Monday, March 2, 2026
Monday, March 2, 2026
Home Blog Page 309

S N Channabasappa ಬುದ್ದ ಭಾರತಕ್ಕಲ್ಲದೆ ಇಡೀ ಜಗತ್ತಿಗೆ ಬೆಳಕು ನೀಡಿದ್ದಾರೆ: ಎಸ್.ಎನ್.ಚನ್ನಬಸಪ್ಪ

0

S N Channabasappa ಬುದ್ದ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆಳಕು ನೀಡಿದ್ದು, ಆ ಮೂಲಕ ಶಾಂತಿ, ಸಹಬಾಳ್ವೆಯ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಬುದ್ದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದೇಶÀಕ್ಕೆ ಬುದ್ದ, ಬಸವ, ಅಂಬೇಡ್ಕರ್ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಇವರುಗಳು ಆಧ್ಯಾತ್ಮಿಕ, ವೈಚಾರಿಕತೆ ನೆಲೆಗಟ್ಟಿನ ಮಾರ್ಗ ತೋರಿಸಿದ್ದು, ಅದರಲ್ಲಿ ಬುದ್ದ ಸದಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುದ್ದನ ನಡುವಳಿಕೆ, ಪದ್ದತಿ ಈ ದೇಶಕ್ಕೆ ಪೂರಕವಾಗಿತ್ತು. ಅಂಬೇಡ್ಕರ್ ಬುದ್ದನನ್ನು ಅಪ್ಪಿಕೊಂಡರು ಎಂದರು.
ಬುದ್ದ ಈ ದೇಶಕ್ಕೆ ಶಾಂತಿಯನ್ನು ಸಾರಿದ್ದಾರೆ. ಆ ದಿಸೆಯಲ್ಲೆ ಬೆಳಗ್ಗೆ ಎದ್ದ ತಕ್ಷಣ ನಾವು ಬುದ್ದನನ್ನು ನೆನೆಯುತ್ತೇವೆ. ಆತ ಸಹಜವಾದ ಕುಟುಂಬದಿAದ ಬಂದ ವ್ಯಕ್ತಿಯಾಗಿದ್ದು, ಇವತ್ತು ಇಡೀ ಜಗತ್ತೇ ಮಾತಾಡುವಂತಾಗಿದೆ. ನಾವೆಲ್ಲಾ ಆತನಂತೆ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಈ ದೇಶದಲ್ಲಿ ಶರಣಾಗಬೇಕು. ಬುದ್ದಂ ಶರಣಂ ಗಚ್ಚಾಮಿ ಎಂಬ ಆಶಯವನ್ನು ಪ್ರತಿಯೊಬ್ಬ ವ್ಯಕ್ತಿ ತಮ್ಮೊಳಗೆ ಅಳವಡಿಸಿಕೊಳ್ಳಬೇಕು. ಬುದ್ದ, ಬಸವ ಅಂಬೇಡ್ಕರ್ ಈ ದೇಶದ ತ್ರಿವೇಣಿ ಸಂಗಮ. ಈ ಮೂರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ನಡೆಯಬೇಕು ಎಂದರು.
ಶಿಕಾರಪುರದ ಹೊಸೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರಘು ಆರ್.ಮಲ್ಲಣ್ಣರ್ ಮಾತನಾಡಿ, ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಬುದ್ದನ ತತ್ವಗಳು ಅನೇಕ ರೀತಿಯಲ್ಲಿ ಪ್ರಚಾರವಾಗಿದೆ. ತತ್ವಶಾಸ್ತçದ ಪ್ರತಿಪಾದಕದ ೯ ನೇ ದರ್ಶನವನ್ನು ಬುದ್ದ ದರ್ಶನವೆಂದು ವಿದ್ವಾಂಸರುಗಳು ಹೇಳಿದ್ದು, ಇದನ್ನು ಪ್ರತೀಕಾರದ ದರ್ಶನವೆಂದು ಸಹ ಕರೆದಿದ್ದಾರೆ. ಈ ದೇಶದ ಎಲ್ಲಾ ಧರ್ಮಕ್ಕೆ ರಾಜಾಶ್ರಯವಿದೆ. ಆದರೆ ಬುದ್ದನ ಧರ್ಮಕ್ಕೆ ಯಾವುದೇ ರಾಜಾಶ್ರಯವಿಲ್ಲ. ಆದರೆ ಇಡೀ ದೇಶವೇ ಬುದ್ದ ತತ್ವದ ಮಾರ್ಗವನ್ನು ಒಪ್ಪಿಕೊಂಡು ಮುನ್ನಡೆಯುತ್ತಿದೆ.
ಬುದ್ದನ ಕೃತಿ, ತತ್ವದ ಮೇಲೆ ಇಂದಿಗೂ ಅತ್ಯಧಿಕವಾಗಿ ಸಂಶೋಧನೆ ನಡೆಯುತ್ತಿದೆ. ಜಗತ್ತಿನಲ್ಲಿ ಅಷ್ಟು ಸಂಶೋಧನೆ ಯಾವ ಕೃತಿಯ ಮೇಲು ನಡೆದಿಲ್ಲ. ರಾಜ ಕುಟುಂಬದಲ್ಲಿ ಹುಟ್ಟಿದ್ದರೂ ಯುದ್ಧಾಭ್ಯಸದಲ್ಲಿ ತೊಡಗದೆ ಬಾಲ್ಯದಿಂದಲ್ಲೆ ಮನುಷ್ಯ ಪ್ರೀತಿ ಹೊಂದಿದ್ದ ಬುದ್ದ ಭವಿಷ್ಯದಲ್ಲಿ ಇಡೀ ಜಗತ್ತಿಗೆ ಮನುಷ್ಯ ಪ್ರೀತಿ ಹಾಗೂ ಶಾಂತಿಯನ್ನು ಸಾರಿದ. ರಾಜ ಕರ್ತವ್ಯವನ್ನು ತಿಳಿಸಿದ ತನ್ನ ತಾಯಿಗೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಯಾವ ಕರ್ತವ್ಯವೆಂದು ಪ್ರಶ್ನಿಸಿದ. ತಂದೆ ಶುದ್ದೋಧನು ಕೂಡ ಬುದ್ದನಿಗೆ ಸಾಮಾಜಿಕ ಅರಿವು ಮೂಡಿಸಲು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ, ಅಲ್ಲಿನ ರೈತರೊಂದಿಗೆ ಭೂಮಿಯಲ್ಲಿ ಉಳುಮೆ ಮಾಡುವುದು ಅವರೊಂದಿಗೆ ಸ್ನೇಹದೊಂದಿಗೆ ಬೆರೆಯುವುದನ್ನು ಕಲಿಸುತ್ತಿದ್ದ ಎಂದು ಹೇಳಿದರು.
