Monday, March 2, 2026
Monday, March 2, 2026
Home Blog Page 320

Consumer Disputes Redressal Commission ವಿಮಾ ಪರಿಹಾರ‌ ನೀಡಲು ಸೂಕ್ತ ತಿಳುವಳಿಕೆ ನೀಡಿದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಆದೇಶ

0

Consumer Disputes Redressal Commission ರುದ್ರಪ್ಪ ತವನಪ್ಪ ಜೈನರ್ ಎಂಬುವವರು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿ., ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರ ರುದ್ರಪ್ಪರವರು ತಮ್ಮ ಟಾಟಾ ಎಲ್ಪಿಟಿ ಲಾರಿಯನ್ನು ಖರೀದಿಸಿದಾಗ ನ್ಯಾಷನಲ್ ಇನ್ಷೂರನ್ಸ್ ಕಂಪನಿಯವರಿಂದ ಐಡಿವಿ ಮೊತ್ತ ರೂ 23,36,519/- ಗಳಿಗೆ ವಿಮೆಯನ್ನು ಮಾಡಿಸಿದ್ದು, ಲಾರಿಯುವ 2023ರ ಡಿಸೆಂಬರ್‌ನಲ್ಲಿ ನಿಲ್ಲಿಸಿದ್ದ ಜಾಗದಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್‌ನಿಂದ ಇಂಜಿನ್ ಸುಟ್ಟುಹೋಗಿರುತ್ತದೆ. ಈ ಕುರಿತು ಪೊಲೀಸ್ ಹಾಗೂ ಆರ್.ಟಿ.ಓ.ರವರಿಗೆ ದೂರು ನೀಡಿ, ಅವರಿಂದ ಪರೀಶಿಲನೆ ಮಾಡಿಸಿದಾಗ ಆರ್.ಟಿ.ಓ.ರವರು ಲಾರಿಗೆ 1.25 ಲಕ್ಷ ನಷ್ಟವಾಗಿರುವುದಾಗಿ ವರದಿ ನೀಡಿರುತ್ತಾರೆ. ಈ ವರದಿಯ ಪ್ರಕಾರ ಎದುರುದಾರರಿಗೆ ವಿಮೆ ಪಾವತಿಸಲು ಕೋರಿರುತ್ತಾರೆ. ಆದರೆ ಎದುರುದಾರ ಇನ್ಷೂರನ್ಸ್ ಕಂಪನಿಯು ವಾಹನ ಚಾಲಕರಿಗೆ ಲಾರಿಯನ್ನು ವಹಿಸಿರುವುದು ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ ಹಾಗೂ ಇದರ ಸಂಬಂಧ ಸರಿಯಾದ ದಾಖಲೆ ಮಾಡಿಸಿರುವುದಿಲ್ಲ ಎಂಬ ಕಾರಣ ನೀಡಿ ವಿಮಾ ಹಣವನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
Consumer Disputes Redressal Commission ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ವಾಹನದ ಐ.ಡಿ.ವಿ. ಮೊತ್ತ ರೂ.23,36,519 ಗಳನ್ನು ದಿ:15/07/2024ರಿಂದ ಅನ್ವಯವಾಗುವಂತೆ ಶೇ.9 ರಂತೆ ಬಡ್ಡಿ ಸಹಿತ ಪೂರ ಹಣ ನೀಡುವವರೆಗೂ ಮತ್ತು ಫರ‍್ಯಾದುದಾರರು ಈ ಸುಟ್ಟ ವಾಹನವನ್ನು ಎದುರುದಾರರಿಗೆ ಹಿಂದಿರುಗಿಸಬೇಕೆಂದು ನಿರ್ದೇಶಿಸಿ, ಆದೇಶವನ್ನು 45 ದಿನಗಳೊಳಗೆ ಪಾಲಿಸಲು, ತಪ್ಪಿದಲ್ಲಿ ವಿಮಾ ಮೊತ್ತಕ್ಕೆ ಶೇ.12 ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.50,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ. 23 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Department of Kannada and Culture ಶಂಕರಾಚಾರ್ಯರಂತಹ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬೇಡಿ- ಅತಿಥಿ ಉಪನ್ಯಾಸಕ ವಿದ್ವಾನ್ ಜಿ.ಎಸ್.ನಟೇಶ್

