MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ 2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರುವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಜ.03 ಮತ್ತು 04 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ರವೀಂದ್ರನಗರ, ವಿನಾಯಕನಗರ, ಹನುಮಂತನಗರ, ಗಾಂಧಿನಗರ, ಸವಳಂಗರಸ್ತೆ, ರಾಜೇಂದ್ರ ನಗರ, ವೆಂಕಟೇಶನಗರ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Bike Accident ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ. ಪೊಲೀಸ್ ಸಿಬ್ಬಂದಿಯಿಂದಲೇ ಸವಾರನಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ವ್ಯವಸ್ಥೆ.
Bike Accident ಶಿವಮೊಗ್ಗ ಜಿಲ್ಲೆಯ ಸಾಗರದ ಕೆಎಸ್ ಆರ್ ಟಿ ಸಿ ಡಿಪೋ ಮುಂಭಾಗದಲ್ಲಿ ಬೈಕ್ ಸವಾರನೊಬ್ಬ ಪೋಲಿಸ್ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಪೋಲಿಸ್ ಜೀಪ್ನಲ್ಲಿ ಇದ್ದ ಹೆಡ್ ಕಾನ್ಸ್ಟೆಬಲ್ ಶ್ರೀದರ್ ಮತ್ತು ಚಾಲಕ ಮೇಘರಾಜ್ ರಿಂದ ಬೈಕ್ ಸವಾರನ ರಕ್ಷಣೆ ಮಾಡಲಾಗಿದೆ.
ಬೈಕ್ ಸವಾರರನಿಗೆ ಗಾಯಗಳಾಗಿದ್ದು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
Karnataka Rajyotsava ಕನ್ನಡಿಗರ ಹೆಮ್ಮೆ ಮತ್ತು ಭಾಷಾ ಪ್ರೇಮ ಉಳಿಸುವಲ್ಲಿ ಹೋರಾಟ ಮಾಡಿದ್ದೇವೆ- ತಾಯ್ನಾಡು ರಾಘವೇಂದ್ರ.
Karnataka Rajyotsava ಕನ್ನಡ ನಾಡು, ನುಡಿ, ಗಡಿ ವಿಷಯದಲ್ಲಿ ತೊಂದರೆಗಳು ಎದುರಾದಾಗ ಪ್ರತಿಯೊಬ್ಬ ಕನ್ನಡಿಗರು ಜಾತಿ,ಮತಗಳ ತೊರೆದು ಒಗ್ಗಟ್ಟಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಸಂಸ್ಥಾಪಕ ಅಧ್ಯಕ್ಷ ತಾಯ್ನಾಡು ರಾಘವೇಂದ್ರ ಕರೆ ನೀಡಿದರು.
ಸೊರಬ ತಾಲೂಕಿನ ಬಾಡದ ಬೈಲು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಆಚರಿಸಲಾಗುತ್ತದೆ, ಇದು ರಾಜ್ಯದ ಸ್ಥಾಪನೆಯ ದಿನವಾಗಿದೆ, 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಪುನರ್‌ವಿಂಗಡಣೆಯ ನಂತರ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ರಚಿಸಲಾಗಿದ್ದು ಆದರೆ ಶಾಶ್ವತ ಕನ್ನಡ ಹೃದಯದಲ್ಲಿರಲು ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದರು.
ನಮ್ಮ ಕರವೇ ಗಜ ಸೇನೆ ಸಂಘಟನೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ರಾಜ್ಯದ ಏಕೀಕರಣ ಮತ್ತು ಅಭಿವೃದ್ಧಿಗೆ ಅನೇಕ ಹೋರಾಟಗಳನ್ನು ಮಾಡಿದೆ. ಕನ್ನಡಿಗರ ಹೆಮ್ಮೆ ಮತ್ತು ಭಾಷಾ ಪ್ರೇಮವನ್ನು ಉಳಿಸುವಲ್ಲಿ ಹೋರಾಟವನ್ನು ಮಾಡಿದ್ದೇವೆ ಎಂದರು.
