Malabar Gold & Diamonds ಭಾರತದ ಪ್ರಮುಖ ವ್ಯಾಪಾರ ಸಮೂಹ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಮಾತೃ ಕಂಪನಿಯಾದ ಮಲಬಾರ್ ಗ್ರೂಪ್ ಸಂಸ್ಥೆಯು ಆರೋಗ್ಯ ರಕ್ಷಣೆ, ಶಿಕ್ಷಣ, ಹಸಿವು ಮತ್ತು ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಬಡವರಿಗೆ ವಸತಿಯ ಮೇಲೆ ಕೇಂದ್ರೀಕರಿಸಿದ ತನ್ನ ಸಿಎಸ್‌ಆರ್ ಯೋಜನೆಗಳನ್ನು ಹೆಚ್ಚಿಸಲು 2025-26ರಲ್ಲಿ 150 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ ಎಂದು ಮಲಬಾರ್ ಗ್ರೂಪ್ಸ್ನ ಅಧ್ಯಕ್ಷ ಎಂ.ಪಿ. ಅಹಮ್ಮದ್ ಹೇಳಿದರು. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್& ಡೈಮಂಡ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಬಾರ್ ಗೂಪ್ಸ್ ತನ್ನ ಪ್ರಮುಖ ಸಿಎಸ್‌ಆರ್ ಯೋಜನೆ “ಹಸಿವು ಮುಕ್ತ ಜಗತು”್ತ ಯೋಜನೆಯಡಿಯಲ್ಲಿ, ಭಾರತ ಮತ್ತು ಜಾಂಬಿಯಾದಲ್ಲಿ ಪ್ರತಿದಿನ 70,000 ಊಟಗಳನ್ನು ಸೌಲಭ್ಯ ವಂಚಿತರಿಗೆ ವಿತರಿಸಲು ಗುಂಪು ಬದ್ಧವಾಗಿದೆ. ಇದು 2025-26 ರಲ್ಲಿ ಒಟ್ಟು 2.50 ಕೋಟಿ ಊಟಗಳನ್ನು ವಿತರಿಸಿದೆ, ಕಳೆದ 3 ವರ್ಷಗಳಲ್ಲಿ 2.5 ಕೋಟಿ ಜನರಿಗೆ ಊಟಗಳನ್ನು ಪೂರೈಸಿದ ಎಂದು ಹೇಳಿದರು. Malabar Gold & Diamonds ಇದು ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ಏಳಿಗೆ ಕಂಡು ಬಡ ಸಮುದಾಯಗಳಿಗೆ ಆಹಾರ ಭದ್ರತೆಯ ಕಾರಣಕ್ಕಾಗಿ ಆಳವಾದ ಬದ್ಧತೆಯನ್ನು ಸೂಚಿಸುತ್ತದೆ. ಈ ಯೋಜನೆಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 2 – ಶೂನ್ಯ ಹಸಿವಿಗೆ ಹೊಲಿಕೆಯಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಎಸ್. ಭೂಮರೆಡ್ಡಿ, ಸಮುದಾಯ ಅಧಿಕಾರಿ ಅನುಪಮಾ, ಸಮಾಜ ಸೇವಕರುಗಳಾದ ಡಾ.ಎ.ಸತೀಶ್‌ಕುಮಾರ್‌ಶೆಟ್ಟಿ, ಪೀರ್‌ಷರೀಫ್, ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Registration and Stamps Department ಜಿಲ್ಲೆಯ ಉಪನೋಂದಣಿ ಕಚೇರಿಗಳು 2 ಮತ್ತು 4 ನೇ ಶನಿವಾರಗಳಂದು ಕಾರ್ಯ ನಿರ್ವಹಣೆ
Registration and Stamps Department ಜೂನ್ ಮಾಹೆಯಲ್ಲಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಉಪನೋಂದಣಿ ಕಚೇರಿ ಜೂ. 01, ತೀರ್ಥಹಳ್ಳಿ ಉಪನೋಂದಣಿ ಕಚೇರಿ ಜೂ.08, ಶಿಕಾರಿಪುರ ಉಪನೋಂದಣಿ ಕಚೇರಿ ಜೂ.14, ಸೊರಬ ಉಪನೋಂದಣಿ ಕಚೇರಿ ಜೂ.15, ಸಾಗರ ಉಪನೋಂದಣಿ ಕಚೇರಿ ಜೂ.22, ಭದ್ರಾವತಿ ಉಪನೋಂದಣಿ ಕಚೇರಿ ಜೂ.28 ಹಾಗೂ ಹೊಸನಗರ ಉಪನೋಂದಣಿ ಕಚೇರಿ ಜೂ.29 ರಂದು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
