗೆ ಶೇ 100 ಫಲಿತಾಂಶ

0

Sri Adichunchanagiri Education Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ ಶಾಖೆಯ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಸ್ವತಂತ್ರ ಪ. ಪೂ.ವಾಣಿಜ್ಯ ಕಾಲೇಜು ಗ್ರಾಮೀಣ ಭಾಗದ ಮಕ್ಕಳನ್ನೊಳಗೊಂಡ ಕಾಲೇಜಿಗೆ ಶೇ100 ಫಲಿತಾಂಶ ಲಭಿಸಿರುವುದು ಹಿರಿಮೆಯ ಸಂಗತಿ.
ಪರೀಕ್ಷೆಗೆ ಕುಳಿತ 45 ವಿದ್ಯಾರ್ಥಿಗಳಲ್ಲಿ 08 ಅತ್ಯುತ್ತಮ ಶ್ರೇಣಿ, ಪ್ರಥಮ ಶ್ರೇಣಿ, 36 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ತೇರ್ಗಡೆಯಾಗಿದ್ದು,ಉತ್ತಮ ಸಾಧನೆ ಮಾಡಿದ್ದಾರೆ.
Sri Adichunchanagiri Education Trust ಪ್ರಜ್ವಲ್ ಹೆಚ್. ಎನ್.ಪಿಯುಸಿ ವಾರ್ಷಿಕ ಪರೀಕ್ಷೆಯ ಪಲಿತಾಂಶ ದಲ್ಲಿ ಈ ವಿದ್ಯಾರ್ಥಿಗೆ ಬಿಜಿನೆಸ್ ಸ್ಟಡೀಸ್ ನಲ್ಲಿ 36ಅಂಕಗಳು ಬಂದಿದ್ದು, ನಂತರ ಮರು ಮೌಲ್ಯ ಮಾಪನದಲ್ಲಿ 13 ಅಂಕಗಳು ಪಡೆಯುವ ಮೂಲಕ ಪಾಸಾಗಿರುತ್ತಾನೆ.
ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Department of Science and Technology ಹೊಳಲೂರು ಏತ ನೀರಾವರಿಗೆ ₹ 4.8 ಕೋಟಿ ಬಜೆಟ್ ನಿಗದಿಮಾಡಿದ ಸಚಿವರ ಕ್ರಮಕ್ಕೆ ರೈತರ ಕೃತಜ್ಞತೆ

0

Department of Science and Technology ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಏತನೀರಾವರಿ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅನುಮೋದನೆ ನೀಡಿದ್ದು, 4.80 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತುಂಗಭದ್ರಾ ನದಿಯಿಂದ ನಾರಾಯಣ ಕೆರೆ, ಸೀಗೆಹಳ್ಳಿ, ಬೂದಿಗೆರೆ ಕೆರೆ, ಸುತ್ತುಕೋಟೆ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರೆತ್ತುವ ವ್ಯವಸ್ಥೆಯನ್ನು ದುರಸ್ತಿ, ನವೀಕರಣಗೊಳಿಸುವ, ಪಂಪ್ ಮೋಟಾರ್ ಗಳ ರಿಪೇರಿ, ಹರಮಘಟ್ಟ ಕೆರೆ ಪಾತ್ರದ ಹೊಸ ಪ್ರದೇಶಗಳಿಗೆ ಮೋಟಾರು ಪರಿಕರಗಳನ್ನು ಸಾಗಿಸುವ, ಸೀಗೆ ಕೆರೆ ಬಳಿ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡುವಂತೆ ಸೂಚಿಸಿದ್ದಾರೆ.

