Madhu Bangarappa ಶಿವಮೊಗ್ಗ ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆ ಹಾಗೂ ಜನರ ಅನುಕೂಲಕ್ಕೆ ತಕ್ಕಂತೆ ಯಾವುದೇ ಅಡತಡೆಯಿಲ್ಲದೆ ನಿರಂತರ ವಿದ್ಯುತ್‌ಒದಗಿಸುವ ಸಂಕಲ್ಪ ನಮ್ಮದಾಗಿದ್ದು, ಅದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಕರ್ನಾಟಕ ವಿದ್ಯುತ್‌ಪ್ರಸರಣ ನಿಗಮವು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ 110/11ಕೆ.ವಿ. ವಿದ್ಯುತ್‌ಉಪಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ವಿದ್ಯುತ್‌ಉಪಕೇಂದ್ರದ ಆರಂಭದಿಂದಾಗಿ ವಿದ್ಯುತ್‌ವ್ಯತ್ಯಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ ಅಲ್ಲದೇ ಮಲೆನಾಡಿನ ಜನರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಂಜೂರಾಗಿರುವ ಎಂ.ಕೆ.ಬೈಲು ಮತ್ತು ಅಮೃತ ಗ್ರಾಮಗಳಲ್ಲಿ 110ಕೆ.ವಿ. ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಕಾರ್ಯ ಮುಂದಿನ ಕೆಲವೇ ದಿನಗಳಲ್ಲಿ ಆರಂಭಗೊಂಡು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅದರ ಆರಂಭಕ್ಕೆ ಇರುವ ಅಡತಡೆಗಳನ್ನು ಇತ್ಯರ್ಥಪಡಿಸಲು ವಿಶೇಷ ಗಮನಹರಿಸುವುದಾಗಿ ಅವರು ನುಡಿದರು.
ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ನೀಡಿದ್ದರಿಂದಾಗಿ ರಾಜ್ಯದಾದ್ಯಂತ ಇಂದು ಅನೇಕ ರೈತರು ಸಂತೋಷದ ದಿನಗಳನ್ನು ಕಳೆಯುವಂತಾಗಿದೆ. ಉಚಿತ ವಿದ್ಯುತ್‌ಯೋಜನೆ ಇಂದಿಗೂ ಮುಂದುವರೆದಿರುವುದು ದಿ.ಎಸ್.ಬಂಗಾರಪ್ಪ ಅವರ ದೂರದೃಷ್ಠಿಯ ದ್ಯೋತಕವಾಗಿದೆ ಎಂದ ಅವರು, ದೇಶದ ಅರ್ಥ ವ್ಯವಸ್ಥೆಯ ಮೇಲೆ ಇದು ಪೂರಕ ಪರಿಣಾಮ ಬೀರಿದೆ ಎಂದರು.
Madhu Bangarappa ಪ್ರಸ್ತುತ ಆಡಳಿತಾರೂಢ ಸರ್ಕಾರವು ಪ್ರತಿ ವರ್ಷ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ಒದಗಿಸಲು ವಾರ್ಷಿಕವಾಗಿ ರೂ.20,000ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ ಎಂದ ಅವರು, ಅತಿ ಹೆಚ್ಚು ವಿದ್ಯುತ್‌ಉತ್ಪಾದಿಸಿ ರಾಜ್ಯಕ್ಕೆ ವಿತರಿಸುವ ಜಿಲ್ಲೆ ನಮ್ಮದಾಗಿದ್ದು, ಇಲ್ಲಿನ ಜನರ ಅಗತ್ಯಗಳಿಗೆ ವಿದ್ಯುತ್‌ಒದಗಿಸುವುದು, ಅವರ ಹಿತಕಾಯುವುದು ಕೂಡ ಸರ್ಕಾರದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ನಿರಂತರ ವಿದ್ಯುತ್‌ಕಣ್ಣುಮುಚ್ಚಾಲೆಯಿಂದ ಈ ಭಾಗದ ಜನರ ವಿದ್ಯುತ್‌ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸವಾಲು ಎನಿಸಿತ್ತು. ವಾಸ್ತವ ಸಂಗತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮವಾಗಿ ಅತ್ಯಲ್ಪ ಅವಧಿಯಲ್ಲಿ ಸದರಿ ವಿದ್ಯುತ್‌ಉಪಕೇಂದ್ರವು ಸಿದ್ಧಗೊಂಡು ಲೋಕಾರ್ಪಣೆ ಮಾಡಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಈಗಾಗಲೇ ತಾಲೂಕಿನ ಮೂರು ಭಾಗಗಳಲ್ಲಿ 110/11 ಕೆ.ವಿ. ವಿದ್ಯುತ್‌ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಘಟಕವು ಸುಮಾರು 8ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿವಿಧ ಕಾರಣಗಳಿಂದ ಇನ್ನೂ ಕಾರ್ಯಾರಂಭಗೊಳ್ಳದಿರುವ ಎಂ.ಕೆ.ಬೈಲು ಮತ್ತು ಅಮೃತ ಗ್ರಾಮಗಳ ವಿದ್ಯುತ್‌ಉಪಕೇಂದ್ರಗಳನ್ನು ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡಿ, ಜನರಿಗೆ ವಿದ್ಯುತ್‌ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು. ನಿರಂತರ ವಿದ್ಯುತ್‌ಸರಬರಾಜಿನಿಂದಾಗಿ ರೈತರ ಪಂಪ್‌ಸೆಟ್‌ಗಳಿಗೆ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದರು.
Madhu Bangarappa ಎಲ್ಲರ ದೈನಂದಿನ ಬದುಕು ವಿದ್ಯುತ್‌ನ್ನೇ ಅವಲಂಬಿಸಿದೆ. ಆದ್ದರಿಂದ ಬೇಡಿಕೆಯೂ ಹೆಚ್ಚಾಗಿದೆ. ಇಂದಿನ ಜನರ ಅಗತ್ಯಗಳಿಗೆ ಪೂರಕವಾಗಿ ವಿದ್ಯುತ್‌ನ್ನು ಪೂರೈಸಬೇಕಾದ ಹೊಣೆಗಾರಿಕೆಯೂ ಜನಪ್ರತಿನಿಧಿಗಳ ಮೇಲಿದೆ ಎಂದ ಅವರು, ಎಲ್ಲರಿಗೂ ಎಲ್ಲಾ ಕಾಲಕ್ಕೂ ಗುಣಮಟ್ಟದ ವಿದ್ಯುತ್‌ಪೂರೈಕೆಯಾಗಬೇಕು. ವಿದ್ಯುತ್‌ಬಳಸುವ ಗ್ರಾಹಕರು ಮಿತವಾಗಿ ಬಳಸಬೇಕು. ನಿರಂತರವಾಗಿ ತಾಲೂಕಿನಲ್ಲಿ ವಿದ್ಯುತ್‌ಒದಗಿಸುವ ಸಂಬಂಧ ದುರಸ್ತಿಗೊಳ್ಳಬೇಕಾದ ಟಿ.ಸಿ.ಗಳನ್ನು ದುರಸ್ತಿ ಮಾಡಿಸಲಾಗಿದೆ. ಈ ಉಪಕೇಂದ್ರದ ಆರಂಭದಿಂದಾಗಿ ತೂದೂರು, ಮಂಡಗದ್ದೆ ಮತ್ತು ಬೆಜ್ಜವಳ್ಳಿಯ ಬಹುತೇಕ ಗ್ರಾಮಗಳಿಗೆ ನಿರಂತರ ವಿದ್ಯುತ್‌ದೊರೆಯಲಿದೆ ಎಂದರು.
