Thursday, August 13, 2026
Thursday, August 13, 2026
Home Blog Page 241

Shimoga News ಶಿವಮೊಗ್ಗದ ಮಳಿಗೆ ಬಾಡಿಗೆದಾರರ ಸಂಘದಿಂದ ಧನ್ಯವಾದ ‌ಅರ್ಪಣೆ.

0

Shimoga News ಶಿವಮೊಗ್ಗ ನಗರದ ಶಿವಪ್ಪನಾಯಕ ಮಾರುಕಟ್ಟೆ ಮಳಿಗೆ ಬಾಡಿಗೆದಾರರಿಗೆ ತಾಲೂಕು ಆಫಿಸ್ ರಸ್ತೆ ಮತ್ತು ಎಲ್‌ಎಲ್‌ಆರ್ ರಸ್ತೆಯಲ್ಲಿ ಎರಡು ವರ್ಷದ ಹಿಂದೆ ಹೊಸ ಕಟ್ಟಡದಲ್ಲಿ ಸಿಗುವ ಜಾಗದ ಕನಸು ಈಗ ನನಸಾಗಿದ್ದು, ಇದಕ್ಕೆ ಕಾರಣರಾದ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಹಾಗೂ ಈ ಹಿಂದೆ ಇದಕ್ಕಾಗಿ ಶ್ರಮಿಸಿದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಗಣ್ಯರಿಗೆ ಶಿವಪ್ಪನಾಯಕ ಮಾರುಕಟ್ಟೆ ಮಳಿಗೆ ಬಾಡಿಗೆದಾರರ ಸಂಘದ ಸಹ ಕಾರ್ಯದರ್ಶಿ ಚೂಡಾಮಣಿ ಕೃತಜ್ಞತೆ ಸಲ್ಲಿಸಿದ್ದಾರೆ.

Guru Basava Mahaswamiji ಪರಮ ತಪಸ್ವಿ ಶ್ರೀ ಗುರುಬಸವ ಮಹಾಸ್ವಾಮೀಜಿ

0

Guru Basava Mahaswamiji ಸಕಲರಿಗೆ  ಲೇಸನೇ ಬಯಸುವ  ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ  ನುಡಿ ಸಂಪತ್ತಾದ  ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ   ಹೊತ್ತುಕೊಂಡು  ಕರ್ನಾಟಕದ ನಾಲ್ಕು  ಮೂಲೆಗಳಿಗೆ ಗುಂಪು ಗುಂಪಾಗಿ ಹೊರಟರು. ಅಕ್ಕನಾಗಮ್ಮ ಮತ್ತು  ಚನ್ನ ಬಸವಣ್ಣನವರ ಜೊತೆಗೆ ಕೆಲ  ಶರಣ ಶರಣೆಯರು ಉಳವಿಯ ಕಡೆ  ಸಾಗಿದರೆ, ಮತ್ತೆ ಕೆಲವರು ಆಂಧ್ರ ನಾಡಿನ ಕಡೆ ಹೊರಟರು. ಇನ್ನು  ಕೆಲವರು ದಕ್ಷಿಣದ ಚಿಕ್ಕಮಗಳೂರು ಸಕಲೇಶಪುರದ ಕಡೆ ಸಾಗಿದರು. ಮತ್ತೆ ಕೆಲವರು  ತಮಿಳುನಾಡಿನ  ಗಡಿ ಭಾಗದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟನಾಡಿನ ಕಡೆಗೆ  ನಡೆದರು. 
ಈ ರೀತಿ ನಾಡಿನ ನಾನಾ ಕಡೆ ಚದುರಿ ಹೋದ ಶರಣರಲ್ಲಿ ಒಬ್ಬರಾದ ಗಂಗಾಧರಯ್ಯನವರು  ದಕ್ಷಿಣದ ಕಡೆ ಸಾಗಿ ಬಂದು ಈಗಿನ Guru Basava Mahaswamiji ಶಿವಮೊಗ್ಗ ನಗರಕ್ಕೆ ಸಮೀಪವಿರುವ  ಯಲವಟ್ಟಿ ಗ್ರಾಮದ ಪಕ್ಕದಲ್ಲಿರುವ ಹಸಿರು ಪರಿಸರದ ನಡುವೆ ತಲೆ ಎತ್ತಿ ನಿಂತಿರುವ ಚಿಕ್ಕ ಬೆಟ್ಟದ ಮೇಲೆ ಇದ್ದ ಗವಿಯೊಂದರಲ್ಲಿ ನೆಲೆ ನಿಂತು ಅನುಷ್ಠಾನ  ಮಾಡುತ್ತಿದ್ದರು. ಅವರು ಪೂಜೆಯನ್ನು  ಮಾಡುತ್ತಿದ್ದ ಸಮಯದಲ್ಲಿ  ಎರಡು   ಪುನುಗಿನ ಬೆಕ್ಕುಗಳು  ಆ ಬೆಟ್ಟದ  ಗವಿಯಲ್ಲಿ ದ್ದವು.  ಅವುಗಳಲ್ಲಿ  ಒಂದು ಗಂಟೆ ಬಾರಿಸುವ  ಮತ್ತೊಂದು ಜಾಗಟೆ ಸದ್ದು ಮಾಡುತ್ತಾ ಅಲ್ಲಿ  ಅನುಷ್ಠಾನ ಮಾಡುತ್ತಿದ್ದ ಗುರುಗಳು   ಮಮತೆ ಯಿಂದ ನೀಡುತ್ತಿದ್ದ  ಹಾಲಿನ  ಪ್ರಸಾದವನ್ನು  ಸೇವಿಸುತ್ತಿದ್ದವು ಎಂಬುದು ಅಲ್ಲಿಯ ಗ್ರಾಮದ ಹಿರಿಯರು  ತಲೆ ತಲಾಂತರದಿಂದ ಕೇಳಿ ಬಂದಿದ್ದ  ಕಥೆಯಾಗಿತ್ತು. ಆದುದರಿಂದ ಗುರುಗಳು ಇದ್ದ  ಮಠ ಕಲ್ಲಿನ ಗವಿಮಠವಾಗಿದ್ದುದು ಬೆಕ್ಕಿನಕಲ್ಮಠ ಎಂದು  ಹೆಸರಾಯಿತು.
ಇದು ಗ್ರಾಮದವರು ಹೇಳಿ ಕೇಳಿ ಬಂದ ಜನಜನಿತ ಕಥೆಯಾದರೆ, ಇತಿಹಾಸ ಸಂಶೋಧಕರು ಮತ್ತೊಂದು ರೀತಿಯಲ್ಲಿ  ತಿಳಿಸುತ್ತಾರೆ. ಬಹುಪೂರ್ವದಲ್ಲಿ ಬೌದ್ಧ ಭಿಕ್ಷುಗಳು ಇಲ್ಲಿ ಧ್ಯಾನ ಮಾಡುತ್ತಿದ್ದದ್ದು ಇದಾಗಿತ್ತು.  ಆ  ಬೌದ್ಧ ಭಿಕ್ಷುಗಳು ಇದ್ದ ಸ್ಥಳ  ಇದಾಗಿದ್ದು ಗ್ರಾಮಸ್ಥರ ಮಾತಿನಲ್ಲಿ ಭಿಕ್ಷುಗಳು ಇದ್ದ ಮಠ ಭಿಕ್ಷು ಬಿಕ್ಕು ಎಂದಾಗಿ ಕಡೆಗೆ …ಕಡೆಗೆ ಬಿಕ್ಕುಗಳ ಮಠ, ಬೆಕ್ಕಿನ ಕಲ್ಮಠ ಆಗಿ ಅಪಭ್ರಂಶವಾಗಿರಬಹುದು.

Kuvempu ಸರ್ವೋದಯ ಸಮಾನತೆ ಕುವೆಂಪು ಅವರ ಸಂದೇಶ ಸಾರ್ವಕಾಲಿಕ- ಕಡಿದಾಳ್ ಪ್ರಕಾಶ್

0

Kuvempu ಶಿವಮೊಗ್ಗ ಎಲ್ಲಾ ಸಮಾಜಗಳಿಗೆ ಹಾಗೂ ಎಲ್ಲಾ ಕಾಲಕ್ಕೂ ಸಲ್ಲುವ ವಿಶ್ವಮಾನ ಸಂದೇಶವನ್ನು ಕುವೆಂಪು ಅವರು ನೀಡಿದ್ದಾರೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಹೇಳಿದ್ದಾರೆ.

ಶಿವಮೊಗ್ಗ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನೇಟಿವ್‌ ಥಿಯೇಟರ್‌ ನ ʻಬಾ ಇಲ್ಲಿ ಸಂಭವಿಸುʼ ವಿಭಿನ್ನ ರಂಗ ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುವೆಂಪು ಅವರ 121ನೇ ಜನ್ಮದಿನ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ಈ ಪ್ರದರ್ಶನ ಆಯೋಜನೆ ಮಾಡಲಾಗಿತ್ತು.

ನಮಗೆ ಬೇಕಾದುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ, ಈ ಪಥ ಅಲ್ಲ ವಿಶ್ವಪಥ. ನಮಗೆ ಬೇಕಾದದ್ದು ಸರ್ವರ ಉದಯ. ಸರ್ವೋದಯ ಎಂದು ಕುವೆಂಪು ಹೇಳಿದ್ದಾರೆ. ಇದು ವರ್ತಮಾನಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಚಿಂತನೆಯಾಗಿದೆ. ಇಂಥ ಆಶಯಗಳನ್ನು ಸಮಾಜದ ಎಲ್ಲಾ ವರ್ಗಗಳಿಗೂ ಮುಟ್ಟಿಸುವ ಪ್ರಯತ್ನ ನಿರಂತರವಾಗಬೇಕು ಎಂದರು.

Kuvempu ಕುವೆಂಪು ಅವರು ಎಲ್ಲಾ ಕಾಲಕ್ಕೂ ಎಲ್ಲಾ ಸಮಾಜಕ್ಕೂ ಪ್ರಸ್ತುತವಾಗುವ ಸಾಹಿತಿ. ಈ ನಿಟ್ಟಿನಲ್ಲಿ ಕುವೆಂಪು ಅವರ ಸಾಹಿತ್ಯ, ನಾಟಕ, ವಿಚಾರ ಸಾಹಿತ್ಯವನ್ನು ಯುವಜನತೆಗೆ ಮುಟ್ಟಿಸುವ ಪ್ರಯತ್ನಗಳು ಎಲ್ಲೇ ನಡೆಯುವ ಚಟುವಟಿಕೆಗಳನ್ನು ಪ್ರತಿಷ್ಠಾನ ಬೆಂಬಲಿಸುತ್ತದೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ರಂಗಾಯಣ ಸಹಕಾರದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿತ್ತು. ʻಬಾ ಇಲ್ಲಿ ಸಂಭವಿಸುʼ ಕುವೆಂಪು ಕೃತಿಗಳಲ್ಲಿನ ಪ್ರಮುಖ ಪಾತ್ರಗಳ ವಿಭಿನ್ನ ರಂಗಪ್ರಸ್ತುತಿಯನ್ನು ಪತ್ರಕರ್ತ ಆರ್‌.ಎಸ್.‌ ಹಾಲಸ್ವಾಮಿ ನಿರ್ದೇಶನ ಮಾಡಿದ್ದರು. ತೀರ್ಥಹಳ್ಳಿಯ ಶ್ರೀಪಾದ್‌ ಹಾಗೂ ಶಿವಕುಮಾರ್‌ ಅವರು ಸಂಗೀತ ನೀಡಿದ್ದರು.

ಶಂಕರ್‌ ಬೆಳಲಕಟ್ಟೆ ಅವರು ರಂಗ ಸಜ್ಜಿಕೆ ಹಾಗೂ ಬೆಳಕಿನ ವಿನ್ಯಾಸ ರೂಪಿಸಿದ್ದರು. ಡಾ. ನಾಗಭೂಷಣ್‌, ಡಾ. ಭಾರತೀ ದೇವಿ, ಡಾ. ಹರ್ಷಿತಾ, ಭಾಗ್ಯ ಎಂ.ಟಿ. ಮಲ್ಲಿಕಾರ್ಜುನ ತುರವನೂರು, ಕೀರ್ತನಾ, ನದಿ ಹೆಚ್‌.ಪಿ. ಪ್ರಮುಖ ಪಾತ್ರ ನಿರ್ವಹಿಸಿದ್ದರು.

District Health and Family Welfare Department Shimoga ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ.

0

District Health and Family Welfare Department Shimoga ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಬ್ಯಾಕೋಡು, ತುಮರಿ, ತಡಗಳಲೆ, ಕಾರ್ಗಲ್, ತಾಳಗುಪ್ಪ, ಇಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ & ಮೆರಿಟ್ ಆಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್ ಪದವೀಧರ ಅಭ್ಯರ್ಥಿಗಳ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಖಾಲಿ ಇರುವ ಬ್ಯಾಕೋಡು, ತುಮರಿ, ತಡಗಳಲೆ, ಕಾರ್ಗಲ್, ತಾಳಗುಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆದ್ಯತೆ ಮೇರೆಗೆ ನೇಮಕಾತಿ ಆದೇಶ ನೀಡಲಾಗುವುದು.

District Health and Family Welfare Department Shimoga ಆಸಕ್ತ ಅಭ್ಯರ್ಥಿಗಳು ಜ.056 ರಂದು ಬೆಳಿಗ್ಗೆ 11:00ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಬಿ.ಹೆಚ್ ರಸ್ತೆ ಶಿವಮೊಗ್ಗ ಇಲ್ಲಿ ತಮ್ಮ ವಿಧ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು ಹಾಗೂ ಇತ್ತೀಚಿನ ಎರಡು ಭಾವ ಚಿತ್ರಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂ:08182-222382 ಅನ್ನು ಸಂಪರ್ಕಿಸಬಹುದಾಗಿದೆ.

Narendra Modi ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ. ರಾಜ್ಯ ಸರ್ಕಾರದ ಕಾರ್ಯದರ್ಶಿ ,ಶ್ರೀಮತಿ ಶಾಲಿನಿ ರಜನೀಶ್ ಭಾಗವಹಿಸಿದ್ದ ಏಕೈಕ ಮಹಿಳೆ.

0

Narendra Modi ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ 2025 ನೇ ಡಿಸೆಂಬರ್ 26 ರಿಂದ 28 ರ ವರೆಗೆ ನವದೆಹಲಿಯಲ್ಲಿ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಡಾ. ಶಾಲಿನಿ ರಜನೀಶ್ ಅವರು ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಈ ಸಮ್ಮೇಳನವು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ಕುರಿತು ರಚನಾತ್ಮಕ ಮತ್ತು ನಿರಂತರ ಸಂವಾದದ ಮೂಲಕ ಕೇಂದ್ರ–ರಾಜ್ಯ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿತ್ತು.

ಸಹಕಾರಿ ಒಕ್ಕೂಟ ಪರಿಕಲ್ಪನೆಯ ಭಾಗವಾಗಿ, ಈ ಸಮ್ಮೇಳನವು ಕೇಂದ್ರ ಮತ್ತು ರಾಜ್ಯಗಳು ಸಹಕರಿಸುವ ಮಹತ್ವದ ವೇದಿಕೆಯಾಗಿದ್ದು, ದೇಶದ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸಮಗ್ರ ಭವಿಷ್ಯಕ್ಕಾಗಿ ಸುಸ್ಥಿರ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಏಕೀಕೃತ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

Narendra Modi ಈ ಸಮ್ಮೇಳನವು ‘ವಿಕಸಿತ ಭಾರತಕ್ಕಾಗಿ ಮಾನವ ಬಂಡವಾಳ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬೇಕಾದ ಅತ್ಯುತ್ತಮ ವಿಧಾನಗಳು ಮತ್ತು ತಂತ್ರಗಳನ್ನು ಪ್ರಸ್ತಾಪಿಸಿದೆ.

ಸಮ್ಮೇಳನದಲ್ಲಿ ಆರಂಭಿಕ ಬಾಲ್ಯ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳ ವಿಷಯಗಳ ಮೇಲೆ ವಿವರವಾದ ಚರ್ಚೆಗೆ ವಿಶೇಷ ಒತ್ತು ನೀಡಲಾಯಿತು. ಅಲ್ಲದೆ ‘ಆಡಳಿತದಲ್ಲಿ ತಂತ್ರಜ್ಞಾನ – ಅವಕಾಶಗಳು, ಅಪಾಯಗಳು ಮತ್ತು ತಗ್ಗಿಸುವಿಕೆ’, ಸ್ಮಾರ್ಟ್ ಪೂರೈಕೆ ಸರಪಳಿಗಳು, ‘ಒಂದು ರಾಜ್ಯ – ಒಂದು ವಿಶ್ವದರ್ಜೆಯ ಪ್ರವಾಸಿ ತಾಣ’, ಆತ್ಮನಿರ್ಭರ ಭಾರತ ಹಾಗೂ ಸ್ವದೇಶಿ ಚಿಂತನೆಗಳು ಸೇರಿದಂತೆ ಆರು ಮಹತ್ವದ ವಿಷಯಗಳನ್ನೂ ಕೇಂದ್ರೀಕರಿಸಲಾಗಿತ್ತು.

Visvesvaraya Iron and Steel Plant ಭದ್ರಾವತಿ ವಿಐಎಸ್ಎಲ್ ನಿವೃತ್ತರ ಕಲ್ಯಾಣ ಕೇಂದ್ರಕ್ಕೆ ನೂತನ ಅಧ್ಯಕ್ಷರಾಗಿ ಬಿ.ಜಿ. ರಾಮಲಿಂಗಯ್ಯ ಆಯ್ಕೆ

0

Visvesvaraya Iron and Steel Plant ಡಿಸೆಂಬರ್ 28 ,2025/ರಂದು ಭದ್ರಾವತಿ VISL ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ಚುನಾವಣೆ ನಡೆಯಿತು, ೨೯೦೯ ಸದಸ್ಯರಲ್ಲಿ ೯೮೭ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು, ೦೧.೦೧.೨೬ ರಂದು ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು,
೫ ವರ್ಷಗಳ ಅವಧಿಗೆ‌ ಈ ಸಮಿತಿಯು ಕಾರ್ಯ ನಿರ್ವಹಿಸುತ್ತದೆ.
ಫಲಿತಾಂಶ ಹೀಗಿದೆ..
೧. ಅಧ್ಯಕ್ಷ : ರಾಮಲಿಂಗಯ್ಯ ಬಿಜಿ
೨. ಉಪಾಧ್ಯಕ್ಷ : ಮಂಜುನಾಥ ಬಿ

೩.ಜನರಲ್ ಸೆಕ್ರೆಟರಿ: ಅಡವೀಶಯ್ಯ ಎಸ್
೪. ಕಾರ್ಯದರ್ಶಿ :ಹನುಮಂತ ರಾವ್ ಎಸ್
೫. ಕಾರ್ಯದರ್ಶಿ ;ಶ್ರೀನಿವಾಸ ಬಿ ಎನ್ (ಹೊಸದಾಗಿ ಆಯ್ಕೆಯಾದವರು)
೬. ಖಜಾಂಚಿ : ಕೆಂಪಯ್ಯ
ಸದಸ್ಯರು
೧. ಶಂಕರ್ ಜಿ
೨. ರವೀಂದ್ರ ರೆಡ್ಡಿ ಬಿ ಕೆ
೩. ಬೈರಪ್ಪ ಎಸ್ ಎಸ್
೪. ರಾಮಪ್ಪ ವಿ ಎಂ
ಹೊಸದಾಗಿ ಆಯ್ಕೆಯಾದ ಸದಸ್ಯರು
೧. ಚಂದ್ರ ಮೋಹನ್
೨. ನಂಜುಂಡೆ ಗೌಡ ಎಸ್ ಇ
೩. ಈಶ್ವರಪ್ಪ ಎ
೪. ರಾಜ
೫. ನರಸಿಂಹ ಚಾರ್ ಎಸ್

Madhu Bangarappa ಜನವರಿ 3 & 8 ರಿಂದ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗೆ ನಿರಂತರ ನೀರು ಹರಿಸಲಾಗುತ್ತದೆ- ಮಧು ಬಂಗಾರಪ್ಪ.

0

Madhu Bangarappa ಭದ್ರಾ ಜಲಾಶಯದಲ್ಲಿನ ನೀರನ್ನು ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತ ನಿರ್ಣಯ ಕೈಗೊಳ್ಳಲಾಯಿತು.

ಇಂದು ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅ‍ಧ್ಯಕ್ಷತೆ ವಹಿಸಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಮುಂದಿನ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ಅವಶ್ಯಕವಾಗಿರುವ ನೀರನ್ನು ಒದಗಿಸಲು ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವುದನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.

ಅಚ್ಚುಕಟ್ಟು ವ್ಯಾಪ್ತಿಯ ನಾಲೆ, ಕೆರೆಗಳಲ್ಲಿ ತುಂಬಿರುವ ಹೂಳನ್ನು ನರೇಗಾ ಯೋಜನೆಯಡಿ ತೆಗೆಯಿಸಬಹುದಾದರೂ ಪಟ್ಟಣ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿನ ನಾಲೆ, ಕೆರೆಗಳಲ್ಲಿನ ಹೂಳನ್ನು ತೆಗೆಯಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷೆಯಂತೆ ಸಕಾಲದಲ್ಲಿ ಜಲಾಶಯದಿಂದ ಹರಿಸುವ ನೀರು ನಿಗಧಿತ ಗುರಿ ತಲುಪುತ್ತಿಲ್ಲ. ಆದ್ದರಿಂದ ಪ್ರಾಧಿಕಾರದ ನೀರಾವರಿ ಇಂಜಿನಿಯರ್‌ರವರು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪ್ರಸ್ತಾವನೆಯನ್ನು ತಯಾರಿಸಿ ಕೂಡಲೇ ಸಲ್ಲಿಸಬೇಕು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರಲ್ಲಿ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

· ಜಲಾಶಯದ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿನ ಸಾಗುವಳಿದಾರರಿಗೆ ಹಾಗೂ ಹೊಸದಾಗಿ ತೋಟ ಮಾಡಿರುವ ಬೆಳೆಗಾರರಿಗೆ ಇಂದಿನಿಂದಲೇ ನೀರಿನ ಅಗತ್ಯವಿದೆ. ವಿಳಂಬವಾದಲ್ಲಿ ಲಕ್ಷಾಂತರ ಅಡಿಕೆ ಗಿಡಗಳು ನಾಶವಾಗುವ ಸಂಭವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರಿನ ಹರಿವನ್ನು ನಿಯಂತ್ರಿಸಿ, ನೀರನ್ನು ಒದಗಿಸಬಹುದಾದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು. -ಬಸವರಾಜಪ್ಪ, ರೈತ ಮುಖಂಡರು, ಶಿವಮೊಗ್ಗ.

Madhu Bangarappa ಗೋಂದಿ ಭಾಗದ ಕಾಲುವೆಗಳು ಎತ್ತರದ ಪ್ರದೇಶದಲ್ಲಿವೆ ಅಲ್ಲದೆ ಆ ಭಾಗದ ಕೆರೆ-ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಹರಿವು ಸಮರ್ಪಕವಾಗಿಲ್ಲದ ಕಾರಣ ಅಚ್ಚುಕಟ್ಟುದಾರರಿಗೆ ನೀರು ತಲುಪದಿರುವ ಬಗ್ಗೆ ಆಕ್ಷೇಪಣೆಗಳಿರುವುದನ್ನು ಗಮನಿಸಲಾಗಿದೆ. ಅಲ್ಲಿನ ಬೆಳೆಗಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸಕಾಲದಲ್ಲಿ ಒದಗಿಸಲು ಭದ್ರಾ ಇಂಜಿನಿಯರ್‌ರವರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದರು.

ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನಾಲೆಗಳ ದುರಸ್ತಿಗೆ ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದೆ. ಇನ್ನಷ್ಟು ಅನುದಾನದ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

· .ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಹಾಗೂ ಪ್ರಸ್ತುತ ಶಿಥಿಲಾವಸ್ತೆಯಲ್ಲಿರುವ ನಾಲೆ, ದಂಡೆಗಳ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಆರಂಭಿಸಿರುವುದು ರೈತರಲ್ಲಿ ಸಂತಸ ತಂದಿದೆ. ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು.

