Sunday, March 1, 2026
Sunday, March 1, 2026
Home Blog Page 307

Bhadra Achukattu Area Development ನೀರು ಬಳಕೆದಾರರ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಬೇಕು- ಡಾ.ಕೆ.ಪಿ.ಅಂಶುಮಂತ್

0

Bhadra Achukattu Area Development ಭದ್ರಾ ಅಚ್ಚುಕಟ್ಟು ಪ್ರದೇಶಭಿವೃದ್ಧಿ ಕಚೇರಿಯ ಸಭಾಂಗಣದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗಾಗಿ ಚುನಾವಣಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ತರಬೇತಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಅಚ್ಚುಕಟ್ಟು ಭಾಗದ ರೈತರುಗಳು ಉಪಸ್ಥಿತರಿದ್ದರು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮಂತ್ ರವರು, ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಗಳ ಬಗ್ಗೆ ವಿವರಿಸುತ್ತಾ. ನೀರು ಬಳಕೆ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಸದೃಢಗೊಳ್ಳುವಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಕಾಲ ಕಾಲಕ್ಕೆ ನೀರಿನ ಶುಲ್ಕ ಸಂಗ್ರಹಿಸಿ ಕಾರ್ಯ ನಿರಂತರವಾಗಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು ರೈತರು ಒಗ್ಗಟ್ಟಿನಿಂದ ಬೆಳೆಗಳನ್ನು ಬೆಳೆಯಬೇಕು ತಿಳಿಸಿದರು.

Bhadra Achukattu Area Development ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳು ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳು ಕೆ ಪ್ರಶಾಂತ್ (ತಾಂತ್ರಿಕ), ಹಾಗೂ ಡಾ. ನಾಗೇಶ್ ಎಸ್, ಡೋಂಗರೆ (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.

Kuvempu University ಕುವೆಂಪು ವಿವಿ 35 ನೇ ಘಟಿಕೋತ್ಸವ. ಪದವಿ ಪ್ರಮಾಣ ಪತ್ರಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

0

Kuvempu University ಕುವೆಂಪು ವಿಶ್ವವಿದ್ಯಾಲಯದ 35 ನೇ ವಾರ್ಷಿಕ ಘಟಿಕೋತ್ಸವ ಮೇ/ಜೂನ್-2025 ರ ಮಾಹೆಯಲ್ಲಿ ಜರುಗಲಿದ್ದು ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.
ಆಗಸ್ಟ್/ಸೆಪ್ಟಂಬರ್-2024 ರ ಸ್ನಾತಕ, ಅಕ್ಟೋಬರ್/ನವೆಂಬರ್-2024 ರ ಬಿ.ಪಿ ಇಡಿ, ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ಜನವರಿ/ಫೆಬ್ರವರಿ-2025ರ ಬಿ.ಇಡಿ ಹಾಗೂ 2025 ಜನವರಿ 31 ಮತ್ತು ನಂತರದಲ್ಲಿ ಪಿಹೆಚ್.ಡಿ ಪದವಿಗೆ ಪ್ರಕಟಣೆ ಹೊರಡಿಸಲಾದ ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.
ಘಟಿಕೋತ್ಸವದಲ್ಲಿ ರ‍್ಯಾಂಕ್/ ಸ್ವರ್ಣ ಪದಕ/ನಗದು ಬಹುಮಾನ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಿದ್ದು, ಮೇಲ್ಕಂಡ ವರ್ಷದಲ್ಲಿ ಪ್ರವೇಶ ಶುಲ್ಕದ ಜೊತೆಗೆ ಘಟಿಕೋತ್ಸವ ಶುಲ್ಕವನ್ನು ಪಾವತಿಸಿರುವ ದೂರ ಶಿಕ್ಷಣದ ವಿದ್ಯಾರ್ಥಿಗಳು ಹಾಗೂ ರೆಗ್ಯೂಲರ್ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವೆಬ್‌ಸೈಟ್ ವಿಳಾಸ www.kuvempu.ac.in ನಲ್ಲಿ ವಿದ್ಯಾರ್ಥಿಗಳು ಎಕ್ಸಾಮಿನೇಷನ್ ಗೆ ಲಾಗಿನ್ ಆಗಿ ಕಾನ್ವೊಕೇಶನ್ ಅಪ್ಲಿಕೇಷನ್ ಎಂಬ ಲಿಂಕ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಇ–ಅರ್ಜಿಯನ್ನು ಅಪ್‌ಲೋಡ್ ಮಾಡುವ ಬಗ್ಗೆ ಸೂಚನೆಗಳನ್ನು ಈ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.
ಪಿಹೆಚ್.ಡಿ, ಪದವೀಧÀರರು ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂ.2 ಕೊನೆಯ ದಿನಾಂಕವಾಗಿದೆ.
ದೂರಶಿಕ್ಷಣದ ಅಭ್ಯರ್ಥಿಗಳಿಗೆ ರೂ.1265, ಪಿಹೆಚ್.ಡಿ/ಎಂ.ಫಿಲ್ ಪದವೀಧರ(ಸಾಮಾನ್ಯ)ರಿಗೆ ರೂ.4125, ಎಸ್‌ಸಿ/ಎಸ್‌ಟಿಗೆ ರೂ.3610, ಹಾಗೂ ರೆಗ್ಯುಲರ್ ಅಭ್ಯರ್ಥಿಗಳಿಗೆ(ಸಾಮಾನ್ಯ) ರೂ.1045, ಎಸ್‌ಸಿ/ಎಸ್‌ಟಿಗೆ ರೂ.905 ಎನ್‌ಆರ್‌ಐಗೆ ರೂ. 6985 ಶುಲ್ಕ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಎಟಿಎಂ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್ ಬ್ಯಾಂಕಿಣಗ್ ಪೇ ಮೆಂಟ್/ ಪೇ ಯು ನಲ್ಲಿ ನೇರವಾಗಿ ಪಾವತಿಸಬಹುದಾಗಿದೆ.
Kuvempu University ಘಟಿಕೋತ್ಸದಲ್ಲಿ ಆಯಾ ಪದವಿಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದವರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ವೇದಿಕೆ ಮೇಲೆ ಪ್ರದಾನ ಮಾಡಲಿದ್ದು, ಇತರೆ ರ‍್ಯಾಂಕ್ ವಿಜೇತರಿಗೆ ಪದವಿ ಮತ್ತು ಪ್ರಮಾಣ ಪತ್ರ ಖುದ್ದಾಗಿ ಘಟಿಕೋತ್ಸವದ ಕಚೇರಿಯಲ್ಲಿ ವಿತರಿಸಲಾಗುತ್ತದೆ. ರೆಗ್ಯುಲರ್ ಆಗಿ ಅಧ್ಯಯನ ಮಾಡಿರುವ ಸ್ನಾತಕ/ ಸ್ನಾತಕೋತ್ತರ ಪದವೀಧರರ ಪದವಿ ಪ್ರಮಾಣ ಪತ್ರವನ್ನು ಘಟಿಕೋತ್ಸವ ನಂತರದಲ್ಲಿ ಅವರು ಅಧ್ಯಯನ ಮಾಡಿದ ವಿಭಾಗ/ ಕಾಲೇಜುಗಳಿಂದ ಪಡೆದುಕೊಳ್ಳಬಹುದು. ಪ್ರಸುತ್ತ ಶೈಕ್ಷಣಿಕ ಸಾಲಿಗೆ ಹೊರತುಪಡಿಸಿ ಬೇರೆಲ್ಲಾ ಅರ್ಜಿದಾರರು ಘಟಿಕೋತ್ಸವದ ನಂತರದಲ್ಲಿ ಅವರವರ ವಿಭಾಗ/ಕಾಲೇಜು/ಅಧ್ಯಯನ ಕೇಂದ್ರಗಳಿAದ ಅವರ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟಾçರ್ ಮೌಲ್ಯಮಾಪನ ಕಾರ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451, ಇ-ಮೇಲ್:kusconvo@gmail.com ಹಾಗೂ ದೂ.ಸಂ: ಅಂಡರ್ ಗ್ರಾಜುಯೇಟ್ ಕೋರ್ಸ್-7022254997, ಪೋಸ್ಟ್ ಗ್ರಾಜುಯೇಟ್ ಕೋರ್ಸ್/ ಪ್ರೊಫೆಷನಲ್ ಕೋರ್ಸ್/ಪಿಹೆಚ್.ಡಿ-7022254993, ಡಿಸ್ಟೆಂಟ್ ಮೋಡ್-7022255891, ಕಂಪ್ಯೂಟರ್ ಸೆಕ್ಷನ್-8904712601, ಟಿಕ್ನಿಕಲ್ ಅಸಿಸ್ಟೆಂಟ್-7022255745, ಆನ್‌ಲೈನ್ ರಿಲೆಟೆಡ್ ಎನ್‌ಕ್ವೆರಿ-8183098138, 8183098136 ಗೆ ಸಂಪರ್ಕಿಸಬಹುದು ಎಂದು ಕುಲಸಚಿವರು ಮೌಲ್ಯಮಾಪನ ಇವರು ತಿಳಿಸಿದ್ದಾರೆ.

CM Siddharamaiah ಮೇ18. ಸೀಎಂ ಸಿದ್ಧರಾಮಯ್ಯ ಅವರಿಂದ ಸರ್ಕಾರಿ ನೌಕರರ ರಾಜ್ಯಮಟ್ಟದ‌ ಕ್ರೀಡಾಕೂಟಕ್ಕೆ ಚಾಲನೆ

0

CM Siddharamaiah ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮೇ 18ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ನೌಕರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮಪ್ರತಿನಿಧಿಗಳಿಗೆ ವಿವರ ನೀಡಿದ ಅವರು 2017ರಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿತ್ತು ಇದೀಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 18ರಂದು ಸಂಜೆ 5:00 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಲಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲೆಯ ಚುನಾಯಿತ ಎಲ್ಲ ಜನ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 15000 ನೌಕರ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದ್ದು, ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದ ಅವರು ವೈಯುಕ್ತಿಕವಾಗಿ 97 ಸ್ಪರ್ಧೆಗಳು ನಡೆದರೆ 16 ಗುಂಪು ಸ್ಪರ್ಧೆಗಳು ನಡೆಯಲಿವೆ.

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವೈಯಕ್ತಿಕ 15 ಗುಂಪು 16 ಸ್ಪರ್ಧೆಗಳು ನಡೆಯಲಿದೆ. ವಿಶೇಷವಾಗಿ ಪ್ರತಿ ಕ್ರೀಡೆಗಳಲ್ಲೂ ಪುರುಷ ಮತ್ತು ಮಹಿಳೆಯರಿಗೆ ಹಾಗೂ 45ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಮೇ 18ರಂದು ನಗರದ ಎನ್ಇಎಸ್ ಮೈದಾನದಲ್ಲಿ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಪಾಲ್ಗೊಳ್ಳುವ ಎಲ್ಲ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದರು . ಮೇ 18ರಂದು ಸಂಜೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಸಿದ್ಧರಾಮಯ್ಯ ಅವರು ಕ್ರೀಡಾಕೂಟದ ಉದ್ಘಾಟನೆ ನೆರವೇರಿಸುವರು. ಅಂದು ಸಂಜೆ 7:00ಗೆ ರಾಜೇಶ್ ಕೃಷ್ಣನ್ ಅವರಿಂದ ಗಾನಸುಧಾ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವರು.

ಈ ಕಾರ್ಯಕ್ರಮದಲ್ಲಿ ಸರಿಗಮಪ ಸ್ಪರ್ಧೆಯ ಪ್ರತಿಭಾವಂತ ಸ್ಪರ್ಧಾಳುಗಳು ಕೂಡ ಭಾಗವಹಿಸಲಿದ್ದಾರೆ. ಮೇ 19ರಂದು ಸಂಜೆ ರಾಜ್ಯದ ಪ್ರತಿಭಾವಂತ ಜನಪದ ಕಲಾವಿದರನ್ನೊಳಗೊಂಡ ಜನಪದ ದಿಬ್ಬಣ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

CM Siddharamaiah ಮೇ 20ರಂದು ಸಂಜೆ ಕುವೆಂಪು ರಂಗ ಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ವಿಜೇತರಾದ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಸರ್ಕಾರವು ಓಓಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಕ್ರೀಡಾಕೂಟ ಅತ್ಯಂತ ಅಚ್ಚುಕಟ್ಟಾಗಿ ನಡೆಸಲು ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದ ಅವರು, ಈ ಕಾರ್ಯಕ್ರಮಕ್ಕೆ ನಿಯಮಾನುಸಾರ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್‌, ಪ್ರಧಾನ ಕಾರ್ಯದರ್ಶಿ ಆರ್.ಪಾಪಣ್ಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ, ದಿನೇಶ್‌, ಸತೀಶ್‌, ಆರ್.ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

Blood donation camp ನಮ್ಮ ಒಬ್ಬರ ರಕ್ತದಿಂದ ಏನಾಗುತ್ತೆ? ಎಂಬ ಭಾವನೆ ಬಿಡಿ- ಅನಿಲ್ ಭೂಮರೆಡ್ಡಿ