Department of Labor ಗಿಗ್ ವಲಯದ ಶ್ರಮಿಕರಿಗೆ ಸಾಮಾಜಿಕ ಭದ್ರತೆ ಆದೇಶಕ್ಕೆ ರಾಜ್ಯಪಾಲರ ಅಂಕಿತ, ಸಚಿವ ಲಾಡ್ ಹರ್ಷ
Department of Labor ಗಿಗ್ ವಲಯದ ಶ್ರಮಿಕರ ಕಲ್ಯಾಣಕ್ಕೆ ಮುನ್ನುಡಿ ಬರೆಯುವ, ಕಾರ್ಮಿಕ ಇಲಾಖೆಯ ಬಹು ನಿರೀಕ್ಷಿತ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಗಿಗ್ ಕಾರ್ಮಿಕರೊಡನೆ ರಾಜಭವನಕ್ಕೆ ತೆರಳಿ ಘನತೆವೆತ್ತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿ ಘನವೆತ್ತ ರಾಜ್ಯಪಾಲರನ್ನು ಸನ್ಮಾನಿಸಿದರು.
Department of Labor ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖಾ ಅಧಿಕಾರಿಗಳು ಮತ್ತಿತರರು ಪ್ರಮುಖರಿದ್ದರು.
Department of Kannada and Culture ಪದ್ಮ ಶ್ರೇಣಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಕೇಂದ್ರ ಸರ್ಕಾರದಿಂದ ಕೊಡಮಾಡುತ್ತಿದ್ದು, ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ತಂತ್ರಜ್ಞಾನ, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಶಿಕ್ಷಣ, ನಾಗರೀಕ ಸೇವೆ, ಕ್ರೀಡೆ ಅಥ್ಲೇಟಿಕ್, ಸಾಹಸ ಕ್ರೀಡೆ, ಪರಿಸರ ಸಂರಕ್ಷಣೆ, ವನ್ಯಮೃಗ ಸಂರಕ್ಷಣೆ ಮುಂತಾದವುಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಾಧಕರಿಂದ ಅರ್ಜಿ ಆಹ್ವಾನಿಸಿದೆ.
Department of Kannada and Culture ಆಸಕ್ತರು ತಮ್ಮ ಸ್ವ-ವಿವರಗಳೊಂದಿಗೆ ತಮ್ಮ ಸಾಧನೆಯ ದಾಖಲೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಿದ್ಧಪಡಿಸಿ kanbhavblr@gmail.com ಹಾಗೂ dkc.shivamogga@gmail.com ಇ-ಮೇಲ್ ವಿಳಾಸಕ್ಕೆ ಜೂನ್ 15 ರೊಳಗಾಗಿ ಕಳುಹಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Hakkipikki Ashram School ಹಕ್ಕಿಪಿಕ್ಕಿ ಆಶ್ರಮ ಶಾಲೆಯಲ್ಲಿ” ಕಾನನದಿಂದ ಕನಸಿನೆಡೆಗೆ” ಕಾರ್ಯಕ್ರಮ
Hakkipikki Ashram School ಹಕ್ಕಿಪಿಕ್ಕಿ ಆಶ್ರಮ ಶಾಲೆಯಲ್ಲಿ” ಕಾನನದಿಂದ ಕನಸಿನೆಡೆಗೆ” ಕಾರ್ಯಕ್ರಮ ಶಿವಮೊಗ್ಗ ತಾಲ್ಲೂಕಿನ ಹಕ್ಕಿಪಿಕ್ಕಿ ಆಶ್ರಮ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು.
