Karnataka Public School ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಉಚಿತ ಸಮವಸ್ತ್ರ ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರಾದ ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರದ ಬಿಹೆಚ್ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯೋಜಿಸಿದ್ದ ತಾಲ್ಲೂಕು ಮಟ್ಟದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಶಿಕ್ಷಣವನ್ನು ಮಾತ್ರವಲ್ಲದೆ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಯೂನಿಫಾರ್ಮ್, ಶೂ, ಸಾಕ್ಸ್ ಒಳಗೊಂಡAತೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಪೂರೈಸುತ್ತಿದೆ. ಪಿ.ಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಬಿಸಿ ಊಟ, ಕೆನೆಭರಿತ ಹಾಲು, ರಾಗಿ ಮಾಲ್ಟ್, ಪೌಷ್ಟಿಕತೆಗೆ ಪೂರಕವಾದ ಮೊಟ್ಟೆ ಹಾಗೂ ಬಾಳೆಹಣ್ಣನ್ನು ನೀಡಲಾಗುತ್ತಿದೆ.
ಇದಲ್ಲದೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಆರೋಗ್ಯದ ಹಿತದೃಷ್ಟಿಯಿಂದ ದೇಹದಲ್ಲಿ ಉಂಟಾಗುವAತಹ ರಕ್ತಹೀನತೆಯನ್ನು ಹೋಗಲಾಡಿಸಲು ಕಬ್ಬಿಣ ಮಾತ್ರೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಈ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಗಾಗಿ ಶ್ರಮಿಸಲು ಸಹಕಾರ ನೀಡಿ ಎಂದು ಕೋರಿದರು.
Karnataka Public School ಕ್ಷೇತ್ರ ಸಮನ್ವಯ ಅಧಿಕಾರಿ ಶಿವಪ್ಪ ಸಂಗಣ್ಣನವರ್ ಮಾತನಾಡಿ, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದಲೆ ಇಂಗ್ಲಿಷ್ ಮಾಧ್ಯಮವನ್ನು ತೆರೆಯಲಾಗುತ್ತಿದೆ. ಹಾಗಾಗಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಹೆಚ್.ಮೋಹನೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶವುಳ್ಳ ಮೊಟ್ಟೆ, ಬಾಳೆಹಣ್ಣು, ಕೆನೆಭರಿತ ಹಾಲು ಹಾಗೂ ರಾಗಿ ಮಾಲ್ಟ್ನ್ನು ಸರ್ಕಾರ ಒದಗಿಸುತ್ತಿದೆ. ಮಕ್ಕಳು ಅದರ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು.
ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಜೇಶ್ ಯೋಜನೆಯ ಪೂರಕವಾದ ಪೌಷ್ಟಿಕ ಆಹಾರದ ಕುರಿತು ಪಿಪಿಟಿ ಪ್ರೆಸೆಂಟೇಷನ್ ನೀಡಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿಯ ಜಿಲ್ಲಾ ಉಪಾಧ್ಯಕ್ಷ ಸತೀಶ್, ಬೆಂಗಳೂರು ವಿಭಾಗದ ಎಪಿಎಫ್ ಕೋ-ಆರ್ಡಿನೇಟರ್ ಪ್ರಭಾನಂದ ಹೆಗಡೆ, ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯ ದಾದಾಪೀರ್, ಶಿಕ್ಷಣ ಸಂಯೋಜಕರುಗಳಾದ ಶಶಿರೇಖಾ, ಹರೀಶ್, ಮೋಹನ್ ಹಾಗೂ ಬಿಆರ್‌ಪಿ ಧನಂಜಯ್, ಎಲ್ಲಾ ಕ್ಲಸ್ಟರ್ ಸಿಆರ್‌ಪಿಗಳು, ನಗರ ಭಾಗದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು, ಪದಾಧಿಕಾರಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕರು ಉಪಸ್ಥಿತರಿದ್ದರು.