0

Blood donation camp ಪ್ರಕೃತಿ ನಿಸ್ವಾರ್ಥದಿಂದ ತನ್ನ ಕಾರ್ಯ ಮಾಡುತ್ತದೆ. ಅದಕ್ಕೆ ಕೊಡುವುದು ಮಾತ್ರ ಗೊತ್ತು, ಅದನ್ನು ತಮ್ಮ ಪಂಚೇಂದ್ರಿಯದಿಂದ ಆಸ್ವಾದಿಸಿ ಎಂದು ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜೆ.ಎನ್.ಎನ್.ಸಿ.ಇ.ಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಬೂಮರೆಡ್ಡಿ ಮಾತನಾಡುತ್ತಿದ್ದರು.
ಪಂಚಭೂತದಿಂದ ಬಂದ ಈ ಶರೀರ ಇನ್ನೊಂದು ಬದುಕಿಗೆ ಜ್ಯೋತಿಯಾಯಿತು ಎನ್ನುವುದು ನಾವು ರಕ್ತದಾನ ಮಾಡಿದಾಗ ಮಾತ್ರ. ರಕ್ತದಾನದಿಂದ ಜೀವ ಉಳಿಸ ಬಹುದು. ಸಾವಿರಾರು ಜನ ರಸ್ತೆ ನಿಯಮ ಪಾಲಿಸದೆ ಅಪಘಾತ ಮಾಡಿಕೊಂಡು ರಸ್ತೆಗೆ ರಕ್ತ ಚಲ್ಲಿದರೆ ಏನು ಬಂತು? ಈ ಜನವರಿ ಯಿಂದ ಶಿವಮೊಗ್ಗ ಒಂದರಲ್ಲೆ ನೂರ ಐವತ್ತಕ್ಕಿಂತ ಹೆಚ್ಚ ಅಪಘಾತ ಸಂಭವಿಸಿವೆ. ,ಪ್ರಾಣಿ ಹಸಿದಾಗ ಬೇಟಿ ಆಡುತ್ತೆ, ಮಾನವ ಎಲ್ಲಾ ಬೇಕು ಎನ್ನುತ್ತಾನೆ. ನಮ್ಮ ಒಬ್ಬರ ರಕ್ತದಿಂದ ಏನಾಗುತ್ತೆ ಎನ್ನುವ ಮನೋಭಾವ ಬಿಡಿ. ಹನಿ ಹನಿ ಗೂಡಿದರೆ ಹಳ್ಳ. ನಾನು ರಕ್ತದಾನ ಶಿಬಿರ ದಾನ ಮಾಡುವ ಮೂಲಕ ಉದ್ಘಾಟಿಸುತ್ತೇನೆ ಎಂದರು.
Blood donation camp ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಾ.ಶಿವರಾಮಕೃಷ್ಣ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಕನಿಷ್ಟ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಿ. ಹುಟ್ಡಿದ ಹಬ್ಬಕ್ಕೆ, ವ್ಯಾಲೆನ್ಸೆಡೇಗೆ, ನಂತರ ವಿವಾಹ ಮಹೋತ್ಸಕ್ಕೆ. ರಕ್ತದಾನ ಶಿಬಿರದಲ್ಲಿ ಏಕೆ ಕೊಡಬೇಕು, ರಕ್ತಬೇಕಾದಗ ಕೊಡಬಹುದಲ್ಲ ಎನ್ನುತ್ತಾರೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆಗೆ ಅಗತ್ಯ ರಕ್ತ ಬೇಕಾಗುತ್ತದೆ. ಆಗ ಪರೀಕ್ಷೆ ಮಾಡಿದ ಶುದ್ದರಕ್ತವನ್ನು ಮಾತ್ರ ಕೊಡಬೇಕು ತಕ್ಷಣಕ್ಕೆ ಶುದ್ದ ಎರಡು ಮೂರು ಪರಿಕ್ಷೆ ಮಾಡಿದ ರಕ್ತ ಒದಗಿಸುವುದು ಕಷ್ಟ. ಆದ್ದರಿಂದ ಶುದ್ದರಕ್ತ ಕೇಂದ್ರಗಳಲ್ಲಿ ಸಂಗ್ರಹಿಸಿ ಇಟ್ಟು ಕೊಂಡಿರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಒಟ್ಟು ನಾಲ್ಕು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ಸೆಮಿಸ್ಟರ್ ಗೆ ಒಂದು ಬಾರಿ ಎಲ್ಲರೂ ರಕ್ತದಾನ ಮಾಡಿದರೆ ವರ್ಷಕ್ಕೆ ನಮ್ಮ ಕಾಲೇಜಿನಿಂದ ಒಂಬತ್ತು ಸಾವಿರ ಯುನಿಟ್ ರಕ್ತದಾನ ಮಾಡಬಹುದು, ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ದೇಶದಲ್ಲೆ ಒಂದು ದಾಖಲೆ ಮಾಡಬಹುದು. ವಿದ್ಯಾರ್ಥಿಗಳು ಕಾಲೇಜು ಬಸ್ ಗಳನ್ನೇ ಉಪಯೋಗಿಸಿ. ನಾನು ರಕ್ತದಾನ ಮಾಡುತ್ತೆನೆ, ತಾವೆಲ್ಲರೂ ರಕ್ತದಾನ ಮಾಡಿ ಎಂದರು.
ವೇದಿಕೆಯಲ್ಲಿ ಕಾಂತೇಶ್ ಮೂರ್ತಿ, ಧರಣೇಂದ್ರದಿನಕರ್, ಅರುಣ್ ಕುಮಾರ್, ಛಾಯ, ಕುಮಾರ್ ಶಾಸ್ತ್ರಿ ಇದ್ದರು. ಭಾರತಿ ಪ್ರಾರ್ಥನೆ ಮಾಡಿ, ಧನ್ಯ ಸ್ವಾಗತಿಸಿದರು, ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಚೈತ್ರ ನಿರೂಪಿಸಿ ಪಲ್ಲವಿ ವಂದಿಸಿದರು. ಬಸವರಾಜ್, ವಾಗೇಶ್, ಜಿ.ವಿಜಯಕುಮಾರ್, ಬಾಲಕೃಷ್ಣ,
ಸುರೇಶ್, ಭಾಪಟ್ ಇತರು ಇದ್ದರು.

