Monday, March 2, 2026
Monday, March 2, 2026
Home Blog Page 317

Rovers Club Shimoga ಶಾಲೆಯ ಶಿಕ್ಷಕರ ಮಾರ್ಗದರ್ಶನ‌‌ ಮತ್ತು ಪರಿಶ್ರಮ,ಏಕಾಗ್ರತೆ ಬಲ ನೀಡಿದೆ- ವಿದ್ಯಾರ್ಥಿನಿ‌ ಆತ್ಮೀಯ ಮಿತ್ತಲ್

0

Rovers Club Shimoga ಸಾಧನೆಗೆ ತಂದೆ ತಾಯಿಗಳ ಆಶೀರ್ವಾದ ಸಹಕಾರ ಹಾಗೂ ನಮ್ಮ ಶಾಲೆಯ ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಪರಿಶ್ರಮ ಏಕಾಗ್ರತೆ ಬಲ ನೀಡಿದೆ ಎಂದು ಶಿವಮೊಗ್ಗ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆತ್ಮೀಯ ಮಿತಲ್ ಹೇಳಿದರು.

ಅವರು ಇಂದು ಬೆಳಿಗ್ಗೆ ರೋವರ್ಸ್ ಕ್ಲಬ್ಬಿನ ಶಟ್ಟಲ್ ಕೋರ್ಟ್ ಆವರಣದಲ್ಲಿ ಶಟಲ್ ಆಟಗಾರರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪರೀಕ್ಷಾ ಸಮಯದಲ್ಲಿ ದಿನವಿಡೀ ಅಭ್ಯಾಸ ಮಾಡುತ್ತಿದ್ದೆ. ಹಾಗೆ ತಂದೆ ತಾಯಿಗಳಿಗೆ ಗೌರವ ಹಾಗೂ ಕಲಿತ ಶಾಲೆಗೆ ಮತ್ತು ಶಿಕ್ಷಣ ನೀಡಿದ ಗುರುಗಳಿಗೆ ಧನ್ಯವಾದವನ್ನು ತಿಳಿಸುತ್ತಿದ್ದೇನೆ. ಬರುವ ದಿನದಲ್ಲಿ ಐಎಎಸ್ ಅಧಿಕಾರಿಯಬೇಕೆಂಬ ಮಹಾದಾಸೆ ಇದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ರೋವರ್ಸ್ ಕ್ಲಬ್ ನ ನಿರ್ದೇಶಕರಾದ ಜಿ.ವಿಜಯ್ ಕುಮಾರ್ ಮಾತನಾಡಿ, ಮಕ್ಕಳ ಸಾಧನೆ ಮತ್ತು ಪ್ರತಿಭೆಯನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಯ ಗೌರವ ಹೆಚ್ಚುವುದರ ಜೊತೆಗೆ ಅವರ ಪ್ರತಿಭೆ ಇನ್ನಷ್ಟು ಅನಾವರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಅಭಿರುಚಿಯನ್ನು ಪೋಷಕರೂ ಅರಿತುಕೊಂಡು ಅಗತ್ಯ ಸಹಕಾರ ನೀಡಬೇಕು. ಪ್ರತಿಯೊಬ್ಬ ಮಗುವಿನ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.

Rovers Club Shimoga ಮತ್ತೋರ್ವ ರೋವರ್ಸ್ ಕ್ಲಬ್ ನ ನಿರ್ದೇಶಕರಾದ ವಿನಾಯಕ್, ಅಗಡಿ ಮಹೇಶ್, ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದರು.

ಆತ್ಮೀಯ ಮಿತಲ್ ರವರು ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ರೋವರ್ಸ್ ಕ್ಲಬ್ ನ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ್, ಸುಜಾತ ಪ್ರದೀಪ್ ಇವರ ಪುತ್ರಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ರೋವರ್ಸ್ ಕ್ಲಬ್ ನ ನೂತನ ಸದಸ್ಯರಾದ ಆಡಿಟರ್ ಸುರೇಶ್, ಈಶ್ವರ್, ಎಸ್.ಎ.ಸತ್ಯನಾರಾಯಣ ಹಾಗೂ ಶಟಲ್ ಆಟಗಾರರು ಉಪಸ್ಥಿತರಿದ್ದರು. ಇವರಿಗೆ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರು ಅಭಿನಂದಿಸಿದರು.

Dinesh Gundu Rao ನಿಮ್ಮ ಆರೋಗ್ಯ ಸಮಸ್ಯೆಗೆ ತಜ್ಞರ ” ಸೆಕೆಂಡ್ ಒಪೀನಿಯನ್” ಬೇಕೆ? ಸರ್ಕಾರದ‌ ಉಚಿತ ಸಹಾಯವಾಣಿ ಸಿದ್ಧ.

0

Dinesh Gundu Rao ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೀರಾ? ತಜ್ಞ ವೈದ್ಯರಿಂದ ‘ಉಚಿತ ಎರಡನೇ ವೈದ್ಯಕೀಯ ಅಭಿಪ್ರಾಯ’ ಪಡೆಯಿರಿ!
24×7 ಉಚಿತ ಸಹಾಯವಾಣಿಗೆ ಕರೆ ಮಾಡಿ: 1800 425 8330
ವಾಟ್ಸಾಪ್‌ ಮೂಲಕದಾಖಲೆಗಳನ್ನು ಹಂಚಿಕೊಳ್ಳಿ.
ನಿಮ್ಮ ಆರೋಗ್ಯ, ನಮ್ಮ ಆದ್ಯತೆ!
ಇದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಈ ವಿನೂತನ ಸಹಾಯವಾಣಿಯ ನೆರವನ್ನ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Guarantee Schemes ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿ- ಜೆಡಿಎಸ್ ಅವರ ಹಸಿ ಹಸಿ ಸುಳ್ಳು ನಂಬಬೇಡಿ- ಸಿದ್ಧರಾಮಯ್ಯ.

0

Guarantee Schemes ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆದ್ದಿದೆ ಎನ್ನುವುದು ಹೆಮ್ಮೆಯ ವಿಷಯ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆಂಬ ಭರವಸೆ ಇದೆ.

ನೀವು ನಮಗೆ, ಈ ಸರ್ಕಾರಕ್ಕೆ ಕೊಟ್ಟ ಮತಗಳ ಘನತೆಯನ್ನು ನಾವು ಎತ್ತಿಹಿಡಿದಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದು ಸಿದ್ಧರಾಮಯ್ಯ ಹಾವೇರಿಯಲ್ಲಿ ಹೇಳಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ , ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು
ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಹಸಿ ಹಸಿ ಸುಳ್ಳು ನಂಬಬೇಡಿ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ 38 ಸಾವಿರ ಕೋಟಿ ಹೆಚ್ಚಾಗಿದೆ. ಮಾತ್ರವಲ್ಲ ಈ ಬಾರಿ ಬಂಡವಾಳ ವೆಚ್ಚ 83 ಸಾವಿರ ಕೋಟಿ ತೆಗೆದಿರಿಸಿದ್ದೀವಿ. ಕಳೆದ ವರ್ಷಕ್ಕಿಂತ 31 ಸಾವಿರ ಕೋಟಿ ಬಂಡವಾಳ ವೆಚ್ಚ ಹೆಚ್ಚಾಗಿದೆ. ಇದಲ್ಲದೆ ಹೆಚ್ಚುವರಿವಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗೆ ತೆಗೆದಿಟ್ಟಿದ್ದೇವೆ. ಒಟ್ಟು ಒಂದು ಲಕ್ಷದ 33 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ತೆಗೆದಿಟ್ಟಿದ್ದೀವಿ.

Guarantee Schemes ಆರ್.ಅಶೋಕ, ವಿಜಯೇಂದ್ರ ಈಗ ನಮ್ಮ ಸರ್ಕಾರದ ವಿರುದ್ಧ ನಕಲಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು.
ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಎನ್ನುವುದನ್ನು ಆರ್.ಅಶೋಕ್, ವಿಜಯೇಂದ್ರ ಅರ್ಥ ಮಾಡಿಕೊಳ್ಳಲಿ ವಿಪಕ್ಷದ ಬಗ್ಗೆ ಮಾತಿನ ಚಾಟಿ ಬೀಸಿದರು.

ಶಾಸಕ ಶ್ರೀನಿವಾಸ್ ಮಾನೆಯವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಪ್ರತಿಯೊಬ್ಬರಿಗೂ ಕಾಣುತ್ತಿದೆ. ಮುಂದೆ ಅವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ. ಕ್ಷೇತ್ರದ ಜನರು ಮಾನೆಯವರ ಜೊತೆ ಸದಾ ನಿಲ್ಲಬೇಕೆಂದು ಮನವಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

MESCOM ಮೇ 7. ಗಾಜನೂರು ಕ್ಯಾಂಪ್ ಸುತ್ತಮುತ್ತ. ವಿದ್ಯುತ್ ಸರಬರಾಜು ಇರುವುದಿಲ್ಲ.ಮೆಸ್ಕಾಂ ಪ್ರಕಟಣೆ

0

MESCOM ಗಾಜನೂರು 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣ ಕಾರ್ಯ ಹಮ್ಮಿಕೊಂಡಿದ್ದು, ಈ ಮಾರ್ಗದಿಂದ ಸರಬರಾಜಾಗುವ ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರು ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇ. 07 ರಂದು ಬೆಳಗ್ಗೆ 10-00 ರಿಂದ ಸಂಜೆ 6.00 ರವರೆಗೆವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

S N Channabasappa ದೇವಗಂಗೆಯನ್ನ ಧರೆಗಿಳಿಸಿ ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು,ಶ್ರೀಭಗೀರಥ- ಎಸ್.ಎನ್.ಚನ್ನಬಸಪ್ಪ

0

S N Channabasappa ಪ್ರಯತ್ನಕ್ಕೆ ಮತ್ತೊಂದು ಹೆಸರೇ ಶ್ರೀ ಭಗೀರಥ. ಪಿತೃಗಳಿಗೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ದೇವ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು ಭಗೀರಥರು ಎಂದು
ಶಾಸಕರಾದ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಭಗೀರಥರು ನಿರ್ಜೀವ ವಸ್ತುಗಳಿಗೆ ಸಂಸ್ಕಾರ ನೀಡಿದವರು. ಪಿತೃಗಳಿಗೆ ಶಕ್ತಿ ಕೊಡುವ ಸಲುವಾಗಿ ಗಂಗೆಯನ್ನು ಧರೆಗಿಳಿಸಿ ನಮ್ಮೆಲ್ಲರ ಪಾಪ‌ ಕಳೆಯುವ ಶ್ರೇಷ್ಠ ಕೆಲಸ ಮಾಡಿದರು. ಕಲುಷಿತವನ್ನು ಪವಿತ್ರಗೊಳಿಸುವುದು ಗಂಗೆ ಮಾತ್ರ. ಭಗೀರಥ ಪ್ರಯತ್ನದ ಪರಿಣಾಮ ಇದು. ತನ್ನನ್ನು ತಾನು ಶುದ್ದಗೊಳಿಸುವ ಶಕ್ತಿ ಆಕೆಗೆ ಮಾತ್ರ ಇದೆ. ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ.
ಬಿಹಾರದ ಸಾಮಾನ್ಯ ವ್ಯಕ್ತಿ ದಶರಥ ಮಂಝಿ ಗುಡ್ಡ ಕಡಿದು ರಸ್ತೆ ‌ಮಾಡಿತ್ತಾನೆ. ಅನೇಕ‌ ಜೀವ ರಾಶಿಗಳ‌ ಉಳುವಿಗೆ ಕಾರಣನಾಗುತ್ತಾನೆ. ಇದು ಭಗೀರಥ ಪ್ರಯತ್ನದ ಒಂದು ಉದಾಹರಣೆ ಎಂದರು.
ಇದು ಸಣ್ಣ ಸಮಾಜವಲ್ಲ.‌ ಪವಿತ್ರ ಗಂಗೆಯನ್ನು ನೀಡಿದ ಸಮಾಜ. ಎಲ್ಲ ಸಣ್ಣ ಸಮಾಜಗಳು ಒಟ್ಟಾಗಿದ್ದಾಗ ಇಡೀ ಸಮಾಜಕ್ಕೆ ಶಕ್ತಿ ಬರುತ್ತದೆ. ಭಗೀರಥ ಪ್ರಯತ್ನದ ಮೂಲಕವೇ ಸಮಾಜವನ್ನು‌ ಇನ್ನೂ ಉತ್ತಮ ರೀತಿಯಲ್ಲಿ‌ ಕಟ್ಟಿ, ಶ್ರೇಷ್ಠ ಕೊಡುಗೆಗಳನ್ನು ನೀಡಬೇಕಿದೆ ಎಂದರು.
ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ‌ ಕೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಉಪ್ಪಾರ ಸಮಾಜಕ್ಕೆ ಒಂದು ಉತ್ತಮ‌ ಇತಿಹಾಸವಿದೆ. ಬೇರೆ ಬೇರೆ ಸ್ಥಳಗಳಲ್ಲಿ ಈ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಉಪ್ಪಾರರು ಇಕ್ಷಾಕು ಕುಲಕ್ಕೆ ಸೇರಿದವರು. ಉಪ್ಪಾರ ಸಮಾಜದ ಹೆಸರು ಉಳಿಯಲು ಭಗೀರಥರು ಕಾರಣರಾಗಿದ್ದು,
ಪಿತೃಗಳಿಗೆ ಮುಕ್ತಿ ನೀಡಲು ಹಾಗು ಮನುಕುಲದ ಉದ್ದಾರಕ್ಕಾಗಿ ದೃಢ ಸಂಕಲ್ಪದಿಂದ ನಿರಂತರ ತಪಗೈದು ದೇವಗಂಗೆಯನ್ನು ಧರೆಗೆಳೆಸಿದರು ಶ್ರೀ ಭಗೀರಥರು.
ಗಂಗಾ ನದಿ ನೀರಿನಿಂದಾಗಿ ದೇಶದ ಹಲವು‌ಪ್ರದೇಶ ನೆಮ್ಮದಿ ಬದುಕು ನಡೆಸುತ್ತಿದ್ದು, ಭಗೀರಥರ ತಪಸ್ಸಿನ ಫಲ ಇದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಇಂತಹ ಮಹಾನ್ ಮಹರ್ಷಿಗಳ ಜಯಂತಿ ಆಚರಣೆ ಮಾಡುತ್ತಿರುವುದು ಅಭಿನಂದನೀಯ. ಇಂದು ಜಿಲ್ಲೆಯ ಎಲ್ಲೆಡೆ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಎಸ್.ಟಿ.ಹಾಲಪ್ಪ ಮಾತನಾಡಿ, ರಾಮನ ಕುಲದಲ್ಲಿ ಹುಟ್ಟಿದ ನಾವು,
ನಂತರದ ದಿನಗಳಲ್ಲಿ ತಮ್ಮ‌ ಕುಲ ಕಸುಬಿನಿಂದ ಗುರುತಿಸಲ್ಪಡುತ್ತಾ, ಮಣ್ಣಿನ‌ ಕೆಲಸ, ಕೆರೆ ಕಟ್ಟೆ, ಮನೆ ಕಟ್ಟುವ ಕೆಲಸದಲ್ಲಿ ತೊಡಗಿ ಶ್ರಮಜೀವಿಗಳಾದೆವು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದು ಸಮಾಜಕ್ಕೆ ಉತ್ತಮ‌ ಕೊಡುಗೆ ನೀಡಬೇಕು. ಸಮಾಜ ಬಾಂಧವರು ಒಗ್ಗಟ್ಟಿನಿಂದ ಇರಬೇಕು. ನಮ್ಮಶಕ್ತಿ‌ಯನ್ನು ನಾವು ತಿಳಿಯಬೇಕು ಎಂದರು.
S N Channabasappa ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ಮಾತನಾಡಿ, ಯಶಸ್ವಿ ತಪಸ್ಸಿನ‌ ಮೂಲಕ ಗಂಗಾ ಮಾತೆಯನ್ನು ಧರೆಗಿಳಿಸಿದವರು ಭಗೀರಥ. ಭರತ ಖಂಡದಲ್ಲಿ‌ಅತ್ಯಂತ ಪವಿತ್ರ ನದಿ ಗಂಗೆ. ಇಂತಹ ಗಂಗೆ ಮಾತೆಯನ್ನು‌ ಪಡೆದ ನಾವೇ ಧನ್ಯರು.
ಸಣ್ಣ ಸಣ್ಣ ಹಿಂದುಳಿದ ಸಮಾಜಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯ. ಉಪ್ಪಾರ ಸಮಾಜದಂತಹ ಸಮಾಜಗಳನ್ನು ಗುರುತಿಸಿ ಸ್ಥಾನಮಾನ ನೀಡಬೇಕು ಎಂದರು.
ಖಜಾಂಚಿ ನಾಗರಾಜ ಕಂಕಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಬೇಕು. ಸಮಾಜದವರೆಲ್ಲ ಒಗ್ಗೂಡಿ, ಒಗ್ಗಟ್ಟಿನಿಂದ ಮುಂದೆ ಬರಬೇಕು ಎಂದರು. ಇತಿಹಾಸ ತಿಳಿಯಬೇಕು. ಪ್ರಯತ್ನ ಎಂದಿಗೂ ಕೈಬಿಡಬಾರದು. ಛಲ ಬಿಡದೆ, ದೃಢ ಸಂಕಲ್ಪದಿಂದ ಉತ್ತಮ‌ ಫಲ ಸಿಗುತ್ತದೆ ಎಂದು ಭಗೀರಥರು ತಿಳಿಸಿಕೊಟ್ಟಿದ್ದು ನಾವೆಲ್ಲ ಅವರ ದಾರಿಯಲ್ಲಿ‌ ಸಾಗಬೇಕೆಂದರು.
ಶಿವಮೊಗ್ಗ ತಹಶಿಲ್ದಾರರಾದ ರಾಜೀವ್ ಸ್ವಾಗತಿಸಿದರು. ಸಮಾಜದ ಮುಖಂಡರು ಪಾಲ್ಗೊಂಡಿದ್ದರು

