K. Venkatesh ರಾಜ್ಯದಲ್ಲಿ ಪಶುಪಾಲನಾ ಇಲಾಖೆಯ ಶಿಥಿಲಗೊಂಡ ಕಟ್ಟಡಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಆದ್ಯತೆಯ ಮೇರೆಗೆ 200ಸ್ಥಳಗಳಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಕಳೆದ ಸಾಲಿನಲ್ಲಿ ಮಂಜೂರಾತಿ ನೀಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಹಾಗೂ ರೇಷ್ಮೇ ಇಲಾಖೆ ಸಚಿವ ಕೆ.ವೆಂಕಟೇಶ್‌ಅವರು ಹೇಳಿದರು.
ಅವರು ಇಂದು ಭದ್ರಾವತಿ ರಂಗಪ್ಪ ಸರ್ಕಲ್‌ಸಮೀಪದಲ್ಲಿ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿನಿಧಿ ಯೋಜನೆಯಡಿ 50ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ಭದ್ರಾವತಿಯ ಪಶುಪಾಲನಾ ಇಲಾಖೆಗೆ ಪಶುಗಳ ಚಿಕಿತ್ಸೆಗೆ ಪೂರಕವಾಗಿ ಅತ್ಯಾಧುನಿಕವಾದ ಪಾಲಿಕ್ಲಿನಿಕ್‌ವ್ಯವಸ್ಥೆಗೆ ಪೂರಕವಾದ ಪರಿಕರಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ನೂತನ ಕಟ್ಟಡ ನಿರ್ಮಾಣದ ನಂತರ ಅವುಗಳ ಸದ್ಭಳಕೆ ಆಗಲಿದೆ ಎಂದವರು ನುಡಿದರು.
ಪಶುಪಾಲನಾ ಇಲಾಖೆಯಲ್ಲಿ ನಿರೀಕ್ಷಿತ ಸಂಖ್ಯೆಯ ವೈದ್ಯಾಧಿಕಾರಿಗಳು, ಅಧಿಕಾರಿ-ಸಿಬ್ಬಂಧಿಗಳ ಕೊರತೆ ಇದೆ. ಮಾತ್ರವಲ್ಲ ಹೆಚ್ಚುತ್ತಿರುವ ಪಶುಗಳಿಗೆ ಪೂರಕವಾಗಿ ಆಸ್ಪತ್ರೆಗಳ ಸಂಖ್ಯೆಯೂ ಕಡಿಮೆ ಇದೆ. ಈ ಸಂಬಂಧ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು 200ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ಧಾರೆ. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಾಲಿಕ್ಲಿನಿಕ್‌ಗಳಿದ್ದು, ಜಾನುವಾರುಗಳ ಸಂಖ್ಯೆಗನುಗುಣವಾಗಿ ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿ ಪಶುಪಾಲನಾ ಚಟುವಟಿಕೆಗಳನ್ನು ಉತ್ತೇಜಿಸಲು ಇಲಾಖೆಯ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಅದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಸ್ಥಳೀಯ ಶಾಸಕರ ಕೋರಿಕೆಯಂತೆ ತಾಲೂಕಿನ ದೊಡ್ಡೇರಿ ಮತ್ತು ಕಲ್ಲಹಳ್ಳಿ ಗ್ರಾಮಗಳಿಗೂ ಪಶು ಆಸ್ಪತ್ರೆಗಳನ್ನು ನಿರ್ಮಿಸಲು ಅಧಿಕಾರಿಗಳಿಂದ ಜಾನುವಾರುಗಳ ಸಂಖ್ಯೆಯನ್ನು ಪಡೆದು, ಆದ್ಯತೆಯನುಸಾರ ಕ್ರಮವಹಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಆಕಸ್ಮಿಕ ಮರಣ ಹೊಂದಿದ ಜಾನುವಾರುಗಳಿಗೆ ಕಾಮದೇನು ಆಪತ್ತು ನಿಧಿ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಧನವನ್ನು 15,000/-ರೂ.ಗಳಿಗೆ ಹೆಚ್ಚಿಸಲಾಗಿದೆ. ಮರಣ ಹೊಂದಿದ ಕುರಿಗಳಿಗೆ ನೀಡಲಾಗುತ್ತಿದ್ದ ಪರಿಹಾರಧನವನ್ನು 7500/-ರೂ.ಗಳಿಗೆ ಹೆಚ್ಚಿಸಲಾಗಿದೆ. ಹೈನೋದ್ಯಮಿಗಳಿಗೆ ಪ್ರತಿ ಲೀ.ಹಾಲಿಗೆ ನೀಡಲಾಗುತ್ತಿರುವ ಸಹಾಯಧನವನ್ನು 4/-ರೂ.ಗಳಿಗೆ ಹೆಚ್ಚಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕೇಂದ್ರ ಪುರಸ್ಕೃತ ಯೋಜನೆಯಡಿ ಹೈನೋದ್ಯಮವನ್ನು ಉತ್ತೇಜಿಸಲು ಶ್ರಮಿಸುತ್ತಿರುವ ಸಖಿಯರಿಗೆ ಸರ್ಕಾರವು ಪ್ರತಿ ಮಾಹೆ ನೀಡಲಾಗುತ್ತಿರುವ ಸಹಾಯಧನವನ್ನು 3500/- ರೂ.ಗಳಿಂದ 5,000/-ರೂ.ಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
K. Venkatesh ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಗೆ ಹಲವು ದಶಕಗಳ ಹಿಂದೆ ನಗರದ ಹೃದಯಭಾಗದಲ್ಲಿ ಭೂಮಿಯನ್ನು ದಾನವಾಗಿ ನೀಡಿದ ಭೂಪಾಳಂ ಕುಟುಂಬದ ಹಿರಿಯ ಸದಸ್ಯ ಭೂಪಾಳಂ ಶಿವಸ್ವಾಮಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಸಕ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ನಗರಸಭೆ ಅಧ್ಯಕ್ಷೆ ಶ್ರೀಮತಿ ಗೀತಾ ರಾಜ್‌ಕುಮಾರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಮಣಿಶೇಖರ್, ಪಿ.ಎಲ್.ಡಿ.ಬ್ಯಾಂಕ್‌ಅಧ್ಯಕ್ಷ ಬಿ.ಕೆ.ಶಿವಕುಮಾರ್, ಶಿಮುಲ್ ವ್ಯವಸ್ಥಾಪಕ ಶೇಖರ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಎ., ಮಂಜುನಾಥ ಪಾಳೇಗಾರ್, ಎಸ್.ಕುಮಾರ್, ಷಡಾಕ್ಷರಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಡಾ|| ಶಿವರಾಜ್‌ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ, ಪಶುವೈದ್ಯ ಡಾ.ರಾಜಶೇಖರ್‌ಡಿ.ಬಿ. ಅವರು ಸ್ವಾಗತಿಸಿ, ಡಾ|| ಮುರುಳೀಧರ್ ನಿರೂಪಿಸಿ ವಂದಿಸಿದರು.