0

Department of Kannada and Culture ಶಂಕರಾಚಾರ್ಯರು ಸದಾ ಪ್ರಾತಸ್ಮರಣೀಯರು. ದೇಶದ ಉದ್ದಗಲಕ್ಕೂ ಸಂಚರಿಸಿ ತತ್ವಗಳನ್ನು, ಸಂಸ್ಕೃತಿಯನ್ನು ಪಸರಿಸಿ ನಮ್ಮ ಪರಂಪರೆಯ ನೆಲೆಗಟ್ಟನ್ನು ಭದ್ರಪಡಿಸಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕುವೆಂಪ ರಂಗಮಂದಿರ ದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಂಕರಾಚಾರ್ಯರ ಮಹತ್ವದ ಕಾರ್ಯದಿಂದಾಗಿ ಧರ್ಮ ಉಳಿದಿದೆ. ದೇಶದ ಉದ್ದಗಲ ಸಂಚರಿಸಿ ಜೀವನಕ್ಕೆ ಅಗತ್ಯವಾದ ತತ್ವಗಳನ್ನು ಉಪದೇಶಿಸಿದ್ದಾರೆ. ಐದು ಕಡೆ ಪೀಠ ಸ್ಥಾಪನೆ ಮಾಡಿರುವ ಇವರು ಶ್ರೇಷ್ಠ ಪರಂಪರೆಯ ರೂವಾರಿ. ಸಾಂಸ್ಕೃತಿಕ ಪರಂಪರೆಯ ನೆಲೆಗಟ್ಟು ಭದ್ರ ಆಗಿರುವುವುದು ಇವರಿಂದ. ನಾವೆಲ್ಲ ಸೇರಿ ಅವರ ಮಹತ್ ಕಾರ್ಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು. ಅವರ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು. ಇಂತಹ ಮಹಾ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.
ಶಿವಮೊಗ್ಗದ ಪ್ರವಚನಕಾರರಾದ ಜಿ.ಎಸ್. ನಟೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಂಕರಾಚಾರ್ಯರು ನಮ್ಮೆಲ್ಲರಿಗೆ ಜಾಗೃತಿಯ ಮಾತುಗಳನ್ನು ನೀಡಿದ್ದಾರೆ. ಅತ್ಯಂತ ಸರಳವಾಗಿ ಜೀವನದ ತತ್ವಗಳನ್ನು, ವಿಚಾರಗಳನ್ನು ತುಂಬಿ ಕಟ್ಟಿಕೊಟ್ಟಿದ್ದಾರೆ. ಕೇವಲ 32 ವರ್ಷಕ್ಕೆ ದೇಹತ್ಯಾಗ ಮಾಡಿದ ಅವರು ಅಷ್ಟು ಚಿಕ್ಕವಯಸ್ಸಿನಲ್ಲೇ ದೇಶಾದ್ಯಂತ ಸಂಚರಿಸಿ ತತ್ವ ಬೋಧನೆ ಮಾಡಿದ್ದು, ಮಾನವ ಕುಲಕ್ಕಾಗಿ ಜೀವನ ತ್ಯಾಗ ಮಾಡಿದ್ದಾರೆ.
ಮಾನವ ಬದುಕನ್ನು ಸುಂದರ, ಸಾರ್ಥಕಗೊಳಿಸಿಕೊಳ್ಳುವ ತತ್ವಗಳನ್ನು ಅವರು ನೀಡಿದ್ದಾರೆ. ಭಗವಂತನನ್ನು ಅರಿಯುವುದೇ ತತ್ವ ಎಂದಿರುವ ಅವರು ನಾಲ್ಕು ವೇದಗಳನ್ನು ಆಯ್ದ ಮಹಾವಾಕ್ಯ ನೀಡಿದ್ದಾರೆ. ಹಿಂದೆ ಜಾತಿ, ಮತ ಇರಲಿಲ್ಲ. ಅದನ್ನು ನಾವು ಮಾಡಿಕೊಂಡಿದ್ದು. ಬ್ರಹ್ಮ ನೀತಿಯೊಂದೇ ಇದ್ದದ್ದು. ದಾರ್ಶನಿಕರು ನಮ್ಮ ಜೀವನ ಸಾರ್ಥಕಗೊಳಿಸಲು, ಸುಗುಮಗೊಳಿಸುವುದಕ್ಕಾಗಿ ತತ್ವಗಳನ್ನು ನೀಡಿದ್ದಾರೆ.
Department of Kannada and Culture ಜೀವಾತ್ಮ, ಪರಮಾತ್ಮ ಒಂದೇ ಎಂದು ಆಚಾರ್ಯರು ಸೇರಿದಂತೆ ಎಲ್ಲ ದಾರ್ಶನಿಕರು ತಿಳಿಸಿದ್ದಾರೆ. ಜೀವಕ್ಕೆ ಪ್ರಾಧಾನ್ಯತೆ ನೀಡಬೇಕು. ಕ್ಷಣಿಕವಾದದ್ದನ್ನು ಬಿಡಬೇಕು. ಜೀವ, ಪರಮಾತ ಬೇರೆಯಲ್ಲ. ಈ ಜಗತ್ತಿನಲ್ಲಿ ಪರಮತ್ವ ಮಾತ್ರ ಸತ್ಯ. ಶರೀರ ವ್ಯಾವಹಾರಿಕ ಸತ್ಯ. ದೇಹ ಕಾಣುತ್ತದೆ ಅದು ಶಾಶ್ವತ ಅಲ್ಲ. ಜೀವ ಕಾಣುವುದಿಲ್ಲ, ಅದು ಶಾಶ್ವತ. ಕಾಣುವುದು ಉಳಿಯುವುದಿಲ್ಲ. ಕಾಣದ್ದೇ ಶಾಶ್ವತ ಎಂದು ಆರ್ಯರು ತಿಳಿಸಿದ್ದು, ಅವರ ತತ್ವಗಳನ್ನು ನಾವು ಅರಿತು ಅಳವಡಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್ ಮಾತನಾಡಿ, ಶಂಕರಾಚಾರ್ಯರು ಎಲ್ಲ ಸಮಾಜಕ್ಕೆ ಸೇರಿದ ದಾರ್ಶನಿಕರು. ಎಲ್ಲರೂ ಸೇರಿ ಜಯಂತಿ ಆಚರಣೆ ಮಾಡೋಣ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ಮಾತನಾಡಿ, ಶಂಕರಾಚಾರ್ಯರು ರಾಷ್ಟ್ರದಾದ್ಯಂತ ಪ್ರವಾಸ ಮಾಡಿ ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪನೆ ಮಾಡಿದ್ದಾರೆ. 18 ನೇ ಶತಮಾನದಲ್ಲಿ ಅವರು ಪ್ರತಿಪಾದಿಸಿದ ತತ್ವಗಳು ಇಂದಿಗೂ ಪ್ರಸ್ತುತ ಎಂದ ಅವರು ನಾವೆಲ್ಲ ನಂಬಿರುವ ಬ್ರಾಹ್ಮಣ ಸಮಾಜ ಎಲ್ಲರೊಂದಿಗೆ ಒಗ್ಗೂಡಿ ಮುನ್ನುಗ್ಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ, ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

