Friday, June 20, 2025
Friday, June 20, 2025

Karnataka Chamber of Commerce and Industry ಮೇ 30 ರಿಂದ ಜೂನ್ 1 ವರೆಗೆ ಬೆಂಗಳೂರಿನಲ್ಲಿ “ಮೇಕ್ ಇನ್ ಇಂಡಿಯಾ” ಸಮಾವೇಶ

Date:

Karnataka Chamber of Commerce and Industry ಇಂಡಿಯಾ ಎಂಎಸ್‌ಎoಇ ಸಮಾವೇಶ 2025 ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ಮೈಕ್ರೋ, ಸಣ್ಣ, ಮಧ್ಯಮ ಉದ್ಯಮ ವಲಯವನ್ನು ಬಲಪಡಿಸುವ ಪ್ರಮುಖ ಯೋಜನೆ.
ಮೇ 30 ರಿಂದ ಜೂನ್ 1, 2025 ರವರೆಗೆ ಬೆಂಗಳೂರಿನ ತ್ರಿಪುರ ವಾಸಿನಿ, ಅರಮನೆ ಮೈದಾನದಲ್ಲಿ ನಡೆಯುವ ಈ ಮೂರು ದಿನಗಳ ಕಾರ್ಯಕ್ರಮವು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕಾ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಎಂಎಸ್‌ಎoಇ ಗಳಿಗೆ ಸಾರ್ವಜನಿಕ ವಲಯ ಘಟಕಗಳು ಮತ್ತು ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಮತ್ತು `ಮೇಕ್ ಇನ್ ಇಂಡಿಯಾ’ ತತ್ವ ಆಧಾರದ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಈ ಸಮಾವೆಶ ಉದ್ದೇಶಿಸಿದೆ.

  1. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ :- 1916 ರಲ್ಲಿ ಭಾರತ ರತ್ನ ಸರ್ ಎಮ್. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಭಾರತದ ಪ್ರಾಚೀನ ಮತ್ತು ಪ್ರಭಾವಶಾಲಿ ವಾಣಿಜ್ಯ ಮಂಡಳಿಗಳಲ್ಲಿ ಒಂದಾಗಿದೆ. 3,000 ಕ್ಕೂ ಹೆಚ್ಚು ನೇರ ಸದಸ್ಯರು ಮತ್ತು 2,50,000 ಕ್ಕೂ ಹೆಚ್ಚು ಅಪ್ರತ್ಯಕ್ಷ ಸದಸ್ಯರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಭಾಗವಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.
  2. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ :- 1946 ರಲ್ಲಿ ಸ್ಥಾಪಿತವಾಗಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ 12,000 ಕ್ಕೂ ಹೆಚ್ಚು ಎಂಎಸ್‌ಎoಇ ಗಳನ್ನು ಪ್ರತಿನಿಧಿಸುತ್ತದೆ, 127 ಸಂಬoಧಿತ ಸಂಘಗಳೊoದಿಗೆ ಸರಕಾರದ ಸಂಬoಧಿತ ಪ್ರೋತ್ಸಾಹವನ್ನು ನೀಡಲು ಸಹಾಯ ಮಾಡುತ್ತದೆ.
  3. ಪೀಣ್ಯಾ ಕೈಗಾರಿಕಾ ಸಂಘ :- 1978 ರಲ್ಲಿ ಸ್ಥಾಪಿತ ಸುಮಾರು 3,700 ಕೈಗಾರಿಕೆಗಳನ್ನು ಪ್ರತಿನಿಧಿಸುತ್ತದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದೆ.

Karnataka Chamber of Commerce and Industry ಎಂಎಸ್‌ಎoಇಗಳಿಗೆ ಕೇಂದ್ರ ಸರ್ಕಾರದ ಕೈಗಾರಿಕೆಗಳು ಮತ್ತು ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುವುದು. ಎಂಎಸ್‌ಎoಇ ಗಳಿಗಾಗಿ ವಿಕ್ರಯದಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು .`ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು. ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು . ಎಂಎಸ್‌ಎoಇ ವಲಯಕ್ಕೆ ಸಂಬoಧಿಸಿದ ಸರಕಾರದ ನೀತಿ ಚರ್ಚೆಗಳನ್ನು ನಡೆಸುವುದು
GDP ಗೆ ಎಂಎಸ್‌ಎoಇ ಗಳ ಕೊಡುಗೆ ಮತ್ತು ಉದ್ಯೋಗ ಅವಕಾಶ | ಎಂಎಸ್‌ಎoಇ ಗಳಿಗೆ ಸರಕಾರದ ಬೆಂಬಲ
ರೈಲು ಕೈಗಾರಿಕೆಗಾಗಿ ಎಂಎಸ್‌ಎoಇ ಉದ್ಯಮ ಪಾರ್ಕಗಾಗಿ ಒತ್ತಾಯ
250+ ಪ್ರದರ್ಶನ ಮಳಿಗೆಗಳು | B2B ಸಭೆಗಳು | ಕೈಗಾರಿಕಾ ತಜ್ಞರಿಂದ ಸಭೆಗಳು ಮತ್ತು ಪ್ರತ್ಯಕ್ಷತಾ ಕಾರ್ಯಕ್ರಮಗಳು | ಕೌಶಲ್ಯ ಅಭಿವೃದ್ಧಿ ಮತ್ತು ಪ್ರಮಾಣೀಕರಣ ಕಾರ್ಯಾಗಾರಗಳು
ಎಂಎಸ್‌ಎoಇ ಉದ್ಯಮಿಗಳು | ಸಾರ್ವಜನಿಕ ವಲಯ ಘಟಕಗಳು | ದೊಡ್ಡ ಕಂಪನಿಗಳು | ಸರಕಾರಿ ಅಧಿಕಾರಿಗಳು | ಆರ್ಥಿಕ ಸಂಸ್ಥೆಗಳು | ಕೈಗಾರಿಕಾ ತಜ್ಞರು
ಮಹಿಳಾ ಮತ್ತು SC/ST ಉದ್ಯಮಿಗಳಿಗೆ 100% ಸಬ್ಸಿಡಿ | ಸಾಮಾನ್ಯ ವರ್ಗ ಎಂಎಸ್‌ಎoಇ ಗಳಿಗೆ 80% ಸಬ್ಸಿಡಿ. ಪ್ರಯಾಣ ಮತ್ತು ಪ್ರಚಾರಕ್ಕೆ 25,000 ವರೆಗೆ ವೆಚ್ಚ ಸಹಾಯ | ಪ್ರತ್ಯೇಕ ವ್ಯಕ್ತಿಗೆ ACII ಕ್ಲಾಸ್ ರೈಲು ಅಥವಾ ಎಕಾನಮಿ ಕ್ಲಾಸ್ ವಿಮಾನ ಪ್ರಯಾಣ ವೆಚ್ಚಇಂಡಿಯಾ ಎಂಎಸ್‌ಎoಇ ಸಮಾವೇಶ 2025 ಎಂಎಸ್‌ಎoಇ ವಲಯದವರಿಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು, ದೊಡ್ಡ ಕಂಪನಿಗಳೊoದಿಗೆ ಸಂಪರ್ಕ ಸಾಧಿಸಲು, ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ಸಾಹಿಸಲು ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಇದು ಎಂಎಸ್‌ಎoಇ ಗಳನ್ನು ಬಲಪಡಿಸುವ ಹೊಸ ಸಾಧನೆಯಾಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...