Kuvempu University ಯಶೋಧಮ್ಮ ಜಿ, ಬೆಂಗಳೂರು ಇವರು ಕುವೆಂಪು ವಿಶ್ವವಿದ್ಯಾಲಯದ ಲೈಬ್ರರಿ ಆಂಡ್ ಇನ್ಪರ್ಮೇಷನ್ ಸೈನ್ಸ್ ವಿಭಾಗದಲ್ಲಿ ‘ಯೂಸ್ ಆಫ್ ಐಸಿಟಿ ಟೂಲ್ಸ್ ಆಂಡ್ ಯುಟಿಲೈಸೇಷನ್ ಆಫ್ ಇನ್ಪರ್ಮೇಷನ್ ರಿಸೋರ್ಸಸ್ ಆಂಡ್ ಸರ್ವಿಸಸ್ ಬೈ ದಿ ಯೂಸರ್ಸ್ ಆಫ್ ಸಿಟಿ ಸೆಂಟ್ರಲ್ ಲೈಬ್ರರೀಸ್ ಆಫ್ ಕರ್ನಾಟಕ’ ಎಂಬ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಪ್ರಸ್ತುತ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಮುಖ್ಯಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Kuvempu University ಕುವೆಂಪು ವಿವಿ ಲೈಬ್ರರಿ ಆಂಡ್ ಇನ್ಪರ್ಮೇಷನ್ ಸೈನ್ಸ್ ವಿಭಾಗದ ಸೆಲೆಕ್ಷನ್ ಗ್ರೇಡ್ ಲೈಬ್ರೇರಿಯನ್(ನಿ) ಡಾ.ಬಿ.ಯು ಕನ್ನಪ್ಪನವರ್ ಅವರ ಮಾರ್ಗದರ್ಶನದಲ್ಲಿ ಇವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಇಂಗ್ಲಿಷ್ ಭಾಷೆಯಲ್ಲಿ ಸಿದ್ದಪಡಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ಗೋಪಿನಾಥ್‌ಎಸ್.ಎಂ.ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kuvempu University ಕುವೆಂಪು ವಿವಿಯಿಂದ ಜಿ.ಯಶೋಧಮ್ಮ ಅವರಿಗೆ ಪಿಎಚ್ ಡಿ ಪದವಿ ಘೋಷಣೆ
School Education ಪ್ರೌಢಶಾಲಾ ಶಿಕ್ಷಕರ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟ ಪ್ರಕಟಣೆ. ಆಕ್ಷೇಪಣೆಗಳಿಗೆ ಅವಕಾಶ
School Education ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ https://schooleducation.karnataka.gov.in/86/teachers/kn ನ ಶಿಕ್ಷಕರ ಸೇವಾ ವಿವರಗಳಲ್ಲಿನ ಕ್ರ.ಸಂ 04 ರಲ್ಲಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ(ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೆಗಳು ಇದ್ದಲ್ಲಿ ಸಲ್ಲಿಸಬಹುದು.
School Education ಕರಡು ತಾತ್ಕಾಲಿಕಾ ಜೇಷ್ಟತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬAಧಿಸಿದ ಶಿಕ್ಷಕರು ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಮೇ 8 ರೊಳಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಬAಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೇರವಾಗಿ ಸಲ್ಲಿಸಬಹುದೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
DC Gurudatta Hegde ಉದ್ದೇಶಿತ ಹೊಸ ಕಂದಾಯ ಗ್ರಾಮಗಳ ನಿವಾಸಿಗಳು ನೆಲಕಿಮ್ಮತ್ತನ್ನು ಪಾವತಿಸಬೇಕು – ಗುರುದತ್ತ ಹೆಗಡೆ.