ಆಶ್ರಮ ಶಾಲೆ, ನಮ್ಮ ಹೆಮ್ಮೆ… ಕಾನನದಿಂದ, ಕನಸಿನಡೆಗೆ…
ಎಂಬ ಧ್ಯೇಯ ವಾಕ್ಯದೊಂದಿಗೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆ, ಹಕ್ಕಿಪಿಕ್ಕಿ ಕ್ಯಾಂಪ್, ಶಿವಮೊಗ್ಗ ತಾಲ್ಲೂಕು ಇಲ್ಲಿ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
Hakkipikki Ashram School ವಿದ್ಯಾರ್ಥಿಗಳು ಹಾಗೂ ಪೋಷಕರುಗಳೊಂದಿಗೆ ಇಲಾಖೆಯ ಶಾಲೆಗಳ ಧ್ಯೇಯೋದ್ದೇಶಗಳನ್ನು ತಿಳಿಸಲಾಯಿತು.
ದಾಖಲಾದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಸ್ಟೇಷನರಿ, ಸಮವಸ್ತ್ರಗಳನ್ನು ವಿತರಿಸಲಾಯಿತು…
India Scouts and Guides ರಸ್ತೆ ನಿಯಮಗಳನ್ನ ಪಾಲಿಸಿ. ಅಪಘಾತಗಳನ್ನ ತಪ್ಪಿಸಿ- ಬಾಬು ಅಂಜನಪ್ಪ
India Scouts and Guides ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಿವೈಎಸ್‌ಪಿ ಬಾಬು ಅಂಜನಪ್ಪ ಹೇಳಿದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯಮಟ್ಟದ ಮುಕ್ತ ದಳಗಳ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ನಮ್ಮ ದಿನನಿತ್ಯದ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಷೇತ್ರಗಳಲ್ಲಿ ಓಡಾಡುವಾಗ, ರಸ್ತೆ ದಾಟುವಾಗ, ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪಾಲನೆ ಮಾಡಬೇಕು ಎಂದು ತಿಳಿಸಿದರು.
ನಾನು ಸಹ ಬಾಲ್ಯದಲ್ಲಿ ಸ್ಕೌಟ್ ವಿದ್ಯಾರ್ಥಿಯಾಗಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ. ಸ್ಕೌಟ್ ಸಂಸ್ಥೆ ಒಂದು ಶಿಸ್ತುಬದ್ಧ ಹಾಗೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
India Scouts and Guides ಕೋಟೆ ಪೊಲೀಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಾಹೋಜಿ ಮಾತನಾಡಿ, ರಸ್ತೆ ಸುರಕ್ಷತೆ ಕಾರ್ಯಕ್ರಮಗಳು ಮಕ್ಕಳಿಗೆ ತಲುಪಬೇಕು. ಅದರಿಂದ ಅವರು ಪಾಲಕರರಿಗೆ ಮನವರಿಕೆ ಮಾಡುತ್ತಾರೆ. ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಮುಖಾಂತರ ಅಪಘಾತಗಳನ್ನು ತಪ್ಪಿಸುವುದರ ಜತೆಗೆ ಪ್ರಾಣಗಳನ್ನು ಉಳಿಸಿಕೊಳ್ಳಬಹುದು. ಪರವಾನಿಗೆ ಇಲ್ಲದೆ ಗಾಡಿಗಳನ್ನು ಯಾರೂ ಓಡಿಸಬಾರದು. ಇದರಿಂದ ದಂಡದ ಜೊತೆಗೆ ಶಿಕ್ಷೆಯು ಸಹ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ರಾಜ್ಯ ಮಟ್ಟದ ರ‍್ಯಾಲಿಗಳಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಾದಂತಹ ಕಾರ್ಯಕ್ರಮಗಳ ಜತೆಗೆ ಇಂತಹ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ ಮಾತನಾಡಿ, ಸ್ಕೌಟ್ ಅಂಡ್ ಗೈಡ್ ಸಂಸ್ಥೆ ನಮ್ಮ ಶಿಕ್ಷಣ ಇಲಾಖೆಯ ಒಂದು ಅವಿಭಾಜ್ಯ ಅಂಗ. ಇದರ ಮುಖಾಂತರ ಶಾಲೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುವ ಜತೆಗೆ ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ ಎಂದರು.
