Madhu Bangarappa ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿನ ಸಾಹಿತ್ಯಾಸಕ್ತ ಮನಸ್ಸುಗಳಿಗೆ, ಅವರ ಸೃಜನಶೀಲ ಚಿಂತನೆಗೆ, ವೈಚಾರಿಕ ಚರ್ಚೆಗೆ ವೇದಿಕೆ ಕಲ್ಪಿಸುವಂತಾಗಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತು ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಾಹಿತ್ಯ ಪ್ರೇಮಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸ್ಮರಣಾರ್ಥ ಆರಂಭಿಸಲಾದ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಗ್ರಂಥಾಲಯದ ಚಟುವಟಿಕೆಗೆ ವೈಯಕ್ತಿಕವಾಗಿ ತಮ್ಮ ವೇತನದಿಂದ ಈಗಾಗಲೇ ಐದು ಲಕ್ಷ ರೂಪಾಯಿಗಳನ್ನು ನೀಡಿರುವುದಾಗಿ ತಿಳಿಸಿದ ಅವರು ಪರಿಷತ್ ಕಟ್ಟಡದ ಮುಂದುವರೆದ ಕಾಮಗಾರಿಗಳಿಗೆ ಅಗತ್ಯವಿರುವ ಎರಡೂವರೆ ಕೋಟಿ ರೂಪಾಯಿಗಳನ್ನು ನೀಡುವಂತೆ ನಾಳೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಲಾಗುವುದು ಎಂದರು.
ಅತ್ಯಪರೂಪದ ಸಾಹಿತ್ಯ ಗ್ರಾಮದ ಪರಿಕಲ್ಪನೆಯೊಂದಿಗೆ ನಿರ್ಮಾಣಗೊಂಡ ರಾಜ್ಯದ ಮೊದಲ ಪರಿಷತ್ ಕಟ್ಟಡ ಇದಾಗಿದ್ದು, ಇದನ್ನು ಇನ್ನಷ್ಟು ಮಾದರಿಯಾಗಿ ನಿರ್ಮಿಸುವ ಅಗತ್ಯವಿದೆ. ಅಲ್ಲದೆ ಸಾಹಿತ್ಯಗ್ರಾಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಆರಂಭಿಸಬೇಕಾದ ಅಗತ್ಯವಿದೆ ಎಂದರು.
ನಾಡಿನ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಮುಂದುವರಿಕೆಗೆ ಸಾಹಿತ್ಯಸಕ್ತ ಯುವ ಮನಸುಗಳು ಅಗತ್ಯ. ಯುವ ಚಿಂತಕರನ್ನು ಒಂದೆಡೆ ಕೂಡುವ ಕೂಟಗಳು ನಿರ್ಮಾಣಗೊಳ್ಳಬೇಕು. ಪಠ್ಯಕ್ರಮ ರಚಿಸುವಲ್ಲಿಯೂ ಸಮಾಜಮುಖಿ ಚಿಂತಕರ ಅಗತ್ಯವಿದೆ. ಹೊಸ ತಲೆಮಾರಿನ ಹಾಗೂ ಉದಯೋನ್ಮುಖ ಬರಹಗಾರರಿಗೆ ಅಗತ್ಯ ಸೌಲಭ್ಯ, ವೇದಿಕೆಗಳನ್ನು ಒದಗಿಸಿಕೊಡುವಂತಾಗಬೇಕು ಎಂದವರು ಆಶಿಸಿದರು.
Madhu Bangarappa ಪ್ರಸಕ್ತ ಸಾಹಿತ್ಯ ಗ್ರಾಮಕ್ಕೆ ಕುವೆಂಪು ಸಾಹಿತ್ಯ ಗ್ರಾಮ ಎಂದು ಮರುನಾಮಕರಣ ಮಾಡಿದಲ್ಲಿ ಅದರ ಮಹತ್ವ ಮತ್ತು ಖ್ಯಾತಿ ಹೆಚ್ಚಲಿದೆ. ಈ ಬಗ್ಗೆ ಪರಿಷತ್ ಸದಸ್ಯರು ಪರಿಶೀಲಿಸಿ ಎಂದರು.ಮಹಾತ್ಮ ಗಾಂಧೀಜಿ ಅವರು ರಾಜ್ಯಕ್ಕೆ ಭೇಟಿ ನೀಡಿ ಅಧಿವೇಶನ ನಡೆಸಿದ ಸವಿನೆನಪಿಗಾಗಿ 2024ರ ಅಕ್ಟೋಬರ್ 02 ರಿಂದ 2025ರ ಅಕ್ಟೋಬರ್ 02 ರವರೆಗೆ ಸರ್ಕಾರದ ವತಿಯಿಂದ ಶತಮಾನೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್ ಅವರು ಮಾತನಾಡಿ, ಪ್ರೋ. ನಿಸಾರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ವಿಶಾಲ ಪ್ರದೇಶದಲ್ಲಿ ಸಾಹಿತ್ಯ ಗ್ರಾಮ ನಿರ್ಮಾಣಗೊಂಡಿದ್ದು, ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿನ ಗ್ರಂಥಾಲಯ ಅಧ್ಯಯನಶೀಲರಿಗೆ, ಸಂಶೋಧನಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರಿಗೆ ಅತ್ಯುಪಯುಕ್ತ ಗ್ರಂಥಾಲಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷೆ ಶ್ರೀಮತಿ ಪಲ್ಲವಿ, ಡಾ. ವಿಜಯಾದೇವಿ, ಹೆಚ್. ಎಸ್. ರಘು, ಕೆ. ಎಸ್. ಹುಚ್ಚಾçಯಪ್ಪ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Madhu Bangarappa ಜಿಲ್ಲಾ ಕಸಾಪ ಕಟ್ಟಡ ಕಾಮಗಾರಿ ಮುಂದುವರೆಸಲು ₹ 2 ಕೋಟಿ ನೀಡಲು ಸೀಎಂ ಗೆ ಮನವಿ- ಮಧು ಬಂಗಾರಪ್ಪ
Date: