Areca nut ನಮ್ಮ ಮಲೆನಾಡಿನ ಅಡಿಕೆ ಕೃಷಿಕರಿಗೆ ,ಕೃಷಿಯಜೊತೆ ಕೀಟ ರೋಗಗಳ ಕಾಟ. ಅದಾದನಂತರ ಮಾರುಕಟ್ಟೆ , ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಠಸ್ಸೆ… ಹೀಗೆ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಿದೆ.
ಈಗ ಬರಸಿಡಿಲಿನಂತೆ ಬಂದ ಸುದ್ದಿಯೆಂದರೆ
ಅಡಕೆ ಉಪುತ್ಪನ್ನ ಹಾಳೆಗಳಿಂದ ತಯಾರು ಮಾಡುವ ಲೋಟ,ತಟ್ಟೆಗಳು ಬಳಕೆಗೆ ಯೋಗ್ಯವಲ್ಲ ಎಂಬ ಪ್ರಚಾರ.
ಅಮೆರಿಕದಲ್ಲಿ ಈ ಉತ್ಪನ್ನಗಳು ಬ್ಯಾನ್
ಆಗಿವೆಯಂತೆ.
ಇಂತಹ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ
ಅಡಿಕೆ ಹಾಳೆ ಉತ್ಪನ್ನ ಗಳಿಗೆ ಮಾರುಕಟ್ಟೆ ಮುಗುಚಿಕೊಳ್ಳುವಂತೆ ಮಾಡಲಾಗುತ್ತಿದೆ.
Areca nut ಒಂದಿಷ್ಟು
ಸ್ವ ಉದ್ಯಮಿಗಳ ಪಾಲಿಗೆ ಇಷ್ಟುದಿನ ವರವಾಗಿದ್ದ ಉದ್ಯಮಕ್ಕೆ ಪೆಟ್ಟು ಬೀಳಲಿದೆ.
ಈ ಕುರಿತು ನಮ್ಮ ಜನಪ್ರತಿನಿಧಿಗಳು
,ಕೃಷಿವಿಜ್ಞಾನಿಗಳು, ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ತಕ್ಷಣ ಪ್ರಯತ್ನಿಸಬೇಕು.
ವಿಧಿಯಿಲ್ಲ..