ಹನ್ನೊಂದು ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಸ್ಕೌಟ್, ಗೈಡ್, ಕಬ್, ಬುಲ್ ಬುಲ್, ರೋವರ್ಸ್, ರೆಂಜರ್ಸ್ ವಿದ್ಯಾರ್ಥಿಗಳು ಪಥ ಸಂಚಲನ ಮಾಡುವುದರ ಮುಖಾಂತರ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಿದರು.
ರಾಜ್ಯ ಸಂಸ್ಥೆಯ ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಆಯುಕ ಎಸ್.ಜಿ.ಆನಂದ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಕೆ.ರವಿ, ವೈ.ಆರ್.ವೀರೇಶಪ್ಪ, ಚೂಡಾಮಣಿ ಪವಾರ್, ಶಿವಶಂಕರ್, ಆಯೋಜಕ ರಾಜೇಶ್ ಅವಲಕ್ಕಿ, ನಿರ್ದೇಶಕ ಕೆ.ರವಿ, ಕಾರ್ಯದರ್ಶಿ ಚಂದ್ರಶೇಖರಯ್ಯ, ಸಿಎಂ.ಪರಮೇಶ್ವರಯ್ಯ ಉಪಸಿತರಿದ್ದರು.
Actor Ananta Nag ಹಿರಿಯ ನಟ ಅನಂತ ನಾಗ್ ಅವರಿಗೆ ಪದ್ಮಭೂಷಣ ಪ್ರದಾನ
Actor Ananta Nag ಕನ್ನಡದ ಮೇರುನಟರಲ್ಲಿ ಅನಂತ ನಾಗ್ ಕೂಡ ಒಬ್ಬರು. ಯಾವುದೇ
ಹೊರಬಿರುಸಿನ ಬೆಂಬಲವಿಲ್ಲದೇ ತಮ್ಮದೇ ಅಭಿನಯ ಶೈಲಿಯ ಮೂಲಕ ಚಿತ್ರ ರಸಿಕರ ಹೃದಯ ಗೆದ್ದಿದ್ದಾರೆ.
ಅನಂತ ನಾಗ್ ಅವರ ಮೊದಲ ಚಿತ್ರ ‘ಸಂಕಲ್ಪ’. ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಹಂಸಗೀತೆ ಚಿತ್ರದಲ್ಲಿ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿ ಗಮನ ಸೆಳೆದರು.. ೧೯೭೭ ’ಬಯಲುದಾರಿ ಅವರ ನಟನೆಯಿಂದ ಜನಪ್ರಿಯವಾಯಿತು.
ಅನಂತ ನಾಗ್ ಅಭಿನಯದ
ಟೀವಿ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಅನಂತ ನಾಗ್ ಅವರ ಮೊದಲ ಚಿತ್ರ ‘ಸಂಕಲ್ಪ’. ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಹಂಸಗೀತೆ ಚಿತ್ರದಲ್ಲಿ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿ ಗಮನ ಸೆಳೆದರು.. ೧೯೭೭ ’ಬಯಲುದಾರಿ ಅವರ ನಟನೆಯಿಂದ ಜನಪ್ರಿಯವಾಯಿತು.
ಅನಂತ ನಾಗ್ ಅಭಿನಯದ
ಟೀವಿ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಚಿತ್ರರಂಗವೆರ ಅಲ್ಲದೇ ರಾಜಕೀಯ ಪ್ರವೇಶಮಾಡಿ, ಶಾಸಕರಾಗಿ,ರಾಜ್ಯ ಸರ್ಕಾರದಲ್ಲಿದ್ದು ಜನತಾ ಸೇವೆ ಮಾಡಿದ್ದಾರೆ
Actor Ananta Nag ಈಗ ಅವರ ಬಹುಮುಖ ಪ್ರತಿಭೆಯ ದ್ಯೋತಕವಾಗಿ
ಕೇಂದ್ರ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದೆ.