L.B. and S.B.S. College ನಿರಂತರ ಓದು & ಗಂಭೀರ ಪ್ರಯತ್ನದಿಂದ ಗುರಿ ಸಾಧನೆ – ಕೆ.ಎಸ್.ಬಸವರಾಜ್

0

L.B. and S.B.S. College ಕಠಿಣ ಪರಿಶ್ರಮ, ನಿರಂತರ ಓದು ಹಾಗೂ ಗಂಭೀರ ಪ್ರಯತ್ನದಿಂದ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಬಸವರಾಜ ಕೆ.ಎಸ್.ಹೇಳಿದರು.
ಸಾಗರ ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಎಂಡ್ ಎಸ್.ಬಿ.ಎಸ್. ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ನಾವು ದೊಡ್ಡ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಬೇಕು. ಕೊನೆಗೆ ಡಿ.ಸಿ. ಅಲ್ಲವಾದರೆ ಎಫ್.ಡಿ.ಸಿ.ಯಾದರೂ ಆಗಬಹುದು ಎಂದರು.
ಕೆಪಿಎಸ್‌ಸಿ ಯಂಥ ಪರೀಕ್ಷೆಗಳನ್ನು ಪಾಸು ಮಾಡಿ ಆಯ್ಕೆಯಾಗುವ ಸಂದರ್ಭದಲ್ಲಿ ನಮ್ಮ ಪ್ರಯತ್ನ ಗಂಭೀರವಾಗಿರಬೇಕು. ರಾಜಕೀಯ ಪ್ರಭಾವವೋ, ಹಣದ ಬಲವೋ ಇದೆ ಎಂದು ಓದುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಲಿಖಿತ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿದರೆ ಯಾವ ಪ್ರಭಾವವೂ, ಹಣದ ಅಗತ್ಯವೂ ಬೇಡ. ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳಲ್ಲಿ ಕಡಿಮೆ ಅಂಕ ಬಂದರೆ ಭವಿಷ್ಯವೇ ಇಲ್ಲ ಎಂಬ ಮನಸ್ಥಿತಿ ಬೆಳೆಸಿಕೊಳ್ಳಬಾರದು. ಇದು ಒಂದು ಹಂತ ಮಾತ್ರ. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಹೆಚ್ಚು ಹೆಚ್ಚು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಜೀವನದಲ್ಲಿ ಏನೂ ಇಲ್ಲದವರೂ ದೊಡ್ಡ ಸಾಧನೆ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಹೆಚ್ಚು ಅಂಕ ಪಡೆದವರಿಗಿಂತ ಕಡಿಮೆ ಅಂಕ ಪಡೆದು ದೊಡ್ಡ ಸಾಧನೆ ಮಾಡಿದವರಿದ್ದಾರೆ. ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯ ಅಧಿಕಾರ ಸಿಕ್ಕಾಗ ಸಾಮಾನ್ಯ ಜನರಿಗೆ ಸಹಾಯ ಮಾಡಬೇಕು. ಯಾವುದೇ ಅಧಿಕಾರ ಶಾಶ್ವತವಲ್ಲ. ಸಿಕ್ಕ ಅಧಿಕಾರವನ್ನು ಇರುವ ಮಿತಿಯಲ್ಲಿ ನೊಂದವರ ನೆರವಿಗೆ ಬಳಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.
L.B. and S.B.S. College ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾಲೇಜು ರಾಜ್ಯದಲ್ಲೇ ಹೆಸರು ಮಾಡಿದ ವಿದ್ಯಾಸಂಸ್ಥೆ. ಕವಿ ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರರು, ಜಿ.ಕೆ.ಗೋವಿಂದರಾವ್ ಮುಂತಾದವರು ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ 60 ಸಾವಿರ ಪದವೀಧರರು ಬದುಕು ಕಟ್ಟಿಕೊಂಡಿದ್ದಾರೆ. ಅಡಿಗರ ಕಾಲದಲ್ಲಿ ವಿದ್ಯಾರ್ಥಿಗಳೇ ಬರೆದು ಪ್ರಕಟಿಸುತ್ತ ಬಂದಿರುವ `ಅನ್ವೇಷಣೆ’ ಪುಸ್ತಕ ಈಗಲೂ ಬರುತ್ತಿರುವುದು ಶ್ಲಾಘನೀಯ ಸಂಗತಿ. ಈ ಸಲದ ಅನ್ವೇಷಣೆಯಲ್ಲಿ ವಿದ್ಯಾರ್ಥಿಗಳು ಬರೆದ ಪರಿಸರ ಸಂಬಂಧಿ ಲೇಖನ ಸೇರಿದಂತೆ ಹಲವು ಪ್ರಬುದ್ಧ ಲೇಖನಗಳಿವೆ. ಪಠ್ಯೇತರ ಓದು ಕೂಡ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಪಠ್ಯದಿಂದ ಅಂಕ ಮಾತ್ರ ಪಡೆದುಕೊಳ್ಳಬಹುದು. ಆದರೆ ಪಠ್ಯೇತರ ಓದಿನಿಂದ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಗಾಂಧಿ, ಬಸವಣ್ಣ, ಅಂಬೇಡ್ಕರ್, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕು. ಇವರು ದೇಶದ ಜನರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶಕರು. ಗಾಂಧೀಜಿಯವರ ಆತ್ಮಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು. ಈ ಮಹಾನ್ ನಾಯಕರ ಚರಿತ್ರೆ ಓದಿನಿಂದ ನಮ್ಮ ವ್ಯಕ್ತಿತ್ವ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಇಂಥವರ ಕುರಿತ ಒದು ಮುಖ್ಯವಾಗುತ್ತದೆ ಎಂದು ಸಲಹೆ ನೀಡಿದರು. ನಮ್ಮ ದೇಶ ಅನೇಕ ಜಾತಿ, ಮತ, ಪಂಥ, ಸಂಸ್ಕೃತಿ, ಸಂಪ್ರದಾಯಗಳಿಂದ ಕೂಡಿದೆ. ಇವೆಲ್ಲವನ್ನೂ ಮೀರಿ ಮಾನವೀಯತೆಯಲ್ಲಿ ನಾವು ಬದುಕಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿಗೆ ೪೫ ಲಕ್ಷ ರೂ. ಆರ್ಥಿಕ ನೆರವು ನೀಡಿದ ಬೆಂಗಳೂರಿನ ಲಿಂಡೆ ಇಂಡಿಯಾ ಪ್ರೆ. ಲಿ. ಕಂಪನಿಯ ಮ್ಯಾನೇಜರ್ ಮನೀಷ್ ಬಿ.ಹೆಬ್ಸೆ ಮತ್ತು ಈ ಬಾರಿಯ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್ ವಿಜೇತ ವಿಕಾಸ್ ವಿ. ಹಾಗೂ ಬೆಂಗಳೂರಿನ ಅಪರ ಆಯುಕ್ತ ಬಸವರಾಜ ಕೆ.ಎಸ್. ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದಿತರು ಹಾಗೂ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿದರು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ವಿಷಯಗಳ ದತ್ತಿ ಬಹುಮಾನ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

S.N.Chennabasappa ಶಾಸಕ ಚೆನ್ನಿ ಅವರ ಮಧ್ಯಸ್ಥಿಕೆಯಿಂದ ಗೋವಿಂದಾಪುರದಲ್ಲಿನ “ಅಕ್ರಮ‌ ಒತ್ತುವರಿ” ತೆರವು