ಸದಾ ಅಪಾಯದಲ್ಲಿಯೇ ಕಾರ್ಯನಿರ್ವಹಿಸುವ ನಿಗಮದ ಅಧಿಕಾರಿ-ಸಿಬ್ಬಂಧಿಗಳ ಸೇವೆ ಸ್ಮರಣೀಯವಾದುದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜನಿಯರ್‌ಸುರೇಶ್, ಗ್ರಾಮ ಪಂಚಾಯಿತಿಯ ಸುನಿತಾನಾಯಕ್‌ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
Madhu Bangarappa ನಿರಂತರ ವಿದ್ಯುತ್ ನಮ್ಮ ಸಂಕಲ್ಪ : ಎಸ್.ಮಧು ಬಂಗಾರಪ್ಪ
Fernando Bucheli ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಈಕ್ವೆಡಾರ್ ಗಣರಾಜ್ಯದ ರಾಯಭಾರಿ ಫರ್ನಾಂಡೊ ಬುಚೆಲಿ
Fernando Bucheli ಈಕ್ವೆಡಾರ್ ಗಣರಾಜ್ಯದ ರಾಯಭಾರಿ ಫರ್ನಾಂಡೊ ಬುಚೆಲಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ತಂತ್ರಜ್ಞಾನ ಮತ್ತು ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಯೋಜನೆಗ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಕಾರ್ಯದರ್ಶಿ ಸಲ್ಮಾ ಫಾಹಿಮ್ ಮತ್ತಿತರರು ಉಪಸ್ಥಿತರಿದ್ದರು.
Shivamogga Rotary Club ರೋಟರಿ ಮಲೆನಾಡು ಕ್ಲಬ್ಬಿನಲ್ಲಿ ʼಜಾಲಿ ಬಾರಿನ ಪೋಲಿ ಕವಿʼ
Shivamogga Rotary Club ʼಜಾಲಿ ಬಾರಿನಲ್ಲಿ ಕೂತ ಪೋಲಿ ಗೆಳೆಯರುʼ ಎಂಬ ಹಾಡು ಕೇಳದವರಿಲ್ಲ. ಕನ್ನಡ ಸಾಹಿತ್ಯದ ಮಡಿವಂತಿಕೆಗಳನ್ನು ಮೀರಿ ರಚಿಸಲಾದ ಈ ಹಾಡು ಸಾಹಿತ್ಯಪ್ರಿಯರ ವಿಶೇಷವಾಗಿ ಮದ್ಯಪ್ರಿಯರ ನೆಚ್ಚಿನ ಗೀತೆ. ಈ ಸುಪ್ರಸಿದ್ಧ ಕವಿತೆಯ ರಚನಕಾರ ಶ್ರೀ ಬಿ,ಆರ್. ಲಕ್ಷ್ಮಣ್ ರಾವ್ ರವರು ಶಿವಮೊಗ್ಗದ ರೋಟರಿ ಕ್ಲಬ್ ಮಲೆನಾಡುವಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೂಲತಃ ಚಿಕ್ಕಬಳ್ಳಾಪುರದವರಾದ ಲಕ್ಷ್ಮಣರಾಯರು ಶಿವಮೊಗ್ಗದ ಅಳಿಯ. ತಮ್ಮ ಶ್ರೀಮತಿಗಾಗಿ ರಚಿಸಿದ ʼಸುಬ್ಬಾಭಟ್ಟರ ಮಗಳೇ, ನಂದೆಲ್ಲಾ ನಿಂದೆ ತಗೊಳ್ಳೆʼ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಮತ್ತೊಂದು ಹಾಡು. ಭಾವಗೀತೆಗಳ ಕವಿ, ಪ್ರೇಮ ಕವಿ, ವಿಕಟ ಕವಿ ಹೀಗೆ ಹಲವಾರು ಬಿರುದುಗಳನ್ನು ಪಡೆದಿರುವ ಲಕ್ಷ್ಮಣರಾಯರ ಅತ್ಯಂತ ಶ್ರೇಷ್ಟ ರಚನೆ ʼಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನುʼ ಕೇಳುಗರ ಕಣ್ಣಂಚಲ್ಲಿ ನೀರು ತರಿಸುವಷ್ಟು ಭಾವನಾತ್ಮಕವಾದುದು. ಸಮಾರಂಭದಲ್ಲಿ ಅತ್ಯಂತ ವಿನೋದಭರಿತವಾಗಿ ಮಾತನಾಡಿದ ಲಕ್ಷ್ಮಣರಾಯರು ತಮ್ಮದೇ ರಚನೆಯ ಎರಡು ಹಾಡುಗಳನ್ನು ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿ ಸಭಿಕರ ಮನ ಗೆದ್ದರು. ಅವರ ಮಾತುಗಳು ಬಹುತೇಕ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವತ್ತ ಕೇಂದ್ರಿತವಾಗಿದ್ದವು. ಲಕ್ಷ್ಮಣರಾಯರ ಜೊತೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಎನ್.ಸುಂದರ್ ರಾಜ್ ರವರು ಮಾತನಾಡಿ ಲಕ್ಷ್ಮಣರಾಯರ ಯಶಸ್ಸಿನ ಬಹು ದೊಡ್ಡ ಪಾಲು ಅವರ ಅರ್ಧಾಂಗಿಯಾದ ಶಿವಮೊಗ್ಗದ ಹೆಣ್ಣು ಮಗಳಿಗೆ ಸಲ್ಲುತ್ತದೆ ಎಂದರು.