· ಎ.ಬಿ.ಕರಿಬಸಪ್ಪ, ರೈತರು.

ಸಭೆಯಲ್ಲಿ ಉಪಸ್ಥಿತರಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಅಂಶುಮಂತ್‌ಅವರು ಮಾತನಾಡಿ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಸಮೀಪದ ಸಾಗುವಳಿದಾರರಿಗೆ ನೀರು ದೊರೆಯುತ್ತಿರುವಂತೆಯೇ ದೂರದ ರೈತರ ಒಣಭೂಮಿಗೆ ನೀರು ಹರಿಸಬೇಕಾಗಿರುವುದು ಪ್ರಾಧಿಕಾರದ ಹೊಣೆಯಾಗಿದೆ. ನೈಸರ್ಗಿಕವಾಗಿ ದೊರೆಯುತ್ತಿರುವ ಅಮೂಲ್ಯ ಜಲವನ್ನು ಮಿತವಾಗಿ ಬಳಸಿಕೊಳ್ಳಬೇಕು. ಮಾನವೀಯ ನೆಲೆಯಲ್ಲಿ ಎಲ್ಲ ರೈತರ ಹಿತಸುಖ ಕಾಯುವ ನಿಟ್ಟಿನಲ್ಲಿ ಚಿಂತಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವ್ಯರ್ಥವಾಗಿ ಹರಿದು ಹೋಗುವಂತಾಗಬಾರದು. ನೀರಿನ ಮಿತಬಳಕೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಇರಬೇಕು. ಪ್ರಾಧಿಕಾರದ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಸಭೆಯಲ್ಲಿ ಶಾಸಕ ಎಸ್.ಎನ್.‌ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಆರ್.ಪ್ರಸನ್ನಕುಮಾರ್‌, ಅಭಿಯಂತರರಾದ ರವಿಕುಮಾರ್‌, ರವಿಚಂದ್ರ ಸೇರಿದಂತೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ನೀರಾವರಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.

Shimoga News ಮಾನ,ಅಭಿಮಾನ,ಸ್ವಾಭಿಮಾನ ಇರದ ಜೀವನ ವ್ಯರ್ಥ- ಟಿ.ಹೆಚ್.ಹಾಲೇಶಪ್ಪ.

0

Shimoga News ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ, ಮಹಾನಗರ ಪಾಲಿಕೆಯ ಆವರಣದಲ್ಲಿ 208 ನೇ ವರ್ಷದ ಭೀಮ ಕೋರೆಗಾವ್ ವಿಜಯೋತ್ಸವನ್ನು “ದಲಿತರ ಸಾಮಾಜಿಕ ಸಮಾನತೆ ದಿನ”ವನ್ನಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮೈಸೂರು ವಿಭಾಗೀಯ ಸಂಚಾಲಕರಾದ ಟಿ.ಹೆಚ್. ಹಾಲೇಶಪ್ಪನವರು ಮಾನ, ಅಭಿಮಾನ, ಸ್ವಾಭಿಮಾನ ಇರದ ಜೀವನ ಅನರ್ಥ. ಡಾ. ಬಿಆರ್ ಅಂಬೇಡ್ಕರ್ ಅವರ ಜಾಗೃತಿ ಹೋರಾಟ ನಮಗೆ ಬೆಳಕಾಗಲಿ ಎಂದು ತಿಳಿಸಿದರು. ಗೌತಮ ಬುದ್ಧರ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗಗಳು ನಮ್ಮೆಲ್ಲರ ಬದುಕನ್ನು ಉಜ್ವಲ ಗೊಳಿಸಲು ಹಾಗೂ ಸ್ವಾಭಿಮಾನದ ಭಾರತ ರಾಷ್ಟ್ರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವೇ ಈ ದೇಶದ ಧರ್ಮ ಗ್ರಂಥ ತಿಳಿಸಿದರು.
Shimoga News ಪರಮಪೂಜ್ಯ ಮ. ನಿ. ಪ್ರ. ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಚಿತ್ರರಗಿ ಶ್ರೀ ವಿಜಯಮಾಂತೇಶ್ವರ ಸಿದ್ದಯ್ಯನ ಕೋಟೆ ಶಾಖಾ ಮಠ, ಮೊಳಕಾಲ್ಮೂರು, ಚಿತ್ರದುರ್ಗ ಜಿಲ್ಲೆ ಇವರು ಸಾನಿಧ್ಯ ವಹಿಸಿದ್ದರು.
 ವಿಜಯೋತ್ಸವದ ಸಮಾರಂಭದಲ್ಲಿ ಚಲವಾದಿ ಮಹಾಸಭಾ ಹಿರಿಯರಾದ ಸಾವಕ್ಕನವರು, ಕದಸಂಸ ಅಂಬೇಡ್ಕರ್ ವಾದ ಜಿಲ್ಲಾ ಹಾಗೂ ತಾಲೂಕು ಮುಖಂಡರಾದ ಶೇಷಪ್ಪ ಹುಣಸೊಡು, ಎಂ ಆರ್ ಶಿವಕುಮಾರ್ ಆಸ್ತಿ, ಹಕ್ಕಿ ಪಿಕ್ಕಿ ಸಮುದಾಯದ ಜಗ್ಗು, ಆನಂದಪ್ಪ.ಎ.ಡಿ, ಸೂಗೂರು ಪರಮೇಶ್, ರಂಗಸ್ವಾಮಿ.ಎಲ್, ಕಲ್ಲಿಹಾಳ್ ಹನುಮಂತಪ್ಪ ಮಹಿಳಾ ಮುಖಂಡ ಶ್ರೀಮತಿ ಮೀನೂ, ಮತ್ತಿತರು ಭಾಗವಹಿಸಿದ್ದರು.

