Friday, April 18, 2025
Friday, April 18, 2025

Rotary Shivamogga ರೋಟರಿ ಪೂರ್ವಯುವಶಕ್ತಿ ನವಭಾರತ ನಿರ್ಮಾಣಕ್ಕೆ ಬಹಳ ಪ್ರಮುಖ- ಡಾ.ಪರಮೇಶ್ವರ್ ಡಿ.ಶಿಗ್ಗಾಂವ್

Date:

Rotary Shivamogga ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯವಾದುದೆಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅವರು ಇಂದು ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಭಾರತದಲ್ಲಿ ಯುವ ಜನರು ಅಪಾರ ಸಂಖ್ಯೆಯಲ್ಲಿದ್ದು, ಯುವ ಶಕ್ತಿ ನವ ಭಾರತದ ನಿರ್ಮಾಣಕ್ಕೆ ಬಹಳ ಪ್ರಮುಖವಾಗಿರುತ್ತದೆಂದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೋರಾಟದ ಮನೋಭಾವದ ಜೊತೆಗೆ ರಾಷ್ಟç ನಿರ್ಮಾಣದಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆಯುವುದು ಕೂಡ ಅವಶ್ಯಕತೆ ಇದೆ ಎಂದು ತಿಳಿಸಿದರು.
ರೋಟರಿ ಪೂರ್ವ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಇವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ, ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಪ್ರಸ್ತುತದಲ್ಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುಕ್ತ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡಬೇಕೆಂದು ಕರೆ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಇವರು ಈ ಸಂದರ್ಭದಲ್ಲಿ ಮಾತನಾಡುತ್ತ, ಪ್ರಸ್ತುತ ಮಾಹಿತಿ ತಂತ್ರಜ್ಞಾನ ಈ ಯುಗದಲ್ಲಿ ವಿದ್ಯಾಥಿಗಳು ತಮ್ಮ ಹಕ್ಕಿನ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕೆಂದು, ನಾನಾ ಕಾರಣದಿಂದ ಭ್ರೂಣ ಹತ್ಯೆಯಂತ ಹೀನ ಘಟನಾವಳಿಗಳು ನಡೆಯುತ್ತಿದ್ದು, ಮುಖ್ಯವಾಗಿ ಈ ನಿಟ್ಟಿನಲ್ಲಿ ಹಕ್ಕು ಮತ್ತು ಕಾನೂನಿನ ಅರಿವನ್ನು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಮಕ್ಕಳಿಗೆ ಸಹಜವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು & ವಿಕಸನ ಹೊಂದುವ ಹಕ್ಕುಗಳೆಲ್ಲವನ್ನು ನಮ್ಮ ಸಂವಿಧಾನದ ಅಡಿಯಲ್ಲಿಯೇ ಪ್ರದತ್ತವಾಗಿರುವ ಪ್ರಯುಕ್ತ ಈ ಒಂದು ಅರಿವನ್ನು ವಿದ್ಯಾರ್ಥಿಗಳ ದೆಸೆಯಲ್ಲಿ ಮೂಢಿಸುವುದು ಅತೀ ಅವಶ್ಯಕವಾಗಿರುತ್ತದೆಂದು ಸಭೆಯಲ್ಲಿ ಅಭಿಪ್ರಾಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ ಡಾ|| ಹರ್ಷ ಹೆಚ್.ಸಿ., ಮಕ್ಕಳ ತಜ್ಞರು, ಇವರು ಮಾತನಾಡುತ್ತ, ಪ್ರತಿಯೊಬ್ಬ ಮಕ್ಕಳು ದೈನಂದಿನ ಶುಚಿತ್ವದ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಕರೆ ನೀಡಿದರು.
Rotary Shivamogga ರೋಟರಿ ಪೂರ್ವದ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್ ಇವರು ಮಾತನಾಡುತ್ತ, ಮಕ್ಕಳ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತ, ರಾಷ್ಟçದ ಮೊದಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಜವಹರಲಾಲ್ ನೆಹರು ಅವರು ಮಕ್ಕಳ ಬಗ್ಗೆ ಹೊಂದಿದ ಪ್ರೀತಿ ಮತ್ತು ಸದಾಭಿಪ್ರಾಯವನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.
ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಸುರೇಶ್ ಕುಮಾರ್ ಬಿ., ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ರೊ. ನಾಗವೇಣಿ ಎಸ್.ಆರ್. & ನಾಗರಾಜ್ ಎಂ.ಪಿ., ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಶ್ರೀಮತಿ ಲತಾ ಸೋಮಶೇಖರ್, ಮಾಜಿ ಅಧ್ಯಕ್ಷೆ ಶ್ರೀಮತಿ ಬಿಂದು ವಿಜಯ್ ಕುಮಾರ್, ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ್ ಆರ್., ಇವರುಗಳು ಉಪಸ್ಥಿತರಿದ್ದರು. ಹಾಜರಿದ್ದ ಎಲ್ಲರನ್ನು ಶ್ರೀ ಪ್ರದೀಪ್ ಕುಮಾರ್ ಇವರು ಸ್ವಾಗತಿಸಿದ್ದು, ಶ್ರೀಮತಿ ರೂಪ ರಾವ್ ಇವರು ಕಾರ್ಯಕ್ರಮ ನಿರೂಪಣೆ ನಡೆಸಿದ್ದು, ಶ್ರೀಮತಿ ರೇಖಾ ಎಂ., ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....