Kote SeethaRamanjaneya Temple ನಗರದ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಧ್ವಜಸ್ಥಂಭ ಹಾಗೂ ಬಲಿಪೀಠದ ಪ್ರತಿಷ್ಟಾಪನಾ ಸಮಾರಂಭವು ಮೇ. ೧೯ರ ಸೋಮವಾರ ನಡೆಯಲಿದೆ.
ಇದಕ್ಕೆ ಪೂರ್ವಭಾವೀಯಾಗಿ ಶನಿವಾರದಿಂದ ಅಂಕುರಾರ್ಪಣ ಪುರಸ್ಸರ ಸೇರಿದಂತೆ ಆಗಮ ಕೈಂಕರ್ಯಗಳು ಆರಂಭವಾಗಿದ್ದು, ೧೮ರ ಭಾನುವಾರ ಬೆಳಿಗ್ಗೆ ೦೯ ಗಂಟೆಯಿAದ ಶಾಂತಿ ಹೋಮ, ರಕ್ಷಾಬಂಧನ, ವಾಸ್ತುಯಾಗ, ಸಂಜೆ ದ್ವಾರ ತೋರಣ, ಮಹಾಕುಂಭಾರಾಧನಾ, ಧ್ವಜಸಂಭಾಽದೇವತಾ ಮೂರ್ತಿ ಮಂತ್ರ ಹೋಮ ನಡೆಯಿದೆ.
ಮೇ. ೧೯ರ ಸೋಮವಾರದಂದು, ಬೆಳಿಗ್ಗೆ ಮಂಡಲಾರಾಧನೆ, ಹೋಮ, ಪೂರ್ಣಾಹುತಿ, ಮಹಾಕುಂಭ ಪ್ರೋಕ್ಷಣ, ಅಶೀರ್ವಚನ, ಮಹಾಪ್ರಸಾದ ವಿನಿಯೋಗ, ದಾನಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.
Kote SeethaRamanjaneya Temple ಭಕ್ತಾದಿಗಳು ಈ ಎಲ್ಲಾ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸೇವಾಕರ್ತರಾದ ಸುರಾಲ್ ಕಾಮತ್ ಕುಟುಂಬವರ್ಗದವರು ಕೋರಿದ್ದಾರೆ.
Kote SeethaRamanjaneya Temple ಕೋಟೆ ಶ್ರೀಆಂಜನೇಯ ದೇಗುಲದ ಆವರಣದಲ್ಲಿ ಮೇ19 ರಂದುಧ್ವಜಸ್ಥಂಭ ಪ್ರತಿಷ್ಠಾಪನೆ
World Hypertension Day ಮೇ18. ವಿಶ್ವ ರಕ್ತದೊತ್ತಡ ಜಾಗೃತಿ ದಿನ. ಸಹ್ಯಾದ್ರಿ ಎನ್.ಹೆಚ್.ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
World Hypertension Day ವಿಶ್ವ ರಕ್ತದೊತ್ತಡ ದಿನಾಚರಣೆ (World Hypertension Day) ಯ ವಿಶೇಷ ಸಂದರ್ಭದಲ್ಲಿ, ನಗರದ ಕುವೆಂಪು ರಸ್ತೆಯಲ್ಲಿರುವ ನಂಬಳ ಅಟ್ರಿಯಂ ಬಳಿಯ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಮೇ 18ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಿನಿಕ್‌ನ ಆವರಣದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಡಾ. ಗೋಪಾಲ್ ಡಿ ಮತ್ತು ಡಾ. ಕಿರಣ್ ವಿ.ಎಚ್. ಅವರು ಪಾಲ್ಗೊಳ್ಳುವವರಿಗೆ ಉಚಿತ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಇದರೊಂದಿಗೆ, ರಕ್ತದೊತ್ತಡ (ಬಿಪಿ), ಇಸಿಜಿ (ಹೃದಯದ ಪರೀಕ್ಷೆ), ಮತ್ತು ಜಿಆರ್‌ಬಿಎಸ್ – ರಕ್ತದಲ್ಲಿನ ಸಕ್ಕರೆ ಪರೀಕ್ಷೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುವುದು.
World Hypertension Day ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮುಖ್ಯ ಉದ್ದೇಶವು ರಕ್ತದೊತ್ತಡ (ಬಿಪಿ)ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ರೋಗ ಬರುವ ಮುಂಚೆಯೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಹೆಚ್ಚಿಸುವುದಾಗಿದೆ. ಶಿವಮೊಗ್ಗ ನಗರದ ನಾಗರಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕೆಂದು ಆಸ್ಪತ್ರೆಯು ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ: 9886413131
S N Channabasappa ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ- ಎಸ್.ಎನ್.ಚನ್ನಬಸಪ್ಪ
S N Channabasappa ಡೆಂಗಿ, ಚಿಗುನ್ ಗುನ್ಯ, ಮಲೇರಿಯಾದಂತಹ ಇತರೆ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ – 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಗಾರು ಆರಂಭವಾಗಲಿದ್ದು ನಮ್ಮ ಮನೆ ಸುತ್ತಲಿನಲ್ಲಿ ಸೊಳ್ಳೆಗಳು ಆಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಡೆಂಗಿ ಸೇರಿದಂತೆ ಸೊಳ್ಳೆಯಿಂದ ಹರಡಯವ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಹಂತಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ನಾವು ಈ ಕಾರ್ಯಕ್ರಮಗಳ ಉದ್ದೇಶ ಅರಿತುಕೊಂಡು ಜಾಗೃತರಾಗಬೇಕು.
ನಾವೆಲ್ಲ ಸೇರಿ ಡೆಂಗಿಯಂತಹ ಮಾರಣಾಂತಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ನಿಯಂತ್ರಣಕ್ಕೆ ಬದ್ದರಾಗಬೇಕು ಎಂದ ಅವರು ಪ್ಲಾಸ್ಟಿಕ್ ಬಳಕೆಗೆ ಸಹ ಕಡಿವಾಣ ಹಾಕಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಿಹೆಚ್ಈ ಡಾ.ನಟರಾಜ್ ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿಗಳು ಟೈರ್ ಗಳು ಬ್ಯಾರೆಲ್ ಗಳು, ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಹರಡುವ ಸೊಳ್ಳೆಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿವೆ . ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ .ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಡೆಂಗಿ ಸೋಲಿಸಲು ಹೆಜ್ಜೆಗಳು : ಪರಿಶೀಲಿಸಿ ಸ್ವಚ್ಚಗೊಳಿಸಿ ಮುಚ್ಚಿಡಿ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕಿದೆ. ಪ್ರತಿವರ್ಷ ಮೇ ೧೬ ರಂದು ಡೆಂಗಿ ದಿನಾಚರಣೆ ಆಚರಿಸಲಾಗುತ್ತದೆ. ಮುಂಗಾರು ಆರಂಭದ ಮುನ್ನ ಸೊಳ್ಳೆಯಿಂದ ಹರಡುವ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯ, ಝೀಕಾದಂತಹ ಸೋಂಕುಗಳು ಉಲ್ಬಣಗೊಳ್ಳುವ ಕಾರಣ ಸೊಳ್ಳೆ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ, ಸೊಳ್ಳೆಗಳ ನಿಯಂತ್ರಣ ಮಾಡುವುದರಿಂದ ಈ ರೋಗಗಳ ನಿಯಂತ್ರಣ ಸಾಧ್ಯ ಆಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆರೋಗ್ಯ
S N Channabasappa ಇಲಾಖೆ ಈ ರೋಗಗಳನ್ನು ಎದುರಿಸಲು ಸಿದ್ದವಾಗಬೇಕೆಂಬ ಉದ್ದೇಶದಿಂದ ಈ ದಿನ ಆಚರಣೆ ಮಾಡಲಾಗುತ್ತದೆ. ಕಳೆದ ಸಾಲಿನಲ್ಲಿ ರಾಜ್ಯಾದ್ಯಂತ ಡೆಂಗಿ ಹೆಚ್ಚು ಪ್ರಕರಣ ದಾಖಲಾಗಿ ಸಾವುನೋವು ಸಂಭವಿಸಿತ್ತು. ಡೆಂಗಿ ಮಾರಣಾಂತಿಕ ರೋಗವಾಗಿದ್ದು, ನಿರ್ಲಕ್ಷ್ಯ ಮಾಡಬಾರದು. ಯಾವುದೇ ರೀತಿ ಜ್ವರ ಇದ್ದರೂ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಈ ರೋಗಗಳ ನಿಯಂತ್ರಣದಲ್ಲಿ ಪ್ರತಿ ನಾಗರಿಕರ ಜವಾಬ್ದಾರಿ ಇದ್ದು, ಸೊಳ್ಳೆ ಉತ್ಪತ್ತಿ ತಾಣಗಳು, ಪರಿಕರಗಳಾದ ಡ್ರಮ್, ಸಿಮೆಂಟ್, ತೊಟ್ಟಿ ಇತರೆ ಸ್ವಚ್ಛ ಗೊಳಿಸಬೇಕು. ಅಡಿಕೆ ತೋಟದಲ್ಲಿನ ಹಾಳೆಗಳಲ್ಲಿ ಲಾರ್ವಾ ಹೆಚ್ಚಿರುತ್ತದೆ. ತೋಟದ ಕೆಲಸ ಮಾಡುವ ಕಾರ್ಮಿಕರಲ್ಲೂ ಪ್ರಕರಣಗಳು ಕಾಣುತ್ತಿರುವುದರಿಂದ ಹಾಳೆಯಲ್ಲಿ ನೀರು ನಿಲ್ಲದಂತೆ ನಿಯಂತ್ರಣ ಮಾಡಬೇಕು ಹಾಗೂ ವೈಯಕ್ತಿಕ ರಕ್ಷಣಾತ್ಮಕ ಕ್ರಮಗಳಾದ ಸೊಳ್ಳೆ ನಿವಾರಕ ಲೇಪನ, ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ಸೊಳ್ಳೆಗಳು ಹಗಲು ಕಚ್ಚುವದರಿಂದ ಮಕ್ಕಳು, ಹಿರಿಯರು ಮೈ ತುಂಬಾ ಬಟ್ಟೆ ಧರಿಸಬೇಕು ಎಂದ ಅವರು, ಜಾಗೃತಿ ಜಾಥಾ ಕಾರ್ಯಕ್ರಮ ಎಲ್ಲ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಕರಪತ್ರಗಳು, ಆಡಿಯೋ ಜಿಂಗಲ್ಸ್ ಮೂಲಕವೂ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಎಸ್ ಒ ಡಾ.ನಾಗರಾಜ ನಾಯ್ಕ್, ಟಿಹೆಚ್ ಒ ಡಾ. ಚಂದ್ರಶೇಖರ್, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಆರಾಧ್ಯ ಎಂ.ವಿ.ಟಿ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕವಿತಾ, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
Apprenticeship ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
Apprenticeship ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಐಟಿಐ, ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ (COPA), ಕಾರ್ಪೆಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಟೂಲ್ ಆಂಡ್ ಡೈಮೇಕರ್, ಸಿಎನ್‌ಸಿ ಪ್ರೋಗ್ರಾಮರ್ ಕಂ ಆಪರೇಟರ್‌ನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ಆಸಕ್ತರು ತಮ್ಮ ಎಸ್‌ಎಸ್‌ಎಲ್‌ಸಿ+ ಐಟಿಐ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ಪೋರ್ಟಲ್ ರಿಜಿಸ್ಟ್ರೇಷನ್ ಸಂಖ್ಯೆ, ಎಂಪ್ಲಾಯ್ಮೆAಟ್ ಕಾರ್ಡ್, ಪಾಸ್‌ಪೋರ್ಟ್ ಸೈಜಿನ 4 ಫೋಟೋಗಳು ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ಗುತ್ಯಪ್ಪ ಕಾಲೋನಿ, Apprenticeship ಪಂಪಾ ನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ದಿ:04/06/2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ದೂ.ಸಂ: 08182-255293, 9380663606/ 9901914601 ನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shadakshari C S ಸರ್ಕಾರಿ ನೌಕರರ ಕ್ರೀಡಾಕೂಟದ ಟ್ರೋಫಿ. ಲಾಂಛನ ಬಿಡುಗಡೆ : ಸಿ.ಎಸ್.ಷಡಾಕ್ಷರಿ
Shadakshari C S ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ 20ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ನೌಕರರ ಸಂಘದ ಸಭಾಂಗಣದಲ್ಲಿ ಕ್ರೀಡಾಕೂಟದ ಲಾಂಛನ, ಕ್ರೀಡಾ ಸಮವಸ್ತ್ರ ಹಾಗೂ ಟ್ರೋಫಿ ಬಿಡುಗಡೆಗೊಳಿಸಿ, ಪತ್ರಿಕಾ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈಗಾಗಲೇ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದವರು ನುಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಎಲ್ಲಾ 15,000 ನೌಕರ ಕ್ರೀಡಾಪಟುಗಳಿಗೆ ಟ್ರಾಕ್‌ಶೂಟನ್ನು ನೋಂದಣಿ ಸಂದರ್ಭದಲ್ಲಿಯೇ ನೀಡಲಾಗುವುದು. ಸ್ಪರ್ಧೆಯಲ್ಲಿ ಎಲ್ಲಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನು ಕೊಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಅತ್ಯಂತ ಆಕರ್ಷಕವಾದ ಟ್ರೋಫಿಯನ್ನು ಕ್ರೀಡಾಪಟುಗಳಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ, ಟ್ರೋಫಿಯ ಜೊತೆಗೆ ಸಫಾರಿ ಕಂಪನಿಯ ಟ್ರಾಲಿ ಬ್ಯಾಗನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಿದರು
Shadakshari C S ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ನಾಲ್ಕು ಗಂಟೆಗೆ ಸಮಾರಂಭಕ್ಕೆ ಆಗಮಿಸಲಿದ್ದು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ಉಪಮುಖ್ಯಮಂತ್ರಿಗಳು ಕೂಡ ರಸ್ತೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಅಧಿಕಾರವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷನಾದ ನಂತರ ನಾಲ್ಕು ಬಾರಿ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಒಂದು ವಿಶೇಷವಾಗಿದೆ ಎಂದ ಅವರು, ಮೇ 19ರಂದು ಸಂಜೆ ನೆಹರು ಕ್ರೀಡಾಂಗಣದಲ್ಲಿ ಜನಪದ ದಿಬ್ಬಣ ಕಾರ್ಯಕ್ರಮ ನಡೆಯಲಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಜಗದೀಶ್ ಹಾಗೂ ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡದ ಮುಖ್ಯ ಇಂಜಿನಿಯರ್ ಬಿವಿ ಜಗದೀಶ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಿದ್ದಲಿಂಗರೆಡ್ಡಿ ಶಾಹಿ ಎಕ್ಸ್ಪೋರ್ಟ್ ನ ವ್ಯವಸ್ಥಾಪಕ ಲಕ್ಷ್ಮಣ್, ಸೂಡಾ ಆಯುಕ್ತ ವಿಶ್ವನಾಥ್ ಅವರು ಆಗಮಿಸಲಿದ್ದಾರೆ ಎಂದರು.
ಮೇ 20ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಾಗೂ ಮಾಜಿ ಶಾಸಕರುಗಳಾದ ಆರ್ ಮಂಜುನಾಥ್ ನೆರವೇರಿಸಲಿದ್ದಾರೆ ಇವರೊಂದಿಗೆ ಬಿಸಿಬಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಸೇರಿದಂತೆ ಅನೇಕ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಎಲ್ಲಾ ನೌಕರ ಬಂಧುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿದೆ ಎಲ್ಲರಿಗೂ ಕೂಡ ಅವರ ವಾಟ್ಸಪ್ ಗಳಿಗೆ ಕ್ಯೂಆರ್ ಕೋಡ್ ನ್ನು ಹಾಕಲಾಗುತ್ತಿದೆ ಅದರಲ್ಲಿ ಎಲ್ಲ ಸಮಗ್ರ ಮಾಹಿತಿ ದೊರೆಲಿದೆ ಯಾರಿಗೂ ಕೂಡ ಗೊಂದಲ ಆಗದಂತೆ ಮತ್ತು ಎಲ್ಲಿಯೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು
ಕ್ರೀಡಾಪಟುಗಳು ತಂಗುವ ಮತ್ತು ಕ್ರೀಡಾಕೂಟದ ಸ್ಥಳಕ್ಕೆ ಸಂಚರಿಸಲು ಅನುಕೂಲವಾಗುವಂತೆ 40 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಎಂದರು. ಈ ಸಂದರ್ಭದಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಕಾರ್ಯದರ್ಶಿ ಪಾಪಣ್ಣ, ಸಿದ್ಬಸಪ್ಪ, ದಿನೇಶ್, ರಂಗನಾಥ್, ಆರ್.ಮಾರುತಿ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
S. N. Channabasappa ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರದಂತಹ ಚಟುವಟಿಕೆ ಅಗತ್ಯ: ಎಸ್.ಎನ್.ಚನ್ನಬಸಪ್ಪ
S. N. Channabasappa ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಮನಸ್ಸಿಗೆ ಮುದ ನೀಡಲು ಬೇಸಿಗೆ ಶಿಬಿರದಂತಹ ಚಟುವಟಿಕೆಗಳು ಅವಶ್ಯಕವಾಗಿದ್ದು, ಮಕ್ಕಳು ತಪ್ಪದೇ ಇಂತಹ ಶಿಬಿರಗಳ ಸದುಪಯೋಗ ಪಡಿಯಬೇಕು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು
ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕಾಶಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ೬ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ “ಸೃಜನಾತ್ಮಕ ಮತ್ತು ಕ್ರಿಯಾಶೀಲಾತ್ಮಕ” ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೊಳಗಿನ ಕಲೆ, ಪ್ರತಿಭೆ ಹೊರ ತರಲು ಈ ತರಹದ ಚಟುವಟಿಕೆಗಳು ಅವಶ್ಯಕವಾಗಿದ್ದು, ಅದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸರ್ಕಾರಿ ಶಾಲೆಗಳು ಅವಕಾಶ ನೀಡುತ್ತಿರುವುದು ಸಂತಸವಾಗಿದೆ.
ಇಂತಹ ಶಿಬಿರಗಳು ಹೆಚ್ಚೆಚ್ಚು ಆಗಬೇಕು. ಅದಕ್ಕೆ ಸರ್ಕಾರದ ಮಟ್ಟದಲ್ಲಿ ನಾನು ಚರ್ಚೆ ಮಾಡಿ ೧೫ ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತೇನೆ. ಇದಕ್ಕೆ ಸಂಬAಧಪಟ್ಟ ಅಧಿಕಾರಗಳೊಂದಿಗೆ ಸಹ ಚರ್ಚೆ ಮಾಡಿ ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆ ಎಂದರು.
ನಮ್ಮ ಸುತ್ತಮುತ್ತ ಇಂತಹ ಚಟುವಟಿಕೆಗೆ ಪೂರಕವಾರ ಮನಸುಗಳು ಹಾಗೂ ಸಂಘ ಸಂಸ್ಥೆಗಳು ಇವೆ. ಇಲಾಖೆಯು ಅವರುಗಳ ಸಹಭಾಗಿತ್ವದೊಂದಿಗೆ ಶಿಬಿರಗಳನ್ನು ಮಾಡಬೇಕು. ಆಗ ಶಿಬಿರಗಳು ಇನ್ನಷ್ಟು ಯಶಸ್ವಿಯಾಗಿ ನಡೆಯುತ್ತದೆ ಎಂದು ಸಲಹೆ ನೀಡಿದರು.
ಆಹಾರ ಸಲಹಾ ತಜ್ಞರಾದ ಹೆಚ್.ನೇತ್ರಾವತಿ ಮಾತನಾಡಿ, ಮಕ್ಕಳಿಗೆ ಆರೋಗ್ಯಕವಾರದ ಆಹಾರವನ್ನು ನೀಡಬೇಕು. ಹೊರಗಡೆ ಕರೆದ ಅಡುಗೆ ಎಣ್ಣೆಯ ಪದಾರ್ಥಗಳು ಹಾಗೂ ಪ್ಲಾಸ್ಟಿಕ್‌ನಲ್ಲಿ ಇಟ್ಟಿರುವ ಆಹಾರವನ್ನು ಸೇವಿಸುವುದು ಕಡಿಮೆ ಮಾಡಬೇಕು. ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತದೆ. ಮನೆಯಲ್ಲಾಗಲಿ ಅಥವಾ ಹೊರಗಡೆಯಾಗಲಿ ಒಂದು ಬಾರಿ ಬಳಸಿದ ಎಣ್ಣೆಯನ್ನು ಹೆಚ್ಚು ಬಾರಿ ಅಡುಗೆಗೆ ಬಳಸಬಾರದು. ಹಾಗೂ ಆ ರೀತಿ ಬಳಸಿದ ಎಣ್ಣೆಯ ಪದಾರ್ಥಗಳನ್ನು ತಿನ್ನಬಾರದು. ಇದರಿಂದ ಹೃದಯ ಸಂಬAಧಿತ ಕಾಯಿಲೆಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮನೆಯಲ್ಲಿ ಮಕ್ಕಳನ್ನು ಅಡುಗೆಯ ಸಹಾಯಕ್ಕೆ ಬಳಸಿಕೊಳ್ಳಬೇಕು. ಅದರಿಂದ ಮಕ್ಕಳಿಗೆ ಆರೋಗ್ಯಕರ ಊಟದ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳು ಆರೋಗ್ಯಕರವಾದ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಬೇಕು. ಇದರಿಂದ ರಕ್ತದ ಒತ್ತಡ, ಹೃದಯ ಸಂಬAಧಿತ ಕಾಯಿಲೆ , ಮೂಳೆಗಳಿಗೆ, ಕಣ್ಣುಗಳಿಗೆ, ಜೀರ್ಣ ಕ್ರಿಯೆಗೆ ಹಾಗೂ ಬುದ್ದಿ ಚುರುಕುತನಕ್ಕೆ ಸಹಾಯವಾಗುತ್ತದೆ ಎಂದರು.
S. N. Channabasappa ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್. ಕೃಷ್ಣಪ್ಪ ಮಾತನಾಡಿ, ಮಕ್ಕಳ ಮನಸ್ಸು ಜಡವಾಗಿ ಇರಲು ಬಿಡಬಾರದು ಅವರನ್ನು ಸದಾ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲರನ್ನಾಗಿ ಮಾಡಬೇಕು. ಕಲೆ, ಸಾಹಿತ್ಯ, ನಾಟಕಗಳಿಂದ ಮಕ್ಕಳ ವ್ಯಕ್ತಿ ವಿಕಸನವಾಗುತ್ತದೆ. ಆ ದಿಸೆಯಿಂದಲೆ ಬೇಸಿಗೆ ಶಿಬಿರ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚಿಗೆ ಮಕ್ಕಳು ಮೊಬೈಲ್ ಅನ್ನು ಅವಲಂಬಿಸಿದ್ದಾರೆ. ಊಟ ಮಾಡಲು, ಹೋಮ್ ವರ್ಕ್ ಮಾಡಲು ಮೊಬೈಲ್ ಇಲ್ಲದೆ ಆಗದು ಎನ್ನುವು ಸ್ಥಿತಿಗೆ ತಲುಪಿದ್ದಾರೆ. ಇಂತಹ ವಾತಾವರಣದಿಂದ ಪೋಷಕರು ಮಕ್ಕಳನ್ನು ದೂರ ಇಡಬೇಕು. ಇಲ್ಲದಿದ್ದರೆ ಮಕ್ಕಳಿಗೆ ಓದಿನಲ್ಲಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಒಂದು ಕಡೆ ಮನಸ್ಸನ್ನು ಕೇಂದ್ರಿಕರಿಸಲು ಆಗುವುದಿಲ್ಲ. ಇದರಿಂದ ದೇಹದಲ್ಲಿನ ಹಾರ್ಮೊನ್ ವ್ಯತ್ಯಾಸಕ್ಕೆ ಒಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲಿಂಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಅಧಿಕಾರಿ ಶಶಿರೇಖಾ, ಮುಖ್ಯ ಶಿಕ್ಷಕ ಹಾಲ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು, ಶಾಲೆ ಸಿಬ್ಬಂದಿಗಳು ಹಾಗೂ ಪೋಷಕರು ಭಾಗಿಯಾಗಿದ್ದರು.
Department of Collegiate Education ಪ್ರಥಮ ಪಿ.ಯು.ಸಿ. ದಾಖಲಾತಿಗೆ ಅರ್ಜಿ ಆಹ್ವಾನ; ಅವಧಿ ವಿಸ್ತರಣೆ
Department of Collegiate Education 2025-26 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜುಗಳಿಗೆ ಪ್ರಥಮ ಪಿ.ಯು.ಸಿ. ದಾಖಲಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 20ರವರೆಗೆ ವಿಸ್ತರಿಸಲಾಗಿದೆ.