MESCOM ಮೇ 3, ಆಲ್ಕೊಳ ಸುತ್ತಮುತ್ತ ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇಲ್ಲ

0

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 03 ರಂದು ಬೆಳಗ್ಗೆ 09-00 ರಿಂದ ಸಂಜೆ 05.00ರ ವರೆಗೆ ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, ಭೋವಿ ಕಾಲೋನಿ, ಆದರ್ಶನಗರ, ಸಹಕಾರಿನಗರ, ಹೊಂಗಿರಣ ಬಡಾವಣೆ, ರವಿಶಂಕರ್ ಗುರುಜಿ MESCOM ಶಾಲೆಯ ಸುತ್ತಮುತ್ತ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್, ದೇವಕಾತಿಕೊಪ್ಪ, ಪಶುವೈದ್ಯಕೀಯ ಕಾಲೇಜು, ಗೆಜ್ಜೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Adichunchanagiri Education Trust ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆಯ ಎನ್. ಸಹಿಷ್ಣುಗೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625/625

0

Adichunchanagiri Education Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಿಷ್ಣು ಎನ್. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮನಾಗಿ ಹೊರಹೊಮ್ಮಿದ್ದಾನೆ.

ವಿದ್ಯಾರ್ಥಿಯ ಸಾಧನೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶ್ರೀ ಸಾಯಿನಾಥ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ದಿವ್ಯ ಕರಣಮ್, ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.

Basava Jayanti ಬಸವಣ್ಣನಂಥವರನ್ನ ನಮ್ಮ ನಡುವಿನ ಎಚ್ಚರ ಬುದ್ಧಿಯಾಗಿಸಿಕೊಳ್ಳಬೇಕು- ಡಾ.ಪ್ರಶಾಂತ್.ಜಿ ನಾಯಕ್