S. N. Channabasappa ಜಕಣಾಚಾರಿಯಂತಹ ಮಹಾಶಿಲ್ಪಿಯ ಜನ್ಮನೀಡಿದ ಅವರ ತಾಯಿಗೆ ನಮ್ಮ ನಮನಗಳು- ಎಸ್.ಎನ್.ಚನ್ನಬಸಪ್ಪ.

0

S. N. Channabasappa ಅಮರಶಿಲ್ಪಿ ಜಕಣಾಚಾರಿಗಳು ಭಗವಂತ ಈ ನಾಡಿಗೆ ನೀಡಿದ ವರವಾಗಿದ್ದು, ಬೇಲೂರು, ಹಳೇಬೀಡಿನ ಶಿಲ್ಪಕಲೆಗಳು ಜಗತ್ಪ್ರಸಿದ್ದಿಯಾಗಲು ಇವರೇ ಕಾರಣಕರ್ತರು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಲ್ಪಕಲೆಯೇ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಶಿಲ್ಪಕಲೆ ಭಗವಂತ ನಮಗೆ ನೀಡಿದ ವರ. ಜಕಣಾಚಾರಿಯಂತಹ ಮಹಾನ್ ಶಿಲ್ಪಿಯನ್ನು ನೀಡಿದ ಅವರ ತಾಯಿಗೆ ನಮ್ಮ ನಮನಗಳು. ನಮ್ಮದು ಶಿಲ್ಪಕಲೆ, ಸಾಹತ್ಯ, ಭವ್ಯ ಸಾಂಸ್ಕೃತಿಕ ನೆಲಗಟ್ಟಿನ ನಾಡು. ಅನೇಕ ಸಾಧು-ಸಂತರು, ದಾರ್ಶನಿಕರು ಭವ್ಯವಾದ ಭಾರತ ದೇಶ ಕಟ್ಟಲು ತಮ್ಮನ್ನು ತಾವೇ ಧಾರೆ ಎರೆದುಕೊಂಡಿದ್ದು, ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು.
ಬೇಲೂರು, ಹಳೇಬೀಡು, ಸೋಮನಾಥಪುರ, ಶೃಂಗೇರಿ, ಬಾದಾಮಿ, ಬನವಾಸಿ ಹೀಗೆ ರಾಜ್ಯದೆಲ್ಲೆಡೆ ವಿಶೇಷ ಶಿಲ್ಪಕಲೆಗಳ ಸುಂದರ ಇತಿಹಾಸವನ್ನು ನಾವು ಹೊಂದಿದ್ದೇವೆ. ನಮ್ಮದು ದೇವ ನಿರ್ಮಿತ ದೇಶ, ಇದಕ್ಕೆ ಹುಟ್ಟಿದ ದಿನಾಂಕವಿಲ್ಲ. ಹಾಗೆಯೇ ಸಾವಿನ ದಿನಾಂಕವೂ ಇಲ್ಲದ ಚಿರಸ್ಥಾಯಿ ನಮ್ಮ ನೆಲೆವೀಡು. ಇದೇ ರೀತಿ ನಮ್ಮ ಅಮರಶಿಲ್ಪಿ ಜಕಣಾಚಾರಿಗಳೂ ಸಹ ಎಂದಿಗೂ ಅಮರ. ಇಂತಹ ಸಮಾಜದಲ್ಲಿ ನೀವು ಜನ್ಮ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ನಗರದ ಫ್ಲೈಓವರ್ ಅಥವಾ ಯಾವುದಾದರೂ ಮುಖ್ಯ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಸಮಾಜದವರು ಮನವಿ ಮಾಡಿದ್ದೀರ. ಅಮರಶಿಲ್ಪಿಗಳ ಹೆಸರನ್ನು ನಾಮಕರಣ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಇಲಾಖೆಯಿಂದ ಒಂದು ಪ್ರಸ್ತಾವನೆಯನ್ನು ಸಲ್ಲಿಸಿರಿ, ಖಂಡಿತವಾಗಿಯೂ ಅವರ ಹೆಸರನ್ನು ನಗರದ ಆಯಕಟ್ಟಿನ ಜಾಗಕ್ಕೆ ನಾಮಕರಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿಗಳು ಈ ದೇಶದ ಶಿಲ್ಪಕಲೆಗೆ ಅಪಾರ ಕೊಡುಗೆಯನ್ನಿತ್ತಿದ್ದು ಎಂದಿಗೂ ಸ್ಮರಣೀಯರು. ಇಂತಹ ಸಮಾಜದಲ್ಲಿ ಜನಿಸಿದ ನೀವೇ ಪುಣ್ಯವಂತರು. ನಿಮ್ಮ ಸಮಾಜ ಯಾವತ್ತೂ ಇತರೆ ಸಮಾಜಗಳನ್ನು ಅತ್ಯಂತ ಗೌರವ, ಪ್ರೀತಿ, ವಿಶ್ವಾಸದಿಂದ ಕಾಣುತ್ತಾ ಬಂದಿದ್ದು, ಜಕಣಾಚಾರಿಯವರ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಲು ತಮ್ಮ ಸಂಪೂರ್ಣ ಸಹಕಾರ ಇದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