Karnataka Rajyotsava ರಾಜ್ಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಸಿದ್ದೇವೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಪ್ರೋತ್ಸಾಹಿಸುವ ಹೋರಾಟ ಮಾಡಿದ್ದೇವೆ. ನಮ್ಮ ಕರವೇ ಗಜ ಸೇನೆ ಸಂಘಟನೆ ವತಿಯಿಂದ ಕೋವಿಡ್ ಅಂತ ಸಮಯದಲ್ಲಿ ಉಚಿತ 20 ಅಂಬುಲೆನ್ಸ್ ಸೇವೆಗಳನ್ನು ನೀಡಿದ್ದೇವೆ. ರಾಜ್ಯದಲ್ಲಿ 3000 ಸಾವಿರ ವಿವಿಧ ಕಂಪನಿಗಳ ಒಡಂಬಡಿಕೆಯೊಂದಿಗೆ ಕಿದ್ವಾಯಿ, ನಿಮಾನ್ಸ್ ಸೇರಿದಂತೆ ಕೆಲವು ಆಸ್ಪತ್ರೆಗಳಿಗೂ ಸಹ ಉಚಿತ ಸೇವೆಯನ್ನು ನೀಡುತ್ತಿದ್ದೇವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಮ್ಮ ಕರವೇ ಗಜ ಸೇನೆ ವತಿಯಿಂದ ಸಂತೋಷ್ ಗುರೂಜೀ ರವರ ಮಾರ್ಗದರ್ಶನದಲ್ಲಿ ನಡೆದ ಡಿಂಡಿಮ ಉತ್ಸವದಲ್ಲಿ 96 ನಿಮಿಷದಲ್ಲಿ 3000 ಜನರೊಂದಿಗೆ ಬಾರಿಸು ಕನ್ನಡ ಡಿಂಡಿಮ ಹಾಡಿಗೆ ಗಿನ್ನಿಸ್ ದಾಖಲೆ ನೋಬೆಲ್ ಪ್ರಶಸ್ತಿಯು ಸಹ ಬಂದಿದೆ. ನೊಂದವರ ನೆರವಿಗೆ ಬಂದಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. ಕನ್ನಡಿಗರ ಮೇಲೆ ಅನ್ಯ ಅನ್ಯ ಬಾಷಿಕ ರಿಂದ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದ್ದೇವೆ. ಹೀಗೆ ಕನ್ನಡ ನಾಡಿನಲ್ಲಿ ಕನ್ನಡಿಗರ ಸೇವೆಗೆ ಹಗಲಿರುಳು ನಮ್ಮ ಸಂಘಟನೆ ಸೆಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರವೇ ಗಜ ಸೇನೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಉಚಿತ ಪೆನ್ಸಿಲ್ ಪೆನ್ನುಗಳನ್ನು ನೀಡಲಾಯಿತು ಹಾಗೂ ಊರಿನ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕ ಡಾ. ಎಚ್.ವಿ. ಜ್ಞಾನೇಶ್ ನೆರವೇರಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ರಾಜ್ಯ ಕರವೇ ಕರವೇ ಗಜ ಸೇನೆ ಕಾರ್ಮಿಕ ಘಟಕದ ಅಧ್ಯಕ್ಷ ಕೇಶವ ಮೂರ್ತಿ ಪೆಟ್ಕರ್, ಕಾನೂನು ಘಟಕದ ಅಧ್ಯಕ್ಷ, ಜಗದೀಶ್ ಗೌಡ, ರಾಜ್ಯ ಕರವೇ ಗಜ ಸೇನೆ ಕಾರ್ಯದರ್ಶಿ ಎಚ್. ಆರ್. ತೀರ್ಥೇಶ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ, ತಾಲೂಕು ಗಜ ಸೇನೆ ಅಧ್ಯಕ್ಷ ಅಂಕಿತ್ ಗೌಡ, ಡಾ. ಪ್ರಭು ಕೆ. ಸಾಹುಕಾರ್, ಡಾ. ವಾಜಿದ್, ಕರವೇ ಗಜ ಸೇನೆ ಬಾಡದ ಬೈಲು ಅಧ್ಯಕ್ಷ. ಎಂ. ಲೋಕೇಶ್ ಸೇರಿದಂತೆ ಪ್ರಮುಖರಿದ್ದರು.
