Monday, March 2, 2026
Monday, March 2, 2026
Home Blog Page 310

S.N.Chennabasappa ಶ್ರದ್ಧೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಹೇಮರೆಡ್ಡಿ ಮಲ್ಲಮ್ಮನವರು ಮಾದರಿ- ಎಸ್.ಎನ್.ಚನ್ನಬಸಪ್ಪ

0

S.N.Chennabasappa ಇಡೀ ಸ್ತ್ರೀ ಕುಲಕ್ಕೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಾದರಿಯಾಗಿದ್ದು, ಶ್ರದ್ದೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂದು ಅವರು ತೋರಿಸಿದ್ದಾರೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಮಲ್ಲಮ್ಮ .ಮಲ್ಲಮ್ಮ ತಮ್ಮ ಕುಟುಂಬದಲ್ಲಿ ಎದುರಾದ ನೋವುಗಳನ್ನೆಲ್ಲಾ ಸಹಿಸಿಕೊಂಡು ಮೇಲೆ ಬಂದರು. ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅವರ ತಾಳ್ಮೆ ಬದುಕಿಗೆ ಶಕ್ತಿ ತಂದು ಕೊಟ್ಟಿತ್ತು ಎಂದರು.
ಮಲ್ಲಮ್ಮನಿಗೆ ಬುದ್ದಿ ಕಲಿಸಲು ಅವರ ಅತ್ತೆ ಭಿಕ್ಷುಕನಿಗೆ ನಿಗಿ ನಿಗಿ‌ ಕೆಂಡ ಭಿಕ್ಷೆ ನೀಡುವಂತೆ ಹೇಳಿದಾಗ ಮಲ್ಲಮ್ಮ ಶ್ರೀಶೈಲ‌ಮಲ್ಲಿಕಾರ್ಜುನನ್ನು ಮನದಲ್ಲಿ‌ ನೆನೆದು ಭಕ್ತಿಯಿಂದ ಅದನ್ನೇ ಭಿಕ್ಷೆ ನೀಡಿದಾಗ ಅದು ಧಾನ್ಯವಾಗುತ್ತದೆ. ಆಗಿನಿಂದ ಅವರನ್ನು ಕೆಂಡದ ಮಲ್ಲಮ್ಮ ಎಂದು ಕರೆಯಲಾಗುತ್ತದೆ.
ಆಕೆಯ ಭಕ್ತಿ‌ ಮತ್ತು ನಂಬಿಕೆಯಿಂದ ಇಂತಹ ಹಲವು ಪವಾಡ ನಡೆಯುವ ಕಾರಣ ಪವಾಡ ಪುರುಷಳೆಂದು ಸಹ ಕರೆಯಲಾಗುತ್ತದೆ. ಮಲ್ಲಮ್ಮ ಸದಾ ಶ್ರೀ ಶೈಲ ಮಲ್ಲಿಕಾರ್ಜುನನ್ನು ಜಪಿಸುತ್ತಿದ್ದಳು. ನನ್ನ ಜೊತೆ ಸದಾ ಮಲ್ಲಿಕಾರ್ಜುನನು ಇರುತ್ತಾನೆ ಎಂಬ ನಂಬಿಕೆಯಿಂದ
ಮಲ್ಲಮ್ಮ ಎಲ್ಲ ಕಷ್ಟಗಳನ್ನು ಸಹಜವಾದ ರೀತಿಯಲ್ಲಿ ಸ್ವೀಕರಿಸಿದಳು, ಈ ಮೂಲಕ ಸಮಾಜಕ್ಕೆ ತಾಳ್ಮೆಯ ಶಕ್ತಿಯನ್ನು ತಿಳಿಸುತ್ತಾ ಹೋದಳು.

ಇಂತಹ ಸಾಧ್ವಿಗಳು ಮತ್ತು ದಾರ್ಶನಿಕರಿಂದ ಈ ದೇಶದ ಸಂಸ್ಕೃತಿ, ಪರಂಪರೆ, ನಂಬಿಕೆಗಳ ನೆಲೆಗಟ್ಟು ಗಟ್ಟಿಯಾಗಿ ಉಳಿದಿದೆ. ನಂಬಿಕೆಯೊಂದಿದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಲ್ಲಮ್ಮ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಲ್ಲಮ್ಮರಂತಹ ಶರಣೆಯರ ಬದುಕು ಆದರ್ಶ ಪ್ರಾಯ.
ಇಂತಹ
ಭಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದರು.
ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಾ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹಸೀನಾ ಹೆಚ್.ಕೆ. ಮಾತನಾಡಿ, ಸಾಧ್ವಿತನಕ್ಕೆ ದೊಡ್ಡ ಉದಾಹರಣೆ ಮಲ್ಲಮ್ಮ. ನಮ್ಮ ಕನ್ನಡ ನಾಡಿನ ಉದ್ದಗಲಕ್ಕೆ ಆದರ್ಶ ವ್ಯಕ್ತಿಗಳು ಇದ್ದಾರೆ. 14-15 ನೇ ಶತಮಾನದಲ್ಲಿದ್ದ ಮಲ್ಲಮ್ಮನವರು ನೀಡಿರುವ ಕೌಟುಂಬಿಕ ಮೌಲ್ಯಗಳು, ಗುರು ಹಿರಿಯರ ಅಂಶಗಳನ್ನು ನಾವು ಪ್ರಸ್ತುತದಲ್ಲಿ ಅಳವಡಿಸಿಕೊಳ್ಳಬೇಕಿದೆ.