0

Basava Jayanti ಬಸವ ಜಯಂತಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಬೇಕು.ಬಸವಣ್ಣನರು ಸೇರಿದಂತೆ ದಾರ್ಶನಿಕರನ್ನು ದೇವರನ್ನಾಗಿ ಮಾಡದೇ ನಮ್ಮ ಜೊತೆಗೆ ಇಟ್ಟುಕೊಂಡು ಸಾಗಬೇಕು.‌ ನಮ್ಮ‌ ನಡುವಿನ ಎಚ್ಚರ, ಬುದ್ದಿಯಾಗಿಸಿಕೊಳ್ಳಬೇಕು ಎಂದು
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಡಾ|| ಜಿ. ಪ್ರಶಾಂತ್ ನಾಯ್ಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ‌ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
Basava Jayanti 800 ವರ್ಷಗಳ ಹಿಂದೆಯೇ ವಿಶ್ವ ಪ್ರಜ್ಞೆ ಮೂಡಿಸಿದವರು, ಸಾಂಸ್ಕೃತಿಕ ಚಳವಳಿ‌ ಕಟ್ಟಿಕೊಟ್ಟವರು ಬಸವಣ್ಣ. ಸಮಾಜದಲ್ಲಿನ ಅಸಮಾನತೆ, ಅವೈಜ್ಞಾನಿಕತೆ, ಮೌಢ್ಯತೆ ನಡುವೆ
ಸಮ ಸಮಾಜದ ವಿಶ್ವ ಪ್ರಜ್ಞೆ ಮೂಡಿಸಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲು ೮೦೦ ವರ್ಷ ಬೇಕಾಯಿತು.
ಈ ಜಯಂತಿ‌ ಆಚರಣೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಬೇಕು. ಯುವಜನತೆ ಮುಖ್ಯವಾಗಿ ಆತ್ಮಾವಲೋಕನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಸಮಾಜದಲ್ಲಿ ಬದುಕನ್ನು ಸಂಕೀರ್ಣಗೊಳಿಸಿ, ಅಸಮಾನತೆಯನ್ನು ವಿಜೃಂಭಿಸಿ‌, ತಾರತಮ್ಯ ಹೆಚ್ಚಿಸಿ‌, ಜಾತಿ ಅಹಂಕಾರ ಮೆರೆಯುತ್ತಿರುವುದು ನಮ್ಮ ಮೊದಲ ಸೋಲು. ಮತ್ತು ವಚನಕಾರರನ್ನು ದೂರ ಇಡುವ ಪ್ರಜ್ಞೆ ಕಾಣುತ್ತಿದ್ದೇವೆ. ನಮ್ಮ ರಾಜ್ಯದ ಜನ ಬಸವಾದಿ ಶರಣರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಇಡೀ ವಿಶ್ವಕ್ಕೆ ವಿಶ್ವ ಮಾನವತೆ, ಜಾತ್ಯಾತೀತತೆ ಬೋಧಿಸುವ ಗುರು ಆಗಬಹುದಿತ್ತು. ವರ್ಣಾಶ್ರಮ ಮತ್ತು ಅದರಿಂದ ಉಂಟಾಗುತ್ತಿರುವ ಮೌಢ್ಯ, ಅಸಮಾನತೆ ವಿರುದ್ದ ಹೋರಾಡಲು ಈ‌ ನೆಲವನ್ನೇ ಪ್ರಯೋಗಶಾಲೆ ಆಗಿಸಿಕೊಂಡಿದ್ದರು ಬಸವ. ಮುಕ್ತವಾದ ಅಭಿವ್ಯಕ್ತಿಯ ವೇದಿಕೆಯಾದ ಅನುಭವ ಮಂಟಪಕ್ಕೆ ಅಲ್ಲಮಪ್ರಭು ರನ್ನು ನಾಯಕನನ್ನಾಗಿ ಮಾಡುತ್ತಾರೆ.
ಅರಿವೇ ಗುರು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಮಾತು ದೇವರಾಗಿರಬೇಕು ಎಂದಿದ್ದರು ಬಸವಣ್ಣ. ಪ್ರೀತಿಯಿಂದ, ವಿಶ್ವಾಸದಿಂದ ಮಾತನಾಡಬೇಕು. ಆದರೆ ಈಗ ಎಚ್ಚರಿಕೆಯಿಂದ ಮಾತನಾಡುವ ಸ್ಥಿತಿಯಿದೆ.
ಅಖಂಡ ಜೀವನ ಪ್ರೀತಿಯ ಬಸವಣ್ಣನವರನ್ನು‌ ನಾವೆಲ್ಲ ದಕ್ಕಿಸಿಕೊಳ್ಳಬೇಕಿದೆ. ವ್ಯಕ್ತಿ ನಿಷ್ಟತೆ ಅರಿಯಬೇಕೆಂದರೆ ಬಸವಣ್ಣನ ಬಳಿಗೆ ಸಾಗಬೇಕು. ನಮ್ಮ ವಿಕಾರತೆ, ಆತಂಕಗಳಿಗೆ ವಚನಗಳಲ್ಲಿ ಉತ್ತರವಿದೆ. ಎಲ್ಲರೂ ವಚನ ಓದುವ ಅರ್ಥೈಸಿಕೊಂಡು ಬಾಳುವ ಅವಶ್ಯಕತೆ ಇದೆ. ಬಸವ, ಅಕ್ಕ, ಅಲ್ಲಮ, ಶರಣರ, ಬುದ್ದ, ದಾರ್ಶನಿಕರ ಚರಿತ್ರೆ ತಿಳಿದು, ಅವರ ವಚನ, ತತ್ವಗಳನ್ನು ಅರಿಯಬೇಕಿದೆ.‌ ಇವರನ್ನು ದೇವರನ್ನಾಗಿ ಮಾಡದೇ ನಮ್ಮ ಜೊತೆಗೆ ಇಟ್ಟುಕೊಂಡು ಸಾಗಬೇಕು.‌ ನಮ್ಮ‌ನಡುವಿನ ಎಚ್ಚರ, ಬುದ್ದಿಯಾಗಿರಬೇಕು.
ಪ್ರಸ್ತುತ ಮಾತನ್ನು ದೇವರಾಗಿಸುವ ಬದಲು, ಶಬ್ದ ಸೂತಕ ಮಾಡಿಕೊಂಡು ಉತ್ಕರ್ಷ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಬಸವಣ್ಣನವರ ಹತ್ತಿರ ನಾವು ಹೋಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ದಿನವನ್ನು ಇಡೀ ನಾಗರೀಕ ಸಮಾಜ ನೆನಪು ಮಾಡಿಕೊಳ್ಳಬೇಕು. ಇಡೀ‌ ಮನುಕುಲದ ಮಾರ್ಗದರ್ಶಕ ಬಸವಣ್ಣ.‌ವಿಶ್ವ ಗುರು ಬಸವಣ್ಣನವರ ಸಂದೇಶಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದ್ದು ಅವರು ರಾಷ್ಟ್ರ, ಇಡೀ ಪ್ರಪಂಚಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬಿದ್ದವರನ್ನು ಮೇಲೆತ್ತೋಣ, ಎಲ್ಲರೂ ನಮ್ಮವರು ಎಂದು ಸಾರುತ್ತಾ ಎಲ್ಲರಿಗೂ ಅರ್ಥವಾಗುವ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ ಅವರು ನಮ್ಮೆಲ್ಲರಿಗೆ ಆದರ್ಶ. ನಮ್ಮ ದೇಶ ಭಾರತ ಗುರು ಪರಂಪರೆಯಿಂದಾಗಿ ಭಾರತವಾಗಿ ಉಳಿದಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ , ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ರಾದ ಚಂದ್ರಭೂಪಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ,
ಮಾತನಾಡಿದರು.
ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ಚನ ನೀಡಿದರು.
ವೀರಶೈವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಉಪಾಧ್ಯಕ್ಷರಾದ ಎಸ್ ಪಿ ದಿನೇಶ್, ಬಳ್ಳೆಕೆರೆ ಸಂತೋಷ್, ಹೆಚ್.ಸಿ.ಯೋಗೇಶ್, ತಾರಾನಾಥ್, ಅನಿತಾ ರವಿಶಂಕರ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು, ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

