District Meggan Teaching Hospital ದಿನಾಂಕ 26-05-2025 ರಂದು ಸಂಜೆ 04:00 ಗಂಟೆಗೆ ಶ್ರೀ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಶಿವಮೊಗ್ಗ ಲೋಕಾಯುಕ್ತ ಪೋಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀ ರುದ್ರೇಶ್ ಕೆ.ಪಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಔಷದ ದಾಸ್ತಾನು ವಿಭಾಗಕ್ಕೆ ಭೇಟಿ ಪರಿಶೀಲನೆಯನ್ನು ಕೈಗೊಂಡಿದ್ದರು.
ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕ್ಷ ಕಿರಣ ಕೊಠಡಿಯ ಪಕ್ಕದಲ್ಲಿ ಒಂದು ಕೊಠಡಿಯಲ್ಲ ಅನಧೀಕೃತವಾಗಿ ಔಷದಿಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಶ್ರೀ ಗೋಪಿನಾಥ, ಸಹಾಯಕ ನಿರ್ದೇಶಕರು ಫಾರ್ಮಸಿ ರವರನ್ನು ವಿಚಾರ ಮಾಡಲಾಗಿ ಸದರಿಯವರು ಯಾವುದೇ ಸಮಂಜಸವಾದ ಮಾಹಿತಿಯನ್ನು ಮತ್ತು ದಾಖಲಾತಿಗಳನ್ನು ನೀಡಿರುವುದಿಲ್ಲ ಮತ್ತು ಸದರಿ ಔಷದಿಗಳು ದಾಸ್ತಾನು ರಿಜಿಸ್ಟರ್‌ನಲ್ಲಿಯೂ ಸಹ ನಮೂದು ಇಲ್ಲದೆ ಇರುವುದು ಕಂಡು ಬಂದಿದ್ದು, ಸದರಿ ಔಷಧಿಗಳ ಮೇಲೆ Not For Sale ಎಂದು ನಮೂದು ಇರುವುದಿಲ್ಲ ಎಲ್ಲಾ ಔಷದಿಗಳ ಮೇಲೆ ಎಂ.ಆರ್.ಪಿ ನಮೂದು ಇದ್ದು, ಇದು ಕಾನೂನು ಬಾಹಿರವಾಗಿರುವುದು ಕಂಡು ಬಂದಿರುತ್ತದೆ. ಹಾಗೂ ಈ ಬಗ್ಗೆ ಆಸ್ಪತ್ರೆಯ
ಫಾರ್ಮಸಿಸ್ಟ್‌ಗಳು ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ.
District Meggan Teaching Hospital ಸದರಿ ಔಷದಿಗಳ ಅಂದಾಜು ಮೌಲ್ಯ ಸುಮಾರು 3.5 ಲಕ್ಷಗಳಾಗುತ್ತದೆ. ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದು ಮುಂದಿನ ತನಿಖೆ
ಕೈಗೊಳ್ಳಲಾಗುತ್ತದೆ.