Klive Special Article ಕೆ ಲೈವ್ ಸಂಪಾದಕೀಯ ಪೊಲೀಸ್ ಇಲಾಖೆ ಇತ್ತಲೂ ಗಮನ ಹರಿಸಲಿ

0

Klive Special Article ಮಾಲಿನ್ಯಗಳ ಬಗ್ಗೆ ನಮ್ಮಲ್ಲಿ‌ಎಷ್ಟು ಬಗೆಯ ಚರ್ಚೆಗಳು ನಡೆಯುತ್ತವೆ. ಅವೆಲ್ಲ‌ ಕೇವಲ ಬೌದ್ಧಿಕ‌ ಮಟ್ಟದಲ್ಲೇ ಹೊರಳಾಡುತ್ತವೆ. ಒಂದು ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ.
ಪ್ರತಿಯೊಂದಕ್ಕೂ ಕಾನೂನು ಮಾಡಬೇಕು ಎನ್ನುವವರು ನಾವೆ.
ಅದನ್ನ ಸೂಕ್ತವಾಗಿ ಪಾಲಿಸದೇ ಇರುವವರೂ ನಾವೆ.
ಇದೆಂಥ ವಿಪರ್ಯಾಸ.?

ಈಗ ನಗರ ಪಟ್ಟಣಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಿದೆ.
ಓಡಾಡುವ ಜನಕ್ಕಿಂತ ವಾಹನಗಳ ಸಂಚಾರವೇ ಜಾಸ್ತಿ.