S.N.Chennabasappa ಶಿವಮೊಗ್ಗ ಎಂಟನೇ ವಾರ್ಡ್ ಗೆ ಭೇಟಿ ನೀಡಿದ ಶಾಸಕ ಚೆನ್ನಿ

0

S.N.Chennabasappa ವಾರ್ಡ್ ನಂ. 8ರ ಮೇದಾರ ಕೇರಿಗೆ ಜಲಮಂಡಳಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಹಲವು ದಿನಗಳಿಂದ ಸ್ಥಳೀಯರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದರು.

S.N.Chennabasappa ಭೇಟಿಯ ಸಂದರ್ಭದಲ್ಲಿ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು, ವಾರ್ಡಿನ ಪ್ರಮುಖರು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು

Rotary Shimoga ಇಂದಿನ ಸೈಬರ್ ಯುಗದಲ್ಲಿ ಯಾರಾದರೂ ಹಣದ ಆಮಿಷವೊಡ್ಡಿದರೆ ಅದು ಮೋಸದ ಬಲೆ ಎಂದು ಅರ್ಥಮಾಡಿಕೊಳ್ಳಬೇಕು- ಸಿಐಪಿ‌ ಗುರುರಾಜ್

0

Rotary Shimoga ಸೈಬರ್ ದಾಳಿಗಳು ಮತ್ತು ಸೆಕ್ಯುರಿಟೀಸ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಸೆಮಿನಾರ್ ನಿಜವಾಗಿಯೂ ಸಂಬಂಧಿತ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗುರುರಾಜ್ ಹೇಳಿದರು.

ರೋಟರಿ ಶಿವಮೊಗ್ಗ ಉತ್ತರದ ಸಭಾಂಗಣದಲ್ಲಿ ಸೈಬರ್ ಅಪರಾಧದ ಕುರಿತು ಮಾತನಾಡಿದ ಅವರು, ಪ್ರಮಾಣೀಕೃತ ವಿಧಿವಿಜ್ಞಾನ ಲೆಕ್ಕಪರಿಶೋಧಕರಾಗಿ ಇದು ನನ್ನ ಆಸಕ್ತಿಯ ವಿಷಯವಾಗಿತ್ತು. ಕೆಲವು ಉದಾಹರಣೆಗಳೊಂದಿಗೆ ಜಾಗೃತಿಯ ಬಗ್ಗೆ ಸ್ಪೀಕರ್ ವಿಷಯವನ್ನು ತಲುಪಿಸಿದ ರೀತಿ ಸಾಟಿಯಿಲ್ಲ. ನಮ್ಮ ಸದಸ್ಯ-ಪ್ರೇಕ್ಷಕರೊಬ್ಬರು ಹೇಳುವಂತೆ, ಸಭಾಂಗಣದಲ್ಲಿ ಎಲ್ಲಾ ಪ್ರೇಕ್ಷಕರು ಪಿನ್ ಡ್ರಾಪ್ ಮೌನದಿಂದ ಗಮನ ಹರಿಸಿದ್ದು ಇದೇ ಮೊದಲು. ನನಗೆ 3 ಟೇಕ್-ಅವೇಗಗಳು (ಸರಳ ವಿಧಾನ-ಪ್ರತಿ ಸ್ಪೀಕರ್‌ನಂತೆ) ಎಲ್ಲರೂ ಅರ್ಥಮಾಡಿಕೊಳ್ಳಬಹುದು ಮತ್ತು ನೆನಪಿಟ್ಟುಕೊಳ್ಳಬಹುದು ಎಂದರು.

