Saturday, February 28, 2026
Saturday, February 28, 2026
Home Blog Page 289

District Commission verdict in favor of consumers ಲಿಫ್ಟ್ ಅಳವಡಿಕೆ ವಿಳಂಬ. ಸೇವಾನ್ಯೂನತೆ.ಗ್ರಾಹಕರ ಪರ ಜಿಲ್ಲಾ ಆಯೋಗ ತೀರ್ಪು

0

District Commission verdict in favor of consumers ಶಿವಮೊಗ್ಗ ಶರಾವತಿ ಸೆರಾಮಿಕ್ ಮಾಲೀಕ ಮರಿಸ್ವಾಮಿ ಎಂಬುವವರು ಮ್ಯಾನೇಜರ್, ಐರನ್‌ಬರ್ಡ್ ಎಲಿವರ‍್ಸ್ ಫ್ರೈವೇಟ್ ಲಿಮಿಟೆಡ್ ಸಂಜಯ ನಗರ, ಬೆಂಗಳೂರು ಇವರ ವಿರುದ್ದ ಎಲಿವೇಟರ್/ಲಿಫ್ಟ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ದೂರುದಾರರು ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಅನ್ನು ಎಲ್ಲಾ ತೆರಿಗೆಗಳು ಸೇರಿ ರೂ.11021 ಲಕ್ಷಗಳಿಗೆ ಖರೀದಿಸಲು ಒಪ್ಪಿ, ಎದುರುದಾರರು ಲಿಫ್ಟ್ ಅನ್ನು ಎರಡು ತಿಂಗಳ ಒಳಗೆ ದೂರುದಾರರ ಕಛೇರಿಗೆ ಅಳವಡಿಸಿ ಒಂದು ವರ್ಷದ ವಾರಂಟಿಯನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದರು.

ಅದರಂತೆ ದೂರುದಾರರು ಶೇ.50ರ ಮೊತ್ತ ರೂ. 5.00 ಲಕ್ಷಗಳಿಗೆ ಏಪ್ರಿಲ್ 2024 ರಲ್ಲಿ ಚೆಕ್ಕನ್ನು ನೀಡಿದ್ದು, ಈ ಮೊತ್ತವನ್ನು ಎದುರುದಾರರು ಪಡೆದಿರುವುದಾಗಿ ತಿಳಿಸಿದ್ದು, ಹಣವನ್ನು ಪಡೆದ ನಂತರ ಇಂದಿನವರೆಗೂ ಕಛೇರಿಗೆ ಲಿಫ್ಟ್ ಅಳವಡಿಸದೆ ಇರುವುದರಿಂದ ದೂರುದಾರರು ಎದುರುದಾರರಿಗೆ ಹಲವು ಬಾರಿ ಕೇಳಿಕೊಂಡಿದ್ದಾಗಿ ಮತ್ತು ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದರೂ ಲೀಗಲ್ ನೋಟಿಸ್ ವಿಳಾಸದಾರರು ಇರುವುದಿಲ್ಲ ಎಂಬ ಷರಾದೊಂದಿಗೆ ವಾಪಸ್ಸು ಬಂದಿದ್ದಾಗಿ ಮತ್ತು ಎದುರುದಾರರು ಹಣ ಪಡೆದು ಲಿಫ್ಟ್ ಅಳವಡಿಸದೆ ಸೇವ ನ್ಯೂನತೆ ಎಸಗಿರುವುದಾಗಿ ತಿಳಿಸಿ ದೂರನ್ನು ಸಲ್ಲಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ನೋಟೀಸ್ ಜಾರಿಯಾಗದೆ ಬಂದಿದ್ದರಿಂದ ವಿಜಯ ಕರ್ನಾಟಕ ದಿನಪತ್ರಿಕೆ ಮೂಲಕ ದೂರುದಾರರ ಮನವಿಯಂತೆ ನೋಟೀಸ್ ನೀಡಿದ್ದು, ಎದುರುದಾರರು ಹಾಜರಾಗದೆ ಇರುವುದರಿಂದ ಎದುರುದಾರರನ್ನು ಏಕ-ಪಕ್ಷೀಯವೆಂದು ಪರಿಗಣಲಾಗಿರುತ್ತದೆ.

District Commission verdict in favor of consumers ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ದೂರುದಾರರ ವಾದನ್ನು ಆಲಿಸಿ ಎದುರುದಾರರು ದೂರುದಾರರಿಂದ ಹಣ ಪಡೆದಿರುವುದು ದಾಖಲೆಗಳಿಂದ ಸಾಬೀತಾಗಿದ್ದು, ಹಣ ಪಡೆದು ಒಪ್ಪಂದದ ಪ್ರಕಾರ ಲಿಫ್ಟ್ ಅಳವಡಿಸದೆ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿ, ಈ ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ಎದುರುದಾರರು ದೂರುದಾರರಿಗೆ ರೂ. 5 ಲಕ್ಷಗಳನ್ನು ಶೇ.9ರ ಬಡ್ಡಿಯೊಂದಿಗೆ ದಿ;4/6/2024 ರಿಂದ ಪಾವತಿಸಬೇಕೆಂದು ತಿಳಿಸಿದ್ದಾರೆ. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ಹಾಗೂ ರೂ. 50 ಸಾವಿರಗಳನ್ನು ಮಾನಸಿಕ ಹಿಂಸೆಗಾಗಿ ಹಾಗೂ ರೂ. 10 ಸಾವಿರಗಳನ್ನು ವ್ಯಾಜ್ಯದ ಖರ್ಚಾಗಿ ಈ ಆದೇಶವಾದ ದಿನಾಂಕದಿಂದ 45 ದಿನಗಳೊಗಾಗಿ ಎದುರುದಾರರು ದೂರುದಾರರಿಗೆ ನೀಡಬೇಕು.

ತಪ್ಪಿದಲ್ಲಿ ಸದರಿ ಮೊತ್ತಗಳಿಗೆ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿಂದ ಪೂರಾ ಹಣ ಪಾವತಿಸುವವರೆಗೂ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಮೇ 23 ರಂದು ಆದೇಶಿಸಿದೆ.

Ginger ಆಯನೂರಿನಲ್ಲಿ ಹಸಿ ಶುಂಠಿ ಖರೀದಿಗೆಸರ್ಕಾರದಿಂದ ಪ್ರತಿನಿಧಿ ಸಂಸ್ಥೆಯ ನೇಮಕ

0

Ginger ಕೇಂದ್ರ ಸರ್ಕಾರವು ಎಕರೆಗೆ 30 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 60 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಹಸಿಶುಂಠಿಯನ್ನು ಕ್ವಿಂಟಾಲ್‌ಗೆ ರೂ. 2,445/-ರಂತೆ ಬೆಲೆಯಲ್ಲಿ ಖರೀದಿಸುತ್ತಿದ್ದು, ರಾಜ್ಯ ಸರ್ಕಾರವು ಹಸಿಶುಂಠಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಇವರನ್ನು ಖರೀದಿ ಸಂಸ್ಥೆಯನ್ನಾಗಿ ನೇಮಕ ಮಾಡಿದೆ.
ಶಿವಮೊಗ್ಗ ತಾಲೂಕಿಗೆ ಸಂಬAಧಿಸಿದAತೆ ಆಯನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಖರೀದಿ ಕೇಂದ್ರವನ್ನಾಗಿ ನೇಮಿಸಿದ್ದು, ಸಂಪರ್ಕ ದೂ.ಸಂ.: 9880525117 ಆಗಿದೆ. ರೈತರು ಜೂ.26ರೊಳಗಾಗಿ ನೋಂದಾಯಿಸಿಕೊAಡು ಖರೀದಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಎಪಿಎಂಸಿ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Rohan Care Foundation ರೋಹನ್ ಕೇರ್ ಫೌಂಡೇಷನ್ ಮೂಲಕ ಶಾಲೆಗೆ ಕ್ರೀಡಾ ಪೀಠೋಪಕರಣ ಕೊಡುಗೆ

