Monday, March 2, 2026
Monday, March 2, 2026
Home Blog Page 319

Rotary shivamogga ಮಹಿಳೆಯರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು- ವಾಗ್ದೇವಿ ಬಸವರಾಜ್

0

Rotary shivamogga ಮಹಿಳೆಯರು ಸ್ವಾವಲಂಬಿಗಳಾಗಬೇಕು. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಾಕಷ್ಟು ಸ್ಥಾನಮಾನಗಳಿವೆ ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಶಿವಮೊಗ್ಗಪೂರ್ವ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.

ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ವತಿಯಿಂದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಮಾಜದಲ್ಲಿ ಗೌರವ ಸಿಗಬೇಕಾದರೆ ಮುಖ್ಯ ವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯನರಿಂದ ಸಂಗ್ರಹ ಮಾಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡುವುದರ ಮುಖಾಂತರ ಅವರ ಬದುಕು ಹಸನ ವಾಗಲಿ ಎಂದು ನುಡಿದರು.

ಇನ್ನರ್ ವೀಲ್ ನಿಯೋಜಿತ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ವರು ಮಾತನಾಡುತ್ತಾ ದಾನಿಗಳು ನೀಡಿದ ವಸ್ತುಗಳು ಸದುಪಯೋಗವಾಗಬೇಕು ಅವರ ಸಂಪಾದನೆ ಮಾಡಿ ಮುಂದಿನ ದಿನದಲ್ಲಿ ಇನ್ನೊಬ್ಬರ ಬದುಕಿಗೆ ನೆರವಾಗಬೇಕು ಎಂದು ನುಡಿದರು.

ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಅವರು ಮಾತನಾಡುತ್ತಾ ಈಗಾಗಲೇ ಇನ್ನರ್ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಹಲವಾರು ಗುರುತರ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಜನಮಾನಸದಲ್ಲಿ ಸದಾ ಉಳಿದಿದೆ ಇದರಿಂದ ಹೆಚ್ಚು ಹೆಚ್ಚು ಸದಾ ಸೀನಿಯರ್ ಇನ್ನರ್ವಿಲ್ ಕ್ಲಬ್ ಸೇರಿದ ಮುಖಾಂತರ ಸೇವೆ ಮಾಡುವ ಕೈಗಳನ್ನು ಬಲಪಡಿಸಬೇಕು ಎಂದು ನುಡಿದರು.

Rotary shivamogga ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ವಾಣಿ ಪ್ರವೀಣ್ ವೀಣಾ ಹರ್ಷ, ವೇದಾ ನಾಗರಾಜ್, ವಿಜಯ ರಾಯ್ಕರ್ , ನಮಿತಾ ಸೂರ್ಯನಾರಾಯಣ್, ಮಧುರ ಮಹೇಶ್ ಶ್ವೇತಾ ಅಶಿತ್, ಕಾರ್ಯದರ್ಶಿ ಲತಾ ಸೋಮಣ್ಣ ವೀಣಾ ಸುರೇಶ್ ವಿನೋದ ದಳವೆ ವಿಜಯ ಜವಳಿ, ಲತಾ ಶಂಕರ್ , ಸುಮಾ ಮಂಜುನಾಥ್ ವಿಜಯವಾಣಿ ಉಪಸ್ಥಿತರಿದ್ದರು.

Mysore Central Institute of Petrochemicals Engineering and Technology ಪಿಯುಸಿ ಪಾಸ್ & ಫೇಲ್ ಅದವರಿಗೆ ಮೈಸೂರಿನ ‘ಸಿಪೆಟ್ ‘ ನಲ್ಲಿ‌ ವೃತ್ತಿಮಾರ್ಗದರ್ಶನ