ಯಾರೂ ಜಾಕ್‌ಪಾಟ್/ಲಾಟರಿ ಗೆಲ್ಲುವುದಿಲ್ಲ, ಯಾವುದೇ ಪ್ರಯೋಜನವಿಲ್ಲದೆ ಯಾರೂ ನಮಗೆ ದೊಡ್ಡ ಲಾಭಗಳನ್ನು ನೀಡುವುದಿಲ್ಲ, ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ, (ಹಣಕಾಸಿನ ವಿಷಯಗಳಲ್ಲಿ, ಯಾರಾದರೂ ಉಚಿತ ಹಣದಿಂದ ಆಮಿಷವೊಡ್ಡಿದರೆ, ಅದು ಬಲೆ ಎಂದು ನಾವು ಅರ್ಥಮಾಡಿಕೊಳ್ಳಬೇಕು), ನಾನು ಈಗಾಗಲೇ ತುರ್ತು ಆಯ್ಕೆಗಳು ಮತ್ತು ಆರೋಗ್ಯ ವಿವರಗಳನ್ನು ಮೊಬೈಲ್‌ನಲ್ಲಿ ನವೀಕರಿಸಿದ್ದೇನೆ, ನಮ್ಮಲ್ಲಿ ಉಳಿದವರು ಹಾಗೆ ಮಾಡುತ್ತಾರೆ ಎಂದು ಭಾವಿಸುತ್ತೇವೆ ಎಂದರು.

ಅಂತಹ ಸಂಬಂಧಿತ ವಿಷಯ ಮತ್ತು ಸ್ಪೀಕರ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಅಧ್ಯಕ್ಷರಾದ ಸುಂದರ್ ರಾಮ್ ಮತ್ತು ಅವರ ತಂಡಕ್ಕೆ ಹಾಗೂ
ಎಲ್ಲಾ ರೋಟೇರಿಯನ್ನರು ಮತ್ತು ಆನ್ಸ್, ಗಮನ ಸೆಳೆಯುವಿಕೆಗಾಗಿ ಆನೆಟ್ಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

Rotary Shimoga ರೋಟರಿ ಉತ್ತರದ ಅಧ್ಯಕ್ಷ ಸುಂದರ್ ರಾಮ್, ಕಾರ್ಯದರ್ಶಿ ಎಸ್.ಜಿ.ರಮೇಶ್, ಯು.ರವೀಂದ್ರನಾಥ ಐತಾಳ್, ಶ್ರೀನಾಥ್ ಗಿರಿಮಜಿ, ವಲಯ ಹತ್ತರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ಬಿಂದು ಸುಂದರ್, ಶಾರದಾ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

SSLC Examination Board ಮೇ 2 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ

0

SSLC Examination Board 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಪರೀಕ್ಷೆಗಳ ದಿನಾಂಕ: 21-03-2025 ರಿಂದ 04-04-2025ರವರೆವಿಗೆ ನಡೆಸಲಾಗಿದೆ .

ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯ ಎಂದು ಎಸ್ ಎಸ್ ಎಲ್ ಸಿ ಬೋರ್ಡ್ ಮಾಹಿತಿ ನೀಡಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ಮೇ 2ರಂದು ಬೆಳಿಗ್ಗೆ 11-30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಪ್ರೆಸ್ ಮೀಟ್ ನಡೆಸಿ ಮಾಹಿತಿ ನೀಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

SSLC Examination Board ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಮೇ 02ರ ಮಧ್ಯಾಹ್ನ 12-30 ಗಂಟೆಯ ನಂತರ ವೀಕ್ಷಿಸಬಹುದು.

pahalgam attack ಕನ್ನಡಿಗರ ಆಟೋ ಚಾಲಕರ ಸಂಘದ ವತಿಯಿಂದ ಪೆಹಲ್ಗಾವ್ ನಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಮರ್ಪಣೆ

0

pahalgam attack ಕನ್ನಡಿಗರ ಆಟೋ ಚಾಲಕರ ಸಂಘ ನೊಂದಣಿ ಇವರ ವತಿಯಿಂದ ಕಾಶ್ಮೀರದ ಪೆಹಲ್ಗಾವ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಶಿವಮೊಗ್ಗದ ದಿವಂಗತ ಶ್ರೀ ಮಂಜುನಾಥ ರಾವ್ ಬೆಂಗಳೂರಿನ ದಿವಂಗತ ಶ್ರೀ ಭರತ್ ಭೂಷಣ್ ಹಾಗೂ ಶ್ರೀ ಮಧುಸೂಧನ್ ರಾವ್ ಹಾಗೂ ಅವರೊಂದಿಗೆ ಮಡಿದ ಎಲ್ಲಾ 26 ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನೇತಾಜಿ ವೃತ್ತ ಶಿವಮೊಗ್ಗದಲ್ಲಿ ಮೌನಚರಣೆ ಹಾಗೂ ಕ್ಯಾಂಡಲ್ ಬೆಳಗುವ ಮೂಲಕ ವೃತರ ಆತ್ಮಕ್ಕೆ ಶಾಂತಿ ಸಭೆಯನ್ನ ಈ ದಿನ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಗೌರವಾಧ್ಯಕ್ಷರಾದ ಪಂಚಾಕ್ಷರಿ ಅಧ್ಯಕ್ಷರು ಜಯಪ್ಪ , ಪ್ರಧಾನ ಕಾರ್ಯದರ್ಶಿಯಾದ ಪ್ರಫುಲ್ಲಚಂದ್ರ ಎಚ್. ಮಂಜುನಾಥ್ ಗೌಡ, ಶ್ರೀನಿವಾಸ್. ಕುಳುವ ಯುವಸೇನೆ ಜಿಲ್ಲಾಧ್ಯಕ್ಷರಾದ ಲೋಕೇಶ್ ಪೈಲ್ವಾನ್ , ರಂಗನಾಥ್ ಶಿಲ್ಪಿ ಹಾಗೂ ನರಸಿಂಹಣ್ಣ, ಕಲಾವಿದ ರಾಮಣ್ಣ, ನಾಗಣ್ಣ ಶಾಮ್ ಭೋವಿ, ಚಿನ್ಮಯ್ ಪಿ. ಹಾಗೂ ಸ್ಥಳೀಯರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.