0

S.N.Chennabasappa ತುಂಗಾ ಮೇಲ್ದಂಡೆ ಇಲಾಖೆಯ ಅಧಿಕಾರಿಗಳು, ಶಿವಮೊಗ್ಗ ತಾಲೂಕಿನ ಗೋವಿಂದಪುರದಲ್ಲಿನ ನಿವಾಸಿಗಳು ನಿರ್ಮಿಸಿದ್ದ ಸ್ಥಳೀಯ ದೇವಾಲಯವನ್ನು “ಅಕ್ರಮ ಒತ್ತುವರಿ” ಎನ್ನುವ ನೆಪದಲ್ಲಿ ತೆರವುಗೊಳಿಸಿದರು. ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಮುದಾಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಗಂಭೀರವಾಗಿ ಗಮನ ಹರಿಸಿ, ತಕ್ಷಣ ಪರಿಶೀಲನೆ ನಡೆಸಿ, ದೇವಾಲಯವನ್ನು ಮರುಸ್ಥಾಪಿಸಲು ಹಾಗೂ ಭಕ್ತರ ಭಾವನೆಗಳಿಗೆ ತಕ್ಕಂತೆ ನ್ಯಾಯ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ “ಸಮುದಾಯದ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಗೌರವಿಸುವಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ಅಭಿವೃದ್ಧಿ ಅಥವಾ ವ್ಯವಸ್ಥಾಪನಾ ಕ್ರಮಗಳು ಜನಭಾವನೆಗಳಿಗೆ ತಾಕಿಲ್ಲದೆ ಜಾರಿಗೆ ಬರಬೇಕು” ಎಂದು ತಿಳಿ ಹೇಳಿದರು.

S.N.Chennabasappa ಭೇಟಿಯ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ, ತಹಸೀಲ್ದಾರ್‌, ತುಂಗಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಳೇ ಬೊಮ್ಮನಕಟ್ಟೆಯ ಸ್ಮಶಾನ ಅಭಿವೃದ್ಧಿಗೆ ಚಾಲನೆ

0

ಸುಮಾರು ಎರಡು ದಶಕಗಳ ಹಿಂದೆ ಹೆಚ್.ಎಂ. ಚಂದ್ರಶೇಖರಪ್ಪನವರ ಶಿವಮೊಗ್ಗ ಕ್ಷೇತ್ರ ಶಾಸಕರಾಗಿದ್ದ ಅವಧಿಯಲ್ಲಿ ನಗರದ ಹಳೇ ಬೊಮ್ಮನಕಟ್ಟೆಯಲ್ಲಿ ಸುಮಾರು 3 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಾಗಿಟ್ಟಿದ್ದರು. ಆಗ ಸ್ಥಳೀಯ ನಿವಾಸಿಗಳು ಇದರ ಸದುಪಯೋಗ ಪಡೆಯುತ್ತಿದ್ದರು.
ನಂತರ ದಿನಗಳಲ್ಲಿ ಈ ಭಾಗದಲ್ಲಿ ಲೇಔಟ್‌ಗಳಾದವು. ಜೊತೆಗೆ ಮುಖ್ಯವಾಗಿ ಆಶ್ರಯ ಬಡಾವಣೆ ಆದ ಸಂದರ್ಭದಲ್ಲಿ ಬೊಮ್ಮನಕಟ್ಟೆಗೆ ಸಾಕಷ್ಟು ಹೆಸರು ಬಂತು. ಆದರೆ ಚಂದ್ರಶೇಖರಪ್ಪ ಅವರು ಸ್ಮಶಾನಕ್ಕೆ ಒದಗಿಸಿದ್ದ ಜಾಗವು ಅಭಿವೃದ್ಧಿ ಕಾಣಲಿಲ್ಲ. ಇದರಿಂದ ಸ್ಮಶಾನಕ್ಕೆ ಮೂಲ ಭೂತ ಸೌಲಭ್ಯವಿಲ್ಲದೆ ಪಾಳು ಬಿದ್ದಂತಾಗಿತ್ತು.
ಸ್ಮಶಾನ ಅಭಿವೃದ್ಧಿಗೊಳಿಸಲು ಹಳೇ ಬೊಮ್ಮನಕಟ್ಟೆಯ ನಿವಾಸಿಗಳು ಇತ್ತೀಚೆಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದರು. ಇದಕ್ಕೆ ಸ್ಪಂಧಿಸಿದ ಆಯುಕ್ತರು ಸ್ಮಶಾನದ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಎಂಎಲ್‌ಸಿ ಬಲ್ಕಿಶ್ ಭಾನು, ಆಯುಕ್ತರಾದ ಕವಿತಾ ಯೋಗಪ್ಪ ನವರ್ ಅವರು ಸ್ಥಳ ಪರಿಶೀಲನೆ ನಡೆಸಿ ಮೂಲಭೂತ ಸೌಕರ್ಯ ನೀಡಲು ಮುಂದಾಗಿದ್ದಾರೆ.
ಸ್ಮಶಾನಕ್ಕೆ ಮೂಲಭೂತ ಸೌಕರ್ಯ ನೀಡಲು ಸ್ಪಂಧಿಸಿದ ಎಂಎಲ್‌ಸಿ ಅವರಿಗೆ ಮತ್ತು ಆಯುಕ್ತರಿಗೆ ಸಮಾಜ ಸೇವಕ ಎಸ್. ಸಿದ್ಧೇಶ್, ವಾರ್ಡಿನ ಪ್ರಮುಖರಾದ ಮಾಲತೇಶ್, ಮಹೇಶ್, ಮೋಹನ್, ಪರಮೇಶ್ವರಪ್ಪ, ಶ್ರೀಕಾಂತ್, ಸಿದ್ದೇಶ್, ಅನಂತ, ಪ್ರಕಾಶ್, ಶೃತಿ, ಜ್ಯೋತಿ ಹಾಗೂ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

Madhu Bangarappa ಐಕಾನಿಕ್ ಮಟ್ಟದಲ್ಲಿ ಜೋಗ ಪ್ರವಾಸಿ ತಾಣದ ಅಭಿವೃದ್ದಿ- ಮಧು ಬಂಗಾರಪ್ಪ

0

Madhu Bangarappa ನೈಸರ್ಗಿಕ ಸಂಪತ್ತಿನಿಂದ ಕೂಡಿದ ಜೋಗ ಜಲಪಾತ ಪ್ರದೇಶವನ್ನು‌ ಐಕಾನಿಕ್ ಹಾಗೂ ಮಾದರಿ ಪ್ರವಾಸೋದ್ಯಮ ಪ್ರದೇಶವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.

