JNNC College ರಾಷ್ಟ್ರೀಯ ಶಿಕ್ಷಣ ಸಮಿತಿ, ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜವಹಾರಲಾಲ್ ನೆಹರೂ ತಾಂತ್ರಿಕ ಮಹಾವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ-2025 ನ್ನು ಮೇ.14 ರಂದು ಬೆಳಗ್ಗೆ 9;30 ರಿಂದ 2;00 ಗಂಟೆಯವರೆಗೆ ನಗರದ ಜೆ ಎನ್ ಎನ್ ಸಿ ಇ ಕಾಲೇಜ್ ನ ಅಡ್ಮಿನ್ ಬ್ಲಾಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ಚುವರಿ ಜಿಲ್ಲಾ ರಕ್ಷಾಧಿಕಾರಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ ಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಭಿರುಚಿ ಅಧ್ಯಕ್ಷರಾದ ಡಾ. ಶಿವರಾಮಕೃಷ್ಣ, ಸ್ವಯಂ ಪ್ರೇರಿತ ರಕ್ತದಾನ ಸೇವಾ ಸಂಘದ ಅಧ್ಯಕ್ಷರಾದ ಧರಣೇಂದ್ರ ದಿನಕರ್, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಛಾಯ, ಅಭಿರುಚಿ ಕಾರ್ಯದರ್ಶಿ ಕುಮಾರ್ ಶಾಸ್ತ್ರೀ ಯುವ ರೆಡ್ ಕ್ರಾಸ್ ಘಟಕದ ಅರುಣ್ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ ಎನ್ ಸಿ ಇ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ವಿಜಯಕುಮಾರ್ ವಹಿಸಲಿದ್ದಾರೆ.
JNNC College ಸರ್ಕಾರಿ ಮೆಗ್ಗಾನ್ ಆಸ್ಪತ್ರೆ, ರಕ್ತ ಕೇಂದ್ರ, ರೋಟರಿ ರಕ್ತ ಕೇಂದ್ರ, ರೆಡ್ ಕ್ರಾಸ್ ರಕ್ತ ಕೇಂದ್ರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರು, ಸದಸ್ಯರುಗಳು ಆಸಕ್ತರು ರಕ್ತದಾನಿಗಳ ಶಿಬಿರಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.