ರಾಷ್ಡ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಸಮಾರಂಭದಲ್ಲಿ
ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದರು
Madhu Bangarappa ಶಿವಮೊಗ್ಗ ಎಪಿಎಂಸಿ ರಾಜ್ಯದಲ್ಲೇ ಹೆಚ್ಚು ವಹಿವಾಟು ಇರುವ ಎರಡನೇ ಮಾರುಕಟ್ಟೆ- ಮಧು ಬಂಗಾರಪ್ಪ
Madhu Bangarappa ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ದೇಶದ ಅಭಿವೃದ್ದಿ ಸಹ ಉತ್ತಮವಾಗಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ರೈತರಿಗೆ ಸಹಕಾರಿಯಾಗಿದ್ದು ಉತ್ತಮ ವಹಿವಾಟು ಮೂಲಕ ಜಿಲ್ಲೆಗೆ ಕಿರೀಟಪ್ರಾಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 2019-20 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಶಿವಮೊಗ್ಗ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಬುಧವಾರದಂದು ಉದ್ಘಾಟಿಸಿ ಅವರು ಮಾತನಾಡಿದರು. ಶಿವಮೊಗ್ಗದ ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಕೇಂದ್ರವಾಗಿರುವುದು ಹೆಮ್ಮೆಯ ವಿಷಯ. ರೈತರನ್ನು ಯಾರೂ ಕಡೆಗಣಿಸಬಾರದು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು 35 ವರ್ಷಗಳ ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದಾಗ ಸಾಕಷ್ಟು ಟೀಕೆಗಳು ಬಂದವು. ಆದರೆ ಇದೇ ಯೋಜನೆಯ ಫಲವಾಗಿ ಇಂದು ರೈತರು ಅಭಿವೃದ್ದಿಯಾಗಿದ್ದು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿದೆ. ಅಡಿಕೆ, ಶುಂಠಿ, ಅರಿಶಿನ, ಅನಾನಸ್ ಇತರೆ ಬೆಳೆಗೆ ಬೇಸಿಗೆಯಲ್ಲೂ ನೀರಿನ ಅವಶ್ಯಕತೆ ಇದ್ದು, ಉಚಿತ ಕರೆಂಟ್‌ನಿAದ ರೈತರಿಗೆ ಬಹಳ ಅನುಕೂಲವಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ 21 ಸಾವಿರ ಕೋಟಿ ಹಣವನ್ನು ರೈತರ ಪರವಾಗಿ ಪಾವತಿಸುತ್ತಿದೆ. ರೈತರಿಗೆ ಇದೊಂದು ಕೊಡುಗೆಯಾಗಿದ್ದು ಈ ಸೌಲಭ್ಯ ಪಡೆದ ರೈತರು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ರೈತರ ಚಟುವಟಿಕೆಗಳಿಂದಾಗಿ ಎಪಿಎಂಸಿ, ಮ್ಯಾಮ್‌ಕೋಸ್, ಹಾಪ್‌ಕಾಮ್ಸ್, ಇತರೆ ಕೃಷಿ ಮತ್ತು ತೋಟಗಾರಿಕೆ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು, ಆದಾಯ ಸಾಧ್ಯವಾಗುತ್ತಿದೆ. ಶಿವಮೊಗ್ಗ ಎಪಿಎಂಸಿ ಯಲ್ಲಿ ರೂ.2475 ಕೋಟಿ ವ್ಯವಹಾರ ನಡೆಯುತ್ತಿದ್ದು, ರೂ.250 ಕೋಟಿ ಜಿಎಸ್‌ಟಿ ಪಾವತಿ ಮಾಡುತ್ತಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಮಳಿಗೆಗಳ ಅವಶ್ಯಕತೆ ಇದ್ದು, ಹೀಗೆಯೇ ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗದ ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಮಾರುಕಟ್ಟೆಯಾಗಿದೆ. 1950 ರಲ್ಲಿ ಸ್ಥಾಪನೆಯಾದ ಎಪಿಎಂಸಿ 102 ಎಕರೆ ಪ್ರದೇಶದಲ್ಲಿ ವಿವಿಧ ಕಟ್ಟಡಗಳನ್ನು ಹೊಂದಿದೆ.
