Sunday, March 1, 2026
Sunday, March 1, 2026
Home Blog Page 306

Pahalgam Attack ಪಹಲ್ಗಾಂ ನಲ್ಲಿ ಉಗ್ರರಿಂದ ಹತರಾದ ಮೃತ ಮಂಜುನಾಥ್ ಸ್ವಗೃಹಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ

0

Pahalgam Attack ಜಮ್ಮು- ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕ ರಕ್ತಪಿಪಾಸುಗಳ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ನಗರದ ಶ್ರೀ ಮಂಜುನಾಥ್ ರಾವ್ ಅವರ ನಿವಾಸಕ್ಕೆ ಶಾಸಕರಾದ ಬಿ.ವೈ. ವಿಜಯೇಂದ್ರ ಮತ್ತು ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಕಾರಾತ್ಮಕ ಅಂಶಗಳೊಂದಿಗೆ ಚರ್ಚಿಸಿದರು.

ಇಡೀ ಭಾರತ ದೇಶವೇ ಪೆಹಲ್ಗಾಮ್ ದಾಳಿಗೆ ಮಮ್ಮಲ ಮರುಗಿ 26 ಅಮಾಯಕರ ಮಾರಣ ಹೋಮದ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮವಾಗಿ ಆ ಕುಟುಂಬಗಳ ಸಿಂಧೂರ ಅಳಿಸಿದ ರಕ್ಕಸೀ ಉಗ್ರರ ಹುಟ್ಟಡಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಕ್ಕೂ ತೊಡೆತಟ್ಟಿ ನಿಂತ ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತ ಸರ್ಕಾರದ ದಿಟ್ಟ ನಿಲುವಿನ ಕುರಿತು ಕುಟುಂಬದ ಸದಸ್ಯರು ಸಮಾಧಾನ ಹಂಚಿಕೊಂಡರು. ಕುಟುಂಬದ ಭಾವನೆಗಳೊಂದಿಗೆ ಸದಾಕಾಲವೂ ನಾವಿರುತ್ತೇವೆ ಎಂಬ ಸಾಂತ್ವನ‌ವನ್ನು ಈ ವೇಳೆ ನೀಡಲಾಯಿತು.

Pahalgam Attack ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀಆರಗ ಜ್ಞಾನೇಂದ್ರ , ಶಾಸಕರಾದ ಶ್ರೀ ಎಸ್.ಎನ್‌ ಚನ್ನಬಸಪ್ಪ ,ವಿಧಾನ ಪರಿಷತ್ ಸದಸ್ಯರಾದ ಶ್ರೀ ಧನಂಜಯ ಸರ್ಜಿ , ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಶ್ರೀ ದತ್ತಾತ್ರಿ, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರುಗಳು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Areca nut ಒಕ್ಕೊರಲ ದನಿಯಾಗಿ ಅಡಿಕೆ ಕೃಷಿಕರೆ! ಜನಪ್ರತಿನಿಧಿಗಳೆ…!

0

Areca nut ನಮ್ಮ ಮಲೆನಾಡಿನ ಅಡಿಕೆ ಕೃಷಿಕರಿಗೆ ,ಕೃಷಿಯ‌ಜೊತೆ ಕೀಟ ರೋಗಗಳ ಕಾಟ. ಅದಾದನಂತರ ಮಾರುಕಟ್ಟೆ , ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ‌ಠಸ್ಸೆ… ಹೀಗೆ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಿದೆ.
ಈಗ ಬರಸಿಡಿಲಿನಂತೆ ಬಂದ ಸುದ್ದಿಯೆಂದರೆ
ಅಡಕೆ ಉಪುತ್ಪನ್ನ ಹಾಳೆಗಳಿಂದ ತಯಾರು ಮಾಡುವ ಲೋಟ,ತಟ್ಟೆಗಳು ಬಳಕೆಗೆ ಯೋಗ್ಯವಲ್ಲ ಎಂಬ ಪ್ರಚಾರ.
ಅಮೆರಿಕದಲ್ಲಿ ಈ ಉತ್ಪನ್ನಗಳು ಬ್ಯಾನ್
ಆಗಿವೆಯಂತೆ.
ಇಂತಹ ಸುದ್ದಿ‌ ಕಾಳ್ಗಿಚ್ಚಿನಂತೆ ಹರಡಿ
ಅಡಿಕೆ ಹಾಳೆ ಉತ್ಪನ್ನ ಗಳಿಗೆ ಮಾರುಕಟ್ಟೆ ಮುಗುಚಿಕೊಳ್ಳುವಂತೆ ಮಾಡಲಾಗುತ್ತಿದೆ.