S N Channabasappa ಬುದ್ದ ಅಂಡ್ ಇಸ್ ಧಮ್ಮದಲ್ಲಿ ಅಂಬೇಡ್ಕರ್, ರೋಹಿಣಿ ನದಿಯ ವಿವಾದದಲ್ಲಿ ಶಾಂತಿ ಸಂಧಾನ ಸಲಹೆ ನೀಡಿದ ಬುದ್ದ, ಆದರೆ ಕೋಸಲ ರಾಜ್ಯದ ಸೈನಿಕರು ಇದನ್ನು ಒಪ್ಪದೆ ಬುದ್ದನಿಗೆ ಸೈನಿಕರ ಒಮ್ಮತ ಅಭಿಪ್ರಾಯದಿಂದ ಯುದ್ದವನ್ನು ಒಪ್ಪಿಕೊಳ್ಳಬೇಕು, ಶುದ್ದೋಧನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುತ್ತದೆ ಹಾಗೂ ಸಿದ್ದಾರ್ಥನನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂಬ ಮೂರು ಷರತ್ತು ವಿಧಿಸುತ್ತಾರೆ. ಬುದ್ದ ತಾನು ಬಹಿಷ್ಕಾರಕ್ಕೆ ಒಳಾಗುವುದಕ್ಕೆ ಆಯ್ಕೆ ಮಾಡಿಕೊಂಡು ರಾಜ್ಯವನ್ನು ತೊರೆದು ಹೋಗುತ್ತಾನೆ. ಅಲ್ಲಿಂದ ಆರಂಭವಾದ ಆತನ ಸನ್ಯಾಸಿಯ ಬದುಕು ನಂತರ ಸಮಾಜದಲ್ಲಿ ಜಾತಿ ತಾರತಮ್ಯ, ಪ್ರಾಣಿಬಲಿ ಇಂತಹ ಹಲವಾರು ಸಮಸ್ಯೆಗಳನ್ನು ನಾಶ ಮಾಡಲು ಮಾರ್ಗ ಅಹಿಂಸೆ, ಶಾಂತಿಯ ತತ್ವ ಮಾರ್ಗವನ್ನು ಕಂಡುಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಲೆ , ಸುಲಿಗೆ, ಅತ್ಯಾಚಾರಗಳಂತಹ ಅನಾಚಾರಗಳು ದೇಶದ ಉದ್ದಗಲಕ್ಕೂ ಹರಡಿದೆ. ಇದನ್ನು ನಾಶ ಮಾಡಲು ಬುದ್ದ ತತ್ವಗಳಿಂದ ಮಾತ್ರ ಸಾಧ್ಯ. ಈಗೀನ ಯುವಕರು ಕೆಟ್ಟಚಟಗಳಿಗೆ ದಾಸರಾಗಿ ಕಿನ್ನತೆ ಒಳಗಾಗುತ್ತಿದ್ದಾರೆ. ಇದರಿಂದ ಆಚೆ ಬರಲು ಬುದ್ದ ತತ್ವವೇ ಸರಿಯಾದ ಮಾರ್ಗ. ಹಾಗೂ ಜಾತಿ, ಧಾರ್ಮಿಕ ಸಂಘರ್ಷದಲ್ಲಿ ಬೆಳೆಯುತ್ತಿದ್ದಾರೆ. ಇದು ಭವಿಷ್ಯದ ಭಾರತಕ್ಕೆ ಮಾರಕವಾಗುತ್ತಿದೆ. ಇವರಿಗೆ ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಗಳ ತಿಳಿಸುವ ಮೂಲಕ ಶಾಂತಿ, ಸಹಬಾಳ್ವೆಯನ್ನು ಕಲಿಸಬೇಕು ಎಂದರು.
ಭಾರತ ದೇಶದವರು ಬುದ್ದನನ್ನು ಅಹಿಂಸೆ, ಶಾಂತಿ ತತ್ವಗಳ ಒಳಗೊಂಡAತೆ ಕಂಡರೆ, ವಿದೇಶಿಯರು ಬುದ್ದನನ್ನು ಒಬ್ಬ ರಾಜಕೀಯ ತಜ್ಞನಂತೆ ನೋಡಿದ್ದಾರೆ. ಬುದ್ದ ದೇಶದಲ್ಲಿನ ಶಾಸ್ತ್ರ, ಪುರಾಣ, ವೇದಗಳಿಗೆಲ್ಲಾ ವೈಜ್ಞಾನಿಕವಾಗಿ ಉತ್ತರ ಕೊಟ್ಟಿದ್ದಾರೆ. ದೇವರ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿದ್ದ ಬುದ್ದ, ನಿನಗೆ ನೀನೇ ಬೆಳಕು ಎಂದು ಜಗತ್ತಿಗೆ ಸತ್ಯ ಸಾರಿದ. ಯಾವುದೇ ದೇವರಿಲ್ಲ, ನಮಗಾಗುವ ಸಂಕಷ್ಟಗಳಿಗೆ, ದುಃಖಗಳಿಗೆ ದೇವರ ಬಳಿ ಹೋದರೆ ಪರಹಾರ ಸಿಗುವುದಿಲ್ಲ. ನಮ್ಮ ದುಃಖಕ್ಕೆ ಕಾರಣವೆನೆಂಬುದು ನಾವೇ ಹುಡುಕಿಕೊಳ್ಳಬೇಕು. ಕಾರ್ಯ, ಕಾರಣ ಸಂಬAಧ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಇಂತಹ ಮನಸ್ಸು ಮಾಡಿದರೆ ನೀವು ಬುದ್ದರಾಗುತ್ತಿರಾ ಎಂದಿದ್ದಾರೆ.
ಅನೇಕ ವಿದ್ವಾಂಸರು ಬುದ್ದನನ್ನು ವಿಜ್ಞಾನಿ ಎಂದು ಕರೆದಿದ್ದಾರೆ. ಬುದ್ದ ಇಸ್ ಎ ಡಾಕ್ಟರ್, ಸಂಘ ಇಸ್ ಎ ನರ್ಸ್, ಧಮ್ಮ ಇಸ್ ಎ ಮೆಡಿಸನ್ ಸಾರಿದ್ದಾರೆ. ಮುಕ್ತತೆ, ಸ್ವಾತ್ರಂತ್ರ‍್ಯ ಬುದ್ದನ ಧರ್ಮದಲ್ಲಿ ಇದೆ. ಅದಕ್ಕೆ ಅನೇಕ ಜಗತ್ತು ಇವರನ್ನು ಒಪ್ಪಿಕೊಂಡಿದೆ. ವಿಜ್ಞಾನ ಮತ್ತು ಪ್ರಕೃತಿಯ ನೆಲೆಗಟ್ಟಿನಲ್ಲಿ ತತ್ವವನ್ನು ಕಟ್ಟಿ ಜಗತ್ತಿಗೆ ಶಾಂತಿ, ಸಹಬಾಳ್ವೆಯ. ನಮ್ಮ ಬದುಕಿನ ಘನತೆಗೆ ಬುದ್ದನ ಪಂಚಶೀಲ ತತ್ವ ಮುಖ್ಯವಾಗಿದೆ. ಈ ದೇಶವನ್ನು ಕಟ್ಟುವಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಬುದ್ದನ ಅಷ್ಟಾಂಗ ಮಾರ್ಗಗಳು ಬೇಕು. ಇವುಗಳನ್ನು ೨೮ ಕ್ಕೂ ಹೆಚ್ಚು ರಾಷ್ಟ್ರ ಅಳವಡಿಸಿಕೊಂಡು ಶ್ರೀಮಂತರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಸ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ರಾಮಣ್ಣ, ಭದ್ರಾವತಿಯ ಸಂವಕ್ ಬುದ್ಧ ಧರ್ಮಾಂಕುರ ಟ್ರಸ್ಟ್ ಉಪಾಧ್ಯಕ್ಷ ಸಾವಕ್ಕನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಹೆಚ್.ಉಮೇಶ್ ಉಪಸ್ಥಿತರಿದ್ದರು.