ಜೋಗ್ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜೋಗ ಜಲಪಾತ ಪ್ರದೇಶದ ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ದಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೂ. 184 ಕೋಟಿ‌ ಮೊತ್ತದಲ್ಲಿ‌ ಅಭಿವೃದ್ಧಿಪಡಿಸಲಾಗುತ್ತಿರುವ ಕಾಮಗಾರಿಗಳಾದ ಎಂಟ್ರೆನ್ಸ್ ಪ್ಲಾಜಾ, ಟೇಬಲ್ ಟಾಪ್ ಏರಿಯಾ ವ್ಯು, ವ್ಯು ಡೆಕ್, ಸೆಂಟ್ರಲ್ ಏರಿಯಾ, ಟ್ರಾನ್ಸಿಟ್ ಹಬ್, ಎಸ್ ಟಿ ಪಿ ರಸ್ತೆ, ಚರಂಡಿ, ರಿಟೇಲ್ ನೋಡ್ ಬ್ಲಾಕ್ಸ್, ಬ್ಲಾಕ್ ಎ, ಬಿ, ಸಿ , ಆರ್ಟ್ ಗ್ಯಾಲರಿ, ಸಿಸಿಟಿವಿ ಇತರೆ ವೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಿದ್ದೇವೆ.

ಅಕ್ಟೋಬರ್ 2021ರಲ್ಲಿ‌ ಕೆಲಸ ಆರಂಭಿಸಲಾಗಿದೆ.‌
ಸ್ವಾಭಾವಿಕ‌ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಈ ಪ್ರದೇಶ ಐಕಾನಿಕ್ ಸ್ಥಳವಾಗುವಂತೆ, ಇತರೆ ದೇಶಗಳೂ ಇದನ್ನು ಮಾದರಿಯಾಗುವಂತೆ ತೆಗೆದುಕೊಳ್ಳುವಂತೆ ಕಾಮಗಾರಿಗಳು ಆಗಬೇಕು ಎಂದು‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವ್ಯು ಡೆಕ್ ಲ್ಲಿ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳಬೇಕು.
ಜನರಿಗೆ ಉತ್ತಮ‌ ಮನೋರಂಜನೆ ಜೊತೆ ಆದಾಯ ತರುವಂತಹ ಚಟುವಟಿಕೆ ಗೆ ಒತ್ತು ನೀಡಬೇಕು. ಜಯಿಂಟ್ ವ್ಹೀಲ್ ಅಳವಡಿಸುವ ಮೂಲಕ ಅದರಿಂದ ಜೋಗ ಜಲಪಾತದ ಸೊಬಗನ್ನು ಸವಿಯುವ ಯೋಜನೆ ರೂಪಿಸುವಂತೆ ಸಲಹೆ ನೀಡಿದ ಅವರು ವರ್ಷದ 365 ದಿನಗಳೂ ಪ್ರವೇಶಕ್ಕೆ ಲಭ್ಯವಾಗುವಂತೆ ಮಾಡಬೇಕು . ಜಲಪಾತಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದರೆ ಇನ್ನೂ ಆಕರ್ಷಕವಾಗಿರುತ್ತದೆ. ಬೇಸಿಗೆಯಲ್ಲಿ ಮಕ್ಕಳ ಮನೋರಂಜನೆಗೆ ರೈನ್ ಡ್ಯಾನ್ಸ್, ಇತರೆ ಚಟುವಟಿಕೆ ಹಾಕಿಕೊಳ್ಳಬೇಕು. ಶೈಕ್ಷಣಿಕ ಪ್ರವಾಸಕ್ಕೆ ವ್ಯವಸ್ಥೆ ಮಾಡಬೇಕು.

ಕೆಆರ್ ಎಸ್ ರೀತಿ ಗಾರ್ಡನ್, ಫೌಂಟನ್ ವ್ಯವಸ್ಥೆ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಿತ್ತದೆ ಎಂದರು.
ಸಭೆಗೂ ಮುನ್ನ ಸಚಿವರು, ಶಾಸಕರು‌ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು‌ ವೀಕ್ಷಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕಾರ್ಗಲ್
ಪ.ಪಂ.ಅಧ್ಯಕ್ಷ ರಾಜು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೆಪಿಸಿ ಮುಖ್ಯ ಅಧೀಕ್ಷಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪತ್ರಿಕಾಗೋಷ್ಠಿ:
ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಶಾಸಕರಾದ ಗೋಪಾಲಕೃಷ್ಣ ಅವರು ರೂ. 75. ಕೋಟಿ ತಂದು ಕೆಲಸ ಚುರುಕುಗೊಳಿಸಿದ್ದಾರೆ. ರೋಪ್ ವೇ, ಗ್ಲಾಸ್ ಹೌಸ್, ಝಿಪ್ ಲೈನ್, ಕೆಆರ್ ಎಸ್ ರೀತಿ ಪಾರ್ಕ್, ಮನೋರಂಜನೆ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆ ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು.

Madhu Bangarappa ಜಯಿಂಟ್ ವೀಲ್, ಕೇಬಲ್ ಕಾರ್, ನೈಟ್ ವ್ಯೂ ವ್ಯವಸ್ಥೆ ಮಾಡಲು ಸಲಹೆ ನೀಡಿದ್ದೇನೆ.‌ ಜೋಗ ಅತ್ಯಂತ ಆಕರ್ಷಣೀಯ ಪ್ರವಾಸೋದ್ಯಮ ಪ್ರದೇಶ ಆಗಬೇಕು. ರಾಜ್ಯದಲ್ಲೇ ಅತಿ ಹೆಚ್ಚು ಮತ್ತು ೪ ಮಟ್ಟದ ವಿದ್ಯುತ್ ಉತ್ಪಾದನೆ ಆಗುತ್ತಿರುವ ವ್ಯವಸ್ಥೆ ಕುರಿತು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಮ್ಯೂಸಿಯಂ ಲ್ಲಿ ಲೈವ್ ಟಿವಿ ಹಾಕಿ ತೋರಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಆಗಬೇಕಿದ್ದು 6 ರಿಂದ 8 ತಿಂಗಳಲ್ಲಿ ಕೆಲಸ ಮುಗಿಯುವ ನಿರೀಕ್ಷೆ ಇದೆ ಎಂದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯದ, ಹೊರ ರಾಜ್ಯದ ಜನರು ಬರುವ ಹಾಗೆ ಜೋಗ ಜಲಪಾತ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ.

ರೂ. 184 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಈವರೆಗೆ 95 ಕೋಟಿ ಬಿಡುಗಡೆ ಮಾಡಲಾಗಿದೆ.
ರೈನ್ ಡಾನ್ಸ್,ಫೌಂಟನ್ , ಗ್ಲಾಸ್ ಹೌಸ್ , ರೋಪ್ ವೇ, ಜಯಿಂಟ್ ವೀಲ್ ಇತರೆ ಮನೋರಂಜನೆ, ಪಾರ್ಕಿಂಗ್, ಪೀಕ್ ಸೀಜನ್ ಲ್ಲಿ ಜನದಟ್ಟಣೆ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆ ಮಾಡಲಾಗುವುದು.
ಡ್ಯಾಂ ಕೆಳಗೆ ಜಾಗ ಇದ್ದು ಕೆಆರ್ ಎಸ್ ರೀತಿ ದೊಡ್ಡ ಪಾರ್ಕ್ ನ್ನು ಪ್ರಾಧಿಕಾರದಿಂದ ಮಾಡುವ ಯೋಜನೆ ಇದೆ. ಪಾರ್ಕಿಂಗ್, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Oxford Saraswati Temple in Holalur ಸಂಸ್ಕೃತ ಭಾಷೆಯ ಕಲಿಕೆ ಮಕ್ಕಳಲ್ಲಿ ಜ್ಞಾನ ವೃದ್ಧಿಸುತ್ತದೆ – ಪಲ್ಲವಿ

0

Oxford Saraswati Temple in Holalur ಹೊಳಲೂರಿನ ಆಕ್ಸಫರ್ಡ್ ಸರಸ್ವತಿ ಮಂದಿರದಲ್ಲಿ ವಸಂತ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಲ್ಲವಿ ಮಾತನಾಡಿ, ಸಂಸ್ಕೃತ ಭಾಷೆ ಮಕ್ಕಳ ಜ್ಞಾನ ಹೆಚ್ಚಿಸುವುದರೊಂದಿಗೆ, ಉಳಿದ ಎಲ್ಲಾ ಭಾಷೆಗಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಇದನ್ನು ನಮ್ಮ ಗ್ರಾಮಾಂತರದ ಮಕ್ಕಳಿಗೂ ತಲುಪಬೇಕೆಂಬ ಮೂಲ ಉದ್ದೇಶದಿಂದ ಸಂಸ್ಕೃತ ಭಾರತೀ ಸಂಯೋಜಕಿಯಾದ ವಿಮಲಾ ರೇವಣಕರ್ ರವರನ್ನು ಕೋರಿಕೊಂಡಾಗ ಇವರು ಒಂದು ತಿಂಗಳು ಬೇಸಿಗೆ ಶಿಬಿರ ಏರ್ಪಡಿಸಿ ಮಕ್ಕಳಿಗೆ ಆಟ, ಹಾಡು, ಶ್ಲೋಕ ಹೀಗೆ ನಾನಾ ವಿಧದಲ್ಲಿ ಸಂಸ್ಕೃತ ಸುಲಲಿತವಾಗಿ ಕಲಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

ವಿಮಲ ರೇವಣಕರ್ ಮಾತನಾಡಿ, ಮಕ್ಕಳು ಯಾವುದೇ ವಿಚಾರವನ್ನು ಸುಲಭವಾಗಿ ಗ್ರಹಿಸುತ್ತಾರೆ. ನಾವು ಕಲಿಸುವ ರೀತಿ ಅವರಿಗೆ ಆಸಕ್ತಿ ತರುವಂತಿರಬೇಕು. ಅದನ್ನು ಯಶಸ್ವಿಯಾಗಿ ಪೂರೈಸಿದ ಖುಷಿ ತಮಗೆ ಸಿಕ್ಕಿದೆ ಎಂದು ತಿಳಿಸಿದರು.

Oxford Saraswati Temple in Holalur ಕಾರ್ಯಕ್ರಮದಲ್ಲಿ ಭಾರತಿ ಪ್ರಾರ್ಥಿಸಿ, ವಿನೂನ್ ನಿರೂಪಿಸಿ, ಮನ್ವಿತ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು.

Rotary Pre-Educational & Charitable Trust ರೋಟರಿ ಪೂರ್ವ ಶಾಲೆಯ ಸರ್ವತೋಮುಖ ಪ್ರಗತಿಗೆ ತಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು- ಎಂ.ಚಂದ್ರಶೇಖರಯ್ಯ