Shivamogga Rotary Club ಇದೇ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಕು. ಧನುಶ್ರೀ ರವರನ್ನು ಅಭಿನಂದಿಸಿ ಪ್ರೋತ್ಸಾಹ ಧನವನ್ನು ರೊ.ರಾಜು ವಿತರಿಸಿದರು. ಕ್ಲಬ್ ಸದಸ್ಯರಾದ ರೊ.ಡಾ.ಸಿದ್ದಲಿಂಗ ಮೂರ್ತಿ ಹಾಗೂ ರೊ.ಅನುಸೂಯ ರವರು ತಮ್ಮ ಜನ್ಮ ದಿನದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದವರಿಗೆಲ್ಲಾ ಔತಣಕೂಟವನ್ನು ಹಮ್ಮಿಕೊಂಡಿದ್ದರು.ಶಿವಮೊಗ್ಗದ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನ ಸದಸ್ಯರೂ ಆಗಿರುವ ರೊ.ಡಾ.ಸಿದ್ದಲಿಂಗ ಮೂರ್ತಿ ಪಾರ್ಕಿನ ಅಭಿವೃದ್ಧಿಗಾಗಿ ಕೈ ಜೋಡಿಸುವಂತೆ ಕ್ಲಬ್ಬಿನ ಸದಸ್ಯರಲ್ಲಿ ಹಾಗೂ ಸಭಿಕರಲ್ಲಿ ಮನವಿ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೊ.ಮುಸ್ತಾಕ್ ವಹಿಸಿದ್ದರು. ಕಾರ್ಯದರ್ಶಿ ರೊ.ಶ್ರೀಕಾಂತ್ ಎ.ವಿ., ಸ್ವಾಗತಿಸಿದರು. ರೊ,ಮಂಜುಳಾರಾಜು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಬ್ ಸದಸ್ಯರು ಹಾಗೂ ಅವರ ಕುಟುಂಬದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಭಾಂಗಣ ಭರ್ತಿಯಾಗಿತ್ತು
H. S. Venkateshamurthy ಸಾಹಿತಿ ಎಚ್.ಎಸ್ ವೆಂಕಟೇಶಮೂರ್ತಿ ನಿಧನ
H. S. Venkateshamurthy ಕನ್ನಡದ ಪ್ರಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು , ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಎಚ್ಎಸ್‌ವಿ ಯೆಂದೇ ಇವರು ಚಿರಪರಿಚಿತರಾಗಿದ್ದಾರೆ.
80 ವರ್ಷ ವಯಸ್ಸಿನ ಎಚ್‌ಎಸ್‌ವಿ ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.
H. S. Venkateshamurthy ಎಚ್ಎಸ್‌ವಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದಿದ್ದಾರೆ. ಅವರು ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. “ಕನ್ನಡದಲ್ಲಿ ಕಥನ ಕವನಗಳು” ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕವನ ಸಂಕಲನಗಳಲ್ಲಿ “ಪರಿವೃತ್ತ”, “ಬಾಗಿಲು ಬಡಿವ ಜನಗಳು”, “ಸೌಗಂಧಿಕ”, “ಮೂವತ್ತು ಮಳೆಗಾಲ” ಇತ್ಯಾದಿ ಸೇರಿವೆ. ಅವರು “ಹೆಜ್ಜೆಗಳು”, “ಒಂದು ಸೈನಿಕ ವೃತ್ತಾಂತ”, “ಅಗ್ನಿವರ್ಣ” ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಕನ್ನಡ ಸಾಹಿತ್ಯದ ಪ್ರೀ-ನವ್ಯ ಮತ್ತು ಪೋಸ್ಟ್-ನವ್ಯ ಚಲನಗಳನ್ನು ಸಂಯೋಜಿಸುತ್ತವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ಸಂದಿದೆ. ಸ್ವಂತ ಸಿನಿಮಾಗೆ ನಿರ್ದೇಶನವನ್ನೂ ಮಾಡಿದ ಅವರ ಅಪರಿಮಿತ ಸೃಜನಶೀಲತೆ, ಉತ್ಸಾಹಕ್ಕೆ ಮಿತಿಯಿರಲಿಲ್ಲ.