K. Venkatesh ಭದ್ರಾವತಿ ಪಶು ಆಸ್ಪತ್ರೆಗೆ ಅತ್ಯಾಧುನಿಕ ಪಾಲಿಕ್ಲಿನಿಕ್ ಮಾದರಿ ಪೂರಕ ಪರಿಕರಗಳನ್ನ ಪೂರೈಸಲಾಗಿದೆ- ಸಚಿವ ಕೆ.ವೆಂಕಟೇಶ್
Gurudutt Hegde ಜಿಲ್ಲೆಯ ಎಲ್ಲಾ ರಕ್ತನಿಧಿ ಕೇಂದ್ರಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು- ಗುರುದತ್ತ ಹೆಗಡೆ
Gurudutt Hegde ಜಿಲ್ಲೆಯ ಎಲ್ಲ ರಕ್ತನಿಧಿ ಕೇಂದ್ರಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಹಾಗೂ ಲೈಂಗಿಕ ಕಾರ್ಯಕರ್ತ ಸಮುದಾಯದಲ್ಲಿ ಹೆಚ್‌ಐವಿ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಕ್ತ ಟಾಸ್ಕ್ಫೋರ್ಸ್ ಮೊದಲನೇ ತ್ರೈಮಾಸಿಕ ಸಮಿತಿ ಹಾಗೂ ಟಿಬಿ ಕೋಮಾರ್ಬಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಒಂದು ಸರ್ಕಾರಿ ರಕ್ತನಿಧಿ ಕೇಂದ್ರ ಸೇರಿದಂತೆ ಒಟ್ಟು 09 ರಕ್ತನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮೆಗ್ಗಾನ್ ಆಸ್ಪತ್ರೆಯಲ್ಲೇ ಪ್ರತಿ ಒಂದು ದಿನಕ್ಕೆ 60 ರಿಂದ 70 ಯೂನಿಟ್‌ಗಳಷ್ಟು ರಕ್ತದ ಬೇಕಾಗುತ್ತದೆ. ಪ್ಯಾಕಡ್ ರೆಡ್ ಸೆಲ್ಸ್, ಪ್ಲೇಟ್‌ಲೆಟ್ಸ್ಗೆ ಹೆಚ್ಚಿನ ಬೇಡಿಕೆ ಇರುತ್ತದೆ.
2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 24090 ಯುನಿಟ್ ರಕ್ತವನ್ನು ರಕ್ತನಿಧಿ ಕೇಂದ್ರಗಳಲ್ಲಿ, 14106 ಯುನಿಟ್ ರಕ್ತವನ್ನು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿಸಲಾಗಿದ್ದು ಒಟ್ಟು 422 ರಕ್ತದಾನ ಶಿಬಿರಗಳನ್ನು ಕೈಗೊಳ್ಳಲಾಗಿದೆ.
ರಕ್ತನಿಧಿ ಕೇಂದ್ರಗಳು ಸಮನ್ವಯದೊಂದಿಗೆ ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ರಕ್ತ ವ್ಯರ್ಥವಾಗದಂತೆ ಬಳಕೆ ಮಾಡಬೇಕು. ಖಾಸಗಿ ರಕ್ತ ಕೇಂದ್ರಗಳು ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ ರಕ್ತದಲ್ಲಿ ನಿಯಮಾನುಸಾರ ಪ್ರತಿ ತಿಂಗಳು ಜಿಲ್ಲಾ ಸರ್ಕಾರಿ ರಕ್ತ ಕೇಂದ್ರಕ್ಕೆ ಶೇ.25 ರಷ್ಟು ರಕ್ತವನ್ನು ನೀಡಬೇಕೆಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಜಿಲ್ಲಾಸ್ಪತ್ರೆಯ ಸರ್ಕಾರಿ ರಕ್ತನಿಧಿ ಕೇಂದ್ರದಿAದ 160 ಶಿಬಿರ ಸೇರಿದಂತೆ ಇತರೆ ರಕ್ತ ಕೇಂದ್ರಗಳು 422 ರಕ್ತದಾನ ಶಿಬಿರ ಏರ್ಪಡಿಸಿದ್ದು, ಇನ್ನೂ ಹೆಚ್ಚು ಶಿಬಿರಗಳನ್ನು ಕೈಗೊಂಡು ಹೆಚ್ಚಿನ ರಕ್ತದಾನವಾಗುವಂತೆ ಗಮನ ಹರಿಸಬೇಕು.