Areca nut ಒಂದಿಷ್ಟು
ಸ್ವ ಉದ್ಯಮಿಗಳ ಪಾಲಿಗೆ ಇಷ್ಟುದಿನ ವರವಾಗಿದ್ದ ಉದ್ಯಮಕ್ಕೆ ಪೆಟ್ಟು ಬೀಳಲಿದೆ.
ಈ ಕುರಿತು ನಮ್ಮ ‌ಜನಪ್ರತಿನಿಧಿಗಳು
,ಕೃಷಿವಿಜ್ಞಾನಿಗಳು, ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ತಕ್ಷಣ ಪ್ರಯತ್ನಿಸಬೇಕು.
ವಿಧಿಯಿಲ್ಲ..

Minister Dinesh Gundu Rao ಅಂಬ್ಯುಲೆನ್ಸ್-108 ಸೇವೆಗಳನ್ನ ಇನ್ನುಮುಂದೆ ಸರ್ಕಾರವೇ ನಿರ್ವಹಿಸುತ್ತದೆ- ಸಚಿವ ದಿನೇಶ್ ಗುಂಡೂರಾವ್

0

Minister Dinesh Gundu Rao 108 ಅಂಬ್ಯುಲೆನ್ಸ್ ಸೇವೆಯನ್ನು ಇನ್ಮುಂದೆ ಸರ್ಕಾರವೇ ನಿರ್ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು‌ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಇದುವರೆಗೂ ಈ ಸೇವೆಯನ್ನು ಖಾಸಗಿಯವರು ನಿರ್ವಹಿಸುತ್ತಿದ್ದು ಇದರಿಂದಾಗಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಹಾಗು ಖಾಸಗಿ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲು ನಮ್ಮ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ‌ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಂಬ್ಯುಲೆನ್ಸ್’ಗಳು ಸರ್ಕಾರದ್ದೇ ಆದರೂ ನಿರ್ವಹಣೆ ಮಾತ್ರ ಖಾಸಗಿಯವರದ್ದಾಗಿತ್ತು. ವಾಹನಗಳ ಡಿಸೇಲ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಚಾಲಕರ ವೇತನವನ್ನು ಸರ್ಕಾರ ಬಿಡುಗಡೆಗೊಳಿಸಿದರೂ ಏಜೆನ್ಸಿಗಳು ಸಕಾಲಕ್ಕೆ ಪಾವತಿ ಮಾಡುತ್ತಿರಲಿಲ್ಲ. ಏಜೆನ್ಸಿಗಳು ವೇತನ ಬಿಡುಗಡೆಗೊಳಿಸಲು ಪ್ರತಿ ಬಾರಿ ಸರ್ಕಾರ ಮಧ್ಯೆ ಪ್ರವೇಶಿಸಬೇಕಾಗಿತ್ತು. ಖಾಸಗಿ ನಿರ್ವಹಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವೇ ಆಗುತ್ತಿತ್ತು.

Minister Dinesh Gundu Rao ಆದರಿಂದ ಸರ್ಕಾರ ಈ ಐತಿಹಾಸಿಕ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ಸಿದ್ಧಪಡಿಸಲಾಗಿದ್ದು ಚಾಮರಾಜನಗರದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ರಾಜ್ಯಾದ್ಯಂತ 108 ಅಂಬ್ಯುಲೆನ್ಸ್ ಸೇವೆಗಳನ್ನು ಆರೋಗ್ಯ ಇಲಾಖೆಯ ನಿರ್ವಹಣಾ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವರು ನೀಡಿದ ಹೇಳಿಕೆಯಿಂದ ಅತಂತ್ರವಾಗಿದ್ದ ಅಂಬ್ಯುಲೆನ್ಸ್ 108 ಸೇವೆಗೆ ಚೈತನ್ಯ ತುಂಬಿದಂತಾಗಿದೆ.