Santosh lad ಸಚಿವ ಸಂತೋಷ್ ಲಾಡ್ ಅವರಿಗೆ ಅಭಿನಂದನೆ ಸಲ್ಲಿಸಿದ ಕೆಪಿಸಿಸಿ ಸಂಯೋಜಕಿ ಕವಿತಾ

0

Santosh lad ಕಾಶ್ಮೀರದಲ್ಲಿ ಮೂವರು ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಾಶ್ಮೀರಕ್ಕೆ ತೆರಳಿ ಮೃತಪಟ್ಟವರ ಶವಗಳನ್ನು ಮರಳಿ ತರುವ ಜೊತೆಗೆ ಅಲ್ಲಿ ಸಿಲುಕಿದ್ದ 178 ಕನ್ನಡಿಗರನ್ನು ತಯ್ನಾಡಿಗೆ ಕರೆತಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೆಪಿಸಿಸಿ ಸಂಯೋಜಕಿ ಕವಿತಾ ಥೊರತ್ ಅವರ ಕುಟುಂಬ ವರ್ಗದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಂ.ಎಲ್.ಸಿ ಎಂ.ಜಿ. ಮುಳೆ, ತಂದೆ ಬೀರಪ್ಪ, ತಾಯಿ ಮಹಾಲಕ್ಷ್ಮಿ ಬಾಯಿ,
ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಶಿವಮೊಗ್ಗ ಕಾರ್ಮಿಕ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು.

Bapuji Institute of Engineering and Technology – Davangere ಡಾ.ಪುನೀತ್ ಗೌಡಗೆ “ಸರ್ಕಾರದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ”

0

Bapuji Institute of Engineering and Technology – Davangere ಕರ್ನಾಟಕ ಸರ್ಕಾರ ನೀಡುವ 2023-24 ನೇ ಸಾಲಿನ ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಗೆ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಜೆ.ಪುನೀತ್ ಗೌಡ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ರೂ.೨೫ ಸಾವಿರ ನಗದು ಬಹುಮಾನ, ಉಲ್ಲೇಖ ಪತ್ರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳ ಅಧ್ಯಾಪಕರು ಹಾಗೂ ಸಂಶೋಧಕರಿಗೆ ಕರ್ನಾಟಕ ಸರ್ಕಾರವು ವಾರ್ಷಿಕವಾಗಿ ನೀಡಲಾಗುತ್ತಿದ್ದು, ಅತ್ಯುತ್ತಮ ಸಂಶೋಧನಾ ಪ್ರಕಟಣೆಗಳನ್ನು ಗುರುತಿಸಲು ಕರ್ನಾಟಕ ಸರ್ಕಾರದ ಭಾಗವಾದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿಯು ಒಂದು ಉಪಕ್ರಮವಾಗಿದೆ.