0

Rohan Care Foundation ಬೆಂಗಳೂರಿನ ರೋಹನ್ ಕೇರ್ ಫೌಂಡೇಶನ್ ಕಂಪನಿಯು ನಗರದ ಸೊಮೀನಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಕ್ರೀಡಾಪಿಟೋಪಕರಣ ಹಾಗೂ ವಿವಿಧ ವಿಭಾಗಗಳ ಚಾರ್ಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೋಹನ್ ಕೇರ್ ಫೌಂಡೇಶನ್ ನ ಮಂಜುನಾಥ್ ಹಾಗೂ ಶುಭ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ಪೋಷಕರು, ಊರಿನ ಹಿರಿಯರು ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀದೇವಿ ಹಾಗೂ ಸಹಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

World No Tobacco Day ತಂಬಾಕು ಸೇವನೆ ಸಾವಿಗೆ ಆಹ್ವಾನ, ಎನ್.ಹೆಚ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾರಾದ ಜೀವಗಳು

0

World No Tobacco Day ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ.

ಈ ಎರಡು ಘಟನೆಗಳು ತಂಬಾಕು ಸೇವನೆಯ ಅಪಾಯದ ಕುರಿತು ಅರಿವು ಮೂಡಿಸಿದೆ. ಈ ಎರಡೂ ಪ್ರಕರಣಗಳು ಆರಂಭಿಕ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಮಹತ್ವವನ್ನು ತಿಳಿಸಿದೆ.

ಏನಿವೂ ಎರಡು ಪ್ರಕರಣ ನೋಡೋಣ.

ರಾತ್ರಿಯಿಡೀ ಖೈನಿ: ಹಲ್ಲು ನೋವಿಗೆ ಉಪಾಯವೆಂದರೆ ಜೀವವೇ ಹೋಗ್ತಿತ್ತು!

48 ವರ್ಷದ ಅಂಜಲಿ (ಹೆಸರು ಬದಲಾಯಿಸಲಾಗಿದೆ), ಮಲೆನಾಡು ಪ್ರದೇಶದವರು, 15 ವರ್ಷಗಳಿಂದ ತಮ್ಮ ದಿನ ನಿತ್ಯದ ಕೆಲಸದ ಬಳಿಕ ತಮ್ಮ ಕೆಳಗಿನ ಒಸಡಿನ ಒಳಗೆ ಖೈನಿ ಇಟ್ಟುಕೊಂಡು ಮಲಗುವ ಅಭ್ಯಾಸ ರೂಡಿಸಿಕೊಂಡಿದ್ದರು ಇದು ಕನಿಷ್ಠ ಆರು ತಾಸು ಬಾಯಲ್ಲೇ ಇರುತ್ತಿತ್ತು. ಅವರಿಗೆ ಅದೊಂದು ವ್ಯಸನವೆಂದು ತಿಳಿದಿರಲಿಲ್ಲ ಬದಲಿಗೆ ಹಲ್ಲು ನೋವಿಗೆ ಮದ್ದು ಎಂದು ಅವರು ಭಾವಿಸಿದ್ದರು.

ಒಂದು ದಿನ ಅಂಜಲಿಯವರ ಬಾಯಿಯಲ್ಲಿ ಒಂದು ಚಿಕ್ಕ ಗಾಯ ಕಾಣಿಸಿಕೊಂಡಿತು. ಅದರಿಂದ ರಕ್ತಸ್ರಾವ ಆಗಲಿಲ್ಲ, ಹೆಚ್ಚು ನೋವುಂಟುಮಾಡಲಿಲ್ಲ. ಆದರೆ ಏನೋ ವಿಭಿನ್ನ ಅನುಭವಾಗಿತ್ತು. ಅವರು ತಕ್ಷಣ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ತಲೆ ಮತ್ತು ಕುತ್ತಿಗೆಯ ಆಂಕೊ-ಸರ್ಜನ್ ಡಾ. ದೀಪಕ್ ಸಿ. ಕಿತ್ತೂರ್ ಅವರನ್ನು ಭೇಟಿಯಾದರು, ಇವರನ್ನು ಪರೀಕ್ಷಿಸಿದ ಡಾ ಕಿತ್ತೂರ ಅವರು ಆ ಗಾಯ ಇನ್ನೂ ಕ್ಯಾನ್ಸರ್ ಆಗಿ ಬದಲಾಗಿರಲಿಲ್ಲವಾಗಿದ್ದರಿಂದ ತುರ್ತಾಗಿ ಶಸ್ತ್ರಚಿಕಿತ್ಸೆಯ ಮೂಲಕ ಅವರ ಬಾಯಲ್ಲಿ ಉಂಟಾಗಿದ್ದ ಕೆಂಪು-ಬಿಳಿ ತೇಪೆಗಳನ್ನುತೆಗೆದು ಹಾಕಿದ್ದಾರೆ.