2024-25 ನೇ ಸಾಲಿನಲ್ಲಿ ಉತ್ತೀರ್ಣರಾದ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಆಯಾ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ 02 ಭಾವಚಿತ್ರ, ಎಸ್.ಎಸ್.ಎಲ್.ಸಿ ಪ್ರಾವಿಷನಲ್ ಅಂಕಪಟ್ಟಿ, ಎಸ್‌ಎಟಿಎಸ್ ನಂಬರ್ ಆಧಾರ್ ಕಾರ್ಡ್ ನಕಲು ಪ್ರತಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಕಲು ಪ್ರತಿ, ಪೋಷಕರ ಮತ್ತು ಹಿಂದಿನ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ, ವಿಶೇಷ ಪ್ರಮಾಣ ಪತ್ರ (ಇದ್ದಲ್ಲಿ) ಇವುಗಳೊಂದಿಗೆ ಮೇ 20 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Department of Collegiate Education ಕಾಲೇಜುಗಳ ವಿವರ : ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಗಾಜನೂರು-56 ಶಿವಮೊಗ್ಗ ತಾಲ್ಲೂಕು ಮೊ.ಸಂ.9739977365 ಲಭ್ಯವಿರುವ ಕೋರ್ಸ್ಗಳು ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹೊಸೂರು-908- ಶಿಕಾರಿಪುರ ತಾಲ್ಲೂಕು ಮೊ. ಸಂ. 8971701958, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಅಟಲ್ ಬಿಹಾರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆವಿನಹಳ್ಳಿ-584 ಸಾಗರ ತಾಲ್ಲೂಕು ಮೊ.ಸಂ.9480767164/6363184683, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್ ಕೋರ್ಸ್ಗಳು ಲಭ್ಯವಿರುತ್ತವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
MESCOM ಮೇ 18 ರಂದು ವಿದ್ಯುತ್ ವ್ಯತ್ಯಯ
MESCOM ಶಿವಮೊಗ್ಗ, ಮೇ-16 ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಫೀಡರ್ ಎ.ಎಫ್-5,6,7 ಮತ್ತು 8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 18 ರಂದು ಬೆಳಗ್ಗೆ 09-00 ಗಂಟೆಯಿಂದ 06-00 ರವರೆಗೆ ಸಾಗರ ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ, ಇಂಡಸ್ಟ್ರೀಯಲ್ ಏರಿಯಾ, ಗೋಪಾಳ ಎ, ಬಿ, ಸಿ, ಡಿ, ಇ, ಎಫ್, ಬಡಾವಣೆ, ಪ್ರೆಸ್ ಕಾಲೋನಿ, ರಂಗನಾಥ ಬಡಾವಣೆ, ಆನೇ ವೃತ್ತ, ಅಲ್‌ಹರೀಮ್ ಲೇಔಟ್, ಮಹೇಶ್ ಪಿ.ಯು. ಕಾಲೇಜು, ಅಂಧರ ವಿಕಾಸ ಶಾಲೆ, ವಿನಾಯಕ ವೃತ್ತ, ಸವಿ ಬೇಕರಿ ಕೆಳಭಾಗದ ರಸ್ತೆ, ವೆಟರಿನರಿ ಕಾಲೇಜು ಮುಖ್ಯ ರಸ್ತೆ, ಇಂದಿರಾ ಗಾಂಧಿಬಡಾವಣೆ, ಜಯದೇವ ಬಡಾವಣೆ, ಶಿವಪ್ಪ MESCOM ನಾಯಕ ಬಡಾವಣೆ, ಪ್ರಿಯದರ್ಶಿನಿ ಲ್ಭೆ಼ಟ್, ಕೆ.ಎಸ್.ಆರ್.ಟಿ.ಸಿ ಲೇಔಟ್, ಕೆ.ಹೆಚ್.ಬಿ ಎ, ಬಿ, ಸಿ, ಡಿ, ಇ, ಎಫ್, ಜಿ ಬ್ಲಾಕ್, ಕಾಶೀಪುರ, ಲಕ್ಕಪ್ಪ ಲೇಔಟ್, ರೇಣುಕಾಂಬ ಬಡಾವಣೆ, ಕರಿಯಣ್ಣ ಬಿಲ್ಡಿಂಗ್, ಕೆಂಚಪ್ಪ ಲೇಔಟ್, ಕಲ್ಲಹಳ್ಳಿ, ಕುವೆಂಪು ಬಡಾವಣೆ, ತಿಮ್ಮಕ್ಕ ಲೇಔಟ್, ಹುಡ್ಕೋ ಕಾಲೋನಿ, ಲಕ್ಷ್ಮೀಪುರ ಬಡಾವಣೆ, ದಾಮೋದರ ಕಾಲೋನಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Department of Horticulture ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ
Department of Horticulture – Index ಶಿವಮೊಗ್ಗ, ಮೇ 16 ಶಿಕಾರಿಪುರ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆಯನ್ನು ಬೆಳೆಯಲು ಇಚ್ಛಿಸುವ ರೈತರಿಗೆ ಉಚಿತವಾಗಿ ತಾಳೆ ಸಸಿಗಳನ್ನು ವಿತರಿಸಿ ಮುಂದಿನ 3 ವರ್ಷಗಳವರೆಗೆ ನೆಟ್ಟ ಸಸಿಗಳ ನಿರ್ವಹಣೆಗಾಗಿ ಸಹಾಯಧವನ್ನು ನೀಡುತ್ತಿದ್ದು, ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ಅರ್ಜಿಯನ್ನು ಶಿಕಾರಿಪುರ ತಾಲೂಕು ತೋಟಗಾರಿಕೆ ಇಲಾಖೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಮೇ 31ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of Horticulture – Index ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ನಂ.: ಕಸಬಾ ಮತ್ತು ಉಡುಗಣಿ -9972777644, ಅಂಜನಾಪುರ-9902170900, ಹೊಸೂರು-7899942267, ತಾಳಗುಂದ-8217528884 ಗಳನ್ನು ಸಂಪರ್ಕಿಸುವುದು.