ರಕ್ತದ ಯೂನಿಟ್‌ಗಳಿಗೆ ನಿಗದಿಪಡಿಸಿರುವ ದರದ ಮಾಹಿತಿಯನ್ನು ಮತ್ತು ರಕ್ತದ ಯುನಿಟ್‌ಗಳ ಲಭ್ಯತೆಯ ಮಾಹಿತಿಯನ್ನು ರಕ್ತ ಕೇಂದ್ರದ ಮುಂಭಾಗ ಪ್ರಕಟಿಸಬೇಕು ಎಂದು ತಿಳಿಸಿದರು.
Gurudutt Hegde ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಬಿ.ಪಿ ಮಾತನಾಡಿ, ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ನಿಯಮಿತವಾಗಿ ಹೆಚ್‌ಐವಿ ಪರೀಕ್ಷೆಗಳನ್ನು ನಡೆಸಿ ಪಾಸಿಟಿವ್ ಬಂದಿರುವವರಿಗೆ ಎಆರ್‌ಟಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಹಾಗೂ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ.
2024-25 ರಲ್ಲಿ 249 ಜನ ಹೆಚ್‌ಐವಿ ಪಾಸಿಟಿವ್ ಇದ್ದು 245 ಜನರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮರಣ ಹೊಂದಿದ್ದಾರೆ. ಪ್ರಸವಪೂರ್ವ ಚಿಕಿತ್ಸೆ ಪಡೆಯುವ ಎಎನ್‌ಸಿ ವಿಭಾಗದಲ್ಲಿ 8 ಗರ್ಭಿಣಿಯರಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡುಬAದಿದ್ದು ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಕ್ಷಯ ಪತ್ತೆಗಾಗಿ ನಿಯಮಿತವಾಗಿ ಪರೀಕ್ಷೆಗಳು, ಸಕ್ರಿಯ ಪತ್ತೆ ಚಟುವಟಿಕೆಗಳು ನಡೆಯುತ್ತಿದ್ದು 2024-25 ರಲ್ಲಿ 611 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಏಡ್ಸ್ ರೋಗದ ಕುರಿತು ಮಹಿಳಾ, ಪುರುಷ, ಇತರೆ ಲೈಂಗಿಕ ಕಾರ್ಯಕರ್ತರಲ್ಲಿ ಇಲಾಖೆ ಸೇರಿದಂತೆ ಎನ್‌ಜಿಓ ಗಳು ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಿ ಹಾಗೂ ಅವರು ಇರುವ ಸ್ಥಳಕ್ಕೆ ತೆರಳಿ ಜಾಗೃತಿ ಮೂಡಿಸಬೇಕು. ಅರಿವು ಆಂದೋಲನವನ್ನು ಕೈಗೊಳ್ಳಬೇಕು. ಹಾಗೂ ಎಲ್ಲ ತಾಲ್ಲೂಕುಗಲ್ಲಿ ಕ್ಷಯ ರೋಗ ಪತ್ತೆ ಪರೀಕ್ಷೆಗಳನ್ನು ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಸೂಕ್ತ ಸ್ಥಳವಾವಕಾಶ, ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲೇ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕ್ರಮ ವಹಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಡಿಹೆಚ್‌ಓ ಮಾತನಾಡಿ, ರಕ್ತನಿಧಿ ಕೇಂದ್ರಗಳ ಪ್ರಗತಿ ವಿವರ ನೀಡಿದರು. ಆರ್‌ಸಿಹೆಚ್‌ಓ ಡಾ. ಮಲ್ಲಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರು, ಎನ್‌ಜಿಓ ಗಳ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
Gruhalakshmi Yojana ಐಟಿ- ಜಿಎಸ್ ಟಿ ಪೇಯಿ ಎಂದು ತೋರುತ್ತಿರುವ ಗೃಹಲಕ್ಷ್ಮಿ ಫಲಾನುಭವಿಗಳನ್ನ ಅರ್ಹತೆ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾನೆ- ಸಿ.ಎಸ್.ಚಂದ್ರಭೂಪಾಲ್
Gruhalakshmi Yojana ವಾಣಿಜ್ಯ ತೆರಿಗೆ ಇಲಾಖೆ ಐಟಿ-ಜಿಎಸ್‌ಟಿ ಪೇಯಿ ಎಂದು ತೋರುತ್ತಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಅರ್ಹತೆ ಪಟ್ಟಿಗೆ ಸೇರಿಸಿ ಗೃಹಲಕ್ಷ್ಮಿ ಯೋಜನೆ ಹಣ ಪಾವತಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಶನಿವಾರ ನಗರದ ಆಲ್ಕೊಳದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಐಟಿ-ಜಿಎಸ್‌ಟಿ ಪೇಯಿ ಎಂದು ತೋರಿಸುತ್ತಿದ್ದು, ಗೃಹಲಕ್ಷ್ಮಿ ಯೋಜನೆ ಧನಸಹಾಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಇವರನ್ನು ಫಲಾನುನುಭವಿಗಳ ಅರ್ಹತೆ ಪಟ್ಟಿಗೆ ಸೇರಿಸಿ ಗೃಹಲಕ್ಷ್ಮಿ ಯೋಜನೆ ಹಣ ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರುವ ಪ್ರಸ್ತಾವನೆ ಸಲ್ಲಿಸಲು ಗ್ಯಾರಂಟಿ ಪ್ರಾಧಿಕಾರ ಒಮ್ಮತದ ನಿರ್ಣಯ ಅಂಗೀಕರಿಸಿತು.
ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿಗಳ ಅನ್ವಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಇದರಲ್ಲಿ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವುದಿಲ್ಲ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯಡಿ ಐಟಿ-ಜಿಎಸ್‌ಟಿ ಎಂದು ತೋರುತ್ತಿರುವ ಫಲಾನುಭವಿಗಳಿಗೆ ಧನಸಹಾಯ ಪಾವತಿಸುವ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್-2025ರ ಮಾಹೆಯವರೆಗೆ 3,99,642 ಫಲಾನುಭವಿಗಳು ಯಶಸ್ವಿಯಾಗಿ ನೋಂದಣಿಯಾಗಿದ್ದು, ಈ ಪೈಕಿ 5618 ಫಲಾನುಭವಿಗಳು ಐಟಿ-ಜಿಎಸ್‌ಟಿ ಪಾವತಿದಾರರೆಂದು ಸ್ಟೇಟಸ್ ತೋರಿಸುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿ.ಎಸ್.ಟಿ. ಪೇಯಿ ಫಲಾನುಭವಿಗಳ ದತ್ತಾಂಶದ ಪರಿಶೀಲನೆಯ ಮಾಹಿತಿ ಪ್ರಕಾರ ಫಲಾನುಭವಿಗಳು ಸಣ್ಣ- ಪುಟ್ಟ ವ್ಯಾಪಾರ, ಬಂಗಾರ ಆಧಾರದ ಮೇಲೆ ಹಾಗೂ ಬ್ಯಾಂಕ್‌ಗಳಲ್ಲಿ ಅವರ ಕಷ್ಟಕ್ಕಾಗಿ ಸಣ್ಣ ಮೊತ್ತದ ಸಾಲ ಪಡೆದವರಾಗಿದ್ದಾರೆ. ಆದ್ದರಿಂದ ಇಂತಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಯಾಗಬೇಕಾದದ್ದು ನ್ಯಾಯ ಸಮ್ಮತವಾಗಿದೆ ಎಂದು ಹೇಳಿದರು.
Gruhalakshmi Yojana ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ. 2 ಸಾವಿರ ನೀಡುತ್ತಿದೆ. ಆದ್ದರಿಂದ ಐಟಿ- ಜಿಎಸ್‌ಟಿ ಪೇಯಿ ಎಂದು ತೋರಿಸುತ್ತಿರುವ ಫಲಾನುಭವಿಗಳಿಗೆ ಧನ ಸಹಾಯ ಪಾವತಿಯಾಗುವ ಕುರಿತು ಪರಿಶೀಲಿಸಿ ಸರ್ಕಾರದ ಹಂತದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ ಎಂದ ಅವರು ಈಗಾಗಲೇ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿಗೆ ಗೃಹಲಕ್ಷ್ಮಿ ಯೋಜನೆ ಹಣವು ಸರ್ಕಾರದಿಂದ ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಸಿಡಿಪಿಒ ಗಂಗೂಬಾಯಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
K. Venkatesh ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ₹22.44 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಭೆ ನಡೆಸಿ ಮುಂದಿನ ಕ್ರಮ- ಸಚಿವ ಕೆ.ವೆಂಕಟೇಶ್
K. Venkatesh ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭಾರತೀಯ ಪಶು ವೈದ್ಯಕೀಯ ಪರಿಷತ್‌ನಿಂದ ಮಾನ್ಯತೆಯ ನವೀಕರಣ ಪಡೆಯುವ ಸಲುವಾಗಿ ರೂ.22.44 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದು ಈ ಕುರಿತು ಸರ್ಕಾರದೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.
ಶನಿವಾರ ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ನಂತರ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯವು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನ ಒಂದು ಅಂಗ ಸಂಸ್ಥೆಯಾಗಿದೆ. 173 ಎಕರೆ ವಿಸ್ತೀರ್ಣ ಜಮೀನಿನಲ್ಲಿದ್ದು ಸುಸಜ್ಜಿತವಾದ ಕಟ್ಟಡಗಳಿವೆ. ಸುಂದರ ಆವರಣವನ್ನು ಹೊಂದಿದೆ.
ಸಾಕಷ್ಟು ಮೂಲಸೌಕರ್ಯಗಳಿರುವ ಈ ಕಾಲೇಜಿಗೆ ಎಂಎಸ್‌ವಿಇ-2016(ಮಿನಿಮಮ್ ಸ್ಟಾö್ಯಂಡರ್ಡ್ಸ್ ಆಫ್ ವೆಟೆರ್ನರಿ ಎಜುಕೇಷನ್) ರ ಪ್ರಕಾರ ಭಾರತೀಯ ಪಶುವೈದ್ಯಕೀಯ ಪರಿಷತ್‌ನಿಂದ ಮಾನ್ಯತೆಯ ನವೀಕರಣ ಪಡೆಯುವ ಸಲುವಾಗಿ ರೂ.2244 ಲಕ್ಷದ ಕಾಮಗಾರಿಗಳು ಕೈಗೊಳ್ಳುವುದು ಅವಶ್ಯವಿದೆ ಎಂದು ವಿವಿ ಕುಲಪತಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು, ಸರ್ಕಾರದ ಕಾರ್ಯದರ್ಶಿಗಳು, ಡೀನ್‌ಗಳ ಸಮ್ಮುಖದಲ್ಲಿ ಒಂದು ಸಭೆ ನಡೆಸಲು ಶೀಘ್ರದಲ್ಲೇ ದಿನಾಂಕ ನಿಗದಿಗೊಳಿಸುತ್ತೇನೆ ಎಂದರು.
ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ ಸಿ ವೀರಣ್ಣ ಮಾತನಾಡಿ, ಇತ್ತೀಚೆಗೆ ಐಸಿಎಆರ್ ಅಕ್ರಿಡಿಟೇಷನ್ ಸಮಿತಿ ತಂಡದವರು ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ರಾಜ್ಯದ ಎರಡನೇ ಅತ್ಯುತ್ತಮ ಕಾಲೇಜು ಎಂದು ಗುರುತಿಸಿರುತ್ತಾರೆ. ಮತ್ತು ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಕಾಲೇಜನ್ನು ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಸಬಹುದೆಂದು ಸಲಹೆ ನೀಡಿರುತ್ತಾರೆಂದು ತಿಳಿಸಿದರು.
ಆವರಣದಲ್ಲಿ ಅಪೂರ್ಣವಾಗಿರುವ ಕಟ್ಟಡಗಳು ಹಳೆಯದ್ದಾಗಿದ್ದು, ತುರ್ತಾಗಿ ಕಾಮಗಾರಿ ಕೈಗೊಂಡು ಈ ಕಟ್ಟಡಗಳನ್ನು ಪೂರ್ಣಗೊಳಿಸಬೇಕಿದ್ದು ಶೀಘ್ರವಾಗಿ ಹಣ ಬಿಡುಗಡೆ ಮಾಡಿಬೇಕೆಂದು ಮನವಿ ಮಾಡಿದರು.
ಈ ಮಹಾವಿದ್ಯಾಲಯದ ಆವರಣದ ಒಳಗೆ 2500 ಮೀಟರ್ ಆಂತರಿಕ ರಸ್ತೆ ಆಗಬೇಕಿದ್ದು, ರೈತರು ಮತ್ತು ಜಾನುವಾರುಗಳು ಓಡಾಡುವುದರಿಂದ ಈ ರಸ್ತೆ ಅಗತ್ಯವಾಗಿ ಬೇಕಾಗಿದೆ ಎಂದರು.
K. Venkatesh ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ, ರಾಷ್ಟç ಮಟ್ಟದಲ್ಲಿ ರೈತರ ಹಾಗೂ ಜಾನುವಾರುಗಳ ಸೇವೆ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವಿಶೇಷ ಸಂಶೋಧನೆಗಳು ಇನ್ನಿತರೆ ಸೇವೆ ಚೆನ್ನಾಗಿದ್ದು, ಪ್ರಯೋಗಾಲಯದ ಪರಿಕರಗಳನ್ನು ಅಪ್‌ಗ್ರೇಡ್ ಮಾಡಬೇಕಿದ್ದು ಇದಕ್ಕೆ ಸುಮಾರು ರೂ.25 ಕೋಟಿ ಹಣದ ಅವಶ್ಯವಿದೆ ಎಂದು ತಿಳಿಸಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಾಲೇಜಿನ ಮೂಲಭೂತ ಸೌಕರ್ಯಗಳು ಮತ್ತು ಇತರೆ ಕಾಮಗಾರಿಗಳ ಕುರಿತು ಸಚಿವರು ವೈಯಕ್ತಿಕ ಆಸಕ್ತಿ ತೆಗೆದುಕೊಂಡು ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಸಚಿವರು, ರೂ.22.44 ಕೋಟಿ ಕಾಮಗಾರಿಯ ಪ್ರಸ್ತಾವನೆ, ರಸ್ತೆಗಳು ಹಾಗೂ ಲ್ಯಾಬ್ ಅಪ್‌ಗ್ರೇಡ್ ಇತರೆ ವಿಚಾರಗಳ ಕುರಿತು ಸರ್ಕಾರದ ಹಂತದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನಕುಮಾರ್, ಇತರೆ ಮುಖಂಡರು, ಕಾಲೇಜಿನ ಡೀನ್ ಪ್ರಕಾಶ್ ಎನ್, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.
Karnataka Building And Other Construction Workers Welfare Board ಕಟ್ಟಡ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ-ಎಂ.ಪಿ.ವೇಣುಗೋಪಾಲ್
Karnataka Building And Other Construction Workers Welfare Board ಜಿಲ್ಲಾ ಕಾರ್ಮಿಕ ಇಲಾಖೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕೆಲಸದ ಕೌಶಲ್ಯವನ್ನು ಬಲವರ್ಧನೆಗೊಳಿಸಲು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿದೆ.
Karnataka Building And Other Construction Workers Welfare Board ಆಸಕ್ತ ಶಿವಮೊಗ್ಗ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಣಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಮತ್ತು ಒಂದು ಪಾಸ್‌ಪೋರ್ಟ್ ಭಾವಚಿತ್ರದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ತರಬೇತಿಯನ್ನು ಪಡೆದ ಕಾರ್ಮಿಕರಿಗೆ ಪ್ರಮಾಣ ಪತ್ರ ಮತ್ತು ಆರ್.ಪಿ.ಎಲ್ ಕಿಟ್‌ಗಳನ್ನು ವಿತರಿಸಲಾಗುವುದು.