ಕಳೆದ ವರ್ಷ ಸೊರಬಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಮಾರ್ಚ್ 8 ರಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಸ್ಥಳ ಪರಿಶೀಲನೆ ಮಾಡಿದ್ದರು. ಇದಾದ ಒಂದೂವರೆ ತಿಂಗಳಲ್ಲಿ ಪುನಃಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

Department of Science and Technology ಸಚಿವ ಎನ್.ಎಸ್. ಬೋಸರಾಜು ಅವರು ಸ್ವತಃ ಮುತುವರ್ಜಿ ವಹಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಜಾರಿ ಮಾಡಿರುವ ಬಗ್ಗೆ ಕೊಮ್ಮನಹಾಳು, ಹರಮಗಟ್ಟೆ ಸೋಮಿನ ಕೊಪ್ಪ ಮತ್ತಿತರೆ ಗ್ರಾಮಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ದುರಸ್ತಿಗಾಗಿ ಪ್ರಯತ್ನ ನಡೆಸಿದ್ದೇವು. ಬೆಂಗಳೂರಿಗೆ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಸಚಿವರು ಬೇರೆಯವಂತೆ ಆಶ್ವಾಸನೆ ನೀಡಿಲ್ಲ. ನೀಡಿದ ವಾಗ್ದಾನದಂತೆ ತ್ವರಿತವಾಗಿ ಸ್ಪಂದಿಸಿದ್ದಾರೆ. ಇದು ಸಣ್ಣ ನೀರಾವರಿ ಯೋಜನೆಗಳ ಬಗ್ಗೆ ಸಚಿವರಿಗಿರುವ ಬದ್ಧತೆಯ ಪ್ರತೀಕವಾಗಿದೆ. ಸರ್ಕಾರಿ ಆದೇಶದ ಪ್ರತಿಯನ್ನು ನಮ್ಮ ಊರಿನ ಹಳ್ಳಿಗಳ ಜನರಿಗೆ ವಾಟ್ಸ್ ಅಪ್ ಮೂಲಕ ರವಾನಿಸಿದ್ದಾರೆ. ಸಚಿವರು ಏತ ನೀರಾವರಿ ಯೋಜನೆಯ ದುರಸ್ತಿಗೆ ಒತ್ತು ನೀಡುವ ಮೂಲಕ ಇಲ್ಲಿನ ಜನರ ಕನಸನ್ನು ನನಸು ಮಾಡಿದ ಹರಿಕಾರ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Sri Shankaracharya Jayanti ಮೇ 2. ಭಕ್ತಿಪೂರ್ವಕ ಶಂಕರ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ

0

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮೇ 02 ರ ಬೆಳಗ್ಗೆ 11.00 ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Sri Shankaracharya Jayanti ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಿವಮೊಗ್ಗದ ಪ್ರವಚನಕಾರರಾದ ಜಿ.ಎಸ್. ನಟೇಶ್‌ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Akshaya Tritiya ಅಕ್ಷಯ ತೃತೀಯ, ಕೆಲವು ಸಾಮಾಜಿಕ ಆತಂಕಗಳು

0

Akshaya Tritiya ಅಕ್ಷಯ ತೃತೀಯ ಎಂದರೆ ಬಂಗಾರ ಖರೀದಿಗೆ, ಗೃಹ ಪ್ರವೇಶ, ಭೂಮಿ ಪೂಜೆ, ಮದುವೆ ಇತರೆ ಯಾವುದೇ ಶುಭ ಕಾರ್ಯಗಳಿಗೆ ಪ್ರಾಶಸ್ತ್ಯವಾದ ದಿನ. ಆದರೆ ಇದು ಆತಂಕಪಡುವ ದಿನವೂ ಹೌದು. ಶುಭಮುಹೂರ್ತದ ಕಾರಣ ಬಹುತೇಕ ಬಾಲ್ಯವಿವಾಹಗಳು ಇದೇ ದಿನ ನಡೆಯುತ್ತಿವೆ. ಇದನ್ನೆ ತಡೆಗಟ್ಟಲೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಏ.30ರ ಅಕ್ಷಯ ತೃತೀಯ ದಿನದಂದು ಹೆಚ್ಚಿನ ನಿಗಾ ವಹಿಸಲು ಸೂಚಿಸಿದೆ.