DC Gurudatta Hegde ದಿನಾಂಕ:20.05.2025 ರಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸರ್ಕಾರದ ಮಹತ್ವದ ಯೋಜನೆ ಹೊಸ ಕಂದಾಯ ಗ್ರಾಮಗಳ ರಚನೆ ಕುರಿತು ಹಕ್ಕುಪತ್ರ ಮತ್ತು ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮ ನಡೆಸಲು ಈಗಾಗಲೇ ದಿನಾಂಕ ನಿಗಧಿಪಡಿಸಲಾಗಿದೆ.
ಈ ವಿಷಯದ ಕುರಿತು ಈಗಾಗಲೇ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ ಹೊಸ ಕಂದಾಯ ಗ್ರಾಮಗಳ ರಚಿಸುವ ಕುರಿತು ಸ್ವೀಕೃತವಾದ ಅರ್ಜಿಗಳ ವಿಚಾರದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರಕ್ಕೆ ನೆಲಕಿಮ್ಮತ್ತನ್ನು ಪಾವತಿಸುವ ಕುರಿತು ತಿಳುವಳಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ನೀಡಲಾಗಿದೆ.
DC Gurudatta Hegde ಕೂಡಲೇ ಫಲಾನುಭವಿಗಳು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಛೇರಿಯನ್ನು ಸಂಪರ್ಕಿಸಿ 2 ದಿನಗಳ ಒಳಗಾಗಿ ಸರ್ಕಾರಕ್ಕೆ ನೆಲಕಿಮ್ಮತ್ತನ್ನು ಪಾವತಿಸುವ ಕುರಿತು ಕ್ರಮವಹಿಸುವಂತೆ ಈ ಮೂಲಕ ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karnataka Examination Results 2025 ಸಾಗರದ ಸೆಂಟೆ ಜೋಸೆಫ್ ಪ್ರೌಢಶಾಲೆಯ ಪಿ.ಮನ್ವಿತ್ ಗೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 598/625
Karnataka Examination Results 2025 ಎಸ್‌ಎಸ್‌ಎಲ್‌ಸಿಯಲ್ಲಿ ಮನ್ವಿತ್ ಪಿ.ಗೆ 598/625ಕ್ಕೆ
ಸಾಗರ : ತಾಲ್ಲೂಕಿನ ಸೆಂಟ್ ಜೋಸೆಫ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮನ್ವಿತ್ ಪಿ.ರವರು ಈ ಬಾರಿಯ ಎಸ್‌ಎಸ್‌ಎಲ್‌ಸಿ ಯಲ್ಲಿ 598/625ಕ್ಕೆ ಅಂಕ ಪಡೆದು ಶಾಲೆಗೂ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಶುಭ ಹಾರೈಸಿದ್ದಾರೆ.
ಇವರು ಪ್ರವೀಣ್ ವಿ ಮತ್ತು ಹೇಮಾ ದಂಪತಿಯ ಪುತ್ರರಾಗಿದ್ದಾರೆ.
Chamber of Commerce Shivamogga ಯೋಗ ತರಬೇತಿಯಲ್ಲಿ ಗುರು ನಾಗರತ್ನಮ್ಮ ಚಂದ್ರಶೇಖರ್ ಕೊಡುಗೆ ಅಪಾರ- ಜಿ.ವಿಜಯ ಕುಮಾರ್
Chamber of Commerce Shivamogga ಶಿಕ್ಷಕರಾಗಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಯಾವುದೇ ಕಪ್ಪು ಚುಕ್ಕೆಗಳು ಇಲ್ಲ ಹಾಗೆ ಸಾರ್ಥಕತೆಯನ್ನು ಕಂಡು ಜೊತೆಗೆ ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರಾಗಿ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿವಿ ರುದ್ರಾರಾಧ್ಯರ ಮಾರ್ಗದರ್ಶನದಲ್ಲಿ ಉಚಿತವಾಗಿ ಯೋಗವನ್ನು ಹೇಳಿಕೊಡುವುದರ ಮುಖಾಂತರ ಹಾಗೂ ಹಲವಾರು ಮಠ ಮಂದಿರಗಳಲ್ಲಿ ಉಚಿತ ಭಕ್ತಿ ಸಂಗೀತ ಸೇವೆಯನ್ನು ಸಲ್ಲಿಸುತ್ತಾ ನಾಗರತ್ನಮ್ಮ ಚಂದ್ರಶೇಖರ್ ಅವರ ಸೇವೆ ಕೊಡುಗೆ ಅಪಾರ ಹಾಗೂ ಶಿವಗಂಗಾ ಯೋಗ ಕೇಂದ್ರದ ನೂತನ ಕಾರ್ಯದರ್ಶಿಯಾಗಿ ಜವಾಬ್ದಾರಿ ತೆಗೆದುಕೊಂಡು ಇರುವುದು ತುಂಬಾ ಸಂತೋಷ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು.
ಶಿವಮೊಗ್ಗ ಕೃಷಿ ನಗರದ ರೋಟರಿ ರಿವರ್ ಸೈಡ್ ಸೈಡ್ ಭವನದಲ್ಲಿ ಇಬ್ಬರೂ ದಂಪತಿಗಳಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಾಗರತ್ನಮ್ಮ ಚಂದ್ರಶೇಖರ್ ರವರು ಗೋಣಿಬೀಡು ಶ್ರೀ ಮಠದಲ್ಲಿ ಎಂಟು ವರ್ಷಗಳಿಂದ ಉಚಿತವಾಗಿ ಭಕ್ತಿ ಸಂಗೀತ ಸೇವೆಯನ್ನು ನಡೆಸಿಕೊಡುತ್ತಾ ಬಂದಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಅಲ್ಲದೆ ರಾಜ್ಯಾದ್ಯಂತ ವಿವಿಧ ಮಠ ಮಂದಿರಗಳಲ್ಲಿ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಹಾಗೆ ಆಕಾಶವಾಣಿಯ ಕಲಾವಿದರಾದ ಇವರು ಮೇರಿ ಇಮ್ಯಾಕುಲೇಟ್ ಶಾಲೆಯ ಶಿಕ್ಷಕರಾಗಿ ಈಗ ನಿವೃತ್ತಿಯಾಗಿ ತಮ್ಮ ಮುಂದಿನ ಪ್ರವೃತ್ತಿ ಜೀವನಕ್ಕೆ ಕಾಲಿರಿದ್ದಾರೆ ಬರುವ ದಿನಗಳಲ್ಲಿ ಸಮಾಜಕ್ಕೆ ಇವರ ಸೇವೆ ಇನ್ನು ಹೆಚ್ಚಿನ ಮಟ್ಟದಲ್ಲಿ ಸಿಗಲಿ ಎಂದು ಹಾರೈಸಿದರು.
Chamber of Commerce Shivamogga ಇದೇ ಸಂದರ್ಭದಲ್ಲಿ ಚಿದಾನಂದ ಹಾಗೂ ಕುಸುಮಾ ದಂಪತಿಗಳು ಮಾತನಾಡುತ್ತ ಪ್ರತಿಯೊಂದು ಬಡಾವಣೆಗಳಲ್ಲಿ ಯೋಗ ಕೇಂದ್ರಗಳು ಇರುವುದರಿಂದ ಆ ಬಡಾವಣೆಯ ನಿವಾಸಿಗಳ ಆರೋಗ್ಯ ಸಾಕಷ್ಟು ಸುಧಾರಿಸಿದ. ಜೊತೆಗೆ ಒಳ್ಳೆಯ ಸಂಬಂಧ ಹಾಗೂ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಯೋಗ ಪ್ರಾಣಾಯಾಮ ಧ್ಯಾನ ನೀವು ನಮ್ಮ ಕನ್ನಡ ಆರೋಗ್ಯದ ಗುಟ್ಟು ಎಂದು ಇಬ್ಬರೂ ದಂಪತಿಗಳ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ಸುಜಾತ ಅನಿಲ್ ಜ್ಯೋತಿ ಟಿಕಾರೆ, ಶೋಭಾ ಶಿವಗಂಗಾ ಯೋಗ ಕೇಂದ್ರದ ಪೋಷಕರಾದ ಶ್ರೀ ಪರಮೇಶ್ , ಮನು ಕುಮಾರ್ , ಮನು ಕವಿತಾ, ಸೌಮ್ಯ ಪರಮೇಶ್. ಕೃಷ್ಣಮೂರ್ತಿ. ಅರುಣ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು
Muncipal Corporation Shivamogga ಶಿವಮೊಗ್ಗದಲ್ಲಿ ಬೀದಿನಾಯಿಗಳಿಗೆ ತಂತಾನ ಹರಣಶಸ್ತ್ರ ಚಿಕಿತ್ಸೆ
Muncipal Corporation Shivamogga ಶಿವಮೊಗ್ಗ ಮಹಾನಗರ ಪಾಲಿಕೆಯು ಮೇ 05 ರಿಂದ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆೆ ಮಾಡಿ, ರೇಬಿಸ್ ವಿರುದ್ಧ ಲಸಿಕೆ ಹಾಗೂ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಶಸ್ತ್ರಚಿಕಿತ್ಸೆಯು ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು, ಪ್ರಾಣಿಜನ್ಯ ರೋಗಗಳಾದ ರೇಬಿಸ್, ಲೆಪ್ಪೋಸ್ಟೈರಾ ಇತ್ಯಾದಿ ರೋಗಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡುವುದು ಹಾಗೂ ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದೆ.