Cooperative Institute for Diploma in Co-operative Management Training ಸಹಕಾರ ನಿರ್ವಹಣೆ ಬಗ್ಗೆ ಡಿಪ್ಲೊಮಾ ಅಧ್ಯಯನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

0

Cooperative Institute for Diploma in Co-operative Management Training ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಗೆ ಸಹಕಾರ ಸಂಸ್ಥೆ ಸಿಬ್ಬಂದಿಗಳಿಂದ ಹಾಗೂ ಖಾಸಗಿ/ಎಸ್.ಸಿ. ಮತ್ತು ಎಸ್.ಟಿ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶಿವಮೊಗ್ಗ ಕೆ.ಐ.ಸಿ.ಎಂ. ತರಬೇತಿ ಸಂಸ್ಥೆಯ ಮೂಲಕ 6 ತಿಂಗಳ ಅವಧಿಯ ರೆಗ್ಯುಲರ್ ಮತ್ತು ದೂರ ಶಿಕ್ಷಣ ಡಿ.ಸಿ.ಎಂ ತರಬೇತಿಯನ್ನು ನೀಡಲಾಗುತ್ತದೆ. ಸಹಕಾರ ಸಂಘ/ಬ್ಯಾಂಕ್ ಗಳ ನೇಮಕಾತಿಗೆ ಆದ್ಯತೆ, ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕ ಹಾಗೂ ಕಂಪ್ಯೂಟರ್ ತರಬೇತಿಯನ್ನು ನೀಡಲ್ಲಿದ್ದು, ಎಸ್.ಎಸ್.ಎಲ್.ಸಿ. ಉತ್ತಿರ್ಣರಾದ ಹಾಗೂ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ದೂರ ಶಿಕ್ಷಣ ಡಿ.ಸಿ.ಎಂ ತರಬೇತಿಗೆ ಸಹಕಾರ ಸಂಘ ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿದ್ದು ಕೇವಲ 10 ದಿನಗಳ ಸಂಪರ್ಕ ತರಗತಿಗಳನ್ನು ನಡೆಸಲಾಗುತ್ತದೆ.
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.600 ಹಾಗೂ ಇತರೆ ಅಭ್ಯರ್ಥಿಗಳಿಗೆ ರೂ.500 ಶಿಷ್ಯವೇತನ ನೀಡಲಿದ್ದು, ಮೇ 31 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್, ವಿನೋಬನಗರ ಶಿವಮೊಗ್ಗ 577204 ಇಲ್ಲಿ ಪಡೆಯಬೇಕು ಅಥವಾ www.kscfdcm.co.in ಮೂಲಕ ಆನ್‌ಲೈನ್ ಪ್ರವೇಶಾತಿಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-248873, 7022429440 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲರಾದ ರವಿ. ಎನ್ ತಿಳಿಸಿದ್ದಾರೆ.

Women and Child Development Department ಬೇಸಿಗೆ ಶಿಬಿರದಲ್ಲಿ ಮಕ್ಕಳ ಮನ ಸೆಳೆದ “ಅಗ್ನಿಶಾಮಕ ಜಾಗೃತಿ‌” ಕಾರ್ಯಕ್ರಮ

