Saturday, May 16, 2026
Saturday, May 16, 2026

Delhi Red Fort Blast ದೆಹಲಿ ಬಾಂಬ್ ಸ್ಫೋಟ. ದುಷ್ಟಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡದೇ ಬಿಡುವುದಿಲ್ಲ- ಪ್ರಧಾನಿ ಮೋದಿ

Date:

Delhi Red Fort Blast ನವೆಂಬರ್ 10. ದೆಹಲಿಯ ಕೆಂಪುಕೋಟೆಯ ಬಳಿ‌ ದುರ್ಘಟನೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಸ್ಫೋಟಗೊಂಡಿತು.

ಕನಿಷ್ಠ 13 ಮಂದಿ ಮರಣಿಸಿದರು. 20 ಹೆಚ್ಚು ಜನರು ಗಾಯಗೊಂಡರು.

ದೆಹಲಿ ಪೊಲೀಸರ ವರದಿ ಪ್ರಕಾರ, ಅಮೋನಿಯಂ ನೈಟ್ರೇಟ್ ರಾಸಾಯನಿಕವೇ ಈ ಸ್ಫೋಟಕ್ಕೆ ಕಾರಣವೆಂದು ಶಂಕಿಸಲಾಗಿದೆ.
ಈ ಸ್ಫೋಟವು ಒಮ್ಮೆಲೆ ಬೆಂಕಿಯನ್ನು ಉಂಟುಮಾಡಿತು.
ಜೊತೆಗೆ ಸನಿಹದಲ್ಲಿದ್ದ ಕಾರುಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ಅನೇಕ ವಾಹನಗಳಿಗೆ ಅಪಾರ ಹಾನಿಯನ್ನುಂಟುಮಾಡಿದೆ.
ರಾಷ್ಟ್ರೀಯ ತನಿಖಾತಂಡವು
ತಡಮಾಡದೇ ಈ ಘಟನೆಗೆ ಕಾರಣರಾದ ತಪ್ಪಿತಸ್ಥರ ಶೋಧಕ್ಕೆ ತೊಡಗಿದೆ.
ಸ್ಫೋಟಗೊಂಡ ಕಾರನ್ನು ಶಂಕಿತ ಉಗ್ರ
ಡಾ.ಉಮರ್ ನಬಿ ಚಲಾಯಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ಆತ ಆತ್ಮಾಹುತಿ ದಾಳಿಕೋರನೇ ಹೌದೆ ಅಲ್ಲವೆ? ಎಂಬ ಸಂಗತಿಯನ್ನ ಖಚಿತ ಪಡಿಸಿಕೊಳ್ಳಬೇಕಿದೆ.
ಚೋದ್ಯವೆಂದರೆ ಆತ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಕೋಯಿಲ್ ಹಳ್ಳಿಯವನೆಂದು ಹೇಳಲಾಗಿದೆ.
Delhi Red Fort Blast ನಿನ್ನೆ ಸಂಜೆ 6-52 ಕ್ಕೆ ಕೆಂಪುಕೋಟೆಯ ಬಳಿಯಿರುವ ಲಜಪತ್ ರಾಯ್ ಮಾರುಕಟ್ಟೆ ಹತ್ತಿರ ಈ ಭೀಕರ ಸ್ಫೋಟ ನಡೆದಿದೆ.
ಹನ್ನೆರಡು ಜನ ಮರಣಹೊಂದಿದ್ದು ,ಮೂವತ್ತಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದಾರೆ.
ಅಮಾಯಕ ಜನ ಮತ್ತೆ ಈ ದುರ್ಘಟನೆಯಲ್ಲಿ‌ ಜೀವ ಕಳೆದುಕೊಂಡಿದ್ದಾರೆ.
ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರಗೃಹ ಸಚಿವ ಅಮಿತ್ ಶಾ ಎನ್ ಐ ಎ ಯಿಂದ ತನಿಖೆ ಚುರುಕುಗೊಳಿಸಲು ಆದೇಶಮಾಡಿದ್ದಾರೆ.
ದಿಲ್ಲಿ ಸ್ಫೋಟದ ಬಗ್ಗೆ ಪ್ರಧಾನಿ ಮೋದಿ ಅವರು ಈ ಘಟನೆ ಹಿಂದಿನ ಶಕ್ತಿಯನ್ನ ಶಿಕ್ಷಿಸದೇ ಬಿಡುವುದಿಲ್ಲ.
ನಮ್ಮ ತನಿಖಾ ದಳ ಅವರೆಲ್ಲರಿಗೂ ಪತ್ತೆಮಾಡಿ ದಂಡನೆಗೊಳಪಡಿಸಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...