0

Mysore Central Institute of Petrochemicals Engineering and Technology ಮೈಸೂರು ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ. ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ ಪಾಲಿಮರ್/ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ಸ್ ಕೈಗಾರಿಕೆಗಳ ಕೌಶಲ ಬೇಡಿಕೆಗೆ ಅನುಗುಣವಾಗಿ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ.
ಪಿಯುಸಿ ಉತ್ತೀರ್ಣ/ಅನುತೀರ್ಣರಾದವರಿಗೆ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ದಿನಾಂಕ 26.04.2025 ರಿಂದ ಸಿಪೆಟ್ ಮೈಸೂರು ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಈ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಪ್ರಯೋಜನ ಪಡೆದು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಸಿಪೆಟ್ ಸಂಸ್ಥೆಯ ಪ್ರಿನ್ಸಿಪಾಲ್ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಶ್ರೀಕಾಂತ್ ಶಿರಾಲಿ ಯವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ: 0821-2510618/9480253024/9791431827 ಗಳನ್ನು ಸಂಪರ್ಕಿಸುವುದು.

Karnataka Science and Technology ಮೇ 22 & 23 ರಂದುಕರ್ನಾಟಕ ವಿಜ್ಞಾನ & ತಂತ್ರಜ್ಞಾನ ಅಕಾಡೆಮಿಯಿಂದ ಕಾರ್ಯಾಗಾರ

0

Karnataka Science and Technology ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಮೇ 22 ಮತ್ತು 23 ರಂದು ಅಕಾಡೆಮಿ ಕಚೇರಿಯಲ್ಲಿ “ಲೇಕ್ಸ್-2025: ಹೆಲ್ತಿ ಲೇಕ್ಸ್, ಹೆಲ್ತಿ ಲೈವ್ಸ್: ದ ನೀಡ್ ಫಾರ್ ಕನ್ಸರ್ವೇಷನ್” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ.

ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಯುವ ಉದ್ಯಮದಾರರು ಭಾಗವಹಿಸಬಹುದಾಗಿದೆ.

ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ರಿಸರ್ಚ್ ಪೇಪರ್‌ಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾದ ರಿಸರ್ಚ್ ಪೇಪರ್‌ಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು.

ಆಸಕ್ತರು ಗೂಗಲ್ https://forms.gle/qYAgXUbi6iAqUgaH7 ಮೂಲಕ ನೋಂದಾಯಿಸಿಕೊಳ್ಳುವಂತೆ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ.ರಮೇಶ್ ತಿಳಿಸಿದ್ದಾರೆ.

Karnataka Science and Technology ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರ ಮೊ.ಸಂ.: 9845258894/ 9620767819 ಮತ್ತು 9611198189 ಅಥವಾ ಅಕಾಡೆಮಿ ವೆಬ್‌ಸೈಟ್ https://kstacademy.in ಸಂಪರ್ಕಿಸಬಹುದಾಗಿದೆ.

Karunada Yuvashakti Organization ಕರುನಾಡು ಯುವಶಕ್ತಿಯ ಜಿಲ್ಲಾಧ್ಯಕ್ಷರ ಮನವಿ

0

Karunada Yuvashakti Organization ಕೆಲವು ರಾಜಕಾರಣಿಗಳು ದೇಶ ಮೊದಲು ಎಂಬುದನ್ನು ಮರೆತು ಎಲ್ಲ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಇದೀಗ ಕಂಡು ಬರುತ್ತಿದೆ. ದೇಶಕ್ಕೆ ಸಂಕಷ್ಟ ಬಂದಾಗ ಎಲ್ಲರೂ ಒಟ್ಟಾಗಿ ನಿಂತು ಎದುರಿಸಬೇಕೆನ್ನುವ ಮನೋಭಾವ ದೂರವಾಗಿ ಉರಿಯುವ ಮನೆಯಲ್ಲಿ ಹಿರಿಯುವ ಕೆಲಸವನ್ನು ಕೆಲವು ನಾಯಕರು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹವರಿಂದ ನಾವು ಏನನ್ನು ನಿರೀಕ್ಷಿಸಬಹುದು? ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಸ್.ಎನ್.ಮಿಲನ್‌ಕುಮಾರ್ ತಿಳಿಸಿದ್ದಾರೆ.

ಬಹುಶಃ ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ಮೇಲೆ ಮಾಡಿದ ದಾಳಿ, ಉಗ್ರ ಚಟುವಟಿಕೆ ಒಂದೇ ಎರಡೇ? ಎಲ್ಲವನ್ನೂ ಸಹಿಸಿಕೊಂಡು ಉತ್ತರ ಕೊಡುವಲ್ಲಿ ಕೊಡುತ್ತಾ ಬಂದಿದೆ. ಆದರೆ ಯಾವತ್ತೂ ನಮ್ಮ ದೇಶ ಅವರಂತೆ ಹೇಡಿತನದ ಕೃತ್ಯಗಳನ್ನು ಮಾಡಲೇ ಇಲ್ಲ. ಹೀಗಾಗಿಯೇ ಅವರು ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಬಂದರು. ಕಾಶ್ಮೀರದಲ್ಲಿ ಎಷ್ಟು ನರಮೇಧ ನಡೆಯಿತು? ಅಲ್ಲಿನ ಕಾಶ್ಮೀರಿ ಪಂಡಿತರ ಬದುಕು ಏನಾಯಿತು? ಎಲ್ಲವೂ ನಮ್ಮ ಮುಂದೆಯೇ ಇದೆ. ಆದರೆ ಇಷ್ಟೆಲ್ಲ ಆಗಿದ್ದರೂ ಇವತ್ತು ಕೆಲವು ರಾಜಕಾರಣಿಗಳ ನಡೆ ಮತ್ತು ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗುತ್ತಿರುವುದು ಅಚ್ಚರಿ ಮೂಡಿಸುತ್ತಿವೆ ಎಂದರು.

ಇಷ್ಟಕ್ಕೂ ಕೆಲವು ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಮುಖ್ಯವಾಗಿರುವುದರಿಂದ ಮತಬ್ಯಾಂಕ್ ನ್ನು ಈ ಸಮಯದಲ್ಲಿಯೂ ಕಾಪಾಡಿಕೊಳ್ಳಲು ಹವಣಿಸುತ್ತಿರುವುದು ನಿಜಕ್ಕೂ ಬೇಸರ ಮೂಡಿಸುತ್ತಿದೆ. ಪಾಕಿಸ್ತಾನದ ವಿರುದ್ಧ ಮಾತನಾಡಿದರೆ ದೇಶದ ಪ್ರಜೆಯಾಗಿರುವ ಮುಸ್ಲಿಮರಿಗೆ ಬೇಸರವಾಗಬಹುದು. ಅವರು ನಮಗೆ ಮತ ಹಾಕದೆ ಹೋಗಬಹುದು ಎಂದು ಕೆಲವು ನಾಯಕರು ಅಂದುಕೊಳ್ಳುತ್ತಿರುವುದು ಮತ್ತು ಅವರನ್ನು ಓಲೈಸುವ ಸಲುವಾಗಿ ನಮ್ಮ ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುತ್ತಿರುವುದು ಕ್ಷಮಿಸಲಾರದ್ದಾಗಿದೆ ಎಂದರು.

ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶದ ಜನ ಪಾಕಿಸ್ತಾನದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆ ದೇಶದ ಆಟಾಟೋಪಕ್ಕೆ ಇತಿಶ್ರೀ ಹಾಡಲು ಇದು ಪಕ್ವ ಸಮಯ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇಡೀ ದೇಶದ ಜನ ಆಕ್ರೋಶಗೊಂಡಿರುವಾಗ ಮತ್ತು ನಮಗಾದ ಅನ್ಯಾಯಕ್ಕೆ ತಕ್ಕ ಶಾಸ್ತಿ ನೀಡಬೇಕಾದ ಸಮಯದಲ್ಲಿ ಆಡಳಿತದಲ್ಲಿ ಯಾರೇ ಇರಲಿ ಅವರಿಗೆ ಸಾಥ್ ನೀಡುವುದು ಈ ದೇಶದ ರಾಜಕೀಯ ನಾಯಕರ ಮತ್ತು ಪ್ರಜೆಗಳ ಆದ್ಯ ಕರ್ತವ್ಯವಾಗುತ್ತದೆ ಎಂದು ತಿಳಿಸಿದರು.

ಇವತ್ತು ಪಹಲ್ಗಾಮ್ ನಲ್ಲಿ ನಡೆದ ದಾಳಿ ಹಿಂದೆ ಏನೇನು ವೈಫಲ್ಯಗಳಾಗಿವೆಯೋ ಅದೆಲ್ಲವೂ ಒತ್ತಟ್ಟಿಗಿರಲಿ. ಅಲ್ಲಿ ವೈಫಲ್ಯವಾಗಿದೆ ಎನ್ನುವುದು ಕಣ್ಣಮುಂದೆ ಇರುವ ಸತ್ಯ. ಅದರ ಕುರಿತಂತೆ ತನಿಖೆಗಳಾಗುತ್ತವೆ. ಆದರೆ ಕಾಲ ಮಿಂಚಿ ಹೋಗಿದೆ. ಇಪ್ಪತ್ತಾರು ಮಂದಿಯ ಪ್ರಾಣವೂ ಹೋಗಿದೆ. ಅವರನ್ನು ಕಳೆದುಕೊಂಡ ಕುಟುಂಬಕ್ಕಷ್ಟೆ ಆ ನೋವು ಗೊತ್ತಿದೆ. ಮತ್ತು ಅದು ಜೀವನದುದ್ದಕ್ಕೂ ಕಹಿ ನೆನಪಾಗಿ ಉಳಿಯಲಿದೆ. ಆದರೆ ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದು ಈಗಿನ ಅವಶ್ಯಕತೆಯಾಗಿದೆ. ಭಾರತವನ್ನು ಕೆಣಕಿದರೆ ಏನಾಗುತ್ತದೆ ಎಂಬ ಸಂದೇಶವನ್ನು ರವಾನಿಸುವುದು ದೇಶದ ಮುಂದಿದೆ ಎಂದರು.

Karunada Yuvashakti Organization ಪಹಲ್ಗಾಮ್ ಘಟನೆಯ ನಂತರ ಯಾರನ್ನು ಯಾರೋ ವಿರೋಧಿಸುವ ಭರದಲ್ಲಿ ಕೆಲವರು ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುವುದು, ಹೇಳಿಕೆ ನೀಡುವುದು ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಇದು ಯಾವುದೇ ನಾಯಕರಿಗೆ ಶೋಭೆ ತರುವಂತಹದಲ್ಲ. ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ವಿರೋಧಿಸುದೇ ನಿಮ್ಮ ರಾಜಕೀಯದ ತಂತ್ರ ಎಂದು ಭಾವಿಸಿ ದೇಶದ ಜನ ಸುಮ್ಮನಾಗಬಹುದು. ಆದರೆ ನಿಮ್ಮ ಹೇಳಿಕೆಗಳು ಶತ್ರು ರಾಷ್ಟ್ರಗಳಿಗೆ ಆಹಾರವಾಗುತ್ತದೆ ಮತ್ತು ದೇಶದ ಮಾನ ಹರಾಜಾಗುತ್ತದೆ ಎಂಬುದು ನೆನಪಿರಲಿ ಎಂದರು.

ಈಗಾಗಲೇ ಕೆಲವರ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೇಗೆ ಬಿಂಬಿತವಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಹೀಗಿರುವಾಗ ನಮ್ಮಲ್ಲಿನ ಕೆಲವು ನಾಯಕರು ಬಾಯಿ ಮುಚ್ಚಿ ಕುಳಿತು ಬಿಟ್ಟರೆ ಅಷ್ಟೇ ಸಾಕು. ಈ ಸಮಯದಲ್ಲಿ ನಿಮ್ಮ ರಾಜಕೀಯವನ್ನು ಬದಿಗೊತ್ತಿ ತೆಪ್ಪಗಿರಿ ಎಂದು ಮತ ನೀಡಿ ಗೆಲ್ಲಿಸಿದ ತಪ್ಪಿಗೆ ಜನ ವಿನಂತಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅದು ಏನೇ ಇರಲಿ ನಮ್ಮ ಜನನಾಯಕರು ದೇಶದ ವಿಚಾರದಲ್ಲಿ ಹೇಗೆಲ್ಲ ನಡೆದುಕೊಳ್ಳಬೇಕು ಎಂಬುವುದನ್ನು ಅರಿತುಕೊಂಡರೇ ಒಳಿತು ಎಂಬುವುದು ನಮ್ಮ ಅಶಯ.

prestige company ಪ್ರೆಸ್ಟೀಜ್ ಕಂಪನಿ ಅಡುಗೆ ಉಪಕರಣಗಳ‌ ವಿನಿಮಯ ಮೇಳ

0

ಪ್ರೆಸ್ಟೀಜ್‌ನಿಂದ ಅಡುಗೆ ಉಪಕರಣಗಳ ಭಾರೀ ವಿನಿಮಯ ಮೇಳವನ್ನು ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್ ಮತ್ತು ವಿನೋಬನಗರ ಪೋಲಿಸ್ ಚೌಕಿ ಬಳಿಯ ಸಪ್ತಗಿರಿ ಎಂಟರ್ ಪ್ರೆಸಸ್ ನ ಪ್ರೆಸ್ಟೀಜ್ ಶೋರೂಂನಲ್ಲಿ ಹಮ್ಮಿಕೊಳ್ಳಲಾಗಿದೆ.

ಗ್ರಾಹಕರು ಯಾವುದೇ ಕಂಪನಿಯ ಹಳೆಯ ಕೆಲಸ ಮಾಡದ ಹಾಗೂ ಕೆಟ್ಟುಹೋದ ಅಡುಗೆ ಉಪಕರಣಗಳಾದ ಕುಕ್ಕರ್, ಕುಕ್‌ವೇರ್, ಗ್ಯಾಸ್‌ಸ್ಟವ್, ಮಿಕ್ಸರ್ ಗ್ರೈಂಡರ್, ವೆಟ್ ಗ್ರೈಂಡರ್, ಇನ್ನಿತರ ಅಡುಗೆಗೆ ಸಂಬಂಧಪಟ್ಟ ಉಪಕರಣಗಳನ್ನು ಕೊಟ್ಟು ಹೊಸ ಉಪಕರಣಗಳನ್ನು ಪಡೆಯಬಹುದು.

prestige company ಅಲ್ಲದೇ ಬಂಧು ಮಿತ್ರರಿಗೆ ಕೊಡಲು ಪ್ರೆಸ್ಟೀಜ್‌ನ ಗಿಪ್ಟ್ ಕಾರ್ಡ್ಗಳನ್ನು ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ. ಮಾಹಿತಿಗೆ ಮೊ.97417 16418, 89711 68073 ರಲ್ಲಿ ಸಂಪರ್ಕಿಸಬಹುದು.

ರಸ್ತೆಯ ಮೇಲೆ ಕಾಳು ಒಕ್ಕಣೆ, ಅಪಘಾತಕ್ಕೆ ಕಾರಣ, ರೈತರಿಗೆ ಎಚ್ಚರವಹಿಸಲು ಮಾಹಿತಿ

0

ಸೊರಬ ತಾಲೂಕಿನ ಉದ್ರಿ ಗ್ರಾಮದ ತೋಗರ್ಸಿ ಮಾರ್ಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗುವಂತೆ ಕಟಾವು ಮಾಡಿದ ಮೆಕ್ಕೆಜೋಳವನ್ನು ಹರವಿ ಒಣಗಿಸಲಾಗುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಸರ್ಕಾರದಿಂದ ಟಾರ್ಪಲ್ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿದ್ದರೂ ಸಹ ಕೆಲ ರೈತರು ರಸ್ತೆಯ ಮೇಲೆಯೇ ಮೆಕ್ಕೆ ಜೋಳವನ್ನು ಒಕ್ಕರಣೆ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಇತ್ತೀಚೆಗೆ ಉದ್ರಿ ಸಮೀಪದ ಯಡಗೊಪ್ಪ ಗ್ರಾಮದಲ್ಲಿ ರಸ್ತೆ ಬದಿ ಒಣ ಹಾಕಿದ ಜೋಳವನ್ನು ತಪ್ಪಿಸಲು ಹೋಗಿ ಅಪಘಾತಗೊಂಡು ಯುವಕನೋರ್ವ ಮೃತಪಟ್ಟಿದ್ದನು. ಆದರೆ, ಉದ್ರಿ ಭಾಗದಲ್ಲಿ ಮಾತ್ರ ಕೆಲ ರೈತರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
ರಾತ್ರಿ ವೇಳೆಯಂತೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಚಲಿಸುವಂತಾಗಿದೆ. ಜೋಳದ ಮೇಲೆ ಕಪ್ಪು ಬಣ್ಣದ ಟಾರ್ಪಲ್ ಹೊದಿಸಲಾಗಿರುತ್ತದೆ. ಇದು ವಾಹನ ಸವಾರರಿಗೆ ಗೋಚರಿಸುವುದಿಲ್ಲ. ಅನೇಕರು ಬಿದ್ದು ಎದ್ದು ಹೋದ ಘಟನೆಗಳಿವೆ.