S.N.Chennabasappa ಜಾನಪದ ಮಾತುಗಳಲ್ಲಿ ಮಲ್ಲಮ್ಮನವರ ಪವಾಡ, ಬದುಕು, ಚರಿತ್ರೆಯನ್ನು ಕಾಣುತ್ತೇವೆ. ಇಡೀ ಬದುಕನ್ನು ಶಿವಭಕ್ತಿಗೆ ಮೀಸಲಿಟ್ಟ ಅವರು
ಕೌಟುಂಬಿಕ ಮೌಲ್ಯಕ್ಕೆ ಮಾದರಿ. ಅವರ ವಿಚಾರಧಾರೆಯನ್ನು ದಿನನಿತ್ಯದ ಬದುಕಿನಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ.
ಗುರುವಿನ ಶಕ್ತಿಯಿಂದ ಏನಾನ್ನಾದ್ರೂ ಸಾಧನೆ ಮಾಡಬಹುದೆಂದು ಅವರಿಂದ ತಿಳಿಯುತ್ತದೆ. ಜಾನಪದ ಕಥೆಗಳಲ್ಲಿ ಅವರ ಶೌರ್ಯ, ಸಾಹಸಗಳನ್ನು ನೋಡಬಹುದು.

ಸಂತ ಶಿಶುನಾಳ ಷರೀಫರು ಸಹ ಮಲ್ಲಮ್ಮನನ್ನು ಹಾಡಿ ಹೊಗಳಿ ಬರೆದಿದ್ದಾರೆ. ಮಹಾನ್ ದಾರ್ಶನಿಕರು ಸಮಾಜಕ್ಕೆ ಅಗತ್ಯವಾಗಿ ಬೇಕು.
ನಮ್ಮ ದೇಶ ಆರ್ಥಿಕ ಸಂಕಷ್ಟಕ್ಕೀಡಾಗುವುದಿಲ್ಲ. ಇದಕ್ಕೆ ನಮ್ಮ‌ ಹೆಣ್ಣುಮಕ್ಕಳ ಆರ್ಥಿಕ ಪ್ರಜ್ಞೆಯೂ ಕಾರಣ. ಶರಣರ ಬದುಕನ್ನು ಅಳವಡಿಸಿಕೊಂಡಲ್ಲಿ ದೇಶಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಬಸವಾದಿ ಶರಣರ ವಚನಗಳನ್ನು ಓದಿ ತಿಳಿದು ಬದುಕಬೇಕು.
ತೆಲುಗು ಭಾಷೆ ಯಲ್ಲಿ ಮಲ್ಲಮ್ಮನವರ ಅಗಾಧ ಸಾಹಿತ್ಯ ಸಂಪತ್ತಿದೆ. ಸಮಾಜ ಬಾಂಧವರು ಈ ಮಾಹಿತಿಯನ್ನು ಕಲೆ ಹಾಕಿ, ಮುಂದಿನ ತಲೆಮಾರಿನವರಿಗೆ ನೀಡಬೇಕಿದೆ.

ಮಲ್ಲಮ್ಮ ಕುಟುಂಬ ಸ್ವಾಸ್ಥ್ಯ, ಭಕ್ತಿ ಮತ್ತು ಶಕ್ತಿಯ ಪ್ರತೀಕ ಎಂದ ಅವರು ಪ್ರಸ್ತುತ ದಿನಮಾನದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು ಇದು ಸಮಾಜದ
ಅಧಪತನಕ್ಕೆ ಕಾರಣ.‌
ಸಮಾಜ ಸರಿಯಾದ ಮಾರ್ಗದಲ್ಲಿ ಸಾಗಬೇಕೆಂದರೆ
ಮಲ್ಲಮ್ಮನಂತಹ ದಾರ್ಶನಿಕರ ಬದುಕನ್ನು ಓದಬೇಕು, ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕೌಟುಂಬಿಕ ಮೌಲ್ಯಗಳನ್ನು ಮರಿಯಬಾರದು. ಮೌಲ್ಯಗಳನ್ನು‌ ಹರಡಬೇಕು. ಮನಸ್ಸುಗಳನ್ನು‌ ಕಟ್ಟುವ ಕೆಲಸ ಆಗಬೇಕು ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿ, ಅಕ್ಮಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲ ಮಾದರಿ ಸ್ತ್ರೀಯರು. ಮಲ್ಲಮ್ಮ ಸಂಸಾರದ ಕೋಟಲೆಯನ್ನು ತಾಳ್ಮೆ ಯಿಂದ ಸಹಿಸಿ, ಬೆಟ್ಟದಂತಹ ಕಷ್ಟವನ್ನು ಹೂವಾಗಿ ಅರಳಿಸಿದವರು. ಪುರುಷರಿಗೂ ಮಾದರಿ ಇವರು. ಅವರ ಬದುಕಿನ ಸಾರವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ‌ಜಿ.ಎಸ್.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Global High School ಗ್ಲೋಬಲ್ ಪ್ರೌಢಶಾಲೆಗೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗಮನಾರ್ಹ ಫಲಿತಾಂಶ

0

Global High School ಸೋಮಿನಕೊಪ್ಪ ರಸ್ತೆಯ ಕನಕನಗರ ಮುಖ್ಯ ರಸ್ತೆಯ ಲ್ಲಿರುವ ಗ್ಲೋಬಲ್ ಇಂಗ್ಲೀಷ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಮಾಂಟೆಸರಿ ಫ್ರೀ ಸ್ಕೂಲ್‌ಗೆ ಈ ಭಾರಿಯೂ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಚಿನ್ ಎಂ.ಎಸ್., ಸಂಗೀತ ವಿ., ಶಿವಾನಿ ವಿ. ಮತ್ತು ಸಲ್ಮಾನ್ ಖಾನ್ ಅತೀ ಹೆಚ್ಚು ಅಂಕ ಪಡೆದಿದ್ದು, ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಪ್ರತೀ ಭಾರಿ ನೂರರಷ್ಟು ಫಲಿತಾಂಸ ಈ ಶಾಲೆಗೆ ಬರುತ್ತಿರುವುದಕ್ಕೆ ಆಡಳಿತ ಮಂಡಳಿಯ ಶ್ರಮ ಮತ್ತು ಶಿಕ್ಷಕ ವೃಂದದವರ ಪರೀಶ್ರಮ ಕಾರಣವಾಗಿದೆ.