General Cyber Security Advisories ಕೆನರಾ ಬ್ಯಾಂಕ್ ನಲ್ಲಿಕ್ರೆಡಿಟ್ ಕಾರ್ಡ್ ಸೇವಾ ನ್ಯೂನತೆ. ಗ್ರಾಹಕರ ಪರ ತೀರ್ಪು ನೀಡಿದ ಆಯೋಗ
General Cyber Security Advisories ಶಿವಮೊಗ್ಗದ ವಿಷ್ಣುಮೂರ್ತಿ ಕೇಕುಡ ಬಿನ್ ಶ್ರೀನಿವಾಸ ಕೇಕುಡ ಎಂಬುವವರು ಮ್ಯಾನೇಜರ್, ಕೆನರಾ ಬ್ಯಾಂಕ್, ಶಿವಮೂರ್ತಿ ಸರ್ಕಲ್, ಶಿವಮೊಗ್ಗ ಹಾಗೂ ಮ್ಯಾನೇಜರ್, ಕೆನರಾ ಬ್ಯಾಂಕ್, ಕಾನ್‌ಕಾರ್ಡ್ ಡಿವಿಷನ್, ಬೆಂಗಳೂರು ಇವರುಗಳ ವಿರುದ್ದ ಕ್ರೆಡಿಟ್ ಕಾರ್ಡ್ ಸಂಬAಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೆನರಾ ಬ್ಯಾಂಕ್ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಏಪ್ರಿಲ್-2024 ರಂದು ತಮ್ಮ ಕೆನರಾ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿ ಒಟ್ಟು ರೂ. 1.29 ಲಕ್ಷ ಕಡಿತಗೊಂಡಿದ್ದು, ಈ ಬಗ್ಗೆ ಬ್ಯಾಂಕ್‌ಗೆ ಸರಿಪಡಿಸುವಂತೆ ಹಲವಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದೇ ತಮ್ಮ ಎಸ್.ಬಿ.ಖಾತೆಗೆ ಮೊತ್ತವನ್ನು ಮರುಜಮೆ ಮಾಡಿಲ್ಲವೆಂದು ಆಯೋಗಕ್ಕೆ ದೂರು ನೀಡಿರುತ್ತಾರೆ.
ಆಯೋಗವು ದೂರನ್ನು ಪರಿಶೀಲಿಸಿ ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ದೂರುದಾರರೇ ತಮ್ಮ ಓ.ಟಿ.ಪಿ ಅಥವಾ ಲಿಂಕ್‌ನ್ನು ಶೇರ್ ಮಾಡಿರುವುದರಿಂದ ಈ ವ್ಯವಹಾರ ನಡೆದಿದೆ ವಿನಃ ತಮ್ಮಿಂದ ಯಾವುದೇ ಸೇವಾ ನ್ಯೂನತೆವಾಗಿಲ್ಲವೆಂದು ತಕರಾರು ಸಲ್ಲಿಸಿರುತ್ತಾರೆ.
General Cyber Security Advisories ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಸಾಕ್ಷಿ, ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿರುವ ಬಗ್ಗೆ ಸರಿಯಾದ ಸಮಯದಲ್ಲಿ ತಿಳಿಸಿದ್ದರೂ ಎದುರುದಾರರು ಕ್ರಮ ಕೈಗೊಳ್ಳದೇ ಇರುವುದು ಮತ್ತು ಓ.ಟಿ.ಪಿ/ಲಿಂಕ್ ಷೇರ್ ಮಾಡಿಕೊಂಡಿರುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿರುವುದಿಲ್ಲ. ಆದ್ದರಿಂದ ಎದುರುದಾರರು ಆರ್.ಬಿ.ಐ ಗೈಡ್‌ಲೈನ್ಸ್ ಆಧಾರದ ಮೇಲೆ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ಈ ಆದೇಶದ 45 ದಿನಗಳೊಳಗೆ ರೂ. 1,33,39/- ಗಳನ್ನು ವಾರ್ಷಿಕ ಶೇ.9% ಬಡ್ಡಿಯೊಂದಿಗೆ ದಿ: 14/06/2024 ರಿಂದ ಪೂರ ಹಣ ನೀಡುವವರೆಗೂ, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12% ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.25,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದಲ್ಲಿ ಈ ಮೊತ್ತಗಳ ಮೇಲೆ ವಾರ್ಷಿಕ ಶೇ.10% ಬಡ್ಡಿಯನ್ನು ಈ ಆದೇಶವಾದ ದಿನಾಂಕದಿAದ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ತಿಳಿಸಿದ್ದಾರೆ
World Hypertension Day ರಕ್ತದೊತ್ತಡ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ದಿನಾಚರಣೆ ಉದ್ದೇಶ- ಡಾ.ತಿಮ್ಮಪ್ಪ
World Hypertension Day ಪ್ರಸ್ತುತದ ಒತ್ತಡದ ಜಗತ್ತಿನಲ್ಲಿ ರಕ್ತದೊತ್ತಡದ ಕುರಿತಾದ ಅರಿವು, ಪತ್ತೆ, ಇದರ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತಿದ್ದು, ನಾವೆಲ್ಲ ಈ ಕುರಿತು ಜಾಗೃತರಾಗಿ ಉತ್ತಮ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ನರ್ಸಿಂಗ್ ಕಾಲೇಜ್ ಸಿಮ್ಸ್ ಶಿವಮೊಗ್ಗ, ವಾರ್ತಾ ಮತ್ತು ಸಾರ್ವಜನಿಕ ಸÀಂಪರ್ಕ ಇಲಾಖೆ ಶಿವಮೊಗ್ಗ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಿದ್ದ “ವಿಶ್ವ ಅಧಿಕ ರಕ್ತದೊತ್ತಡ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ನಮ್ಮ ಪೂರ್ವಜರು ಹೇಗೆ ಬದುಕಬೇಕೆಂಬ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಹಾಗೂ ಜಪಾನ್‌ನ ಇಕಿಗಾಯ್ ಪುಸ್ತಕದಲ್ಲಿ ಪ್ರಪಂಚಕ್ಕೆ ಏನು ಬೇಕಿದೆ. ಅದಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಇವೆಲ್ಲವನ್ನು ತಿಳಿದು ಜೀವನ ನಡೆಸಿದರೆ ಮನುಷ್ಯ ತನ್ನ ದೇಹದಲ್ಲಾಗುವ ರಕ್ತದ ಒತ್ತಡ ನಿಯಂತ್ರಣ ಮಾಡಬಹುದು ಎನ್ನಲಾಗಿದೆ. ಅದರಂತೆ ಮನುಷ್ಯ ಬದುಕಿದರೆ ಆರೋಗ್ಯಕವಾಗಿಬಹುದು ಎಂದು ತಿಳಿಸಿದರು.
ಇಕಿಗಾಯ್ ಪುಸ್ತಕದ ಪ್ರಕಾರ ಅಲ್ಲಿನ ಜನರು ನೂರಕ್ಕೂ ಅಧಿಕ ವರ್ಷ ಬದುಕುತ್ತಾರೆ. ಇದಕ್ಕೆ ಕಾರಣ ಅವರ ಜೀವನ ಶೈಲಿ ಉತ್ತಮವಾಗಿದ್ದು, ಅಲ್ಲಿನ ಜನರು ಹೆಚ್ಚು ಉಪ್ಪನ್ನು ಸೇವಿಸುವುದಿಲ್ಲ. ಆಹಾರದಲ್ಲಿ ಶೇಕಡ 5 ರಷ್ಟು ಮಾತ್ರ ಉಪ್ಪನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತಿದ್ದಾರೆ.
World Hypertension Day ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾಗಳಾದ ಡಾ. ನಟರಾಜ್ ಕೆ.ಎಸ್ ಮಾತನಾಡಿ, ವ್ಯಾಯಾಮ, ಆಹಾರ ಹಾಗೂ ಉತ್ತಮ ಜೀವನಶೈಲಿ, ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವುದರಿಂದ ರಕ್ತದೊತ್ತಡವನ್ನು ನಿವಾರಣೆ ಮಾಡಬಹುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ ನಾಯ್ಕ ಮಾತನಾಡಿ, ಅಧಿಕ ರಕ್ತದೊತ್ತಡ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸುವುದು ಈ ದಿನಾಚರಣೆ ಉದ್ದೇಶವಾಗಿದ್ದು ರಕ್ತದೊತ್ತಡವನ್ನು ಯಾರೂ ಕೂಡ ಕಡೆಗಣಿಸಬಾರದು. ಇದರಿಂದ ಹೃದಯ, ಮೆದುಳು, ಕಿಡ್ನಿ, ಕಣ್ಣು ಸೇರಿದಂತೆ ವಿವಿಧ ಭಾಗಗಳ ಮೇಲೆ ಒತ್ತಡ ಬಿದ್ದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ರಕ್ತದೊತ್ತಡ ಆಗದಂತೆ ಉತ್ತಮ ಆಹಾರ, ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಂಡು, ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ, ರಕ್ತದೊತ್ತಡವು ಯಾವುದೇ ಲಿಂಗಾಧಾರಿತ ಖಾಯಿಲೆಯಾಗಿರದೇ ಎಲ್ಲರಿಗೂ ಬರುವಂತAಹ ಸಾಮಾನ್ಯ ಖಾಯಿಲೆಯಾಗಿದೆ. ಆದ್ದರಿಂದ ಮನುಷ್ಯ ದೈನಂದಿನ ಒತ್ತಡವನ್ನು ನಿಭಾಯಿಸುವುದು ಬಹಳ ಮುಖ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ. ಹರ್ಷವರ್ಧನ್ ಮಾತಾನಾಡಿ, ರಕ್ತದೊತ್ತಡ ಖಾಯಿಲೆಯಲ್ಲಿ ಪ್ರೆöÊಮರಿ ಮತ್ತು ಸೆಕೆಂಡರಿ ಎರಡು ವಿಧಗಳಿವೆ. ಭಾರತದಲ್ಲಿ ಪ್ರೆöÊಮರಿ ರಕ್ತದೊತ್ತಡ ಹೆಚ್ಚು ಕಂಡು ಬರುತ್ತವೆ. ನಮ್ಮ ಜೀವನ ಶೈಲಿಯಿಂದ ಹಾಗೂ ತಂದೆ ತಾಯಿಗಳಿಂದ ಅನುವಂಶಿಕವಾಗಿಯೂ ರಕ್ತದೊತ್ತಡ ಕಂಡು ಬರಲಿದ್ದು ಸೂಕ್ತ ಚಿಕಿತ್ಸೆ ಮತ್ತು ಅಭ್ಯಾಸಗಳಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಡಾ.ಶಮಾ ಬೇಗಂ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ ನಾಯ್ಕ. ಎಲ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ಮೋಹನ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶುಶ್ರೂಷಕ ಅಧೀಕ್ಷರಾದ ಎಲಿಜಬೆತ್ ಬೈಲಾ, ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Mandya Ramesh ಮಂಡ್ಯ ರಮೇಶ್ ನೇತೃತ್ವದ ” ನಟನ” ಸಂಸ್ಥೆಯಲ್ಲಿ ರಂಗಭೂಮಿ ಡಿಪ್ಲೋಮಾ ಪಡೆಯಲು ಆಸಕ್ತರಿಗೆ ಅವಕಾಶ
Mandya Ramesh ಮೈಸೂರಿನ ಪ್ರತಿಷ್ಟಿತ ನಟನ ರಂಗಶಾಲೆಯ ರಂಗಭೂಮಿ ಡಿಪ್ಲೊಮಾ 2025-26 (ಒಂದು ವರ್ಷದ ಅಭಿನಯ ಮತ್ತು ರಂಗ
ತರಬೇತಿ) ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಮೇ ೨೫ರಂದು ನಡೆಯಲಿದೆ.
ಮಂಡ್ಯ ರಮೇಶ್ ನೇತೃತ್ವದ ನಿರಂತರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕ್ರಿಯಾಶೀಲವಾಗಿದ್ದು, ತನ್ನ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯೋಗಶೀಲವಾಗಿದೆ.