ಶಿವಮೊಗ್ಗದಲ್ಲಿ ಹೇಳುವುದಾದರೆ ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ , ಅಶೋಕ ವೃತ್ತ, ಶೀನಪ್ಪ ಶ್ರೇಷ್ಠಿ ವೃತ್ತ,
ತುಂಗಾ ಸೇತುವೆ ಬಳಿಯ ಶಂಕರಮಠ ವೃತ್ತ. ಹೀಗೆ ಸಂಚಾರಿ ದೀಪ ನಿಯಂತ್ರಕವಿದ್ದರೂ ಚಾಲಕರಿಗೆ ನಿಲ್ಲಿಸಲೂ ವ್ಯವಧಾನವಿಲ್ಲ. ಒಂದೇ ಸಮನೆ ಹಾರ್ನ್ ಮಾಡಿ ಕಿವಿಗಡಚಿಕ್ಕುತ್ತಾರೆ.
ಈ ವಾಹನಗಳ ಹಾರ್ನ್ ಗಳೋ ಒಂದೊಂದೂ ಭಿನ್ನಭಿನ್ನ. ಆದರೆ ಕೇಳುವ ಬಡಪಾಯಿ ನಮ್ಮ ಕಿವಿ ಒಂದೆ.

ಇಲ್ಲಿ ಮುಖ್ಯವಾಗಿ ಹೇಳಬೇಕಾಗಿರುವುದು ಕರ್ಕಶತೆ. ಅದೇನು ಶಬ್ದ,? ಅದೇನು ಯಾತನೆ? ಅಬ್ಬಬ್ಬಾ ಎನಿಸಿಬಿಡುತ್ತದೆ. ಅನವಶ್ಯಕವಾಗಿಯೂ ಕರ್ಕಶ ಹಾರ್ನ್ ಮಾಡುತ್ತಾ ಸಾಗುವ ಚಾಳಿ ಈಚೆಗೆ ಜಾಸ್ತಿಯಾಗಿದೆ. ಅದೇನು ಅವರ ಇಷ್ಟವೋ ಗೊತ್ತಿಲ್ಲ.
ಈ ಬಗ್ಗೆ ಜಿಲ್ಲಾ ಪೊಲೀಸ್ ಅನಾವಶ್ಯಕ ಹಾರ್ನ್ ಮಾಡಿ ವಾಹನ ಸಂಚರಿಸುವುದನ್ನ ನಿಷೇಧಿಸಿದೆ. ಅದನ್ನ ಪಾಲಿಸುವುದು ಸಾರ್ವಜನಿಕರಾದ ವಾಹನ ಮಾಲೀಕರು, ಚಾಲಕರ ಕರ್ತವ್ಯ. ಅದೇ ಕರ್ಕಶತೆ ನಮ್ಮ ಕಿವಿಗೂ ಬಿದ್ದರೆ ಹೇಗಿರುತ್ತದೆ? ಎಂಬುದನ್ನ ಚಾಲಕರು ಯೋಚಿಸಬೇಕು.
ಈ ಬಗ್ಗೆ ಈ ಹಿಂದೆ ಪೊಲೀಸ್ ಅಧಿಕಾರಿಗಳೊಬ್ಬರು
ಬಸ್ ಚಾಲಕನನ್ನು ಕೆಳಗಿಳಿಸಿ ಅವನ ಬಸ್ಸಿನ ಹಾರ್ನ್ ಆತನ ಕಿವಿಗೇ ಕೇಳಿಸುವ ಶಿಕ್ಷೆ ನೀಡಿದ್ದರು. ಆದರೂ ನಮ್ಮವರಿಗೆ ಬುದ್ಧಿ ಬಂದಿಲ್ಲ. ಇದು ವಾಹನ ಸಂಚಾರದ ಬಗ್ಗೆ ನಾವು ಪಡುತ್ತಿರುವ ಮಾಲಿನ್ಯ ಶಿಕ್ಷೆ.

ಆದರೆ ಇನ್ನೂ ಒಂದಿದೆ. ಅದೇ ಪಾರ್ಟಿ ಹಾಲ್, ಹೋಟೆಲ್ ಗಳು, ಕಲ್ಯಾಣ ಮಂಟಪಗಳಲ್ಲಿ ತಡರಾತ್ರಿ ಹಾಕುವ “ಸ್ಪೀಕರ್ “ಗಳಿಗೆ ಜೋಡಿಸಿದ “ಊಫರ್” ಗಳ ಬಲವಂತ ಶಿಕ್ಷೆ, ಹ್ಯರಾಸ್ ಮೆಂಟ್ ಅಂದರೂ ತಪ್ಪಲ್ಲ.

Klive Special Article ಮಾಧ್ಯಮಕ್ಕೆ ಬಂದಿರುವ ಸಾರ್ವಜನಿಕ ದೂರುಗಳ ಪ್ರಕಾರ
ಮನೆಗಳಿರುವ ಬಡಾವಣೆಗಳಲ್ಲಿ‌ ಕೆಲವೆಡೆ ಪಾರ್ಟಿ ಹಾ್ ಇದೆ. ಉದಾ: ಹರ್ಷ ದಿ ಫರ್ನ್ ಹೋಟೆಲ್ ‌ಇರುವ ಪುರದಾಳ್ ಕ್ರಾಸ್ ನಲ್ಲಿ‌ ಈ‌ಪಾರ್ಟಿಹಾಲ್ ಇದೆ. ಅಲ್ಲಿ‌ ತಿಂಗಳಲ್ಲಿ‌ ಒಂದಿಲ್ಲೊಂದು ಸಮಾರಂಭ ಜರುಗುತ್ತದೆ. ಅಲ್ಲಿ‌ ಸ್ಪೀಕರ್ ಗೆ ಊಫರ್ ಜೋಡಿಸಿ ಬಡಾವಣೆಗಳ ಜನರ ನಿದ್ರೆಗೆ ಭಂಗ, ಶಾಂತಿ ನೆಮ್ಮದಿಗೆ ಸಂಚಕಾರ ಬಂದುಬಿಟ್ಟಿದೆ.

ನಿವಾಸಿಗಳ ಮುಖಂಡರು ಸ್ವತಹಜ ಅಲ್ಲಿಗೆ
ಹೋಗಿ ಮೈಕ್ ಹಾಕಿಕೊಳ್ಳಿ, ಆದರೆ ಊಫರ್ ಜೋಡಿಸಬೇಡಿ ಅಂತ ಸೌಜನ್ಯ ತೋರಿ‌ಹೇಳಿದರೆ,ಅದಕ್ಕೂ ಜಗ್ಗದ ಅಲ್ಲಿಯ‌ ಆಸಾಮಿ “ಮೈಕ್ ಸೆಟ್ಟಿಗೆ, ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟರ್ತೀವಿ. ನಿಮ್ಮದೊಳ್ಳೆ ಆಯ್ತಲ್ಲ” ಎಂಬ ಧಿಮಾಕಿನ ಉತ್ತರ ನೀಡಿದ್ದಾರೆ.

ಇದರ ಬಗ್ಗೆ ಎಸ್ ಪಿ ಅವರಿಗೆ, ತುಂಗಾನಗರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಈ‌
ಪಾರ್ಟಿಹಾಲ್ ತನ್ನದೇ ವರಸೆಯಲ್ಲಿ ನಡೆಯುತ್ತಿದೆ.
ಈ ಬಗ್ಗೆ ಮೋದಿ ಅವರ ಪಿಎಂ ಆ್ಯಪ್‌ಗೂ ದೂರು‌ನೀಡಿ ಅದು ಜಿಲ್ಲಾ ಪೊಲೀಸ್ ಕಾರ್ಯಾಲಯಕ್ಕೆ ಬಂದು ,ಅಲ್ಲಿಂದ ಸಿಬ್ಬಂದಿ ಆಗಮಿಸಿ ಇರುವ ಸಹಜ ತೊಂದರೆ ಒಪ್ಪಿದರು
ಮಹಜರ್ ನಡೆಸಿ ಪಾರ್ಟಿಹಾಲ್ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಂಡರು. ಆದರೆ ಅದೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇನ್ನ ಅಲ್ಲಿನ ಹೋಟೆಲ್ ನಲ್ಲೂ ಇದೇ ಪಾಡು. ಹತ್ತಿರದ ನಿವಾಸಿಗಳು
ಶಾಂತಿಯಿಂದ ಇರುವಂತಿಲ್ಲ.ಮೆರವಣಿಗೆ ಬರುವವರು ಮನೆಗಳ ಮುಂದೆಯೇ ಸಾಗಬೇಕು. ಆದರೆ ಅಲ್ಲಿಯೇ ನಿಂತು ಕುಣಿದು ಕುಪ್ಪಳಿಸುತ್ತಾರೆ. ಬ್ಯಾಡ್ ಸೆಟ್ಟಿನ ಭಯಂಕರ ಮಟ್ಟುಗಳನ್ನ ಎದೆ ಬಿಗಿ ಹಿಡಿದು ಬಲವಂತ ಕೇಳಬೇಕು. ಗೃಹಿಣಿಯರು ಈ ಬಗ್ಗೆ
ಹೇಳಿದರೆ ಅವರ ಮೇಲೇಯೇ ರೇಗುತ್ತಾರಂತೆ. ಈ ಬಗ್ಗೆ ಮಹಿಳೆಯರು ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ.

ಇಲ್ಲಿರುವ ಪ್ರಶ್ನೆ ಎಂದರೆ. ಅನಾವಶ್ಯಕ ಹಾರ್ನ್ ಮಾಡುವುದನ್ನ ನಿಷೇಧಿಸಿದ ಪೊಲೀಸ್ ಇಲಾಖೆಯು ಬಡಾವಣೆಗಳಲ್ಲಿನ ಅನಾವಶ್ಯಕ ಶಬ್ದ ಮಾಲಿನ್ಯದ ಬಗ್ಗೆ ಏಕೆ ಕ್ರಮ ಕೈಗೊಳ್ಳುವುದಿಲ್ಲ.?
112 ಕ್ಕೆ ಪ್ರತೀ ಬಾರಿಯೂ ಫೋನಾಯಿಸುವುದು. ದೀಪದ ಗೂಟದ ವ್ಯಾನು ಬರುವುದು. ಸಿಬ್ಬಂದಿ ಅಲ್ಲಿಗೆ ಹೋಗಿ ಎಚ್ಚರಿಸುವುದು. ಎದುರಿಗೆ ಇರುವಷ್ಟು ಹೊತ್ತು‌ಶಬ್ದ ಕಡಿಮೆಗೊಳಿಸುವುದು. ಅವರು ವಾಪಸ್ ಹೋದ ನಂತರ ಮತ್ತೆ ಯಥಾರೀತಿ ಡಬಡಬ ಊಫರ್ ಶಿಕ್ಷೆ. 112 ವ್ಯಾನ್ ಸಿಬ್ಬಂದಿ ಈ ಪಾರ್ಟಿಹಾಲ್,ಹೋಟೆಲ್ ಮಂದಿಗೆ ಪರಿಣಾಮಕಾರಿಯಾಗಿಲ್ಲ ಎಂಬ ಸತ್ಯ ಸಾರ್ವಜನಿಕರಿಗೆ ಗೊತ್ತಾಗಿಬಿಟ್ಟಿದೆ.