Global High School ಶಾಲೆಯಲ್ಲಿ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ವಾತಾವರಣವಿದೆ. ಓದಿನ ಜೊತೆಗೆ ಇತರೆ ಚಟುವಟಿಕೆಗಳಿಗೂ ಇಲ್ಲಿ ಹೆಚ್ಚು ಒತ್ತು ನೀಡಲಾಗುವುದು.
ಅದರಲ್ಲೂ ಇಲ್ಲಿ ಹೆಚ್ಚಾಗಿ ಆಟೋಟ ಸ್ಪರ್ಧೆಗಳು, ಚಿತ್ರಕಲೆ, ಸ್ಪೆಷಲ್ ಕ್ಲಾಸ್ ಹಾಗೂ ಮಕ್ಕಳಿಗೆ ಓದಲು ಅನುಕೂಲವಾಗುವಂತಹ ಎಲ್ಲಾ ವಾತಾವರಣ ಇಲ್ಲಿದೆ ಎಂದು ಕಾರ್ಯದರ್ಶಿ ಬಾಲಪ್ಪ ತಿಳಿಸಿದ್ದಾರೆ. ಈಗಾಗಲೆ ಪ್ರವೇಶಾತಿ ಪ್ರಾರಂಭ ವಾಗಿದ್ದುö, ಯಾವುದೇ ಶೂಲ್ಕ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Merit Co. Reservation ಶಿಕಾರಿಪುರ ಸರ್ಕಾರಿ ಐಟಿಐ ನಲ್ಲಿ‌‌ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

0

Merit Co. Reservation 2025-26 ನೇ ಶೈಕ್ಷಣಿಕ ಪ್ರವೇಶಕ್ಕಾಗಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಸರ್ಕಾರಿ ಸೀಟುಗಳಿಗೆ ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಉತೀರ್ಣ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ಒಟ್ಟು 84 ಸೀಟ್‌ಗಳಿವೆ. ಇವುಗಳಲ್ಲಿ ಎಲೆಕ್ಟ್ರಿಷಿಯನ್, ಎಲೆಕ್ಟಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್ ಮತ್ತು ಟರ್ನರ್ ಕೋರ್ಸ್ಗಳಿದ್ದು, ತರಬೇತಿ ಅವಧಿ 2 ವರ್ಷ ದ್ದಾಗಿರುತ್ತದೆ.

ಉದ್ಯೋಗ ಯೋಜನೆಯಡಿ ಒಟ್ಟು 172 ಸಿಟ್‌ಗಳಿವೆ. ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮೆಕ್ಯಾನಿಕಲ್ ಎಲೆಕ್ಟ್ರಿಕ್ ವೆಹಿಕಲ್, ಸಿಎನ್‌ಸಿ ಮೆಷಿನಿಂಗ್ ಟೆಕ್ನಿಷಿಯನ್, ವರ್ಚುಯಲ್ ಅನಲೈಸಿನ್ ಅಂಡ್ ಡಿಸೈನರ್ ವೃತ್ತಿಗಳ ಕೋರ್ಸ್ 2 ವರ್ಷಗಳ ಅವಧಿಯದ್ದಾಗಿದೆ.

ಹಾಗೂ ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಿಫ್ಯಾಕ್ಟರಿಂಗ್ ಟೆಕ್ನಿಷಿಯನ್, ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ವೃತ್ತಿಗಳಿಗೆ 1 ವರ್ಷ ಅವಧಿಯದ್ದಾಗಿದೆ.
ಪಿಪಿಪಿ-ಐಎಂಸಿ(ಮ್ಯಾನೆಜ್‌ಮೆಟ್ ಸೀಟ್) ನಲ್ಲಿ ಒಟ್ಟು 104 ಸೀಟ್‌ಗಳಿವೆ.

ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವೃತ್ತಿಗಳಿಗೆ 2 ವರ್ಷಗಳ ಅವಧಿಯದ್ದಾಗಿದ್ದು, ಹಾಗೂ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಅಥವಾ ಎಂಟನೇ ತರಗತಿ ಉತ್ತೀರ್ಣ ವಿದ್ಯಾರ್ಹತೆಗೆ ವೆಲ್ಡರ್ ವೃತ್ತಿ ಇದ್ದು, ಕೇವಲ 1 ವರ್ಷ ಅವಧಿ ಒಳಗೊಂಡಿದೆ.

Merit Co. Reservation ಆಸಕ್ತ ಅಭ್ಯರ್ಥಿಗಳು www.cite.karnataka.gov.in ವೆಬ್‌ಸೈಟ್ ಮೂಲಕ ಮೇ 28 ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲಕ ದಾಖಲಾತಿ ಹಾಗೂ ಅಟೆಸ್ಟೆಡ್ ಜೆರಾಕ್ಸ್ ಕಾಪಿಗಳೊಂದಿಗೆ ನಿಗದಿತ ದಿನಾಂಕದೊಳಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08187295040ನ್ನು ಸಂಪರ್ಕಿಸುವಂತೆ ಎಂದು ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

CM Siddharamaiah ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ & ನಾಗರೀಕರ ರಕ್ಷಣೆ ಬಗ್ಗೆ “ಸೀಎಂ” ಸಭೆ ಮತ್ತು‌ ವಿಡಿಯೋ ಸಂವಾದ

0

CM Siddharamaiah ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನಾಗರೀಕರ ರಕ್ಷಣಾ ಕಾರ್ಯಚಟುವಟಿಕೆಗಳ ಕುರಿತು ಇಂದು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು, ಎಲ್ಲಾ ಮಹಾನಗರಗಳ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಚನೆಗಳನ್ನು ನೀಡಿದರು.

