Pahalgam Attack ಜಮ್ಮು- ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕ ರಕ್ತಪಿಪಾಸುಗಳ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ನಗರದ ಶ್ರೀ ಮಂಜುನಾಥ್ ರಾವ್ ಅವರ ನಿವಾಸಕ್ಕೆ ಶಾಸಕರಾದ ಬಿ.ವೈ. ವಿಜಯೇಂದ್ರ ಮತ್ತು ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಕಾರಾತ್ಮಕ ಅಂಶಗಳೊಂದಿಗೆ ಚರ್ಚಿಸಿದರು.
ಇಡೀ ಭಾರತ ದೇಶವೇ ಪೆಹಲ್ಗಾಮ್ ದಾಳಿಗೆ ಮಮ್ಮಲ ಮರುಗಿ 26 ಅಮಾಯಕರ ಮಾರಣ ಹೋಮದ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮವಾಗಿ ಆ ಕುಟುಂಬಗಳ ಸಿಂಧೂರ ಅಳಿಸಿದ ರಕ್ಕಸೀ ಉಗ್ರರ ಹುಟ್ಟಡಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಕ್ಕೂ ತೊಡೆತಟ್ಟಿ ನಿಂತ ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತ ಸರ್ಕಾರದ ದಿಟ್ಟ ನಿಲುವಿನ ಕುರಿತು ಕುಟುಂಬದ ಸದಸ್ಯರು ಸಮಾಧಾನ ಹಂಚಿಕೊಂಡರು. ಕುಟುಂಬದ ಭಾವನೆಗಳೊಂದಿಗೆ ಸದಾಕಾಲವೂ ನಾವಿರುತ್ತೇವೆ ಎಂಬ ಸಾಂತ್ವನವನ್ನು ಈ ವೇಳೆ ನೀಡಲಾಯಿತು.
Pahalgam Attack ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀಆರಗ ಜ್ಞಾನೇಂದ್ರ , ಶಾಸಕರಾದ ಶ್ರೀ ಎಸ್.ಎನ್ ಚನ್ನಬಸಪ್ಪ ,ವಿಧಾನ ಪರಿಷತ್ ಸದಸ್ಯರಾದ ಶ್ರೀ ಧನಂಜಯ ಸರ್ಜಿ , ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಶ್ರೀ ದತ್ತಾತ್ರಿ, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರುಗಳು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.