ಈ ರಂಗ ಚಟುವಟಿಕೆಯ ಭಾಗವಾಗಿ 16 ರಿಂದ 32ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ವಸತಿ ರಹಿತ ರಂಗಭೂಮಿ ಡಿಪ್ಲೊಮಾ ಕೋರ್ಸ್ನ್ನು ನಡೆಸುತ್ತಿದೆ.
ಪ್ರಸಕ್ತ ೨೦೨೫-೨೬ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ(ಆಡಿಷನ್)ಮೇ. 25, 2025 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ.
ಪ್ರತಿದಿನ ಸಂಜೆ ೫.೩೦ರಿಂದ ೯ರ ವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ.. ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದೆ.
ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದೇ ಸಂದರ್ಶನದಲ್ಲಿ ಭಾಗವಹಿ¸ಬಹುದು.
Mandya Ramesh ರಂಗಭೂಮಿಯನ್ನು ಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ ಅಥವಾ ಕಛೇರಿಯಲ್ಲಿ ನಿಗದಿತ
ಶುಲ್ಕ ಪಾವತಿಸಿ ಅರ್ಜಿ ಪಡೆದು ಅಂಚೆ ಮುಖಾಂತರ ಅಥವಾ ನೇರವಾಗಿ ತಲುಪಿಸತಕ್ಕದ್ದು. ಆಡಿಷನ್ ಮತ್ತು ಪ್ರವೇಶಾತಿ ಕುರಿತ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಳು ವೆಬ್‌ಸೈಟ್ ಅಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಬಹುದು.
DC Gurudatta Hegde ಪರಿಶಿಷ್ಠ ಜಾತಿ ಒಳ ಮೀಸಲಾತಿ ಸಮೀಕ್ಷಾರ್ಯ ಮೇ25 ರವರೆಗೆ ವಿಸ್ತರಣೆ- ಗುರುದತ್ತ ಹೆಗಡೆ
DC Gurudatta Hegde ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಲಾಗಿದ್ದು, ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿಯನ್ನು ವರ್ಗೀಕರಿಸಿ, ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶವನ್ನು ಸಂಗ್ರಹಿಸಲು ಕೈಗೊಳ್ಳಲಾದ ಸಮೀಕ್ಷೆಯ ಅವಧಿಯನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ತಿಳಿಸಿದ್ದಾರೆ.
ಮೇ. 05 ರಿಂದ 17ರವರೆಗೆ ನಡೆಯಲಿರುವ ಸಮೀಕ್ಷೆಯನ್ನು ಮೇ 25 ರವರೆಗೆ ಮುಂದುವರೆಸಲಾಗಿದ್ದು, ಈ ಸಮೀಕ್ಷಾ ಸಮಯದಲ್ಲಿ ಮನೆಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವುದರಿಂದ ಈ ದಿನಾಂಕಗಳAದು ಮನೆಯ ಹಿರಿಯ ಸದಸ್ಯರು ಹಾಜರಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸಮೀಕ್ಷಾದಾರರಿಗೆ ನೀಡಿ ಸಹಕರಿಸುವಂತೆ ಅವರು ತಿಳಿಸಿರುತ್ತಾರೆ.
DC Gurudatta Hegde ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವ ದಿನಾಂಕ ಮೇ 05 ರಿಂದ 25, ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ದಿನಾಂಕ ಮೇ 26 ರಿಂದ 28 ಹಾಗೂ ಸ್ವಯಂ ಘೋಷಣೆ (ಆನ್‌ಲೈನ್ ಮೂಲಕ) ಅವಧಿ ಮೇ 19 ರಿಂದ 28ರವರೆಗೆ ಎಂದು ಅವರು ತಿಳಿಸಿರುತ್ತಾರೆ.
Thirthahalli News ತೀರ್ಥಹಳ್ಳಿ ಆರಗದಲ್ಲಿ ದೊರೆತ ಮತ್ತಷ್ಟು ಶಿಲಾವಶೇಷಗಳು
Thirthahalli News ಶ್ರೀ ಪುರಂದರ ದಾಸರು ಹುಟ್ಟಿದ. ಊರು ಎನ್ನುವ ಖ್ಯಾತಿ ಪಡೆಯುತ್ತಿದೆ ತೀರ್ಥಹಳ್ಳಿಯ ಆರಗ.
ಆರಗ ಸಮೀಪದ ಶ್ರೀ ವೆಂಕಟರಮಣ ಗುಡ್ಡದ ತಪ್ಪಲಿನಲ್ಲಿ -ಗೋಪೀನಾಥ ಹಳ್ಳದ
ಬದಿಯಲ್ಲಿ ವಿಠಲನ ಗುಡಿ ಕುರುಹುಗಳಿವೆ. ಅಲ್ಲಿನ ವಸತಿಯಲ್ಲಿ ದೊರೆತಿರುವ ವಿಜಯನಗರ ಸಾಮ್ರಾಜ್ಯದ ಶಿಲಾವಶೇಷಗಳನ್ನ ಗ್ರಾಮಸ್ಥರು ಪ್ರದರ್ಶಿಸಿದರು.
Thirthahalli News ರಾಜ್ಯಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಮತ್ತು ಬರಹಾಗಾರರೂಆಗಿರುವ ಚನ್ನಗಿರಿ ವೆಂ. ತಿರುಮಲರಾವ್ ಈ ಸಂದರ್ಭದ ಚಿತ್ರಗಳನ್ನ ಕೆ.ಲೈವ್ ನ್ಯೂಸ್ ಗೆ ಕಳಿಸಿದ್ದಾರೆ