Shimoga News ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾಗಿ ಎಸ್.ಪಿ.ಶೇಷಾದ್ರಿ ಆಯ್ಕೆ.
Shimoga News ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೆಶಕರಾಗಿ ಅವಿರೋಧವಾಗಿ ಆಯ್ಕೆಯಾದ ನಮ್ಮ ಸಂಘದ ನಿರ್ದೇಶಕರೂ ಹಾಗೂ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಛೇರ್ಮನ್ ಆದಂತಹ ಶ್ರೀ.ಎಸ್.ಪಿ. ಶೇಷಾದ್ರಿ ಯವರನ್ನು ಶಿವಮೊಗ್ಗ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ.ಎಸ್.ಕೆ.ಮರಿಯಪ್ಪನವರು, ಸನ್ಮಾಸಿದರು.
Shimoga News ಈ ಸಂದರ್ಭದಲ್ಲಿ ಸೊಸೈಟಿಯ ಖಜಾಂಚಿಯಾದ ಶ್ರೀ.ಕೆ.ರಂಗನಾಥ್, ನಿರ್ದೇಶಕರಾದ ಶ್ರೀ.ಹೆಚ್.ಬಿ.ನಟರಾಜಶಾಸ್ತ್ರಿ, ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Department of Soldiers Welfare and Rehabilitation ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.
Department of Soldiers Welfare and Rehabilitation 2025-26ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿ:15/01/2026 ರವರೆಗೆ ವಿಸ್ತರಿಸಲಾಗಿದ್ದು, ಕೇಂದ್ರೀಯ ಸೈನಿಕ ಮಂಡಳಿ ಮತ್ತು ಇತರೆ ಸರ್ಕಾರಿ ಮೂಲಗಳಿಂದ ಯಾವುದೇ ಶಿಷ್ಯವೇತನವನ್ನು ಪಡೆಯದಿರುವ ಮಾಜಿ ಸೈನಿಕರ ಮಕ್ಕಳಿಗೆ ಅರ್ಜಿಯನ್ನು ಸಲ್ಲಿಸಬಹುದುದಾಗಿರುತ್ತದೆ.
Department of Soldiers Welfare and Rehabilitation ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯಲ್ಲಿ ಶುಲ್ಕ ರಹಿತ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಕೊನೆಯ ಜ. 15 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಗೆ ಸಲ್ಲಿಸುವಂತೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು
Inner Wheel Club of Shimoga ವಿದ್ಯಾರ್ಥಿಗಳು ಗುರುಹಿರಿಯರೊಂದಿಗೆಗೌರವದಿಂದ ನಡೆದುಕೊಳ್ಳಬೇಕು- ವಾಣಿ ಪ್ರವೀಣ್
Inner Wheel Club of Shimoga ವಿದ್ಯಾರ್ಥಿಗಳು ಗುರು ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಕ್ಲಬ್ ಮಾಜಿ ಅಧ್ಯಕ್ಷೆ ವಾಣಿ ಪ್ರವೀಣ್ ಹೇಳಿದರು.
ಸರ್ವೋದಯ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಿರಂತರ ಪರಿಶ್ರಮ ವಹಿಸಿ ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕಿರುತೆರೆ ನಟ, ರಂಗಭೂಮಿ ಕಲಾವಿದ ಚಂದ್ರಶೇಖರ ಶಾಸ್ತ್ರಿ ಮಾತನಾಡಿ, ಬಡತನವನ್ನು ಮೆಟ್ಟಿ ನಿಲ್ಲಬಹುದಾದ ಶಕ್ತಿಯನ್ನು ನೀಡಬಹುದಾದ ಏಕೈಕ ಮಾರ್ಗವೆಂದರೆ ಅದು ಶಿಕ್ಷಣ ಮಾತ್ರ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಖಜಾಂಚಿ ಚಂದ್ರಹಾಸ್ ಪಿ.ರಾಯ್ಕರ್ ಸಮಾರಂಭದ ಸಮಾರೋಪ ಭಾಷಣ ನೆರವೇರಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಬಹಳ ಮುಖ್ಯವಾಗುತ್ತವೆ ಎಂದರು.