ಈ ಶಸ್ತ್ರಚಿಕಿತ್ಸೆಯು ರಾಜೀವ್‌ಗಾಂಧಿ ಬಡಾವಣೆಯ ಮಹಾವೀರ್ ಗೋಶಾಲೆ ಪಕ್ಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಸಹಾಯವಾಣಿ ಸಂ.: 18004257677 ನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Muncipal Corporation Shivamogga ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಮೇ 06 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289454.
Dinesh Gundu Rao ಸುಹಾಸ್ ಶೆಟ್ಟಿ ಕೊಲೆ. ಸಚಿವ ಗುಂಡೂರಾವ್ ಹೇಳಿದ್ದೇನು?
Dinesh Gundu Rao ಮಂಗಳೂರಿನ ಬಜಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಕೃತ್ಯ ಅತ್ಯಂತ ಭೀಭತ್ಸ್ಯ ಮತ್ತು ಆಘಾತಕಾರಿ. ಈ ಘಟನೆಯಿಂದ ವೈಯಕ್ತಿಕವಾಗಿ ನಾನು ವಿಚಲಿತನಾಗಿದ್ದೇನೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಮಾಡುವಂತಿದೆ. ಹಾಗಾಗಿ ಈ ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.
ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರ ಓಲೈಕೆಯೂ ಇಲ್ಲ., ಯಾರ ತುಷ್ಠೀಕರಣವೂ ಇಲ್ಲ. ಈಗಾಗಲೇ ಈ ಕೃತ್ಯದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ.
ಹತ್ಯೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸಚಿವರು ಪ್ರಕರಣದ ವಿಚಾರಣೆ ಬಗ್ಗೆ ತಿಳಿಸಿದ್ದಾರೆ.
ಬಿಜೆಪಿಯವರು ಈಗಾಗಲೇ ಸುಹಾಸ್ ಪ್ರಕರಣವನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಒಂದು ಮಾತು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಕೂಡ ಇದೆ.
ದ್ವೇಷ ಹರಡುವ ಮೂಲಕ, ಪ್ರಚೋದಿಸುವ ಮೂಲಕ ಮಂಗಳೂರಿನಲ್ಲಿ ಶಾಂತಿ ಭಂಗ ಮಾಡುವ ದುಷ್ಟ ಕೆಲಸಕ್ಕೆ ಕೈ ಹಾಕಬೇಡಿ. ಜವಾಬ್ದಾರಿಯಿಂದ ವರ್ತಿಸಿ ಎಂದು ವಿಪಕ್ಷ ಬಿಜೆಪಿಯ ಧುರೀಣರಿಗೆ ಮನವಿಮಾಡಿದ್ದಾರೆ.