CM Siddharamaiah ಗೃಹ ಸಚಿವರಾದ ಡಾ ಜಿ ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Kateel Ashok Pai Memorial College ವಿದ್ಯಾರ್ಥಿಗಳಮ್ನ ಸಮಾಜಮುಖಿಯಾಗಿ ರೂಪಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ- ಎನ್.ರಮೇಶ್

0

Kateel Ashok Pai Memorial College ಮಾನಸ ಟ್ರಸ್ಟ್ ನ ಕಟೀಲ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆ ಹಾಗೂ ಆರ್ಯ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಶ್ರೀ ರಮೇಶ್ ಎನ್ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು .

2025ರ ಮೇ ಹತ್ತರಂದು ನಗರದ ಅಂಬೇಡ್ಕರ್ ಭವನದಲ್ಲಿ ಮಾನಸ ಟ್ರಸ್ಟ್ ನ ವಿವಿಧ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಎನ್ ರಮೇಶ್ ರವರು ಮಾನಸ ಶಿಕ್ಷಣ ಸಂಸ್ಥೆಗಳು ಬಹಳ ಪ್ರಮುಖ ಕೆಲಸ ಕಾರ್ಯಗಳನ್ನು ನಡೆಸುತ್ತಿವೆ .ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ರೂಪಿಸುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ವಾದುದು .ಇದನ್ನು ಅರಿತುಕೊಂಡು ಇಲ್ಲಿ ಓದುವ ವಿದ್ಯಾರ್ಥಿಗಳು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲಿ ,ಸಮಾಜಮುಖಿಯಾಗಿ ಕೆಲಸ ಮಾಡುವ ರೀತಿಯಲ್ಲಿ ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು .ಈ ಒಂಬತ್ತನೇ ವಾರ್ಷಿಕೋತ್ಸವದಲ್ಲಿ ಶಿವಮೊಗ್ಗ ನಗರಕ್ಕೆ ಕೀರ್ತಿ ತಂದಿರುವ ಹತ್ತನೇ ತರಗತಿಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಆದಿಚುಂಚನಗಿರಿ ಪ್ರೌಢಶಾಲೆಯ ಶ್ರೀ ಸಹಿಷ್ಣು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ದಿವ್ಯ, ರಾಮಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ನಿತ್ಯ ಹಾಗೂ ಪ್ರಾಂಶುಪಾಲರಾದ ಶ್ರೀ ರೀತೇಶ್, ಮತ್ತು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾದ ಕುಮಾರಿ ನಮನ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಸುನಿತಾ ದೇವಿ ಇವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ಸಂಸ್ಥೆಯ ವಿದ್ಯಾರ್ಥಿನಿಯರಾದ ಕುಮಾರಿ ಮಯೂರಿ ಮೇಟಿ ,ಕುಮಾರಿ ಸಂಧಿಯ , ಕುಮಾರಿ ನಸುರೀನ್. ಕುಮಾರಿ ಹರ್ಷಿತ ಹಾಗೂ ಕುಮಾರಿ ರಾಜಲಕ್ಷ್ಮಿ ಎಂಬ ಐವರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ರಾಂಕ್ ಪಡೆದಿರುವುದಕ್ಕೆ ಸನ್ಮಾನಿಸಲಾಯಿತು.

ಕಾಲೇಜಿಗೆ ರಾಜ್ಯಮಟ್ಟದಲ್ಲಿ ಎಂಎಸ್‌ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಥಮ ರಾಂಕ್ ಬಂದಿರುವುದಲ್ಲದೆ ಒಟ್ಟು ಐದು ರ್‍ಯಾಂಕ್ಗಳು ಬಂದಿದೆ ಎಂಬುದನ್ನು ಪ್ರಾಂಶುಪಾಲರು ತಿಳಿಸಿದರು. ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಇದಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನ ಪ್ರಶಸ್ತಿಗಳನ್ನು ನೀಡಲಾಯಿತು .ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶುಭ ಮರವಂತೆ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪುಸ್ತಕ ಪ್ರೀತಿ ಮತ್ತು ಜನಸೇವೆಯ ಅಭಿಮಾನ. ಇವೆರಡನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂಬ ಕಿವಿ ಮಾತನ್ನು ತಿಳಿಸಿದರು.

Kateel Ashok Pai Memorial College ಈ ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರು ನಿರ್ದೇಶಕರು ಆಗಿರುವ ಡಾ. ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು .ಅಲ್ಲದೆ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಡಾಕ್ಟರ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು .

ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸಂಧ್ಯಾ ಹಾಗೂ ಶ್ರೀ ಅಜಯ್ ನಿರ್ವಹಿಸಿದರು .ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ನಡೆಸಿದರು .ಅವರು ಕಾಲೇಜು 2017ರಲ್ಲಿ ಪ್ರಾರಂಭವಾಗಿ ಶೈಕ್ಷಣಿಕವಾಗಿ ಹಾಗೂ ಪಠ್ಯೇತರವಾಗಿ ಗುರುತಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು .ಉತ್ತಮ ಗುಣಮಟ್ಟದ ಶಿಕ್ಷಣಗಳನ್ನು ನೀಡುತ್ತಿರುವ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎ ,ಬಿಎಸ್ಸಿ, ಬಿ ಎಸ್ ಡಬ್ಲ್ಯೂ, ಬಿಕಾಂ, ಎಂ ಎಸ್ ಸಿ ಸೈಕಾಲಜಿ ,ಕ್ಲೀನಿಕಲ್ ಸೈಕಾಲಜಿ ,ಬಿ ಎಸ್ ಸಿ ನರ್ಸಿಂಗ್ ಇತ್ಯಾದಿ ಕೋರ್ಸ್ಗಳು ಲಭ್ಯವಿದೆ .ಇದಲ್ಲದೆ ಈ ವರ್ಷ 2024_ 25 ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಮನ: ಶಾಸ್ತ್ರದಲ್ಲಿ ಸಂಶೋಧನಾ ಕೇಂದ್ರವೆಂಬ ಮಾನ್ಯತೆಯನ್ನು ನೀಡಿರುವುದಾಗಿ ಅವರು ತಿಳಿಸಿದರು.

ಕಾಲೇಜು ನಡೆದು ಬಂದ ದಾರಿಯಲ್ಲಿ ಈ ಒಂಬತ್ತನೇ ವರ್ಷದ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ.ಎಂದು ಅವರು ತಿಳಿಸಿದರು .ವೇದಿಕೆಯ ಕಾರ್ಯಕ್ರಮದ ನಂತರ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಚೆಂಡೆ ವಾದನ,ಜನಪದ ನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಐಕ್ಯುಎಸಿ ಸಂಯೋಜಕರಾದ ಡಾಕ್ಟರ್ ಅರ್ಚನಾ ಭಟ್ ನೆರವೇರಿಸಿದರು. ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ಯನ್ನು ಉಪನ್ಯಾಸಕರಾದ ಶ್ರೀಮತಿ ರೇಷ್ಮಾ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ರಾಯಪ್ಪ ನಿರ್ವಹಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕುಮಾರಿ ಹನಿ ಕುರುವರಿಯವರು ನಿರ್ವಹಿಸಿದರು. ವಿದ್ಯಾರ್ಥಿಗಳು ಸ್ವಾಗತ ನೃತ್ಯ ,ಪ್ರಾರ್ಥನೆ ಇತ್ಯಾದಿಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಎ ಪೈರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾನಸ ಸಂಸ್ಥೆ ಕೇವಲ ಮನೋವೈದ್ಯಕೀಯ ಸಂಸ್ಥೆ ಮಾತ್ರವಲ್ಲದೆ ಸಮಾಜದ ವಿವಿಧ ಸಂಸ್ಥೆಗಳ ವಿಶ್ವವಿದ್ಯಾಲಯಗಳ ಸಹಯೋಗ ಹಾಗೂ ಸಂಯೋಜನೆಯೊಂದಿಗೆ ಶೈಕ್ಷಣಿಕವಾಗಿಯು ಮುನ್ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ತಿಳಿಸಿದರು.

ಅವರು ಶೈಕ್ಷಣಿಕವಾಗಿ ಪಠ್ಯೇತರವಾಗಿ ಇಂದು ಮಾನಸ ಸಂಸ್ಥೆಯ ಹೆಸರನ್ನು ಪ್ರಸಿದ್ಧಿಗೆ ತಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಈ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುತ್ತಿರುವ ಎಲ್ಲಾ ಪೋಷಕರನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಅವರು ಡಾ ಅಶೋಕ‌ ಪೈರವರ ದೃಷ್ಟಿಕೋನ ದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಸಂತೋಷ ತಂದಿದೆ ಹಾಗೂ ಸಾರ್ಥಕ ಭಾವವನ್ನು ಮೂಡಿಸುತ್ತಿದೆ ಎಂದು ತಿಳಿಸಿದರು .ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

Bangalore Metro Rail Corporation ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ನಿಂದ 150 ಮೈಂಟೇನರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ

0

Bangalore Metro Rail Corporation ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. ನವರು 150 ಮೆಂಟೇನರ್ ಹುದ್ದೆಗಳಿಗಾಗಿ ಐ.ಟಿ.ಐ. ಅಥವಾ ಎನ್‌ಸಿವಿಟಿ/ ಎನ್‌ಸಿಟಿವಿಟಿ/ಎನ್‌ಎಸಿ ಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಯು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರವಾಗಿದ್ದು, ನಂತರ ವೈಯಕ್ತಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಅವಧಿಯನ್ನು ವಿಸ್ತರಿಸಲಾಗುವುದು. ವೇತನ 25000-59060 (ವಾರ್ಷಿಕ ಬಡ್ತಿ 3%) ಮತ್ತು ಬಿಎಂಆರ್‌ಸಿಎಲ್‌ನ ಓ&ಎಂ ವಿಂಗ್‌ಗೆ ಲಭ್ಯವಿರುವ ಇತರೆ ಭತ್ಯೆಗಳನ್ನು ನೀಡಲಾಗುವುದು.
ಆಸಕ್ತರು ಮೇ 22 ರೊಳಗಾಗಿ ಇಲಾಖೆಯ ವೆಬ್‌ಸೈಟ್ www.bmrc.co.in/careers ರಲ್ಲಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ helpdesk@bmrc.co.in ನ್ನು ಸಂಪರ್ಕಿಸುವAತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ. ಹಿರೇಮಠರವರು ತಿಳಿಸಿದ್ದಾರೆ.