Bapuji Institute of Engineering and Technology – Davangere 2020-21 ನೇ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಬಿ.ಸಿ.ಪ್ರಸನ್ನ ಕುಮಾರ ಹಾಗೂ 2022-23 ನೇ ಸಾಲಿನಲ್ಲಿ ಇವರ ವಿದ್ಯಾರ್ಥಿಯಾದ ಡಾ.ಆರ್ ನವೀನ್‌ ಕುಮಾರ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಬಾರಿಯ ಕಂಪ್ಯೂಟೆಶನ್ ಮತ್ತು ಗಣಿತ ವಿಭಾಗದಲ್ಲಿ ಡಾ.ಪುನೀತ್ ಗೌಡ ಇವರಿಗೆ ಪ್ರಶಸ್ತಿ ದೊರಕಿದ್ದು, ಇವರು ಕೂಡ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಡಾ.ಬಿ.ಸಿ.ಪ್ರಸನ್ನಕುಮಾರ ರವರ ವಿದ್ಯಾರ್ಥಿಯಾಗಿದ್ದಾರೆ.

ಡಾ.ಪುನೀತ್ ಗೌಡ ಅವರ ಪ್ರಸುತ್ತ ದಾವಣಗೆರೆಯಲ್ಲಿನ ಬಿಐಇಟಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಅರವಿಂದ, ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕಾಲೇಜಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Acharya Tulsi National College ರಾಷ್ಟ್ರೀಯ ಸೇವಾ ಯೋಜನೆಯಿಂದ ಆತ್ಮ ವಿಶ್ವಾಸ ವೃದ್ಧಿಸುತ್ತದೆ : ಎಸ್ ಪಿ ದಿನೇಶ್

0

Acharya Tulsi National College ಮಾನವೀಯ ಮೌಲ್ಯದ ಜೊತೆಗೆ ಬದುಕಿನ ಕಲೆ ಹಾಗೂ ಆತ್ಮವಿಶ್ವಾಸವನ್ನು ರಾಷ್ಟ್ರೀಯ ಸೇವಾ ಯೋಜನೆ ವೃದ್ಧಿಸುತ್ತದೆ. ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕನ್ನು ಚೆಲ್ಲುತ್ತವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಪಿ.ದಿನೇಶ್ ಹೇಳಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಐ.ಕ್ಯೂ.ಎ.ಸಿ. ದೈಹಿಕ ಶಿಕ್ಷಣ ವಿಭಾಗ, ಎನ್ ಎಸ್ ಎಸ್, ಎನ್ ಸಿ ಸಿ, ರೋವರ್ ರೇಂಜರ್ಸ್ ಎಲ್ಲಾ ವಿಭಾಗಗಳ ಸಮಾರೋಪ ಸಮಾರಂಭದಲ್ಲಿ ಹಾಗೂ ಎನ್ ಎಸ್ ಎಸ್ ಹಿರಿಯ ಸ್ವಯಂಸೇವಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ತಮ್ಮ ಓದಿನ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಧರ್.ಕೆ.ವಿ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಎ.ಟಿ.ಎನ್.ಸಿ ಕಾಲೇಜ್ ಎನ್ಎಸ್ಎಸ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುವುದರ ಮುಖಾಂತರ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ನುಡಿದರು.

ಈ ವೇಳೆ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ದೈಹಿಕ ನಿರ್ದೇಶಕರಾದ ಪ್ರೊ. ಜಿ.ಎಸ್.ನಾಗರಾಜ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿದರು.

Acharya Tulsi National College ರಾಷ್ಟ್ರೀಯ ಶಿಕ್ಷಣ ಸಮಿತಿಯ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ತುಂಬಾ ಸಹಕಾರಿಯಾಗಿದೆ. ಹಾಗೂ ನಮ್ಮ ರಾಷ್ಟ್ರೀಯ ಶಿಕ್ಷಣ ಸಮಿತಿ ರಾಜ್ಯದಲ್ಲಿ ಒಂದು ಮಾದರಿ ವಿದ್ಯಾಸಂಸ್ಥೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಪ್ರೊ. ಮಮತಾ.ಪಿ.ಆರ್ ಅವರು, ಪ್ರೊ. ನಾಗರಾಜ್ ಅವರು 30 ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಪ್ರಾಮಾಣಿಕವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ನಮ್ಮ ಕಾಲೇಜಿಗೆ ಅನೇಕ ಪ್ರಶಸ್ತಿಗಳೊಂದಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಅಭಿನಂದಿಸಿದರು.

ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯಕುಮಾರ್, ಎನ್ ಎಸ್ ಎಸ್ ಅಧಿಕಾರಿ ಕೆ.ಎಂ.ನಾಗರಾಜ್, ಮಂಜುನಾಥ್.ಎನ್, ನವೀನ್, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Summer Camp Shimoga ಸಂಸ್ಕೃತ ಭಾಷೆ ಉಳಿದ ಎಲ್ಲಾ ಭಾಷೆಗಳ ಕಲಿಕೆಗೆ ಸಹಕಾರಿ : ಪಲ್ಲವಿ

Summer Camp Shimoga ಹೊಳಲೂರಿನ ಆಕ್ಸಫರ್ಡ್ ಸರಸ್ವತಿ ಮಂದಿರದಲ್ಲಿ ವಸಂತ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಲ್ಲವಿ ಮಾತನಾಡಿ, ಸಂಸ್ಕೃತ ಭಾಷೆ ಮಕ್ಕಳ ಜ್ಞಾನ ಹೆಚ್ಚಿಸುವುದರೊಂದಿಗೆ, ಉಳಿದ ಎಲ್ಲಾ ಭಾಷೆಗಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಇದನ್ನು ನಮ್ಮ ಗ್ರಾಮಾಂತರದ ಮಕ್ಕಳಿಗೂ ತಲುಪಬೇಕೆಂಬ ಮೂಲ ಉದ್ದೇಶದಿಂದ ಸಂಸ್ಕೃತ ಭಾರತೀ ಸಂಯೋಜಕಿಯಾದ ವಿಮಲಾ ರೇವಣಕರ್ ರವರನ್ನು ಕೋರಿಕೊಂಡಾಗ ಇವರು ಒಂದು ತಿಂಗಳು ಬೇಸಿಗೆ ಶಿಬಿರ ಏರ್ಪಡಿಸಿ ಮಕ್ಕಳಿಗೆ ಆಟ, ಹಾಡು, ಶ್ಲೋಕ ಹೀಗೆ ನಾನಾ ವಿಧದಲ್ಲಿ ಸಂಸ್ಕೃತ ಸುಲಲಿತವಾಗಿ ಕಲಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