Inner Wheel Club of Shimoga ಸರ್ವೋದಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ.ಮಧು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಲಭ್ಯವಾಗುವ ಸ್ಪರ್ಧಾತ್ಮಕ ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಿರುತೆರೆ ನಟ, ರಂಗಭೂಮಿ ಕಲಾವಿದ ಚಂದ್ರಶೇಖರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಪಿ.ಜಿ.ರವಿಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಅಕ್ಷತಾ ಉಪಸ್ಥಿತರಿದ್ದರು.
Sport of athletics ರಾಷ್ಟ್ರೀಯ ಅಥ್ಲೆಟಿಕ್ ಸ್ಪರ್ಧೆಗೆ ಶಿವಮೊಗ್ಗದ ಎಸ್.ಆಕಾಶ್ ಆಯ್ಕೆ.
Sport of athletics ಮಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಯೂನಿ ವರ್ಸಿಟಿ, ನ್ಯಾಷನಲ್ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯ 400 ಮೀ. ಮತ್ತು 4×400 ಅಥ್ಲೆಟಿಕ್ಸ್ ರಿಲೆಯಲ್ಲಿ ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಎಸ್. ಆಕಾಶ್ ಅವರು ಆಯ್ಕೆಯಾಗಿದ್ದಾರೆ.
ಈ ಪ್ರತಿಭಾನ್ವಿತ ನಗರದ ಗಾಂಧಿಬಜಾರಿನ ಶ್ರೀ ಕಾಳಿಕಾಪರಮೇಶ್ವರಿ ಸೊಸೈಟಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಎ. ಸತೀಶ್ ಆಚಾರ್ ಮತ್ತು ಸುನಿತಾ ದಂಪತಿಗಳ ಪುತ್ರರಾಗಿದ್ದಾರೆ. ಇವರು ನಾಗಾರ್ಜುನ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ
Shimoga News ಜನವರಿ 3 ರಂದು ಹಿರಿಯ ಸಾಧಕರಾದ ಬಿ.ಸ್ವಾಮಿರಾವ್, ಪ್ರೊ.ಪಂಚಾಕ್ಷರಿ ಮುಂತಾದವರಿಗೆ ಗೌರವ ಸನ್ಮಾನ.
Shimoga News ವಿಕಾಸ ರಂಗದ ಸಂಸ್ಥಾಪಕರಾದ ದಿ. ಕೆ.ಸಿ.ಪ್ರಭಾಕರ್ ರವರ ಸ್ಮರಣಾರ್ಥ ಜನವರಿ 3ರ ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಹಿರಿಯ ಸಾದಕರಿಗೆ ಗೌರವಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಸಮಾಜವಾದ ಸಂತ ನಿಷ್ಟಾವಂತ ರಾಜಕಾರಿಣಿ, ಹೊಸನಗರದ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿ.ಸ್ವಾಮಿರಾವ್, ಕುವೆಂಪು ರವರ ನೆಚ್ಚಿನ ಶಿಷ್ಯ, ಕಮಲಾ ನೆಹರೂ ಕಾಲೇಜಿನ ಮಾಜಿ ಪ್ರಾಚಾರ್ಯರು ಪ್ರೋ. ಎಸ್.ಪಂಚಾಕ್ಷರಿ, ಬಡವರ-ರೈತರ ಬಂಧು ಡಾ.ಚಿಕ್ಕಸ್ವಾಮಿ, ಪ್ರಖ್ಯಾತ ಹಿರಿಯ ನ್ಯಾಯವಾದಿ ಶ್ರೀ ಬಿ.ಎನ್.ಕೃಷ್ಣಮೂರ್ತಿ ಹೀಗೆ ವಿವಿದ ಕಾಯಕ ಜೀವಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಶ್ರೀಮತಿ ಹೆಚ್.ವಿಶಾಲಾಕ್ಷಿಯವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
Shimoga News ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೋ.ಹೆಚ್.ಆರ್.ಶಂಕರನಾರಾಯಣ ಶಾಸ್ರ್ತಿ ಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ಅಂಕಣ ಬರಹಗಾರರಾದ ಶ್ರೀ ಸುಂದರ್ ರಾಜ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Astronomy ಮಕ್ಕಳಲ್ಲಿ ಖಗೋಲದ ಬಗ್ಗೆ ಆಸಕ್ತಿ ಮೂಡಿಸಲು ಆಕಾಶ ವೀಕ್ಷಣೆಗೆ ಪ್ರೋತ್ಸಾಹ- ಡಾ.ಪರಮೇಶ್ವರ ಶಿಗ್ಗಾವ್
Astronomy ಆಕಾಶದಲ್ಲಿ ವೈವಿಧ್ಯ ಸಂಗತಿಗಳ ಅಧ್ಯಯನ ನಡೆಸುವುದು ವಿಶೇಷ ಹವ್ಯಾಸ ಎಂದು ಐಎಂಎ ತಾರಾವೀಕ್ಷಕರ ಸಂಘದ ಅಧ್ಯಕ್ಷ, ಹವ್ಯಾಸಿ ಖಗೋಳ ಛಾಯಾಗ್ರಹಕ ಡಾ. ಪರಮೇಶ್ವರ್ ಶಿಗ್ಗಾವ್ ಹೇಳಿದರು.