ಹೋಟೆಲ್ ಓರ್ವ ಪ್ರತಿಷ್ಠಿತರದ್ದೆ? ಪಾರ್ಟಿ ಹಾಲ್ ಕೂಡ
ಓರ್ವ ವಿಐಪಿಗೆ ಸಂಬಂಧಿಸಿದೆಯೆ? ಎಂಬ ಸಂದೇಹ ಅನಾವಶ್ಯಕ ಸಾರ್ವಜನಿಕರನ್ನ ಕಾಡುತ್ತಿದೆ.
ಈಗ ಪರಿಹಾರ ನೀಡುವವರು ಯಾರು?
ಇಷ್ಟೆಲ್ಲ ಬರೆಯಲು
ಪೊಲೀಸ್ ಇಲಾಖೆಯು ಖಾತೆಯಲ್ಲಿ ಪೋಸ್ಟ್ ಮಾಡಿದ ಎಚ್ಚರಿಕೆ ಸಂದೇಶ ಓದಿದ ನಂತರ ಅನಿಸಿತು.
ಈ ಪೋಸ್ಟ್ ಅನಾವಶ್ಯಕ ಅಲ್ಲ. ಸಂದೇಶಕ್ಕೆ ಬೆಲೆಯಿದೆ. ಆದರೆ ಬಡಾವಣೆಯೊಳಗಿನ ಜನತೆಯ ಇಂಗಿತವನ್ನೂ ಅದೇ ರೀತಿ ಅರ್ಥೈಸಿ, ಸ್ಪಂದಿಸಬೇಕಲ್ಲವೆ?

Dr. G Parameshwara ಕೋಮು ಹಿಂಸಾಚಾರ ನಿಗ್ರಹ ಕಾರ್ಯಪಡೆ ರಚಿಸಲಾಗುವುದು- ಗೃಹ ಸಚಿವ ಡಾ.ಜಿ.ಪರಮೇಶ್ವರ.

0

Dr. G Parameshwara ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆಯ ರೀತಿಯಲ್ಲಿಯೇ ಪ್ರತ್ಯೇಕ ‘ಆ್ಯಂಟಿ ಕಮ್ಯುನಲ್ ಟಾಸ್ಕ್ ಪೋರ್ಸ್’ (ಕೋಮು ಹಿಂಸಾಚಾರ ನಿಗ್ರಹ ಕಾರ್ಯಪಡೆ) ರಚಿಸಲಾಗುವುದು. ಕೋಮು ಸಂಬಂಧಿ ಪ್ರಕರಣಗಳ ನಿಗ್ರಹಕ್ಕೆ ಈ ಟಾಸ್ಕ್ ಫೋರ್ಸ್‌ಗೆ ಸಂಪೂರ್ಣ ಅಧಿಕಾರ ನೀಡಲಾಗುವುದು‌ಎಂದು ರಾಜ್ಯ ಗೃಹಸಚಿವ‌ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

CM Siddaramaiah ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಸಾಧಿಸಿರುವ ತಾಲ್ಲೂಕುಗಳನ್ನ ಗುರುತಿಸಿ ಗುಣಮಟ್ಟ ಸುಧಾರಣೆಗೆ ಗಮನ- ಸಿದ್ಧರಾಮಯ್ಯ.

0

CM Siddaramaiah ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು. ಕಳೆದ ಬಾರಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ಫಲಿತಾಂಶ 8℅ ಪ್ರಗತಿ ಸಾಧಿಸಿದೆ ಎನ್ನುವುದು ಸಂತಸದ ವಿಚಾರ.

ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಥವಾ ಈಗ ಪಡೆದಿರುವ ಅಂಕಗಳಿಗಿಂತ ಉತ್ತಮ ಅಂಕ ಗಳಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಮತ್ತೆ ಪರೀಕ್ಷೆ ಬರೆಯುವ ಅವಕಾಶವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಉತ್ತಮ‌ ಅಂಕಗಳ ಜೊತೆ ಶೈಕ್ಷಣಿಕ ಜೀವನದ ಮುಂದಿನ ಗುರಿಯೆಡೆಗೆ ಹೆಜ್ಜೆಯಿರಿಸಿ.