Rotary Club of Shimoga ಮೇ 17ಕ್ಕೆ ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಉಪನ್ಯಾಸ
Rotary Club of Shimoga ಶಿವಮೊಗ್ಗ ನಗರದ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಮೇ 17ರಂದು ಬೆಳಗ್ಗೆ 9.30ಕ್ಕೆ “ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ – ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿ ಸವಾಲುಗಳು ಮತ್ತು ಮುಂದಿನ ಹಾದಿ” ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಣಕಾಸು ಸೇವೆಗಳ ವಲಯದಲ್ಲಿ ಕೃತಕ ಬುದ್ಧಿಮತ್ತೆಗಳ ಅಳವಡಿಕೆ, ಕೃತಕ ಬುದ್ಧಿಮತ್ತೆಯ ಮೂಲಕ ಲೆಕ್ಕಪತ್ರಗಳ ಸೇವೆಯನ್ನು ವರ್ಧಿಸುವುದು, ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಗಾತ್ಮಕ ವಿಶ್ಲೇಷಣೆ, ಆಡಿಟಿಂಗ್ ಕಾರ್ಯವಿಧಾನದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ವಂಚನೆ ಪತ್ತೆ ಮತ್ತು ಅಸಂಗತತೆ ಗುರುತಿಸುವುದು, ಲೆಕ್ಕಪರಿಶೋಧಕರು, ಲೆಕ್ಕಪತ್ರ ಕಂಪನಿಗಳು ಮತ್ತು ಲೆಕ್ಕಪತ್ರ ನಿಯಂತ್ರಕರುಗಳ ಕಾರ್ಯವಿಧಾನದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳು, ಕಂಪನಿಗಳು, ವ್ಯಾಪಾರ ಮಾಲೀಕರು ಮತ್ತು ಗ್ರಾಹಕರು ತಮ್ಮ ಹಣಕಾಸು ಕಾರ್ಯಾಚರಣೆಗಳು , ವ್ಯವಹಾರ ನಡೆಸುವ ವಿಧಾನದಲ್ಲಿನ ನಾವೀನ್ಯತೆ, ಡಿಜಿಟಲ್ ಹಣದ ಆವಿಷ್ಕಾರ ದಿಂದ,ಹಣಕಾಸು ತಂತ್ರಜ್ಞಾನವು ಹೇಗೆ ಸ್ಫೋಟಕವಾಗಿ ಬೆಳೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ಬಗ್ಗೆ ಚರ್ಚಿಸಲಾಗುವುದು.
Rotary Club of Shimoga ಉದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಎಸ್‌ಐಆರ್‌ಸಿ ಮಾಜಿ ಚೇರ್ಮನ್ ಎಸ್.ರಮೇಶ್, ಐಸಿಎಂಎ ಮೈಸೂರು ಚೇರ್ಮನ್ ಆರ್.ಪುರುಷೋತ್ತಮ್, ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಅಧ್ಯಕ್ಷ ಎನ್.ಎಲ್.ಪ್ರಸಾದ್ ಪಾಲ್ಗೊಳ್ಳುವರು. ವಿ.ಗುರುಪ್ರಸಾದ್ ಹಾಗೂ ಡಾ. ಚಿದಂಬರ ಗಣಪಯ್ಯ ಅವರು ವಿಶೇಷ ಉಪನ್ಯಾಸ ನೀಡುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಉಪನ್ಯಾಸ ಕಾರ್ಯಕ್ರಮದ ಮಾಹಿತಿ ಹಾಗೂ ನೋಂದಣಿಗೆ ಮೊಬೈಲ್ ಸಂಖ್ಯೆ 7019663300 ಸಂಪರ್ಕಿಸಬಹುದಾಗಿದೆ.