ನಾಲ್ಕು ದಿನದ ಹಿಂದೆ ಶಿವಮೊಗ್ಗದ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯಲ್ಲಿ ಪ್ರಥಮ ಪಿಯು ಪರೀಕ್ಷೆಯಲ್ಲಿ ಶೇ.81ರಷ್ಟು ಫಲಿತಾಂಶವನ್ನು ಪಡೆದು ಉತ್ತೀರ್ಣಳಾದ ಬಾಲಕಿಯು “ಸರ್ ದಯಮಾಡಿ ನನ್ನನ್ನ ರಕ್ಷಿಸಿ ನಾನು ಮುಂದೆ ಓದಬೇಕು ನಮ್ಮ ಅಜ್ಜಿ ನನ್ನನ್ನು ಇದೇ ತಿಂಗಳ 30 ರಂದು ಮದುವೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನನಗೆ ಸದ್ಯಕ್ಕೆ ಮದುವೆ ಬೇಡ ಶಿಕ್ಷಣ ಮುಗಿದ ನಂತರ ನೀವು ಹೇಳಿದವರನ್ನೇ ಮದುವೆ ಆಗುತ್ತೇನೆ ಎಂದರು ಕೇಳುತ್ತಿಲ್ಲ. “ಹೆಣ್ಣಿಗೆ ಎಂದಾದರೂ ಮದುವೆ ಆಗಲೇಬೇಕು” ಅಕ್ಷಯ ತೃತೀಯ ತುಂಬಾ ಒಳ್ಳೆಯ ಮುಹೂರ್ತ ಈ ದಿನ ಮದುವೆಯಾದರೆ ಮುಂದೆ ನಿನ್ನ ಸಂಸಾರ ಚೆನ್ನಾಗಿರುತ್ತದೆ. ಹಾಗಾಗಿ ಅದೇ ದಿನ ನಿನ್ನ ಮದುವೆ ಎಂದು ಹೇಳುತ್ತಿದ್ದಾರೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದಯಮಾಡಿ ನನ್ನನ್ನು ರಕ್ಷಿಸಿ ಸರ್” ಎಂದು ಮನವಿ ಮಾಡಿಕೊಂಡಿದ್ದಾರೆ. ಇದು ಒಂದು ಉದಾಹರಣೆಯಾದರೂ ನೂರಾರು ಮಕ್ಕಳು ಮುಂದೇನು ಮಾಡಬೇಕು ತಿಳಿಯದೆ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ.

ನಮ್ಮ ಸಮಾಜದಲ್ಲಿ ಮದುವೆಗೆ ಭಾವನಾತ್ಮಕ, ಧಾರ್ಮಿಕ, ಸಾಮಾಜಿಕ, ನೈತಿಕ, ಮತ್ತು ಶಾಸನಾತ್ಮಕವಾದ ಬೆಂಬಲವಿದೆ. 18 ವರ್ಷ ದಾಟಿದ ಹೆಣ್ಣು ಮತ್ತು 21 ವರ್ಷ ಮೀರಿದ ಗಂಡು ಮದುವೆಯಾಗಬಹುದು ಎಂಬ ಜ್ಞಾನ ಹಳ್ಳಿ- ಪಟ್ಟಣದ ಜನ, ಸಮುದಾಯ, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಹಂತಗಳಲ್ಲಿರುವ ಅಧಿಕಾರಿಗಳು, ಮಕ್ಕಳು, ಯುವಕರಿಗೂ ಇದೆ. ಆದರೂ ಪ್ರಮುಖವಾಗಿ ಹೆಣ್ಣು ಮಕ್ಕಳನ್ನು ಅವರು ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಹಲವು ಕಾರಣಗಳಿಗಾಗಿ ಕದ್ದು ಮುಚ್ಚಿ ವಿವಾಹದ ಬಂಧನಕ್ಕೆ ದೂಡುತ್ತಿದ್ದಾರೆ. “ಹೆಣ್ಣಿಗೆ ಎಂದಾದರೂ ಮದುವೆಯಾಗಲೇಬೇಕು. ಒಬ್ಬರ ಆಸರೆಯಲ್ಲಿ ಜೀವನ ಸಾಗಿಸುವುದಷ್ಟೇ ಆಕೆಗಿರುವ ಉತ್ತಮ ಆಯ್ಕೆ ಎಂಬ ಮನೋಭಾವದಿಂದ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಕಾನೂನನ್ನು ಪರಿಗಣಿಸದೆ ಸಾಮಾಜಿಕ ಅಪರಾಧ ಮಾಡಲಾಗುತ್ತಿದೆ. ಬಾಲ್ಯ ವಿವಾಹ ಪಿಡಿಗಿನಿಂದ ಮಕ್ಕಳ ಮೇಲೆ ಆಗುವ ಮಾನಸಿಕ, ಭೌತಿಕ, ದೈಹಿಕ, ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಪೋಷಕರ ಅರಿವಿಗೆ ಬರುತ್ತಿಲ್ಲ.