ಮತ್ತೊಂದಡೆ ಒಂದು ವಾಹನ ಬಂದರೆ, ಮತ್ತೊಂದು ವಾಹನ ಚಲಿಸಲು ಸ್ಥಳಾವಕಾಶವೇ ಇಲ್ಲದಂತೆ ರಸ್ತೆ ಮೇಲೆ ಮೆಕ್ಕೆ ಜೋಳ ಒಣಗಿಸಲಾಗುತ್ತಿದೆ ಎನ್ನುವುದು ವಾಹನ ಸವಾರರ ಆರೋಪ.
ವಾಹನ ಸವಾರರ ಜೀವಕ್ಕೆ ಸಂಚಕಾರ ತರುತ್ತಿರುವ ರಸ್ತೆ ಬದಿ ಮೆಕ್ಕೆಜೋಳ ಒಣಗಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

Shivamogga Police ಈರ್ವರು ವ್ಯಕ್ತಿಗಳ ನಾಪತ್ತೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಮಾಹಿತಿ

0

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಂದು ಇಬ್ಬರು ಮಹಿಳೆಯರು ಕಾಣಿಯಾಗಿರುವ ಬಗ್ಗೆ ನೀಡಿದ ದೂರಿನನ್ವಯ ಮಾಹಿತಿಗಾಗಿ ಪೊಲೀಸ್ ಪ್ರಕಟಣೆ ಕೋರಿದೆ.

ಶಿವಮೊಗ್ಗ ನಗರದ ಹೊಸಮನೆ 5ನೇ ತಿರುವಿನಲ್ಲಿ ವಾಸವಿರುವ ಮಹೇಶ ಎಂಬುವವರ ಪತ್ನಿ ಆಶಾ ಎಂಬ ಮಹಿಳೆ ಜನವರಿ 29 ರಂದು ಮನೆಯಿಂದ ಕಾಣೆಯಾಗಿದ್ದು, ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ತಲೆ ಕೂದಲು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.

ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ಸವಾಯಿ ಪಾಳ್ಯ ವಾಸಿ ಶಬಾನಾ ಬಾನು ಕೋಂ ಲೇಟ್ ಹಿದಾಯಿತ್ತುಲ್ಲಾ ಎಂಬುವವರ ಮಗಳು ಆಯೀಶಾ ಮೆಹಕ್ ಎಂಬ 22 ವರ್ಷದ ಮಹಿಳೆ ದಿ: 16/06/2024ರಂದು ಮನೆಯಿಂದ ಕಾಣೆಯಾಗಿರುತ್ತಾರೆ.

ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಮೆಗ್ಗಾನ್ ಆಸ್ಪತ್ರೆ ಹಾಗೂ ಮಾನಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈಕೆಯ ಚಹರೆ 4 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.