ಎಚ್ಎಸ್‌ವಿ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು “ಚಿನ್ನಾರಿ ಮುತ್ತ”, “ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ.
Food, Civil Supplies and Consumer Affairs Department ಒಳಮೀಸಲಾತಿ ಸಮೀಕ್ಷೆ ಪರಿಶೀಲಿಸಿದ ಸಚಿವ ಕೆ.ಹೆಚ್.ಮುನಿಯಪ್ಪ
Food, Civil Supplies and Consumer Affairs Department ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇಂದು ಬೆಂಗಳೂರು ನಗರದ ಗೆದ್ದಲಹಳ್ಳಿ, ಸಂಜಯನಗರ ಸೇರಿದಂತೆ ಇತರೆ ಸ್ಥಳಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕಾರ್ಯವಿಧಾನಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ನಾಗರೀಕರೊಂದಿಗೆ ಮಾತನಾಡಿತ ಸಚಿವರು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಸಂದರ್ಭದಲ್ಲಿ, ತಮ್ಮ ಮೂಲ ಜಾತಿಯನ್ನು ನೋಂದಣಿ ಮಾಡಲು ತಿಳಿಸಿದರು.
Food, Civil Supplies and Consumer Affairs Department ಈ ಸಂದರ್ಭದಲ್ಲಿ ಮುಖಂಡರಾದ ಪಾರ್ಥಸಾರಥಿ, ವೆಂಕಟೇಶ್, ರಮೇಶ್ ಜೊತೆಗಿದ್ದರು.
Veereshwara Punyashrama Samskruthi School ಪುಣ್ಯಾಶ್ರಮದಲ್ಲಿ ಯಶಸ್ವಿಯಾಗಿ ನಡೆದ ಸಂಗೀತ ಸೇವೆ
Veereshwara Punyashrama Samskruthi School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೦೭ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಆರ್.ಬಿ. ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸಿದ್ದರು. ಶರಾವತಿನಗರದ ಭಜನಾ ಮಂಡಳಿಯಿAದ ಭಜನಾ ಸೇವೆ ನಡೆಯಿತು. ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ಹಾಗೂ ಬಾಗಲಕೋಟೆಯ ಆಕಾಶವಾಣಿ ಮತ್ತು ದೂರದರ್ಶನ ಹಿಂದೂಸ್ಥಾನಿ ಸಂಗೀತ ಕಲಾವಿದ ಪಂ. ಅಶೋಕ ಹೆಚ್. ಬಡಿಗೇರ ಅವರಿಂದ ಸಂಗೀತ ಸೇವೆ ನಡೆಯಿತು.
Dinesh Gundu Rao ಶಿವಮೊಗ್ಗದ ಆಯುರ್ವೇದ ವೈದ್ಯಕೀಯ ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Dinesh Gundu Rao ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬೋಧಕ ಸಿಬ್ಬಂದಿ, ಆಸ್ಪತ್ರೆಗೆ ಸ್ಟಾಫ್‌ನರ್ಸ್ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಬುಧವಾರ ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ, ಇದೇ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಪ್ರಶಾಂತ ಕೆಕೊಡ ಮಾತನಾಡಿ, ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ ಬೋಧಕ ಸಿಬ್ಬಂದಿಗಳ ಕೊರತೆ ಇದೆ. ಆದ ಕಾರಣ ಬಿಎಎಂಎಸ್ ವಿದ್ಯಾರ್ಥಿಗಳ ಮಂಜೂರು ಸೀಟು 60 ಇದ್ದು, ದಾಖಲು ಸಂಖ್ಯೆ 33 ಕ್ಕೆ ಇಳಿಕೆಯಾಗಿದೆ.
Dinesh Gundu Rao ಆಯುರ್ವೇದ ಬೋಧನಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಕೊರತೆ ಸಹ ಇದ್ದು, ಇವರನ್ನು ನೇಮಕ ಮಾಡುವಂತೆ ಹಾಗೂ ಹೊಸದಾಗಿ ಪಿಜಿ ಕೋರ್ಸ್ ಆರಂಭಿಸಲು ಜಾಗದ ಅವಶ್ಯಕತೆ ಇದ್ದು, ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳು ಮಾತನಾಡಿ, ಬಾಲಕರ ಹಾಸ್ಟೆಲ್ ಇಲ್ಲ. ಆದ್ದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರದಲ್ಲಿ ಹಾಸ್ಟೆಲ್‌ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಹಾಗೂ ಕ್ಯಾಂಟಿನ್, ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಇಂಟರ್ನ್ಗಳಿಗೆ ಸ್ಟೆöÊಫಂಡ್ ಹೆಚ್ಚಳ ಮಾಡುಂತೆ ಕೋರಿದರು. ಮತ್ತು ವಿದ್ಯಾರ್ಥಿ ವೇತನ ಪಡೆಯುವಲ್ಲಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಮಸ್ಯೆ ಇದ್ದು ಸರಿಪಡಿಸುವಂತೆ ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ, ಬೋಧಕ ಸಿಬ್ಬಂದಿ, ಸ್ಟಾಫ್ ನರ್ಸ್ ನೇಮಕಾತಿ, ಪಿಜಿ ಕೋರ್ಸ್ ಆರಂಭಿಸಲು ಜಾಗ ನೀಡುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿಲ್ಲೆಯಲ್ಲಿ 35 ಆಯುಷ್ ಕೇಂದ್ರಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಈ ಕೇಂದ್ರಗಳಿಗೆ ಸಂಬAಧಿಸಿದAತೆ ಜಾರಿ ಮಾಡಲಾದ ಹೊಸ ಮಾರ್ಗಸೂಚಿಯನ್ನು ಆಯುಷ್ ಇಲಾಖೆ ಪಾಲನೆ ಮಾಡಬೇಕು ಎಂದರು.
ಆಯುರ್ವೇದ ಆಸ್ಪತ್ರೆಗೆ ಹೆಚ್ಚುವರಿ ನೀರಿನ ಸಂಪರ್ಕ ಅಗತ್ಯವಿದ್ದು, ಶೀಘ್ರವೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹ ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕಳೆದ ಸಾಲಿನಲ್ಲಿ ರ‍್ಯಾಂಕ್ ಪಡೆದ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಅಭಿನಂದಿಸಿದರು.
ಸಭೆಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಮಾಜಿ ವಿಧಾನಪರಿಷತ್ ಶಾಸಕ ಪ್ರಸನ್ನಕುಮಾರ್, ಮಾಜಿ ಪಾಲಿಕೆ ಸದಸ್ಯ ಯೋಗೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜು, ಕಾಲೇಜಿನ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಸೊರಬದಲ್ಲಿ ಗೋಹತ್ಯೆ ಶಂಕೆ, ಸೂಕ್ತ ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ದಂಡಾವತಿ ಸೇತುವೆ ಸಮೀಪ ಗೋ ಹತ್ಯೆ ನಡೆದಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ರಸ್ತೆಯಲ್ಲಿ ಗೋವಿನ ಪಾದದ ಹಟ್ಟೆ ಪತ್ತೆಯಾಗಿದೆ. ಇದು ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಮತ್ತೊಂದಡೆ ಗೋ ಕಳ್ಳತನ ನಡೆಯುವ ಬಗ್ಗೆ ಹಿಂದೂ ಸಂಘಟಕರು ಅನೇಕ ಬಾರಿ ಸಂಬಂಧ ಪಟ್ಟ ಇಲಾಖೆಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮೀಪದಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆದಿದ್ದು ಅಲ್ಲಿ ಗೋ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.