Basava Jayanti ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣ– ಕೇಂದ್ರ ಸಚಿವ ವಿ.ಸೋಮಣ್ಣ

0

Basava Jayanti ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ೮೯೪ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ತಮ್ಮ ಇಲಾಖೆಯ ಮುಖೇನ ಆಯೋಜಸಿ, ಅತ್ಯಂತ ಯಶಸ್ವಿಯಾಗಿ ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಜಯಂತಿಯನ್ನು ಆಯೋಜಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರುಗಳನ್ನು, ರಾಜ್ಯದ ಸಂಸದರುಗಳನ್ನು, ಮಠಾಧೀಶರುಗಳನ್ನು ಮತ್ತು ಬಸವಾಭಿಮಾನಿಗಳನ್ನು, ದೆಹಲಿ ಕನ್ನಡಿಗರನ್ನು ವಿ.ಸೋಮಣ್ಣನವರು ಆಹ್ವಾನಿಸಿದ್ದರು.

ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ ರಿಜಿಜು, ರೇಲ್ವ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಸಚಿವ ಶ್ರೀ ಪ್ರಹ್ಹಾದ್ ಜೋಶಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ, ರೇಲ್ವೆ ರಾಜ್ಯ ಖಾತೆಯ ಸಚಿವ ಶ್ರೀ ರವನೀತ ಸಿಂಗ್, ಜಲಶಕ್ತಿ ರಾಜ್ಯ ಖಾತೆಯ ಸಚಿವ ಶ್ರೀ ರಾಜಬೂಷಣ್ ಚೌಧರಿ, ಸಂಸದರಾದ ಪಿ.ಸಿ.ಗದ್ದಿಗೌಡರ, ಶ್ರೀ ತೇಜಸ್ವಿ ಸೂರ್ಯ, ಮಾಜಿ ಸಂಸದರಾದ ಡಾ. ಉಮೇಶ್ ಜಾದವ್, ಶ್ರೀ ಅಣ್ಣಾ ಸಾಹೆಬ್ ಜೊಲ್ಲೆ, ಶಾಸಕರಾದ ಶ್ರೀ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಡಾ.ಎಮ್. ಜಿ. ಮೂಳೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳು, ಡಾ. ಬಸವ ಪ್ರಕಾಶ ಸ್ವಾಮಿ, ಶ್ರೀ ಬಸವಕುಮಾರ್ ಸ್ವಾಮಿ ಹಾಗೂ ಮತ್ತು ಅಸಂಖ್ಯಾತ ಕನ್ನಡಿಗರು ಇಂದು ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ.

ಕಾರ್ಯಕ್ರಮದ ಆಯೋಜನೆಗೆ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾರವರು ಅನುಮತಿ ನೀಡಿ ಬಸವೇಶ್ವರರ ಪುತ್ಥಳಿಗೆ ಅಪಾರ ಗೌರವ ಸಲ್ಲಿಸಲು ಕಾರಣಿಕರ್ತರಾಗಿದ್ದಾರೆಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣನವರು, ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣನವರು, ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಆರೋಗ್ಯವಂತ ಸಮಾಜಕ್ಕೆ ಅಡಿಪಾಯ ಹಾಕಿದವರು ಶ್ರೀ ಬಸವೇಶ್ವರರು ಎಂದಿದ್ದಾರೆ.

ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಸಾಮಾನ್ಯ ಬದುಕಿನ ಎಲ್ಲಾ ಸ್ಥರಗಳು ಆ ಚಳುವಳಿಯ ಒಂದು ಭಾಗವಾದ್ದದ್ದು ಶರಣರ ಪೂರ್ಣ ದೃಷ್ಟಿಯ ಸಂಕೇತ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.

ಬಸವಣ್ಣನವರು ವಿದ್ಯೆಯೆಂಬ ಆಯುಧವನ್ನು ಸಮಾಜದ ಎಲ್ಲಾ ವರ್ಗದ ಹಿಂದುಳಿದವರ, ಶೋಷಿತ ವರ್ಗದ ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ತೊಡಗಿಸಿಕೊಂಡಿದ್ದರು. ಜೀವನದ ಸತ್ಯತೆಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ಬಸವಣ್ಣನವರ ವಚನಗಳು ಬಹು ಮುಖ್ಯ ಪಾತ್ರ ವಹಿಸಿದೆ ಎಂದು ಸೋಮಣ್ಣ ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಇಂದು ಮಾತನಾಡಿದ್ದಾರೆ.