Summer Camp Shimoga ವಿಮಲ ರೇವಣಕರ್ ಮಾತನಾಡಿ, ಮಕ್ಕಳು ಯಾವುದೇ ವಿಚಾರವನ್ನು ಸುಲಭವಾಗಿ ಗ್ರಹಿಸುತ್ತಾರೆ. ನಾವು ಕಲಿಸುವ ರೀತಿ ಅವರಿಗೆ ಆಸಕ್ತಿ ತರುವಂತಿರಬೇಕು. ಅದನ್ನು ಯಶಸ್ವಿಯಾಗಿ ಪೂರೈಸಿದ ಖುಷಿ ತಮಗೆ ಸಿಕ್ಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತಿ ಪ್ರಾರ್ಥಿಸಿ, ವಿನೂನ್ ನಿರೂಪಿಸಿ, ಮನ್ವಿತ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು.

MESCOM ಮೆಸ್ಕಾಂ ಬಳಕೆದಾರರ ಕುಂದು ಕೊರತೆಗಳ ಕಾರ್ಯಗಾರ ಯಶಸ್ವಿ

0

MESCOM ಮಾಚೇನಹಳ್ಳಿ ಕೈಗಾರಿಕೆಗಳ ಸಂಘ, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಸಂಯುಕ್ತವಾಗಿ ಹೆಚ್ ಟಿ ಬಳಕೆದಾರರ ಕುಂದು-ಕೊರತೆಗಳ ಕಾರ್ಯಗಾರವನ್ನು ಉದ್ಯಮ ಭವನ ಮಾಚೇನಹಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೆಸ್ಕಾಂನಿಂದ ಸಿಇ ಬಸಪ್ಪ, ಎಸ್ ಇ ಜಯದೇವಪ್ಪ, ಇಇ ಕೃಷ್ಣಮೂರ್ತಿ, ಇಇ ಪ್ರಕಾಶ್ ಬಾಳಪುರ್, ಎಇಇ ಬೀರಪ್ಪ , ಎಓ ಅಶ್ವಿನ್ ಕುಮಾರ್, ಎಇ ವಿನಾಯಕ್ ಕೆಪಿಟಿಸಿಎಲ್ ನಿಂದ ಎಇಇ ಕುಮುದ, ಎಇ ದಿವಾಕರ್ ಹಾಗೂ ಎಓ ಮಲ್ಲೇಶ್ ನಾಯಕ್ ಭಾಗವಹಿಸಿದ್ದರು.

ಕೈಗಾರಿಕೋದ್ಯಮಿಗಳು ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಬಂಧಿಸಿದ ತೊಂದರೆಗಳಾದ ಈಗಿರುವ ಫೀಡರ್‌ಗಳನ್ನು ಸಮರ್ಪಕವಾಗಿ ಉಪಯೋಗಿಸಲು ಇರುವ ತೊಡಕುಗಳು, ಹೊಸದಾಗಿ / ಹೆಚ್ಚುವರಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಳ್ಳಲು ಇರುವ ಅಡಚಣೆಗಳು, ಪ್ರಸ್ತುತ ಫೀಡರ್‌ವಾರು ದೈನಿಕ ಸಮಸ್ಯೆಗಳು ಹಾಗೂ ಹಣಕಾಸು ಸಂಬಂಧಿತ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಲಾಯಿತು.

ಮುಂದಿನ ದಿನಗಳಲ್ಲಿ ತಡರಹಿತ ವಿದ್ಯುತ್ ಸರಬರಾಜು, ತಿಂಗಳ ಮೊದಲ ಹಾಗೂ ಮೂರನೇ ಭಾನುವಾರಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಕಾರ್ಯಗಳನ್ನು ಕೈಗೊಂಡು, ತಡರಹಿತ ಹಾಗೂ ಉತ್ತಮ ಗುಣಮಟ್ಟದ ಸೇವೆ ಹಾಗೂ ವಿದ್ಯುತ್ತನ್ನು ಸರಬರಾಜು ಮಾಡಲು ಬದ್ಧರಾಗಿರುವುದಾಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.

MESCOM ಮುಂದಿನ ಜಿಲ್ಲಾಧಿಕಾರಿಗಳ ಏಕಗವಾಕ್ಷಿ ಸಭೆಯಲ್ಲಿ ಹೆಚ್ಚುವರಿಯಾಗಿ 2.50 ಎಕರೆ ಜಾಗವನ್ನು ಇಲಾಖೆಗೆ ನೀಡಿದ್ದಾದರೆ, ಕೈಗಾರಿಕಾ ಪ್ರದೇಶಕ್ಕೆ ಇನ್ನೊಂದು ಸಬ್-ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ತಯಾರಿದ್ದು, ಈ ನಿಟ್ಟಿನಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘ ಅವಶ್ಯಕ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷರಾದ ಡಿ.ಜಿ.ಬೆನಕಪ್ಪ ನುಡಿದರು.

ಎಲ್ಲಾ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳ ಸೇವೆಯನ್ನು ಗುರುತಿಸಿ, ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎ.ಎಲ್.ಚಂದ್ರಶೇಖರ್, ಸಂತೋಷ್, ಸುರೇಂದ್ರ, ರಾಜೇಶ್, ಮಧುಕರ್ ಜೋಯಿಸ್, ಡಿ.ಎಸ್.ಚಂದ್ರಶೇಖರ್, ನಾರಾಯಣ್, ಸುಬ್ಬರಾವ್, ದಯಾನಂದ್, ಹರ್ಷ, ಮಹೇಶಪ್ಪ, ಪ್ರತೀಕ್ ಜೋಯಿಸ್, ಶ್ರೀನಿವಾಸ್, ಪ್ರತಾಪ್, ನಂದನ್, ಶ್ಯಾಮ್ ಮುಂತಾದರು ಹಾಜರಿದ್ದರು.