ಕೊಲೆಯಾದ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ನಾವು ಕೇವಲ ಬಾಯಿ ಮಾತಿನಲ್ಲಿ ಕಠಿಣ ಕ್ರಮದ ಭರವಸೆ ನೀಡುವವರಲ್ಲ. ಬದಲಿಗೆ ಕಾನೂನಿನ ಅನುಸಾರ ಈ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸುವವರು. ಇದು ನಿಶ್ಚಿತ.
Dinesh Gundu Rao ಅಂತಿಮವಾಗಿ ಭೀಕರ ಕೃತ್ಯದಲ್ಲಿ ಜೀವ ಕಳೆದುಕೊಂಡ ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಬೇಡುತ್ತೇನೆ. ಸುಹಾಸ್ ಅಗಲಿಕೆಯ ನೋವಿನಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ನನ್ನ ಕಡೆಯಿಂದ ಮನಃಪೂರ್ವಕ ಸಾಂತ್ವನಗಳು.ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
Mountain Innovative School ಶಿವಮೊಗ್ಗದ ಮೌಂಟೆನ್ ಇನ್ನೋವೇಟಿವ್ ಶಾಲೆಗೆ ಎಸ್ಎಸ್ಎಲ್ ಸಿ ಉತ್ತಮ ಫಲಿತಾಂಶ
Mountain Innovative School ಗೋಪಾಳದ ಮೌಂಟೇನ್ ಇನ್ನೋವೇಟಿವ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಸೈಯದಾ ಕುತೇಜ 620, ಎನ್.ಝನೇರಾ, ನಿಶಾ ಬಿ 613, ನಿಧಿ ಡಿ 606, ಸೂರಜ್ ಎಸ್ ಶೆಟ್ಟಿ, 605, ಲೇಖಿತ್ ಎಸ್ ಪಿ 603, ಸುಚಿತಾ ಕೆ 591 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
Mountain Innovative School ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶಿವಕುಮಾರ್ ಪಿ.ಎಸ್., ಕಾರ್ಯದರ್ಶಿ ಶಿಲ್ಪಾಶ್ರೀ ಬಿ, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mescom ಭದ್ರಾವತಿ ಮೆಸ್ಕಾಂ ಉಪ ಕಛೇರಿಯಲ್ಲಿ ಮೇ 6 ರಂದು ಜನಸಂಪರ್ಕ ಸಭೆ
Mescom ಶಿವಮೊಗ್ಗ ಮಹಾನಗರ ಪಾಲಿಕೆಯು ಮೇ 05 ರಿಂದ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆೆ ಮಾಡಿ, ರೇಬಿಸ್ ವಿರುದ್ಧ ಲಸಿಕೆ ಹಾಗೂ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಶಸ್ತ್ರಚಿಕಿತ್ಸೆಯು ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು, ಪ್ರಾಣಿಜನ್ಯ ರೋಗಗಳಾದ ರೇಬಿಸ್, ಲೆಪ್ಪೋಸ್ಟೈರಾ ಇತ್ಯಾದಿ ರೋಗಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡುವುದು ಹಾಗೂ ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದೆ.
ಈ ಶಸ್ತ್ರಚಿಕಿತ್ಸೆಯು ರಾಜೀವ್‌ಗಾಂಧಿ ಬಡಾವಣೆಯ ಮಹಾವೀರ್ ಗೋಶಾಲೆ ಪಕ್ಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಸಹಾಯವಾಣಿ ಸಂ.: 18004257677 ನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Mescom ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಮೇ 06 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289454.