Madhu Bangarappa ಪ್ರಸ್ತುತ ಎಪಿಎಂಸಿ ಪ್ರಾಂಗಣದಲ್ಲಿ ರೂ.10 ಕೋಟಿ ವೆಚ್ಚದಲ್ಲಿ ನೂತನವಾಗಿ 28 ಮಳಿಗೆಗಗಳನ್ನು ನಿರ್ಮಿಸಲಾಗಿದ್ದು ಈಗಾಗಲೇ ಹರಾಜು ಮೂಲಕ 23 ಮಳಿಗೆಗಳನ್ನು ವಿತರಣೆ ಮಾಡಲಾಗಿದೆ.
ಎಪಿಎಂಸಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಸೌಲಭ್ಯ ನೀಡುವ ಮೂಲಕ ರೈತರ ಬೆನ್ನೆಲುಬಾಗಿದೆ. ರೈತರಿಗೆ ಆನ್‌ಲೈನ್ ವಹಿವಾಟು ಮತ್ತು ಎಪಿಎಂಸಿ ಹೊರಗಡೆಯೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದ ಅವರು ಇದೇ ನೂತನ ಕಟ್ಟಡದಲ್ಲಿ ಸಬ್ ರಿಜಿಸ್ಟಾçರ್ ಕಚೇರಿ ಕೂಡ ಬರಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಕರ್ನಾಟಕ ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಎಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ತಾಲ್ಲೂಕು ಅಧ್ಯಕ್ಷ ಹೆಚ್ ಎಂ ಮಧು, ಕೃಷಿ ವಿವಿ ನಿರ್ದೇಶಕ ಹೆಚ್ ಡಿ ದೇವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಪಿಎಂಸಿ ಕಾರ್ಯದರ್ಶಿ ಸತೀಶ್ ಹೆಚ್ ವೈ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Karnataka Chamber of Commerce and Industry ಮೇ 30 ರಿಂದ ಜೂನ್ 1 ವರೆಗೆ ಬೆಂಗಳೂರಿನಲ್ಲಿ “ಮೇಕ್ ಇನ್ ಇಂಡಿಯಾ” ಸಮಾವೇಶ
Karnataka Chamber of Commerce and Industry ಇಂಡಿಯಾ ಎಂಎಸ್‌ಎoಇ ಸಮಾವೇಶ 2025 ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ಮೈಕ್ರೋ, ಸಣ್ಣ, ಮಧ್ಯಮ ಉದ್ಯಮ ವಲಯವನ್ನು ಬಲಪಡಿಸುವ ಪ್ರಮುಖ ಯೋಜನೆ.
ಮೇ 30 ರಿಂದ ಜೂನ್ 1, 2025 ರವರೆಗೆ ಬೆಂಗಳೂರಿನ ತ್ರಿಪುರ ವಾಸಿನಿ, ಅರಮನೆ ಮೈದಾನದಲ್ಲಿ ನಡೆಯುವ ಈ ಮೂರು ದಿನಗಳ ಕಾರ್ಯಕ್ರಮವು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕಾ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಎಂಎಸ್‌ಎoಇ ಗಳಿಗೆ ಸಾರ್ವಜನಿಕ ವಲಯ ಘಟಕಗಳು ಮತ್ತು ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಮತ್ತು `ಮೇಕ್ ಇನ್ ಇಂಡಿಯಾ’ ತತ್ವ ಆಧಾರದ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಈ ಸಮಾವೆಶ ಉದ್ದೇಶಿಸಿದೆ.
- ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ :- 1916 ರಲ್ಲಿ ಭಾರತ ರತ್ನ ಸರ್ ಎಮ್. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಭಾರತದ ಪ್ರಾಚೀನ ಮತ್ತು ಪ್ರಭಾವಶಾಲಿ ವಾಣಿಜ್ಯ ಮಂಡಳಿಗಳಲ್ಲಿ ಒಂದಾಗಿದೆ. 3,000 ಕ್ಕೂ ಹೆಚ್ಚು ನೇರ ಸದಸ್ಯರು ಮತ್ತು 2,50,000 ಕ್ಕೂ ಹೆಚ್ಚು ಅಪ್ರತ್ಯಕ್ಷ ಸದಸ್ಯರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಭಾಗವಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ :- 1946 ರಲ್ಲಿ ಸ್ಥಾಪಿತವಾಗಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ 12,000 ಕ್ಕೂ ಹೆಚ್ಚು ಎಂಎಸ್‌ಎoಇ ಗಳನ್ನು ಪ್ರತಿನಿಧಿಸುತ್ತದೆ, 127 ಸಂಬoಧಿತ ಸಂಘಗಳೊoದಿಗೆ ಸರಕಾರದ ಸಂಬoಧಿತ ಪ್ರೋತ್ಸಾಹವನ್ನು ನೀಡಲು ಸಹಾಯ ಮಾಡುತ್ತದೆ.
- ಪೀಣ್ಯಾ ಕೈಗಾರಿಕಾ ಸಂಘ :- 1978 ರಲ್ಲಿ ಸ್ಥಾಪಿತ ಸುಮಾರು 3,700 ಕೈಗಾರಿಕೆಗಳನ್ನು ಪ್ರತಿನಿಧಿಸುತ್ತದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದೆ.
Karnataka Chamber of Commerce and Industry ಎಂಎಸ್‌ಎoಇಗಳಿಗೆ ಕೇಂದ್ರ ಸರ್ಕಾರದ ಕೈಗಾರಿಕೆಗಳು ಮತ್ತು ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುವುದು. ಎಂಎಸ್‌ಎoಇ ಗಳಿಗಾಗಿ ವಿಕ್ರಯದಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು .`ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು. ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು . ಎಂಎಸ್‌ಎoಇ ವಲಯಕ್ಕೆ ಸಂಬoಧಿಸಿದ ಸರಕಾರದ ನೀತಿ ಚರ್ಚೆಗಳನ್ನು ನಡೆಸುವುದು
GDP ಗೆ ಎಂಎಸ್‌ಎoಇ ಗಳ ಕೊಡುಗೆ ಮತ್ತು ಉದ್ಯೋಗ ಅವಕಾಶ | ಎಂಎಸ್‌ಎoಇ ಗಳಿಗೆ ಸರಕಾರದ ಬೆಂಬಲ
ರೈಲು ಕೈಗಾರಿಕೆಗಾಗಿ ಎಂಎಸ್‌ಎoಇ ಉದ್ಯಮ ಪಾರ್ಕಗಾಗಿ ಒತ್ತಾಯ
250+ ಪ್ರದರ್ಶನ ಮಳಿಗೆಗಳು | B2B ಸಭೆಗಳು | ಕೈಗಾರಿಕಾ ತಜ್ಞರಿಂದ ಸಭೆಗಳು ಮತ್ತು ಪ್ರತ್ಯಕ್ಷತಾ ಕಾರ್ಯಕ್ರಮಗಳು | ಕೌಶಲ್ಯ ಅಭಿವೃದ್ಧಿ ಮತ್ತು ಪ್ರಮಾಣೀಕರಣ ಕಾರ್ಯಾಗಾರಗಳು
ಎಂಎಸ್‌ಎoಇ ಉದ್ಯಮಿಗಳು | ಸಾರ್ವಜನಿಕ ವಲಯ ಘಟಕಗಳು | ದೊಡ್ಡ ಕಂಪನಿಗಳು | ಸರಕಾರಿ ಅಧಿಕಾರಿಗಳು | ಆರ್ಥಿಕ ಸಂಸ್ಥೆಗಳು | ಕೈಗಾರಿಕಾ ತಜ್ಞರು