0

Women and Child Development Department ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಶಿವಮೊಗ್ಗ ಇವರುಗಳ ಸಹಯೋಗದೊಂದಿಗೆ ನಡೆಯುತ್ತಿರುವ 2025-26 ನೇ ಸಾಲಿನ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಆವರಣದಲ್ಲಿ 5 ರಿಂದ 16 ವರ್ಷದ ಮಕ್ಕಳಿಗೆ “ಅಗ್ನಿಶಾಮಕ ಜಾಗೃತಿ ಕಾರ್ಯಕ್ರಮ” ವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ಅವಘಡದಿಂದ ಹೇಗೆ ಪಾರಾಗಬೇಕೆಂಬ ಕುರಿತು ಪ್ರಾಯೋಗಿಕ ತರಬೇತಿಯ ಮೂಲಕ ಮಾಹಿತಿ ತಿಳಿಸಿಕೊಟ್ಟರು. ಹಾಗೂ ರಂಗ ಕಲೆ ತರಬೇತಿ, ನೃತ್ಯ, ಸಂಗೀತ, ಪೇಪರ್ ಕಪ್ ಪಿರಮಿಡ್, ಚಟುವಟಿಕೆಯನ್ನು ನಡೆಸಲಾಯಿತು.

Women and Child Development Department ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Minority Welfare Department ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪೂರ್ವ ತರಬೇತಿಗೆ ಪ್ರವೇಶಾತಿ ಅರ್ಜಿ ಆಹ್ವಾನ

0

Minority Welfare Department ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಮಂಜೂರಾದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ರಾಜ್ಯದ ಬೆಳಗಾವಿ/ ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ಪೊಲೀಸ್ ಸಬ್ ಇನ್ಸಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಆಯೋಜಿಸಿದ್ದು, 21 ರಿಂದ 30 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಯು.ಜಿ.ಸಿ.ಯಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆದಿರಬೇಕು. ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಗಳಿಗೆ ಸೇರಿದವಾಗಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 8.00 ಲಕ್ಷಕ್ಕಿಂತ ಮೀರಿರಬಾರದು. ಪುರುಷರು ಕನಿಷ್ಠ ಎತ್ತರ 168 ಸೆಂ.ಮೀ, ತೂಕ 50 ಕೆ.ಜಿ ಹಾಗೂ ಎದೆಯ ಸುತ್ತಳತೆ 76 ಸೆಂ.ಮಿ. ಇರಬೇಕು ಮತ್ತು ಮಹಿಳೆಯರು ಕನಿಷ್ಠ 157 ಸೆಂ.ಮೀ. ಎತ್ತರ, 45 ಕೆ. ಜಿ. ತೂಕವಿರಬೇಕು. ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಆಸಕ್ತರು ವೆಬ್‌ಸೈಟ್ https://sevasinduservices.karnataka.gov.in/sevasindhu/departmentservices, https://dom.karnatka.gov.in ರಲ್ಲಿ ಮೇ 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Minority Welfare Department ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ -7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸುವುದು.

MESCOM ಮೇ16. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ

0

MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಗ್ರಾಹಕರ ಕುಂದುಕೊರತೆ ಪರಿಹರಿಸಲು ಹಾಗೂ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಮೇ 16 ರಂದು ಬೆಳಗ್ಗೆ 11.00 ರಿಂದ 1.00 ರವರೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗ, ಬಾಲರಾಜ್ ಅರಸ್ ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಮೆಸ್ಕಾಂ ಇಲ್ಲಿ ಗ್ರಾಹಕರ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದ್ದು, ಈ ವ್ಯಾಪ್ತಿಯ ಗ್ರಾಹಕರು ತಮ್ಮ ಅಹವಾಲನ್ನು ಸಲ್ಲಿಸಿ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದೆಂದು ಮೆಸ್ಕಾಂ ತಿಳಿಸಿದೆ.

MESCOM ಮೇ17. ಶಿವಮೊಗ್ಗ ಪಿಯರ್ ಲೈಟ್ ಫೌಂಡ್ರಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಮೇ 17 ರಂದು ಬೆಳಗ್ಗೆ 09.00 ಗಂಟೆಯಿಂದ ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, ಟಿಪ್ಪುನಗರ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಸೋಮಣ್ಣ ಫ್ಯಾಕ್ಟರಿ, ನ್ಯೂಮಂಡ್ಲಿ, ಸಲೀಮ್ ಫ್ಯಾಕ್ಟರಿ, ಮಂಜುನಾಥ ಪೆಟ್ರೋಲ್ ಬಂಕ್, ವಿಜಯವಾಣಿ ಪ್ರೆಸ್ ಹತ್ತಿರ, MESCOM ಎನ್.ಟಿ.ರಸ್ತೆ, ಹರಕೆರೆ, ಹಳೇಮಂಡ್ಲಿ, ಗಂದರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಇಲಿಯಾಜ್‌ನಗರ 1 ರಿಂದ 14ನೇ ಕ್ರಾಸ್, 100 ಅಡಿರಸ್ತೆ, ಅಮಿರ್ ಅಹಮದ್ ಸರ್ಕಲ್, ಫಾರೂಕ್ಯ ಶಾದಿಮಹಲ್, ಮೇಲಿನ ಮತ್ತು ಕೆಳಗಿನ ತುಂಗಾನಗರ, ಮಂಜುನಾಥ ಬಡಾವಣೆ, ಕಾಮತ್ ಲೇಔಟ್, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಬಿಹೆಚ್ ರಸ್ತೆ, ಸಾಗರ ನರ್ಸರಿ, ಚಾನಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶ, ಗಾಜನೂರು ಗ್ರಾಮಾಂತರ ಪ್ರದೇಶ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಹೊಸಳ್ಳಿ, ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.

Friends Center Shivamogga ಶಿವಮೊಗ್ಗದ “ಸಿನಿ ಟ್ಯಾಲೆಂಟ್”‌ ಸಂತೋಷ್ ರಾಮ್ ನಿರ್ದೇಶನದ “ಬಂಡೆ ಸಾಹೇಬ್” ಚಿತ್ರ ಮೇ 16 ರಂದು ತೆರೆಗೆ

0

Friends Center Shivamogga ಶಿವಮೊಗ್ಗ ಸಾಂಸ್ಕೃತಿಕ ನಗರಗಳ ತವರೂರು. ಈ ಜಿಲ್ಲೆಯಲ್ಲಿ ಸಾಕಷ್ಟು ಜನ ಅದ್ಭುತವಾದ ಕಲಾವಿದರು ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ತಮ್ಮದೇ ಆದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಭೆಯಾದ ಸಂತೋಷ್ ರಾಮ್ ರವರು ರಾಜ್ಯದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಕರ್ತವ್ಯದಲ್ಲಿದ್ದಾಗಲೇ ರೌಡಿ ಗಳ ಗುಂಡೇಟಿಗೆ ಬಲಿಯಾದ ದಿ. ಮಲ್ಲಿಕಾರ್ಜುನ್ ಬಂಡೆ ರವರ ಜೀವನಾಧಾರಿತ ಚಲನಚಿತ್ರ ” ಬಂಡೆ ಸಾಹೇಬ್ ” ದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಇದು ಅವರ ಎರಡನೇ ಸಿನಿಮಾ. ಈ ಹಿಂದೆ ‘ ಪಂಟ್ರು ‘ ಸಿನಿಮಾ ದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು.

ಈ ಸಿನಿಮಾ ಇದೇ ಮೇ 16 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಇದೇ ಚಿತ್ರದಲ್ಲಿ ನಮ್ಮ ಶಿವಮೊಗ್ಗದ ಮತ್ತೊಬ್ಬ ಪ್ರತಿಭೆಯಾದ ವಿಶಾಕ್ ನಾಗಲಾಪುರ ರವರು ಹಾಡನ್ನು ಹಾಡಿದ್ದಾರೆ.

ಆದ್ದರಿಂದ ಶಿವಮೊಗ್ಗದ ಎಲ್ಲಾ ನಾಗರಿಕರು, ಚಿತ್ರ ಪ್ರೇಮಿಗಳು, ಕಲಾಸಕ್ತರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ನಮ್ಮ ಸ್ಥಳೀಯ ಪ್ರತಿಭೆಗಳನ್ನು ಹರಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.