ರಾಜೇಂದ್ರ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಮತ್ತು ಇತರ ಶಾಲಾ ಮಕ್ಕಳಿಗೆ ಆಕಾಶ ವೀಕ್ಷಣೆ, ವಿವಿಧ ಗ್ರಹಗಳು, ಚಂದ್ರನ ಬಗ್ಗೆ ಮಾಹಿತಿ ನೀಡುತ್ತೇವೆ. ಟೆಲಿಸ್ಕೋಪ್ ಮೂಲಕ ಆಕಾಶ ಕಾಯಗಳನ್ನು ತೋರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮಕ್ಕಳಲ್ಲಿ ಖಗೋಳಶಾಸ್ತ್ರದ ಬಗ್ಗೆ, ನಕ್ಷತ್ರ, ನಕ್ಷತ್ರ ಪುಂಜ, ಗ್ರಹಗಳು, ಸೂರ್ಯ ಚಂದ್ರರ ಬಗ್ಗೆ ಮಾಹಿತಿ ಹೆಚ್ಚಾಗಿ ಕುತೂಹಲವು ಮೂಡಲು ಸಹಾಯಕ ಆಗುತ್ತದೆ. ವಿದ್ಯಾರ್ಥಿಗಳು ಖಗೋಳಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯಬಹುದು ಎಂದರು.
Astronomy ನಕ್ಷತ್ರ ವೀಕ್ಷಣೆ ಮತ್ತು ಚಂದ್ರನ ಕುಳಿಗಳು, ವಿವಿಧ ಗ್ರಹಗಳನ್ನು ದೂರದರ್ಶಕ ಯಂತ್ರದ ಮೂಲಕ ವೀಕ್ಷಣೆ ಮಾಡಲಾಯಿತು. ರೋಟರಿ ಪೂರ್ವದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಮಾಹಿತಿ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಕಿಶೋರಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಧನಂಜಯ್ ವಂದಿಸಿದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಅರುಣ್ ಮುಂತಾದವರು ಹಾಜರಿದ್ದರು.
Shimoga News ನೀರಿನ ಕಂದಾಯ,ಕರ ವಸೂಲಿ ಬಾಕಿ: ಪಾವತಿಗೆ ನಗರಪಾಲಿಕೆಯಿಂದ ವಿಶೇಷ ಕೌಂಟರ್ ಆರಂಭ.
Shimoga News ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2025-26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ಕೆಲವು ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.
Shimoga News ಅಶೋಕನಗರ ಪೊಲೀಸ್ ಕ್ವಾಟ್ರಸ್ ಹಾಲಿನ ಡೈರಿ ಹತ್ತಿರ, ಗಾಂಧೀ ಬಜಾರ್ ಬಸವಣ್ಣ ದೇವಸ್ಥಾನದ ಆವರಣ, ಭಾರತೀಯ ಸಭಾಭವನ ಎದುರು ಆರ್.ಎಂ.ಎಲ್. ನಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಪಂಪಾನಗರ ಈ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