ಮಹಿಳಾ ಮತ್ತು SC/ST ಉದ್ಯಮಿಗಳಿಗೆ 100% ಸಬ್ಸಿಡಿ | ಸಾಮಾನ್ಯ ವರ್ಗ ಎಂಎಸ್‌ಎoಇ ಗಳಿಗೆ 80% ಸಬ್ಸಿಡಿ. ಪ್ರಯಾಣ ಮತ್ತು ಪ್ರಚಾರಕ್ಕೆ 25,000 ವರೆಗೆ ವೆಚ್ಚ ಸಹಾಯ | ಪ್ರತ್ಯೇಕ ವ್ಯಕ್ತಿಗೆ ACII ಕ್ಲಾಸ್ ರೈಲು ಅಥವಾ ಎಕಾನಮಿ ಕ್ಲಾಸ್ ವಿಮಾನ ಪ್ರಯಾಣ ವೆಚ್ಚಇಂಡಿಯಾ ಎಂಎಸ್‌ಎoಇ ಸಮಾವೇಶ 2025 ಎಂಎಸ್‌ಎoಇ ವಲಯದವರಿಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು, ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು, ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ಸಾಹಿಸಲು ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಇದು ಎಂಎಸ್‌ಎoಇ ಗಳನ್ನು ಬಲಪಡಿಸುವ ಹೊಸ ಸಾಧನೆಯಾಗಲಿ.
National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಅಭಿಯಾನದಡಿ ಆಯ್ದ ತೋಟಗಾರಿಕೆ ಬೆಳೆ & ಅಭಿವೃದ್ಧಿಗೆ ಸಹಾಯ ಧನ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನ
National Horticulture Mission Scheme 2025-26 ನೇ ಸಾಲಿನಲ್ಲಿ ಈ ಕೆಳಕಂಡ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಆಸಕ್ತ ರೈತರು ಸಹಾಯಧನ ಪಡೆದು ಕೊಳ್ಳಲು ಅರ್ಜಿಯನ್ನು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿ ಕೊಳ್ಳಲು ಕೋರಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ, ತರಕಾರಿ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ (Weed Mat) ಟ್ರ್ಯಾಕ್ಟರ್, Farm gate, ಪ್ರಾಥಮಿಕ ಸಂಸರಣಾ ಘಟಕ, ಸಮಗ್ರ ಪೀಡೆ ನಿರ್ವಹಣೆ ಮತ್ತು ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಖಾದ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ (ಸ್ವದೇಶಿ ಮತ್ತು ವಿದೇಶಿ ತಳಿಗಳು) ಅಂತರ ಬೆಳೆ, ಡಿಸೇಲ್ ಪಂಪ್ ಸೆಟ್ ಗೆ ಸಹಾಯಧನ, Chaff Cutter ಯಂತ್ರ, ಟ್ರ್ಯಾಕ್ಟರ್ ಟ್ರಾಲಿ, ತಾಳೆ ಹಣ್ಣು ಕೊಯ್ಯಲು ಸಹಾಯಧನ ಕಾರ್ಯಕ್ರಮಗಳಿಗೆ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಣ್ಣಿನ ಬೆಳೆಗಳು, ತರಕಾರಿ ಮತ್ತು ತೋಟದ ಬೆಳೆಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕಾಳುಮೆಣಸು ಪ್ರದೇಶ ವಿಸ್ತರಣೆ ಕೈಗೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಯೋಜನೆಯಡಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆಯಡಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನ ಮರ ಹತ್ತುವ ಯಂತ್ರ, ಕಳೆ ಕೊಚ್ಚುವ ಯಂತ್ರ, ಟ್ರ್ಯಾಕ್ಟರ್ ಟ್ರೈಲರ್ ಮತ್ತು ಇನ್ನಿತರೆ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
National Horticulture Mission Scheme ಅರ್ಜಿಯನ್ನು ಸಲ್ಲಿಸಲು ತಾ.16/06/2025 ಕೊನೆಯ ದಿನಾಂಕ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
(ಜಿ.ಪಂ) ತಿಳಿಸಿದ್ದಾರೆ.