Race Track Madras Motors Sports Club ಶಿವಮೊಗ್ಗದ ಡಾ.ದಿನೇಶ್ ಗೆ ಕಾರ್ ರ್ಯಾಲಿಯಲ್ಲಿ ದ್ವಿತೀಯ ಸ್ಥಾನ
Race Track Madras Motors Sports Club ರೇಸ್ ಟ್ರ್ಯಾಕ್ ಮದ್ರಾಸ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ನವರು ತಮಿಳುನಾಡು ಪೆರಂಭದೂರು ನಲ್ಲಿ ನಡೆಸಿದ ಏಷ್ಯನ್ ಕಾರ್ ರ‍್ಯಾಲಿ ಚಾಂಪಿಯನ್ ಶಿಪ್ ಮತ್ತು ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗದ ಡಾ. ದಿನೇಶ್ ಹಾಗೂ ಭದ್ರಾವತಿ ಮೂಲದವರಾದ ಸತೀಶ್ ಇವರುಗಳಿಗೆ ರಾಷ್ಟ್ರೀಯ ಕಾರ್ ಚಾಂಪಿಯನ್ ಶಿಪ್ ಕ್ಲಾಸಿಕ್ ಕಾರ್ ಹೋಂಡಾ ಸಿಟಿ ವಿ ಟೆಕ್ 1.6 ಲೀಟರ್ ವಿಭಾಗದ ಕೆಟಗರಿಯಲ್ಲಿ ಕಾರ್ ಚಲಾಯಿಸಿ ರಾಷ್ಟ್ರಮಟ್ಟದಲ್ಲಿ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಪಡೆದು ಜಯಶೀಲರಾಗಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಡಾ. ದಿನೇಶ್ ಅವರು ಈಗಾಗಲೇ ದ್ವಿಚಕ್ರ ವಾಹನ ಹಾಗೂ ಕಾರ್ ಗಳ ವಿಭಾಗದಲ್ಲಿ ನೂರಾರು ರ್‍ಯಾಲಿಗಳಲ್ಲಿ ಭಾಗವಹಿಸಿ ನಾಲ್ಕು ಬಾರಿ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನ ಪಡೆದಿದ್ದಾರೆ. ಜೊತೆಗೆ ಸಾಕಷ್ಟು ರ್‍ಯಾಲಿಗಳನ್ನು ಕೂಡ ಆಯೋಜಿಸಿದ್ದಾರೆ. ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ರ‍್ಯಾಲಿಯಲ್ಲಿ ಕೂಡ ಎರಡನೇ ಸ್ಥಾನವನ್ನ ಗಳಿಸಿದ್ದಾರೆ. ಸುಮಾರು 34 ವರ್ಷಗಳಿಂದ ಈ ಕಾರ್ ಹಾಗೂ ಬೈಕ್ ರ್‍ಯಾಲಿಗಳಲ್ಲಿ ಭಾಗವಹಿಸುವುದರ ಮುಖಾಂತರ ಪ್ರಶಸ್ತಿಗಳನ್ನು ಮುಡಿಗೇರಿಸಿ, ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
Race Track Madras Motors Sports Club ಇವರಿಗೆ ಆಯೋಜಕರಾದ ಮದ್ರಾಸ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ನ ವಿಕ್ಕಿ ಚಂದುಕ್ ಮತ್ತು ವಂಸಿ ಮರೆಲಾ ಇವರುಗಳು ಬಹುಮಾನ ನೀಡಿ ಗೌರವಿಸಿದರು. ಈ ರ್ಯಾಲಿಯಲ್ಲಿ ಭಾಗವಹಿಸಲು ಪ್ರಾಯೋಜಕತ್ವವನ್ನು ವಂಶಿ ಮರೆಲಾ ಅವರು ಸಹಕರಿಸಿದ್ದಾರೆ. ವಿಜೇತರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ನವೀನ್, ಕೆ.ರಂಗನಾಥ್, ನಾಗರಾಜ್ ಕಂಕಾರಿ, ಸುನಿಲ್ ಕುಮಾರ್, ಜಗದೀಶ್, ಡಾ. ಶಿಶಿರ ಹಾಗೂ ಸ್ನೇಹಿತರು ಅಭಿನಂಡಿಸಿದ್ದಾರೆ.