CM Siddaramaiah ರಾಜ್ಯದಲ್ಲಿ ಅತಿ ಕಡಿಮೆ ಫಲಿತಾಂಶದ ಸಾಧನೆ ಮಾಡಿರುವ ತಾಲೂಕುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಶಿಕ್ಷಣ ಸಚಿವರೂ ಮಾತ್ರವಲ್ಲ ನಾನು ಕೂಡ ಖುದ್ದು ಗಮನ ಹರಿಸುತ್ತೇನೆ ಎಂದು ಪ್ರಸ್ತುತ ಸಾಲಿನ ಎಸ್ಎಸ್ಎಲ್ ಸಿ‌ ಪರೀಕ್ಷೆಯ‌ ಫಲಿತಾಂಶಗಳ‌ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು‌ ತಮ್ಮ ಅನಿಸಿಕೆಯನ್ನು ಜಾಲತಾಣ x ಖಾತೆಯಲ್ಲಿ‌ ಹಂಚಿಕೊಂಡಿದ್ದಾರೆ.

ಸಮಾಜದ ಎಲ್ಲ ಬಗೆಯ ಅಸಮಾನತೆಗಳ ನಿವಾರಣೆಗೆ ಇರುವ ಪರಿಣಾಮಕಾರಿ ಮಾರ್ಗವೆಂದರೆ ಅದು ಶಿಕ್ಷಣ. ಶಿಕ್ಷಣದ ಮೂಲಕ ಬದಲಾವಣೆ ತರಲು ನಾವು ಬದ್ಧರಿದ್ದೇವೆ ಎಂದು ಮುಖ್ಯಮಂತ್ರಿಗಳು‌ ತಿಳಿಸಿದ್ದಾರೆ.

Shimoga News ದಸಂಸ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಸಂಚಾಲಕರಾಗಿ ಎಂ.ಮನ್ಸೂರ್ ನೇಮಕ

0

Shimoga News ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಚಾಲಕರನ್ನಾಗಿ ಕ್ರಿಯಾಶೀಲ ಯುವಕ ಶಿವಮೊಗ್ಗದ ಎಂ.ಮನ್ಸೂರ್ ಲಕ್ಕವಳ್ಳಿಯವರನ್ನು ನೇಮಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಆದೇಶಿಸಿದ್ದಾರೆ.

Shimoga News ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಿ ಎಸ್ ಎಸ್ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಸಮುದಾಯದ ಜಾಗೃತಿಗಾಗಿ ಹಾಗೂ ಸಂವಿಧಾನಾತ್ಮಕ ಹಕ್ಕೊತ್ತಾಯಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.

Soraba News ಸೊರಬ ನಗರದಲ್ಲಿ ಮಳೆಯಿಂದ ಜನಕ್ಕೆ ಅನಾನುಕೂಲತೆ ಪರಿಶೀಲಿಸಿದ ಪುರಸಭಾಧ್ಯಕ್ಷ ಪ್ರಭು ಮೇಸ್ತ್ರಿ

0

Soraba News ಸೊರಬ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಎಡಬಿಡದೇ ಸುರಿದ ಮಳಿಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮಸ್ತಿಷ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದ ಮುಂಭಾಗ, ಸಾಗರ ರಸ್ತೆಯ ಲಯನ್ಸ್ ಕ್ಲಬ್ ಹಾಗೂ ಹಳೇ ಬಿಇಓ ಕಚೇರಿ ಮುಂಭಾಗದ ಚರಂಡಿಯಲ್ಲಿ ಹೂಳು ತುಂಬಿದೆ. ಇದರಿಂದ ಮಳೆ ಬಂದ ತಕ್ಷಣ ನೀರು ರಸ್ತೆ ಸೇರುತ್ತದೆ ಕೂಡಲೇ ಅಧಿಕಾರಿಗಳು ಹೂಳು ತಗೆಸಬೇಕು ಎಂದು ಸೂಚನೆ ನೀಡಿದರು.
ಮುಖ್ಯರಸ್ತೆಯ ನಿಸಾರ್ ಪಾನ್ ಶಾಪ್ ಎದುರು ಹಾಗೂ ಪಂಚಾನನ ಸ್ಟೋರ್, ಸಂತೋಷ್ ಡಿಪಾರ್ಟೆ್ಮಂಟ್ ಸ್ಟೋರ್ ಮುಂಭಾಗ ರಸ್ತೆಯಲ್ಲಿ ಮಳೆ ಬಂದರೆ ನೀರು ಸಮರ್ಪಕವಾಗಿ ಚರಂಡಿ ಸೇರುತ್ತಿಲ್ಲ ಎಂದು ಸಾರ್ವಜನಿಕ ದೂರಿದರು. ಈ ವೇಳೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷರು, ಬಾಕ್ಸ್ ಚರಂಡಿಗೆ ನೀರು ಸೇರುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಪಟ್ಟಣದ ಸ್ವಚ್ಛತೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಮಳೆಗಾಲ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
Soraba News ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಸ್. ರಣಜಿತ್ ಕುಮಾರ್, ಆರೋಗ್ಯ ನಿರೀಕ್ಷಕ ಎ.ಎನ್. ರವಿಕುಮಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.
ಸೊರಬ ಪಟ್ಟಣದಲ್ಲಿ ಎಡಬಿಡದೇ ಸುರಿದ ಮಳಿಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತಿçà ಭೇಟಿ ನೀಡಿ ಪರಿಶೀಲನೆ ನಡೆಸಿದರು.