Rotary Club Shimoga ಪ್ರತಿಭಾವಂತರಿಗೆ ಸೂಕ್ತ ಸ್ಥಾನಮಾನ ದೊರೆಯಬೇಕು- ಡಿ.ಎಸ್.ಅರುಣ್

0

Rotary Club Shimoga ಭಾರತವನ್ನು ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿಸುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಬೇಕು. ಇದನ್ನು ಸಾಧಿಸುವ ಮಹತ್ತರವಾದ ಜವಾಬ್ದಾರಿ ಇಂದಿನ ನೂತನ ಅಧಿಕಾರಿಗಳ ಮೇಲಿದೆ ಎಂದು ಎಂ ಎಲ್ ಸಿ ಡಿ.ಎಸ್.ಅರುಣ್ ಹೇಳಿದರು.

ಅವರು ನಗರದ ನ್ಯೂಟನ್ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ನಿಂದ ಯು ಪಿ ಎಸ್ ಸಿ ಯಲ್ಲಿ ರ್ಯಾಂಕ್ ಪಡೆದ ಜಿಲ್ಲೆಯ ಸಾಧಕರಿಗೆ ಏರ್ಪಡಿಸಿದ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತರಿಗೆ ಸೂಕ್ತ ಸ್ಥಾನಮಾನ ಅಧಿಕಾರ ದೊರೆಯಬೇಕು. ಇಲ್ಲದಿದ್ದರೆ ಅವರು ವಿದ್ಯೆಗೆ ಅರ್ಹವಾದ ಸ್ಥಾನಮಾನ ಅಧಿಕಾರ ಅರಸಿಕೊಂಡು ವಿದೇಶಗಳಿಗೆ ಪಲಾಯನ ಮಾಡುತ್ತಾರೆ. ಇಂತಹ ಪ್ರತಿಭೆಗಳು ಪಲಾಯನ ಮಾಡುವುದು ದೇಶಕ್ಕೆ ನಷ್ಟವಾಗುತ್ತದೆ.

ಕಾಲ ಎಂಬುವುದು ಯಾವಾಗಲೂ ಎಲ್ಲ ಕಾಲದಲ್ಲೂ ಚೆನ್ನಾಗಿರುತ್ತದೆ. ಆದರೆ ಅದರಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಬೇಕು. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಕೊಡುಗೆಗಳನ್ನು ಕೊಡುವಲ್ಲಿ ನಮ್ಮ ಪಾತ್ರ ಬಹಳಷ್ಟಿದೆ ಎಂಬುದನ್ನು ಮರೆಯಬಾರದು. ಇಂದು ಸಮಾಜದಲ್ಲಿ ಜ್ಞಾನ ಮತ್ತು ಸಂಸ್ಕಾರಗಳು ಬಹು ಮುಖ್ಯವಾದವು. ಕೇವಲ ಜ್ಞಾನ ಹೊಂದಿದ್ದರೆ ಸಾಲದು ಅದಕ್ಕೆ ತಕ್ಕ ಸಂಸ್ಕಾರಗಳು ಇರಬೇಕು. ಆಗ ಮಾತ್ರ ಅಂತಹ ಜ್ಞಾನಕ್ಕೆ ಮಹತ್ವ ಇರುತ್ತದೆ. ಅಂತಹ ಸಂಸ್ಕಾರಗಳು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ.

ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳ ಪಾತ್ರ ಬಹುಮುಖ್ಯವಾಗಿದೆ. ಇವುಗಳಲ್ಲಿ ಪಾರದರ್ಶಕತೆಯನ್ನು ತರಬೇಕಾಗಿದೆ. ಆಗ ಎಲ್ಲ ರೀತಿಯ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತದೆ. ಇದಕ್ಕೆ ನಮ್ಮ ದೇಶದ ಸಂವಿಧಾನವೇ ಅಡಿಪಾಯ. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯುತ ನಾಗರೀಕರ ಪಾತ್ರವು ಬಹಳಷ್ಟಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕೇಂದ್ರ ಸರ್ಕಾರದ ನಾಗರಿಕ ಸೇವೆಗೆ ಆಯ್ಕೆಯಾದ ಮಾದೇಹಳ್ಳಿಯ ಡಾ. ದಯಾನಂದ್ ಸಾಗರ್, ಶಿವಮೊಗ್ಗದ ಬಿ.ಎಂ.ಮೇಘನಾ, ಸಾಗರದ ಡಿ.ವಿಕಾಸ್ ಅವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.

Rotary Club Shimoga ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಶೈಲೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ನಿರಂಜನ್, ಸಹಾಯಕ ಜಿಲ್ಲಾ ರಾಜ್ಯಪಾಲ ನಾಗರಾಜ್, ಲೀಲಾವತಿ ಸುಧಾಕರ ಶೆಟ್ಟಿ, ಹೆಚ್.ವಿ.ಆದರ್ಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಧಕರು ಸಭಿಕರೊಂದಿಗೆ ಸಾಧನೆಯ ತಯಾರಿ ಕುರಿತು ಅನುಭವಗಳನ್ನು ಹಂಚಿಕೊಂಡರು. ನಂತರ ಸಂವಾದ ನಡೆದು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಪರೀಕ್ಷೆ ಎದುರಿಸಿದ ರೀತಿ, ಪೂರ್ವ ತಯಾರಿ, ಮಾರ್ಗದರ್ಶನ ನೀಡಿದವರು, ವಿದ್ಯಾಭ್ಯಾಸಕ್ಕಾದ ಖರ್ಚು ವೆಚ್ಚಗಳು, ಪರಿಪಾಟಲು, ಅನುಭವಿಸಿದ ಯಾತನೆ ಎಲ್ಲವನ್ನು ಹಂಚಿಕೊಂಡರು.