Rotary Club Shimoga ಭಾರತೀಯ ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ : ವಿದ್ವಾನ್ ಶಿವಾನಂದ ಭಟ್

0

Rotary Club Shimoga ಭಾರತೀಯ ಸಂಸ್ಕೃತಿಯಲ್ಲಿ ಪುರಾತನವಾದದ್ದು ದೇವಭಾಷೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ವಾನ್ ಶಿವಾನಂದ್ ಭಟ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಸ್ವತಿ ಶ್ಲೋಕಗಳನ್ನು ಕಲಿಸಲು ಜೂನ್ ನಿಂದ ಶಿಬಿರ ಪ್ರಾರಂಭಿಸಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ನಮಗೆ ಜನ್ಮ ಇತ್ತ, ನಮ್ಮ ತಂದೆ-ತಾಯಿಗೆ ಮೊದಲು ನಮಸ್ಕರಿಸಬೇಕು. ಪೂರ್ವಜನ್ಮದ ಆತ್ಮಗಳಿಂದ ನಮ್ಮ ನಡೆನುಡಿಗಳು ಬಿಂಬಿತವಾಗುತ್ತದೆ. ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗುವುದಿಲ್ಲ. ದೇಹ ಮಣ್ಣಿನಲ್ಲಿ ಲೀನವಾಗುತ್ತೆ ಆದರೆ, ಆತ್ಮನಶಿಸುವುದಿಲ್ಲ ಎಂಬ ನಂಬಿಕೆ ಇದೆ. ಮಕ್ಕಳಿಗೆ ಅಂಕಗಳಿಸುವ ಶಿಕ್ಷಣದಿಂದ ಯಾವುದೇ ಅನುಕೂಲಗಳಿಲ್ಲ. ಸಂಸ್ಕೃತದಿಂದ ಎಲ್ಲಾ ಭಾಷೆ ಸುಲಭವಾಗಿ ಕಲಿಯಬಹುದು. ದೇಶದ್ರೋಹಿಗಳು ಸಂಸ್ಕೃತ ಸತ್ತಭಾಷೆ ಎನ್ನುತ್ತಾರೆ. ಸಂಸ್ಕಾರದಿಂದ ಬದಲಾವಣೆ ಸಾದ್ಯ. ಇಂದಿಗೂ ನಾಸದವರು ನಮ್ಮ ನಂಬಿಕೆಗಳನ್ನು ಗೌರವಿಸುತ್ತಾರೆ ಹಾಗೂ ಪಾಲಿಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಜೀವ ಇರುವುದು ಕಾಣುವುದಿಲ್ಲ, ವಿಜ್ಞಾನಕ್ಕೂ ಸವಾಲಾಗಿದೆ ಎಂದು ಹೇಳಿದರು.

Rotary Club Shimoga ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಮಾತನಾಡಿ, ನಮ್ಮ ದೇಶದ ಆಚಾರ ವಿಚಾರಗಳನ್ನು ಇಂತಹ ವಿದ್ವಾಂಸರಿಂದ ಮಾತ್ರ ಉಳಿಸಿ ಬೆಳೆಸಲು ಸಾದ್ಯ. ನಮ್ಮ ಸಂಸ್ಕೃತಿಯನ್ನು ನಾವು ಗೌರವಿಸುವುದನ್ನು ಮೊದಲು ಕಲಿಯಬೇಕು ಹಾಗೂ ಉಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೊ.ಸತ್ಯನಾರಾಯಣ್ ಸ್ವಾಗತಿಸಿ, ರೊ.ರೇಣುಕಾರಾದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೊ.ಪ್ರಕೃತಿ ಮಂಚಾಲೆ ವಂದಿಸಿದರು. ಭಾರದ್ವಾಜ್, ಜಿ.ವಿಜಯಕುಮಾರ್, ವಾಗೇಶ್, ನಾಗರಾಜ್ ರಾಜಶೇಖರ್ ಮುಂತಾದವರಿದ್ದರು.

Bapuji Institute of Hi-Tech Education ಯಾವುದೇ ಅಧ್ಯಯನದ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಅರ್ಥ‌ವಾಗಲು ಸಾಧ್ಯ- ಎ.ಹೆಚ್.ಸಾಗರ್

0

Bapuji Institute of Hi-Tech Education ಸಂಶೋಧನಾ ಸಾಕ್ಷಿ ಇಲ್ಲದ ಜ್ಞಾನಕ್ಕೆ ಬೆಲೆಯೇ ಇಲ್ಲ, ಯಾವುದೇ ಪದವಿಯಾಗಿರಲಿ ಮೂಲ ವಿಷಯದ ಬಗ್ಗೆ ಸಂಶೋಧನೆ ಬೇಕು ಎಂದು ಅಂತಾರಾಷ್ಟ್ರೀಯ ಶೈಕ್ಷಣಿಕ ವಿಶ್ಲೇಷಕ ಎ ಹೆಚ್ ಸಾಗರ್ ಅಭಿಪ್ರಾಯಪಟ್ಟರು.

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ಬಿಕಾಂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಯಾವುದೇ ಅಧ್ಯಯನ ವಾಗಿರಲಿ ವಿಷಯದ ಮೇಲೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಅದು ಅರ್ಥವಾಗುತ್ತದೆ ಹಾಗೂ ಹೊಸ ಹೊಸ ಆಲೋಚನೆಗಳಿಗೂ ಎಡೆ ಮಾಡಿಕೊಡುತ್ತದೆ, ವಾಣಿಜ್ಯದಿಂದ ವಿಜ್ಞಾನದ ವರೆಗೆ ಎಲ್ಲ ವಿಷಯಗಳೂ ತತ್ವಜ್ಞಾನದ ಆಧಾರಿತವೇ ಆಗಿರುತ್ತದೆ, ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳಿಗೆ ಕೊರತೆ ಇಲ್ಲ ಆದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಸಂಶೋಧನೆಗಳು ನಮ್ಮಲ್ಲಿ ವಿರಳವಾಗುತ್ತಿವೆ. ಪ್ರತಿ ವಿಷಯಗಳನ್ನೂ ಪ್ರತ್ಯೇಕಿಸಿ ನೋಡುವುದಕ್ಕಿಂತ ಅವುಗಳ ನಡುವಿನ ಸಂಬಂಧವನ್ನು ಅರಿತಲ್ಲಿ ಹೊಸ ಹೊಸ ಆಲೋಚನೆಗಳು ಹೊಳೆಯುತ್ತವೆ. ಯುದ್ಧ ಹಾಗೂ ರಕ್ಷಣೆಯ ವಿಚಾರವನ್ನು ವಾಣಿಜ್ಯ ವಿದ್ಯಾರ್ಥಿಗಳೂ ಅಧ್ಯಯನ ಮಾಡಬೇಕು ಕಾರಣ ಯುದ್ಧವು ವಾಣಿಜ್ಯೋದ್ಯಮದ ಮೇಲೆ ಸಹಾ ಪರಿಣಾಮ ಮಾಡುತ್ತದೆ. ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 1,800 ಟೆರಾ ಬೈಟ್ ನಷ್ಟು ವ್ಯರ್ಥ ಡಾಟಾಗಳು ಹಾಗೂ ಪ್ರತಿ ನಿಮಿಷಕ್ಕೆ 1,36,000 ವ್ಯರ್ಥ ವಾಟ್ಸಪ್ ಸಂದೇಶಗಳು ಮೊಬೈಲ್ ಫೋನ್ ಗಳಲ್ಲಿ ಹರಿದಾಡುತ್ತವೆ.

ಆಧುನಿಕ ತಂತ್ರಜ್ಞಾನಗಳನ್ನು ವಿಧಾಯಕ ಕಾರ್ಯಗಳಿಗೆ ಬಳಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

Bapuji Institute of Hi-Tech Education ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಭವಿಷ್ಯ ಯಾವತ್ತೂ ಒಳ್ಳೆಯದೇ ಇರುತ್ತದೆ ಅದನ್ನು ಸಾಧಿಸಿಕೊಳ್ಳುವುದು ಪ್ರಯತ್ನಿಶೀಲತೆಯ ಮೇಲಿದೆ, ಭಾರತ ಅತ್ಯಂತ ಬಲಿಷ್ಠ ರಾಷ್ಟ್ರ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ವಾಣಿಜ್ಯ ಪದವಿಗೆ ಬೇಡಿಕೆಯು ಹಾಗೂ ಭವಿಷ್ಯ ಇದ್ದೇ ಇದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ ವೀರಪ್ಪನವರ ಉಪಸ್ಥಿತಿಯಲ್ಲಿ ನಿರ್ದೇಶ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಸ್ವಾಗತ ಕೋರಿದರು. ಅರ್ಚನಾ ಹಾಗೂ ಅನಿಲ್ ಅತ್ತರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಹನಾ ಜಿ ಬಿ ಹಾಡಿದರೆ ಅತಿಥಿಗಳ ಪರಿಚಯವನ್ನು ಪವನ್ ಡಿ ಅಲ್ಫಿಜಾ ಮಾಡಿದರು.

ಕುಂಕುಮ್ ವಿ ವೈದ್ಯ ವರದಿ ವಾಚನ ಮಾಡಿದರೆ ಪ್ರತಿಭಾ ಪುರಸ್ಕಾರ ಹಾಗೂ ಪದವಿ ಪ್ರದಾನವನ್ನು ಪ್ರೊ. ನಾಗರಾಜ ಎಂ ಎಸ್, ಪ್ರೊ. ಶ್ವೇತಾ ಬಿ ವಿ ನಿರ್ವಹಿಸಿದರು. ಪ್ರತಿಜ್ಞಾವಿಧಿಯನ್ನು ಪ್ರೊ. ಜ್ಞಾನೇಶ್ವರ ಆರ್ ಸುಳಕೆ ಬೋಧಿಸಿದರು. ಬೋಧಕ ವರ್ಗದ ಲತಾ ಓ ಎಚ್, ಮಂಜುಳಾ ಎ ಎನ್, ನರೇಂದ್ರ ಡಿ ಆರ್, ಪ್ರಜ್ವಲ್ ಎ ಆರ್ ಉಪಸ್ಥಿತರಿದ್ದು ಮಂಜುನಾಥ್ ಬಿ ಬಿ ವಂದನೆಗಳನ್ನು ಸಮರ್ಪಿಸಿದರು.

-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-

CM Siddharamaiah ಯುದ್ಧ, ಪಾಕಿಸ್ತಾನಕ್ಕೆ ಪಾಠವೂ ಹೌದು. ಎಚ್ಚರಿಕೆಯೂ ಹೌದು- ಸಿದ್ಧರಾಮಯ್ಯ

0

CM Siddharamaiah ಪಾಕಿಸ್ತಾನವೇ ಖುದ್ದು ಭಾರತದ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಎರಡು ದೇಶಗಳು ಯುದ್ಧ ವಿರಾಮದ ನಿರ್ಣಯಕ್ಕೆ ಬಂದಿವೆ. ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರವೇ ಈ ಯುದ್ಧವಿರಾಮದ ಮಾತುಕತೆಗೆ ಕಾರಣ.

ಪಾಕಿಸ್ತಾನಕ್ಕೆ ಇದು ಪಾಠವೂ ಹೌದು, ಎಚ್ಚರಿಕೆಯೂ ಹೌದು. ಭಾರತೀಯನಾಗಿ ನನಗಿದು ಹೆಮ್ಮೆಯ ಕ್ಷಣ.

