CM Siddharamaiah ಪಾಕಿಸ್ತಾನವೇ ಖುದ್ದು ಭಾರತದ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಎರಡು ದೇಶಗಳು ಯುದ್ಧ ವಿರಾಮದ ನಿರ್ಣಯಕ್ಕೆ ಬಂದಿವೆ. ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರವೇ ಈ ಯುದ್ಧವಿರಾಮದ ಮಾತುಕತೆಗೆ ಕಾರಣ.
ಪಾಕಿಸ್ತಾನಕ್ಕೆ ಇದು ಪಾಠವೂ ಹೌದು, ಎಚ್ಚರಿಕೆಯೂ ಹೌದು. ಭಾರತೀಯನಾಗಿ ನನಗಿದು ಹೆಮ್ಮೆಯ ಕ್ಷಣ.
CM Siddharamaiah ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಜೀವನ ಹಂಗುತೊರೆದು ಹೋರಾಡಿದ ನಮ್ಮ ದೇಶದ ಸೈನಿಕರಿಗೊಂದು ಸಲಾಮ್. ಈ ಹೊತ್ತಿನಲ್ಲಿ ಇಡೀ ದೇಶ ನಮ್ಮ ಸೈನಿಕರ ಜೊತೆ ನಿಂತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