Karnataka Public School ಮಕ್ಕಳನ್ನ ಓದು ಮತ್ತು ಆರೋಗ್ಯದ ಕಾಳಜಿ ಇರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನ ಸೇರಿಸಿ- ಡಿಡಿಪಿಐ ಮಂಜುನಾಥ್
JNNC College ಮೇ 14. ಜೆಎನ್ ಎನ್ ಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
JNNC College ರಾಷ್ಟ್ರೀಯ ಶಿಕ್ಷಣ ಸಮಿತಿ, ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜವಹಾರಲಾಲ್ ನೆಹರೂ ತಾಂತ್ರಿಕ ಮಹಾವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ-2025 ನ್ನು ಮೇ.14 ರಂದು ಬೆಳಗ್ಗೆ 9;30 ರಿಂದ 2;00 ಗಂಟೆಯವರೆಗೆ ನಗರದ ಜೆ ಎನ್ ಎನ್ ಸಿ ಇ ಕಾಲೇಜ್ ನ ಅಡ್ಮಿನ್ ಬ್ಲಾಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ಚುವರಿ ಜಿಲ್ಲಾ ರಕ್ಷಾಧಿಕಾರಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ ಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಭಿರುಚಿ ಅಧ್ಯಕ್ಷರಾದ ಡಾ. ಶಿವರಾಮಕೃಷ್ಣ, ಸ್ವಯಂ ಪ್ರೇರಿತ ರಕ್ತದಾನ ಸೇವಾ ಸಂಘದ ಅಧ್ಯಕ್ಷರಾದ ಧರಣೇಂದ್ರ ದಿನಕರ್, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಛಾಯ, ಅಭಿರುಚಿ ಕಾರ್ಯದರ್ಶಿ ಕುಮಾರ್ ಶಾಸ್ತ್ರೀ ಯುವ ರೆಡ್ ಕ್ರಾಸ್ ಘಟಕದ ಅರುಣ್ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ ಎನ್ ಸಿ ಇ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ವಿಜಯಕುಮಾರ್ ವಹಿಸಲಿದ್ದಾರೆ.
JNNC College ಸರ್ಕಾರಿ ಮೆಗ್ಗಾನ್ ಆಸ್ಪತ್ರೆ, ರಕ್ತ ಕೇಂದ್ರ, ರೋಟರಿ ರಕ್ತ ಕೇಂದ್ರ, ರೆಡ್ ಕ್ರಾಸ್ ರಕ್ತ ಕೇಂದ್ರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರು, ಸದಸ್ಯರುಗಳು ಆಸಕ್ತರು ರಕ್ತದಾನಿಗಳ ಶಿಬಿರಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.
Canara Bank Rural Self Employment Training Institute ಕುರಿ,ಕೋಳಿ,ಹಸು ಸಾಕಣೆ & ಎರೆಹುಳು ಗೊಬ್ಬರ ತಯಾರಿಕೆ ಉಚಿತ ತರಬೇತಿ, ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ಪ್ರಕಟಣೆ
Canara Bank Rural Self Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು ೮ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
Canara Bank Rural Self Employment Training Institute ಕೃಷಿ ಉದ್ಯಮಿ (ಕುರಿ ಕೋಳಿ, ಹಸು ಸಾಕಾಣಿಕೆ & ಏರೆಹುಳ ಗೊಬ್ಬರ ತಯಾರಿಕೆ, ಇತ್ಯಾದಿ)
13 ದಿನಗಳು
16/05/2025
ರಿಂದ ತರಬೇತಿಯು ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577 216(ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.9743429595, 8722384541, 9164411580, 8105378735 9449371579, 9481955721,