ಬಾಲ್ಯ ವಿವಾಹಕ್ಕೆ ಶಿಕ್ಷೆ ಮತ್ತು ದಂಡ
ಅಪ್ರಾಪ್ತ ಮಗುವನ್ನು ಮದುವೆಯಾಗುವ ವಯಸ್ಕ ಹೆಣ್ಣು ಅಥವಾ ಗಂಡು, ಬಾಲ್ಯ ವಿವಾಹ ಏರ್ಪಡಿಸುವ ತಂದೆ, ತಾಯಿ, ಪೋಷಕರು, ಮದುವೆಗೆ ಹಾಜರಾದ ಬಂಧು – ಬಳಗ, ಗೆಳೆಯರು, ಹಿತೈಷಿಗಳು, ಮಧ್ಯಸ್ಥಿಕೆದಾರರು, ಪುರೋಹಿತರು, ಮೌಲ್ವಿ ಇತ್ಯಾದಿ,. ಬ್ಯಾಂಡ್ ಸಂಗೀತ, ವಾಲಗದವರು, ಮದುವೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುವವರು, ಆಹ್ವಾನ ಪತ್ರಿಕೆ ಮುದ್ರಿಸುವವರು, ಛಾಯಾಚಿತ್ರ ಗ್ರಾಹಕರು, ಅಡಿಗೆ ಮಾಡುವವರು, ಸಮುದಾಯ ಭವನ, ಛತ್ರ, ಟೆಂಟ್ ಇತ್ಯಾದಿ ಬಾಡಿಗೆ ಕೊಡುವವರು ಸಾಮೂಹಿಕ ಮದುವೆಗಳಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡುವ ಆಯೋಜಕರು, ವಯಸ್ಸಿನ ಸುಳ್ಳು ಪ್ರಮಾಣ ಪತ್ರ ನೀಡಿದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯಸ್ಥರು, ವೈದ್ಯರು, ಮಗುವಿನ ಜವಾಬ್ದಾರಿ ಹೊತ್ತ ವ್ಯಕ್ತಿ ಸಂಘ-ಸAಸ್ಥೆ ಹೀಗೆ ಬಾಲ್ಯವಿವಾಹಕ್ಕೆ ಯಾರು ಸಹಾಯ ಕುಮ್ಮಕ್ಕು ಮಾಡಿದರು ಅವರೆಲ್ಲರಿಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ- 2016ರ ಅಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಪರಾಧ ಸಾಬೀತಾದರೆ ಎರಡು ವರ್ಷದ ತನಕ ಜೈಲು ಮತ್ತು ಎರಡು ಲಕ್ಷದವರೆಗಿನ ದಂಡ ಅಥವಾ ಎರಡನ್ನು ರಚಿಸಬಹುದು. ಇದು ವಾರೆಂಟ್ ಮತ್ತು ಜಾಮೀನು ರಹಿತ ಅಪರಾಧವಾಗಿದೆ.

Akshaya Tritiya ಈ ವರ್ಷ ಏ.30 ರಂದು ಅಕ್ಷಯ ತೃತೀಯ ಇರುವ ಕಾರಣ ಬಾಲ್ಯ ವಿವಾಹ ಜರಗುವ ಸಾಧ್ಯತೆಗಳಿದ್ದು ಈ ಸಂಬAಧ ಈಗಾಗಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುತ್ತೋಲೆ ಹೊರಡಿಸಿದೆ. ಬಾಲ್ಯ ವಿವಾಹ ವಾಗುವ ಸಾಧ್ಯತೆ ಕುರಿತು ಮಾಹಿತಿ ಸಿಕ್ಕಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಅಥವಾ ಮಕ್ಕಳ ಉಚಿತ ಸಹಾಯವಾಣಿ 1098 ಅಥವಾ 112ಗೆ ಮಾಹಿತಿ ನೀಡುವುದರ ಮೂಲಕ ಸುಭದ್ರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ.

  • ತಾಜುದ್ದೀನ್ ಖಾನ್, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ (ಮಕ್ಕಳ ನ್ಯಾಯ ಪೀಠ), ಶಿವಮೊಗ್ಗ

S.N. Chennabasappa ಕೆಡಿಪಿ ಸಭೆಯಲ್ಲಿ ಎಂ ಎಲ್ ಸಿ & ಎಂಎಲ್ ಎ ಮಾತಿನ ಚಕಮಕಿ ಬಗ್ಗೆ ನೊಂದ ಶಾಸಕ‌ ಚೆನ್ನಿ

0

S.N. Chennabasappa ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಕ್ತ ಮಾಹಿತಿ ತಿಳಿಯದೆ ಜನಪ್ರತಿನಿಧಿಗೆ ಮನಸ್ಸಿಗೆಬಂದಂತೆ ನುಡಿದು ಅಗೌರವ ತೋರಿಸಿದ ಘಟನೆಗೆ ಸಂಬಂಧಿಸಿದಂತೆ ಶಾಸಕರಾದ ಎಸ್.ಎನ್.ಚೆನ್ನಬಸಪ್ಪನವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಾನು ಯಾರದೋ ಕೃಪೆಯಿಂದ ಎಂ.ಎಲ್.ಸಿ ಆದವನಲ್ಲ! ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಶಾಸಕ (ಎಂ.ಎಲ್.ಎ) ಆಗಿ ಬಂದಿರುವುದು.

ಆದರೆ ಇಂದು ಸಭೆಯಲ್ಲಿ ನಡೆದ ಘಟನೆ ಜನಪ್ರತಿನಿಧಿಗಳ ಪ್ರತಿಷ್ಠೆಗೆ ಧಕ್ಕೆ ತರುವಂತದ್ದು. ಸಭೆಯಲ್ಲಿ ಭಾಗವಹಿಸಿದ್ದ ಜ್ಞಾನದ ಕೊರತೆ ಇರುವಂತಹ ಎಂ.ಎಲ್.ಸಿ ಬಲ್ಕೀಶ್ ಬಾನು ಅವರು, ಚುನಾವಣೆಯ ಮೂಲಕ ಆಯ್ಕೆಯಾಗಿರುವ ಜನಪ್ರತಿನಿಧಿಗೆ ತೋರಿದ ಅಗೌರವ ದುರದೃಷ್ಟಕರ. ಇದು ಕೇವಲ ವೈಯಕ್ತಿಕ ಸ್ಥರದ ಪ್ರಶ್ನೆಯಲ್ಲ, ಇದು ಪ್ರಜಾಪ್ರಭುತ್ವದ ಗೌರವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

S.N. Chennabasappa ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ ನಿಯಮ 348ರ ಪ್ರಕಾರ 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿದೆ. ಆದರೆ ಈ ನಿಯಮಗಳ ಬಗ್ಗೆ ಪೂರ್ಣ ಜ್ಞಾನವಿಲ್ಲದ ಸ್ಥಿತಿಯಲ್ಲಿ, ಬಲ್ಕೀಶ್ ಬಾನು ಮಾತನಾಡುವುದು, ಓರ್ವ ಚುನಾಯಿತ ಪ್ರತಿನಿಧಿಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ! ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡಿರುವ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಶ್ರೀ ಬೇಳೂರು ಗೋಪಾಲಕೃಷ್ಣ ಅವರದ್ದು ಮೂರ್ಖತನದ ಪರಮಾವಧಿಯಾಗಿದೆ ಎಂದು ಹೇಳಿದ್ದಾರೆ.