ಈ ತೇಪೆಗಳು ಕ್ಯಾನ್ಸರ್‌ ಆರಂಭಕ್ಕೂ ಮೊದಲಿನ ಲಕ್ಷಣವಾಗಿತ್ತು.

“ಅವರು ಸರಿಯಾದ ಸಮಯಕ್ಕೆ ನಮ್ಮ ಬಳಿಗೆ ಬಂದರು. ಇನ್ನೂ ಕೆಲವು ತಿಂಗಳು ತಡ ಮಾಡಿದ್ದರೆ ಅದು ಬಾಯಿಯ ಕ್ಯಾನ್ಸರ್ ಆಗಿ ಬದಲಾಗಬಹುದಿತ್ತು. ಬಾಯಿಯಲ್ಲಿ ಆರು ಗಂಟೆಗಳ ಕಾಲ ಖೈನಿಯನ್ನು ಇಟ್ಟುಕೊಳ್ಳುವುದು ಅಂದರೆ ಒಂದು ದಿನಕ್ಕೆ 30 ಗುಟ್ಕಾ ಪ್ಯಾಕೆಟ್‌ ಗಳನ್ನು ಜಗಿಯುವದಕ್ಕೆ ಸಮಾನ” ” ಎಂದು ಡಾ. ಕಿತ್ತೂರ್ ಹೇಳಿದರು.

ಅಂಜಲಿಯವರು ಈಗ ತಂಬಾಕಿನ ಚಟವನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ. ಅವರು ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ, ಗಾಯಗಳಿಂದ ಮುಕ್ತರಾಗಿದ್ದಾರೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದರು.

ಪ್ರಕರಣ 2 –

World No Tobacco Day 26 ವರ್ಷದ ಯುವತಿಯೊಬ್ಬರು ಆಸ್ಪತ್ರೆಗೆ ಬಂದಾಗ ದವಡೆಯಲ್ಲಿ ಗಟ್ಟಿತನ ಮತ್ತು ಬಾಯಿ ತೆರೆಯಲು ಕಷ್ಟವಾಗುವ ಲಕ್ಷಣಗಳನ್ನು ಹೇಳಿದರು. ಅವರು ಆಗಾಗ್ಗಗುಟ್ಕಾ ಜಗಿಯುತ್ತಿದ್ದರು. ಇವರು ಸಹ ಊಟದ ನಂತರ ಇದನ್ನು ಬಾಯಲ್ಲಿ ಇಟ್ಟುಕೊಂಡು ಮಲಗುತ್ತಿದ್ದರು.

ಅವರು ಆಸ್ಪತ್ರೆಗೆ ಬಂದಾಗ ಅವರಿಗೆ ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್ (ಓಎಸ್ಎಂಎಫ್) ಆಗಿದೆ ಎಂದು ತಿಳಿದುಬಂತು. ಓಎಸ್‌ಎಂಎಫ್‌ ಅಂದರೆ ಇದೊಂದು ದೀರ್ಘಕಾಲಿಕ ವಾಗಿ ಹರಡುತ್ತಾ ಹೋಗುವ ಸ್ಥಿತಿಯಾಗಿದ್ದು, ಬಾಯಿಯ ಒಳಗಿನ ಮೃದು ಅಂಗಾಂಶಗಳನ್ನು ದಪ್ಪವಾಗಿಸುತ್ತದೆ, ಬಾಯಿಯ ಚಲನೆಯನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆ ನೀಡದಿದ್ದರೆ ಸಾಮಾನ್ಯವಾಗಿ ಬಾಯಿಯ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. ಈಗ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ಸ್ಥಿತಿ ಗುಟ್ಕಾ ತಿನ್ನುವರರಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ ಎಂದು ಡಾ.ಕಿತ್ತೂರ ಅವರು ತಿಳಿಸಿದರು.