MESCOM ಮೇ 14. ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್ 3/4/14/20ರ ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಮೇ 14 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಮೆ||ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ MESCOM ಆಸ್ಪತ್ರೆ, ಕೆ.ಎಸ್.ಆರ್.ಪಿ.ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆ.ಎಂ.ಎಫ್.ಡೈರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Machenahalli Industries Association ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅವಶ್ಯ ಸಹಕಾರವಿದೆ- ಡಿ.ಜಿ.ಬೆನಕಪ್ಪ
Machenahalli Industries Association ಮಾಚೇನಹಳ್ಳಿ ಕೈಗಾರಿಕೆಗಳ ಸಂಘ, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಸಂಯುಕ್ತವಾಗಿ ಹೆಚ್ ಟಿ ಬಳಕೆದಾರರ ಕುಂದು-ಕೊರತೆಗಳ ಕಾರ್ಯಗಾರವನ್ನು ಉದ್ಯಮ ಭವನ ಮಾಚೇನಹಳ್ಳಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೆಸ್ಕಾಂನಿಂದ ಸಿಇ ಬಸಪ್ಪ, ಎಸ್ ಇ ಜಯದೇವಪ್ಪ, ಇ ಕೃಷ್ಣಮೂರ್ತಿ, ಇಇ ಪ್ರಕಾಶ್ ಬಾಳಪುರ್, ಎಇಇ ಬೀರಪ್ಪ , ಎಓ ಅಶ್ವಿನ್ ಕುಮಾರ್, ಎಇ ವಿನಾಯಕ್ ಕೆಪಿಟಿಸಿಎಲ್ ನಿಂದ ಎಇಇ ಕುಮುದ, ಎಇ ದಿವಾಕರ್ ಹಾಗೂ ಎಓ ಮಲ್ಲೇಶ್ ನಾಯಕ್ ಭಾಗವಹಿಸಿದ್ದರು.
ಕೈಗಾರಿಕೋದ್ಯಮಿಗಳು ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಬಂಧಿಸಿದ ತೊಂದರೆಗಳಾದ ಈಗಿರುವ ಫೀಡರ್‌ಗಳನ್ನು ಸಮರ್ಪಕವಾಗಿ ಉಪಯೋಗಿಸಲು ಇರುವ ತೊಡಕುಗಳು, ಹೊಸದಾಗಿ / ಹೆಚ್ಚುವರಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಳ್ಳಲು ಇರುವ ಅಡಚಣೆಗಳು, ಪ್ರಸ್ತುತ ಫೀಡರ್‌ವಾರು ದೈನಿಕ ಸಮಸ್ಯೆಗಳು ಹಾಗೂ ಹಣಕಾಸು ಸಂಬಂಧಿತ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ತಡರಹಿತ ವಿದ್ಯುತ್ ಸರಬರಾಜು, ತಿಂಗಳ ಮೊದಲ ಹಾಗೂ ಮೂರನೇ ಭಾನುವಾರಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಕಾರ್ಯಗಳನ್ನು ಕೈಗೊಂಡು, ತಡರಹಿತ ಹಾಗೂ ಉತ್ತಮ ಗುಣಮಟ್ಟದ ಸೇವೆ ಹಾಗೂ ವಿದ್ಯುತ್ತನ್ನು ಸರಬರಾಜು ಮಾಡಲು ಬದ್ಧರಾಗಿರುವುದಾಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಮುಂದಿನ ಜಿಲ್ಲಾಧಿಕಾರಿಗಳ ಏಕಗವಾಕ್ಷಿ ಸಭೆಯಲ್ಲಿ ಹೆಚ್ಚುವರಿಯಾಗಿ 2.50 ಎಕರೆ ಜಾಗವನ್ನು ಇಲಾಖೆಗೆ ನೀಡಿದ್ದಾದರೆ, ಕೈಗಾರಿಕಾ ಪ್ರದೇಶಕ್ಕೆ ಇನ್ನೊಂದು ಸಬ್-ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ತಯಾರಿದ್ದು, ಈ ನಿಟ್ಟಿನಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘ ಅವಶ್ಯಕ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷರಾದ ಡಿ.ಜಿ.ಬೆನಕಪ್ಪ ನುಡಿದರು.
ಎಲ್ಲಾ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳ ಸೇವೆಯನ್ನು ಗುರುತಿಸಿ, ಆತ್ಮೀಯವಾಗಿ ಸನ್ಮಾನಿಸಲಾಯಿತು.
Machenahalli Industries Association ಈ ಕಾರ್ಯಕ್ರಮದಲ್ಲಿ ಎ.ಎಲ್.ಚಂದ್ರಶೇಖರ್, ಸಂತೋಷ್, ಸುರೇಂದ್ರ, ರಾಜೇಶ್, ಮಧುಕರ್ ಜೋಯಿಸ್, ಡಿ.ಎಸ್.ಚಂದ್ರಶೇಖರ್, ನಾರಾಯಣ್, ಸುಬ್ಬರಾವ್, ದಯಾನಂದ್, ಹರ್ಷ, ಮಹೇಶಪ್ಪ, ಪ್ರತೀಕ್ ಜೋಯಿಸ್, ಶ್ರೀನಿವಾಸ್, ಪ್ರತಾಪ್, ನಂದನ್, ಶ್ಯಾಮ್ ಮುಂತಾದರು ಹಾಜರಿದ್ದರು.
Acharya Tulsi National College of Commerce ಎನ್ ಎಸ್ಎಸ್ ಯೋಜನೆ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು- ಎಸ್.ಪಿ.ದಿನೇಶ್
Acharya Tulsi National College of Commerce ಮಾನವೀಯ ಮೌಲ್ಯದ ಜೊತೆಗೆ ಬದುಕಿನ ಕಲೆ ಹಾಗೂ ಆತ್ಮವಿಶ್ವಾಸವನ್ನು ರಾಷ್ಟ್ರೀಯ ಸೇವಾ ಯೋಜನೆ ವೃದ್ಧಿಸುತ್ತದೆ. ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕನ್ನು ಚೆಲ್ಲುತ್ತವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಪಿ.ದಿನೇಶ್ ಹೇಳಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಐ.ಕ್ಯೂ.ಎ.ಸಿ. ದೈಹಿಕ ಶಿಕ್ಷಣ ವಿಭಾಗ, ಎನ್ ಎಸ್ ಎಸ್, ಎನ್ ಸಿ ಸಿ, ರೋವರ್ ರೇಂಜರ್ಸ್ ಎಲ್ಲಾ ವಿಭಾಗಗಳ ಸಮಾರೋಪ ಸಮಾರಂಭದಲ್ಲಿ ಹಾಗೂ ಎನ್ ಎಸ್ ಎಸ್ ಹಿರಿಯ ಸ್ವಯಂಸೇವಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ತಮ್ಮ ಓದಿನ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಧರ್.ಕೆ.ವಿ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಎ.ಟಿ.ಎನ್.ಸಿ ಕಾಲೇಜ್ ಎನ್ಎಸ್ಎಸ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುವುದರ ಮುಖಾಂತರ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ನುಡಿದರು.
ಈ ವೇಳೆ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ದೈಹಿಕ ನಿರ್ದೇಶಕರಾದ ಪ್ರೊ. ಜಿ.ಎಸ್.ನಾಗರಾಜ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ತುಂಬಾ ಸಹಕಾರಿಯಾಗಿದೆ. ಹಾಗೂ ನಮ್ಮ ರಾಷ್ಟ್ರೀಯ ಶಿಕ್ಷಣ ಸಮಿತಿ ರಾಜ್ಯದಲ್ಲಿ ಒಂದು ಮಾದರಿ ವಿದ್ಯಾಸಂಸ್ಥೆಯಾಗಿದೆ ಎಂದರು.
Acharya Tulsi National College of Commerce ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಪ್ರೊ. ಮಮತಾ.ಪಿ.ಆರ್ ಅವರು, ಪ್ರೊ. ನಾಗರಾಜ್ ಅವರು 30 ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಪ್ರಾಮಾಣಿಕವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ನಮ್ಮ ಕಾಲೇಜಿಗೆ ಅನೇಕ ಪ್ರಶಸ್ತಿಗಳೊಂದಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಅಭಿನಂದಿಸಿದರು.
ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯಕುಮಾರ್, ಎನ್ ಎಸ್ ಎಸ್ ಅಧಿಕಾರಿ ಕೆ.ಎಂ.ನಾಗರಾಜ್, ಮಂಜುನಾಥ್.ಎನ್, ನವೀನ್, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
District Consumer Disputes Redressal Commission ವಿಮಾ ಮೊತ್ತ ನೀಡಲು ನಿರಾಕರಿಸಿ ಸೇವಾನ್ಯೂನತೆ : ಪರಿಹಾರ ನೀಡಲು ಆಯೋಗ ಆದೇಶ
District Consumer Disputes Redressal Commission ಶಿವಮೊಗ್ಗದ ಶ್ರೀಮತಿ ಕೋಂ ಲೇಟ್ ಮಂಜುನಾಥಗೌಡ ಎಂಬುವವರು ಮ್ಯಾನೇಜಿಂಗ್ ಡೈರೆಕ್ಟರ್, ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂ.ಲಿ.- ಹೈದರಾಬಾದ್ ಮತ್ತು ಮ್ಯಾನೇಜರ್, ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂ.ಲಿ. ಶಿವಮೊಗ್ಗ ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರ ಮಗನಾದ ಸಚಿನ್ ಎಂಬುವವರು 2022ರಲ್ಲಿ ರೂ. 23,411 /- ಪಾವತಿಸಿ ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂಪನಿಯಿಂದ ಪಾಲಿಸಿಯನ್ನು ಪಡೆದಿರುತ್ತಾರೆ. 2023ರಲ್ಲಿ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪಾಲಸಿದಾರನ ತಾಯಿಯವರು ವಿಮಾ ಹಣವನ್ನು ಪಡೆಯಲು ಕ್ಲೈಮ್ ಮಾಡಿರುತ್ತಾರೆ. ಆದರೆ ಇನ್ಸೂರನ್ಸ್ ಕಂಪನಿಯವರು ನೀಡಲು ನಿರಾಕರಿಸಿದ್ದು, ಲೀಗಲ್ ನೋಟೀಸ್‌ಗೂ ಕೂಡ ಉತ್ತರ ಕೊಡದೆ ವಿಮಾ ಹಣವನ್ನೂ ಕೊಡದೆ ಸೇನಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿರುತ್ತಾರೆ.
District Consumer Disputes Redressal Commission ಆಯೋಗವು ದೂರನ್ನು ಪರಿಶೀಲಿಸಿ ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಪಾಲಿಸಿ ವಿತರಿಸಿದ ಒಂದು ವರ್ಷದೊಳಗೆ ಪಾಲಿಸಿ ಪಡೆದುಕೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಮೊದಲನೆ ಪ್ರೀಮಿಯಂನ ಮೊತ್ತದಲ್ಲಿ ಶೇ.80ರಷ್ಟು ಪಾವತಿಸಬೇಕಾಗಿರುತ್ತದೆ ಎಂಬ ವಿಷಯವು ಪಾಲಿಸಿಯ ಷರತ್ತಿನಲ್ಲಿರುತ್ತದೆ. ಆದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ಈ ಆದೇಶದ 45 ದಿನಗಳೊಳಗೆ ಪಾಲಿಸಿಯ ಮೊದಲನೇ ಪ್ರೀಮಿಯಂ ಮೊತ್ತದ ಶೇ.80 ರಷ್ಟು ಅಂದರೆ ರೂ. 17,506/- ಗಳನ್ನು ವಾರ್ಷಿಕ ಶೇ.10% ಬಡ್ಡಿಯೊಂದಿಗೆ ದಿ: 22/11/2024 ರಿಂದ ಪೂರ ಹಣ ನೀಡುವವರೆಗೂ, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12% ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.50,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದಲ್ಲಿ ಈ ಮೊತ್ತಗಳ ಮೇಲೆ ವಾರ್ಷಿಕ ಶೇ.12% ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ.05 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಎಂ.ಟಿ.ಗಂಗಾಧರ ನಾಯ್ಕ್ ತಿಳಿಸಿದ್ದಾರೆ.
District Handloom and Textile Department ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ 2ನೇ ವರ್ಷದ ಡಿಪ್ಲೊಮಾ ಸೇರಲು ಅರ್ಜಿ ಆಹ್ವಾನ
District Handloom and Textile Department ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯು 2025-26ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ ನೇರವಾಗಿ 02ನೇ ವರ್ಷದ ಡಿಪ್ಲೊಮಾ ಕೋರ್ಸ್ ಸೇರಲು 27 ವಯೋಮಿತಿ(ಸಾಮಾನ್ಯ ವರ್ಗದವರಿಗೆ 25 ವರ್ಷ)ಯೊಳಗಿನ 10 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಯಾವುದೇ ಜವಳಿ ವಿಭಾಗದ ವೃತ್ತಿಪರ ವಿಭಾಗದಲ್ಲಿ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 10ನೇ ತರಗತಿ ತೇರ್ಗಡೆ ಜೊತೆಗೆ 2 ವರ್ಷಗಳ ಐಟಿಐ ತೇರ್ಗಡೆಯಾದವರು ಅಥವಾ 10+2 ಜೊತೆಗೆ 2 ವರ್ಷಗಳ ಐಟಿಐ ತೇರ್ಗಡೆಯಾದವರು ಎರಡನೇ ವರ್ಷದ ಡಿಪ್ಲೋಮಾ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಜವಳಿ ವಿಭಾಗದ ವೃತ್ತಿಪರ ಸ್ಟ್ರೀಮ್‌ನಲ್ಲಿ 10+2 ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಐ.ಐ.ಹೆಚ್.ಟಿ. ನಡೆಸುವ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಬ್ರಿಡ್ಜ್ ಕೋರ್ಸ್ನ್ನು ಅಭ್ಯಾಸ ಮಾಡಬೇಕು.
ಗದಗ, ಬೆಟಗೇರಿಯ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 02 ಅಭ್ಯರ್ಥಿಗಳು, ತಮಿಳುನಾಡಿನ ಸೇಲಂ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 03, ಆಂದ್ರಪ್ರದೇಶದ ನಲ್ಲೂರು ಜಿಲ್ಲೆಯ ವೆಂಕಟಗಿರಿಯ ಎಸ್.ಪಿ.ಕೆ.ಎಂ. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 03 ಅಭ್ಯರ್ಥಿಗಳು, ಕೇರಳದ ಕಣ್ಣೂರು ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 02 ಅಭ್ಯರ್ಥಿಗಳು ಒಟ್ಟು 10 ಅಭ್ಯರ್ಥಿಗಳಿಗೆ ಅವಕಾಶವಿದ್ದು,
District Handloom and Textile Department ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೋಢಿಕೃತ ಅಂಕಗಳು ಮೆರಿಟ್ ಲೆಕ್ಕಾಚಾರದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಾಸಂಗ ಸಮಯದಲ್ಲಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/-ರಂತೆ ಶಿಷ್ಯವೇತನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ-ಬೆಟಗೇರಿ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ:15/06/25ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂ.ಸಂ.: 9449162822 ಅಥವಾ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಶಿವಮೊಗ್ಗ ದೂ.ಸಂ.: 08182-223405 ಅಥವಾ ಇಲಾಖೆ ವೆಬ್‌ಸೈಟ್ https://khtigadag.ac.in/lateralentryadmissionorm.pdf ನ್ನು ಸಂಪರ್ಕಿಸುವುದು