ಸಭೆಯಲ್ಲಿ ನಾಣ್ಯ ಹಾಗೂ ನೋಟುಗಳ ಸಂಗ್ರಹಕ ಕೆ.ಎಸ್.ಗಣೇಶ್ ಅವರು ಪ್ರತಿಭಾವಂತರ ಜನ್ಮದಿನದ ನೋಟುಗಳನ್ನು ನೀಡಿ ಗೌರವಿಸಿದರು.ಆರ್.ಶುಭ ಪ್ರಾರ್ಥಿಸಿದರೆ, ಕೆ.ಹೆಚ್.ತೀರ್ಥಯ್ಯ ಸ್ವಾಗತಿಸಿದರು. ಗೀತಾ ಬೆಂಗಳೂರು ವಂದಿಸಿದರು. ಶ್ರೀನಿವಾಸ್ ಅತಿಥಿ ಪರಿಚಯ ಮಾಡಿದರು. ಡಾ. ಮಯೂರಿ ಮಲ್ಲಿಕಾರ್ಜುನ ಜ್ಯೋತಿ ನಿರೂಪಿಸಿದರು.

ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು‌‌ ಮತ್ತು‌ ಸಂಘಸಂಸ್ಥೆಗಳು ರೋಟರಿ ಸೇವೆಗೆ ಸಹಕರಿಸಬೇಕು- ಹರಿಪ್ರಸಾದ್ ರೈ

0

ಸೊರಬ ಪಟ್ಟಣದ ಸಾಗರ ರಸ್ತೆಯಲ್ಲಿ ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಲಯನ್ಸ್ ದ್ವಿತೀಯ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಭೇಟಿ ನೀಡಿ ವೀಕ್ಷಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಹರಿಪ್ರಸಾದ್ ರೈ ಅವರು, ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಆರಂಭವಾದ ತರುವಾಯ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಹಳೇ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಟ್ಟಡ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳಲಾಗಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದವರು ಹಾಗೂಸಂಘ-ಸಂಸ್ಥೆಯವರು ಸಹ ಮುಕ್ತ ಮನಸ್ಸಿನಿಂದ ಸಹಕಾರ ನೀಡುವಂತೆ ತಿಳಿಸಿದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ. ಎಂ.ಕೆ. ಭಟ್ ಮಾತನಾಡಿ, ಪಟ್ಟಣದಲ್ಲಿ ಸುಮಾರು 52 ವರ್ಷಗಳಿಂದ ಲಯನ್ಸ್ ಕ್ಲಬ್ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಕಳೆದ ಐದು ದಶಕಗಳ ಹಿಂದೆ ಕಲ್ಯಾಣ ಮಂದಿರವನ್ನು ನಿರ್ಮಿಸಿ ಬಡವರಿಗೆ ಅನುಕೂಲ ಕಲ್ಪಿಸಲಾಗಿತ್ತು. ಅನೇಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು ಕಲ್ಯಾಣ ಮಂದಿರದಲ್ಲಿ ಜರುಗಿದೆ. ನಂತರ ಕಳೆದ ಮೂರು ದಶಕದ ಹಿಂದೆ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು. ನೂತನ ಕಟ್ಟಡದ ಜವಾಬ್ದಾರಿಯನ್ನು ಹರಿಪ್ರಸಾದ್ ರೈ ಅವರು ವಹಿಸಿಕೊಂಡಿದ್ದಾರೆ. ಉತ್ತಮ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದ್ದು, ಸ್ಥಳೀಯ ಲಯನ್ಸ್ ಸದಸ್ಯರು ಸಹ ಸಹಕಾರ ನೀಡುತ್ತಿದ್ದಾರೆ. ಮಾದರಿಯಾದ ಶಿಕ್ಷಣ ಸಂಸ್ಥೆಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಭುವನೇಶ್ ಗೌಡ ಹಿರಳೆ, ಕಾರ್ಯದರ್ಶಿ ಎಚ್.ಎಂ. ಪ್ರಶಾಂತ್, ಮಾಜಿ ಅಧ್ಯಕ್ಷ ದಿನಕರ ಭಟ್ ಭಾವೆ, ವಕೀಲ ಸಿ. ಶಿವಕುಮಾರ್ ಸುಬ್ರಹ್ಮಣ್ಯ ಗುಡಿಗಾರ್ ಸೇರಿದಂತೆ ಇತರರಿದ್ದರು.
ಫೋಟೋ
೧೦ ಸೊರಬ ೦೧: ಸೊರಬ ಪಟ್ಟಣದ ಸಾಗರ ರಸ್ತೆಯಲ್ಲಿ ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಲಯನ್ಸ್ ದ್ವಿತೀಯ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಭೇಟಿ ನೀಡಿ ವೀಕ್ಷಿಸಿದರು.

Rotary Club Shimoga ಭಾರತೀಯ ಸಂಸ್ಕೃತಿ‌ ಉಳಿಸುವುದು ನಮ್ಮೆಲ್ಲರ ಕರ್ತವ್ಯ- ವಿದ್ವಾನ್ ಶಿವಾನಂದ ಭಟ್