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಎರಡೂ ಪ್ರಕರಣಗಳು ಸಾಮಾನ್ಯವಲ್ಲ. ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಸಂಪ್ರದಾಯದ ಹೆಸರಿನಲ್ಲಿ, ನೋವು ನಿವಾರಣೆಯ ತಪ್ಪು ನಂಬಿಕೆಯಲ್ಲಿ ಮತ್ತು ಧೂಮಪಾನ ಹೊರತಾದ ತಂಬಾಕಿನ ಬಳಕೆ ಸಾಮಾನ್ಯವಾಗಿದೆ ಎಂದರು.

ಆರಂಭಿಕ ಹಂತದಲ್ಲಿ ರೋಗ ಪತ್ತೆ ಮುಖ್ಯ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಡಾ. ಕಿತ್ತೂರ್ ಮತ್ತು ಅವರ ತಂಡವು ಆರಂಭಿಕ ಹಂತದಲ್ಲಿಯೇ ರೋಗನಿರ್ಣಯ ಮಾಡುವ ಮೂಲಕ ಮತ್ತು ಅರಿವನ್ನು ಉಂಟು ಮಾಡುವ ಮೂಲಕ ಶ್ರಮಿಸುತ್ತಿದ್ದಾರೆ. “ನಾವು ಇಂತಹ ಪ್ರಕರಣಗಳನ್ನು ನೋಡುತ್ತಲೆ ಇರುತ್ತೇವೆ. ಸಕಾಲಿಕ ಚಿಕಿತ್ಸೆ ಮತ್ತು ಕಟ್ಟುನಿಟ್ಟಾದ ಫಾಲೋ- ಅಪ್‌ ನಿಂದ, ಇಂತಹ ಪ್ರಕರಣಗಳಲ್ಲಿ ನಾವು ಶೇ.100ರಷ್ಟು ಜೀವ ಉಳಿಸಿದ ಸಾಧನೆ ಮಾಡಿದ್ದೇವೆ” ಎಂದು ಡಾ. ಕಿತ್ತೂರ್ ಹೇಳುತ್ತಾರೆ.

ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆ ಸಂದರ್ಭದಲ್ಲಿ ಈ ಎರಡು ಪ್ರಕರಣಗಳು ತಂಬಾಕು ಬಿಡಲು ದೊಡ್ಡ ಸಂದೇಶ ನೀಡಿವೆ. ಕೆಲವು ಅಭ್ಯಾಸಗಳು ಸರಳ ಚಟವಾಗಿ ಪ್ರಾರಂಭವಾಗಿ ಸದ್ದಿಲ್ಲದೆ ಜೀವನವನ್ನು ಬದಲಾಯಿಸುವ ಗಂಭೀರ ರೋಗವಾಗಬಹುದು. ಆದರೆ ಸರಿಯಾದ ಜ್ಞಾನ, ಚಿಕಿತ್ಸೆ ಮತ್ತು ನೆರವಿನ ಮೂಲಕ ಅಪಾಯಗಳಿಂದ ಪಾರಾಗಬಹುದಾಗಿದೆ ಎಂದರು.

Yuvanidhi Scheme ಯುವನಿಧಿ ಗ್ಯಾರಂಟಿ ಯೋಜನೆಯ ಲಾಭ ಅನರ್ಹರು ಪಡೆಯುವುದಕ್ಕೆ ಕಡಿವಾಣ :-ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ

0

Yuvanidhi Scheme ಯುವನಿಧಿ ಯೋಜನೆಯ ಲಾಭ ಅನರ್ಹರುಗಳು ಪಡೆಯುವುದಕ್ಕೆ ಕಡಿವಾಣ ಹಾಕಿ ಅರ್ಹರಿಗೆ ಮಾತ್ರವೇ ಈ ಯೋಜನೆಯ ಲಾಭ ತಲುಪಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲರವರು ಹೇಳಿದರು.

ಅವರು ಇಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ 2024 – 2025 ನೇ ಸಾಲಿನ ಯುವನಿಧಿ ಯೋಜನೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಭೆಯಲ್ಲಿ ಸದಸ್ಯರು ಮಂಡಿಸಿದ ಅಭಿಪ್ರಾಯ ಕ್ರೂಡೀಕರಿಸಿ ಈ ನಿರ್ಣಯವನ್ನು ಅಂಗೀಕರಿಸಿ, ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಯುವನಧಿ ಯೋಜನೆಯಲ್ಲಿ ಅನರ್ಹರು ಫಲಾನುಭವಿಗಳಾಗಿದ್ದು, ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮಾಡಲಾಯಿತು ಎಂದು ತಿಳಿಸಿದರು.
Yuvanidhi Scheme ಶಿವಮೊಗ್ಗ ಜಿಲ್ಲೆಯಲ್ಲಿ 6460 ಪದವಿದರು ಮತ್ತು 110 ಡಿಪ್ಲೋಮೋ ಪಡೆದಿದ್ದವರು ಯುವನಿಧಿ ಯೋಜನೆಯಲ್ಲಿ ಫಲಾನುಭವಿಗಳಾಗಿ ನೊಂದಣಿಯಾಗಿದ್ದು, ಈ ಯೋಜನೆಯಿಂದ ಪ್ರತಿ ತಿಂಗಳು ರೂ. 1,79,95,500 ಕೋಟಿ ರೂಪಾಯಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಆದರೇ ಈ ಯೋಜನೆಯಲ್ಲಿ ನೋಂದಣಿಯಾಗಿದ್ದ ಬಹಳಷ್ಟು ಫಲಾನುಭವಿ ಯುವಕರು ಉದ್ಯೋಗದಲ್ಲಿ ಇದ್ದು ಸಂಬಳ ಪಡೆಯುತ್ತಿದ್ದು, ಸುಳ್ಳು ಮಾಹಿತಿಯನ್ನು ನೀಡಿ ನಿರುದ್ಯೋಗಗಳೆಂದು ಸ್ವಯಂ ಘೋಷಣೆ ಮಾಡಿಕೊಂಡು ಯುವನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಆದ್ದರಿಂದ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ತನಿಖೆನಡೆಸಿ ನೈಜ ನಿರುದ್ಯೋಗಿ ಫಲಾನುಭವಿಗಳು ಮಾತ್ರವೇ ಯುವನಿಧಿ ಲಾಭ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

CM Siddharamaiah ‘ಸೀಎಂ’ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

0

CM Siddharamaiah ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರಗತಿ ಪರಿಶೀಲನೆ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು.

CM Siddharamaiah ಈ ಸಭೆಯಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಚೆಲುವರಾಯಸ್ವಾಮಿ, ಶಿವನಂದ ಪಾಟೀಲ್, ತಿಮ್ಮಪುರ್, ವೆಂಕಟೇಶ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಭೋಸರಾಜ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

Keladi Shivappa Nayak University of Agriculture and Horticulture ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ

0

Keladi Shivappa Nayak University of Agriculture and Horticulture ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಜೂನ್ 06 ರಿಂದ ಜುಲೈ 07 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಕೋಕೊನಟ್ ಕ್ಯಾಸಲ್ಸ, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಜೆಲ್‌ಕೇಕ್, ಬಟರ್ ಐಸಿಂಗ್, ಮಿಲ್ಕ ಬ್ರೆಡ್, ಪಪ್‌, ಪೇಸ್ಟ್ರಿ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.
ಆಕಸ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಜೂ. 05 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸುವುದು.

.