S. N. Channabasappa ರಾಣೆಬೆನ್ನೂರಿನ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದ ಮೌನೇಶ್ವರ ಆಚಾರ್ಯ ಇವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮ ಪರಂಪರೆ ಪ್ರತಿಭಾವಂತರ, ತಂತ್ರಜ್ಞಾನರ, ಪಂಚವೇದದ, ಪಂಚ ಶಕ್ತಿ, ಪಂಚ ವಿಜ್ಞಾನಗಳ ಪರಂಪರೆ ಹೊಂದಿದೆ. ಶಿಲ್ಪಗಳ ರಚನೆಯಿಂದ ಸೌಂದರ್ಯದ ಬೀಡು ಮತ್ತು ಭಕ್ತಿಯ ನೆಲೆಯನ್ನಾಗಿ ಈ ನಾಡನ್ನು ರೂಪಿಸಿದೆ.
ತಮ್ಮ ಮಹಾನ್ ಶಿಲ್ಪಗಳ ಮೂಲಕ ಭಕ್ತಿಯ ಬೀಜ ಬಿತ್ತಿದ ಮಹತ್‌ಶಿಲ್ಪಿ ಜಕಣಾಚಾರಿ. ವಿಶ್ವಕರ್ಮ ಪರಂಪರೆ ಪ್ರಾಚೀನವಾದ ಐದು ವೇದಗಳನ್ನು ಮಾನ್ಯ ಮಾಡುತ್ತದೆ. ಮತ್ತು ಅದಕ್ಕೆ ತಕ್ಕಂತೆ ಆಚರಣೆಗಳು ಇರುತ್ತವೆ. ದೇವಶಿಲ್ಪ ಮತ್ತು ಮಾನವ ಶಿಲ್ಪ ಎಂಬ ಪ್ರಕಾರಗಳಿದ್ದು ವೇದಗಳ ಆಚರಣೆ ಅನುಸಾರ ಈ ಶಿಲ್ಪಕಲೆಗಳನ್ನು ಕೆತ್ತಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು ಅಮರಶಿಲ್ಪಿ ಜಕಣಾಚಾರಿಗಳ ಜೀವನ ಚರಿತ್ರೆ ಕುರಿತು ವಿವರಣೆ ನೀಡಿದರು.

ಜಿಲ್ಲಾ ವಿಶ್ವಕರ್ಮ ಮಹಾಸಭಾದ ಗೌರವ ಅಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ವಿಶ್ವಕರ್ಮ ಸಮಾಜದ ಅನ್ನಪೂರ್ಣ ಕಾಳಾಚಾರ್, ರಮೇಶ್, ಶ್ರೀನಿವಾಸಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

PM Scholarship Scheme ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.

0

PM Scholarship Scheme 2025-26ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿ:15/01/2026 ರವರೆಗೆ ವಿಸ್ತರಿಸಲಾಗಿದ್ದು, ಕೇಂದ್ರೀಯ ಸೈನಿಕ ಮಂಡಳಿ ಮತ್ತು ಇತರೆ ಸರ್ಕಾರಿ ಮೂಲಗಳಿಂದ ಯಾವುದೇ ಶಿಷ್ಯವೇತನವನ್ನು ಪಡೆಯದಿರುವ ಮಾಜಿ ಸೈನಿಕರ ಮಕ್ಕಳಿಗೆ ಅರ್ಜಿಯನ್ನು ಸಲ್ಲಿಸಬಹುದುದಾಗಿರುತ್ತದೆ.

PM Scholarship Scheme ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯಲ್ಲಿ ಶುಲ್ಕ ರಹಿತ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಕೊನೆಯ ಜ. 15 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಗೆ ಸಲ್ಲಿಸುವಂತೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.