0

Rotary Club Shimoga ಭಾರತೀಯ ಸಂಸ್ಕೃತಿಯಲ್ಲಿ ಪುರಾತನವಾದದ್ದು ದೇವಭಾಷೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ವಾನ್ ಶಿವಾನಂದ್ ಭಟ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಸ್ವತಿ ಶ್ಲೋಕಗಳನ್ನು ಕಲಿಸಲು ಜೂನ್ ನಿಂದ ಶಿಬಿರ ಪ್ರಾರಂಭಿಸಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ನಮಗೆ ಜನ್ಮ ಇತ್ತ, ನಮ್ಮ ತಂದೆ-ತಾಯಿಗೆ ಮೊದಲು ನಮಸ್ಕರಿಸಬೇಕು. ಪೂರ್ವಜನ್ಮದ ಆತ್ಮಗಳಿಂದ ನಮ್ಮ ನಡೆನುಡಿಗಳು ಬಿಂಬಿತವಾಗುತ್ತದೆ. ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗುವುದಿಲ್ಲ. ದೇಹ ಮಣ್ಣಿನಲ್ಲಿ ಲೀನವಾಗುತ್ತೆ ಆದರೆ, ಆತ್ಮನಶಿಸುವುದಿಲ್ಲ ಎಂಬ ನಂಬಿಕೆ ಇದೆ. ಮಕ್ಕಳಿಗೆ ಅಂಕಗಳಿಸುವ ಶಿಕ್ಷಣದಿಂದ ಯಾವುದೇ ಅನುಕೂಲಗಳಿಲ್ಲ. ಸಂಸ್ಕೃತದಿಂದ ಎಲ್ಲಾ ಭಾಷೆ ಸುಲಭವಾಗಿ ಕಲಿಯಬಹುದು. ದೇಶದ್ರೋಹಿಗಳು ಸಂಸ್ಕೃತ ಸತ್ತಭಾಷೆ ಎನ್ನುತ್ತಾರೆ. ಸಂಸ್ಕಾರದಿಂದ ಬದಲಾವಣೆ ಸಾದ್ಯ. ಇಂದಿಗೂ ನಾಸದವರು ನಮ್ಮ ನಂಬಿಕೆಗಳನ್ನು ಗೌರವಿಸುತ್ತಾರೆ ಹಾಗೂ ಪಾಲಿಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಜೀವ ಇರುವುದು ಕಾಣುವುದಿಲ್ಲ, ವಿಜ್ಞಾನಕ್ಕೂ ಸವಾಲಾಗಿದೆ ಎಂದು ಹೇಳಿದರು.

Rotary Club Shimoga ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಮಾತನಾಡಿ, ನಮ್ಮ ದೇಶದ ಆಚಾರ ವಿಚಾರಗಳನ್ನು ಇಂತಹ ವಿದ್ವಾಂಸರಿಂದ ಮಾತ್ರ ಉಳಿಸಿ ಬೆಳೆಸಲು ಸಾದ್ಯ. ನಮ್ಮ ಸಂಸ್ಕೃತಿಯನ್ನು ನಾವು ಗೌರವಿಸುವುದನ್ನು ಮೊದಲು ಕಲಿಯಬೇಕು ಹಾಗೂ ಉಳಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೊ.ಸತ್ಯನಾರಾಯಣ್ ಸ್ವಾಗತಿಸಿ, ರೊ.ರೇಣುಕಾರಾದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೊ.ಪ್ರಕೃತಿ ಮಂಚಾಲೆ ವಂದಿಸಿದರು. ಭಾರದ್ವಾಜ್, ಜಿ.ವಿಜಯಕುಮಾರ್, ವಾಗೇಶ್, ನಾಗರಾಜ್ ರಾಜಶೇಖರ್ ಮುಂತಾದವರಿದ್ದರು.

Actor Doddanna ನನ್ನ ರಂಗಭೂಮಿ ಮತ್ತು ಸಿನಿಮಾ ಪಯಣ- ನಟ ದೊಡ್ಡಣ್ಣ ವಿಶೇಷ ಉಪನ್ಯಾಸ ಕೇಳಲು ಬನ್ನಿ!

0

Actor Doddanna ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ ಮೇ.11ರ ಭಾನುವಾರ ಸಂಜೆ 5;30 ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಫ್ರೆಂಡ್ ಸೆಂಟರ್ ಹಾಲ್‌ನಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದ್ದು, ಹೆಸರಾಂತ ಸಿನಿಮಾ ಕಲಾವಿದ ದೊಡ್ಡಣ್ಣರವರು ಪಾಲ್ಗೊಂಡು ನನ್ನ ರಂಗಭೂಮಿ ಹಾಗೂ ಸಿನಿಮಾ ಪಯಣ ಕುರಿತು ಮಾತನಾಡಲಿದ್ದಾರೆ.
ಅಗಾಧ ಪ್ರತಿಭೆಯ ಶ್ರೀ ದೊಡ್ಡಣ್ಣ ಇಂದು ಕನ್ನಡ ಚಲನಚಿತ್ರರಂಗದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು ಮೂಲತಃ ರಂಗಭೂಮಿ ಕಲಾವಿದರು. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಲೇ ವಿಶ್ವೇಶ್ವರ ಕಲಾಸಂಘದ ಮೂಲಕ ರಂಗಭೂಮಿ ನಟರಾಗಿ ಬೆಳೆದವರು. ನಂತರ ಚಲನಚಿತ್ರ ರಂಗ ಪ್ರವೇಶಿಸಿ ಅಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾ ಬೆಳೆದ ಪರಿ ಅನನ್ಯವಾದದು. Actor Doddanna ಖಳನಾಯಕನಾಗಿ ಹಾಗೂ ಹಾಸ್ಯ ನಟನಾಗಿ ಇಂದು ದೊಡ್ಡಣ್ಣ ಮನೆ ಮಾತಾಗಿದ್ದಾರೆ. ಹೆಸರಿಗೆ ತಕ್ಕ ಹಾಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದೊಡ್ಡಣ್ಣ ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದ್ದು, ವಿವರಗಳಿಗೆ 9449284495, 95380 20367ರಲ್ಲಿ ಸಂಪರ್ಕಿಸಬಹುದು.