Karnataka State Excise Department ಮುಟ್ಟುಗೋಲು ವಾಹನಗಳ ಬಹಿರಂಗ ಹರಾಜು

0

Karnataka State Excise Department ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ 9 ದ್ವಿಚಕ್ರ ವಾಹನ ಹಗೂ 3 ನಾಲ್ಕು ಚಕ್ರದ ವಾಹನಗಳನ್ನು ಜೂನ್ 04 ರಂದು ಬೆಳಗ್ಗೆ 11.00ಕ್ಕೆ ಅಬಕಾರಿ ನಿರೀಕ್ಷಕರ ಕಚೇರಿ, ಶಿವಮೊಗ್ಗ ವಲಯ ನಂ.-1 ಕಚೇರಿಯ ಆವರಣದಲ್ಲಿ ಯಾಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗದಿತ ಅವಧಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಕಚೇರಿ ವೇಳೆಯಲ್ಲಿ ವಾಹನವನ್ನು ವೀಕ್ಷಿಸಬಹುದಾಗಿದೆ ಎಂದು ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.

Minority Welfare Department ಅಲ್ಪಸಂಖ್ಯಾತರ ವಸತಿ ಶಾಲೆ/ಕಾಲೇಜುಗಳ ಉಪನ್ಯಾಸಕರ/ಶಿಕ್ಷಕರ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ

0

Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ಕಾಲೇಜುಗಳಿಗೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕ/ಉಪನ್ಯಾಸಕರ ಹುದ್ದೆಗಳಿಗೆ ಜೂನ್ 01 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜೂನ್ 01 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ/ಕಾಲೇಜು, ಮೇಲಿನ ಹನಸವಾಡಿ, ಗೋಂಧಿಚಟ್ನಹಳ್ಳಿ, ಹೊನ್ನಾಳಿ ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ಪ್ರವೇಶ ಪರೀಕ್ಷೆಗೆ ಜಿಲ್ಲಾ ಕಚೇರಿಯಲ್ಲಿ ಪ್ರವೇಶ ಪತ್ರ ಪಡೆದು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

B.Y.Raghavendra ಅನ್ನ ನೀಡುವ ರೈತರಿಗಾಗಿ ಏರ್ಪಡಿಸಿರುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಶ್ಲಾಘನೀಯ : ಬಿ.ವೈ.ರಾಘವೇಂದ್ರ