CM Siddharamaiah ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಜೀವನ ಹಂಗುತೊರೆದು ಹೋರಾಡಿದ ನಮ್ಮ ದೇಶದ ಸೈನಿಕರಿಗೊಂದು ಸಲಾಮ್. ಈ ಹೊತ್ತಿನಲ್ಲಿ ಇಡೀ ದೇಶ ನಮ್ಮ ಸೈನಿಕರ ಜೊತೆ ನಿಂತಿದೆ ಎಂದು‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ

Minister Priyanka Kharge ಕಲ್ಯಾಣ ಪಥ & ಪ್ರಗತಿ ಪಥ ಸರ್ಕಾರದ ಮಹತ್ತರ ಯೋಜನೆಗಳಾಗಿವೆ- ಸಚಿವ ಪ್ರಿಯಾಂಕ ಖರ್ಗೆ

0

Minister Priyanka Kharge ಶಾಲೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳಿಗೆ ಗ್ರಾಮಗಳಿಂದ ಸಂಪರ್ಕ ಕಲ್ಪಿಸುವ ಕಲ್ಯಾಣಪಥ ಹಾಗೂ ಪ್ರಗತಿಪಥ ಸರ್ಕಾರದ ಮಹತ್ತರ ಯೋಜನೆಗಳಾಗಿದ್ದು, ಗ್ರಾಮೀಣ ಬದುಕಿನ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಲ್ಲ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಪಂಚಾಯತ್‌ ರಾಜ್‌ ಇಲಾಖೆಯ ಎಂಜನಿಯರುಗಳಿಗೆ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಮುಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಎಂಜನಿಯರುಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಲ್ಯಾಣಪಥ ಯೋಜನೆಗಾಗಿ ಸರ್ಕಾರ ಈ ಬಾರಿಯ ಆಯವ್ಯದಲ್ಲಿ 1000 ಕೋಟಿ ರೂ ಅನುದಾನ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಇಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಮೊದಲ ಬಾರಿಗೆ ಒದಗಿಸಿದೆ, ಸರ್ಕಾರ ನೀಡಿರುವ ಅನುದಾನದಿಂದ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಎಂಜನಿಯರುಗಳ ಮೇಲಿದೆ, ಯಾವುದೇ ಲೋಪವಿಲ್ಲದಂತೆ ದೀರ್ಘಕಾಲ ಬಾಳಿಕೆ ಬರುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದರು.

ಪ್ರಗತಿಪಥ ಯೋಜನೆಗಾಗಿ ಸರ್ಕಾರ 5200 ಕೋಟಿ ಅನುದಾನ ಒದಗಿಸಿದ್ದು, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ಅನುಮೋದನೆ ನೀಡಲು ಏಷ್ಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕಿಗೆ ಸೂಚನೆ ನೀಡಿದೆ, ಬ್ಯಾಂಕಿನ ತಂಡವು ಈಗಾಗಲೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ, ಈ ನಡುವೆ ಇಲಾಖೆಯು ರಸ್ತೆಗಳ ಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದು ಸಬೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ನಿರ್ಮಾಣ ಕಾಮಗಾರಿಗಳ ವಿನಃ ಬೇರಾವುದೆ ಸರಕು ಸರಬರಾಜಿನಂತಹ ಪ್ರಕ್ರಿಯೆಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಸಚಿವರು, ಹೊಸ ಸಂಶೋಧನೆಗಳ ಮೂಲಕ ಮತ್ತಷ್ಟು ಬಾಳಿಕೆ ಬರುವಂತಹ ಸಾಮಗ್ರಿಗಳನ್ನು ನಿರ್ಮಾಣದಲ್ಲಿ ಬಳಸುವ ಮೂಲಕ ಸುಧಾರಣೆಗಳನ್ನು ತರಬೇಕೆಂದು ಸಲಹೆ ಮಾಡಿದರು. ಎಂಜನಿಯರಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಾಡುವ ಸಂಬಂಧ ಹಿರಿಯ ಎಂಜನಿಯರ್ ಗಳು ಮತ್ತು ಉತ್ಸಾಹಿ ಕಿರಿಯ ಎಂಜನಿಯರ್‌ಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಲು ಸಚಿವರು ಸಲಹೆ ಮಾಡಿದರು.

Minister Priyanka Kharge ಗ್ರಾಮಗಳ ಜಲಮೂಲಗಳನ್ನು ಸುಸ್ಥಿರಗೊಳಿಸುವ ಮತ್ತು ವಿದ್ಯುತ್‌ ಭದ್ರತೆ ನೀಡುವ ಹೊಸ ಪರಿಕಲ್ಪನೆ ಇಲಾಖೆ ಹೊಂದಿದ್ದು, ಗ್ರಾಮಗಳ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಸಂರಕ್ಷಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೊಸತನವನ್ನು ಅಳವಡಿಸಿಕೊಳ್ಳಲು ಸಚಿವರು ಎಂಜನಿಯರುಗಳಿಗೆ ತಿಳಿಸಿದರು.

2022-23ನೆ ಸಾಲಿನಲ್ಲಿ ಅನುಮೋದನೆಯಾದ 27322 ಕಾಮಗಾರಿಗಳಲ್ಲಿ 22712 ಕಾಮಗಾರಿಗಳು ಪೂರ್ಣಗೊಂಡಿದ್ದು, 3100 ಕಾಮಗಾರಿಗಳು ಪ್ರಗತಿಯಲ್ಲಿವೆ; 2023-24ನೆ ಸಾಲಿನಲ್ಲಿ ಅನುಮೋದನೆಯಾದ 23338 ಕಾಮಗಾರಿಗಳ ಪೈಕಿ 15522 ಕಾಮಗಾರಿಗಳು ಪೂರ್ಣವಾಗಿವೆ, 5695 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 2024-25ನೆ ಸಾಲಿನಲ್ಲಿ ಅನುಮೋದನೆಗೊಂಡ 25786 ಕಾಮಗಾರಿಗಳಲ್ಲಿ 11916 ಕಾಮಗಾರಿಗಳು ಪೂರ್ಣವಾಗಿದ್ದು 8013 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಕಾಮಗಾರಿಗಳು ವಿಳಂಬವಾಗಿರುವ ಪ್ರಕರಣಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಶಾಸಕರು ಹಾಗೂ ಸಂಸತ್‌ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಕಾಮಗಾರಿಗಳನ್ನು ಶೀಘ್ರ ಮುಗಿಸಲು ಬದ್ಧತೆ ಹೊಂದಬೇಕೆಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್‌ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.