ಪಟ್ಟಣದಲ್ಲಿ ಅಕ್ರಮ ಗೋ ಕಳ್ಳತನ ನಡೆಯುತ್ತಿದ್ದ ಬಗ್ಗೆ ಹಲವು ನಿದರ್ಶನ ಮತ್ತು ದಾಖಲೆಗಳಿವೆ. ಅಕ್ರಮ ಗೋಮಾಂಸದ ಸಾಗಾಟದ ಬಗ್ಗೆಯೂ ದಾಖಲೆಗಳಿದೆ. ಈ ನಡುವೆ ಪಟ್ಟಣದಲ್ಲಿ ಗೋ ಹತ್ಯೆ ನಡೆದಿರುವ ಕುರಿತು ಸಂಶಯ ವ್ಯಕ್ತವಾಗಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ಲೋಕೇಶ್ ಕಕ್ಕರಸಿ ಆಗ್ರಹಿಸಿದ್ದಾರೆ.
MESCOM ಮೇ 30, ಶಿವಮೊಗ್ಗ ಮೀನುಮಾರುಕಟ್ಟೆ ಸುತ್ತಮುತ್ತಲ ಪ್ರದೇಶಕ್ಕೆ ವಿದ್ಯುತ್ ಸರಬರಾಜು ನಿಲುಗಡೆ ಮೆಸ್ಕಾಂ ಪ್ರಕಟಣೆ
MESCOM ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಬಳಿ ವಿದ್ಯುತ್ ಉಪಕರಣಗಳ ದುರಸ್ಥಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 30 ರಂದು ಬೆಳ್ಳಗ್ಗೆ 9:00 ರಿಂದ 06:00 ರವರೆಗೆ ಈ ವ್ಯಾಪ್ತಿಯ ಬಿ.ಹೆಚ್.ರಸ್ತೆ, ಹಳೆ ಪೋಸ್ಟ್ ಆಫೀಸ್ ರಸ್ತೆ, ಸಿ.ಎಲ್.ರಾಮಣ್ಣ ರಸ್ತೆ, ಅಶೋಕರಸ್ತೆ, ಎಸ್‌ಪಿಎಂ ರಸ್ತೆ, ಮಹಾರಾಜಾ ಬೀದಿ, ಮೀನು ಮಾರುಕಟ್ಟೆ, ಕೋಟೆ ಪೊಲೀಸ್ ಸ್ಟೇಷನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Madhu Bangarappa ಜಿಲ್ಲಾ ಕಸಾಪ ಕಟ್ಟಡ ಕಾಮಗಾರಿ ಮುಂದುವರೆಸಲು ₹ 2 ಕೋಟಿ ನೀಡಲು ಸೀಎಂ ಗೆ ಮನವಿ- ಮಧು ಬಂಗಾರಪ್ಪ
Madhu Bangarappa ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿನ ಸಾಹಿತ್ಯಾಸಕ್ತ ಮನಸ್ಸುಗಳಿಗೆ, ಅವರ ಸೃಜನಶೀಲ ಚಿಂತನೆಗೆ, ವೈಚಾರಿಕ ಚರ್ಚೆಗೆ ವೇದಿಕೆ ಕಲ್ಪಿಸುವಂತಾಗಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತು ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಾಹಿತ್ಯ ಪ್ರೇಮಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸ್ಮರಣಾರ್ಥ ಆರಂಭಿಸಲಾದ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಗ್ರಂಥಾಲಯದ ಚಟುವಟಿಕೆಗೆ ವೈಯಕ್ತಿಕವಾಗಿ ತಮ್ಮ ವೇತನದಿಂದ ಈಗಾಗಲೇ ಐದು ಲಕ್ಷ ರೂಪಾಯಿಗಳನ್ನು ನೀಡಿರುವುದಾಗಿ ತಿಳಿಸಿದ ಅವರು ಪರಿಷತ್ ಕಟ್ಟಡದ ಮುಂದುವರೆದ ಕಾಮಗಾರಿಗಳಿಗೆ ಅಗತ್ಯವಿರುವ ಎರಡೂವರೆ ಕೋಟಿ ರೂಪಾಯಿಗಳನ್ನು ನೀಡುವಂತೆ ನಾಳೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಲಾಗುವುದು ಎಂದರು.
ಅತ್ಯಪರೂಪದ ಸಾಹಿತ್ಯ ಗ್ರಾಮದ ಪರಿಕಲ್ಪನೆಯೊಂದಿಗೆ ನಿರ್ಮಾಣಗೊಂಡ ರಾಜ್ಯದ ಮೊದಲ ಪರಿಷತ್ ಕಟ್ಟಡ ಇದಾಗಿದ್ದು, ಇದನ್ನು ಇನ್ನಷ್ಟು ಮಾದರಿಯಾಗಿ ನಿರ್ಮಿಸುವ ಅಗತ್ಯವಿದೆ. ಅಲ್ಲದೆ ಸಾಹಿತ್ಯಗ್ರಾಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಆರಂಭಿಸಬೇಕಾದ ಅಗತ್ಯವಿದೆ ಎಂದರು.
ನಾಡಿನ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಮುಂದುವರಿಕೆಗೆ ಸಾಹಿತ್ಯಸಕ್ತ ಯುವ ಮನಸುಗಳು ಅಗತ್ಯ. ಯುವ ಚಿಂತಕರನ್ನು ಒಂದೆಡೆ ಕೂಡುವ ಕೂಟಗಳು ನಿರ್ಮಾಣಗೊಳ್ಳಬೇಕು. ಪಠ್ಯಕ್ರಮ ರಚಿಸುವಲ್ಲಿಯೂ ಸಮಾಜಮುಖಿ ಚಿಂತಕರ ಅಗತ್ಯವಿದೆ. ಹೊಸ ತಲೆಮಾರಿನ ಹಾಗೂ ಉದಯೋನ್ಮುಖ ಬರಹಗಾರರಿಗೆ ಅಗತ್ಯ ಸೌಲಭ್ಯ, ವೇದಿಕೆಗಳನ್ನು ಒದಗಿಸಿಕೊಡುವಂತಾಗಬೇಕು ಎಂದವರು ಆಶಿಸಿದರು.
Madhu Bangarappa ಪ್ರಸಕ್ತ ಸಾಹಿತ್ಯ ಗ್ರಾಮಕ್ಕೆ ಕುವೆಂಪು ಸಾಹಿತ್ಯ ಗ್ರಾಮ ಎಂದು ಮರುನಾಮಕರಣ ಮಾಡಿದಲ್ಲಿ ಅದರ ಮಹತ್ವ ಮತ್ತು ಖ್ಯಾತಿ ಹೆಚ್ಚಲಿದೆ. ಈ ಬಗ್ಗೆ ಪರಿಷತ್ ಸದಸ್ಯರು ಪರಿಶೀಲಿಸಿ ಎಂದರು.ಮಹಾತ್ಮ ಗಾಂಧೀಜಿ ಅವರು ರಾಜ್ಯಕ್ಕೆ ಭೇಟಿ ನೀಡಿ ಅಧಿವೇಶನ ನಡೆಸಿದ ಸವಿನೆನಪಿಗಾಗಿ 2024ರ ಅಕ್ಟೋಬರ್ 02 ರಿಂದ 2025ರ ಅಕ್ಟೋಬರ್ 02 ರವರೆಗೆ ಸರ್ಕಾರದ ವತಿಯಿಂದ ಶತಮಾನೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್ ಅವರು ಮಾತನಾಡಿ, ಪ್ರೋ. ನಿಸಾರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ವಿಶಾಲ ಪ್ರದೇಶದಲ್ಲಿ ಸಾಹಿತ್ಯ ಗ್ರಾಮ ನಿರ್ಮಾಣಗೊಂಡಿದ್ದು, ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿನ ಗ್ರಂಥಾಲಯ ಅಧ್ಯಯನಶೀಲರಿಗೆ, ಸಂಶೋಧನಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರಿಗೆ ಅತ್ಯುಪಯುಕ್ತ ಗ್ರಂಥಾಲಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷೆ ಶ್ರೀಮತಿ ಪಲ್ಲವಿ, ಡಾ. ವಿಜಯಾದೇವಿ, ಹೆಚ್. ಎಸ್. ರಘು, ಕೆ. ಎಸ್. ಹುಚ್ಚಾçಯಪ್ಪ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