Shivamogga Police ಮನೆಯಿಂದ ಹೋಗುವಾಗ ನೀಲಿ ಬಣ್ಣದ ಪ್ರಾಕ್ ಹಾಗೂ ಲೆಗಿನ್ಸ್ ಧರಿಸಿರುತ್ತಾರೆ.
ಕಾಣೆಯಾದ ಈ ಇಬ್ಬರು ಮಹಿಳೆಯರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Radio Shivamogga ರೇಡಿಯೊ ಆಲಿಸುವ ಸಂತೋಷ ಬೇರೆಲ್ಲೂ ಸಿಗದು- ಬಿ.ಗೋಪಿನಾಥ್

0

Radio Shivamogga ತಕ್ಷಣಕ್ಕೆ ಸುದ್ದಿಯನ್ನು ಪ್ರಸಾರ ಮಾಡುವ ಏಕೈಕ ಮಾಧ್ಯಮ ರೇಡಿಯೋ ಆಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರು, ಎಷ್ಟೇ ಟೆಲಿವಿಷನ್ ಗಳು ಇದ್ದರೂ ಸಹ ರೇಡಿಯೋದಲ್ಲಿ ಆಲಿಸಿದ ಹಾಗೆ ಸಿಗುವಂತಹ ಸಂತೋಷ ಬೇರೆಲ್ಲೂ ಸಿಗೋದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನುಡಿದರು.

ರೇಡಿಯೋ ಶಿವಮೊಗ್ಗ ಮೂರನೇ ವರ್ಷದ ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥರು ಹಾಗೂ ನಿಲಯದ ನಿರ್ದೇಶಕರಾದ ಜನಾರ್ಧನ್ ರವರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವ, ಶಿವಮೊಗ್ಗದಲ್ಲಿ ಈಗಾಗಲೇ ಮೂರು ವರ್ಷಗಳಿಂದ ನಿರಂತರವಾಗಿ ಸುದ್ದಿ, ಮಾಹಿತಿ, ಮನರಂಜನೆಯನ್ನು ಉತ್ಕೃಷ್ಟವಾದ ಮಟ್ಟದಲ್ಲಿ ಜನರಿಗೆ ತಲುಪಿಸಿ ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕೇಳುಗರನ್ನು ಸಂಪಾದಿಸಿರುವ ರೇಡಿಯೋ ಶಿವಮೊಗ್ಗ ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ನಮ್ಮ ಎಫ್ ಎಂ ರೇಡಿಯೋ ಶಿವಮೊಗ್ಗ ಈಗಾಗಲೇ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಕೇಳುಗರನ್ನು ತಲುಪಿ, ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸಮುದಾಯ ರೇಡಿಯೋದಲ್ಲಿ ಅದರಲ್ಲೂ ನಮ್ಮ ಶಿವಮೊಗ್ಗ ರೇಡಿಯೋ ಎಲ್ಲಾ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆತವಾಗಿ ಎಲ್ಲಾ ಕ್ಷೇತ್ರದವರಿಗೂ ಅಗತ್ಯವಾದ ಮಾಹಿತಿಗಳನ್ನು ನೀಡುತ್ತಾ ಜನ ಮೆಚ್ಚುಗೆ ಪಡೆದಿದೆ ಎಂದು ಶ್ಲಾಘಿಸಿದರು.

Radio Shivamogga ಇದೇ ಸಂದರ್ಭದಲ್ಲಿ ರೇಡಿಯೋ ಹಬ್ಬ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಧಾರವಾಡ, ಬಿಜಾಪುರ, ಕಾರ್ಕಳ, ಬ್ರಹ್ಮಾವರ, ಬೆಂಗಳೂರು, ಅಥಣಿ ಹಾಗೂ ಬೇರೆ ಬೇರೆ ರಾಜ್ಯಗಳಿಂದ ರೇಡಿಯೋ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಮೂರು ವರ್ಷದ ನೆನಪಿಗಾಗಿ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಗಣೇಶ್ ಅಂಗಡಿ, ಹಾಗೂ ನಿರೂಪಕರಾದ ವಿ.ಎನ್.ಅರ್ಪಿತ, ಪವಿತ್ರ, ದಿನೇಶ್, ರಕ್ಷಿತಾ ಹೊಳ್ಳ, ಶ್ರೀಧರ್, ಮಹಾಲಕ್ಷ್ಮಿ, ಶ್ವೇತಾ, ಶ್ರೀಕಾಂತ್, ಪ್ರಮುಖರಾದ ಗುರುಪ್ರಸಾದ್ ಹಾಗೂ ಪರಿಸರ ಅಧ್ಯಯನ ಕೇಂದ್ರದ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