0

B.Y.Raghavendra ರೈತರು ವರ್ಷವಿಡೀ ಶ್ರಮಪಟ್ಟು ಎಲ್ಲರಿಗೂ ಅನ್ನ ನೀಡುತ್ತಾರೆ. ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ರೈತರಿಗಾಗಿ ಏರ್ಪಡಿಸಿರುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಶ್ಲಾಘನೀಯ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ವತಿಯಿಂದ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಅಂಗವಾಗಿ ಹೊಳಲೂರು ಗ್ರಾಮದಲ್ಲಿ ಏರ್ಪಡಿಸಿರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕಾರ್ಯಾಗಾರಕ್ಕೆ ಗುರುವಾರ ಅವರು ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದಲ್ಲಿ ಶೇ.5 ರಷ್ಟು ಸರ್ಕಾರಿ ನೌಕರರು, ಶೇ.20 ರಷ್ಟು ಖಾಸಗಿ ನೌಕರರಿದ್ದರೆ ಉಳಿದ ಶೇ.75 ಅನ್ನದಾತ ರೈತಾಪಿ ವರ್ಗವಿದೆ. ಇಂತಹ ರೈತರಿಗಾಗಿ ಪ್ರಧಾನ ಮಂತ್ರಿಗಳು ಮುಂಗಾರು ಹಂಗಾಮಿಗೆ ಆಧುನಿಕ ಕೃಷಿ ಚಟುವಟಿಕೆಗಳ ಕುರಿತು ರೈತರಿಗೆ ಮಾಹಿತಿ ನಿಡಲು ವಿಜ್ಞಾನಿಗಳನ್ನು ದೇಶದಾದ್ಯಮತ ರೈತರ ಕಡೆ ಕಳುಹಿಸಬೇಕೆಂಬ ಉದ್ದೇಶವನ್ನು ಹೊಂದಿರುವುದು ಕೃಷಿ ವಲಯದಲ್ಲಿ ಬೃಹತ್ ಮಟ್ಟದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಒಳಗೊಂಡ ತಂಡವು ಹೊಳಲೂರು ಗ್ರಾಮಕ್ಕೆ ಬಂದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.
B.Y.Raghavendra ಕೇಂದ್ರ ಸರ್ಕಾರ ಸುಮಾರು 1.27 ಲಕ್ಷ ಸಾವಿರ ಕೋಟಿ ಅನುದಾನ ನೀಡಿ, ರೈತರಿಗೆ ಸಹಾಯ ಮಾಡುತ್ತಿದ್ದು ಸುಮಾರು 27 ಲಕ್ಷ ಸಾವಿರ ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಿದೆ. ರೂ.2500 ಲಕ್ಷಗಳನ್ನು ಬೀಜ ಅಭಿವೃದ್ದಿ ಮಾಡಲು ಮೀಸಲಿಡಲಾಗುತ್ತಿದೆ. ನೈಸರ್ಗಿಕ ಕೃಷಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಕ್ರೆಡಿಟ್ ಕಾರ್ಡ್, ಗೊಬ್ಬರ ಸಬ್ಸಿಡಿ, ಕೃಷಿಯಲ್ಲಿ ಡ್ರೋನ್ ಬಳಕೆಯಂತರ ಯೋಜನೆಗಳನ್ನು ರೂಪಿಸಿ, ರೈತರಿಗೆ ನೆರವಾಗುತ್ತಿದೆ. ಈ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ರೈತರು ಇನ್ನಷ್ಟು ಉತ್ಪಾದನೆ ಮಾಡಲು ಸಹಾಯವಾಗಿದೆ ಎಂದು ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಈ ಅಭಿಯಾನದಲ್ಲಿ ಸುಮಾರು 18000 ರೈತರಿಗೆ ನೇರವಾಗಿ ಮಾಹಿತಿ ನೀಡಲಾಗುತ್ತಿದೆ. ನಮ್ಮ ದೇಶದ ಶ್ರಮಜೀವಿ ರೈತ ಬಾಂಧವರಿಗಾಗಿ ಈ ಮಂಗಾರು ಹಂಗಾಮಿನಲ್ಲಿ ವಿಶ್ವವಿದ್ಯಾಲಯದ ಕೃಷಿ ಕಾಲೇಜು ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ಕುರಿತ ಮಾಹಿತಿ, ಸಮಗ್ರ ಕೃಷಿ ಪದ್ದತಿ, ಜಾನುವಾರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಇತ್ಯಾದಿಗಳನ್ನೊಳಗೊಂಡಂತೆ ರೈತರಿಗ ಅರಿವು ಮೂಡಿಸಲಾಗುವುದು. ಮಣ್ಣಿನ ಆರೋಗ್ಯ ಕಾರ್ಡ್ ಆಧಾರಿತ ಸಮತೋಲಿತ ರಸಗೊಪ್ಪಬರಗಳ ಬಳಕೆ, ಬೆಳೆಗಳ ಆಯ್ಕೆ, ಸುಧಾರಿತ ತಳಿಗಳು, ಬೀಜೋಪಚಾರ ಮತ್ತು ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ. ರೈತರು ಈ ಕಾರ್ಯಕ್ರಮದ ಉಪಯೋಗ ಪಡೆಯಬೇಕೆಂದು ತಿಳಿಸಿದರು.
ಕಾಯಕ್ರಮದಲ್ಲಿ ಹೊಳಲೂರು ಗ್ರಾ.ಪಂ ಅಧ್ಯಕ್ಷೆ ರಮ್ಯ ಮಧು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್, ಕೆವಿಕೆ ಮುಖ್ಯಸ್ಥ ಡಾ.ಸುನಿಲ್ ಸಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ , ಡಾ.ಜಿ.ಕೆ ಗಿರಿಜೇಶ್, ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಜಿ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಗಿರೀಶ್ ಓ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಬಾಬುರತ್ನ ಎ, ಡಾ.ಎಸ್.ಪ್ರದೀಪ್, ಡಾ.ಬಿ.ಸಿ ಹನುಮಂತಸವಾಮಿ, ದೇವರಾಜ್, ಉಲ್ಲಾಸ್ ಮೆಸ್ತ, ರೈತರ ಉತ್ಪಾದಕ ಸಂಸ್ಥೆಗಳ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರುಗಳು, ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.