ಪ್ರತಿನಿಧಿತ್ವ ಎನ್ನುವುದು ಕೇವಲ ಸ್ಥಾನ ಅಥವಾ ಅಧಿಕಾರವಲ್ಲ; ಅದು ಜನರ ಆಶಯಗಳ ಪ್ರತಿಬಿಂಬವಾಗಿದೆ. ಎಲ್ಲಿ ಒಂದು ಚುನಾವಣೆಯ ಮೂಲಕ ಆಯ್ಕೆಯಾದ ಪ್ರತಿನಿಧಿಯನ್ನು ನಿರ್ಲಕ್ಷಿಸಲಾಗುತ್ತದೋ, ಅಲ್ಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ನಿರ್ಲಕ್ಷಿಸಿದಂತೆ. ಇಂತಹ ಸಾಮಾನ್ಯ ಜ್ಞಾನವಿಲ್ಲದ ಹೇಳಿಕೆಗಳು ತಡೆ ಇಲ್ಲದೆ ಬಿಡುವಂತಿಲ್ಲ. ಜನಪ್ರತಿನಿಧಿಗಳ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವದ ಗೌರವ ಉಳಿಸಿಕೊಳ್ಳುವುದು ನನ್ನ ಮತ್ತು ಎಲ್ಲರ ಕರ್ತವ್ಯ ಆಗಿದೆ ಎಂದಿದ್ದಾರೆ.

Rotary Club Shimoga ಸ್ತ್ರೀ ಸಮಾನತೆ, ಅಂತರ್ಜಾತೀಯ ವಿವಾಹ, ಕಾಯಕವೇ ಕೈಲಾಸ ತತ್ವಗಳ ಮೂಲಕ ಬಸವಣ್ಣ ಜನಪ್ರಿಯ- ಜಿ.ಕಿರಣ್ ಕುಮಾರ್

0

Rotary Club Shimoga ಬಸವಣ್ಣನವರ ವಚನ ತತ್ವಗಳು ಇಡೀ ವಿಶ್ವಕ್ಕೆ ನೀಡಿದ ಅತ್ಯಂತ ದೊಡ್ಡ ಸಂದೇಶವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷರಾದ ಕಿರಣ್ ಕುಮಾರ್.ಜಿ ರವರು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಲ್ಲಿ ಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದ ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ, ತತ್ವಜ್ಞಾನಿ. ಅವರು ವಚನಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು ಎಂದು ನುಡಿದರು.

Rotary Club Shimoga ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂದೇಶ ನೀಡಿದ ಮಹಾನ್ ಮಾನವತಾವಾದಿಗಳು. ಸ್ತ್ರೀ ಸಮಾನತೆ, ಅಂತರ್ಜಾತಿ ವಿವಾಹ, ಕಾಯಕವೇ ಕೈಲಾಸ, ಜಾತ್ಯಾತೀತ ತತ್ವಗಳ ಮೂಲಕ ಜನಪ್ರಿಯರಾದವರು. ಬಸವಣ್ಣನವರು ಲಿಂಗ ತಾರತಮ್ಯ ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದವರು. ಜಾತಿ ಮತ ಲಿಂಗ ಭೇದವನ್ನು ತಿರಸ್ಕರಿಸಿದ್ದ ಅವರು, ಸಾಮಾಜಿಕ ಕ್ರಾಂತಿಗೆ ಕಾರಣವಾದವರು ವಿಶ್ವಗುರು ಬಸವಣ್ಣನವರು ಎಂದು ಹೇಳಿದರು.ಜಯಂತಿ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಕಾರ್ಯದರ್ಶಿ ಈಶ್ವರ್, ಬಸವರಾಜ್.ಬಿ, ರವಿ ಕೋಟೊಜಿ, ಧರ್ಮೇಂದ್ರ ಸಿಂಗ್, ರಮೇಶ್.ಎನ್, ಗುರುರಾಜ್.ಎ.ಎಸ್, ಚಂದ್ರು.ಜೆ.ಪಿ, ನಟರಾಜ್, ವಿನುತಾ, ಅಶ್ವಿನ್, ಭರತ್.ಎಸ್.ಕೆ, ಕುಮಾರ್, ಅರುಣ್ ಕುಮಾರ್, ನಟರಾಜ್ ಮತ್ತು ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.