Labor Day ಗಿಗ್ ಕಾರ್ಮಿಕರೊಂದಿಗೆ ವಿಶಿಷ್ಟವಾಗಿ ಯುವ ಕಾಂಗ್ರೆಸ್ ನಿಂದ ಕಾರ್ಮಿಕ ದಿನಾಚರಣೆ

0

Labor Day ಕಾರ್ಮಿಕ ದಿನಾಚರಣೆ ಅಂಗವಾಗಿ ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ನಗರದ ಬ್ಲಿಂಕ್ ಇಟ್ , ಫ್ಲಿಪ್ ಕರ್ಟ್ , ಸ್ವಿಗ್ಗಿ ಜೋಮೋಟೊ ಅಮೆಜಾನ್ ಹೊಮ್ ಡೆಲಿವರಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಡೆಲಿವರಿ ಬಾಯ್ಸ್ ಗೀಗ್ ಕಾರ್ಮಿಕರಿಗೆ ಸಿಹಿ ಹಂಚಿಕಾರ್ಮಿಕ ದಿನಾಚರಣೆಯ ಶುಭಾಶಯಗಳು ಕೋರಲಾಯಿತು. ಭಾರತ್ ಜೋಡೊ.ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಗೀಗ್ ಕಾರ್ಮಿಕರೊಂದಿಗೆ ನಡೆಸಿದ ಸಂವಾದದಲ್ಲಿ ಕಾರ್ಮಿಕರ ಸಮ್ಮುಖದಲ್ಲಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಮಂಡಳಿಯನ್ನು ಸ್ಥಾಪಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಅವರು ತಿಳಿಸಿದಂತೆ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗೀಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವ ಮುಖಾಂತರ ನುಡಿದಂತೆ ನಡೆದ ಸರ್ಕಾರವಾಗಿದ್ದು, ಕಲ್ಯಾಣ ಮಂಡಳಿಯನ್ನು ಘೋಷಣೆ ಮಾಡಿದ ರಾಜ್ಯದ ಮುಖ್ಯಮಂತ್ರಿಗಳಿಗೆ ಉಪಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಕಲ್ಯಾಣ ಸಚಿವರಾದ ಸಂತೋಷ್ ಲಾಡ್ ರವರಿಗೆ ಅಭಿನಂದಿಸಿ ಎಲ್ಲ ಕಾರ್ಮಿಕರಿಗೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಲಾಯಿತು. Labor Day ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಕೆ ರಂಗನಾಥ್, ಡಾ.ದಿನೇಶ್ ಜಿಲ್ಲಾ ಯುವ ಕಾಂಗ್ರೆಸ್ ನ ಹೆಚ್‌.ಪಿ ಗಿರೀಶ್, ಪಂಚ ಗ್ಯಾರಂಟಿ ಸದಸ್ಯ ಎಸ್ ಕುಮಾರೇಶ್, ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಕೆ ಎಲ್ ಪವನ್, ಟಿ ಗುರುಪ್ರಸಾದ್, ರಾಜೇಶ್ ಮಂದಾರ, ಜಿ.ಕಿರಣ್ ಕುಮಾರ್, ಎಸ್ ಜಿ ಮಿಥುನ್, ಆರ್ ಕಿರಣ್, ಎಸ್ ಎಸ್ ಶರತ್, ಸಂಜಯ್, ಮಂಜುನಾಥ್ ಹಾಗೂ ಇತರರು ಇದ್ದರು

Backward Classes Welfare Department ಮೇ 4, ಜಿಲ್ಲಾಡಳಿತದಿಂದ ಭಗೀರಥ ಜಯಂತಿ ಆಚರಣೆಗೆ ‌ಸಿದ್ಧತೆ

0

Backward Classes Welfare Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಮೇ 04 ರ ಬೆಳಗ್ಗೆ 11.00 ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Backward Classes Welfare Department ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹೊಸನಗರದ ನಿಟ್ಟೂರು ನಿವೃತ್ತ ಪ್ರಾಧ್ಯಾಪಕ ಡಾ. ಪಿ ಶಾಂತಾರಾಮ ಪ್ರಭುರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.