Basava Jayanti ಬಸವಣ್ಣನವರ ಅನುಭವ ಮಂಟಪ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವದೊಂದಿಗೆ ಲಿಂಗಬೇದ ರಹಿತ ಸಮಾನತೆಯೊಂದಿಗೆ ಅಭಿವ್ಯಕ್ತಿ ಸ್ವಾತಂತ್ಯದ ವೇದಿಕೆಯಾಗಿತ್ತು. ಅನುಭವ ಮಂಟಪದ ಆ ವೇದಿಕೆಯೆ ಇಂದಿನ ನಮ್ಮ ಮುಂದಿರುವ ಸಂಸತ್ತು ಎಂದು ವಿ. ಸೋಮಣ್ಣ ಪುನರುಚ್ಚರಿಸಿದ್ದಾರೆ.

ಇಂಗ್ಲೆಂಡ್ನಲ್ಲಿ ಮ್ಯಾಗ್ನಾ ಕಾರ್ಟರ ಪರಿಕಲ್ಪನೆಯ ಸಂಸತ್ತು ಜಾರಿಗೆ ಬರುವ ಮೊದಲೇ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಸವಣ್ಣನವರು ಸಂಸತ್ತಿನ ಪರಿಕಲ್ಪನೆ ಸೃಷ್ಟಿಸಿದ್ದು – ಅನುಭವ ಮಂಟಪ ರೂವಾರಿಯಾಗಿದ್ದರು ಎಂದು ಅನುಭವ ಮಂಟಪದ ಹಿರಿಮೆ ಗರಿಮೆಯನ್ನು ಇಂದು ಸೋಮಣ್ಣ ಸಂಸತ್ತಿನಲ್ಲಿ ಆವರಣದಲ್ಲಿ ಕೊಂಡಾಡಿದ್ದಾರೆ.

ಶ್ರೀ ಬಸವಣ್ಣನವರ ಕಾಯಕ ತತ್ವದ ಪ್ರತಿಪಾದನೆಯಲ್ಲಿಯೇ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರು ಈ ದೇಶವನ್ನು ಮುನ್ನೆಡಿಸುತ್ತಿದ್ದಾರೆ. ಬಸವಣ್ಣನವರು ೧೨ನೇ ಶತಮಾನದಲ್ಲಿ; ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ – ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ಸೂತ್ರವನ್ನು ಜಗಜ್ಯೋತಿ ಬಸವಣ್ಣನವರು ಜಗತ್ತಿಗೆ ಪರಿಚಯಿಸಿದ್ರು.

ಇಂದು ೨೧ನೇ ಶತಮಾನದಲ್ಲಿ ಇದೇ ತತ್ವದಡಿಯಲ್ಲಿ ಕಾಯಕ ಮಾಡುತ್ತಿದ್ದಾರೆ ಆಧುನಿಕ ಜಗತ್ತಿನ ಅಭಿವೃದ್ದಿಯ ಹರಿಕಾರ, ಕಾಯಕಯೋಗಿ ಪ್ರದಾನಿ ಮೋದಿಯವರು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲ ರಾಷ್ಟ್ರವಾಗಬೇಕೆಂಬ ಹಂಬಲದಿಂದ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್, ಎಂಬ ಧ್ಯೇಯ ಮಂತ್ರದೊಂದಿಗೆ ಪ್ರಧಾನಿ ಮೋದಿಯವರು ಈ ದೇಶವನ್ನು ಮುನ್ನೇಡುಸುತ್ತಿದ್ದಾರೆ ಮೋದಿಯವರು ಆಧುನಿಕ ಭಾರತದ “ಕಾಯಕಯೋಗಿ ಬಸವಣ್ಣ” ಎಂದರೆ ತಪ್ಪಾಗಲಾರದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ನವದೆಹಲಿಯಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಜಗಜ್ಯೋತಿ ಬಸವಣ್ಣನವರ ೮೯೪ನೇ ಜಯಂತಿಯನ್ನು ಸಂಸತ್ತಿನ ಆವರಣದಲ್ಲಿ ಅಚರಿಸಲು ಸನ್ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಮತ್ತು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಅನುಮತಿಯನ್ನು ನೀಡಿದ್ದಾರೆ.
ಬಸವಮೂರ್ತಿ ಸಂಸತ್ತಿನ ಆವರಣದಲ್ಲಿ ಸ್ಥಾಪನೆಯಾಗಿ ಸುಮಾರು 22 ವರ್ಷಗಳ ನಂತರ ಇಂತಹ ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸಿಲು ಅವಕಾಶ ಸಿಕ್ಕಿದೆ. ಇದು ಕನ್ನಡ ನಾಡಿನ ಸಮಸ್ತ ಜನತೆಗೆ ಸಂಸತ್ತಿನ ಮುಖೇನ ಭಾರತ ಸರ್ಕಾರ ನೀಡಿದ ಮಹಾ ಗೌರವ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.