World Hypertension Day ವಿಶ್ವ ರಕ್ತದೊತ್ತಡ ದಿನಾಚರಣೆ (World Hypertension Day) ಯ ವಿಶೇಷ ಸಂದರ್ಭದಲ್ಲಿ, ನಗರದ ಕುವೆಂಪು ರಸ್ತೆಯಲ್ಲಿರುವ ನಂಬಳ ಅಟ್ರಿಯಂ ಬಳಿಯ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಮೇ 18ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಿನಿಕ್‌ನ ಆವರಣದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಡಾ. ಗೋಪಾಲ್ ಡಿ ಮತ್ತು ಡಾ. ಕಿರಣ್ ವಿ.ಎಚ್. ಅವರು ಪಾಲ್ಗೊಳ್ಳುವವರಿಗೆ ಉಚಿತ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಇದರೊಂದಿಗೆ, ರಕ್ತದೊತ್ತಡ (ಬಿಪಿ), ಇಸಿಜಿ (ಹೃದಯದ ಪರೀಕ್ಷೆ), ಮತ್ತು ಜಿಆರ್‌ಬಿಎಸ್ – ರಕ್ತದಲ್ಲಿನ ಸಕ್ಕರೆ ಪರೀಕ್ಷೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುವುದು.
World Hypertension Day ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮುಖ್ಯ ಉದ್ದೇಶವು ರಕ್ತದೊತ್ತಡ (ಬಿಪಿ)ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ರೋಗ ಬರುವ ಮುಂಚೆಯೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಹೆಚ್ಚಿಸುವುದಾಗಿದೆ. ಶಿವಮೊಗ್ಗ ನಗರದ ನಾಗರಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕೆಂದು ಆಸ್ಪತ್ರೆಯು ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ: 9886413131