Friends Center Shivamogga ಇದೇ ವೇಳೆ ಫ್ರೆಂಡ್ಸ್ ಸೆಂಟರ್ ನ ಮಾಜಿ ಅಧ್ಯಕ್ಷರುಗಳಾದ ಎಸ್ ದತ್ತಾತ್ರಿ ರವರು, ವಿಜಯ್ ಕುಮಾರ್ ರವರು, ಮಾತನಾಡುತ್ತಾ ಸಂತೋಷ್ ರಾಮ ಅವರು ಹಲವಾರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ ಮತ್ತು ವಿಶಾಖ ನಾಗಲಾಪುರವರು ೩೦ಕ್ಕೂ ಹೆಚ್ಚು ಕನ್ನಡ ಸಿನಿಮಾ ಹಾಗೂ ತೆಲುಗು ಮಲಯಾಳಿ ಹಿಂದಿ ತಮಿಳು ಚಿತ್ರಗಳಿಗೆ ಹಿನ್ನೆಲೆ ಗಾಯಕ ರಾಗಿ ವಿಶೇಷ ಸಾಧನೆ ಮಾಡಿದ್ದಾರೆ ಎಂದು ಬಸವನಗೌಡ ಹೆಚ್. ಎನ್. ನಮ್ಮ ಟಿವಿ ಮಾಲೀಕರಾದ ಜಗದೀಶ ಶ್ರೀಕಾಂತ್. ತರುಣ. ಫ್ರೆಂಡ್ಸ್ ಸೆಂಟರ್ ನ ಮಾಜಿ ಅಧ್ಯಕ್ಷರಾದ ನಾಗರಾಜ್ ವಿ. ಮಲ್ಲಿಕಾರ್ಜುನ ಕಾನೂರು

ಕಾರ್ಯದರ್ಶಿ ಎಲ್‌ಎಂ ಮೋಹನ ರವರು ಹಾಜರಿದ್ದು ಚಿತ್ರ ತಂಡವನ್ನು ಸನ್ಮಾನಿಸಿ ಚಿತ್ರಕ್ಕೆ ಶುಭ ಕೋರಿದರು

Kargal Government Industrial Training Institute ಕಾರ್ಗಲ್ ಸರ್ಕಾರಿ ಐಟಿಐಗೆ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

0

Kargal Government Industrial Training Institute ಶಿವಮೊಗ್ಗ ಜಿಲ್ಲೆ ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಐಟಿಐ ಪ್ರವೇಶ ಪಡೆಯಲು (ಎನ್.ಸಿ.ವಿ.ಟಿ. ಯೋಜನೆಯಡಿಯಲ್ಲಿ) ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ವರ್ಚಲ್ ಅನಾಲಿಸಿಸ್ ಆಂಡ್ ಡಿಸೆನರ್, ಸಿಎನ್‌ಸಿ ಮೆಷಿನಿಂಗ್ ಟೆಕ್ನಿಷಿಯನ್, ವರ್ಚುಯಲ್ ಅನಲೈಸಿನ್ ಅಂಡ್ ಡಿಸೈನರ್. ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್, ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವುದು.

ಆಸಕ್ತರು ಸಂಸ್ಥೆಯ ವೆಬ್‌ಸೈಟ್ www.cite.karnataka.gov.in ಮೂಲಕ ಮೇ 28 ರೊಳಗಾಗಿ ಅರ್ಜಿ ಸಲ್ಲಿಸಿ, ಆಯ್ಕೆ ಮಾಡಿಕೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲ ದಾಖಲಾತಿಗಳನ್ನು ನಿಗಧಿತ ದಿನಾಂಕಗಳೊಳಗೆ ಪರಿಶೀಲನೆ ಮಾಡಿಕೊಳ್ಳುವಂತೆ ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಕಾರ್ಗಲ್, ಸಾಗರ ತಾಲೂಕು ಹಾಗೂ ದೂ.ಸಂ.: 7899017818/ 9448622870 ಗಳನ್ನು ಸಂಪರ್ಕಿಸುವುದು.