0

Rotary Pre-Educational & Charitable Trust ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನಲ್ಲಿ ೩ ವರ್ಷಗಳಿಗೊಮ್ಮೆ ಬದಲಾಗುವ ಮ್ಯಾನೇಜಿಂಗ್ ಟ್ರಸ್ಟಿ ಹುದ್ದೆಯಲ್ಲಿ ರೋಟರಿ ಪೂರ್ವ ಆಂಗ್ಲ ಶಾಲೆ ಹಾಗೂ ರೋಟರಿ ಪೂರ್ವ ಚಿತಾಗಾರದಲ್ಲಿ ಸರ್ವತೋಮುಖವಾಗಿ ಸೇವೆ ಸಲ್ಲಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಹಾಗೂ ನೂತನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಂಡ ರೊ. ಕೆ.ಬಿ. ರವಿಶಂಕರ್ ಇವರಿಗೆ ರೋಟರಿ ಪೂರ್ವ ಟ್ರಸ್ಟ್ ಹಾಗೂ ರೋಟರಿ ಶಾಲಾ ವತಿಯಿಂದ ಹೃದಯಪೂರ್ವಕ ಬೀಳ್ಕೊಡಿಗೆ ಹಾಗೂ ಸ್ವಾಗತ ಕಾರ್ಯಕ್ರಮವನ್ನು ಇಂದು ರೋಟರಿ ಪೂರ್ವ ಶಾಲಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಟ್ರಸ್ಟ್ನ ಉಪಾಧ್ಯಕ್ಷರಾಗಿ(ಶಾಲಾ ಶಿಕ್ಷಣ) ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಹಾಗೂ ರೋಟರಿ ಶಾಲಾ ಕಛೇರಿ ಹಾಗೂ ಟ್ರಸ್ಟ್ನಲ್ಲಿ ಕಳೆದ ೭ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಹೊರ ಹೋಗುತ್ತಿರುವ ಕು. ಆಶ್ರಯ ಎಂ.ಕೆ. ಇವರುಗಳಿಗೆ ಆತ್ಮೀಯ ಬೀಳ್ಕೊಡಿಗೆ ನೀಡಲಾಯಿತು.
ಸಮಾರಂಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳಾದ ಉಪಾಧ್ಯಕ್ಷ (ಚಿತಾಗಾರ ನಿರ್ವಹಣೆ) ರೊ. ಸುರೇಶ್ ಕುಮಾರ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಸಹ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಆಂತರಿಕ ಲೆಕ್ಕ ಪರಿಶೋಧಕ ರೊ. ಚಂದ್ರಹಾಸ್ ಪಿ. ರಾಯ್ಕರ್, ಪೇಟ್ರನ್ ಟ್ರಸ್ಟಿ ರೊ. ಕಡಿದಾಳ್ ಗೋಪಾಲ್, ಬೋರ್ಡ್ ಆಫ್ ಟ್ರಸ್ಟಿ ರೊ. ಮಧು ಹೆಚ್.ಎಂ., ಟ್ರಸ್ಟಿ ರೊ. ಸೂರ್ಯನಾರಾಯಣ್ ಹೆಚ್.ಎಸ್., ರೊ. ಹೇಮಂತ್ ಎಂ.ಸಿ. ಹಾಗೂ ಸಮಾರಂಭದ ಮುಖ್ಯ ಅತಿಥಿಗಳಾದ ರೋಟರಿ ಪೂರ್ವದ ಅಧ್ಯಕ್ಷ ರೊ. ಅರುಣ್ ಎಸ್. ದೀಕ್ಷಿತ್ ಇವರುಗಳು ಬೀಳ್ಕೊಡಿಗೆ ಸ್ವೀಕರಿಸಿದ ಅತಿಥಿಗಳ ಸೇವೆಯನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿ ಮಾತನಾಡಿದರು.
Rotary Pre-Educational & Charitable Trust ಅದೇ ರೀತಿ ರೋಟರಿ ಶಾಲೆ ಪ್ರಾಂಶುಪಾಲರಾದ ಸೂರ್ಯನಾರಾಯಣ್, ಶಿಕ್ಷಕಿಯರಾದ ಸುಷ್ಮಾ ಬಿ.ಎಲ್., ದೀಪಿಕಾ ಪಿ., ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಮ್ಯಾನೇಜಿಂಗ್ ಟ್ರಸ್ಟಿಯ ಅಧಿಕಾರ ಹಸ್ತಾಂತರಿಸಿ, ಬೀಳ್ಕೊಡಿಗೆ ಸ್ವೀಕರಿಸಿದ ರೊ. ಚಂದ್ರಶೇಖರಯ್ಯ ಎಂ., ಇವರು ತಮ್ಮ ಅವಧಿಯಲ್ಲಿ ಎಲ್ಲಾ ಪದಾಧಿಕಾರಿಗಳ, ಬೋರ್ಡ್ ಆಫ್ ಟ್ರಸ್ಟಿಗಳ, ಟ್ರಸ್ಟಿಗಳ ಹಾಗೂ ಬೋಧಕ ವರ್ಗದ ಸಹಕಾರ ಹಾಗೂ ಬೆಂಬಲದಿಂದ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸುವುದರ ಜೊತೆಗೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೧೦೦ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎನ್ನುತ್ತಾ, ಹೊಸ ಮ್ಯಾನೇಜಿಂಗ್ ಟ್ರಸ್ಟಿ ರೊ. ಕೆ.ಬಿ. ರವಿಶಂಕರ್ ಹಾಗೂ ಬೋರ್ಡ್ ಆಫ್ ಟ್ರಸ್ಟಿಗಳಿಗೆ ಸ್ವಾಗತ ಕೋರಿ, ಮುಂದಿನ ೩ ವರ್ಷಗಳ ಅವಧಿಯಲ್ಲಿ ಟ್ರಸ್ಟ್ನ ಅಡಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಮೂಡಿಬಂದು ರೋಟರಿ ಪೂರ್ವದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಲಿ ಎಂದು ಆಶಿಸಿದರು. ಅದೇ ರೀತಿ ಬೀಳ್ಕೊಡಿಗೆ ಸ್ವೀಕರಿಸಿದ ರೊ. ಪರಮೇಶ್ವರ್ ಡಿ. ಶಿಗ್ಗಾಂವ್ ಹಾಗೂ ಕಛೇರಿ ಅಧೀಕ್ಷಕಿ ಕು. ಆಶ್ರಯ ಇವರು ತಮಗೆ ಉತ್ತಮ ಸೇವೆ ಸಲ್ಲಿಸಲು ಅವಕಾಶ ದೊರೆತ್ತಿದ್ದಕ್ಕಾಗಿ ಹಾಗೂ ಬೀಳ್ಕೊಡಿಗೆ ನೀಡಿದ್ದಕ್ಕಾಗಿ ಟ್ರಸ್ಟ್ಗೆ ಕೃತಜ್ಞತೆ ಸಲ್ಲಿಸಿದರು.
ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅಧಿಕಾರ ಸ್ವೀಕರಿಸಿದ ರೊ. ರವಿಶಂಕರ್ ಇವರು ಮುಂದಿನ ೩ ವರ್ಷಗಳಲ್ಲಿ ಟ್ರಸ್ಟ್ನ ಅಡಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ಕನಸು ಕಂಡಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲಾ ಬೋರ್ಡ್ ಆಫ್ ಟ್ರಸ್ಟಿಗಳ ಹಾಗೂ ಶಿಕ್ಷಕ ವೃಂದದವರ ಸಹಕಾರ ಕೋರಿದರು.
ಇದೇ ವೇದಿಕೆಯಲ್ಲಿ 202ರ ಅಂತರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೨ ಇದರ ಗವರ್ನರ್ ಆಗಲಿರುವ ರೋಟರಿ ಶಿವಮೊಗ್ಗ ಪೂರ್ವ ರೊ. ವಸಂತ್ ಹೋಬಳಿದ್ದಾರ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು ರೋಟರಿ ಶಾಲೆ ಹಾಗೂ ಚಿತಾಗಾರದಲ್ಲಿ ಇತ್ತಿಚಿನ ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿ ಶ್ಲಾಘನೀಯ ಎನ್ನುತ್ತಾ, ಅದಕ್ಕೆ ಕಾರಣೀಭೂತರಾದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸುವುದರ ಜೊತೆಗೆ ಶಾಲೆಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಬೇಕೆಂದು ಸಲಹೆ ನೀಡಿದರು. ಈ ಸಮಾರಂಭದಲ್ಲಿ ಅನೇಕ ಟ್ರಸ್ಟಿಗಳು ಹಾಗೂ ರೋಟರಿ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಾಸ್ತವಿಕ ಹಾಗೂ ಸ್ವಾಗತ ಭಾಷಣವನ್ನು ಟ್ರಸ್ಟ್ನ ಖಜಾಂಚಿ ರೊ. ವಿಜಯ್ ಕುಮಾರ್ ಇವರು ನಿರ್ವಹಿಸಿದರೆ, ನೂತನ ಉಪಾಧ್ಯಕ್ಷೆ ರೊ. ಎಸ್.ಆರ್. ನಾಗವೇಣಿ ಇವರು ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿ ಶ್ರೀಮತಿ ಕಾವ್ಯ ಬಿ.ಎಸ್. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.