Machenahalli Industries Association ಮಾಚೇನಹಳ್ಳಿ ಕೈಗಾರಿಕೆಗಳ ಸಂಘ, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಸಂಯುಕ್ತವಾಗಿ ಹೆಚ್ ಟಿ ಬಳಕೆದಾರರ ಕುಂದು-ಕೊರತೆಗಳ ಕಾರ್ಯಗಾರವನ್ನು ಉದ್ಯಮ ಭವನ ಮಾಚೇನಹಳ್ಳಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೆಸ್ಕಾಂನಿಂದ ಸಿಇ ಬಸಪ್ಪ, ಎಸ್ ಇ ಜಯದೇವಪ್ಪ, ಇ ಕೃಷ್ಣಮೂರ್ತಿ, ಇಇ ಪ್ರಕಾಶ್ ಬಾಳಪುರ್, ಎಇಇ ಬೀರಪ್ಪ , ಎಓ ಅಶ್ವಿನ್ ಕುಮಾರ್, ಎಇ ವಿನಾಯಕ್ ಕೆಪಿಟಿಸಿಎಲ್ ನಿಂದ ಎಇಇ ಕುಮುದ, ಎಇ ದಿವಾಕರ್ ಹಾಗೂ ಎಓ ಮಲ್ಲೇಶ್ ನಾಯಕ್ ಭಾಗವಹಿಸಿದ್ದರು.
ಕೈಗಾರಿಕೋದ್ಯಮಿಗಳು ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಬಂಧಿಸಿದ ತೊಂದರೆಗಳಾದ ಈಗಿರುವ ಫೀಡರ್‌ಗಳನ್ನು ಸಮರ್ಪಕವಾಗಿ ಉಪಯೋಗಿಸಲು ಇರುವ ತೊಡಕುಗಳು, ಹೊಸದಾಗಿ / ಹೆಚ್ಚುವರಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಳ್ಳಲು ಇರುವ ಅಡಚಣೆಗಳು, ಪ್ರಸ್ತುತ ಫೀಡರ್‌ವಾರು ದೈನಿಕ ಸಮಸ್ಯೆಗಳು ಹಾಗೂ ಹಣಕಾಸು ಸಂಬಂಧಿತ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ತಡರಹಿತ ವಿದ್ಯುತ್ ಸರಬರಾಜು, ತಿಂಗಳ ಮೊದಲ ಹಾಗೂ ಮೂರನೇ ಭಾನುವಾರಗಳಲ್ಲಿ ಕಡ್ಡಾಯವಾಗಿ ನಿರ್ವಹಣೆ ಕಾರ್ಯಗಳನ್ನು ಕೈಗೊಂಡು, ತಡರಹಿತ ಹಾಗೂ ಉತ್ತಮ ಗುಣಮಟ್ಟದ ಸೇವೆ ಹಾಗೂ ವಿದ್ಯುತ್ತನ್ನು ಸರಬರಾಜು ಮಾಡಲು ಬದ್ಧರಾಗಿರುವುದಾಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಮುಂದಿನ ಜಿಲ್ಲಾಧಿಕಾರಿಗಳ ಏಕಗವಾಕ್ಷಿ ಸಭೆಯಲ್ಲಿ ಹೆಚ್ಚುವರಿಯಾಗಿ 2.50 ಎಕರೆ ಜಾಗವನ್ನು ಇಲಾಖೆಗೆ ನೀಡಿದ್ದಾದರೆ, ಕೈಗಾರಿಕಾ ಪ್ರದೇಶಕ್ಕೆ ಇನ್ನೊಂದು ಸಬ್-ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ತಯಾರಿದ್ದು, ಈ ನಿಟ್ಟಿನಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘ ಅವಶ್ಯಕ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷರಾದ ಡಿ.ಜಿ.ಬೆನಕಪ್ಪ ನುಡಿದರು.
ಎಲ್ಲಾ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳ ಸೇವೆಯನ್ನು ಗುರುತಿಸಿ, ಆತ್ಮೀಯವಾಗಿ ಸನ್ಮಾನಿಸಲಾಯಿತು.
Machenahalli Industries Association ಈ ಕಾರ್ಯಕ್ರಮದಲ್ಲಿ ಎ.ಎಲ್.ಚಂದ್ರಶೇಖರ್, ಸಂತೋಷ್, ಸುರೇಂದ್ರ, ರಾಜೇಶ್, ಮಧುಕರ್ ಜೋಯಿಸ್, ಡಿ.ಎಸ್.ಚಂದ್ರಶೇಖರ್, ನಾರಾಯಣ್, ಸುಬ್ಬರಾವ್, ದಯಾನಂದ್, ಹರ್ಷ, ಮಹೇಶಪ್ಪ, ಪ್ರತೀಕ್ ಜೋಯಿಸ್, ಶ್ರೀನಿವಾಸ್, ಪ್ರತಾಪ್, ನಂದನ್, ಶ್ಯಾಮ್ ಮುಂತಾದರು ಹಾಜರಿದ್ದರು.