Oxford Saraswati Temple in Holalur ಹೊಳಲೂರಿನ ಆಕ್ಸಫರ್ಡ್ ಸರಸ್ವತಿ ಮಂದಿರದಲ್ಲಿ ವಸಂತ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಲ್ಲವಿ ಮಾತನಾಡಿ, ಸಂಸ್ಕೃತ ಭಾಷೆ ಮಕ್ಕಳ ಜ್ಞಾನ ಹೆಚ್ಚಿಸುವುದರೊಂದಿಗೆ, ಉಳಿದ ಎಲ್ಲಾ ಭಾಷೆಗಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಇದನ್ನು ನಮ್ಮ ಗ್ರಾಮಾಂತರದ ಮಕ್ಕಳಿಗೂ ತಲುಪಬೇಕೆಂಬ ಮೂಲ ಉದ್ದೇಶದಿಂದ ಸಂಸ್ಕೃತ ಭಾರತೀ ಸಂಯೋಜಕಿಯಾದ ವಿಮಲಾ ರೇವಣಕರ್ ರವರನ್ನು ಕೋರಿಕೊಂಡಾಗ ಇವರು ಒಂದು ತಿಂಗಳು ಬೇಸಿಗೆ ಶಿಬಿರ ಏರ್ಪಡಿಸಿ ಮಕ್ಕಳಿಗೆ ಆಟ, ಹಾಡು, ಶ್ಲೋಕ ಹೀಗೆ ನಾನಾ ವಿಧದಲ್ಲಿ ಸಂಸ್ಕೃತ ಸುಲಲಿತವಾಗಿ ಕಲಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.
ವಿಮಲ ರೇವಣಕರ್ ಮಾತನಾಡಿ, ಮಕ್ಕಳು ಯಾವುದೇ ವಿಚಾರವನ್ನು ಸುಲಭವಾಗಿ ಗ್ರಹಿಸುತ್ತಾರೆ. ನಾವು ಕಲಿಸುವ ರೀತಿ ಅವರಿಗೆ ಆಸಕ್ತಿ ತರುವಂತಿರಬೇಕು. ಅದನ್ನು ಯಶಸ್ವಿಯಾಗಿ ಪೂರೈಸಿದ ಖುಷಿ ತಮಗೆ ಸಿಕ್ಕಿದೆ ಎಂದು ತಿಳಿಸಿದರು.
Oxford Saraswati Temple in Holalur ಕಾರ್ಯಕ್ರಮದಲ್ಲಿ ಭಾರತಿ ಪ್ರಾರ್ಥಿಸಿ, ವಿನೂನ್ ನಿರೂಪಿಸಿ, ಮನ್ವಿತ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು.