ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ದಂಡಾವತಿ ಸೇತುವೆ ಸಮೀಪ ಗೋ ಹತ್ಯೆ ನಡೆದಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ರಸ್ತೆಯಲ್ಲಿ ಗೋವಿನ ಪಾದದ ಹಟ್ಟೆ ಪತ್ತೆಯಾಗಿದೆ. ಇದು ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಮತ್ತೊಂದಡೆ ಗೋ ಕಳ್ಳತನ ನಡೆಯುವ ಬಗ್ಗೆ ಹಿಂದೂ ಸಂಘಟಕರು ಅನೇಕ ಬಾರಿ ಸಂಬಂಧ ಪಟ್ಟ ಇಲಾಖೆಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮೀಪದಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆದಿದ್ದು ಅಲ್ಲಿ ಗೋ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.
ಪಟ್ಟಣದಲ್ಲಿ ಅಕ್ರಮ ಗೋ ಕಳ್ಳತನ ನಡೆಯುತ್ತಿದ್ದ ಬಗ್ಗೆ ಹಲವು ನಿದರ್ಶನ ಮತ್ತು ದಾಖಲೆಗಳಿವೆ. ಅಕ್ರಮ ಗೋಮಾಂಸದ ಸಾಗಾಟದ ಬಗ್ಗೆಯೂ ದಾಖಲೆಗಳಿದೆ. ಈ ನಡುವೆ ಪಟ್ಟಣದಲ್ಲಿ ಗೋ ಹತ್ಯೆ ನಡೆದಿರುವ ಕುರಿತು ಸಂಶಯ ವ್ಯಕ್ತವಾಗಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ಲೋಕೇಶ್ ಕಕ್ಕರಸಿ ಆಗ್ರಹಿಸಿದ್ದಾರೆ.