Madhu Bangarappa 94 ಸಿ, 94 ಸಿಸಿ ಹಕ್ಕು ಪತ್ರ ವಿತರಣೆ- ಅಭಿವೃದ್ಧಿ ಕಾಮಗಾರಿಗಗಳಿಗೆ ಉಸ್ತುವಾರಿ ಸಚಿವರಿಂದ ಚಾಲನೆ
Madhu Bangarappa ಸಾಗರ ತಾಲ್ಲೂಕಿನಲ್ಲಿ ನಲ್ಲಿ ಅಕ್ರಮ- ಸಕ್ರಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕುಪತ್ರಗಳನ್ನು ವಿತರಿಸುತ್ತಿರುವುದು ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಸೋಮವಾರ ಸಾಗರ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಮೂರನೇ ಮಹಡಿಯಲ್ಲಿ ಶೀಟ್ ಛಾವಣಿ ಹಾಗೂ ಇತರೆ ಮೂಲಭೂತ ಸೌಕರ್ಯ ಕಾಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ , ಪಟ್ಟಣದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಸಾಗರ ತಾಲ್ಲೂಕಿನ ಸುಮಾರು 8 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
೯೪ ಸಿ ಮತ್ತು ಸಿಸಿ 158 ಜನರಿಗೆ ಹಕ್ಕುಪತ್ರ ವಿತರಣೆ ,
ಪೋಷಣ್ ಅಭಿಯಾನದಡಿ ೯೮ ಅಂಗನವಾಡಿ ಕೇಂದ್ರಗಳಿಗೆ ಎಲ್ ಇ ಡಿ ಟಿವಿ ವಿತರಣೆಗೆ ,
ಜಂಬಗಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೀ.2 ಕೋಟಿ ಮೊತ್ತದ 6 ಕೊಠಡಿಗಳಿಗೆ ಕಾಮಗಾರಿ,
ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಿಗೆ ೬೬ ಸೋಲಾರ್ ಲೈಟ್ಗಳನ್ಮು ನೀಡುತ್ತಿರುವುದು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೭ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿತುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಮಹತ್ವದ ಸಭೆ ನಡೆಸಲಾಗಿದೆ ಎಂದರು.
ಕಳೆದ ಬಾರಿಗಿಂತ ಎಸ್ ಎಸ್ ಎಲ್ ಸಿ ಯಲ್ಲಿಶೇ. 8.5 ಹೆಚ್ಚಿಗೆ ಫಲಿತಾಂಶ ಬರುವ ಮೂಲಕ ಉತ್ತಮ ಫಲಿತಾಂಶ ಬಂದಿದ್ದು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಧನ್ಯವಾದಗಳು ಎಂದ ಅವರು ಶಾಲೆಗಳು ಉದ್ದಾರವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಾಲ್ಲೂಕು ಆಡಳಿತ ಸೌಧದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ರೂ. ೪ ಕೋಟಿ ಕಾಮಗಾರಿ, ಸೋಲಾರ್ ಲೈಟ್ ವಿತರಣೆ, ಅಂಗನವಾಡಿ ಕೇಂದ್ರಗಳಿಗೆ ಎಲ್ ಇ ಡಿ ಡಿವಿ ವಿತರಣೆ, ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸದ ವಿಷಯ.
Madhu Bangarappa ಯುಜಿಡಿ ಕಾಮಗಾರಿಗೆ ರೂ. 20 ಕೋಟಿ ಬಿಡುಗಡೆ ಮಾಡಿದ್ದೇನೆ. , ಸರ್ಕಾರಿ ಪ್ರ. ದ. ಕಾಲೇಜು ಕೊಠಡಿ ನಿರ್ಮಾಣಕ್ಕೆ ರೂ.೨ ಕೋಟಿ , ೧೫೮ ಜನರಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿರುವುದು, ಅಂಗನವಾಡಿ ಕೇಂದ್ರಗಳಿಗೆ ಎಲ್ ಇ ಡಿ ಟಿವಿ ವಿತರಣೆ ಮಾಡುತ್ತಿರುವು ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿರುವು ಹೆಮ್ಮೆಯ ವಿಚಾರ.
ತಾಲ್ಲೂಕಿನ ೫ ವರ್ಷದ ಅಭಿವೃದ್ಧಿ ಬಗ್ಗೆ ಯೋಚಿಸಿದ್ದೇನೆ. ನಗರ ರಸ್ತೆ ಅಗಲೀಕರಣ, ಮಾರ್ಕೆಟ್ ರಸ್ತೆ ಅಗಲೀಕರ ಮಾಡುತ್ತೇವೆ. ನಗರದ ಜನರಿಗೆ ೨೪ ಗಂಟೆ ಕುಡಿಯುವ ನೀರಿಗೆ ರೂ.
೨೫೦ ಕೋಟಿ ಯೋಜನೆ ತಯಾರಾಗಿದೆ. ಮನೆ ಮನೆಗೆ ನೀರು ಒದಗಿಸಲಾಗುವುದು. ಮಕ್ಕಳ ಆಸ್ಪತ್ರೆಗೆ ರೂ. ೧.೬೫ ಕೋಟಿ ವೆಚ್ಚದಲ್ಲಿ ಹೈಟೆಕ್ಗೊಳಿಸಲಾಗುವುದು, ಸಾರ್ವಜನಿಕ ಆಸ್ಪತ್ರೆಗೆ ರೂ. ೧.೭೫ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆ ಅಪ್ ಗ್ರೇಡ್ ಮಾಡಲು ರೂ.೭೦ ಲಕ್ಷ ಸರ್ಕಾರ ನೀಡಿದೆ .ನಗರದಲ್ಲಿ ರವೀಂದ್ರನಾಥ ಟ್ಯಾಗೋರ್ ರಂಗಮಂದಿರ ನಿರ್ಮಿಸಲು ರೂ. ೧೩ ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀನಾಸಂ ಅಭಿವೃದ್ದಿಗೆ ರೂ.೧ ಕೋಟಿ ನೀಡಲಾಗುತ್ತಿದೆ. ಫುಡ್ ಕೋರ್ಟ್ , ಪ್ರತಿ ವಾರ್ಡ್ ಪಾರ್ಕ್ ಮಾಡಲಾಗುವುದು.
ಶರಾವತಿ ಮುಳುಗಡೆ ಪ್ರದೇಶಗಳಲ್ಲಿ ಕಾಲುಸಂಕಗಳಿಗೆ ೪೦ ರಿಂದ ೫೦ ಕೋಟಿ ನೀಡುವ ಭರವಸೆ ಸರ್ಕಾರ ನೀಡಿದೆ ಎಂದ ಅವರು ತಾಲ್ಲೂಕಿನಲ್ಲಿ ಯಾವುದೇ ಮೂಲಭೂತ ಸೌಕರ್ಯಕ್ಕೆ ಕೊರತೆ ಮಾಡುವುದಿಲ್ಲವೆಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜಯಂತ್, ತಹಶಿಲ್ದಾರ್ ಚಂದ್ರಶೇಖರ್, ಸೇರಿದಂತೆ ವಿವಿಧ ಮುಖಂಡರುಗಳ ಉಪಸ್ಥಿತರಿದ್ದರು.
Department of Fisheries ಮತ್ಸ್ಯಾಶ್ರಯ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
Department of Fisheries ಮೀನುಗಾರಿಕೆ ಇಲಾಖೆಯು 2024-25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಶಿವಮೊಗ್ಗ ನಗರ/ಗ್ರಾಮಾಂತರ ಮತ್ತು ಎಲ್ಲಾ 7 ತಾಲೂಕುಗಳಿಗೆ ತಲಾ 25 ಮನೆಗಳ (19-ಸಾಮಾನ್ಯ, 4 ಪ.ಜಾ, 02 ಪ.ಪಂ) ಗುರಿ ನಿಗದಿಪಡಿಸಲಾಗಿದೆ. ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಮೀನುಗಾರಿಕೆ ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಂಡಿರುವ ಮೀನುಗಾರರು ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
Department of Fisheries ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಇಲಾಖೆ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೆಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಇಲಾಖೆ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೆಶಕರ ಕಚೇರಿಗಳನ್ನು ಸಂಪರ್ಕಿಸುವುದು.
