Rotary Club of Shimoga ಶಿವಮೊಗ್ಗ ನಗರದ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಮೇ 17ರಂದು ಬೆಳಗ್ಗೆ 9.30ಕ್ಕೆ “ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ – ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿ ಸವಾಲುಗಳು ಮತ್ತು ಮುಂದಿನ ಹಾದಿ” ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಣಕಾಸು ಸೇವೆಗಳ ವಲಯದಲ್ಲಿ ಕೃತಕ ಬುದ್ಧಿಮತ್ತೆಗಳ ಅಳವಡಿಕೆ, ಕೃತಕ ಬುದ್ಧಿಮತ್ತೆಯ ಮೂಲಕ ಲೆಕ್ಕಪತ್ರಗಳ ಸೇವೆಯನ್ನು ವರ್ಧಿಸುವುದು, ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಗಾತ್ಮಕ ವಿಶ್ಲೇಷಣೆ, ಆಡಿಟಿಂಗ್ ಕಾರ್ಯವಿಧಾನದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ವಂಚನೆ ಪತ್ತೆ ಮತ್ತು ಅಸಂಗತತೆ ಗುರುತಿಸುವುದು, ಲೆಕ್ಕಪರಿಶೋಧಕರು, ಲೆಕ್ಕಪತ್ರ ಕಂಪನಿಗಳು ಮತ್ತು ಲೆಕ್ಕಪತ್ರ ನಿಯಂತ್ರಕರುಗಳ ಕಾರ್ಯವಿಧಾನದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳು, ಕಂಪನಿಗಳು, ವ್ಯಾಪಾರ ಮಾಲೀಕರು ಮತ್ತು ಗ್ರಾಹಕರು ತಮ್ಮ ಹಣಕಾಸು ಕಾರ್ಯಾಚರಣೆಗಳು , ವ್ಯವಹಾರ ನಡೆಸುವ ವಿಧಾನದಲ್ಲಿನ ನಾವೀನ್ಯತೆ, ಡಿಜಿಟಲ್ ಹಣದ ಆವಿಷ್ಕಾರ ದಿಂದ,ಹಣಕಾಸು ತಂತ್ರಜ್ಞಾನವು ಹೇಗೆ ಸ್ಫೋಟಕವಾಗಿ ಬೆಳೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ಬಗ್ಗೆ ಚರ್ಚಿಸಲಾಗುವುದು.
Rotary Club of Shimoga ಉದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಎಸ್‌ಐಆರ್‌ಸಿ ಮಾಜಿ ಚೇರ್ಮನ್ ಎಸ್.ರಮೇಶ್, ಐಸಿಎಂಎ ಮೈಸೂರು ಚೇರ್ಮನ್ ಆರ್.ಪುರುಷೋತ್ತಮ್, ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಅಧ್ಯಕ್ಷ ಎನ್.ಎಲ್.ಪ್ರಸಾದ್ ಪಾಲ್ಗೊಳ್ಳುವರು. ವಿ.ಗುರುಪ್ರಸಾದ್ ಹಾಗೂ ಡಾ. ಚಿದಂಬರ ಗಣಪಯ್ಯ ಅವರು ವಿಶೇಷ ಉಪನ್ಯಾಸ ನೀಡುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಉಪನ್ಯಾಸ ಕಾರ್ಯಕ್ರಮದ ಮಾಹಿತಿ ಹಾಗೂ ನೋಂದಣಿಗೆ ಮೊಬೈಲ್ ಸಂಖ್ಯೆ 7019663300 ಸಂಪರ್ಕಿಸಬಹುದಾಗಿದೆ.
Rotary Club of Shimoga ಮೇ 17ಕ್ಕೆ ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಉಪನ್ಯಾಸ
Date: