Thursday, June 18, 2026
Thursday, June 18, 2026

Hanuman Jayanti ಕೋಟೆ ಶ್ರೀಸೀತಾರಾಮಾಂಜನೇಯ ಮಂದಿರದಲ್ಲಿ ಜೂನ್ 1 ರಿಂದ ಹನುಮ ಜಯಂತಿ

Date:

Hanuman Jayanti ಶಿವಮೊಗ್ಗ, ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ, ಅನಂತ ರಾಮ ಅಯ್ಯಂಗಾರ್ ಸ್ಮಾರಕ ಟ್ರಸ್ಟ್ ಹಾಗೂ ದೇವಾಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜೂ. 1ರಿಂದ 3ರವರೆಗೆ ಹನುಮ ಜಯಂತಿ ಮಹೋತ್ಸವವು ಆಯೋಜನೆಗೊಂಡಿದೆ. ಇದರ ಅಂಗವಾಗಿ ಮೇ. 25ರಿಂದ 31ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪ್ರತಿದಿನ ಸಂಜೆ 7ಗಂಟೆಗೆ ದೇವಾಲಯದ ಆವರಣದಲ್ಲಿನ ಸಭಾ ಮಂಟಪದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದೆ. ಮೇ. 25ರಂದು ಬೆಂಗಳೂರಿನ ಗಾನಶ್ರೀ ಶ್ರೀನಿವಾಸುಲು ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,  26ರಂದು ಶ್ರೀವತ್ಸ ಮತ್ತು ಸಂಗಡಗರದಿಂದ ವೇಣು ನಾದ ಲಯ ವಿನೋದ, 27ರಂದು ಬೆಂಗಳೂರಿನ ರವಿ ಮುರೂರು ಹಾಗೂ ಶಿವಮೊಗ್ಗೆಯ ಸುರೇಖಾ ಹೆಗಡೆ ತಂಡದವರಿಂದ ಭಕ್ತಿ ಭಾವ ಸಂಧ್ಯಾ, 28ರಂದು,  ಮತ್ತೂರಿನ ವಿಧಾತ್ರಿ ಮತ್ತು ಅಚ್ಯುತ ಅವಧಾನಿಗಳಿಂದ ಗಮಕ ವಾಚನ ವ್ಯಾಖ್ಯಾನ, 29ರಂದು, ವಿದ್ವಾನ್ ಜಿ. ಎಸ್. ನಟೇಶ್‌ರವರಿಂದ ಮಂಕುತಿಮ್ಮನ ಕಗ್ಗ ಕುರಿತು ಉಪನ್ಯಾಸ, 30ರಂದು ಶ್ರೀ ಬ್ರಹ್ಮಣ್ಯ ಆಚಾರ್ಯರವರಿಂದ ಉಪನ್ಯಾಸ ಹಾಗೂ ಮೇ. 31ರಂದು ಬೆಂಗಳೂರಿನ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆಯವರಿಂದ ರಾಮನ ಭಕ್ತಿ, ಹನುಮನ ಶಕ್ತಿ ಕುರಿತು ಉಪನ್ಯಾಸ ನಡೆಯಲಿದೆ.


ಧಾರ್ಮಿಕ ಕಾರ್ಯಕ್ರಮಗಳು: 
ಹನುಮ ಜಯಂತಿ ಅಂಗವಾಗಿ, ಜೂ. 1ರಂದು ಸ್ವಾತಿ ನಕ್ಷತ್ರ ಬೆಳಿಗ್ಗೆ 8ರಿಂದ ಶ್ರೀ ಆಂಜನೇಯ, ಶ್ರೀ ನಾರಸಿಂಹರಿಗೆ ಅಭಿಷೇಕ, ನಂತರ ಸುದರ್ಶನ ಹೋಮ, ಸಂಜೆ ಶ್ರೀ ಲಕ್ಷ್ಮೀ ನರಸಿಂಹರ ಪಲ್ಲಕ್ಕಿ ಉತ್ಸವ ನಡೆಯಲಿದೆ.

Hanuman Jayanti ಜೂ. 2 ರಂದು ವಿಶಾಖ ನಕ್ಷತ್ರ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ನಂತರ ಶ್ರೀ ರಾಮತಾರಕ ಹೋಮ, ರಾತ್ರಿ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ಜೂ. 3ರಂದು ಅನುರಾಧ ನಕ್ಷತ್ರ ಶ್ರೀ ಹನುಮ ಜಯಂತಿ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ಶ್ರೀ ಮಾರುತಿ ಮೂಲ ಮಂತ್ರ ಹೋಮ, ಸಂಜೆ 7 ರಿಂದ ಶ್ರೀ ರಾಮ, ಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...